Sunday, December 1, 2024
Homeಕ್ರೀಡಾ ಸುದ್ದಿ | Sportsಬೆಂಗಳೂರು ಟೆಸ್ಟ್ ಸೋಲಿನಿಂದ ವಿಚಲಿತರಾಗಿಲ್ಲ : ರೋಹಿತ್ ಶರ್ಮ

ಬೆಂಗಳೂರು ಟೆಸ್ಟ್ ಸೋಲಿನಿಂದ ವಿಚಲಿತರಾಗಿಲ್ಲ : ರೋಹಿತ್ ಶರ್ಮ

No need for panic, 3 hours won’t define us: Rohit Sharma on Bengaluru Test loss

ಬೆಂಗಳೂರು, ಅ. 20– ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಸೋಲಿನಿಂದ ನಾವು ವಿಚಲಿತರಾಗದೆ ಬಲವಾಗಿ ಕಮ್ ಬ್ಯಾಕ್ ಮಾಡುವ ಮೂಲಕ ಸರಣಿಯಲ್ಲಿ ಹೋರಾಟ ನಡೆಸುತ್ತೇವೆ ಎಂದು ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ಇನಿಂಗ್‌್ಸನಲ್ಲಿ ಗೆಲುವಿಗೆ 107 ಗುರಿ ಪಡೆದಿದ್ದ ನ್ಯೂಜಿಲ್ಯಾಂಡ್ ವಿಲ್ ಯಂಗ್ (48 ರನ್) ಹಾಗೂ ರಚಿನ್ ರವೀಂದ್ರ (39 ರನ್) ಅವರು ಮೂರನೇ ವಿಕೆಟ್ ನೀಡಿದ ಅಜೇಯ 75 ರನ್ಗಳ ಜೊತೆಯಾಟದಿಂದ 8 ವಿಕೆಟ್ಗಳ ಗೆಲುವು ಸಾಧಿಸಿ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.

ಬೆಂಗಳೂರು ಟೆಸ್ಟ್ನ ಸೋಲಿನ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿತ್ಶರ್ಮಾ ಅವರು, ` ನಾನು ಅದನ್ನು ಪತ್ರಿಕಾಗೋಷ್ಠಿಯಲ್ಲಿಯೂ ಹೇಳಿದ್ದೇನೆ, ಮೋಡ ಕವಿದ ವಾತಾವರಣದಲ್ಲಿ ಇದು ಸವಾಲಾಗಿತ್ತು. ಆದರೆ ನಾವು 50 ಕ್ಕಿಂತ ಕಡಿಮೆ ಬೌಲ್‌್ಡ ಆಗುತ್ತೇವೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಅದಕ್ಕೆ ನೀವು ಮನ್ನಣೆ ನೀಡಬೇಕು.

ನ್ಯೂಜಿಲೆಂಡ್ ಉತ್ತಮವಾಗಿ ಬೌಲಿಂಗ್ ಮಾಡಿತು ಮತ್ತು ಬ್ಯಾಟ್ನ ಪ್ರತಿಯೊಂದು ಮೂಲೆಯನ್ನು ಸವಾಲು ಮಾಡಿದೆ ಮತ್ತು ನಾವು ಅದನ್ನು ಎದುರಿಸಲು ವಿಫಲರಾಗಿದ್ದೇವೆ. ಈ ರೀತಿಯ ಆಟಗಳು ಸಂಭವಿಸಬಹುದು’ ಎಂದು ಹೇಳಿದರು.

` ಬೆಂಗಳೂರು ಟೆಸ್ಟ್ ಪಂದ್ಯ ಸೋಲಿನ ನಂತರ ನಾವು ಮುಂದಿನ ಪಂದ್ಯಗಳನ್ನು ಗೆದ್ದು ಸರಣಿಯನ್ನು ಗೆಲ್ಲಲು ಏನು ಮಾಡಬೇಕು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು ಮತ್ತು ಮುಂದುವರಿಯಬೇಕು. ಈ ಹಿಂದೆಯೂ ನಾವು ಇಂತಹ ಪರಿಸ್ಥಿತಿಯನ್ನು ಎದುರಿಸಿದ್ದೇವೆ, ನಾವು ಇಂಗ್ಲೆಂಡ್ ವಿರುದ್ಧ 1-0 ಹಿನ್ನಡೆಯಲ್ಲಿದ್ದೆವು ಅದರೆ ನಂತರದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನವನ್ನು ತೋರುವ ಮೂಲಕ ಸರಣಿಯನ್ನು 4-0 ಯಿಂದ ಗೆದ್ದು ಸಂಭ್ರಮಿಸಿದ್ದೆವು. ಆದ್ದರಿಂದ ಈ ಪಂದ್ಯದ ಸೋಲು ನಮ ಆಟಗಾರರನ್ನು ವಿಚಲಿತರಾಗಿಸಿರುವುದಿಲ್ಲ’ ಎಂದು ರೋಹಿತ್ಶರ್ಮಾ ಹೇಳಿದ್ದಾರೆ.

ರಿಷಭ್- ಸರ್ಫರಾಜ್ ಗುಣಗಾನ:
ಭಾರತ ತಂಡದ ದ್ವಿತೀಯ ಇನಿಂಗ್‌್ಸನಲ್ಲಿ ಯುವ ಆಟಗಾರರಾದ ಸರ್ಫರಾಜ್ಖಾನ್ ಹಾಗೂ ರಿಷಭ್ ಪಂತ್ ಅವರ ಕೆಚ್ಚೆದೆಯ ಆಟವನ್ನು ಶ್ಲಾಘಿಸಲೇಬೇಕು. ಮೊಣಕಾಲಿನ ನೋವಿನಿಂದ ಬಳಲುತ್ತಿದ್ದರೂ ಕೂಡ ಪಂತ್ ಅವರು 99 ರನ್ ಗಳಿಸುವ ಮೂಲಕ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರೆ, ಸರ್ಫರಾಜ್ಖಾನ್ ಅವರು ಚೊಚ್ಚಲ ಶತಕ (150ರನ್) ಸಂಭ್ರಮ ಕಂಡಿದ್ದಾರೆ. ನಿಮ ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳಿದ್ದರೆ ಉತ್ತಮ ಪ್ರದರ್ಶನ ತೋರಬಹುದು ಎಂಬುದನ್ನು ಈ ಆಟಗಾರರು ತೋರಿಸಿದ್ದಾರೆ’ ಎಂದು ರೋಹಿತ್ಶರ್ಮಾ ಹೇಳಿದ್ದಾರೆ.

RELATED ARTICLES

Latest News