ಗಾಂನಗರ (ಗುಜರಾತ್), ಜ.10- ಮುಂದಿನ 2047ರ ವೇಳೆಗೆ ಭಾರತವು 35 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಸಾಧನೆಯನ್ನು ಭೂಮಿಯ ಮೇಲಿನ ಯಾವುದೇ ಶಕ್ತಿಯು ತಡೆಯಲು ಸಾಧ್ಯವಿಲ್ಲ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಹೇಳಿದ್ದಾರೆ.
ಗುಜರಾತ್‍ನಲ್ಲಿ ನಡೆಯುತ್ತಿರುವ ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇದರ ಯಶಸ್ಸಿಗೆ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವ ಕಾರಣವಾಗಲಿದೆ ಎಂದು ಹೇಳಿದರು.ಇಂತಹ ಶೃಂಗಸಭೆಯನ್ನು ನನ್ನ 20 ವರ್ಷಗಳ ಸುದೀರ್ಘ ಅವಯಲ್ಲಿ ನೋಡಿಲ್ಲ. ಇದೊಂದು ವಿಶ್ವಮಟ್ಟದ ಅತ್ಯಂತ ಪ್ರತಿಷ್ಠಿತ ಹೂಡಿಕೆದಾರರ ಶೃಂಗಸಭೆ ಎಂದು ಬಣ್ಣಿಸಿದ ಅವರು, ಶಕ್ತಿಯಿಂದ ಮತ್ತಷ್ಟು ಹೆಚ್ಚಿನ ಶಕ್ತಿಗೆ ಸಾಗುತ್ತಿರುವುದು ನಮಗೆ ಹೆಮ್ಮೆ ಎನಿಸುತ್ತದೆ. ಇದರಲ್ಲಿ ಪ್ರಧಾನಿಯವರ ಕೊಡುಗೆ ಅಪಾರ ಎಂದು ಬಣ್ಣಿಸಿದರು.
ಮೋದಿಯವರ ದೃಷ್ಟಿ ಮತ್ತು ಸ್ಥಿರತೆಯಿಂದಾಗಿ ಮುಂದಿನ 2047ರ ವೇಳೆಗೆ ಭಾರತವು 35 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿಯನ್ನು ಸಾಸುತ್ತಿದೆ ಎಂಬ ವಿಶ್ವಾಸವಿದೆ. ಆ ಹಾದಿಯಲ್ಲಿ ನಾವೀಗ ಸಾಗುತ್ತಿದ್ದೇವೆ ಎಂದು ಹೇಳಿದರು.
ಶೀಘ್ರದಲ್ಲೇ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ
ಇಂದಿನ ಭಾರತದಲ್ಲಿ ಯುವಜನತೆ ಹೊಸತನ ಕಂಡುಕೊಳ್ಳಲು ಉತ್ಸುಕರಾಗಿದ್ದಾರೆ. ಲಕ್ಷಾಂತರ ಜನರಿಗೆ ಜೀವನ ಮತ್ತು ಸುಲಭವಾಗಿ ಸಂಪಾದಿಸಲು ಆರ್ಥಿಕತೆಯನ್ನು ಪ್ರವೇಶಿಸಲು ಉತ್ತಮ ಸಮಯವಾಗಿದೆ. ಮುಂಬರುವ ಪೀಳಿಗೆಗಳು ನಿಜವಾಗಿಯೂ ಪ್ರಧಾನಿ ಮೋದಿಯವರಿಗೆ ಕೃತಜ್ಞರಾಗಿರಬೇಕು ಎಂದರು.
ನಾನು ಗೇಟ್‍ವೇ ಆಫ್ ಇಂಡಿಯಾ ನಗರದಿಂದ ಆಧುನಿಕ ಭಾರತದ ಬೆಳವಣಿಗೆಯ ಹೆಬ್ಬಾಗಿಲಿಗೆ ಬಂದಿದ್ದೇನೆ. ನಾನು ಹೆಮ್ಮೆಯ ಗುಜರಾತಿ. ವಿದೇಶಿಗರು ಹೊಸ ಭಾರತದ ಬಗ್ಗೆ ಯೋಚಿಸಿದಾಗ, ಅವರು ಹೊಸ ಗುಜರಾತ್‍ನ ಬಗ್ಗೆ ಯೋಚಿಸುತ್ತಾರೆ. ಇದು ಹೇಗೆ ಆಯಿತು? ನಮ್ಮ ಕಾಲದ ಶ್ರೇಷ್ಠ ಜಾಗತಿಕ ನಾಯಕರಾಗಿ ಹೊರಹೊಮ್ಮಿದ ಒಬ್ಬ ನಾಯಕ ಕಾರಣ ಎಂದು ಪ್ರಧಾನಿಯನ್ನು ಬಣ್ಣಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವವೇ ಗುಜರಾತ್‍ನ ಪರಿವರ್ತನಾ ಯಾತ್ರೆಗೆ ಕಾರಣ ಎಂದು ಹೇಳಿದ ಅಂಬಾನಿ, ನಮ್ಮ ಕಾಲದ ಶ್ರೇಷ್ಠ ಜಾಗತಿಕ ನಾಯಕ ಎಂದು ಶ್ಲಾಘಿಸಿದರು. ಮುಂದಿನ ಹತ್ತು ವರ್ಷಗಳಲ್ಲಿ ಗಮನಾರ್ಹ ಹೂಡಿಕೆಯೊಂದಿಗೆ ಗುಜರಾತ್‍ನ ಬೆಳವಣಿಗೆಯ ಕಥೆಯಲ್ಲಿ ರಿಲಾಯನ್ಸ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.