Wednesday, April 24, 2024
Homeಮನರಂಜನೆರಾಜಕಾರಣಕ್ಕೆ ಬರಲ್ಲ, ಚುನಾವಣೆಗೆ ನಿಲ್ಲಲ್ಲ : ಡಾಲಿ ಧನಂಜಯ್

ರಾಜಕಾರಣಕ್ಕೆ ಬರಲ್ಲ, ಚುನಾವಣೆಗೆ ನಿಲ್ಲಲ್ಲ : ಡಾಲಿ ಧನಂಜಯ್

ಬೆಂಗಳೂರು, ಫೆ.22- ನಾನು ರಾಜ ಕಾರಣಕ್ಕೆ ಬರಲ್ಲ, ಚುನಾವಣೆಯಲ್ಲಿ ನಿಲ್ಲುವ ಬಗ್ಗೆ ನಿರ್ಧಾರ ಮಾಡಿಲ್ಲ ಎಂದು ನಟ ಡಾಲಿ ಧನಂಜಯ್ ತಿಳಿಸಿದ್ದಾರೆ. ಚಲನ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕಲಾವಿದ. ಕಾಮನ್‍ಮ್ಯಾನ್ ಆಗಿರಲು ಭಯಸುತ್ತೇನೆ ಎಂದು ಹೇಳಿದ್ದಾರೆ. ಮೈಸೂರು ಲೋಕಭಾ ಚುನಾವಣೆಯಲ್ಲಿ ಪ್ರತಾಪ್‍ಸಿಂಹ ವಿರುದ್ಧ ಡಾಲಿ ಸ್ರ್ಪ ಸುತ್ತಾರೆ ಎಂಬುದೆಲ್ಲ ಗಾಳಿ ಸುದ್ದಿ, ಚುನಾವಣೆಯಲ್ಲಿ ನಿಲ್ಲುವ ಬಗ್ಗೆ ನಿರ್ಧಾರ ಮಾಡಿಲ್ಲ ಎಂದು ಹೇಳಿದ್ದಾರೆ.

ನಾವು ಕಲಾವಿದರು ಬಾವನಾತ್ಮಕವಾಗಿರುತ್ತೇವೆ, ರಾಜಕಾರಣ ಬೇರೆ, ನಾಯಕನಾಗಿರುವುದು ಬೇರೆ. ಅದಕ್ಕೆ ಅದರದ್ದೇ ಆದಂತಹ ಗುಣಗಳು ಇರುತ್ತವೆ. ಅದನ್ನೆಲ್ಲ ನಿಭಾಯಿಸುವ ಶಕ್ತಿ ಇರಬೇಕು. ಅದಕ್ಕೆಲ್ಲ ಸದ್ಯಕ್ಕೆ ನಾನು ಸಿದ್ಧನಿಲ್ಲ ಎಂದರು. ರಾಜಕಾರಣ ನನಗೆ ಗೊತ್ತಿಲ್ಲ. ಸಮಾಜದಲ್ಲಿ ಕೆಳಗೆ ಇರುವ ಜನರಿಗೆ ಒಳ್ಳೆಯ ಕೆಲಸ ಮಾಡುವವನೇ ಒಳ್ಳೆಯ ನಾಯಕ. ಅವರು ಯಾವ ಪಕ್ಷದಲ್ಲೇದರೂ ಇರಲಿ. ಅವರಿಗೆ ಸ್ಪಂದಿಸುವವರೆಲ್ಲ ಒಳ್ಳೆಯ ಪ್ರಜೆಗಳು ಎಂದು ಡಾಲಿ ಧನಂಜಯ್ ಹೇಳಿದ್ದಾರೆ.

ಡಿಕೆಶಿ ಗಡ್ಡದ ಕುರಿತು ಮೇಲ್ಮನೆಯಲ್ಲಿ ಸ್ವಾರಸ್ಯಕರ ಚರ್ಚೆ

ನನಗೂ ಎಲ್ಲ ಪಕ್ಷಗಳಲ್ಲಿ ಗೆಳೆಯರು ಇದ್ದಾರೆ. ಯಾರೇ ಕರೆದಿದ್ದರೂ ಕೂಡ ನಾನು ಎಲೆಕ್ಷನ್ ಪ್ರಚಾರಕ್ಕೆ ಹೋಗಿಲ್ಲ. ಯಾಕೆಂದರೆ, ಅದರಲ್ಲಿ ತೊಡಗಿಕೊಳ್ಳಲು ನನಗೆ ಇಷ್ಟ ಇಲ್ಲ ಸದ್ಯ ರಾಜಕಾರಣಕ್ಕೆ ಬರುವ ಮನಸಿಲ್ಲ ಎಂದು ತಿಳಿಸಿದ್ದಾರೆ.

RELATED ARTICLES

Latest News