Tuesday, April 30, 2024
Homeರಾಜ್ಯ"ನಷ್ಟ ಸರಿದೂಗಿಸಲು ವಿದ್ಯುತ್ ದರ ಏರಿಕೆ ಪರಿಹಾರವಲ್ಲ"

“ನಷ್ಟ ಸರಿದೂಗಿಸಲು ವಿದ್ಯುತ್ ದರ ಏರಿಕೆ ಪರಿಹಾರವಲ್ಲ”

ಬೆಂಗಳೂರು,ಫೆ.22- ವಿದ್ಯುತ್ ಸರಬರಾಜು ಕಂಪನಿಗಳ ಪರ್ಯಾಯ ಮೂಲಗಳಿಂದ ಸಂಪನ್ಮೂಲ ಕ್ರೋಡೀಕರಿಸಿ ಅನಗತ್ಯ ಖರ್ಚು ಮಾಡುವುದನ್ನು ನಿಲ್ಲಿಸಿ ಎಂದು ಸಲಹೆ ನೀಡಿರುವ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಪಿ.ರವಿಕುಮಾರ್ ನಷ್ಟ ಸರಿದೂಗಿಸಲು ವಿದ್ಯುತ್ ದರ ಏರಿಕೆ ಪರಿಹಾರವಲ್ಲ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿಯ ನವನಗರದಲ್ಲಿರುವ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಎಸ್ಕಾಂ) ಕಾಪೆರ್ರೇಟ್ ಕಚೇರಿಯಲ್ಲಿ ನಡೆದ ಕೆಇಆರ್‍ಸಿ ಸಾರ್ವಜನಿಕ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಸ್ಕಾಂ ಪ್ರಸ್ತಾಪಿತ ಶೇ. 0.57 ದರ ಏರಿಕೆಯ ವಿಚಾರವಾಗಿ ಪ್ರತಿಕ್ರಿಯಿಸಿದರು. ನಷ್ಟವನ್ನು ಸರಿದೂಗಿಸಲು ವಿದ್ಯುತ್ ದರ ಏರಿಕೆಯೊಂದೇ ಪರಿಹಾರವಲ್ಲ. ದರ ಏರಿಸಿದರೆ ಗ್ರಾಹಕರಿಗೆ ದೊಡ್ಡ ಹೊರೆಯಾಗುತ್ತದೆ. ಎಸ್ಕಾಂ ವಿತರಣಾ ನಷ್ಟವನ್ನು ತಡೆಯಬೇಕು, ಅನಗತ್ಯ ವೆಚ್ಚಗಳನ್ನು ನಿರ್ಬಂಧಿಸಬೇಕು ಎಂದು ಅವರು ಸಲಹೆ ನೀಡಿದರು.

ಶೀಘ್ರದಲ್ಲಿ ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸಲು ಗ್ರಾಹಕರ ಹಿತರಕ್ಷಣಾ ವೇದಿಕೆ ಪ್ರಾರಂಭಿಸುವ ಭರವಸೆ ನೀಡಿದರು. ವಿದ್ಯುತ್ ಉತ್ಪಾದಿಸಲು ಸೋಲಾರ್ ರೂಪ್ ಟಾಪ್ ಫೋಟೋ ವೋಲ್ಟಾಯಿಕ್ (ಎಸ್‍ಆರ್‍ಟಿಪಿವಿ) ಹೊಂದಿದ್ದು, ಅದನ್ನು ಎಸ್ಕಾಂಗೆ ನೀಡುತ್ತೇವೆ ಎಂದು ಈ ಸಂದರ್ಭದಲ್ಲಿ ಗ್ರಾಹಕರು ಹೇಳಿದರು. ಬಳಕೆಯಾಗುವುದಕ್ಕಿಂತ ಹೆಚ್ಚಿನ ಯೂನಿಟ್‍ಗಳನ್ನು ಉತ್ಪಾದಿಸಿದರೂ ಎಸ್ಕಾಂ ನಿರಂತರವಾಗಿ ದರ ಮತ್ತು ಸ್ಥಿರ ಶುಲ್ಕವನ್ನು ಹೆಚ್ಚಿಸುತ್ತಿರುವುದರಿಂದ ಎಸ್‍ಆರ್‍ಟಿಪಿವಿಗಳಿಂದ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಹಕರು ದೂರಿದ್ದಾರೆ.

ಅನಂತ್ ಅಂಬಾನಿ ಮದುವೆಗೆ, ಬಿಲ್‍ಗೇಟ್ಸ್, ಜುಕರ್ಬರ್ಗ್ ಸೇರಿದಂತೆ ಜಾಗತಿಕ ಉದ್ಯಮಿಗಳಿಗೆ ಆಹ್ವಾನ

ಈ ಮಧ್ಯೆ ಬಿಲ್ ಸಮಸ್ಯೆ ಬಗ್ಗೆ ಒಪ್ಪಿಕೊಂಡ ಅವರು, ಈ ಸಮಸ್ಯೆಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು. ವಿದ್ಯುತ್ ದರ ಹೆಚ್ಚಳ ಹಿನ್ನೆಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಬಂಡವಾಳ ಹೂಡಲು ಅನೇಕರು ಹಿಂದೇಟು ಹಾಕುತ್ತಿದ್ದಾರೆ ಎಂದು ಕೈಗಾರಿಕಾ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ನಾಗರಾಜು ಎಲಿಗಾರ್ ಹೇಳಿದರು. ಕೆಲವು ಕೈಗಾರಿಕೆಗಳು ಮಹಾರಾಷ್ಟ್ರ, ತಮಿಳುನಾಡಿಗೆ ಸ್ಥಳಾಂತರಗೊಳ್ಳುತ್ತಿವೆ. ಅಲ್ಲಿ ಕೈಗಾರಿಕೆಗಳಿಗೆ ಅಗ್ಗದ ದರದಲ್ಲಿ ವಿದ್ಯುತ್ ನೀಡಲಾಗುತ್ತ್ತದೆ ಎಂದು ಹೇಳಿದ್ದಾರೆ.

ವಿದ್ಯುಚ್ಛಕ್ತಿಯು ಎಲ್ಲಾ ಕೈಗಾರಿಕೆಗಳಿಗೆ ಅಗತ್ಯವಾಗಿದೆ. ಕೈಗಾರಿಕೆಗಳಲ್ಲಿ ಒಟ್ಟು ವೆಚ್ಚದ ಶೇ.15 ರಿಂದ 20 ರಷ್ಟನ್ನು ವಿದ್ಯುತ್‍ಗಾಗಿ ಖರ್ಚು ಮಾಡುತ್ತಾರೆ. ಆದ್ದರಿಂದ ಎಸ್ಕಾಂಗಳು ವಿದ್ಯುತ್ ದರ ಕಡಿಮೆ ಮಾಡಬೇಕು. ಇಲ್ಲವಾದರೆ ಅಸ್ತಿತ್ವದಲ್ಲಿರುವ ಕೈಗಾರಿಕೆಗಳು ಸಹ ಇತರ ರಾಜ್ಯಗಳಿಗೆ ಸ್ಥಳಾಂತರಗೊಳ್ಳುತ್ತವೆ ಎಂದು ಎಚ್ಚರಿಕೆ ನೀಡಿದರು.

RELATED ARTICLES

Latest News