Thursday, May 2, 2024
Homeರಾಷ್ಟ್ರೀಯವಿಷಪೂರಿತ ಹಾವು ಬಿಟ್ಟು ಪತ್ನಿ-ಮಗಳನ್ನು ಕೊಂದ ಕೀಚಕ

ವಿಷಪೂರಿತ ಹಾವು ಬಿಟ್ಟು ಪತ್ನಿ-ಮಗಳನ್ನು ಕೊಂದ ಕೀಚಕ

ಬರ್ಹಾಂಪುರ, ನ.24 (ಪಿಟಿಐ)- ಕೀಚಕ ಪತಿಯೊಬ್ಬ ತನ್ನ ಮಲಗುವ ಕೋಣೆಗೆ ವಿಷಪೂರಿತ ಹಾವು ಬಿಟ್ಟು ತನ್ನ ಪತ್ನಿ ಮತ್ತು ಎರಡು ವರ್ಷದ ಮಗಳನ್ನು ಕೊಲೆ ಮಾಡಿರುವ ಘಟನೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಸಂಭವಿಸಿದೆ. ಇಲ್ಲಿಂದ ಸುಮಾರು 60 ಕಿಮೀ ದೂರದಲ್ಲಿರುವ ಕಬಿಸೂರ್ಯ ನಗರ ಪ್ರದೇಶದ ಅಧೇಗಾಂವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಆರೋಪಿಯನ್ನು ಕೆ ಗಣೇಶ್ ಪಾತ್ರ ಎಂದು ಗುರುತಿಸಲಾಗಿದ್ದು, ಆತನ ಪತ್ನಿ ಕೆ ಬಸಂತಿ ಪಾತ್ರಾ (23) ಜತೆ ವೈವಾಹಿಕ ಕಲಹವಿತ್ತು ಹೀಗಾಗಿ ಆತ ವಿಷಪೂರಿತ ಹಾವಿನ ಸಹಾಯದಿಂದ ಪತ್ನಿ-ಮಗಳನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಾವು ಮೋಡಿ ಮಾಡುವವರಿಂದ ಹಾವನ್ನು ಸಂಗ್ರಹಿಸಿದ್ದ ಆರೋಪಿ ನಂತರ ಹಾವನ್ನು ರೂಮಿಗೆ ಬಿಟ್ಟು ಕೊಲೆ ಮಾಡಿಸಿದ್ದಾನೆ. ಪ್ಲಾಸ್ಟಿಕ್ ಜಾರ್‍ನಲ್ಲಿ ನಾಗರ ಹಾವನ್ನು ತಂದು ಪತ್ನಿ ಮತ್ತು ಮಗಳು ಮಲಗಿದ್ದ ಕೋಣೆಗೆ ಹಾವನ್ನು ಬಿಟ್ಟಿದ್ದರು. ಮರುದಿನ ಬೆಳಗ್ಗೆ ಇಬ್ಬರೂ ಹಾವು ಕಡಿತದಿಂದ ಮೃತಪಟ್ಟಿದ್ದು, ಆರೋಪಿ ಮತ್ತೊಂದು ಕೋಣೆಯಲ್ಲಿ ಮಲಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನನ್ನ ಕಲಾಸೇವೆ ಅತ್ಯಂತ ಕಿರಿದು, ಕರುನಾಡ ಪ್ರೀತಿ ಅತ್ಯಂತ ಹಿರಿದು : ಯಶ್

ಪೊಲೀಸರು ಆರಂಭದಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದರು, ಆದರೆ ಅವರ ಮಾವ ಎಫ್‍ಐಆರ್ ದಾಖಲಿಸಿದ ನಂತರ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿ ಇಬ್ಬರ ಸಾವಿನಲ್ಲೂ ಭಾಗಿಯಾಗಿದ್ದಾರೆ ಎಂದು ಗಂಜಾಂ ಪೊಲೀಸ್ ವರಿಷ್ಠಾಧಿಕಾರಿ ಜಗಮೋಹನ್ ಮೀನಾ ತಿಳಿಸಿದ್ದಾರೆ.

RELATED ARTICLES

Latest News