ಭುವನೇಶ್ವರ, ಮಾ.25 – ಹಗಲು ವೇಳೆ ಮನೆಗಳಿಗೆ ನುಗ್ಗಿ ಕಳ್ಳತನ ಮಾಡಿ ರಾತ್ರಿ ಪಂಚತಾರಾ ಹೋಟೆಲ್‍ಗಳಲ್ಲಿ ವಾಸ್ತವ್ಯ ಮಾಡುತ್ತಿದ್ದ ಖತರ್‍ನಾಕ್ ಕಳ್ಳನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಹಲವಾರು ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಪರಶುರಾಮ ಗಿರಿ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಸ್ಥಾಪಿಸಿದ್ದ ಚೆಕ್ ಪೋಸ್ಟ್ ನಲ್ಲಿ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸ್ ಕಮಿಷನರ್ ಸಂಜೀಬ್ ಪಾಂಡಾ ತಿಳಿಸಿದ್ದಾರೆ.
ಕಳೆದ ಒಂದು ವರ್ಷದಲ್ಲಿ ನಗರದಲ್ಲಿ ನಡೆದಿರುವ ಕನಿಷ್ಠ 21 ಕಳ್ಳತನ ಪ್ರಕರಣಗಳಲ್ಲಿ ಪರಶುರಾಮ ಗಿರಿ ಬೇಕಾಗಿದ್ದ,ಸಾಮಾನ್ಯವಾಗಿ ನಗರದಲ್ಲಿ ಬೀಗ ಹಾಕಿರುವ ವಸತಿ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ಕಿಟಕಿಗಳನ್ನು ಒಡೆದು ಒಳನುಗ್ಗಿ ನಗದು ಮತ್ತು ಚಿನ್ನಾಭರಣ ದೋಚುತ್ತಿದ್ದ ಆತ ಏಕಾಂಗಿಯಾಗಿ ಕಳ್ಳತನ ಮಾಡುತ್ತಿದ್ದ ಎಂದು ಹೇಳಿದ್ದಾರೆ.
ಆತನಿಂದ 21 ಲಕ್ಷ ರೂಪಾಯಿ ನಗದು, ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು, ಎರಡು ಅತ್ಯಾಧುನಿಕ ಮೋಟಾರ್ ಸೈಕಲ್‍ಗಳು ಮತ್ತು ರಾಜ್ಯ ರಾಜಧಾನಿಯ ಐದು ಫ್ಲಾಟ್‍ಗಳ ದಾಖಲೆಗಳು ಸೇರಿವೆ.
ಈ ಕೆಲವು ಫ್ಲಾಟ್‍ಗಳನ್ನು ಅತ ಬಾಡಿಗೆಗೆ ನೀಡಿದ್ದಾರೆ. ಬಾಲಸೋರ್ ಜಿಲ್ಲೆಯ ಸೊರೊದಲ್ಲಿ ತಮ್ಮ ಸ್ಥಳೀಯರಿನಲ್ಲಿ ಬಂಗಲೆ ಸಹ ನಿರ್ಮಿಸುತ್ತಿದ್ದಾರೆ ಎಂದು ತನಿಖೆ ವೇಳೆ ತಿಳಿದುಂದಿದೆ.ಕದ್ದ ವಸ್ತುಗಳನ್ನು ಮಾರಿ ಅದ್ದೂರಿ ಜೀವನಶೈಲಿಯನ್ನು ನಿರ್ವಹಿಸುತ್ತಿದ್ದರು ಮತ್ತು ವಿವಿಧ ಮಹಾನಗರಗಳಲ್ಲಿನ ಪಂಚತಾರಾ ಹೋಟೆಲ್‍ಗಳಲ್ಲಿ ತಂಗುವುದು ಆತನ ಖಯಾಲಿಯಾಗಿತು, ಬಾರ್, ಪಬ್ ಗಳಲ್ಲೂ ಬೇಕಾಬಿಟ್ಟಿ ಹಣ ಖರ್ಚು ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.