Wednesday, October 16, 2024
Homeರಾಷ್ಟ್ರೀಯ | Nationalವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಪೂಜಾರಿಗೆ ಜೈಲು

ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಪೂಜಾರಿಗೆ ಜೈಲು

ಭುವನೇಶ್ವರ್, ಮಾ 19 (ಪಿಟಿಐ) : ವಿದೇಶಿ ಮಹಿಳಾ ಪ್ರವಾಸಿಗರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಒಡಿಶಾದ ರಾಜಧಾನಿಯಲ್ಲಿರುವ ಲಿಂಗರಾಜ ದೇವಸ್ಥಾನದ ಸೇವಾಯತ್ (ಪೂಜಾರಿ)ಗೆ ನ್ಯಾಯಾಲಯವು 18 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ನ್ಯಾಯಾಲಯವು ಅಪರಾಧ ನಡೆದ ನಾಲ್ಕು ವಾರಗಳಲ್ಲಿ ಈ ಮಹತ್ವದ ತೀರ್ಪು ಪ್ರಕಟಿಸಿದೆ.

ಫೆಬ್ರವರಿ 19 ರಂದು ಇಲ್ಲಿನ 11ನೇ ಶತಮಾನದ ಲಿಂಗರಾಜ ದೇವಸ್ಥಾನದ ಬಳಿ ಒಂಟಿಯಾಗಿ ತಿರುಗಾಡುತ್ತಿದ್ದ ಸ್ವೀಡನ್ ಪ್ರವಾಸಿ ಮಹಿಳೆಗೆ ಕುಂದನ್ ಮಹಾಪಾತ್ರ ಎಂಬಾತ ಲೈಂಗಿಕ ಕಿರುಕುಳ ನೀಡಿದ್ದ.ಘಟನೆಯ ನಂತರ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದು, ಅದೇ ದಿನ ಅರ್ಚಕನನ್ನು ಬಂಧಿಸಲಾಗಿತ್ತು.

ಪೊಲೀಸರು ಕೇವಲ ನಾಲ್ಕು ದಿನಗಳಲ್ಲಿ (-ಫೆಬ್ರವರಿ 23) ಚಾರ್ಜ್ ಶೀಟ್ ಸಲ್ಲಿಸಿದರು ಮತ್ತು ಫೆಬ್ರವರಿ 26 ರಂದು ವಿಚಾರಣೆ ಪ್ರಾರಂಭವಾಗಿದ್ದು, ಕೆಲವೇ ದಿನಗಳಲ್ಲಿ ತೀರ್ಪು ಪ್ರಕಟವಾಗಿರುವುದು ವಿಶೇಷವಾಗಿದೆ.

RELATED ARTICLES

Latest News