Saturday, October 12, 2024
Homeರಾಷ್ಟ್ರೀಯ | Nationalಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ ಅಂದರ್

ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ ಅಂದರ್

ಪುಣೆ, ಜ. 3 (ಪಿಟಿಐ) ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬರುವ ಭಾಗಶಃ ವಾಹನ ನೋಂದಣಿ ಸಂಖ್ಯೆಯ ಅಧಾರದ ಮೇಲೆ ಪುಣೆ ಪೊಲೀಸರು ಎಂಟು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ 45 ವರ್ಷದ ಕಾಮುಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಂಡ್ವಾ ಪ್ರದೇಶ ಇತ್ತೀಚೆಗೆ ಕಾಮುಕ ಎಂಟು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ನಂತರ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಮಾರುತಿ ನಾನಾವರೆ ಅವರ ವಿರುದ್ಧ ಕಿರುಕುಳ ಮತ್ತು ಅಪಹರಣದ ಆರು ಪ್ರಕರಣಗಳು ದಾಖಲಾಗಿವೆ ಮತ್ತು 2013 ರಲ್ಲಿ ಅತ್ಯಾಚಾರ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿ ಇತ್ತಿಚೆಗಷ್ಟೇ ಜೈಲಿನಿಂದ ಹೊರ ಬಂದಿದ್ದ ಎನ್ನಲಾಗಿದೆ.

ಕಳೆದ ತಿಂಗಳು ನಡೆದ ಇತ್ತೀಚಿನ ಘಟನೆಯಲ್ಲಿ, ಕೊಂಡ್ವಾ ಪ್ರದೇಶದಲ್ಲಿ ಎಂಟು ವರ್ಷದ ಬಾಲಕಿಗೆ ಅಪರಿಚಿತ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದ ಎಂಬ ದೂರಿನ ಆಧಾರದ ಮೇರೆಗೆ ತನಿಖೆಯ ಸಮಯದಲ್ಲಿ, ನಾವು ಸುಮಾರು 100 ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದೇವೆ ಮತ್ತು ಒಂದು ದೃಶ್ಯದಲ್ಲಿ ವಾಹನದ ಭಾಗಶಃ ನೋಂದಣಿ ಸಂಖ್ಯೆಯನ್ನು ಗುರುತಿಸಲಾಗಿದೆ. ಈ ಲೀಡ್ ಆಧರಿಸಿ, ನಾವು ಅಂತಿಮವಾಗಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ರಾಮಮಂದಿರದ ಪ್ರಾಣ ಪ್ರತಿಷ್ಠೆ: ಛತ್ತೀಸ್‍ಗಢದಲ್ಲಿ ಡ್ರೈ ಡೇ ಆಚರಣೆ

ನಾನಾವರೆ ವಿರುದ್ಧ 2007ರಿಂದ 2013ರ ನಡುವೆ ಸ್ವರ್ಗೇಟ್, ಭಾರತಿ ವಿದ್ಯಾಪೀಠ, ಬಿಬ್ವೆವಾಡಿ ಮತ್ತು ಸಹಕಾರ ನಗರ ಪ್ರದೇಶಗಳಲ್ಲಿ ಆರು ವಿಭಿನ್ನ ಪ್ರಕರಣಗಳು ದಾಖಲಾಗಿದ್ದವು ಎಂದು ತನಿಖೆಯಿಂದ ತಿಳಿದುಬಂದಿದೆ.

2013 ರಲ್ಲಿ ಸಹಕಾರ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ, ಅತ್ಯಾಚಾರ ಮತ್ತು ಅಪಹರಣದ ಆರೋಪದ ಮೇಲೆ 10 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾನೆ ಎಂದು ಅಧಿಕಾರಿ ಹೇಳಿದರು. ಇತ್ತೀಚಿನ ಪ್ರಕರಣದಲ್ಲಿ, ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‍ಗಳು ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಅಡಿಯಲ್ಲಿ ನಾನಾವೇರ್‍ನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

RELATED ARTICLES

Latest News