Sunday, May 5, 2024
Homeಬೆಂಗಳೂರುಅಡಿಕೆ ವ್ಯಾಪಾರಿಯ 1 ಕೋಟಿ ಹಣ ಕಳ್ಳತನ, ಕಾರು ಚಾಲಕ ಸೇರಿ ನಾಲ್ವರ ಬಂಧನ

ಅಡಿಕೆ ವ್ಯಾಪಾರಿಯ 1 ಕೋಟಿ ಹಣ ಕಳ್ಳತನ, ಕಾರು ಚಾಲಕ ಸೇರಿ ನಾಲ್ವರ ಬಂಧನ

ಬೆಂಗಳೂರು, ನ.2- ಚಿತ್ರದುರ್ಗದ ಅಡಿಕೆ ವ್ಯಾಪಾರಿಯ ಕಾರಿನಲ್ಲಿದ್ದ ಒಂದು ಕೋಟಿ ಹಣ ಕಳ್ಳತನ ಮಾಡಿದ್ದ ಕಾರಿನ ಚಾಲಕ ಸೇರಿದಂತೆ ನಾಲ್ವರನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿ 90.19 ಲಕ್ಷ ರೂ. ನಗದು, ಕಳ್ಳತನ ಮಾಡಿದ ಹಣದಲ್ಲಿ ಖರೀದಿಸಿದ ಮೊಬೈಲ್‍ಗಳು, ವಾಚ್‍ಗಳು, ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾರು ಚಾಲಕ ಮೂಲತಃ ಚಿತ್ರದುರ್ಗ ಜಿಲ್ಲೆ ಹೋಳಲಕೆರೆ ತಾಲ್ಲೂಕಿನ ತಾಳ್ಯ ಗ್ರಾಮದ ಸ್ವಾಮಿ (34), ಈತನ ಸ್ನೇಹಿತೆ ನಗರದ ಮಹದೇವಪುರದ ನಿವಾಸಿ ಅನುಪಮ (38) ಈಕೆಯ ಸ್ನೇಹಿತ ಚಿತ್ರದುರ್ಗದ ಜಜಲರ ಹಟ್ಟಿ ನಿವಾಸಿ ಪವನ್ (30) ಹಾಗೂ ಹಾಸನ ಜಿಲ್ಲೆ ಸಕಲೇಶಪುರದ ಮಹೇಶ್ವರಿ ನಗರ ನಿವಾಸಿ ಕಾರ್ತಿಕ್ (27) ಬಂಧಿತ ಆರೋಪಿಗಳು.

ಅಂತರ್‍ರಾಜ್ಯ ಅಡಿಕೆ ವ್ಯಾಪಾರಿ, ಚಿತ್ರದುರ್ಗದ ಭೀಮಸಮುದ್ರ ನಿವಾಸಿ ಉಮೇಶ್ ಎಂಬುವವರು ವಿವಿಧ ರಾಜ್ಯಗಳಿಗೆ ತೆರಳಿ ಅಡಿಕೆಯನ್ನು ಖರೀದಿಸುತ್ತಾರೆ. ಅದರಂತೆ ಅಕ್ಟೋಬರ್ 20ರಂದುಅಡಿಕೆ ಖರೀದಿಸಲು ಒಂದು ಕೋಟಿ ಹಣವನ್ನು ಬ್ಯಾಗ್‍ನಲ್ಲಿಟ್ಟುಕೊಂಡು ಕಾರಿನಲ್ಲಿ ಚಾಲಕ ಸ್ವಾಮಿ ಜೊತೆ ಹೋಗಿದ್ದು, ಮೊದಲು ಚಿತ್ರದುರ್ಗದಲ್ಲೇ ಖರೀದಿಗೆ ಹೋದಾಗ ವ್ಯಾಪಾರ ಕುದುರಿಲ್ಲ.

ಹಾಗಾಗಿ ವಾಪಸ್ಸು ಅಲ್ಲಿಂದ ಶಿರಾಕ್ಕೆ ಬಂದಿದ್ದಾರೆ. ಶಿರಾದಲ್ಲೂ ಅಡಿಕೆ ವ್ಯಾಪಾರ ಸರಿಬರಲಿಲ್ಲ. ನಂತರ ತುಮಕೂರಿಗೆ ಹೋಗಿದ್ದಾರೆ ಅಲ್ಲಿಯೂ ಅಡಿಕೆ ತೆಗೆದುಕೊಂಡಿಲ್ಲ. ವಾಪಸ್ಸು ಊರಿಗೆ ಹೋಗುವ ಮುನ್ನ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳು ಹಾಗೂ ಸ್ನೇಹಿತನ ಮಕ್ಕಳನ್ನು ಮಾತನಾಡಿಸಿಕೊಂಡು ಹೋಗೋಣವೆಂದು ನಿರ್ಧರಿಸಿ ಬೆಂಗಳೂರಿಗೆ ಬಂದಿದ್ದಾರೆ.

ಮೊದಲು ನಗರದ ಗಾಂನಗರಕ್ಕೆ ಬಂದು ಹೋಟೆಲ್‍ವೊಂದರ ಮುಂಭಾಗ ಕಾರ್ ಪಾರ್ಕಿಂಗ್ ಮಾಡಿ ಊಟ ಮುಗಿಸಿಕೊಂಡು ಚಂದ್ರಲೇಔಟ್‍ನ ಪಿಜಿಗೆ ಹೋಗಿ ಮಕ್ಕಳನ್ನು ಮಾತನಾಡಿಸಿಕೊಂಡು ನಂತರ ವಾಪಸ್ಸು ಭೀಮಸಮುದ್ರಕ್ಕೆ ಹಿಂದಿರುಗಿದ್ದಾರೆ.

ರಾತ್ರಿ ಮನೆಗೆ ಹೋದ ಉಮೇಶ್ ಅವರು ಹಣವಿದ್ದ ಬ್ಯಾಗ್ ತೆಗೆದುಕೊಳ್ಳಲು ಕಾರಿನ ಡಿಕ್ಕಿ ತೆಗೆದು ನೋಡಿದಾಗ ಒಂದು ಕೋಟಿ ಹಣವಿದ್ದ ಬ್ಯಾಗ್ ಇರಲಿಲ್ಲ. ಇದರಿಂದ ಗಾಬರಿಯಾದ ಉಮೇಶ್ ಅವರು ಏನು ಮಾಡಬೇಕೆಂದು ತೋಚದೆ, ಹಣ ಎಲ್ಲಿ ಕಳ್ಳತನವಾಗಿದೆ ಎಂದು ತಿಳಿಯದೇ ಅ.21ರಂದು ವಾಪಸ್ಸು ಬೆಂಗಳೂರಿಗೆ ಬಂದು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿ ತಮ್ಮ ಕಾರಿನ ಚಾಲಕ ಸ್ವಾಮಿ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಬರ ಅಧ್ಯಯನ ಮಾಡುತ್ತಿರುವ ತಂಡ ನಾಟಕ ಕಂಪನಿ: ಶಿವರಾಜ ತಂಗಡಗಿ

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರುಕಾರು ಚಾಲಕ ಸ್ವಾಮಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆತನ ಸ್ನೇಹಿತರು ಸೇರಿ ಒಂದು ಕೋಟಿ ಹಣ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಉಮೇಶ್ ಅವರ ಬಳಿ ಸ್ವಾಮಿ ಹದಿನೈದು ವರ್ಷದಿಂದ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಉಮೇಶ್ ಅವರು ಅಡಿಕೆ ವ್ಯಾಪಾರಕ್ಕೆ ಹೋಗುವಾಗ ಕೋಟಿ ಕೋಟಿ ಹಣ ತೆಗೆದುಕೊಂಡು ಹೋಗುತ್ತಾರೆಂಬ ವಿಷಯವನ್ನು ಸ್ನೇಹಿತೆ ಅನುಪಮಾಗೆ ತಿಳಿಸಿದ್ದನು.

ಅಡಿಕೆ ವ್ಯಾಪಾರಿ ಬಳಿ ಕೋಟಿ ಕೋಟಿ ಹಣ ಇರುವುದನ್ನು ತಿಳಿದುಕೊಂಡ ಅನುಪಮಾ, ಸ್ವಾಮಿಯ ಸಹಾಯದಿಂದ ಕಾರಿನ ನಕಲಿ ಕೀ ಮಾಡಿಸಿಕೊಂಡು, ಮತ್ತೆ ಯಾವಾಗ ಬೆಂಗಳೂರಿಗೆ ಬರುತ್ತೀರೆಂದು ಸ್ವಾಮಿಯನ್ನು ವಿಚಾರಿಸಿ ಸ್ನೇಹಿತ ಪವನ್‍ಗೆ ತಿಳಿಸಿದ್ದಾಳೆ. ಅದರಂತೆ ಪವನ್ ತನ್ನ ಸ್ನೇಹಿತ ಕಾರ್ತಿಕ್ ಜೊತೆ ಗಾಂನಗರಕ್ಕೆ ಹೋಗಿದ್ದು, ವ್ಯಾಪಾರಿ ಉಮೇಶ್ ಅವರ ಕಾರು ಹೋಟೆಲ್ ಮುಂದೆ ನಿಂತಿದ್ದಾಗ ನಕಲಿ ಕೀ ಬಳಸಿ ಡಿಕ್ಕಿಯಲ್ಲಿದ್ದ ಒಂದು ಕೋಟಿ ಹಣವಿದ್ದ ಬ್ಯಾಗ್ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ವಿಚಾರ ಬೆಳಕಿಗೆ ಬಂದಿದ್ದು, ಪ್ರಕರಣ ಸಂಬಂಧ ನಾಲ್ವರನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೇಂದ್ರ ಸರ್ಕಾರ ರಾಜ್ಯಕ್ಕೆ ನಯಾಪೈಸೆ ಬರ ಪರಿಹಾರ ನೀಡಿಲ್ಲ : ಪರಮೇಶ್ವರ್

ಆರೋಪಿಗಳಿಂದ ಕಳ್ಳತನ ಮಾಡಿದ್ದ ಒಂದು ಕೋಟಿ ಹಣದ ಪೈಕಿ 90, 19, 500 ರೂ. ನಗದು, ಕಳ್ಳತನ ಮಾಡಿದ್ದ ಹಣದಲ್ಲಿ ಖರೀದಿಸಿದ್ದ 6.49 ಲಕ್ಷ ರೂ. ಮೌಲ್ಯದ 2 ಆ್ಯಪಲ್ ಕಂಪನಿಯ ಐಫೆÇೀನ್‍ಗಳು, ಒಂದು ಜೊತೆ ಹಿಯರ್ ಫೋನ್, 2 ಫಾಸಿಲ್ ಕಂಪನಿಯ ವಾಚ್‍ಗಳು, ಒಂದು ಆ್ಯಪಲ್ ಕಂಪನಿಯ ಐ ವಾಚ್, 61.670 ಗ್ರಾಂ ತೂಕದ ಚಿನ್ನಾಭರಣಗಳು, ಆರೋಪಿಗಳು ಕೃತ್ಯಕ್ಕೆ ಬಳಸಿದ್ದ 4 ಮೊಬೈಲ್ ಫೆÇೀನ್‍ಗಳು, ಒಂದು ಮಾರುತಿ ಸಿಯಾಜ್ ಡೆಲ್ಟಾ ಕಾರ್, ಒಂದು ಫೋಲೋ ಕಾರ್ ಮತ್ತು ಒಂದು ಪಲ್ಸರ್ ಬೈಕ್ ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಪಶ್ಚಿಮ ವಿಭಾಗದ ಉಪ-ಫೋಲೀಸ್ ಆಯುಕ್ತ ಗಿರೀಶ್ ಅವರ ನೇತೃತ್ವದಲ್ಲಿ ಚಿಕ್ಕಪೇಟೆ ಉಪ ವಿಭಾಗದ ಸಹಾಯಕ ಫೋಲೀಸ್ ಆಯುಕ್ತ ರಮೇಶ್, ಇನ್ಸ್‍ಪೆಕ್ಟರ್ ಮಾರುತಿ ಮತ್ತು ಸಿಬ್ಬಂದಿ ತಂಡ ಅವಿರತವಾಗಿ ಶ್ರಮಿಸಿ ನಾಲ್ವರನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗದೆ.

RELATED ARTICLES

Latest News