Wednesday, May 1, 2024
Homeರಾಜ್ಯರಾಜ್ಯದಲ್ಲಿ ಝಿಕಾ ವೈರಸ್ ಪತ್ತೆ ಬೆನ್ನಲ್ಲೇ ಆರೋಗ್ಯ ಇಲಾಖೆ ಅಲರ್ಟ್

ರಾಜ್ಯದಲ್ಲಿ ಝಿಕಾ ವೈರಸ್ ಪತ್ತೆ ಬೆನ್ನಲ್ಲೇ ಆರೋಗ್ಯ ಇಲಾಖೆ ಅಲರ್ಟ್

ಬೆಂಗಳೂರು,ನ.2-ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದಲ್ಲಿನ ಸೊಳ್ಳೆಗಳ ಪರೀಕ್ಷೆ ವೇಳೆ ಮಾರಕ ಝಿಕಾ ವೈರಸ್ ಪತ್ತೆಯಾದ ಬೆನ್ನಲ್ಲೇ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಆರಂಭಿಕ ಹಂತದಲ್ಲೇ ಮಾರಕ ವೈರಸ್‍ಗೆ ಕಡಿವಾಣ ಹಾಕಲು ಮುಂದಾಗಿರುವ ಆರೋಗ್ಯ ಇಲಾಖೆ ತಲಕಾಯಲಬೆಟ್ಟ ಗ್ರಾಮದ 5 ಕಿಮೀ ವ್ಯಾಪ್ತಿಯಲ್ಲಿರುವ 5 ಗ್ರಾಮಗಳಲ್ಲಿ 31 ಗರ್ಭಿಣಿಯರ ರಕ್ತ ಮಾದರಿಗಳನ್ನು ಸಂಗ್ರಹ ಮಾಡಿ ಪರೀಕ್ಷೆಗೆ ಕಳುಹಿಸಿದೆ. ಇನ್ನೂ ಜೊತೆಯಲ್ಲಿ 4 ಮಂದಿ ಜ್ವರಪೀಡಿತರ ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.

ಮಾದರಿ ಪರೀಕ್ಷೆಗಳ ವರದಿ ಬರಲು 15 ದಿನಗಳಾಗಲಿದ್ದು, ವರದಿ ಬಂದ ನಂತರ ಝಿಕಾ ವೈರಸ್ ಇದೆಯೋ ಇಲ್ಲವೋ ಎಂಬುದು ಖಚಿತವಾಗಲಿದೆ. ಅಲ್ಲಿಯವರೆಗೂ ಗರ್ಭಿಣಿಯರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಉತ್ತಮ ಪೋಷಕಾಂಶಯುಕ್ತ ಆಹಾರ ಸೇವನೆಗೆ ಸೂಚನೆ ನೀಡಲಾಗಿದೆ. ಸೊಳ್ಳೆ ಪರದೆ ಬಳಸಿಕೊಂಡು ಮಲಗಲು ಸೂಚಿಸಲಾಗಿದೆ. ಸೊಳ್ಳೆ ಕಡಿತದಿಂದ ಸ್ವಯಂ ರಕ್ಷಣೆ ಮಾಡಿಕೊಂಡು ಝಿಕಾ ವೈರಸ್ ಆತಂಕದಿಂದ ದೂರ ಇರಲು ಸಲಹೆ ನೀಡಲಾಗುತ್ತಿದೆ.

ಪ್ರಶಸ್ತಿ ಪುರಸ್ಕೃತರ ಹೆಸರನ್ನು ತಪ್ಪಾಗಿ ಓದಿ ನಗೆಪಾಟಲಿಗೀಡಾದ ಸಚಿವ ತಂಗಡಗಿ

ಮುಂಜಾಗ್ರತಾ ಕ್ರಮವಾಗಿ ರಾಜ್ಯದ 68 ಕಡೆಗಳಲ್ಲಿ ಕೀಟಶಾಸ್ತ್ರಜ್ಞರು ಸೊಳ್ಳೆಗಳ ಪರೀಕ್ಷೆ ನಡೆಸಿದ್ದರು. ಜಿಲ್ಲೆಯ 6 ಕಡೆಗಳಲ್ಲೂ ಸೊಳ್ಳೆಗಳ ಪರೀಕ್ಷೆ ನಡೆದಿತ್ತು. ತಲಕಾಯಲ ಬೆಟ್ಟದಲ್ಲಿ ನಡೆದ ಪರೀಕ್ಷೆಯಲ್ಲಿ ಸೊಳ್ಳೆಗಳಲ್ಲಿ ಝಿಕಾ ವೈರಸ್ ಇರುವುದು ಪತ್ತೆಯಾಗಿದೆ. ಈ ಬೆಟ್ಟ ವ್ಯಾಪ್ತಿಯ 5 ಕಿ.ಮೀ. ಸುತ್ತ ಮುತ್ತಲ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ತಲಕಾಯಲಬೆಟ್ಟದಲ್ಲಿ ಕೀಟಶಾಸ್ತ್ರಜ್ಞರು ಸೊಳ್ಳೆಗಳಲ್ಲಿ ಝಿಕಾ ವೈರಸ್ ಇರುವುದು ದೃಢಪಡಿಸಿದ ಬೆನ್ನಲ್ಲೇ ವಿಶೇಷ ಸಭೆ ನಡೆಸಿರುವ ಆರೋಗ್ಯ ಇಲಾಖೆ ಅಧಿಕಾರಿಗಳು, ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ತಲಕಾಯಲಬೆಟ್ಟದಿಂದ 5 ಕಿ.ಮೀ. ವ್ಯಾಪ್ತಿಯ ವೆಂಕಟಾಪುರ, ದಿಟ್ಟೂರಹಳ್ಳಿ, ಬಚ್ಚನಹಳ್ಳಿ, ವಡ್ಡಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮನೆ ಮನೆಗೆ ಭೇಟಿ ನೀಡಿ 30 ಮಂದಿ ಗರ್ಭಿಣಿಯರು ಮತ್ತು ಜ್ವರ ಪೀಡಿತ 7 ಮಂದಿ ರಕ್ತವನ್ನು ಪಡೆದು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಿದ್ದು, ವರದಿಗಾಗಿ ಕಾಯಲಾಗುತ್ತಿದೆ.

ಮಾರಕ ಝಿಕಾ ವೈರಸ್ ಗರ್ಭಿಣಿಯರಿಗೆ ಹರಡುವ ಸೋಂಕು. ಇದು ಮುಖ್ಯವಾಗಿ ಸೊಳ್ಳೆಗಳಿಂದ ಹರಡುವ ಕಾಯಿಲೆ. ಪ್ರಾರಂಭದಲ್ಲಿ ಸೌಮ್ಯ ಲಕ್ಷಣ ಇರಲಿದ್ದು, ನಂತರದಲ್ಲಿ ಜೀವ ತೆಗೆಯುವ ಮಾರಣಾಂತಿಕ ರೋಗವಾಗಿ ಬದಲಾಗುತ್ತದೆ. ಝಿಕಾ ಸ್ವತಃ ಮಾರಣಾಂತಿಕ ಅಲ್ಲದಿದ್ದರೂ ಅಪಾಯ ತಂದೊಡ್ಡಲಿದೆ. ಈ ರೋಗದ ಲಕ್ಷಣಗಳು ಒಂದು ವಾರದೊಳಗೆ ಕಣ್ಮರೆಯಾಗುತ್ತವೆ. ಗರ್ಭಿಣಿ ಸೋಂಕಿಗೆ ಒಳಗಾದಾಗ ಈ ರೋಗವು ಹುಟ್ಟಲಿರುವ ಮಗುವಿನ ಮೇಲೆ ವಿನಾಶಕಾರಿ ಪರಿಣಾಮ ಬೀರುತ್ತದೆ.

ಎಗಿಫ್ಟಿ ಮತ್ತು ಈಡಿಯಸ್ ಅಲ್ಲೋ ಪಿಕ್ಸಸ್ ಸೊಳ್ಳೆಗಳಿಂದ ಝಿಕಾ ವೈರಸ್ ಮನುಷ್ಯನಿಗೆ ಹರಡುತ್ತದೆ. ಸೊಳ್ಳೆಯು ಸೋಂಕಿತ ವ್ಯಕ್ತಿಯನ್ನು ಕಚ್ಚಿದ ನಂತರ, ಕಾ ವೈರಸ್ ಸೊಳ್ಳೆಯ ವ್ಯವಸ್ಥೆ ಪ್ರವೇಶಿಸುತ್ತದೆ. ಅದರ ದೇಹದಲ್ಲಿ ಪುನರಾವರ್ತಿಸುತ್ತದೆ ಮತ್ತು ಅದರ ಲಾಲಾರಸ ಗ್ರಂಥಿ ಗಳಿಗೆ ಹರಡುತ್ತದೆ. ಈ ವೈರಸ್ ಸೊಳ್ಳೆಯಲ್ಲಿ ಎಂಟರಿಂದ ಹತ್ತು ದಿನಗಳವರೆಗೆ ಕಾವು ಕೊಡುತ್ತದೆ. ಅಂತಹ ಸೊಳ್ಳೆ. ಕಚ್ಚಿದಾಗ ವೈರಸ್ ವ್ಯಕ್ತಿಗೆ ಹರಡುತ್ತದೆ. ಸೊಳ್ಳೆ ಕಚ್ಚಿದ ನಂತರ ವ್ಯಕ್ತಿಯಲ್ಲಿ ಕಾ ವೈರಸ್‍ನ ಕಾವು ಕಾಲಾವಧಿ ಮೂರರಿಂದ 12 ದಿನಗಳವರೆಗೆ ಇರುತ್ತದೆ.

ಝಿಕಾ ವೈರಸ್ ಲಕ್ಷಣಗಳು ಝಿಕಾ ವೈರಸ್ ಒಳಗಾದವರು ಸಾಮಾನ್ಯವಾಗಿ ಜ್ವರ, ತಲೆನೋವು, ತುರಿಕೆ, ಕಣ್ಣಿನ ಬಣ್ಣ ಬದಲಾವಣೆ, ಮೈ ಕೈ ನೋವಿನ ರೋಗದ ಲಕ್ಷಣ ಗಳನ್ನು ಅನುಭವಿಸುತ್ತಾರೆ ಅಥವಾ ತುಂಬಾ ಸೌಮ್ಯವಾದ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ. ಡೆಂಗ್ಯೂ ಮತ್ತು ಚಿಕೂನ್ ಗುನ್ಯಾದಂತೆ ಇರುತ್ತದೆ. ಜ್ವರ, ದದ್ದು, ತಲೆನೋವು, ಕೀಲುನೊವು, ಆಯಾಸ, ಕೆನ್ನೆಗಳ ಊತ, ಬೆವರುವುದು, ತಣ್ಣಗಾಗುವುದು, ವಾಂತಿ, ರಕ್ತಸಿಕ್ತ ಕಣ್ಣುಗಳು ಲಕ್ಷಣಗಳು ಗೋಚರಿಸುತ್ತವೆ.

ರಾಜಸ್ಥಾನ : ಇಡಿ ಅಧಿಕಾರಿಗಳನ್ನೇ ಬಂಧಿಸಿದ ಎಸಿಬಿ

ಝಿಕಾ ಬರದಂತೆ ತಡೆಗೆಟ್ಟುವುದು ಹೇಗೆ?:
ಸೋಂಕು ಬಂದ ಮೇಲೆ ಪರದಾಡುವುದಕ್ಕಿಂತ ಸೋಂಕು ಬಾರದಂತೆ ತಡೆಯುವುದು ಅತೀ ಅಗತ್ಯ. ಇದಕ್ಕಾಗಿ ಕೆಲವು ಮುನ್ನೆಚ್ಚರಿಕಾ ಕ್ರಮ ಗಳನ್ನು ಕೈಗೊಳ್ಳಬೇಕು. ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.

ಗರ್ಭಿಣಿಯರು, ಬಾಣಂತಿಯರು ಸೇರಿದಂತೆ ಎಲ್ಲರೂ ಸೊಳ್ಳೆಗಳ ಕಾಟ ತಡೆಗೆ ಕ್ರಮಕೈಗೊಳ್ಳಬೇಕು. ಪ್ರಸ್ತುತ ಝಿಕಾ ವೈರಸ್ ಸೋಂಕಿಗೆ ಯಾವುದೇ ನಿರ್ದಿಷ್ಟ ಔಷಧ ಇಲ್ಲ. ವಿಜ್ಞಾನಿಗಳು ದೀರ್ಘ ಕಾಲದವರೆಗೆ ವೈರಸ್ ಹಾನಿಕರವಲ್ಲ ಅಂತ ಭಾವಿಸಿದ್ದರು. ಸದ್ಯ ರೋಗ ಲಕ್ಷಣಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಆದ್ದರಿಂದ ವೈದ್ಯರು ಜ್ವರ ಕಡಿಮೆ ಮಾಡುವ ಔಷಧಿ ನೀಡುತ್ತಾರೆ. ವಾಂತಿ ಮತ್ತು ದದ್ದುಗಳಿಗೆ ಔಷಧಗಳನ್ನು ಸೂಚಿಸಬಹುದು.

ಇನ್ನೂ ಮುಂಜಾಗ್ರತಾ ಕ್ರಮವಾಗಿ ಜ್ವರದಿಂದ ಬಳಲುತ್ತಿರುವವರ ಮೇಲೆ ನಿಗಾವಹಿಸಲಾಗಿದೆಯಾದರೂ ಝಿಕಾ ವೈರಸ್ ಸೋಂಕು ಹುಟ್ಟುವ ಮಕ್ಕಳ ಅಂಗವೈಕಲ್ಯಕ್ಕೆ ತುತ್ತಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಗರ್ಭಿಣಿಯರ ಮೇಲೂ ನಿಗಾ ವಹಿಸಲಾಗಿದೆ.

RELATED ARTICLES

Latest News