ನವದೆಹಲಿ,ಅ.13- ಇಸ್ರೇಲ್-ಹಮಾಸ್ ಯುದ್ಧದ ಹಿನ್ನೆಲೆಯಲ್ಲಿ ಇಸ್ರೇಲ್‍ನಿಂದ 212 ಭಾರತೀಯರಿದ್ದ ಮೊದಲ ವಿಮಾನ ಇಂದು ಮುಂಜಾನೆ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಈ ವಿಮಾನವು ನಿನ್ನೆ ಬೆನ್ ಗುರಿಯಾನ್ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಿತ್ತು. ನಸುಕಿನಲ್ಲೇ ನವದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭಾರತೀಯರನ್ನು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸ್ವಾಗತಿಸಿದರು.
ನವದೆಹಲಿಗೆ ಬಂದಿಳಿದ ನಂತರ ಮಾತನಾಡಿದ ಇಸ್ರೇಲ್ ವಿದ್ಯಾರ್ಥಿ ಶುಭಂ ಕುಮಾರ್, ನಾವು ಕೇಂದ್ರ ಸರ್ಕಾರ ಕೃತಜ್ಞರಾಗಿರುತ್ತೇವೆ. ಹೆಚ್ಚಿನ ವಿದ್ಯಾರ್ಥಿಗಳು ಸ್ವಲ್ಪ ಭಯಭೀತರಾಗಿದ್ದರು. ಭಾರತದ ರಾಯಭಾರ ಕಚೇರಿಯ ಮೂಲಕ ಭಾರತೀಯ ನಾಗರಿಕರಿಗೆ ಸಂಬಂಧಿಸಿದ ಕೆಲವು ಅಧಿಸೂಚನೆಗಳು ಮತ್ತು ಲಿಂಕ್‍ಗಳನ್ನು ನೋಡಿದ ನಂತರ ನಮ್ಮ ಆತ್ಮಸ್ಥೈರ್ಯ ಹೆಚ್ಚಿತು ಎಂದು ತಿಳಿಸಿದ್ದಾರೆ.
ಇಂದು ಬೆಳಗ್ಗೆ ಸುಮಾರು 212 ಜನರನ್ನು ವಾಪಸ್ ಕರೆತರಲಾಗಿದೆ. ಇಸ್ರೇಲ್‍ನಿಂದ ಭಾರತೀಯ ಪ್ರಜೆಗಳನ್ನು ಕರೆತರಲು ಅಗತ್ಯವಿದ್ದರೆ ವಾಯುಪಡೆಯನ್ನೂ ಬಳಸಿಕೊಳ್ಳಲಾಗುವುದು. ಸದ್ಯಕ್ಕೆ ಚಾರ್ಟರ್ ಫೈಟ್‍ಗಳನ್ನು ಬಳಸಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ನಿ ತಿಳಿಸಿದ್ದಾರೆ.
ಚರ್ಮರೋಗ ತಜ್ಞರಿಂದ ನಾಯ್ಡು ಆರೋಗ್ಯ ತಪಾಸಣೆ
ಆಪರೇಷನ್ ಅಜಯ್ ಚಾಲನೆಯಲ್ಲಿದೆ. ವಿಮಾನದಲ್ಲಿದ್ದ 212 ನಾಗರಿಕರು ನವದೆಹಲಿಯ ಮಾರ್ಗದಲ್ಲಿದ್ದಾರೆ ಎಂದು ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ತಿಳಿಸಿದ್ದರು. ಅದರಂತೆ 212 ಭಾರತೀಯ ಪ್ರಜೆಗಳನ್ನು ಹೊತ್ತ ಆಪರೇಷನ್ ಅಜಯ್‍ನ ಮೊದಲ ವಿಮಾನವು ಟೆಲ್ ಅವೀವ್‍ನಿಂದ ದೆಹಲಿಗೆ ಹೊರಟಿದೆ. ಇಸ್ರೇಲ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ವಿಮಾನದಲ್ಲಿರುವ ಪ್ರತಿಯೊಬ್ಬರಿಗೂ ಸುರಕ್ಷಿತ ಪ್ರಯಾಣ ಬಯಸುತ್ತದೆ ಎಂದು ಭಾರತೀಯ ಮಿಷನ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿತ್ತು.
ಭಾರತೀಯ ನಾಗರಿಕರನ್ನು ಕರೆದೊಯ್ಯಲು ಮೊದಲ ಚಾರ್ಟರ್ ವಿಮಾನ ಇಂದು ರಾತ್ರಿ ಟೆಲ್ ಅವಿವ್ ತಲುಪಲಿದೆ ಮತ್ತು ನಾಳೆ ಬೆಳಿಗ್ಗೆ ಭಾರತಕ್ಕೆ ಮರಳುವ ಸಾಧ್ಯತೆಯಿದೆ ಎಂದು ಹೇಳಿದ್ದರು. ಸುಮಾರು 18,000 ಭಾರತೀಯರು ಪ್ರಸ್ತುತ ಇಸ್ರೇಲ್‍ನಲ್ಲಿ ನೆಲೆಸಿದ್ದಾರೆ ಮತ್ತು ಸುಮಾರು ಒಂದು ಡಜನ್ ನಷ್ಟು ಜನರು ವೆಸ್ಟ್ ಬ್ಯಾಂಕ್‍ನಲ್ಲಿದ್ದಾರೆ ಮತ್ತು ಮೂರರಿಂದ ನಾಲ್ಕು ಜನರು ಗಾಜಾದಲ್ಲಿದ್ದಾರೆ ಎಂದು ತಿಳಿಸಿದ್ದರು.
ವಾರಾಂತ್ಯದಲ್ಲಿ ಹಮಾಸ್ ಬಂಡುಕೋರರು ಇಸ್ರೇಲಿ ಪಟ್ಟಣಗಳ ಮೇಲೆ ನಡೆಸಿದ ಸರಣಿ ದಾಳಿಯಿಂದ ಅಲ್ಲಿ ಉದ್ವಿಗ್ನತೆ ಉಂಟಾಗಿದ್ದರಿಂದ ಸ್ವದೇಶಕ್ಕೆ ಹಿಂತಿರುಗಲು ಬಯಸುವ ಭಾರತೀಯರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಆಪರೇಷನ್ ಅಜಯ್ ಪ್ರಾರಂಭಿಸಿದೆ.
ಗಾಜಾ ಸರ್ವನಾಶಕ್ಕೆ ಸಿದ್ಧವಾದ ಇಸ್ರೇಲ್, ವಿನಾಶಕಾರಿ ದಾಳಿ ನಡೆಸದಂತೆ ವಿಶ್ವಸಂಸ್ಥೆ ಕರೆ
ಮಾಹಿತಿ ಪ್ರಕಾರ ಸುಮಾರು 18000 ಭಾರತೀಯರು ಇಸ್ರೇಲ್‍ನಲ್ಲಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈವರೆಗೆ ಯುದ್ಧದಿಂದ ಯಾವುದೇ ಭಾರತೀಯರು ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಗಾಯಗೊಂಡಿರುವ ಒಬ್ಬ ವ್ಯಕ್ತಿಯೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ, ಪ್ರಸ್ತುತ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದೆ.
ಮಾಧ್ಯಮ ವರದಿಗಳ ಪ್ರಕಾರ, ಇಸ್ರೇಲ್‍ನಲ್ಲಿ ಇದುವರೆಗೆ 222 ಸೈನಿಕರು ಸೇರಿದಂತೆ 1300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲಿ ಸೇನೆ ಹೇಳಿದೆ. 1973 ರಲ್ಲಿ ಈಜಿಪ್ಟ್ ಮತ್ತು ಸಿರಿಯಾದೊಂದಿಗೆ ವಾರಗಳ ಕಾಲ ನಡೆದ ಯುದ್ಧದ ನಂತರ ಇಷ್ಟು ದೊಡ್ಡ ಸಂಖ್ಯೆಯ ಸಾವುನೋವುಗಳು ಸಂಭವಿಸಿರಲಿಲ್ಲ. ಇನ್ನು ಅಲ್ಲಿನ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಹಮಾಸ್ ಆಳ್ವಿಕೆಯ ಗಾಜಾ ಪಟ್ಟಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 1,417 ಜನರು ಸಾವನ್ನಪ್ಪಿದ್ದಾರೆ.