Monday, November 11, 2024
Homeರಾಜಕೀಯ | Politicsಆಪರೇಷನ್ ಕಮಲಕ್ಕೆ ಒಂದು ಸಾವಿರ ಕೋಟಿ ಬಳಕೆ : ಪ್ರಿಯಾಂಕ್ ಖರ್ಗೆ

ಆಪರೇಷನ್ ಕಮಲಕ್ಕೆ ಒಂದು ಸಾವಿರ ಕೋಟಿ ಬಳಕೆ : ಪ್ರಿಯಾಂಕ್ ಖರ್ಗೆ

ಬೆಂಗಳೂರು, ಅ.30- ಹೈಕಮಾಂಡ್‍ನಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವವರು ರಾಜ್ಯ ಬಿಜೆಪಿ ನಾಯಕರು ದೆಹಲಿಗೆ ಹೋಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೈಕಾಲು ಹಿಡಿದು ಒಂದು ಸಾವಿರ ಕೋಟಿ ರೂಪಾಯಿ ತಂದು ಅದನ್ನು ಇಲ್ಲಿ ಆಪರೇಷನ್ ಕಮಲ ನಡೆಸಲು ಬಳಕೆ ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಸಚಿವ ಪರಮೇಶ್ವರ್ ಮನೆಯಲ್ಲಿ ನಡೆದ ಬೋಜನ ಕೂಟದಲ್ಲಿ ಮುದ್ದೆ ಬಗ್ಗೆ ಚರ್ಚೆಯಾಗಿದೆ, ಹುದ್ದೆ ಬಗ್ಗೆ ಚರ್ಚೆಯಾಗಿಲ್ಲ ಎಂದು ಸಭೆಯಲ್ಲೇ ಇದ್ದವರು ಹೇಳುತ್ತಿದ್ದಾರೆ. ರಾಜಕೀಯ ಚರ್ಚೆಯಾಗಿದೆ ಎಂದು ಮುಖ್ಯಮಂತ್ರಿ ಯಾಗಲಿ, ಉಪಮುಖ್ಯಮಂತ್ರಿಯಾಗಲಿ ಅಥವಾ ಸಭೆಯಲ್ಲಿ ಸಚಿವರಾಗಲಿ ಹೇಳುತ್ತಿಲ್ಲ.

ಬೇರೆ ಯಾರು ಮಾತನಾಡುತ್ತಿಲ್ಲ. ಬಿಜೆಪಿಯವರು ಕಲ್ಪನೆ ಮಾಡಿಕೊಂಡು ಮಾತನಾಡುತ್ತಿದ್ದಾರೆ. ಡೈನಿಂಗ್ ಟೆಬಲ್‍ನಲ್ಲಿ ನಡೆದಿದ್ದು ಬಿಜೆಪಿಯವರಿಗೆ ಹೇಗೆ ಗೋತ್ತು. ಪಾಪ ಬಿಜೆಪಿಯವರಿಗೆ ಅವರ ಪಕ್ಷದಲ್ಲೇ ಏನು ನಡೆಯುತ್ತಿದೆ ಎಂದು ಗೋತ್ತಿಲ್ಲ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಾಗ ರಾಜ್ಯದ ಒಬ್ಬ ಬಿಜೆಪಿ ನಾಯಕರು ಇರಲಿಲ್ಲ. ಕದ್ದು ಮುಚ್ಚಿ ಮೈತ್ರಿ ಮಾಡಿಕೊಳ್ಳುತ್ತಾರೆ. ಬಿಜೆಪಿಯವರು ಅವರದೇ ಪಕ್ಷದ ನಾಯಕ ಎಂ.ಪಿ.ರೇಣುಕಾಚಾರ್ಯ ಹೇಳುತ್ತಿರುವುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ. ಯಾರು ಊಟಕ್ಕೆ ಸೇರಿಕೊಳ್ಳಬಾರದು. ಊಟ ಮಾಡುವಾಗ ಊರಿಗೆ ಡಂಗೂರ ಸಾರಿ ಜಾತ್ರೆ ಮಾಡಿಕೊಳ್ಳಬೇಕಾ ಎಂದು ಪ್ರಶ್ನಿಸಿದರು.

ಬಿಜೆಪಿಯವರು ಭ್ರಮೆಯಲ್ಲಿದ್ದಾರೆ. ಕೇಂದ್ರದ ಬಿಜೆಪಿ ನಾಯಕರು ರಾಜ್ಯದ ಬಿಜೆಪಿಯವರಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಹೀಗಾಗಿ ಅಸ್ತಿತ್ವದಲ್ಲಿ ಇರಬೇಕು ಎಂದು ತಲೆ ಬುಡ ಇಲ್ಲದ ಹೇಳಿಕೆ ನೀಡುತ್ತಿದ್ದಾರೆ.
ಆಪರೇಷನ್ ಕಮಲ ನಡೆಸಿ ರಾಜ್ಯ ಸರ್ಕಾರವನ್ನು ಪತನ ಗೊಳಿಸಲು ಬಿಜೆಪಿ ಸಂಚು ನಡೆಸು ತ್ತಿರುವುದು ಗುಟ್ಟೇನು ಅಲ್ಲ. ಎಲ್ಲಿ ಸ್ಪಷ್ಟ ಬಹುಮತ ಬರುವುದಿಲ್ಲವೋ ಅಲ್ಲೆಲ್ಲಾ ಆಪರೇಷನ್ ಕಮಲ ಮಾಡುತ್ತಾರೆ. ಅದೇನು ಗಾಂ ತತ್ವದ ಮೇಲೆ ನಡೆಯುತ್ತದೆಯೇ ? ಹಣ ಕೊಟ್ಟು ಶಾಸಕರನ್ನು ಸೆಳೆಯುತ್ತಾರೆ. ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ತೊರೆದು ಪಕ್ಷಾಂತರ ಮಾಡಿದವರು ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಾಗಿ ಉಳಿದುಕೊಂಡಿದ್ದರೆ. ಸಚಿವರಾಗಿರಲಿಲ್ಲ, ಆಪರೇಷನ್ ಕಮಲದಿಂದ ಪಡೆದ ಹಣದಿಂದ ಚುನಾವಣೆ ನಡೆಸಿ ಗೆದ್ದು ಬರಲಿಲ್ಲವೇ ಎಂದು ಪ್ರಶ್ನಿಸಿದರು.

ಬಿಜೆಪಿಗೆ ಬಹುಮತ ಬರದೇ ಇರುವ ಮಹಾರಾಷ್ಟ್ರ, ಬಿಹಾರ, ಅಸ್ಸಾಂ, ಮಧ್ಯ ಪ್ರದೇಶದಲ್ಲಿ ಆಪರೇಷನ್ ಕಮಲ ಮಾಡಿ ಸರ್ಕಾರ ರಚಿಸಿದ್ದರು. ರಾಜಸ್ಥಾನದಲ್ಲೂ ಪ್ರಯತ್ನ ಮಾಡಿದರು. ಕರ್ನಾಟಕದಲ್ಲೂ ಪ್ರಯತ್ನ ಮಾಡುತ್ತಿದ್ದಾರೆ. ಇದು ಬಿಜೆಪಿಯ ಸ್ಟಾಂಟರ್ಡ್ ಆಪರೇಷನ್ ಆಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ರಾಜ್ಯ ನಾಯಕರಿಗೆ ಅವರ ಹೈಕಮಾಂಡ್ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಒಳ್ಳೆಯ ರಾಜ್ಯಾಧ್ಯಕ್ಷನನ್ನು ಮಾಡಿಲ್ಲ. ಮೇಲ್ಮನೆ, ಕೆಳಮನೆಗಳ ವಿರೋಧ ಪಕ್ಷದ ನಾಯಕರ ಆಯ್ಕೆ ಮಾಡಿಕೊಟ್ಟಿಲ್ಲ. ಅದಕ್ಕಾಗಿ ಜೀವಂತ ಇದ್ದೇವೆ ಎಂದು ತೋರಿಸಿಕೊಳ್ಳಲು ಪೈಪೋಟಿ ನಡೆಸುತ್ತಿರುವರು ನಾ ಮುಂದು ತಾ ಮುಂದು ಎಂದು ಜಿದ್ದಿಗೆ ಬಿದ್ದಿದ್ದಾರೆ. ಒಂದು ಸಾವಿರ ಕೋಟಿ ರೂಪಾಯಿ ಕೋಡಿ, ಸರ್ಕಾರ ರಚನೆ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೈ ಕಾಲು ಬಿದ್ದಿದ್ದಾರೆ. ಅದೇ ದುಡ್ಡು ತಂದು ಇಲ್ಲಿ ಆಪರೇಷನ್ ಕಮಲ ಆಮಿಶಕ್ಕೆ ಬಳಕೆ ಮಾಡುತ್ತಿರಬಹುದು. ಬಿಜೆಪಿಯವರು ಮೊದಲಿನಿಂದಲೂ ಇದನ್ನೇ ಅಲ್ಲವೇ ಮಾಡುತ್ತಿರುವುದು, ಅದನ್ನು ಬಿಟ್ಟು ಅವರು ಬೇರೆನ್ನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಆಪರೇಷನ್ ಕಮಲ ಮಾಡುವವರು ನನ್ನನ್ನಂತೂ ಅಪ್ರೋಚ್ ಮಾಡಲ್ಲ. ನಾವೆಲ್ಲಾ ಹುಟ್ಟ ಕಾಂಗ್ರೆಸಿಗರು. ನಮ್ಮ ಹತ್ತಿರ ಬರಲ್ಲ. ಆದರೆ ನ್ಮಮ ಪಕ್ಷದ ಒಬ್ಬ ಶಾಸಕರು ಹೇಳುತ್ತಾರೆ ಎಂದರೆ ನಂಬಬೇಕಲ್ಲ. ಹಿಂದೆ ಆಪರೇಷನ್ ಕಮಲ ನಡೆದಿದೆಯಲ್ಲಾ, ದೇಶದಲ್ಲೂ ಇದು ನಡೆದಿರುವ ಇತಿಹಾಸವೇ ಇದೆ. ಕರ್ನಾಟಕದಲ್ಲೂ ಆಗಿದೆ. ಬಿಜೆಪಿ ಆಪರೇಷನ್ ಕಮಲ ಮಾಡುತ್ತಾರೆ ಎಂಬುದು ನಂಬಲರ್ಹವಾಗಿದೆ ಎಂದರು.

ಅಧಿಕಾರ ಹಂಚಿಕೆ ಕಾಲ್ಪನಿಕ: ಎರಡೂವರೆ ವರ್ಷದ ಅಕಾರ ಹಂಚಿಕೆಯ ಬಗ್ಗೆ ಕೇಂದ್ರದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಣದೀಪ್‍ಸಿಂಗ್ ಸುರ್ಜೇವಾಲ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮಾತ್ರ ಗೋತ್ತು. ಎರಡುವರೆ ವರ್ಷಕ್ಕೆ ಹಂಚಿಕೆಯಾಗಿದೆಯೇ, ಪೂರ್ಣಾವಧಿಗೆ ಆಗಿದೆಯೇ ಆ ಐದು ಮಂದಿಗೆ ಮಾತ್ರಗೋತ್ತು. ಉಳಿದ ಯಾರಿಗೂ ಮಾಹಿತಿ ಇಲ್ಲ ಎಂದರು.

ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರ ಮಿಂಚಿನ ದಾಳಿ

ನಮ್ಮಲ್ಲಿ ಹೈಕಮಾಂಡ್ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಎಲ್ಲರ ಜವಾಬ್ದಾರಿಗಳು ಪೂರ್ವ ನಿರ್ಧರಿತವಾಗಿರು ತ್ತವೆ. ಅದರಂತೆ ನಡೆದುಕೊಳ್ಳುತ್ತೇವೆ. ಮುಂದೆಯೂ ನೀವೇ ಗ್ರಾಮೀಣಾಭಿವೃದ್ಧಿ ಸಚಿವರಾಗಿರಬೇಕು ಎಂದರೆ ಒಪ್ಪಿಕೊಳ್ಳಬೇಕಾಗು ತ್ತದೆ. ಮುಖ್ಯಮಂತ್ರಿ ಹುದ್ದೆ ಕುರಿತು ಅದೇ ಮಾನದಂಡ ಅನ್ವಯವಾಗುತ್ತದೆ. ಊಟಕ್ಕೆ ಸೇರಿದರು ಎಂದರೆ ಅದರಲ್ಲಿ ಹುಳುಕು ಹುಡುಕುವುದು ಎಷ್ಟು ಸರಿ ಎಂದರು.

ಹಿಂದಿನ ಸರ್ಕಾರ ಶೇ.40ರಷ್ಟು ಕಮಿಷನ್ ಪಡೆದು ಮಾಡಿದ ಲೂಟಿಯಿಂದಾಗಿರುವ ನಷ್ಟವನ್ನು ಸರಿದೂಗಿಸಲು, ಆಡಳಿತ ಸುಧಾರಣೆಗೆ, ಉದ್ಯೋಗ ಸೃಷ್ಟಿಗಾಗಿ ರಾಜ್ಯದ ಜನ ನಮಗೆ ಅಕಾರ ನೀಡಿದ್ದಾರೆ. ನಾವು ಅದಕ್ಕೆ ಆದ್ಯತೆ ನೀಡುತ್ತೇವೆ. ಅಧಿಕಾರ ಹಂಚಿಕೆ ಹಾಗೂ ಇತರ ಕಾಲ್ಪನಿಕ ವಿಚಾರಗಳಿಗೆ ಆದ್ಯತೆ ನೀಡುವುದಿಲ್ಲ ಎಂದರು.

ಕಲಬುರಗಿ ಗ್ರಾಮೀಣದಲ್ಲಿ ಪರೀಕ್ಷಾ ಅಕ್ರಮ ನಡೆದಿಲ್ಲ:ಸರ್ಕಾರಿ ಹುದ್ದೆಗಳ ನೇಮಕಾತಿಗೆ ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕೈಗೊಳ್ಳಲಾಗಿತ್ತು. ಒಂದು ದಿನ ಮೊದಲೇ ಪರೀಕ್ಷಾ ಕೇಂದ್ರದ ಸುತ್ತಾ ಝೆರಾಕ್ಸ್ ಯಂತ್ರಗಳಿರುವ ಅಂಗಡಿಗಳನ್ನು ಮುಚ್ಚಲಾಗಿತ್ತು. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಮೆಟಲ್ ಡಿಟೆಕ್ಟರ್ ಮತ್ತು ಹ್ಯಾಂಡೆಟ್ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿತ್ತು, ಲಾಡ್ಜ್‍ಗಳನ್ನು ಹಾಗೂ ಸಂಶಯ ಬಂದ ವಾಹನಗಳನ್ನು ಪರಿಶೀಲನೆಗೆ ಒಳಪಡಿಸಲಾಗಿತ್ತು.

ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದರಿಂದ ಕಲಬುರಗಿ ಗ್ರಾಮೀಣ ಭಾಗದಲ್ಲಿ ಪರೀಕ್ಷೆಗೂ ಮೊದಲು ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಕಲಬುರಗಿ ನಗರದಲ್ಲಿ ಒಬ್ಬ ಹೇಗೋ ಜಾರಿಕೊಂಡಿದ್ದ, ಆತನನ್ನು ಪರೀಕ್ಷೆ ಬರೆಯುತ್ತಿದ್ದ ಅರ್ಧ, ಮುಕ್ಕಾಲು ಗಂಟೆಯಲ್ಲೇ ಸಿಕ್ಕಿಕೊಂಡಿದ್ದಾನೆ. ಮತ್ತೊಬ್ಬ ಇರಬಹುದು ಎಂಬ ಶಂಕೆ ಇದೆ. ಹಿಂದೆ ಆದಂತೆ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಅನ್ಯಾಯವಾಗ ಬಾರದು ಎಂದು ನಾವು ಸಾಕಷ್ಟು ಎಚ್ಚರಿಕೆ ವಹಿಸಿದ್ದೇವು ಎಂದರು.

ಪ್ರಕರಣದ ಪ್ರಾಥಮಿಕ ವರದಿ ಬಂದಿದೆ, ಅದರ ಪ್ರಕಾರ ಕಲಬುರಗಿ ಗ್ರಾಮೀಣ ಪರೀಕ್ಷಾ ಕೇಂದ್ರದ ಒಳಗೆ ಅಕ್ರಮ ನಡೆದಿಲ್ಲ. ಆದರೂ ನಾವು ನಿಷ್ಪಕ್ಷಪಾತ, ಕಠಿಣ ತನಿಖೆಗೆ ಕ್ರಮ ಕೈಗೊಂಡಿದ್ದೇವೆ.

ಪರೀಕ್ಷಾ ಅಭ್ಯರ್ಥಿಗಳು ನೀಡಿದ್ದ ಪತ್ರವನ್ನು ಒಂದು ತಿಂಗಳಿನಿಂದ ಸರ್ಕಾರದ ಗಮನಕ್ಕೆ ತರದೆ ಮೂಲೆ ಗುಂಪು ಮಾಡಿದ್ದೇಕೆ ಎಂದು ಬಿಜೆಪಿ ಪ್ರಶ್ನಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಬಿಜೆಪಿಗೆ ಕೆಲಸ ಇಲ್ಲ. ಕಳೆದ ಬಾರಿ ಅವರ ಮೂಗಿನ ಕೆಳಗೆ ಎಲ್ಲಾ ನಡೆದಿತ್ತು, ಬಿಜೆಪಿ ಕಾರ್ಯಕರ್ತರೆ ಅಕ್ರಮ ನಡೆಸಿದರೂ ಏನು ನಡೆದಿಲ್ಲ ಎಂದು ಹೇಳುತ್ತಿದ್ದರು.

ಆಗ ನಡೆದ ನೇಮಕಾತಿಗಳಲ್ಲಿನ ಅಕ್ರಮದ ಬಲಿಪಶುಗಳಾದ ಕೆಪಿಟಿಸಿಎಲ್, ಶಿಕ್ಷಕರು, ಪಿಎಸ್‍ಐ. ಎಫ್‍ಡಿಎ ಅಭ್ಯರ್ಥಿಗಳು ಪ್ರತಿ ದಿನಾ ನಮ್ಮನ್ನು ಭೇಟಿ ಮಾಡಿ ಪತ್ರ ನೀಡುತ್ತಿದ್ದಾರೆ. ಅದರ ಆಧಾರದ ಮೇಲೆ ನಾವು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ಹಿಂದೆ ಪರೀಕ್ಷಾ ಕೇಂದ್ರಗಳಲ್ಲಿ ಮೆಟಲ್‍ಡಿಟೆಕ್ಟರ್ ಇರಲಿಲ್ಲ. ಝರಾಕ್ಸ್ ಅಂಗಡಿಗಳನ್ನು ಮುಚ್ಚಿರಲಿಲ್ಲ. ತಪಾಸಣೆ ನಡೆಸುತ್ತಿರಲಿಲ್ಲ. ನಾವು ಕೆಲಸ ಮಾಡಿದ್ದಕ್ಕೆ 24 ಗಂಟೆಯಲ್ಲಿ ಶಂಕಿತರು ಬಂಧನಕ್ಕೆ ಒಳಗಾಗಿದ್ದಾರೆ. ಕಲಬುರಗಿ ಗ್ರಾಮೀಣ ಭಾಗದಲ್ಲಿ ಅಕ್ರಮಗಳು ನಡೆಯಲಿಲ್ಲ. ಕಲಬುರಗಿಯಲ್ಲಿ ಒಂದು ಗಂಟೆಯಲ್ಲೇ ಆರೋಪಿಗಳನ್ನು ಬಂಸಿದ್ದೇವೆ. ಪರೀಕ್ಷಾಭ್ಯರ್ಥಿಗಳು ನೀಡಿದ್ದ ಪತ್ರದ ಮೇಲೆ ಕ್ರಮ ಕೈಗೊಂಡಿದ್ದಕ್ಕೆ ತಪ್ಪಿತಸ್ಥರು ಸಿಕ್ಕಿ ಬಿದ್ದಿದ್ದಾರೆ ಎಂದರು.

ಬಿಜೆಪಿಯವರು ಉಪದೇಶ ಮಾಡುವುದನ್ನು ನಿಲ್ಲಿಸಬೇಕು. ಈ ಹಿಂದೆ ಸದನದಲ್ಲಿ ಹೇಳಿಕೆ ನೀಡಿದ್ದ ಆಗಿನ ಸಚಿವರು, ಪಿಎಸ್‍ಐ ಹಗರಣ ಅಗೆದರೆ ಪ್ರಿಯಾಂಕ್ ಖರ್ಗೆ ಹೆಸರು ಬರುತ್ತದೆ ಎಂದು ವಿಧಾನಸಭೆಯಲ್ಲಿ ಹೇಳಿದರು. ಅವರ ಕೈನಲ್ಲೇ ಅಕಾರ ಇತ್ತಲ್ಲ. ಸಿಐಡಿ, ಸಿಬಿಐ ಎಲ್ಲವೂ ಇತ್ತು. ಏಕೆ ತನಿಖೆ ಮಾಡಲಿಲ್ಲ, ನನ್ನ ಪಾತ್ರವನ್ನು ಏಕೆ ಬಹಿರಂಗ ಪಡಿಸಲಿಲ್ಲ ಎಂದು ಪ್ರಶ್ನಿಸಿದರು.

ಪಿಎಸ್‍ಐ ಹಗರಣ ನಡೆದಾಗ ಒಂದು ವರ್ಷ ಏನು ನಡೆದೇ ಇಲ್ಲ ಎಂದು ಕಣ್ಣುಮುಚ್ಚಿಕೊಂಡು ಕುಳಿತಿದ್ದರು. ಬಿಜೆಪಿಯವರ ಬಲಗೈ ಬಂಟರೇ ಜೈಲು ಅನುಭವಿಸುತ್ತಿದ್ದಾರೆ. ಮೊದಲು ಅದರ ಬಗ್ಗೆ ಮಾತನಾಡಲಿ. ಪಿಎಸ್‍ಐ ಹಗರಣದಲ್ಲಿ ಶಾಸಕರ ಭವನದಲ್ಲೇ ಡಿಲ್‍ಗಳಾಗಿದ್ದವು ಎಂದು ಬಿಜೆಪಿಯ ಮಾಜಿ ಶಾಸಕರೇ ಹೇಳಿಕೆ ನೀಡಿದ್ದರು. ಪ್ರತಿಹುದ್ದೆಯನ್ನು 30 ಲಕ್ಷ ರೂಪಾಯಿಗೆ ಮಾರಾಟ ಮಾಡಿಕೊಂಡಿದ್ದರು ಎಂದು ಹೇಳಲಾಗಿತ್ತು. ಈಗ ನಮ್ಮ ಸರ್ಕಾರ ಪರೀಕ್ಷಾ ಕೇಂದ್ರದಲ್ಲಿ ಸಿಲುಕಿ ಬಿದ್ದ ಆರೋಪಿಗಳ ಪ್ರಕರಣವನ್ನು ಎರಡು ಮೂರು ವಾರದಲ್ಲೇ ತನಿಖೆ ಮುಗಿಸುತ್ತೇವೆ ಎಂದು ಹೇಳಿದರು.

ಲಿಖಿತ ಪರೀಕ್ಷೆಯ ಹಗರಣದಲ್ಲಿ ಸಚಿವರ ಪಾತ್ರ ಇದೆ ಎಂದು ಬಿಜೆಪಿಯವರು ಮಾಡುತ್ತಿರುವ ಆರೋಪಕ್ಕೆ ಆಧಾರಗಳೇನು ಎಂದು ಪ್ರಶ್ನಿಸಿದರು.

RELATED ARTICLES

Latest News