Thursday, December 5, 2024
Homeಬೆಂಗಳೂರುಬಾಗಲೂರಿನಲ್ಲಿ ಡಬಲ್ ಮರ್ಡರ್, ಶೆಡ್‌ನಲ್ಲಿ ಇಬ್ಬರು ಬಸ್ ಕ್ಲೀನರ್‌ಗಳ ಬರ್ಬರ ಹತ್ಯೆ

ಬಾಗಲೂರಿನಲ್ಲಿ ಡಬಲ್ ಮರ್ಡರ್, ಶೆಡ್‌ನಲ್ಲಿ ಇಬ್ಬರು ಬಸ್ ಕ್ಲೀನರ್‌ಗಳ ಬರ್ಬರ ಹತ್ಯೆ

ouble murder in Bagaluru, brutal killing of two bus cleaners

ಬೆಂಗಳೂರು,ನ.9– ಖಾಸಗಿ ಬಸ್ನ ಇಬ್ಬರು ಕ್ಲೀನರ್ಗಳನ್ನು ಶೆಡ್‌ನಲ್ಲಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.ರಾಮನಗರ ಮೂಲದ ನಾಗೇಶ(41) ಹಾಗೂ ಮಂಡ್ಯ ಮೂಲದ ಮಂಜು(44) ಕೊಲೆಯಾದ ಕ್ಲೀನರ್ಗಳು. ಸಿಂಗಸಂದ್ರದ ಅರೆಬಿನ್ನಮಂಗಲದ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಎಸ್ಆರ್ಎಸ್ ಟ್ರಾವೆಲ್‌್ಸಗೆ ಸೇರಿದ ವರ್ಕ್ಶಾಪ್ ಇದೆ. ಇಲ್ಲಿ ಬಸ್ಗಳನ್ನು ಸ್ವಚ್ಚ ಮಾಡುವ ಕೆಲಸ ಮಾಡಲಾಗುತ್ತದೆ.

ಸ್ವಚ್ಚ ಮಾಡುವ ಸಿಬ್ಬಂದಿಗಳು ಹಾಗೂ ಮೆಕಾನಿಕ್ಗಳಿಗೆ ರಾತ್ರಿ ಉಳಿದುಕೊಳ್ಳಲು ಇಲ್ಲಿ ಶೆಡ್ನ್ನು ಸಹ ನಿರ್ಮಿಸಲಾಗಿದೆ. ಕೆಲಸ ಮುಗಿದ ನಂತರ ಕ್ಲೀನರ್ಗಳು ಈ ಶೆಡ್ನಲ್ಲಿ ಮಲಗುತ್ತಾರೆ. ಬಸ್ಗಳನ್ನು ಸ್ವಚ್ಚಗೊಳಿಸಿ ರಾತ್ರಿ ಇವರಿಬ್ಬರು ಶೆಡ್ಗೆ ಹೋಗಿದ್ದಾರೆ. ಆ ವೇಳೆ ಶೆಡ್ನಲ್ಲಿ ಆರೋಪಿಗಳ ಜೊತೆ ಯಾವುದೋ ವಿಚಾರವಾಗಿ ಜಗಳವಾಗಿದೆ.

ಜಗಳ ವಿಕೋಪಕ್ಕೆ ಹೋದಾಗ ಆರೋಪಿಗಳು ಇವರಿಬ್ಬರ ಮೇಲೆ ರಾಡಿನಿಂದ ಮನಬಂದಂತೆ ತಲೆ, ಕೈ-ಕಾಲುಗಳ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ನಾಗೇಶ ಇಲ್ಲಿ ಎರಡು ವರ್ಷಗಳಿಂದ ಹಾಗೂ ಮಂಜು ಕಳೆದ ನಾಲ್ಕು ತಿಂಗಳಿನಿಂದ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಇಂದು ಬೆಳಗ್ಗೆ 7.30ರ ಸುಮಾರಿನಲ್ಲಿ ಶೆಡ್ನ ಬಳಿ ಸಿಬ್ಬಂದಿಗಳು ಬಂದು ಇವರನ್ನು ಕೂಗಿದ್ದಾರೆ. ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಒಳಗೆ ಹೋಗಿ ನೋಡಿದಾಗ ಇಬ್ಬರು ಕ್ಲೀನರ್ಗಳು ರಕ್ತದ ಮಡುವಿನಲ್ಲಿ ಕೊಲೆಯಾಗಿ ಬಿದ್ದಿರುವುದು ಕಂಡುಬಂದಿದೆ.

ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಇಬ್ಬರ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಆರೋಪಿಗಳ ಸುಳಿವು:
ಮದ್ಯದ ಅಮಲಿನಲ್ಲಿ ಈ ಕೊಲೆ ನಡೆದಿರಬಹುದು. ಆರೋಪಿಗಳ ಸುಳಿವು ಲಭ್ಯವಾಗಿದ್ದು, ಆದಷ್ಟು ಶೀಘ್ರದಲ್ಲೇ ಬಂಧಿಸಲಾಗುವುದೆಂದು ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ.

RELATED ARTICLES

Latest News