Monday, June 17, 2024
Homeಅಂತಾರಾಷ್ಟ್ರೀಯಮೊಜಾಂಬಿಕ್ ಕರಾವಳಿಯಲ್ಲಿ ಮೀನುಗಾರಿಕೆ ದೋಣಿ ಮುಳುಗಿ 90 ಮಂದಿ ಜಲಸಮಾಧಿ

ಮೊಜಾಂಬಿಕ್ ಕರಾವಳಿಯಲ್ಲಿ ಮೀನುಗಾರಿಕೆ ದೋಣಿ ಮುಳುಗಿ 90 ಮಂದಿ ಜಲಸಮಾಧಿ

ಮೊಜಾಂಬಿಕ್,ಏ. 8- ಮೀನುಗಾರಿಕಾ ದೋಣಿ ಮುಳುಗಿ 90 ಜನರು ಸಾವನ್ನಪ್ಪಿರುವ ದುರ್ಘಟನೆ ದಕ್ಷಿಣ ಆಫ್ರಿಕಾ ಬಳಿಯ ದ್ವೀಪರಾಷ್ಟ್ರ ಮೊಜಾಂಬಿಕ್ ಕರಾವಳಿಯಲ್ಲಿ ನಡೆದಿದೆ. ಸುಮಾರು 130 ಮಂದಿ ಪ್ರಯಾಣಿಸುತ್ತಿದ್ದ ಈ ದೋಣಿ ಹೆಚ್ಚಿನ ಭಾರದಿಂದಾಗಿ ಮುಳುಗಿದೆ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊಜಾಂಬಿಕ್ನಿಂದ ಮತ್ತೊಂದು ದ್ವೀಪ ನಂಪುಲಾಗೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಈ ದೋಣಿ ಪ್ರಯಾಣಿಕರ ಸಾಗಣೆಗೆ ಯೋಗ್ಯವಾಗಿರಲಿಲ್ಲ ಎಂದು ಕೂಡ ಹೇಳಲಾಗುತ್ತಿದೆ.

ಮೃತರಲ್ಲಿ ಅನೇಕ ಮಕ್ಕಳು ಕೂಡ ಸೇರಿದ್ದಾರೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ. ಪರಿಹಾರ ಕಾರ್ಯಾಚರಣೆಯನ್ನು ಆರಂಭಿಸಲಾಗಿದ್ದು, ಸುಮಾರು ಐವರನ್ನು ರಕ್ಷಿಸಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿಸಿದ್ದಾರೆ.

ಮೊಜಾಂಬಿಕ್ನಲ್ಲಿ ಹಿಂಸಾಚಾರ ಹೆಚ್ಚುತ್ತಿರುವುದರಿಂದ ಅಲ್ಲಿನ ಜನರು ವಲಸೆ ಹೋಗುತ್ತಿದ್ದಾರೆ. ತಮ್ಮ ಜೀವರಕ್ಷಣೆಗೆ ತೆರಳುತ್ತಿದ್ದವರು ದುರಂತದಲ್ಲಿ ಬಲಿಯಾಗಿರುವುದು ವಿಪರ್ಯಾಸ ಎಂದು ತಿಳಿಸಿದ್ದಾರೆ.

RELATED ARTICLES

Latest News