Friday, November 7, 2025
Home Blog Page 11

ಬಿಹಾರದ ವಿಧಾನಸಭಾ ಚುನಾವಣೆ : ಮತದಾನಕೆ ತೆರಳಲು ರಾಜ್ಯದಲ್ಲಿರುವ ಬಿಹಾರಿಗಳಿಗೆ ಖರ್ಚು-ವೆಚ್ಚ ವ್ಯವಸ್ಥೆಗೆ ಮುಂದಾದ ಕಾಂಗ್ರೆಸ್

ಬೆಂಗಳೂರು, ನ.2- ಬಿಹಾರ ವಿಧಾನಸಭೆ ಚುನಾವಣೆಯನ್ನು ಶತಾಯಗತಾಯ ಗೆಲ್ಲಲೇ ಬೇಕು ಎಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಪಕ್ಷ ವಿವಿಧ ರಾಜ್ಯಗಳಲ್ಲಿ ನೆಲೆಸಿರುವ ಬಿಹಾರಿಗಳನ್ನು ವಾಪಸ್ ಕರೆಸಿ, ಮತದಾನ ಮಾಡಿಸಲು ಮುಂದಾಗಿದೆ.

ಪ್ರತಿಯೊಂದು ರಾಜ್ಯಗಳಲ್ಲಿ ಶಾಸಕಾಂಗ ಪಕ್ಷದ ನಾಯಕರು ಮತ್ತು ಪಕ್ಷದ ಅಧ್ಯಕ್ಷರು ಬಿಹಾರಿಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕೆಂಪಾಪುರ ಕಾಫಿ ಲೇಔಟ್ ನಲ್ಲಿ ನೆಲೆಸಿರುವ ಬಿಹಾರಿಗಳ ಜೊತೆ ಚರ್ಚೆ ನಡೆಸಲಿದ್ದಾರೆ. ಬೆಂಗಳೂರು ನಗರದ ಎಲೆಕ್ಟ್ರಾನಿಕ್ ಸಿಟಿ ವೈಟ್ ಫೀಲ್ಡ್, ಯಲಹಂಕ, ಯಶವಂತಪುರ, ಪೀಣ್ಯ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಬಿಹಾರಿಗಳ ಸಂಖ್ಯೆ ಹೆಚ್ಚಾಗಿದೆ.

ಮೂಲಗಳ ಪ್ರಕಾರ ಕರ್ನಾಟಕದಲ್ಲಿ ಎಂಟು ಲಕ್ಷ ಮಂದಿ ಬಿಹಾರ ಮೂಲದವರು ವಿವಿಧ ಉದ್ಯೋಗಗಳಿಗಾಗಿ ನೆಲೆಸಿದ್ದಾರೆ. ಕಾರ್ಮಿಕ ಇಲಾಖೆಯಲ್ಲಿ ಅಧಿಕೃತವಾಗಿ 24,000 ಮಂದಿ ನೊಂದಾಯಿತರಾಗಿದ್ದಾರೆ.

ನವಂಬರ್ 6 ಮತ್ತು 11ರಂದು ಬಿಹಾರದ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಈ ಎಲ್ಲಾ ಬಿಹಾರಿಗಳಿಗೂ ತವರಿಗೆ ತೆರಳಿ ಮತದಾನದಲ್ಲಿ ಭಾಗವಹಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಡಿಕೆ ಶಿವಕುಮಾರ್ ಮನವಿ ಮಾಡಿಕೊಳ್ಳಲಿದ್ದಾರೆ. ಕೂಲಿಕಾರ್ಮಿಕರಿಗೆ ತವರಿಗೆ ವಾಪಸ್ ಹೋಗಿ, ಬರಲು ಸಾರಿಗೆ ಹಾಗೂ ದೈನಂದಿನ ಖರ್ಚು ವೆಚ್ಚಗಳನ್ನು ವ್ಯವಸ್ಥೆ ಮಾಡಲು ಕೂಡ ಕಾಂಗ್ರೆಸ್ ಪಕ್ಷ ಮುಂದಾಗಿದೆ ಎನ್ನಲಾಗಿದೆ.

ಬಿಹಾರದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದಾಗಿ ಹೊರ ರಾಜ್ಯದಲ್ಲಿರುವ ಬಿಹಾರಿಗಳ ಮೇಲೆ ಪ್ರಭಾವ ಬೀರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಪ್ರಯತ್ನ ನಡೆಯುತ್ತಿದೆ. ಬಿಹಾರಿಗಳು ಚುನಾವಣಾ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ವೇತನ ಸಹಿತ ರಜೆ ನೀಡುವಂತೆ ಸಂಸ್ಥೆಗಳ ಮಾಲೀಕರು ಮತ್ತು ಉದ್ಯಮಿಗಳ ಮನವೊಲಿಸುವ ಪ್ರಯತ್ನಗಳು ನಡೆಯುತ್ತಿವೆ.

ಜೊತೆಗೆ ಹಿರಿಯ ನಾಯಕರುಗಳೇ ಮಾತುಕತೆ ನಡೆಸಿ ಬಿಹಾರಿಗಳಿಗೆ ಕಾಂಗ್ರೆಸ್ ಪಕ್ಷದ ಕೊಡುಗೆಗಳು ಮತ್ತು ಭವಿಷ್ಯದ ಕಾರ್ಯಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಲಾಗುತ್ತಿದೆ. ಬಿಹಾರದ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಅದನ್ನು ಗೆಲ್ಲಲು ನಾನಾ ರೀತಿಯ ತಂತ್ರಗಾರಿಕೆಗಳನ್ನು ಅನುಸರಿಸಲಾಗುತ್ತಿದೆ.

ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಅಲ್ಲ : ಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು, ನ.2– ರಾಜ್ಯ ಕಾಂಗ್ರೆಸ್ ನಲ್ಲಿ ನವೆಂಬರ್ ಕ್ರಾಂತಿಯ ಚರ್ಚೆಗಳು ಜೋರಾಗಿರುವ ನಡುವೆಯೇ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳ ಪಟ್ಟಿಯು ಬೆಳೆಯುತ್ತಿದೆ. ಆದರೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಾವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲಾ, ಎಂದು ಕಡ್ಡಿ ಮುರಿದಂತೆ ನಿರಾಕರಣೆ ವ್ಯಕ್ತಪಡಿಸಿದ್ದಾರೆ.

ಸಂಪುಟದಲ್ಲಿ ಮುಜರಾಯಿ ಮತ್ತು ಸಾರಿಗೆ ಇಲಾಖೆಗಳ ಜವಾಬ್ದಾರಿಯನ್ನು ನಿಭಾಯಿಸುತ್ತಿರುವ ರಾಮಲಿಂಗ ರೆಡ್ಡಿ ಪರವಾಗಿ ಕೆಲವು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ರಾಮಲಿಂಗ ರೆಡ್ಡಿ ಫಾರ್ ಸಿಎಂ ಎಂಬ ಪೇಜ್ ತೆಗೆದು ಪ್ರಚಾರ ಮಾಡಲಾರಂಭಿಸಿದರು. ಇದಕ್ಕೆ ಸ್ಪಷ್ಟನೆ ನೀಡಿರುವ ರಾಮಲಿಂಗ ರೆಡ್ಡಿ ತಾವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಅಲ್ಲ ಕುರ್ಚಿಯು ಖಾಲಿ ಇಲ್ಲ. ನನ್ನ ಮೇಲೆ ಅಭಿಮಾನ ಇದರೆ ಈ ರೀತಿ ಪ್ರಚಾರ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲೇ ಸ್ಪಷ್ಟನೆ ನೀಡಿರುವ ರಾಮಲಿಂಗ ರೆಡ್ಡಿ, ಸಾಮಾಜಿಕ ಜಾಲತಾಣದಲ್ಲಿ ಕಳೆದ ಕೆಲವು ದಿನಗಳಿಂದ ರಾಮಲಿಂಗ ರೆಡ್ಡಿ ಫಾರ್ ಸಿಎಂ ಎಂಬ ಪೇಜ್ ಮೂಲಕ ಕೆಲವರು ಸುದ್ದಿ ಹಬ್ಬಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ.ರಾಜ್ಯದಲ್ಲಿ ಸರ್ಕಾರ ಸದೃಢವಾಗಿದ್ದು, ಪ್ರಸ್ತುತ ಮುಖ್ಯಮಂತ್ರಿ ಸ್ಥಾನ ಸಹ ಖಾಲಿ ಇರುವುದಿಲ್ಲ ಮತ್ತು ನಾನು ಅದರ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನನ್ನ ಮೇಲೆ ಮತ್ತು ಪಕ್ಷದ ಮೇಲೆ ಗೌರವವಿದ್ದರೆ, ದಯವಿಟ್ಟು ಈ ರೀತಿಯ ಆಧಾರರಹಿತ ಪ್ರಚಾರವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಮ್ಮ ಸರ್ಕಾರ ಉತ್ತಮವಾಗಿ ಜನಪರ ಕಾರ್ಯಗಳನ್ನು ಮಾಡುತ್ತಿದೆ. ಈ ಸಮಯದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ, ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದಷ್ಟೇ ನಮ್ಮ ಗುರಿಯಾಗಿರಬೇಕು. ಪಕ್ಷ ಮತ್ತು ನಾಡಿನ ಜನತೆ ವಹಿಸಿರುವ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುವುದರತ್ತ ಮಾತ್ರ ನನ್ನ ಗಮನವಿದೆ ಎಂದಿದ್ದಾರೆ.

ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ನನ್ನ ಹಿತೈಷಿಗಳು ಯಾರೂ ಇಂತಹ ಗೊಂದಲಕಾರಿ ಪ್ರಚಾರಕ್ಕೆ ಕಿವಿಗೊಡಬಾರದು ಮತ್ತು ಇದರಲ್ಲಿ ಭಾಗಿಯಾಗಬಾರದು ಎಂದು ಕೋರುತ್ತೇನೆ ಎಂದು ರಾಮಲುಂಗಾರೆಡ್ಡಿ ಬರೆದುಕೊಂಡಿದ್ದಾರೆ.ನಾವೆಲ್ಲರೂ ಒಟ್ಟಾಗಿ ಪಕ್ಷವನ್ನು ಬಲಪಡಿಸಲು ಮತ್ತು ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸೋಣ ಎಂದು‌ ಕರೆ ನೀಡಿದ್ದಾರೆ.

ಮಹಿಳಾ ಕ್ರಿಕೆಟ್ ವಿಶ್ವಕಪ್ : ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಳ್ಳುವ ತವಕದಲ್ಲಿ ಟೀಮ್ ಇಂಡಿಯಾ

ಮುಂಬೈ,ನ.2– ಆದ್ಬುತ ಹೋರಾಟದ ಮೂಲಕ ಸಿಡಿದ್ದೆದ್ದಿರುವ ಭಾರತ ಮಹಿಳಾ ಕ್ರಿಕೆಟ್‌ ತಂಡ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಳ್ಳುವ ತವಕದಲ್ಲಿದ್ದಾರೆ. ಸಮೀಪೈನಲ್‌ನಲ್ಲಿ 7 ಬಾರಿ ವಿಶ್ವಚಾಂಪಿಯನ್‌ ಆಸ್ಟ್ರೇಲಿಯಾ ತಂಡವನ್ನ ಮಣಿಸಿ ಭಾರತ ಮಹಿಳಾ ಕ್ರಿಕೆಟ್‌ ತಂಡ 2025ನೇ ಸಾಲಿನ ವಿಶ್ವಕಪ್‌ ಫೈನಲ್‌ ತಲುಪಿದ್ದು ಕೋಟ್ಯಾಂತರ ಅಭಿಮಾನಿಗಳು ರೋಚಕ ಕ್ಷಣವನ್ನು ಸವಿಯುತ್ತಿದ್ದಾರೆ.

ಮುಂಬೈನ ಡಿವೈ ಪಾಟೀಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್‌ನಲ್ಲಿ ಭಾರತ- ದಕ್ಷಿಣ ಆಫ್ರಿಕಾ ಸೆಣೆಸುತ್ತಿದ್ದು,ಭಾರತದ ಸಿಂಹಿಣಿಯರ ಮೇಲೆ ಅಪಾರ ನಂಬಿಕೆ ನೆಟ್ಟಿದೆ.ಕಳೆದ ವರ್ಷ ಅಮೆರಿಕಾದಲ್ಲಿ ನಡೆದ ಟಿ.20 ಟೂರ್ನಿಯ ಫೈನಲ್‌ನಲ್ಲಿ ಭಾರತ ವನಿತೆಯರು ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಟಿ20 ವಿಶ್ವಕಪ್‌ ಟ್ರೋಫಿ ಮುಡಿಗೇರಿಸಿಕೊಂಡಿಸಿಕೊಂಡಿದ್ದರು ಈಗ ಏಕದಿನ ಪಂದ್ಯದಲ್ಲೂ ನಾವೇ ಚಾಂಪಿಯನ್‌ ಎಂದು ಸಾರಲು ಮುಂದಾಗಿದೆ.

ಐಸಿಸಿ ಅಧ್ಯಕ್ಷ ಜಯ್‌ ಶಾ ಮಹಿಳಾ ತಂಡ ಪ್ರಶಸ್ತಿ ಗೆದ್ದರೆ ಅವರಿಗೆ ಅವರು ಸಮಾನ ವೇತನ ನೀತಿ ಅಡಿಯಲ್ಲಿ ನಗದು ಬಹುಮಾನ ನೀಡಲು ಬಿಸಿಸಿಐ ಸಂಪೂರ್ಣ ಸಿದ್ಧವಾಗಿದೆ ಎಮದು ಹೇಳಿದ್ದಾರೆ.

ಪುರುಷರ ಭಾರತ ತಂಡಕ್ಕೆ ಬಿಸಿಸಿಐ 125 ಕೋಟಿ ಬಹುಮಾನ ನೀಡಿತ್ತು. ಅದೇ ರೀತಿ ಮಹಿಳಾ ತಂಡ ವಿಶ್ವಕಪ್‌ ಗೆದ್ದರೂ ಅಷ್ಟೇ ಮೊತ್ತವನ್ನ ಬಹುಮಾನವಾಗಿ ನೀಡಲು ಉನ್ನತ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತತ ಐಸಿಸಿಯಿಂದ ಚಾಂಪಿಯನ್‌ ತಂಡಕ್ಕೆ 37.3 ಕೋಟಿ ರೂ. ಹಾಗೂ ರನ್ನರ್‌ ಅಪ್‌ ತಂಡಕ್ಕೆ 20 ಕೋಟಿ ರೂ. ಬಹುಮಾನ ಸಿಗಲಿದೆ.

2008ರಲ್ಲಿ ಭಾರತ ವನಿತೆಯರು ಮೊದಲ ಬಾರಿ ಫೈನಲ್‌ ಪ್ರವೇಶಿಸಿದಾಗ ಆಸೀಸ್‌‍ ವಿರುದ್ಧವೇ 98 ರನ್‌ಗಳಿಂದ ಸೋತಿತ್ತು. 2017ರಲ್ಲಿ ಇಂಗ್ಲೆಂಡ್‌ ವಿರುದ್ಧ ಲಾರ್ಡ್ಸ್ ನಲ್ಲಿ 9 ರನ್‌ಗಳ ವಿರೋಚಿತ ಸೋಲು ಕಂಡಿತ್ತು. ಲಾರ್ಡ್ಸ್ ನಲ್ಲಿ ಮಹಿಳಾ ತಂಡ ಸೋತಾಗ ಪ್ರತಿಯೊಬ್ಬರಿಗೂ ತಲಾ 50 ಲಕ್ಷ ಬಹುಮಾನ ಘೋಷಿಸಿತ್ತು. ಸದ್ಯ 8 ವರ್ಷಗಳ ಬಳಿಕ ಭಾರತ 3ನೇ ಬಾರಿಗೆ ಫೈನಲ್‌ ತಲುಪಿದ್ದು, ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ.

ಮಂಡ್ಯ : ಕಾಲುಜಾರಿ ನಾಲೆಗೆ ಬಿದ್ದು ಮದರಸದ ನಾಲ್ವರು ಬಾಲಕಿಯರ ಸಾವು

ಮಂಡ್ಯ,ನ.2- ಆಟವಾಡುವಾಗ ಕಾಲುಜಾರಿ ನಾಲ್ವರು ಬಾಲಕಿಯರು ನಾಲೆಗೆ ಬಿದ್ದು ಸಾವನ್ನಪ್ಪಿರುವ ದುರ್ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕಾವೇರಿ ಪಟ್ಟಣದ ರಾಮಸ್ವಾಮಿ ನಾಲೆಯಲ್ಲಿ ನಡೆದಿದೆ. ಮೈಸೂರಿನ ಶಾಂತಿನಗರದ ಮದರಸದಿಂದ 15 ಮಕ್ಕಳು ಹಾಗೂ ಮೂವರು ಸಿಬ್ಬಂದಿ ಇಲ್ಲಿಗೆ ಬಂದಿದ್ದಾಗ ಈ ದುರಂತ ಸಂಭವಿಸಿದೆ.

ಮೃತರನ್ನು ಆಯಿಷಾ (14), ಹನಿ (14), ಥರ್ಬಿಮ್‌ (13), ಆಫ್ರಿನ್‌ (13)ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇಬ್ಬರನ್ನು ರಕ್ಷಿಸಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊದಲು ಬಾಲಕಿಯೊಬ್ಬಳು ನಾಲೆಯ ನೀರಿನಲ್ಲಿ ಆಟವಾಡುವಾಗ ಕಾಲುಜಾರಿ ನೀರಿಗೆ ಬಿದ್ದಿದ್ದಾಳೆ. ಆಕೆಯನ್ನು ರಕ್ಷಿಸಲು ಹೋಗಿ ಇನ್ನು ಆರು ಮಂದಿ ಕೊಚ್ಚಿ ಹೋಗಿದ್ದಾರೆ. ಈ ವೇಳೆ ಸ್ಥಳೀಯರು ಹಾಗೂ ಮದರಸಾ ಸಿಬ್ಬಂದಿ ಇಬ್ಬರನ್ನು ರಕ್ಷಿಸಿದ್ದಾರೆ. ಆದರೆ ನಾಲ್ವರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆಯಿಷಾಳನ್ನು ನೀರಿನಿಂದ ಮೇಲೆತ್ತಿ ಆಕೆಯನ್ನು ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಆದರೆ ಚಿಕಿತ್ಸೆ ಫಲಿಸದೆ ಬಾಲಕಿ ಕೊನೆಯುಸಿರೆಳೆದಿದ್ದಾಳೆ.

ಇನ್ನು ಸತತ ಪ್ರಯತ್ನದ ನಡುವೆ ಇಂದು ಬೆಳಗ್ಗೆ ಹನಿ, ಥರ್ಬಿಮ್‌, ಆಫ್ರಿನ್‌ ಮೃತದೇಹಗಳು ಪತ್ತೆಯಾಗಿದ್ದು, ನಾಲೆಯ ನೀರನ್ನು ನಿಲ್ಲಿಸಿ ಮೃತದೇಹಗಳಿಗಾಗಿ ಹುಡುಕಾಟ ನಡೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಸುಮಾರು ಆರು ತಾಸುಗಳ ಕಾರ್ಯಾಚರಣೆ ನಡೆಸಿದ ನಂತರ ಹನಿ ಮತ್ತು ಥರ್ಬಿಮ್‌ ಮೃತದೇಹಗಳು ಸಿಕ್ಕಿವೆ.

ನಿನ್ನೆ ಮಧ್ಯಾಹ್ನ ಬೀರೇದೇವರ ದೇವಸ್ಥಾನ ಬಳಿ ಮದರಸಾದ ಮಕ್ಕಳು ಬಂದಿದ್ದರು. ನೀರಿನ ರಭಸವಿದ್ದರೂ ಅದನ್ನು ಯಾರು ಗಮನಿಸಿಲ್ಲ. ಇವರ ಮೇಲ್ವಿಚಾರಣೆಗೆ ಬಂದಿದ್ದ ಸಿಬ್ಬಂದಿಗಳನ್ನು ಮಕ್ಕಳನ್ನು ನಾಲೆ ಬಳಿ ಏಕೆ ಬಿಟ್ಟರು ಎಂಬುದು ತಿಳಿಯುತ್ತಿಲ್ಲ.

ರಾತ್ರಿ 9 ಗಂಟೆವರೆಗೂ ಪ್ರಯಾಸಪಟ್ಟು ಹುಡುಕಾಟ ನಡೆಸಲಾಗಿತ್ತು. ಕತ್ತಲಾದ ಕಾರಣ ಶೋಧ ಕಾರ್ಯಚರಣೆ ನಿಲ್ಲಿಸಿ ಇಂದು ಮತ್ತೆ ಈಜು ತಜ್ಞರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸತತ ಪ್ರಯತ್ನಪಟ್ಟು ಮಕ್ಕಳ ಮೃತದೇಹಗಳನ್ನು ಹೊರತೆಗೆದಿದ್ದಾರೆ ಎಂದು ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಅರಕೆರೆ ಪೊಲೀಸ್‌‍ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಸ್ನೇಹಿತೆಯರನ್ನು ಕಳೆದುಕೊಂಡ ಸಹಪಾಠಿಗಳು ನಾಲೆ ಬಳಿ ಕಣ್ಣೀರು ಹಾಕಿದರು. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂಧನ ಮುಗಿಲು ಮುಟ್ಟಿತ್ತು.

ಬಿಹಾರ : ಜೆಡಿಯು ಅಭ್ಯರ್ಥಿ ಅನಂತ್‌ ಸಿಂಗ್‌ ಬಂಧನ

ಪಾಟ್ನಾ,ನ. 2- ಕಳೆದ ಮೂರು ದಿನಗಳ ಹಿಂದೆ ಮೋಕಾಮಾದಲ್ಲಿ ನಡೆದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಜನ್‌ ಸುರಾಜ್‌ ಬೆಂಬಲಿಗ ದುಲರ್‌ ಚಂದ್‌ ಯಾದವ್‌ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಪೊಲೀಸರು ಇಂದು ಜೆಡಿಯು ಅಭ್ಯಥಿ ಅನಂತ್‌ ಕುಮಾರ್‌ ಸಿಂಗ್‌ನನ್ನು ಬಂಧಿಸಿದ್ದಾರೆ.

ಎನ್‌ಡಿಎ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಜೆಡಿಯು ಅಭ್ಯರ್ಥಿಯನ್ನು ಬೆಳಗಿನ ಜಾವ ಮೊಕಾಮಾದ ಅವರ ಮನೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.ಪಾಟ್ನಾ ಎಸ್‌‍ಎಸ್‌‍ಪಿ ಕಾರ್ತಿಕೇಯ ಕೆ ಶರ್ಮಾ ಅವರ ಬಂಧನವನ್ನು ದೃಢಪಡಿಸಿದರು. ಆದಾಗ್ಯೂ, ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದರು.

ಗುರುವಾರ ಪಾಟ್ನಾದ ಮೋಕಾಮಾ ಪ್ರದೇಶದಲ್ಲಿ ಜನ್‌ ಸುರಾಜ್‌
ಪಕ್ಷದ ಅಭ್ಯರ್ಥಿ ಪಿಯೂಷ್‌ ಪ್ರಿಯದರ್ಶಿ ಪರ ಪ್ರಚಾರ ನಡೆಸುತ್ತಿದ್ದಾಗ ಯಾದವ್‌ ಸಾವನ್ನಪ್ಪಿದ್ದರು. ಮೋಕಾಮಾ ಪ್ರದೇಶದ ಭದೌರ್‌ ಮತ್ತು ಘೋಸ್ವರಿ ಪೊಲೀಸ್‌‍ ಠಾಣೆಗಳ ಬಳಿ ಈ ಘಟನೆ ನಡೆದಿತ್ತು.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ಕು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಮೃತರ ಮೊಮಗ ಸಲ್ಲಿಸಿದ ದೂರಿನ ಆಧಾರದ ಮೇಲೆ ದಾಖಲಾಗಿರುವ ಎಫ್‌ಐಆರ್‌ಗಳಲ್ಲಿ ಒಂದರಲ್ಲಿ ಅನಂತ್‌ ಸಿಂಗ್‌ ಸೇರಿದಂತೆ ಇತರ ನಾಲ್ವರನ್ನು ಆರೋಪಿಯನ್ನಾಗಿ ಹೆಸರಿಸಲಾಗಿದೆ.

ಬ್ರಿಟನ್‌ : ರೈಲಿನಲ್ಲಿ ಸಾಮೂಹಿಕ ಚೂರಿ ಇರಿತ, 9 ಮಂದಿಗೆ ಗಂಭೀರ ಗಾಯ

ಲಂಡನ್‌,ನ.2- ಬ್ರಿಟನ್‌ನ ಕೇಂಬ್ರಿಡ್ಜ್ ಶೈರ್‌ನಲ್ಲಿ ರೈಲಿನಲ್ಲಿ ಚೂರಿ ಇರಿತದ ದಾಳಿಯಲ್ಲಿ 9 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಸಶಸ್ತ್ರ ಪೊಲೀಸರು ಬಂಧಿಸಿದ್ದಾರೆ.

ಬ್ರಿಟಿಷ್‌ ಸಾರಿಗೆ ಪೊಲೀಸರ ಪ್ರಕಾರ, ಹತ್ತು ಜನರು ಆಸ್ಪತ್ರೆಯಲ್ಲಿದ್ದಾರೆ. ಈ ಪೈಕಿ ಒಂಬತ್ತು ಮಂದಿಗೆ ಮಾರಣಾಂತಿಕ ಗಾಯಗಳಿವೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರೈಲು ಕೇಂಬ್ರಿಡ್‌್ಜಶೈರ್‌ ಪ್ರದೇಶದ ಮೂಲಕ ಹಾದುಹೋಗುತ್ತಿತ್ತು ಮತ್ತು ಅದು ಹಂಟಿಂಗ್ಡನ್‌ ಸಮೀಪಿಸುತ್ತಿದ್ದಂತೆ, ಪೊಲೀಸರು ಆ ಪ್ರದೇಶವನ್ನು ಸುತ್ತುವರೆದಿದ್ದು, ಸಶಸ್ತ್ರ ಪೊಲೀಸ್‌‍ ಅಧಿಕಾರಿಗಳು ರೈಲು ಹತ್ತಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ.

ದಾಳಿಯಿಂದಾಗಿ ರೈಲು ಸೇವೆಗಳು ಅಸ್ತವ್ಯಸ್ತಗೊಂಡಿದ್ದು, ಅನೇಕ ಪ್ರಯಾಣಿಕರಿಗೆ ಅನಾನುಕೂಲ ಉಂಟಾಗಿದೆ. ಪೊಲೀಸರು ಘಟನಾ ಸ್ಥಳವನ್ನು ಸುತ್ತುವರೆದಿದ್ದು, ವಿಧಿವಿಜ್ಞಾನ ತಂಡಗಳು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿವೆ.

ಗಾಯಗೊಂಡವರ ಸಂಖ್ಯೆ ಮತ್ತು ಅವರ ಸ್ಥಿತಿಯ ಕುರಿತು ವಿವರಗಳನ್ನು ಇನ್ನೂ ಬಿಡುಗಡೆ ಮಾಡಲಾಗಿಲ್ಲ. ಕೇಂಬ್ರಿಡ್‌್ಜಶೈರ್‌ ಪೊಲೀಸರು ಮತ್ತು ಬ್ರಿಟಿಷ್‌ ಸಾರಿಗೆ ಪೊಲೀಸರು (ಬಿಟಿಪಿ) ಜಂಟಿಯಾಗಿ ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.

ಪ್ರಯಾಣಿಕರ ಮೇಲೆ ಚಾಕು ದಾಳಿ ನಡೆಸಿದ ಹಿಂದಿನ ಉದ್ದೇಶವೇನೆಂಬುದು ಪ್ರಸ್ತುತ ಸ್ಪಷ್ಟವಾಗಿಲ್ಲ. ಘಟನೆಯನ್ನು ವೀಕ್ಷಿಸಿದ ಅಥವಾ ತಮ ಮೊಬೈಲ್‌ ಫೋನ್‌ಗಳಲ್ಲಿ ಯಾವುದೇ ವೀಡಿಯೊ/ಫೋಟೋಗಳನ್ನು ವಿಡಿಯೋ ಮಾಡಿದ ಪ್ರಯಾಣಿಕರಿಗೆ ಪೊಲೀಸರು ಫೂಟೇಜ್‌ ನೀಡುವಂತೆ ಮನವಿ ಮಾಡಿದ್ದಾರೆ.

ರೈಲು ನಿಂತ ನಂತರ ಪ್ಲಾಟ್‌ಫಾರ್ಮ್‌ನಲ್ಲಿ ದೊಡ್ಡ ಚಾಕು ಹಿಡಿದಿದ್ದ ವ್ಯಕ್ತಿಯನ್ನು ನೋಡಿದ್ದೇವೆ. ನಂತರ ಪೊಲೀಸರು ಆ ವ್ಯಕ್ತಿಯನ್ನು ಎಳೆದು ತಡೆದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇದು ಭಯಾನಕ ಮತ್ತು ಕಳವಳಕಾರಿ ಘಟನೆ ಎಂದು ಯುಕೆ ಪ್ರಧಾನಿ ಕೀರ್‌ ಸ್ಟಾರ್ಮರ್‌ ಪ್ರತಿಕ್ರಿಯಿಸಿದ್ದು, ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲಾ ಸಂತ್ರಸ್ತರೊಂದಿಗೆ ತಾವಿದ್ದು, ತುರ್ತು ಸೇವೆಗಗಳನ್ನು ಒದಗಿಸಿದ ಸಿಬ್ಬಂದಿಗೆ ಧನ್ಯವಾದಗಳು. ಪ್ರದೇಶದ ಜನರು ಪೊಲೀಸರ ಸೂಚನೆಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಈತನಧ್ಯೆ, ಯುಕೆ ಗೃಹ ಕಾರ್ಯದರ್ಶಿ ಶಬಾನಾ ಮಹಮೂದ್‌ ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದು, ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ದುರಂತ ಘಟನೆಯಲ್ಲಿ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ. ಈ ಸಮಯದಲ್ಲಿ ಊಹಾಪೋಹ ಮತ್ತು ತಪ್ಪು ಮಾಹಿತಿಗೆ ಕಿವಿಗೊಡಬಾರದೆಂದು ಸಲಹೆ ಮಾಡಿದ್ದಾರೆ.

ಕೋಲಾರ : ನೀರಿನ ಕಟ್ಟೆಯಲ್ಲಿ ಮುಳುಗಿ ತಾಯಿ-ಮಗು ಸಾವು

ಕೋಲಾರ,ನ.2– ನೀರಿನ ಕಟ್ಟೆಯಲ್ಲಿ ಮುಳುಗಿ ತಾಯಿ-ಮಗ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಹೊಗರಿಗೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಾಲಾಶ್ರೀ(27), ಚಕ್ರವರ್ತಿ(5) ಮೃತಪಟ್ಟ ತಾಯಿ-ಮಗು.

ಗ್ರಾಮದ ಹೊರವಲಯದಲ್ಲಿರುವ ನೀರಿನ ಕಟ್ಟೆಯಲ್ಲಿ ತಾಯಿ, ಮಗುವಿನ ಶವಗಳು ತೇಲುತ್ತಿದ್ದು, ಗ್ರಾಮಸ್ಥರು ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದು, ಯಾವ ಕಾರಣಕ್ಕಾಗಿ ತಾಯಿ-ಮಗು ಕಟ್ಟೆಯಲ್ಲಿ ಸಾವನ್ನಪ್ಪಿದ್ದಾರೆ ಎಂಬುದು ತಿಳಿದುಬಂದಿಲ್ಲ. ತನಿಖೆಯ ನಂತರ ಘಟನೆಗೆ ನಿಖರ ಕಾರಣ ಗೊತ್ತಾಗಲಿದೆ.

ಘಟನೆ ಸಂಬಂಧ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಾಡಿನಾದ್ಯಂತ ತುಳಸಿ ಹಬ್ಬದ ಸಂಭ್ರಮ

ಬೆಂಗಳೂರು, ನ.2- ದೀಪಾವಳಿ ಹಬ್ಬದ ನಂತರ ಕಾರ್ತಿಕ ಮಾಸದಲ್ಲಿ ಆಚರಿಸುವ ತುಳಸಿ ಹಬ್ಬವನ್ನು ಇಂದು ನಾಡಿನಾದ್ಯಂತ ಆಚರಿಸಲಾಯಿತು.ಪ್ರತಿಯೊಂದು ಮನೆ ಮುಂದೆ ತುಳಸಿ ಗಿಡ ಇದ್ದೇ ಇರುತ್ತದೆ. ಪ್ರತಿಯೊಬ್ಬರೂ ದಿನನಿತ್ಯ ಪೂಜೆ ಸಲ್ಲಿಸುತ್ತಾರೆ. ಆದರೆ, ಇಂದು ತುಳಸಿಕಟ್ಟೆಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸುವುದು ವಿಶೇಷ. ತುಳಸಿ ಗಿಡವನ್ನು ಲಕ್ಷ್ಮೀದೇವಿ ಅವತಾರವೆಂದು ಪರಿಗಣಿಸಲಾಗಿದೆ.

ಮನೆಯಲ್ಲಿ ಐಶ್ವರ್ಯ, ಸಂತೋಷ, ಶಾಂತಿ ನೆಲೆಸಲಿ ಎಂದು ತುಳಸಿ ಗಿಡಗಳನ್ನು ಬೆಳೆಸಲಾಗುತ್ತದೆ. ಸಾಮಾನ್ಯವಾಗಿ ತುಳಸಿ ಹಬ್ಬದ ಸಂದರ್ಭದಲ್ಲಿ ಬೆಟ್ಟದ ನೆಲ್ಲಿಕಾಯಿ ಗಿಡದ ಕೊಂಬೆಯನ್ನು ತುಳಸಿ ಗಿಡದ ಪಕ್ಕದಲ್ಲಿಟ್ಟು ಪೂಜೆ ಮಾಡುತ್ತಾರೆ.

ನೆಲ್ಲಿಕಾಯಿ ಕೊಂಬೆಯಲ್ಲಿ ವಿಷ್ಣುವಿನ ಅಂಶವಿದೆ ಎಂಬ ನಂಬಿಕೆಯಿದೆ. ಹೀಗಾಗಿ ತುಳಸಿ ಗಿಡದ ಪಕ್ಕದಲ್ಲಿ ಬೆಟ್ಟದ ನೆಲ್ಲಿಕಾಯಿ ಕೊಂಬೆಯನ್ನಿಟ್ಟು ಪೂಜಿಸಲಾಗುತ್ತದೆ. ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ತುಳಸಿ ಗಿಡ, ಬೆಟ್ಟದ ನೆಲ್ಲಿಕಾಯಿ ಕೊಂಬೆಗಳ ಮಾರಾಟ ಜೋರಾಗಿತ್ತು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-11-2025)

ನಿತ್ಯ ನೀತಿ : ಯಾವುದಕ್ಕೂ ಭಯ ಪಡದಿರು..! ನಿನ್ನ ಕರ್ಮ, ನಿನ್ನ ಶ್ರಮ, ಭಗವಂತನ ಮೇಲಿರುವ ನಿನ್ನ ಪ್ರೇಮ ನಿನ್ನನ್ನು ರಕ್ಷಿಸುತ್ತದೆ.

ಪಂಚಾಂಗ : ಭಾನುವಾರ, 02-11-2025
ವಿಶ್ವಾವಸುನಾಮ ಸಂವತ್ಸರ / ಆಯನ: ದಕ್ಷಿಣಾಯನ / ಋತು: ಸೌರ ಹೇಮಂತ / ಮಾಸ: ಕಾರ್ತಿಕ / ಪಕ್ಷ: ಶುಕ್ಲ / ತಿಥಿ: ಏಕಾದಶಿ / ನಕ್ಷತ್ರ: ಪೂರ್ವಾಭಾದ್ರ / ಯೋಗ: ವ್ಯಾಘಾತ / ಕರಣ: ಭವ
ಸೂರ್ಯೋದಯ – ಬೆ.06.14
ಸೂರ್ಯಾಸ್ತ – 5.54
ರಾಹುಕಾಲ – 4.30-6.00
ಯಮಗಂಡ ಕಾಲ – 12.00-1.30
ಗುಳಿಕ ಕಾಲ – 3.00-4.30

ರಾಶಿಭವಿಷ್ಯ :
ಮೇಷ
: ಹೊಸ ವ್ಯವಹಾರ ವನ್ನು ಪ್ರಾರಂಭಿಸಿದ್ದರೆ, ಪ್ರಚಾರ ಮಾಡುವ ಬಗ್ಗೆ ಹೆಚ್ಚು ಗಮನ ಹರಿಸಿ.
ವೃಷಭ: ಹಣ ನಿಮ್ಮ ಮೂಲಕ ಸುಲಭವಾಗಿ ಜಾರಿಹೋದರೂ ನಿಮ್ಮ ಅದೃಷ್ಟದಿಂದ ನಿಮಗೆ ಸುಲಭವಾಗಿ ದೊರಕುವಂತೆ ಮಾಡುತ್ತದೆ.
ಮಿಥುನ: ಉದ್ಯೋಗ ಸ್ಥಳದಲ್ಲಿ ಯಶಸ್ಸಿನ ಭರವಸೆ ಮೂಡಲಿದೆ. ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ.

ಕಟಕ: ಬ್ಯಾಂಕ್‌ ನೌಕರರಿಗೆ ಕೆಲಸದ ಒತ್ತಡ ಹೆಚ್ಚಾಗಲಿದೆ.
ಸಿಂಹ: ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದಿರಿ.
ಕನ್ಯಾ: ವ್ಯಾಪಾರದಲ್ಲಿ ಲಾಭ ವಿದೆ. ಅಪರಿಚಿತ ರೊಂದಿಗೆ ಹೆಚ್ಚು ಸಮಯ ಕಳೆಯದಿರಿ.

ತುಲಾ: ಯಾರದೋ ಮೇಲಿನ ಸವಾಲಿಗೆ ಹೆಚ್ಚು ಸಾಲ ಮಾಡಿದರೆ ತೀರಿಸಲು ಕಷ್ಟವಾಗಲಿದೆ.
ವೃಶ್ಚಿಕ: ಇತರರಿಗೆ ಮುಜು ಗರ ಉಂಟುಮಾಡ ಬೇಡಿ ಮತ್ತು ಕುಟುಂಬದ ಅವಶ್ಯಕತೆಗಳಿಗೆ ಹೊಂದಿಕೊಳ್ಳಲು ಪ್ರಯತ್ನಿಸಿ.
ಧನುಸ್ಸು: ಕೆಲವು ದೊಡ್ಡ ಸಮಸ್ಯೆ ಎದುರಿಸಬಹುದು.

ಮಕರ: ಇತರರಿಗೆ ಮುಜುಗರ ಉಂಟು ಮಾಡ ಬೇಡಿ ಮತ್ತು ನಿಮ್ಮ ಕುಟುಂಬದ ಅವಶ್ಯಕತೆಗಳಿಗೆ ಹೊಂದಿಕೊಳ್ಳಲು ಪ್ರಯತ್ನಿಸಿ.
ಕುಂಭ: ಮಕ್ಕಳ ನಡವಳಿಕೆಯಿಂದ ಬೇಸರವಾಗಲಿದೆ.
ಮೀನ: ಪತ್ನಿಯ ಸಹಕಾರದಿಂದ ನಿಮ್ಮ ಕೆಲಸ-ಕಾರ್ಯಗಳು ಸುಸೂತ್ರವಾಗಿ ನೆರವೇರಲಿವೆ.

ಎಂಇಎಸ್‌‍ ಪುಂಡರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಪೊಲೀಸಪ್ಪ, ಕೆರಳಿ ಕೆಂಡವಾದ ಕನ್ನಡಿಗರು

ಬೆಳಗಾವಿ,ನ.1- ಕರ್ನಾಟಕ ರಾಜ್ಯ ವಿರೋಧಿ ಎಂಇಎಸ್‌‍ ನಾಯಕನೊಂದಿಗೆ ಪೊಲೀಸ್‌‍ ಅಧಿಕಾರಿ ತನ್ನಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಘಟನೆ ನಗರದಲ್ಲಿ ನಡೆದಿದೆ. ರಾಜ್ಯೋತ್ಸವ ಸಂಭ್ರಮಕ್ಕೆ ವಿರೋಧಿಸಿರುವ ಪುಂಡ ಎಂಇಎಸ್‌‍ ಕರಾಳ ಹೆಸರಿನ ರ್ಯಾಲಿಯಲ್ಲಿ ಬಂದೋಬಸ್ತ್‌ಗೆ ನಿಯೋಜಿತಗೊಂಡಿದ್ದ ಪೊಲೀಸ್‌‍ ಅಧಿಕಾರಿ ಜೆ.ಎಂ. ಕಾಲಿಮಿರ್ಚಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಸಿಪಿಐ ದುರ್ವರ್ತನೆ ಜಿಲ್ಲಾಡಳಿತ ಹಾಗೂ ಪೊಲೀಸ್‌‍ ಕಮಿಷ್ನರ್‌ ಗಂಭೀರವಾಗಿ ಪರಿಗಣಿಸಿದ್ದಾರೆ. ಸತತ ರಾಜ್ಯ ಸರಕಾರ ಹಾಗೂ ಕನ್ನಡಿಗರ ವಿರುದ್ಧ ಕತ್ತಿ ಮಸೆಯುವ ಎಂ ಎಂಎಸ್‌‍ ಮುಖಂಡ ಶುಭಂ ಸೆಳಕೆ ಜೊತೆಗೆ ಪೊಲೀಸ್‌‍ ಅಧಿಕಾರಿಯ ಅತಿ ಸಲುಗೆಯಿಂದ ವರ್ತಿಸಿರುವ ವಿಡಿಯೋ ವೈರಲ್‌ ಆಗಿದೆ.