Home Blog Page 1811

ಯಾರೇ ಕಾನೂನು ಉಲ್ಲಂಘಿಸಿದರೂ ಕಠಿಣ ಕ್ರಮ: ಪರಮೇಶ್ವರ್

ಬೆಂಗಳೂರು, ನ.17- ಕಾನೂನನ್ನು ಯಾರೇ ಉಲ್ಲಂಘನೆ ಮಾಡಿದರೂ ಕಠಿಣ ಕ್ರಮ ಜರುಗಿಸಲಾಗುವುದು. ಇದರಲ್ಲಿ ವ್ಯಕ್ತಿಗತ ದ್ವೇಷ ಅಥವಾ ರಾಜಕೀಯ ಕಾರಣಗಳಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಕರಾವಳಿ ಭಾಗದಲ್ಲಿ ಬಜರಂಗದಳದ ಕಾರ್ಯಕರ್ತರ ಗಡಿಪಾರಿಗೆ ನೋಟಿಸ್ ನೀಡಿರುವುದಕ್ಕೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಇಲಾಖೆ ಇರುವುದೇ ಕಾನೂನು ಪರಿಪಾಲನೆ ಮಾಡಲಿಕ್ಕೆ.
ಕಾನೂನು ಮೀರಿದರೆ ಕಠಿಣ ಕ್ರಮ ಜರುಗಿಸುವುದು ಅನಿವಾರ್ಯ ಎಂದು ಹೇಳಿದರು.

ಕಾನೂನನ್ನು ಹೊರತು ಪಡಿಸಿ ಪೊಲೀಸ್ ಇಲಾಖೆ ಕೆಲಸ ಮಾಡಲಾಗುವುದಿಲ್ಲ. ಬಜರಂಗದಳವಾಗಲಿ, ಸಂಘ ಸಂಸ್ಥೆಯಾಗಲಿ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿದರೆ ನಮ್ಮ ಸಹಕಾರ ಇರುತ್ತದೆ. ಕಾನೂನು ಮೀರಿದರೆ ಏನು ಮಾಡಬೇಕು. ಪೊಲೀಸ್ ಇಲಾಖೆ ಇರುವುದೇ ಕಾನೂನು ಪಾಲನೆಗೆ ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತಾರೆ. ಈ ಹಂತದಲ್ಲಿ ಯಾವುದೇ ವ್ಯಕ್ತಿಗತ ದ್ವೇಷ, ಮತ್ತೊಬ್ಬರನ್ನು ಹತ್ತಿಕ್ಕವ ಉದ್ದೇಶ ಅಥವಾ ರಾಜಕೀಯ ಕಾರಣಗಳು ಇರುವುದಿಲ್ಲ ಎಂದರು.

ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಲಿ, ಬ್ಲಾಕ್‍ಮೇಲ್‍ಗೆಲ್ಲ ಹೆದರುವುದಿಲ್ಲ: ಡಿಸಿಎಂ

ಬಜರಂಗದಳದವರು ಕಾನೂನು ವ್ಯಾಪ್ತಿಯಲ್ಲಿದ್ದರೆ ನಾವು ಅವರ ಜೊತೆಯಲ್ಲಿ ಇರುತ್ತೇವೆ. ಅವರು ಕಾನೂನು ಮೀರಿದರೆ ಕ್ರಮ ಕೈಗೊಳ್ಳುವುದು ಅನಿವಾರ್ಯ. ರಾಜ್ಯದಲ್ಲಿ ಶಾಂತಿ ಕಾಪಾಡುತ್ತೇವೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಜನಸಾಮಾನ್ಯರಿಗೆ ಭರವಸೆ ನೀಡಿದೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಮಾಜಿ ಸಚಿವ ವಿ.ಸೋಮಣ್ಣ ಕಾಂಗ್ರೆಸ್‍ಗೆ ಬರುವುದಾದರೆ ನನ್ನ ಅಭ್ಯಂತರ ಇಲ್ಲ. ಅವರು ಪಕ್ಷಕ್ಕೆ ಬರುವುದಾದರೆ ಸ್ವಾಗತ ಮಾಡುತ್ತೇನೆ. ಈಗೀನ್ನೂ ಅವರು ಇನ್ನೂ ಬಿಜೆಪಿಯ ಮುಖಂಡರಾಗಿದ್ದಾರೆ. ಈ ಹಂತದಲ್ಲಿ ಹೇಳಿಕೆ ನೀಡುವುದು ಸೂಕ್ತವಲ್ಲ ಎಂದರು.

ಸೋಮಣ್ಣ ವಿಷಯದಲ್ಲಿ ಏನಾಗುತ್ತಿದೆ ಎಂದು ಗೋತ್ತಿಲ್ಲ. ತುಮಕೂರು ಲೋಕಸಭೆ ಕ್ಷೇತ್ರಕ್ಕೆ ಅವರು ಅಭ್ಯರ್ಥಿ ಎಂಬ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಅಧ್ಯಕ್ಷರ ಜೊತೆ ಚರ್ಚೆ ಮಾಡಿರಬಹುದು, ಆದರೆ ತಮಗೆ ಮಾಹಿತಿ ಇಲ್ಲ ಎಂದರು.

ರಾಜಕೀಯದಲ್ಲಿ ಎಲ್ಲರಿಗೂ ತಮ್ಮದೆ ಆದ ಶಕ್ತಿ ಇದೆ, ಹಿಂಬಾಲಕರಾಗಿರುತ್ತಾರೆ. ನಾಯಕರು ಬರುವುದರಿಂದ ಅದು ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು. ತೆಲಂಗಾಣ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಸಚಿವ ಜಮೀರ್ ಅಹ್ಮದ್‍ಖಾನ್ ನೀಡಿರುವ ಹೇಳಿಕೆಯ ಬಗ್ಗೆ ತಮಗೆ ಮಾಹಿತಿ ಇಲ್ಲ. ಅವರ ಹೇಳಿಕೆಯನ್ನು ಗಮನಿಸಿಲ್ಲ, ಗೋತ್ತಿಲ್ಲದೆ ಪ್ರತಿಕ್ರಿಯಿಸಲ್ಲ. ವಿಷಯ ಗೋತ್ತಿಲ್ಲದೆ ಹೇಳಿಕೆ ನೀಡುವುದಿಲ್ಲ ಎಂದರು.

ಡಿಸಿಎಂ ಭೇಟಿ ರಾಜಕೀಯ ಬಣ್ಣ ಬೇಡ: ಜಿ.ಟಿ.ದೇವೇಗೌಡ

ಬೆಂಗಳೂರು,ನ.17- ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದಕ್ಕೆ ರಾಜಕೀಯ ಬಣ್ಣ ಹಚ್ಚುವ ಅಗತ್ಯವಿಲ್ಲ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡರು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ರಾಜಕೀಯ ಉದ್ದೇಶಕ್ಕಾಗಿ ಉಪಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲಿಲ್ಲ ಎಂದು ಸ್ಪಷ್ಟಪಡಿಸಿದರು. ಲೋಕೋಭಿರಾಮವಾಗಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದೆ. ಯಾವುದೇ ರಾಜಕೀಯ ಉದ್ದೇಶ ಇಟ್ಟುಕೊಂಡು ಭೇಟಿಯಾಗಿರಲಿಲ್ಲ. ವಯಸ್ಸಾದ ಸಂದರ್ಭದಲ್ಲಿ ನೀವು ತಪ್ಪು ಮಾಡಿದ್ದೀರಿ ಅನಿಸುತ್ತೆ ಎಂದು ಶಿವಕುಮಾರ್ ಹೇಳಿದರು. ಆದರೆ ನಾನು ಜೆಡಿಎಸ್‍ನಲ್ಲೇ ಚೆನ್ನಾಗಿದ್ದೇನೆ ಎಂದು ಹೇಳಿದ್ದೇನೆ.

ಕುಟುಂಬದ ಒತ್ತಡಕ್ಕೆ ಮಣಿಯದೇ ವಿಪಕ್ಷ ನಾಯಕನ ಆಯ್ಕೆ ನಡೆಯಲಿ: ಯತ್ನಾಳ್

ಜೆಡಿಎಸ್ ಬಿಜೆಪಿ ಜೊತೆ ಸದ್ಯಕ್ಕೆ ಹೊಂದಾಣಿಕೆ ಮಾಡಿಕೊಂಡಿದ್ದು, ಅದೇ ರೀತಿ ಮುಂದುವರೆಯಲಿದೆ ಎಂದು ಹೇಳಿದರು. ಮಾಜಿ ಸಿಎಂ ಕುಮಾರಸ್ವಾಮಿ ಯವರನ್ನು ಪದೇ ಪದೇ ಆಕ್ಷೇಪಾರ್ಹವಾಗಿ ಮಾತನಾಡುವುದು ಸರಿಯಲ್ಲ. ನಾವು ಅದೇ ರೀತಿ ಅವರಿಗೆ ಹೇಳಿದರೆ ಸರಿಯಾಗುತ್ತದೆಯೇ ಎಂದು ಪ್ರಶ್ನಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜಿ.ಟಿ.ದೇವೇಗೌಡರು ಮತ್ತು ಡಿ.ಕೆ.ಶಿವಕುಮಾರ್ ಭೇಟಿಯಾಗಿರುವುದಕ್ಕೆ ಏಕೆ ಬೇರೆ ಅರ್ಥ ಕಲ್ಪಿಸಬೇಕು ಎಂದು ಪ್ರಶ್ನಿಸಿದರು. ಜಿ.ಟಿ.ದೇವೇಗೌಡರು ಶಾಸಕರಾಗಿದ್ದು, ಅವರು ಯಾವುದೋ ಕೆಲಸಕ್ಕೆ ಭೇಟಿಯಾಗಿರಬಹುದು. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.

ಕುಟುಂಬದ ಒತ್ತಡಕ್ಕೆ ಮಣಿಯದೇ ವಿಪಕ್ಷ ನಾಯಕನ ಆಯ್ಕೆ ನಡೆಯಲಿ: ಯತ್ನಾಳ್

ಬೆಂಗಳೂರು,ನ.17- ಯಾವುದೋ ಒಂದು ಕುಟುಂಬದ ಒತ್ತಡಕ್ಕೆ ಮಣಿಯದೆ ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ವಿಪಕ್ಷ ನಾಯಕನ ಆಯ್ಕೆ ನಡೆಯಬೇಕೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಬ್ಲಾಕ್‍ಮೇಲ್ ಮಾಡಿ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳುತ್ತಾರೆ. ಅಂಥವರ ಬಗ್ಗೆ ಹೈಕಮಾಂಡ್ ಎಚ್ಚರಿಕೆ ಇಡಬೇಕು. ಬಿಜೆಪಿ ಯಾವುದೇ ಒಂದು ಕುಟುಂಬದ ಆಸ್ತಿಯಲ್ಲ. ಕಾರ್ಯಕರ್ತರೇ ಈ ಪಕ್ಷದ ಆಸ್ತಿ. ಹೀಗಾಗಿ ಎಚ್ಚರಿಕೆಯಿಂದ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.

ಉತ್ತರಕರ್ನಾಟಕ ಭಾಗಕ್ಕೆ ಪ್ರತಿ ಹಂತದಲ್ಲೂ ಅನ್ಯಾಯವಾಗಿದೆ. ಹೀಗಾಗಿ ನಮ್ಮ ಭಾಗಕ್ಕೆ ಕೊಟ್ಟರೆ ಪಕ್ಷದ ಬಲವರ್ಧನೆಗೆ ಸಹಾಯವಾಗಲಿದೆ. ಎಲ್ಲ ಭಾಗಕ್ಕೂ ಅವಕಾಶ ಕಲ್ಪಿಸಿರುವಾಗ ನಮ್ಮ ಭಾಗವನ್ನು ಕಡೆಗಣಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ನಾನು ಏನೇ ಮಾತನಾಡಿದರೂ ಅದು ವಿರೋಧವಾಗಬಹುದು. ಏನು ಹೇಳಬೇಕೋ ಅದನ್ನು ವೀಕ್ಷಕರಿಗೆ ಹೇಳಿದ್ದೇನೆ.

ಸ್ಥಳೀಯ ವಿಷಯಗಳು ದೆಹಲಿ ನಾಯಕರಿಗೆ ಗೊತ್ತಿರುವುದಿಲ್ಲ. ಇದೆಲ್ಲವನ್ನೂ ಗಮನಕ್ಕೆ ತಂದಿದ್ದೇನೆ. ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ನಮ್ಮ ಭಾಗಕ್ಕೆ ಅನ್ಯಾಯ ಮಾಡಿದರೆ ಅಲ್ಲಿನ ಜನ ಸುಮ್ಮನಿರುವುದಿಲ್ಲ. ಪಕ್ಷ ಬಲವರ್ಧನೆಯಾಗಬೇಕಾದರೆ ಉತ್ತರ ಕರ್ನಾಟಕಕ್ಕೆ ನ್ಯಾಯ ಸಿಗಲೇಬೇಕು. ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ನೋಡೋಣ ಎಂದು ಸೂಚ್ಯವಾಗಿ ಹೇಳಿದರು.

ನನ್ನನ್ನು ನಿನ್ನೆ ಒಬ್ಬ ಏಜೆಂಟ್ ಖರೀದಿಸಲು ಬಂದಿದ್ದ.ನಾನು ಅಷ್ಟು ಸುಲಭವಾಗಿ ಖರೀದಿಯಾಗುವುದಿಲ್ಲ ಎಂದು ಅವನಿಗೆ ಗೊತ್ತಾಗಿ ಜಾಗ ಖಾಲಿ ಮಾಡಿದ ಎಂದು ಯತ್ನಾಳ್ ಹೇಳಿದರಾದರೂ ಆತನ ಹೆಸರನ್ನು ಬಹಿರಂಗಪಡಿಸಲಿಲ್ಲ.

ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಲಿ, ಬ್ಲಾಕ್‍ಮೇಲ್‍ಗೆಲ್ಲ ಹೆದರುವುದಿಲ್ಲ: ಡಿಸಿಎಂ

ಈ ಯತ್ನಾಳ್ ಯಾರಿಗೂ ಹೆದರುವವನೂ ಅಲ್ಲ, ಜಗ್ಗುವವನೂ ಅಲ್ಲ. ಇದನ್ನು ನಾನು ವೀಕ್ಷಕರ ಗಮನಕ್ಕೂ ತಂದಿದ್ದೇನೆ. ಅವರು ಕೂಡ ನೀವು ಯಾರಿಗೂ ಹೆದರುವುದಿಲ್ಲ ಎಂಬುದು ಗೊತ್ತಿದೆ ಎಂದರು. ಪಂಚಮಸಾಲಿ ಸಮುದಾಯವನ್ನು ಕಡೆಗಣಿಸಿದರೆ ಎಂತಹ ಫಲಿತಾಂಶ ಬರುತ್ತದೆ ಎಂಬುದಕ್ಕೆ ವಿಧಾನಸಭೆ ಚುನಾವಣೆಯ ಫಲಿತಾಂಶವೇಶ ಸಾಕ್ಷಿ. ಎಲ್ಲದಕ್ಕೂ ನಾವು ಇನ್ನೊಬ್ಬರ ಮನೆ ಬಾಗಿಲಿಗೆ ಸಾರ್ ಸಾರ್ ಎಂದು ಹಿಂದೆ ಹೋಗಲು ಸಾಧ್ಯವೇ. ಪ್ರತಿಯೊಂದು ದಕ್ಷಿಣ ಕರ್ನಾಟಕಕ್ಕೆ ಕೊಟ್ಟರೆ ಉತ್ತರ ಕರ್ನಾಟಕದವರು ಏನು ಮಾಡಬೇಕೆಂದು ಪ್ರಶ್ನಿಸಿದರು.

ನಾನು ಹೆಚ್ಚು ಮಾತನಾಡುವುದಿಲ್ಲ. ವಿಪಕ್ಷ ನಾಯಕನ ಆಯ್ಕೆಯಾದ ಬಳಿಕ ಮಾತನಾಡುತ್ತೇನೆ ಎನ್ನುವ ಮೂಲಕ ಯತ್ನಾಳ್ ಕುತೂಹಲ ಕೆರಳಿಸಿದರು.

ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಲಿ, ಬ್ಲಾಕ್‍ಮೇಲ್‍ಗೆಲ್ಲ ಹೆದರುವುದಿಲ್ಲ: ಡಿಸಿಎಂ

ಬೆಂಗಳೂರು, ನ.17- ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಲಿ ಎಲ್ಲದಕ್ಕೂ ಸಿದ್ಧವಾಗಿದ್ದೇನೆ. ಈ ಪೊಗರು, ಬ್ಲಾಕ್‍ಮೆಲ್‍ಗೆಲ್ಲಾ ಹೆದರುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿ ಅವರ ಆರೋಪಗಳಿಗೆ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಪ್ರತಿಕ್ರಿಯಿಸಿ ದರು. ಅವರು ಏನೇನು ಕೇಳುತ್ತಾರೆ ಎಲ್ಲದಕ್ಕೂ ಜನ ಉತ್ತರ ಕೊಟ್ಟಿದ್ದಾರೆ. ಅವರ ಮಾತುಗಳಿಗೆ, ಆಚಾರ ವಿಚಾರ ಎಲ್ಲದಕ್ಕೂ ಜನ ಉತ್ತರ ಕೊಟ್ಟಿದ್ದಾರೆ. ಇನ್ನೂ ಬೇಕಾದರೂ ನಾವು ಉತ್ತರ ಕೊಡುತ್ತೇವೆ. ಪಟ್ಟಿ ಕೇಳುತ್ತಿದ್ದಾರೆ ಕೊಡೋಣ ಎಂದರು.

ಬೆಂಗಳೂರಿನಲ್ಲಿ ನಾನು ಮಾಲ್ ಕಟ್ಟಿರುವ ಜಾಗ ಕೇಂದ್ರ ಸರ್ಕಾರದ ಸಂಸ್ಥೆಯದು. ದಾಖಲೆ ಮಾಡಿ ಟೆಂಡರ್ ಹಾಕಿದ್ದರು. ಅದನ್ನು ನನ್ನ ಸ್ನೇಹಿತರು ತೆಗೆದುಕೊಂಡಿದ್ದರು. ನಾನು ಅವರಿಂದ ತೆಗೆದುಕೊಂಡು, ಸಹಭಾಗಿತ್ವದಲ್ಲಿ ಮಾಲ್ ಕಟ್ಟಿದ್ದೇನೆ. ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಲಿ ಎಂದರು.

ಕೆಲಸಕ್ಕಿದ್ದ ಅಂಗಡಿಯಲ್ಲಿ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳವು: ಇಬ್ಬರ ಬಂಧನ

ಹಿಂದೆ ಎಲ್ಲಾ ಪ್ರಯತ್ನಗಳಾಗಿವೆ. ಬಹುಶಃ ಕುಮಾರಸ್ವಾಮಿಯವರು ಮರೆತಿರಬಹುದು, ಅವರ ತಂದೆ 10-15 ವರ್ಷದ ಹಿಂದೆಯೇ ಜೈರಾಜ್ ಎಂಬ ಅಧಿಕಾರಿಗೆ ಹೇಳಿ ಖಾತೆ ನಿಲ್ಲಿಸಿದ್ದರು. ಏನು ತನಿಖೆ ಮಾಡಿಸಬೇಕೋ ಎಲ್ಲಾ ಮಾಡಿಸಿದ್ದಾರೆ. ಈಗಲೂ ಏನು ಬೇಕಾದರೂ ತನಿಖೆ ಮಾಡಿಸಿ. ನಾನೇನಾದರೂ ತಪ್ಪು ಮಾಡಿದ್ದರೆ ಗಲ್ಲಿಗೆ ಬೇಕಾದರೆ ಹಾಕಿ ಬಿಡಿ. ಅದಕ್ಕೆಲ್ಲಾ ನಾನು ರೆಡಿ ಇದ್ದೇನೆ. ಈ ಪೊಗರು, ಬ್ಲಾಕ್‍ಮೇಲ್‍ಗೆ ಹೆದರಲ್ಲ. ಸಾರ್ವಜನಿಕ ವ್ಯಕ್ತಿ ಯಾಗಿದ್ದೇನೆ. ಏನು ಬೇಕಾದರೂ ದಾಖಲೆ ಕೊಡುತ್ತೇನೆ ಎಂದರು.

ಮಾಲ್ ಕಟ್ಟಿದ್ದು ನಾನನ್ನಲ್ಲ ಜಾಯಿಂಟ್ ವೆಂಚರ್‍ನಲ್ಲಿ ಶೋಭಾ ಡೆವಲಪರ್ಸ್ ಕಟ್ಟಿದ್ದಾರೆ. ಅವರಿಗೆ ಹೇಳುತ್ತೇನೆ ಯಾವ ವಿದ್ಯುತ್ ಕದ್ದಿದ್ದಾರೆ ದಾಖಲೆ ಬಿಡುಗಡೆ ಮಾಡಿ ಎಂದು ಎಂದ ಅವರು, ಕುಮಾರಸ್ವಾಮಿ ಹತಾಶೆಯಿಂದ ಮಾತನಾಡುತ್ತಿದ್ದಾರೆ ಎಂದರು.

ಪ್ರಾವಿಡೆಂಟ್ ಹೌಸಿಂಗ್‍ನಿಂದ ಮ್ಯಾಂಚೆಸ್ಟರ್ ಟೌನ್‍ಹೌಸ್ ಮನೆಗಳು

ಬೆಂಗಳೂರು,ನ,17- ಪ್ರಾವಿಡೆಂಟ್ ಹೌಸಿಂಗ್ ಲಿಮಿಟೆಡ್, ಬೆಂಗಳೂರಿನಲ್ಲಿನ ತನ್ನ ಹೊಸ ವಸತಿ ಯೋಜನೆಯಾಗಿರುವ ಪ್ರಾವಿಡೆಂಟ್ ಡೀನ್ಸ್‍ಗೇಟ್ ಪ್ರಾರಂಭಿಸುವುದಾಗಿ ಎಂದು ಪ್ರಕಟಿಸಿದೆ.

ಬೆಂಗಳೂರಿನ ಅಂ.ರಾ.ವಿಮಾನ ನಿಲ್ದಾಣ ರಸ್ತೆಯಲ್ಲಿ ಈ ವಿಶೇಷವಾಗಿ ಅಭಿವೃದ್ಧಿಪಡಿಸುತ್ತಿರುವ ವಸತಿ ಯೋಜನೆಯು ಐಷಾರಾಮಿ ಜೀವನವನ್ನು ಮರುವ್ಯಾಖ್ಯಾನಿಸಲಿದೆ, ಮ್ಯಾಂಚೆಸ್ಟರ್ ಟೌನ್‍ಹೌಸ್ ಶೈಲಿಯ ವಾಸ್ತುಶೈಲಿಯ ಮೋಡಿಯ ಜೊತೆಗೆ ಸಮಕಾಲೀನ ವಿನ್ಯಾಸಗಳ ಮಿಶ್ರಣ ಒಳಗೊಂಡ ವಿಶಿಷ್ಟ ವಸತಿ ಯೋಜನೆ ಇದಾಗಿದೆ.

15 ಎಕರೆಗಳಷ್ಟು ಪ್ರದೇಶದಲ್ಲಿ ವ್ಯಾಪಿಸಿರುವ ಡೀನ್ಸ್‍ಗೇಟ್, ನಿಖರವಾಗಿ ವಿನ್ಯಾಸಗೊಳಿಸಿದ 288 ಟೌನ್‍ಹೌಸ್‍ಗಳನ್ನು ಒಳಗೊಂಡಿರಲಿದೆ. ಪ್ರತಿಯೊಂದೂ ಟೌನ್‍ಹೌಸ್ ವಾಸ್ತುಶಿಲ್ಪದ ಮೇರುಕೃತಿಯಾಗಿದೆ.
ಈ ವಸತಿ ಯೋಜನೆಯು 3 ಬಿಎಚ್‍ಕೆಗಳನ್ನು ಹೊಂದಿರುವ 1,900 ರಿಂದ 1,950 ಚದರ ಅಡಿ ವಿಸ್ತಾರದ ಗಾರ್ಡನ್ ಟೌನ್‍ಹೌಸಸ್ ಮತ್ತು 2,100 ರಿಂದ 2,200 ಚದರ ಅಡಿ ವ್ಯಾಪ್ತಿ ಹೊಂದಿರುವ ಟೆರೇಸ್ ಟೌನ್‍ಹೌಸಸ್ ಹೆಸರಿನ ಎರಡು ವಿಭಿನ್ನ ಬಗೆಗಳನ್ನು ಒಳಗೊಂಡಿದೆ.

ಕೆಲಸಕ್ಕಿದ್ದ ಅಂಗಡಿಯಲ್ಲಿ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳವು: ಇಬ್ಬರ ಬಂಧನ

ಪ್ರಾವಿಡೆಂಟ್ ಹೌಸಿಂಗ್ ಲಿಮಿಟೆಡ್‍ನ ಸಿಇಒ ಮಲ್ಲಣ್ಣ ಸಾಧಿಸಲು ಅವರು ಮಾತನಾಡಿ, ಡೀನ್ಸ್‍ಗೇಟ್, ಚಿಂತನಶೀಲ ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವುದರ ಜೊತೆಗೆ ಸುಸ್ಥಿರತೆ ಮತ್ತು ಗ್ರಾಹಕರ ಸಂತಸಕ್ಕೆ ಆದ್ಯತೆ ನೀಡುವ ವಸತಿ ಸ್ಥಳಗಳನ್ನು ಅಭಿವೃದ್ಧಿಪಡಿಸುವ ನಮ್ಮ ಸಮರ್ಪಣಾ ಭಾವವನ್ನು ಸಾಕಾರಗೊಳಿಸಲಿದೆ.

ಈ ಯೋಜನೆಯಲ್ಲಿ ಅನನ್ಯ ವಿನ್ಯಾಸದ ಸೌಂದರ್ಯಶಾಸ್ತ್ರ, ನಾವೀನ್ಯತೆ ಮತ್ತು ತಂತ್ರಜ್ಞಾನವನ್ನು ಸೇರ್ಪಡೆ ಮಾಡಿ ಹೆಚ್ಚಿನ ಅನುಭವಕ್ಕೆ ವಿನ್ಯಾಸಗೊಳಿಸಿದ ಮನೆಗಳ ಮೂಲಕ ನಮ್ಮ ಗ್ರಾಹಕರ ಜೀವನಶೈಲಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಹೇಳಿದರು.

ಗಣಿ ಪ್ರಕರಣದ ತನಿಖೆಗೆ ಅಂಜುವುದಿಲ್ಲ: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು,ನ.17- ಬಿಡದಿ ಬಳಿ ತಾವು ಖರೀದಿಸಿರುವ ಆಸ್ತಿ ಹಾಗೂ ಜಂತ್ಕಲ್ ಗಣಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ತನಿಖೆಯನ್ನು ಬೇಗ ಪೂರ್ಣಗೊಳಿಸಲಿ ಎಂದು ಹೇಳಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ನನ್ನನ್ನು ಹೆದುರಿಸಲು ಸಾಧ್ಯವಿಲ್ಲ. ಏಕಾಂಗಿಯಾಗಿ ಹೋರಾಟ ಮಾಡುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಸಚಿವ ಸಂಪುಟ ಸಭೆ ನಡೆದ ನಂತರ ನನ್ನ ಬಗ್ಗೆಯೇ ಪ್ರತ್ಯೇಕ ಸಭೆ ನಡೆಸಿದ್ದಾರೆ. ಬಿಡದಿ ಬಳಿ ಜಮೀನು ಖರೀದಿಸಿ 38 ವರ್ಷವಾಗಿದೆ. ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಕಾಲದಿಂದ ಇಲ್ಲಿಯವರೆಗೆ ಆಗಿರುವ ತನಿಖೆ ಬಗ್ಗೆ ಪುಸ್ತಕ ಬರೆಯಬಹುದು. ಲೋಕಾಯುಕ್ತ, ಸಿಐಡಿ ತನಿಖೆ ಎಲ್ಲವೂ ಆಗಿದೆ. ಇನ್ನೊಮ್ಮೆ ತನಿಖೆ ಮಾಡಿಸಿ ನನಗಿನ್ನೂ ಮೂರ್ನಾಲ್ಕು ಎಕರೆ ಜಮೀನು ಸಿಕ್ಕಿಲ್ಲ. ಅದನ್ನು ಹುಡುಕಿ ಕೊಡಲಿ ಎಂದು ಹೇಳಿದರು.

ಮುಖ್ಯಮಂತ್ರಿ ಉಸ್ತುವಾರಿಯಲ್ಲೇ ಜಂತ್ಕಲ್ ಗಣಿಗಾರಿಕೆ ಪ್ರಕರಣದ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಅದಕ್ಕೆ ನಾನು ಹೆದರಿಕೊಳ್ಳುವುದಿಲ್ಲ. ಜಂತ್ಕಲ್ ಪ್ರಕರಣ ಮುಗಿಸಲು ಮುಖ್ಯಮಂತ್ರಿಯಾಗಿದ್ದಾಗ ಒತ್ತಡವನ್ನೂ ಹೇರಿಲ್ಲ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿ ಮಾಲೀಕರಿಂದ 20 ಲಕ್ಷ ರೂ.ವನ್ನು ಪುತ್ರನ ಖಾತೆಗೆ ಪಡೆದುಕೊಂಡಿದ್ದ ಅಧಿಕಾರಿ ಜೈಲಿಗೆ ಹೋಗಿದ್ದಾರೆ. ಅದನ್ನು ನನ್ನ ತಲೆಗೆ ಕಟ್ಟಲು ಹುನ್ನಾರ ನಡೆಸಿದ್ದರು ಎಂದರು.

ಕಾಶ್ಮೀರ ಕಣಿವೆಯಲ್ಲಿ ಸೇನಾ ಕಾರ್ಯಾಚರಣೆ: ಐವರು ಉಗ್ರರ ಹತ್ಯೆ

ಜಂತ್ಕಲ್ ಗಣಿಗಾರಿಕೆ ಪ್ರಕರಣವನ್ನು ಶೀಘ್ರವಾಗಿ ಪೂರ್ಣಗೊಳಿಸಲಿ ಎಂದ ಅವರು, ನಾನು ಯಾವುದೇ ಕಾರಣಕ್ಕೂ ಅಂಜುವುದಿಲ್ಲ. ಸುಳ್ಳು ದಾಖಲೆ ಸೃಷ್ಟಿ ಮಾಡಿಲ್ಲ ಎಂದು ಆರೋಪಿಸಿದರು.
ಹಲವು ಪ್ರಕರಣಗಳನ್ನು ಮುಚ್ಚಿ ಹಾಕಿಕೊಳ್ಳಲು ಎಸಿಬಿ ರಚಿಸಿಕೊಂಡಿದ್ದರು. ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ರೀಡೂ ವರದಿ ಏನಾಯ್ತು ಎಂದು ಪ್ರಶ್ನಿಸಿದರು.

ಕರಾಬ್ ಜಮೀನಿನಲ್ಲಿ ಮಾಲು: ವಿರೋಧ ಪಕ್ಷದ ಸ್ಥಾನದಲ್ಲಿದ್ದು ಕಾನೂನು ಬಾಹಿರ ಕೃತ್ಯಗಳನ್ನು ಹೊರಗೆ ತರುವ ಪ್ರಯತ್ನವನ್ನು ನಾನು ಮಾಡುತ್ತಿದ್ದೇನೆ. ಮಿನರ್ವ ಮಿಲ್‍ಗೆ ಸುಮಾರು 1934ರಲ್ಲಿ ಮಂಜೂರಾಗಿದ್ದ ಜಮೀನು 24 ಎಕರೆ ಕರಾಬ್ ಭೂಮಿಯಲ್ಲಿ ಲೂಲು ಮಾಲ್ ನಿರ್ಮಿಸಲಾಗಿದೆ. ಅಲ್ಲಿದ್ದ ಹೈಟೆನ್ಷನ್ ವೈರ್‍ಗಳನ್ನು ಅಂಡರ್‍ಗ್ರೌಂಡ್‍ನಲ್ಲಿ ತೆಗೆದುಕೊಂಡು ಹೋಗಲಾಗಿದೆ. ಇದಕ್ಕೆ ಕಂಪನಿಯಿಂದ ಹಣ ಕಟ್ಟಿದ್ದಾರೆಯೇ ಎಂದು ಪ್ರಶ್ನಿಸಿದರು.

ಅಲ್ಲದೆ ಮಾಲ್‍ನ ಕಟ್ಟಡ ನಿರ್ಮಾಣ ಮಾಡುವಾಗ ಬಳಸಿದ ವಿದ್ಯುತ್‍ಗೆ ಪೂರ್ವಾನುಮತಿ ಪಡೆದು ಹಣ ಪಾವತಿಸಿದ್ದಾರೆಯೇ ಎಂದು ಪ್ರಶ್ನಿಸಿದರು. ನನ್ನ ವಿರುದ್ಧ ನಾಲ್ಕು ಕೇಸ್‍ಗಳನ್ನು 2009ರಲ್ಲಿ ಹಾಕಲಾಗಿತ್ತು. ವಕೀಲರ ಸಲಹೆ ಮೇರೆಗೆ ಜಾಮೀನನ್ನು ಪಡೆದಿದ್ದಾಗಿ ಸ್ಪಷ್ಟಪಡಿಸಿದರು.

ಕ್ಷಮೆಗೆ ಆಗ್ರಹ: ಸಭಾಧ್ಯಕ್ಷರಾದವರು ವಿಧಾನಸಭೆಯ 224 ಸದಸ್ಯರ ರಕ್ಷಣೆ ಮಾಡಬೇಕು. ಸಭಾಧ್ಯಕ್ಷರ ಹೆಸರನ್ನು ಬಳಸಿ ಸಚಿವರೊಬ್ಬರು ಬಿಜೆಪಿ ನಾಯಕರ ಬಗ್ಗೆ ಬಳಸಿರುವ ಪದಬಳಕೆಗೆ ಕ್ಷಮೆ ಯಾಚಿಸಬೇಕೆಂದು ಕುಮಾರಸ್ವಾಮಿ ಒತ್ತಾಯಿಸಿದರು. ಸಭಾಧ್ಯಕ್ಷರಾದವರು ಒಂದು ಧರ್ಮದ ಪ್ರತಿನಿಧಿಯಲ್ಲ. ಸಂವಿಧಾನ ಬದ್ದವಾಗಿ ಕರ್ತವ್ಯ ನಿರ್ವಹಿಸುವವರು. ಅವರ ಹೆಸರಿನಲ್ಲಿ ಹುಡುಗಾಟಿಕೆ ಮಾಡುವುದು ಸರಿಯಲ್ಲ. ಈ ರೀತಿಯಾದರೆ ಸದನದ ನಿಯಮವನ್ನು ಉಳಿಸುತ್ತಾರೆಯೇ ಎಂದು ಪ್ರಶ್ನಿಸಿದರು.

ಉಡುಪಿ ನಾಲ್ವರ ಹತ್ಯೆ ಪ್ರಕರಣ: ಕುಟುಂಬಕ್ಕೆ ಸಾಂತ್ವಾನ ಹೇಳಿದ ಲಕ್ಷ್ಮೀ ಹೆಬ್ಬಾಳ್ಕರ್

ನಂಬಬೇಕೆ?: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಬಗ್ಗೆ ಐದು ಶಾಲೆಗಳಿಗೆ ಸಿಎಸ್‍ಆರ್ ನಿಧಿ ಬಳಕೆ ವಿಚಾರಕ್ಕೆ ಮಾತನಾಡಿದ್ದಾರೆ ಎಂಬ ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನು ನಾವು ನಂಬಬೇಕೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಇನ್ನು ಬೆಳಗ್ಗೆ ಮಾಧ್ಯಮಗಳಲ್ಲಿ ಆ ವಿಡಿಯೋ ಪ್ರಸಾರವಾದ ಕೂಡಲೇ ಅಂದರೆ 10-11 ಗಂಟೆಗೆ ಈ ಆರೋಪದ ಬಗ್ಗೆ ಸ್ಪಷ್ಟನೆ ನೀಡಬಹುದಿತ್ತು. ಆದರೆ ಮಧ್ಯಾಹ್ನ 3 ಗಂಟೆವರೆಗೆ ಏಕೆ ಕಾಯಬೇಕಿತ್ತು ಎಂದರು.
ಡೂಪ್ಲಿಕೇಟ್ ಸಿಎಂ ಹೇಳಿದ ಮೇಲೆ ಸಿಎಸ್‍ಆರ್ ನಿಧಿ ವಿಚಾರ ಪ್ರಸ್ತಾಪ ಮಾಡಿದ್ದಾರೆ ಎಂದ ಅವರು, ವಿಧಾನಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದರು.

ಮಾತನಾಡುವಾಗ ವಿವೇಕನಂದ ಯಾರೂ ಎಂದು ಪ್ರಶ್ನಿಸಿದ್ದಾರೆ. ಸಿಎಸ್‍ಆರ್ ನಿಧಿ ವಿಚಾರವಾಗಿದ್ದರೆ ಬಿಇಒ ವಿವೇಕನಂದ ಎಂಬುದು ಗೊತ್ತಾಗುತ್ತಿರಲಿಲ್ಲವೇ? ಸಿದ್ದರಾಮಯ್ಯನವರ ಹುಟ್ಟೂರಿನ ಶಾಲೆಗೆ ಈ ನಿಧಿ ಕೊಟ್ಟಿದ್ದಾರೆಯೆ? ಎಂದು ಪ್ರಶ್ನಿಸಿದ ಅವರು, ನನ್ನ ಪುತ್ರ ಹಾಗೂ ಶಾಸಕರಾಗಿದ್ದ ಪತ್ನಿ ಎಂದು ಕೂಡ ಮುಖ್ಯಮಂತ್ರಿ ಕಚೇರಿಯ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಗೋಷ್ಠಿಯಲ್ಲಿ ಮಾಜಿ ಸಚಿವ ಆನಂದ್ ಅಸ್ನೋಟಿಕರ್, ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ ಗೌಡ ಉಪಸ್ಥಿತರಿದ್ದರು.

ಕೆಲಸಕ್ಕಿದ್ದ ಅಂಗಡಿಯಲ್ಲಿ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳವು: ಇಬ್ಬರ ಬಂಧನ

ಬೆಂಗಳೂರು, ನ.17- ಕೆಲಸ ಕೊಟ್ಟಿದ್ದ ಚಿನ್ನಾಭರಣ ವ್ಯಾಪಾರಿಯ ಕಣ್ತಪ್ಪಿಸಿ ಅಂಗಡಿ ಕೀ ಕಳ್ಳತನ ಮಾಡಿ ಇಬ್ಬರು ಸ್ನೇಹಿತರೊಂದಿಗೆ ಸೇರಿಕೊಂಡು ಪುರಾತನ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ ರಾಜಸ್ಥಾನದ ಪ್ರಮುಖ ಆರೋಪಿ ಸೇರಿದಂತೆ ಇಬ್ಬರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿ 1 ಕೋಟಿ 2 ಲಕ್ಷ ಮೌಲ್ಯದ ಚಿನ್ನಾಭರಣ, 5.50 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ರಾಜಸ್ಥಾನ ಮೂಲದ ಕೇತರಾಮ್, ಈತನ ಸ್ನೇಹಿತ ರಾಕೇಶ್ ಬಂಧಿತ ಆರೋಪಿಗಳು. ಮತ್ತೊಬ್ಬ ತಲೆಮರೆಸಿಕೊಂಡಿದ್ದು, ಈತನ ಪತ್ತೆಕಾರ್ಯ ಮುಂದುವರೆದಿದೆ. ನಗರತ್‍ಪೇಟೆಯ ಕಾಂಚನಾ ಜ್ಯುವೆಲರ್ಸ್ ಅಂಗಡಿ ಮಾಲೀಕರಾದ ಅರವಿಂದ್ ಕುನೂರ್ ತಾಡೆ ಅವರ ಬಳಿ ಆರೋಪಿ ಕೇತರಾಮ್ ಎರಡು ತಿಂಗಳ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದನು.

ಆ ಸಂದರ್ಭದಲ್ಲಿ ಮಾಲೀಕನ ನಂಬಿಕೆ-ವಿಶ್ವಾಸ ಗಳಿಸಿ ಅವರ ವ್ಯವಹಾರಗಳನ್ನೆಲ್ಲ ತಿಳಿದುಕೊಂಡಿದ್ದಾನೆ. ಹೇಗಾದರೂ ಮಾಡಿ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಊರಿಗೆ ಹೋಗಿ ಐಷಾರಾಮಿ ಜೀವನ ನಡೆಸಬಹುದು ಎಂದು ಯೋಚಿಸಿದ್ದಾನೆ. ಈ ನಡುವೆ ದಸರಾ ಹಬ್ಬದ ನಿಮಿತ್ತ ಅರವಿಂದ್‍ಕುಮಾರ್ ಅವರು ಮುಂಬೈಗೆ ತೆರಳುವ ಸಂದರ್ಭದಲ್ಲಿ ಅವರ ಬ್ಯಾಗ್‍ನಲ್ಲಿದ್ದ ಅಂಗಡಿಯ ಬೀಗವನ್ನು ಆರೋಪಿ ಕೇತರಾಮ್ ಕಳವು ಮಾಡಿದ್ದಾನೆ.

ನಂತರ ತನ್ನ ಊರಿನ ಸ್ನೇಹಿತರಾದ ರಾಕೇಶ್ ಹಾಗೂ ಮತ್ತೊಬ್ಬನನ್ನು ಕರೆಸಿಕೊಂಡು ಅ.29ರಂದು ಎಂದಿನಂತೆ ಅಂಗಡಿ ಬೀಗ ತೆರೆದು ಕಸ ಗುಡಿಸುವವನಂತೆ ನಾಟಕವಾಡಿದ್ದಾನೆ. ಆ ವೇಳೆ ಅಂಗಡಿಯ ಸಿಸಿಟಿವಿ ಸ್ಥಗಿತಗೊಳಿಸಿದ್ದಾನೆ. ಇನ್ನಿಬ್ಬರು ಅಂಗಡಿಯಲ್ಲಿದ್ದ 4 ಕೆಜಿ ಚಿನ್ನಾಭರಣ, 34 ಕೆಜಿ ಬೆಳ್ಳಿ ವಸ್ತುಗಳು, 9 ಲಕ್ಷ ಹಣವನ್ನು ಬ್ಯಾಗ್‍ಗಳಿಗೆ ತುಂಬಿಕೊಂಡಿದ್ದಾರೆ.

ಕಾಶ್ಮೀರ ಕಣಿವೆಯಲ್ಲಿ ಸೇನಾ ಕಾರ್ಯಾಚರಣೆ: ಐವರು ಉಗ್ರರ ಹತ್ಯೆ

ಬಳಿಕ ಕೇತರಾಮ್ ಅಂಗಡಿಗೆ ಬೀಗ ಹಾಕಿ ಅವರೊಂದಿಗೆ ಪರಾರಿಯಾಗಿದ್ದನು. ಅಕ್ಕಪಕ್ಕದವರು ಅನುಮಾನಗೊಂಡು ಅಂಗಡಿ ಮಾಲೀಕರ ಮಗನಿಗೆ ತಿಳಿಸಿದ್ದಾರೆ. ಮಾಲೀಕರ ಮಗ ಬಂದು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಹಲಸೂರು ಗೇಟ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೊದಲ ಪ್ರಮುಖ ಆರೋಪಿ ಕೇತರಾಮ್‍ನನ್ನು ಬಂಸಿ ನಂತರ ಮತ್ತೊಬ್ಬನನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ 1 ಕೋಟಿ 2 ಲಕ್ಷ ಬೆಲೆಬಾಳುವ 1 ಕೆಜಿ 624 ಗ್ರಾಂ ಚಿನ್ನಾಭರಣ, 6 ಕೆಜಿ 455 ಗ್ರಾಂ ಬೆಳ್ಳಿ, 5.50 ಲಕ್ಷ ನಗದು, ಹಳೆಯ ನೋಟುಗಳು, ಕೈಗಡಿಯಾರಗಳು ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ಬಂಧನದಿಂದ ಹಲಸೂರು ಗೇಟ್ ಹಾಗೂ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗಳ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ.

ಆರೋಪಿ ರಾಕೇಶ್ ವಿರುದ್ಧ ಸಿಟಿ ಮಾರ್ಕೆಟ್, ಹಲಸೂರು, ವರ್ತೂರು, ಬ್ಯಾಡರಹಳ್ಳಿ, ತಾವರೆಕೆರೆ ಪೊಲೀಸ್ ಠಾಣೆಗಳಲ್ಲಿ ಎನ್‍ಡಿಪಿಎಸ್ ಕಾಯ್ದೆ, ಮನೆಗಳವು, ಹಗಲು ಕನ್ನಗಳವು ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಹೋಗಿ ಬಂದಿರುತ್ತಾನೆ. ಹಲಸೂರು ಗೇಟ್ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಹನುಮಂತ ಕೆ.ಭಜಂತ್ರಿ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಂಗ್ರೆಸ್‍ಗೆ ಅಧಿಕಾರದ ಪಿತ್ತ ನೆತ್ತಿಗೇರಿದೆ: ವಿಜಯೇಂದ್ರ

ಬೆಂಗಳೂರು,ನ.17- ವಿಧಾನಸಭೆಯಲ್ಲಿ ಭಾರೀ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‍ಗೆ ಅಧಿಕಾರದ ಅಮಲು ನೆತ್ತಿಗೇರಿದೆ. ಜನತೆ ಶೀಘ್ರದಲ್ಲೇ ತಕ್ಕಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ಕೊಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೂ ವರ್ಗಾವಣೆಯ ದಂಧೆ ನಡೆಯುತ್ತಲೇ ಇದೆ ಎಂದು ನಾವು ಹೇಳಿದ್ದೆವು. ಈಗ ಅವರ ಪಕ್ಷದವರೇ ನಮ್ಮ ಮಾತನ್ನು ಪುನರುಚ್ಚರಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಏನು ಹೇಳುತ್ತದೆ ಎಂದು ಪ್ರಶ್ನೆ ಮಾಡಿದರು.

ಅಧಿಕಾರ ಶಾಶ್ವತವಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ದರ್ಪ, ದುರಹಂಕಾರ, ಮ್ಮಾಕು ಬಹಳ ದಿನ ನಡೆಯುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ನಿಮಗೆ ಜನತೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ಕೊಟ್ಟರು.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಐಟಿ ದಾಳಿಯ ವೇಳೆ ಪತ್ತೆಯಾದ ಹಣದ ಮೂಲ ಯಾರಿಗೆ ಸೇರಿದ್ದು ಎಂಬುದನ್ನು ಕಾಂಗ್ರೆಸ್ ನಾಯಕರು ಹೇಳಲು ಸಿದ್ದರಿದ್ದೀರಾ? ಐಟಿ ದಾಳಿಯಾದಾಗ ಮುಖ್ಯಮಂತ್ರಿ ಡಿಸಿಎಂ ಸೇರಿದಂತೆ ಎಲ್ಲರೂ ಬಾಯಿಗೆ ಬಂದಂತೆ ಮಾತನಾಡಿದರು ಎಂದು ಕಿಡಿಕಾರಿದರು.

ಕಾಶ್ಮೀರ ಕಣಿವೆಯಲ್ಲಿ ಸೇನಾ ಕಾರ್ಯಾಚರಣೆ: ಐವರು ಉಗ್ರರ ಹತ್ಯೆ

ಕಡೆಪಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಐಟಿ ದಾಳಿಯನ್ನು ಸ್ವಾಗತಿಸಬೇಕು. ಬದಲಿಗೆ ದಾಳಿ ನಡೆದಿದ್ದು ತಪ್ಪು ಎಂಬ ರೀತಿಯಲ್ಲಿ ಮಾತನಾಡಿದರು ಎಂದು ಕಿಡಿಕಾರಿದರು.
ಸ್ಪೀಕರ್ ಸ್ಥಾನದ ಬಗ್ಗೆ ಲಘುವಾಗಿ ಸಚಿವ ಜಮೀರ್ ಅಹಮ್ಮದ್ ನೀಡಿರುವ ಹೇಳಿಕೆ ಅತ್ಯಂತ ದುರದೃಷ್ಟಕರ. ಸ್ಪೀಕರ್ ಸ್ಥಾನದ ಬಗ್ಗೆಯೇ ಗೌರವವಿಲ್ಲ ಎಂದರೆ ಹೇಗೆ ಎಂದು ವಿಜಯೇಂದ್ರ ಪ್ರಶ್ನೆ ಮಾಡಿದರು.

ಜಮೀರ್ ತಮ್ಮ ಮನದಲ್ಲಿರುವ ಇಂಗಿತವನ್ನೇ ವ್ಯಕ್ತಪಡಿಸಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಜವಾಬ್ದಾರಿಯಿಂದ ಮಾತನಾಡಬೇಕು. ಇತ್ತೀಚೆಗೆ ಅವರಿಗೆ ವಿವಾದ ಎಳೆದುಕೊಳ್ಳುವುದು ಕಾಯಕವಾಗಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರು ಮಧ್ಯಪ್ರವೇಶಿಸಿ ಜಮೀರ್‍ಗೆ ಬಾಯಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.

ಕಾಶ್ಮೀರ ಕಣಿವೆಯಲ್ಲಿ ಸೇನಾ ಕಾರ್ಯಾಚರಣೆ: ಐವರು ಉಗ್ರರ ಹತ್ಯೆ

ಶ್ರೀನಗರ,ನ.17- ಕಣಿವೆ ರಾಜ್ಯ ಜಮ್ಮುಕಾಶ್ಮೀರದಲ್ಲಿ ಸೇನಾಪಡೆ ಮತ್ತು ಪಾಕಿಸ್ತಾನ ಮೂಲದ ಲಷ್ಕರ್- ಇ-ತೊಯ್ಬ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಉಗ್ರರು ಹತರಾಗಿದ್ದಾರೆ. ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿ ದ್ದಾರೆ. ಆಪರೇಷನ್ ಕಲಿ ಹೆಸರಿನಲ್ಲಿ ಜಂಟಿ ಕಾರ್ಯಾಚರಣೆ ನಡೆಸಲಾಗಿದೆ.

ಕುಲ್ಗಾಂ ಜಿಲ್ಲೆಯ ಸ್ಯಾಮ್ನೊಪಾಕೆಟ್‍ನ ಡಿ.ಎಚ್. ಪೋರಾ ಪ್ರದೇಶದಲ್ಲಿ ಪಾಕ್ ಮೂಲದ ಉಗ್ರರು ಭಾರತದೊಳಗೆ ಒಳನುಸುಳಲು ಹೊಂಚು ಹಾಕಿದ್ದರು. ಇದರ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಸೇನಾಪಡೆ ಗುರುವಾರವೇ ಉಗ್ರರನ್ನು ಸದೆಬಡೆಯುವ ಕಾರ್ಯಾಚರಣೆಗೆ ಇಳಿದಿತ್ತು. ಸೇನೆಯ 34 ರಾಷ್ಟ್ರೀಯ ರೈಫೆಲ್ಸ್, ಎಲೈಟ್, ಸ್ಪೆಷಲ್ ಫೋರ್ಸ್ ಯುನಿಟ್ ಹಿರಿಯ ಪೊಲೀಸರು, ಸಿಆರ್‍ಪಿಎಫ್ ಯೋಧರು ಜಂಟಿಯಾಗಿ ಕಾರ್ಯಚರಣೆ ಆರಂಭಿಸಿದ್ದರು.

ಉಡುಪಿ ನಾಲ್ವರ ಹತ್ಯೆ ಪ್ರಕರಣ: ಕುಟುಂಬಕ್ಕೆ ಸಾಂತ್ವಾನ ಹೇಳಿದ ಲಕ್ಷ್ಮೀ ಹೆಬ್ಬಾಳ್ಕರ್

ನಿನ್ನೆ ರಾತ್ರಿಯಾಗಿದ್ದರಿಂದ ಸ್ಥಳೀಯ ಗ್ರಾಮಸ್ಥರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕಾಗಿ ಸೇನಾಪಡೆ ಕಾರ್ಯಾಚರಣೆಯನ್ನು ನಿಲ್ಲಿಸಿತ್ತು. ಪುನಃ ಇಂದು ಬೆಳಗ್ಗೆ ಉಗ್ರರ ಬೇಟೆಗೆ ಕಾರ್ಯಾಚರಣೆಗೆ ಇಳಿದಾಗ ಶರಣಾಗುವಂತೆ ಸೂಚನೆ ಕೊಡಲಾಯಿತು. ಈ ವೇಳೆ ಶರಣಾಗುವ ಬದಲು ಉಗ್ರರು ಮನೆಗೆ ಬೆಂಕಿ ಹಚ್ಚಿ ಸೇನಾಪಡೆಗಳ ಮೇಲೆ ಪ್ರತಿದಾಳಿ ನಡೆಸಲು ಮುಂದಾದರು. ಈ ಹಂತದಲ್ಲಿ ಉಗ್ರರ ವಿರುದ್ಧ ಜಂಟಿ ಕಾರ್ಯಾಚರಣೆಗಿಳಿದ ಸೇನಾ ಪಡೆ ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಉಗ್ರರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಗೀಡಾಗಿರುವ ಉಗ್ರರ ವಿವರಗಳು ತಿಳಿದುಬಂದಿಲ್ಲ. ಅವರ ಪ್ರತಿಯೊಂದು ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಕಳೆದ ಅಕ್ಟೋಬರ್ 10ರಂದು ಕೂಡ ಶೋಪಿಯಾನ್‍ನ ಅಲ್ಶಿಪೋರಾ ಪ್ರದೇಶದಲ್ಲಿ ಎನ್‍ಕೌಂಟರ್ ನಡೆದಿತ್ತು. ಮೋರಿಫತ್ ಮಕ್ಬೂಲ್ ಮತ್ತು ಲಷ್ಕರ್-ಎ-ತೊಯ್ಬಾ (ಎಲ್‍ಇಟಿ) ಎಂಬ ಇಬ್ಬರು ಉಗ್ರರು ಕಾಶ್ಮೀರಿ ಪಂಡಿತ್ ಸಂಜಯ್ ಶರ್ಮಾ ಹತ್ಯೆಯಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಫೆಬ್ರವರಿಯಲ್ಲಿ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅಚಾನ್ ಪ್ರದೇಶದಲ್ಲಿ ಬ್ಯಾಂಕ್ ಭದ್ರತಾ ಸಿಬ್ಬಂದಿ ಸಂಜಯ್ ಶರ್ಮಾ ಅವರನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಪ್ರೀತಿಸುತ್ತಿದ್ದ ಯುವತಿಯನ್ನು ಕತ್ತು ಸೀಳಿ ಕೊಂದ ಪ್ರಿಯಕರ

ಸ್ಥಳೀಯ ಮಾರುಕಟ್ಟೆಗೆ ತೆರಳುತ್ತಿದ್ದಾಗ ಅವರ ಮೇಲೆ ಗುಂಡು ಹಾರಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸರ್ಕಾರಕ್ಕೆ ಮುಜುಗರ ತಂದ ಜಮೀರ್ ಹೇಳಿಕೆ

ಬೆಂಗಳೂರು, ನ.17- ತೆಲಂಗಾಣ ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆಯಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದ್ದು, ಕಾಂಗ್ರೆಸ್ ಪಕ್ಷವನ್ನು ಹೊಗಳುವ ಭರದಲ್ಲಿ ಸ್ಪೀಕರ್ ಹುದ್ದೆಯ ಕುರಿತು ಅನಪೇಕ್ಷಿತ ಹೇಳಿಕೆ ತೀವ್ರ ಮುಜುಗರಕ್ಕೆ ಕಾರಣವಾಗಿದೆ.

ತೆಲಂಗಾಣದ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದ ಸಚಿವ ಜಮೀರ್ ಅಹ್ಮದ್ ಖಾನ್, ಕಾಂಗ್ರೆಸ್ ಪಕ್ಷ 17 ಮಂದಿ ಮುಸ್ಲಿಂರಿಗೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ನೀಡಿತ್ತು. ಒಂಬತ್ತು ಮಂದಿ ಆಯ್ಕೆಯಾಗಿದ್ದೇವೆ. ಅವರಲ್ಲಿ ನನ್ನನ್ನು ಸೇರಿದಂತೆ ಐದು ಮಂದಿಗೆ ಬೇರೆ ಬೇರೆ ರೀತಿಯ ಅಕಾರವನ್ನು ಕಾಂಗ್ರೆಸ್ ನೀಡಿದೆ.

ನನಗೆ ಸಚಿವ ಸ್ಥಾನ ನೀಡಿ, ಮೂರು ಖಾತೆಗಳ ಜವಾಬ್ದಾರಿ ವಹಿಸಲಾಗಿದೆ. ರಹಿಂಖಾನ್‍ರನ್ನು ಸಚಿವರನ್ನಾಗಿ ಮಾಡಲಾಗಿದೆ, ಕೆಪಿಸಿಸಿ ಕಾರ್ಯಧ್ಯಕ್ಷ ಸಲಿಂ ಅಹಮದ್‍ರನ್ನು ವಿಧಾನ ಪರಿಷತ್‍ನ ಮುಖ್ಯಸಚೇತಕರನ್ನಾಗಿ ಮಾಡಲಾಗಿದೆ. ನಸೀರ್ ಅಹ್ಮದ್‍ರನ್ನು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ. ಕರ್ನಾಟಕದ ಇತಿಹಾಸದಲ್ಲಿ ಈವರೆಗೂ ಮುಸ್ಲಿಂ ನಾಯಕನೊಬ್ಬನನ್ನು ಸ್ಪೀಕರ್ ಮಾಡಿರಲಿಲ್ಲ. ಕಾಂಗ್ರೆಸ್ ಮೊದಲ ಬಾರಿಗೆ ಯು.ಟಿ.ಖಾದರ್‍ರನ್ನು ಸ್ಪೀಕರ್ ಮಾಡಿದೆ. ಇವತ್ತು ಬಿಜೆಪಿಯ ನಾಯಕರು ಕೂಡ ಯು.ಟಿ.ಖಾದರ್ ಅವರ ಮುಂದೆ ನಮಸ್ಕಾರ ಸಾರ್ ಎಂದು ನಿಲ್ಲಬೇಕಾಗಿದೆ. ಇದನ್ನು ಮಾಡಿರುವುದು ಕಾಂಗ್ರೆಸ್ ಎಂದು ಹೇಳಿದ್ದಾರೆ. ಈ ಹೇಳಿಕೆ ವಿರೋಧ ಪಕ್ಷಗಳನ್ನು ಕೆರಳಿಸಿದೆ.

ಉಡುಪಿ ನಾಲ್ವರ ಹತ್ಯೆ ಪ್ರಕರಣ: ಕುಟುಂಬಕ್ಕೆ ಸಾಂತ್ವಾನ ಹೇಳಿದ ಲಕ್ಷ್ಮೀ ಹೆಬ್ಬಾಳ್ಕರ್

ವಿವಾದಗಳ ನಿಸ್ಸಿಮ:
ಜಮೀರ್ ಅಹ್ಮದ್ ಖಾನ್ ಪದೇ ಪದೇ ವಿವಾದಗಳನ್ನು ಸೃಷ್ಟಿಸುವುದರಲ್ಲಿ ನಿಸ್ಸಿಮರು. ಈ ಮೊದಲು ಕಾಂಗ್ರೆಸ್ ಪಕ್ಷದಲ್ಲೇ ನಾನಾ ರೀತಿಯ ಸಂಚಲನ ಸೃಷ್ಟಿಸುವ ಹೇಳಿಕೆ ನೀಡಿದ್ದರು. ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿಯಾಗಬೇಕು ಎಂದು ವಿಧಾನಸಭೆ ಚುನಾವಣೆಗೂ ಮೊದಲೇ ಪ್ರತಿಪಾದನೆ ಮಾಡಿದ್ದರು. ಹೈಕಮಾಂಡ್ ಎಚ್ಚರಿಕೆ ನೀಡಿದರೂ ಕ್ಯಾರೆ ಎನ್ನದೆ ಮಾತುಗಳನ್ನಾಡಿದರು. ಅದರ ಪರಿಣಾಮ ಅವರ ಆಪ್ತ ಸ್ನೇಹಿತರಾಗಿದ್ದ ಪುಲಕೇಶಿನಗರದ ಕ್ಷೇತ್ರದ ಅಖಂಡ ಶ್ರೀನಿವಾಸಮೂರ್ತಿ ಅವರು ಕಾಂಗ್ರೆಸ್ ಶಾಸಕರಾಗಿದ್ದರು, ಟಿಕೆಟ್ ತಪ್ಪುವಂತಾಯಿತು. ಆ ಬಳಿಕ ಪಕ್ಷದ ಒಳಗೆ ಮುಜುಗರವಾಗುವಂತಹ ಹೇಳಿಕೆಗಳಿಗೆ ಜಮೀರ್ ಕಡಿವಾಣ ಹಾಕಿಕೊಂಡಿದ್ದರು.

ಅಭಿವೃದ್ಧಿ ವಿಷಯದಲ್ಲಿ ಹೆಚ್ಚು ಸುದ್ದಿಯಾಗದ ಸಚಿವ ಜಮೀರ್ ವಿವಾದಿತ ಹೇಳಿಕೆ, ಹಾಸ್ಯಾಸ್ಪದ ನಡವಳಿಕೆಗಳಿಂದಲೇ ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಕಾಂಗ್ರೆಸ್‍ನಲ್ಲಿ ಜಮೀರ್‍ಗಾಗಿ ಹಲವು ನಿಷ್ಠಾವಂತ ಮೂಲ ಕಾಂಗ್ರೆಸಿಗರನ್ನು ಬದಿಗೆ ಸರಿಸಲಾಗಿದೆ ಎಂಬ ಆರೋಪಗಳಿವೆ. ಈ ಬಗ್ಗೆ ವ್ಯಾಪಕ ಆಕ್ರೋಶಗಳು ಒಳಗೊಳಗೆ ಕುದಿಯುತ್ತಿವೆ.

ಚುನಾವಣಾ ಕಾಲದಲ್ಲಿ ಗೊಂದಲಗಳಾದರೆ ಕಾಂಗ್ರೆಸ್‍ಗೆ ನಷ್ಟವಾಗುತ್ತದೆ. ಮುಸ್ಲಿಂರ ವಿರುದ್ಧ ಸದಾ ಕಲ ಕೆಂಡ ಕಾರುವ ಬಿಜೆಪಿಗೆ ಲಾಭವಾಗುತ್ತದೆ. ಇದರಿಂದ ಭವಿಷ್ಯದಲ್ಲಿ ಮುಸ್ಲಿಂ ಸಮುದಾಯ ಮತ್ತಷ್ಟು ಆತಂಕಗಳನ್ನು ಹೆದರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷದೊಳಗಿನ ಅಲ್ಪಸಂಖ್ಯಾತ ನಾಯಕರು ಜಮೀರ್ ಅವರ ಪಾರುಪತ್ಯವನ್ನು ಅವಡುಗಚ್ಚಿ ಸಹಿಸಿಕೊಂಡಿದ್ದಾರೆ. ಆದರೂ ಜಮೀರ್ ಅನಪೇಕ್ಷಿತ ಹೇಳಿಕೆಗಳ ಮೂಲಕ ಸರ್ಕಾರ ಹಾಗೂ ಪಕ್ಷವನ್ನು ಮುಜಗರಕ್ಕೀಡು ಮಾಡುವುದನ್ನು ಮುಂದುವರೆಸಿರುವುದು ನಾಯಕರ ಅಸಹನೆಗೆ ಕಾರಣವಾಗಿದೆ.