Friday, November 7, 2025
Home Blog Page 1828

ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ಪರಿವರ್ತನೆಗೆ ಸಂಶೋಧನೆ ಅಗತ್ಯ : ಸಿಎಂ

ಬೆಂಗಳೂರು, ನ.9- ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ಪರಿವರ್ತನೆಯಿಂದ ಮತ್ತಷ್ಟು ಸುಧಾರಣೆ ತರುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ನಗರದ ಯಲಹಂಕದಲ್ಲಿ ನಿರ್ಮಿಸಲಾಗಿರುವ ಪಿಲಿಪ್ಸ್‍ನ ಸಂಶೋಧನಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಸುಲಭ ವ್ಯವಹಾರಕ್ಕೆ ಪೂರಕ ವಾತವರಣ ಹೊಂದಿರುವ ರಾಜ್ಯಗಳಲ್ಲಿ ಮುಂಚೂಣಿಯಲ್ಲಿದೆ ಎಂದರು.

ಬೆಂಗಳೂರಿನ ಪಿಲಿಪ್ಸ್ ಸಂಶೋಧನಾ ಕೇಂದ್ರ ಆರೋಗ್ಯ ಕ್ಷೇತ್ರದ ಡಿಜಿಟಲ್ ಶಕ್ತಿ ಕೇಂದ್ರವಾಗಿದೆ. ದೇಶದಲ್ಲೇ ಆರೋಗ್ಯ ಕಾಳಜಿಲ್ಲಿ ಮುಂಚೂಣಿ ಸ್ಥಾನದಲ್ಲಿರುವ ಈ ಸಂಸ್ಥೆ, ಬೆಂಗಳೂರಿನಲ್ಲಿ 6.50 ಲಕ್ಷ ಚದುರ ಅಡಿ ಜಾಗದಲ್ಲಿ ಅಸ್ತಿತ್ವದಲ್ಲಿದ್ದು, ಐದು ಸಾವಿರ ಜನ ಕೆಲಸ ಮಾಡುತ್ತಿದ್ದಾರೆ. ಕಳೆದ 27 ವರ್ಷಗಳಿಂದಲೂ ಕರ್ನಾಟಕದಲ್ಲಿ ಪೂರಕ ವಾತಾವಣ ನಿರ್ಮಿಸುವಲ್ಲಿ ಪ್ರಧಾನ ಪಾತ್ರ ವಹಿಸಿದೆ ಎಂದರು.

ಜನರ ಆರೋಗ್ಯ ಹಾಗೂ ಕ್ಷೇಮಕ್ಕೆ ಡಿಜಿಟಲ್ ಪರಿವರ್ತನೆ ನೆರವಾಗಲಿದೆ. ರೋಗಿಗಳ ಅನುಭವ ಸುಧಾರಣೆ, ಉತ್ತಮ ಫಲಿತಾಂಶ, ವೆಚ್ಚ ತಗ್ಗಿಸುವಿಕೆ ವಲಯಗಳಲ್ಲಿ ಅನ್ವೇಷಣೆಗಳು ನಡೆಯಬೇಕಿದೆ. ಭಾರತೀಯ ವಿಜ್ಞಾನ ಸಂಸ್ಥೆ, ರಾಷ್ಟ್ರೀಯ ಬಯಾಲಾಜಿಕಲ್ ಸೈನ್ಸ್, ರಾಷ್ಟ್ರೀಯ ಮಾನಸಿಕ ಆರೋಗ್ಯ ಕೇಂದ್ರ ಸೇರಿದಂತೆ ರಾಜ್ಯದಲ್ಲಿ ಹಲವು ವೈದ್ಯಕೀಯ ಸಂಸ್ಥೆಗಳಿವೆ. ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರುವ ನವೋದ್ಯಮಗಳಿಗೆ ಪೂರಕ ವಾತವರಣವೂ ಇದೆ. ಜೀವನ ಸುಧಾರಣೆ, ಡಿಜಿಟಲ್ ಆರೋಗ್ಯ, ಅಮೂಲ್ಯ ಔಷಧಿಗಳ ಸಂಶೋಧನೆ ಸೇರಿದಂತೆ ಸಂಶೋಧನೆಗಳು ಹೆಚ್ಚಾಗಬೇಕು ಎಂದು ಸಲಹೆ ನೀಡಿದರು.

ಹೃದಯಘಾತದಿಂದ ಬಚಾವ್ ಮಾಡಿದ ಸ್ಮಾರ್ಟ್ ವಾಚ್‍..!

ರಾಜ್ಯ ಸರ್ಕಾರ ಜೈವಿಕ ತಂತ್ರಜ್ಞಾನ ಸೇರಿದಂತೆ ಅನೇಕ ನೀತಿಗಳನ್ನು ಜಾರಿಗೆ ತರುವ ಮೂಲಕ ಆಧುನಿಕ ವಾತಾವರಣ ನಿರ್ಮಿಸಿದೆ. ದೇಶಿಯ ಹಾಗೂ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಗುರಿ ತಲುಪಲು ಗಮನ ನೀಡಿದೆ. ಅದಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಸೃಷ್ಟಿಸಲಾಗುತ್ತಿದೆ. . 2022ರಲ್ಲಿ ದೇಶದಲ್ಲಿ ಸುಲಭ ವ್ಯವಹಾರಿಕ ವಾತಾವರಣದ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿತ್ತು. ಕಾಲಕಾಲಕ್ಕೆ ನೀತಿ, ನಿರೂಪಣೆಗಳ ಮೂಲಕ ಬೆಂಬಲ ಮುಂದುವರೆಸಲಾಗಿದೆ ಎಂದರು.

2023ರಲ್ಲಿ ನಡೆಯುವ ಬೆಂಗಳೂರು ಟೆಕ್ ಸಮ್ಮೇಳನದಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿಯವರು ಉದ್ಯಮಿಗಳಿಗೆ ಕರೆ ನೀಡಿದರು. ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ದೀಪಾವಳಿಯಲ್ಲಿ ಸ್ಥಳೀಯ ಉತ್ಪನ್ನ ಖರೀದಿಸಿ ಸೆಲ್ಫಿ ಕಳುಹಿಸಿ : ಮೋದಿ

ನವದೆಹಲಿ, ನ.9- ಈ ದೀಪಾವಳಿಯಲ್ಲಿ ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಿ ನಂತರ ಆ ಉತ್ಪನ್ನ ಅಥವಾ ಅದರ ತಯಾರಕರೊಂದಿಗೆ ಸೆಲ್ಫಿಯನ್ನು ಕ್ಲಿಕ್ಕಿಸಿ, ನಮೋ ಆ್ಯಪ್‍ನಲ್ಲಿ ಪೋಸ್ಟ್ ಮಾಡಿ ಎಂದು ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಈ ಸಂದೇಶವನ್ನು ಪ್ರಧಾನಿ ಪ್ರಕಟಿಸಿದ್ದಾರೆ. ಈ ದೀಪಾವಳಿಯಲ್ಲಿ ನಮೋ ಅಪ್ಲಿಕೇಷನ್‍ನಲ್ಲಿ #VocalForLocal ಥ್ರೆಡ್‍ಗಳೊಂದಿಗೆ ನಿಮ್ಮ ಸೆಲ್ಫಿಯನ್ನು ಪೋಸ್ಟ್ ಮಾಡಿ. ಭಾರತದ ಉದ್ಯಮಶೀಲತೆ ಮತ್ತು ಸೃಜನಶೀಲ ಮನೋಭಾವ ಹಬ್ಬದ ಸಂದರ್ಭದಲ್ಲಿ ಎತ್ತಿ ಹಿಡಿಯೋಣ ಎಂದು ಮೋದಿ ಹೇಳಿದ್ದಾರೆ.

ಈ ಅಭಿಯಾನ ಗಟ್ಟಿಗೊಳಿಸಲು, ಸಕಾರಾತ್ಮಕ ಮನೋಭಾವವನ್ನು ಹರಡಲು ನಿಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ಆಹ್ವಾನಿಸಿ ಎಂದೂ ಕರೆ ನೀಡಿದ್ದಾರೆ. ಸ್ಥಳೀಯ ಪ್ರತಿಭೆಗಳನ್ನು ಬೆಂಬಲಿಸಲು ಡಿಜಿಟಲ್ ಮಾಧ್ಯಮದ ಶಕ್ತಿಯನ್ನು ಬಳಸೋಣ. ನಮ್ಮ ಜತೆಗಿನ ಭಾರತೀಯರ ಸೃಜನಶೀಲತೆಯನ್ನು ಪ್ರೋತ್ಸಾಹಿಸೋಣ ಮತ್ತು ನಮ್ಮ ಸಂಪ್ರದಾಯಗಳನ್ನು ಪ್ರವರ್ಧಮಾನಕ್ಕೆ ತರೋಣ ಎಂದು ಅವರು ಸಲಹೆ ನೀಡಿದ್ದಾರೆ.

ಅಕ್ಟೋಬರ್‍ನ ಮನ್ ಕಿ ಬಾತ್ ಕಾರ್ಯಕ್ರಮದಲ್ಲೂ ಸ್ವದೇಶಿ ಉತ್ಪನ್ನಗಳನ್ನು ಮೋದಿ ಬೆಂಬಲಿಸಿದ್ದರು. ಸ್ಥಳೀಯರಿಗೆ ಧ್ವನಿಯಾಗಲು ಅವರು ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಹಬ್ಬ ಹರಿದಿನಗಳಲ್ಲಿ ವೋಕಲ್ ಫಾರ್ ಲೋಕಲï ನಮ್ಮ ಆದ್ಯತೆಯಾಗಬೇಕು ಎಂದು ಹೇಳಿದ್ದರು.

ನೀವು ಪ್ರವಾಸ ಅಥವಾ ತೀರ್ಥಯಾತ್ರೆಗೆ ಹೋದಲ್ಲಾ ಸ್ಥಳೀಯ ಕುಶಲಕರ್ಮಿಗಳಿಂದ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಿ ಎಂದು ನಾನು ನನ್ನ ವಿನಂತಿಯನ್ನು ಪುನರುಚ್ಚರಿಸಲು ಬಯಸುತ್ತೇನೆ ಎಂದಿದ್ದರು.
ವಹಿವಾಟಿನ ಸಮಯದಲ್ಲಿ ಯುಪಿಐ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬಳಸುವಂತೆ ನಾಗರಿಕರನ್ನು ಪ್ರಧಾನಿ ಒತ್ತಾಯಿಸಿದ್ದಾರೆ. ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವುದರಿಂದ ಕುಶಲಕರ್ಮಿಗಳಿಗೆ ಮುಂಬರುವ ದೀಪಾವಳಿ ಹಬ್ಬದ ಹೊಳಪು ಹರಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕನ ಹತ್ಯೆ

ಶ್ರೀನಗರ,ನ.9- ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‍ನ ಕಥೋಹಾಲನ್ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‍ಕೌಂಟರ್‍ನಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ದಿ ರೆಸಿಸ್ಟೆನ್ಸ್‍ಫ್ರಂಟ್‍ನೊಂದಿಗೆ (ಟಿಆರ್‍ಎಫ್) ಸಂಪರ್ಕ ಹೊಂದಿದ್ದ ಭಯೋತ್ಪಾದಕನೊಬ್ಬ ಸಾವನ್ನಪ್ಪಿದ್ದಾನೆ. ಹತ್ಯೆಗೀಡಾದ ಭಯೋತ್ಪಾದಕನನ್ನು ಮೈಸರ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ.

ಭಯೋತ್ಪಾದಕ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‍ಎಫ್) ನೊಂದಿಗೆ ಸಂಬಂಧ ಹೊಂದಿದ್ದನು ಎಂದು ಕಾಶ್ಮೀರ ವಲಯ ಪೊಲೀಸರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‍ಐ ವರದಿ ಮಾಡಿದೆ. ಹತ್ಯೆಯಾದ ಭಯೋತ್ಪಾದಕನಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು ಸೇರಿದಂತೆ ಇನ್ನಿತರ ಭಯೋತ್ಪಾದನೆ ನಡೆಸಲು ಸಂಚು ರೂಪಿಸಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂಬ ಮಾಹಿತಿಯನ್ನು ಅಧಿಕಾರಿ ನೀಡಿದ್ದಾರೆ.

ದಕ್ಷಿಣ ಕಾಶ್ಮೀರ ಜಿಲ್ಲೆಯ ಕಥೋಹಲನ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಮಾಹಿತಿ ನೀಡಿದ ನಂತರ ಭದ್ರತಾ ಪಡೆಗಳ ಸಿಬ್ಬಂದಿಗಳು ಕಾರ್ಯಾಚರಣೆ ಆರಂಭಿಸಿದ್ದರು. ಮೊದಲು ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದರು, ಬಳಿಕ ನಡೆದ ಪ್ರತಿದಾಳಿಯಲ್ಲಿ ಓರ್ವ ಉಗ್ರನನ್ನು ಸದೆಬಡಿಯಲಾಗಿದೆ.

ವಾಯಮಾಲಿನ್ಯ ತಡೆಗಟ್ಟಲು ನ.20 ರಂದು ನವದೆಹಲಿಯಲ್ಲಿ ಕೃತಕ ಮಳೆ

ಪ್ರತ್ಯೇಕ ಘಟನೆಯಲ್ಲಿ ಇಂದು ಮುಂಜಾನೆ ಸಾಂಬಾ ಜಿಲ್ಲೆಯ ರಾಮಗಢ ಸೆಕ್ಟರ್‍ನಲ್ಲಿ ಅಂತಾರಾಷ್ಟ್ರೀಯ ಗಡಿ (ಐಬಿ) ಉದ್ದಕ್ಕೂ ಪಾಕಿಸ್ತಾನಿ ರೇಂಜರ್‍ಗಳು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಸಿಬ್ಬಂದಿ ಗಾಯಗೊಂಡಿದ್ದಾರೆ. ಪೊಲೀಸರು ಮತ್ತು ಸೇನಾ ಸಿಬ್ಬಂದಿ ತೀವ್ರ ಕಟ್ಟೆಚ್ಚರವಹಿಸಿದ್ದಾರೆ.

ಅಕ್ಟೋಬರ್ 30ರಿಂದ ಸತತ ಮೂರು ದಿನಗಳಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ವಿಶ್ವಾಸಾರ್ಹ ಮಾಹಿತಿ ನೀಡಿದವರಿಗೆ ತಲಾ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ.

ಆರ್ಯುವೇದ ಪ್ರಚುರಪಡಿಸಲು ಜನಜಾಗೃತಿ ಶಿಬಿರ

0

ಬೆಂಗಳೂರು,ನ.9- ಪ್ರಧಾನಿ ನರೇಂದ್ರಮೋದಿ ಅವರ ಆಶಯದಂತೆ ಆರ್ಯುವೇದ ಪದ್ದತಿಯನ್ನು ಇನ್ನಷ್ಟು ಪ್ರಚುರಪಡಿಸುವ ನಿಟ್ಟಿನಲ್ಲಿ ಆಯುಷ್ ಸಚಿವಾಲಯವು ಹಲವಾರು ಜನಜಾಗೃತಿ ಶಿಬಿರಗಳನ್ನು ಆಯೋಜಿಸಿ ಇದರ ಮಹತ್ವವನ್ನು ಸಾರುವಲ್ಲಿ ಯಶಸ್ವಿಯಾಗಿದೆ.ಕಳೆದ 2016ರಿಂದ ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯ ನ.10ರಂದು ಆರ್ಯುವೇದ ದಿನಾಚರಣೆಯನ್ನು ಹಮ್ಮಿಕೊಳ್ಳುತ್ತದೆ. ಆರ್ಯುವೇದ ಪದ್ದತಿಯಿಂದ ಜನರಿಗೆ ಆಗಬಹುದಾದ ಅನುಕೂಲಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತದೆ.

ಸಂಸ್ಥೆಯಲ್ಲಿ ಲಭ್ಯವಿರುವ ಉಚಿತ ಆರೋಗ್ಯ ಸೇವೆಗಳನ್ನು ಉಪಯೋಗಿಸಿಕೊಳ್ಳುವಂತೆ ಕೇಂದ್ರಿಯ ಆಯುರ್ವೇದ ಸಂಶೋಧನಾ ಸಂಸ್ಥೆಯ (ಆಯುಷ್ ಸಚಿವಾಲಯ, ಭಾರತ ಸರಕಾರ) ಸಹಾಯಕ ನಿರ್ದೇಶಕರಾದ ಡಾ. ಸುಲೋಚನಾ ಭಟ್ಟ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ದೇಶದಾದ್ಯಂತ ಆಯುರ್ವೇದಕ್ಕಾಗಿ ಓಟ 8ನೇ ಆಯುರ್ವೇದ ದಿನಾಚರಣೆಯನ್ನು ರಾಜ್ಯದಲ್ಲೂ ನವೆಂಬರ್ ತಿಂಗಳಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಆಯುರ್ವೇದ ದಿನವನ್ನು ಹೆಚ್ಚು ಅರ್ಥಪೂರ್ಣವಾಗಿಸುವ ಆಚರಿಸಲು ಸಹಕರಿಸಿದ ಕೇಂದ್ರಿಯ ಆಯುರ್ವೇದ ಸಂಶೋಧನಾ ಸಂಸ್ಥೆಯ ಎಲ್ಲ ಸಿಬ್ಬಂದಿವರ್ಗಕ್ಕೂ ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಎಲ್ಲರೂ ಅಭಿನಂದನಾರ್ಹರು ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರದರ್ಶನ ಮತ್ತು ಸಣ್ಣ -ಎಕ್ಸ್ ಪೋ, ದೇಶಾದ್ಯಂತ ವೈದ್ಯಕೀಯ ಮತ್ತು ಸ್ವಾಸ್ಥ್ಯ ಶಿಬಿರಗಳು, ಸಾರ್ವಜನಿಕ ಜಾಗೃತಿ ಉಪನ್ಯಾಸಗಳು, ಸಾಮಾನ್ಯ ಔಷೀಯ ಸಸ್ಯಗಳ ವಿತರಣೆ, ಪಾರಂಪರಿಕ ಸ್ಥಳಗಳಲ್ಲಿ ಎಲ್‍ಇಡಿ ಪ್ರದರ್ಶನ (ವಿಷಯಗಳನ್ನು ಆಯುಷ್ ಸಚಿವಾಲಯ ಒದಗಿಸುವುದು), ಶಾಲಾ ಸಂಪರ್ಕ ಕಾರ್ಯಕ್ರಮಗಳು, ಅಂಗನವಾಡಿಗಳ ಒಳಗೊಳ್ಳುವಿಕೆ, ಆಯುರ್ವೇದ ಪೋಷಣೆಯನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷದೊಂದಿಗೆ ಜೋಡಿಸುವುದು, ಆಯುಷ್ ಕ್ಯಾಂಪೇನ್ ಪೋರ್ಟಲ್‍ನಲ್ಲಿ ರಸಪ್ರಶ್ನೆ ಸ್ಪರ್ಧೆಗಳು, ಸಮುದಾಯ ಸೇವಾ ಕೇಂದ್ರಗಳು/ ಸಮುದಾಯ ಆರೋಗ್ಯ ಕೇಂದ್ರಗಳು / ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ತೊಡಗಿಸಿಕೊಳ್ಳಲಾಗಿತ್ತು.

ಆಯುರ್ವೇದದ ಬಳಕೆಗೆ ಸಂಬಂಸಿದಂತೆ ಆನ್‍ಲೈನ್ ಪೋರ್ಟಲ್‍ಗಳ ಮೂಲಕ ಪ್ರಕೃತಿಮೌಲ್ಯಮಾಪನ ಮತ್ತು ಸ್ವಾಸ್ಥ್ಯ ಮೌಲ್ಯಮಾಪನ, ಕೃಷಿ ವಿಶ್ವವಿದ್ಯಾನಿಲಯಗಳು ಇತ್ಯಾದಿ ಸೇರಿದಂತೆ ಇತರ ಅನುಷ್ಠಾನ ಸಂಸ್ಥೆಗಳ ಮೂಲಕ ಸಸ್ಯಗಳ ಔಷೀಯ ಮತ್ತು ಆರ್ಥಿಕ ಮËಲ್ಯದ ಕುರಿತು ಜಾಗೃತಿಕಾರ್ಯಕ್ರಮಗಳನ್ನು ನಡೆಸಲಾಗಿದೆ. ಚಿತ್ರಕಲೆ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಆಯುರ್ವೇದ ಪಾಕವಿಧಾನಗಳ ಜ್ವಾಲೆಯಿಲ್ಲದ ಅಡುಗೆ, ಜಿಂಗಲ್, ಘೋಷಣೆ, ಪೋಸ್ಟರ್ , ಕಿರು ವಿಡಿಯೋ ಚಿತ್ರ ಸ್ಪರ್ಧೆ, ಪ್ರಬಂಧ, ಔಷೀಯ ಸಸ್ಯ ಸಂಬಂತ ಸ್ಪರ್ಧೆ ಮತ್ತು ಚರ್ಚಾ ಮತ್ತು ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ, ಗಣ್ಯ ವ್ಯಕ್ತಿಗಳಿಂದ ವೀಡಿಯೊ ಸಂದೇಶಗಳು, ಆಯುರ್ವೇದದ ಮೇಲೆ ಮಾಹಿತಿ ಪತ್ರಗಳ ಪ್ರಸರಣ, ಆಕಾಶವಾಣಿ /ಟಿವಿ ಸಂದೇಶಗಳು , ಕಿರುಚಿತ್ರಗಳು/ ಜಾಹಿರಾತು ಫಲಕಗಳು / ಎಲ್‍ಇಡಿ ಪ್ರದರ್ಶಕಗಳು / ಯೂಟ್ಯೂಬ್ ದೃಶ್ಯ ಸಂದೇಶಗಳು /ಪತ್ರಿಕಾ ಜಾಹೀರಾತುಗಳು, ಆಯುರ್ವೇದದಲ್ಲಿ ರೇಡಿಯೋ ಮತ್ತು ಟಿವಿ ವಿಚಾರವಿನಿಮಯ ಕಾರ್ಯಕ್ರಮಗಳು,

ಆಯುರ್ವೇದ ದಿನದಂದು ಇ-ಕಿಟ್ ಪ್ರಸಾರ, ಒಣ ಭೂಮಿಗೆ ಸೂಕ್ತವಾದ ಔಷೀಧಿಯ ಸಸ್ಯಗಳನ್ನು ಒಳಗೊಂಡಂತೆ (ರಾಜ್ಯವಾರು) ಕೃಷಿಗೆ ಸೂಕ್ತವಾದ ಔಷೀಯ ಸಸ್ಯಗಳ ಪಟ್ಟಿಯ ಪ್ರಸರಣ, ರಾಷ್ಟ್ರೀಯ ಔಷೀಧಿಯ ಸಸ್ಯ ಮಂಡಳಿ ಅಭಿವೃದ್ಧಿಪಡಿಸಿರುವ ಕೃಷಿ-ತಂತ್ರಜ್ಞಾನಗಳ ಪ್ರಸರಣ, ವಿವಿಧ ಪಾಲುದಾರರು, ರೈತ ಉತ್ಪಾದಕರ ಸಂಸ್ಥೆಗಳು, ಇತ್ಯಾದಿಗಳೊಂದಿಗೆ ಔಷೀಯ ಸಸ್ಯಗಳು/ ಇ-ಚರಕ್‍ಗಳ ಮಾರುಕಟ್ಟೆಯ ಅರಿವು ಮೂಡಿಸುವಿಕೆ ಮತ್ತು ರೈತರಲ್ಲಿ ಉತ್ತಮ ಕೃಷಿ ಪದ್ಧತಿ (ಜಿಎಪಿ) ಮತ್ತು ಉತ್ತಮ ಕ್ಷೇತ್ರ ಸಂಗ್ರಹ ಪದ್ಧತಿಗಳ (ಜಿಎಫ್‍ಸಿಪಿ) ಪರಿಕಲ್ಪನೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು.

ನನ್ನ ಪ್ರಕಾರ ಭಾರತ ಮತ್ತು ಪಾಕಿಸ್ತಾನ ಸೆಮಿಫೈನಲ್‍ : ಗಂಗೂಲಿ

ನವದೆಹಲಿ,ನ.9-ನನ್ನ ಪ್ರಕಾರ ಐಸಿಸಿ ವಿಶ್ವಕಪ್ -2023 ಮಹಾಸಮರದಲ್ಲಿ ಭಾರತ ಮತ್ತು ಪಾಕಿಸ್ತಾನ ಸೆಮಿಫೈನಲ್‍ನಲ್ಲಿ ಎದುರಾಳಿಯಾಗುವುದನ್ನು ಬಯಸುತ್ತೇನೆ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಯಾವ ತಂಡಗಳು ಎಷ್ಟು ಪಾಯಿಂಟ್ ಪಡೆದುಕೊಳ್ಳುತ್ತವೆ ಎಂಬುದರ ಮೇಲೆಯೇ ಸೆಮಿಫೈನಲ್ ಹಣಾಹಣಿ ನಡೆಯಲಿದೆ ಎಂಬುದು ನನಗೂ ಗೊತ್ತು. ಆದರೆ ಭಾರತದಲ್ಲಿ ಕ್ರೀಡಾಭಿಮಾನಿಗಳ ಹುಚ್ಚು ಕಿಚ್ಚು ಹಚ್ಚಬೇಕಾದರೆ ಸೆಮಿಫೈನಲ್‍ನಲ್ಲಿ ಭಾರತ-ಪಾಕಿಸ್ತಾನ ಎದುರಾಳಿಯಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಹುತೇಕ ಕ್ರೀಡಾಭಿಮಾನಿಗಳು ಈಗಾಗಲೇ ಭಾರತ ಮತ್ತು ಪಾಕಿಸ್ತಾನ ಫೈನಲ್‍ನಲ್ಲಿ ಸೆಣಸಲಿವೆ ಎಂದು ಟಿಕೆಟ್‍ಗಳನ್ನೇ ಖರೀದಿಸಿದ್ದಾರೆ. ಅಹಮದಾಬಾದ್‍ನಲ್ಲಿ ನಡೆದ ಲೀಗ್ ಹಂತದ ಪಂದ್ಯದಲ್ಲಿ ಭಾರತ ಪಾಕಿಸ್ತಾನ ತಂಡವನ್ನು ಬಗ್ಗು ಬಡಿದಿತ್ತು. ಇದೇ ರೀತಿ ಸೆಮಿಫೈನಲ್ ಇಲ್ಲವೇ ಫೈನಲ್‍ನಲ್ಲಿ ಸಾಂಪ್ರದಾಯಿಕ ಎದುರಾಳಿ ತಂಡವನ್ನು ಟೀಮ್ ಇಂಡಿಯಾ ಸೋಲಿಸಲಿದೆ ಎಂಬುದು ಬಹುತೇಕ ಅಭಿಮಾನಿಗಳ ಒತ್ತಾಸೆಯಾಗಿದೆ ಎಂದಿದ್ದಾರೆ.

ಕ್ರಿಕೆಟ್‍ನಲ್ಲಿ ಇಂಡಿಯ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವೆಂದರೆ ಅದು ಊಹೆಗೂ ನಿಲುಕದ ಸೆಣಸಾಟ. ಕೊನೆಯ ಎಸೆತದವರೆಗೂ ಎರಡೂ ತಂಡಗಳು ಗೆಲುವಿಗೆ ಶ್ರಮಿಸುತ್ತವೆ. ಸೋಲನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ ಎಂದು ಒಂದು ಕಾಲದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕನಾಗಿ ಅನೇಕ ಪಂದ್ಯಗಳನ್ನು ಮುನ್ನಡೆಸಿದ್ದ ದಾದಾ ಖ್ಯಾತಿಯ ಗಂಗೂಲಿ ಹೇಳಿದ್ದಾರೆ.


ವಾಯಮಾಲಿನ್ಯ ತಡೆಗಟ್ಟಲು ನ.20 ರಂದು ನವದೆಹಲಿಯಲ್ಲಿ ಕೃತಕ ಮಳೆ

ಪ್ರಸ್ತುತ ರೋಹಿತ್ ಶರ್ಮ ನೇತೃತ್ವದ ಟೀಂ ಇಂಡಿಯಾ ಅದ್ಭುತವಾಗಿ ಮುನ್ನಡೆಯುತ್ತದೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಹೀಗೆ ಎಲ್ಲ ವಿಭಾಗಗಳಲ್ಲೂ ನಮ್ಮ ತಂಡಕ್ಕೆ ಯಾರೊಬ್ಬರೂ ಸರಿಸಾಟಿ ಇಲ್ಲ. ಸತತ 8 ಪಂದ್ಯಗಳನ್ನು ಗೆದ್ದು ಅಜೇಯವಾಗಿ ಉಳಿದಿರುವ ಭಾರತ ಫೈನಲ್‍ವರೆಗೂ ಇದೇ ಪ್ರದರ್ಶನವನ್ನು ನೀಡಲಿದೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ.

ಆರಂಭಿಕ ಆಟಗಾರರಿಂದ ಹಿಡಿದು ಮಧ್ಯಮ ಕ್ರಮಾಂಕದಲ್ಲೂ ಬ್ಯಾಟಿಂಗ್‍ನಲ್ಲಿ ಎಲ್ಲರೂ ಉತ್ತಮ ಲಯ ಕಂಡುಕೊಂಡಿದ್ದಾರೆ. ಅದೇ ರೀ ಬೌಲಿಂಗ್ ವಿಭಾಗದಲ್ಲೂ ಒಬ್ಬರಿಗಿಂತ ಒಬ್ಬರು ಅದ್ಭುತವಾದ ಪ್ರದರ್ಶನ ನೀಡುತ್ತಿದ್ದಾರೆ. ಸದ್ಯ ಟೀಂ ಇಂಡಿಯ ಮುನ್ನಡೆಯುತ್ತಿರುವುದನ್ನು ನೋಡಿದರೆ ವಿಶ್ವಕಪ್ ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಗಂಗೂಲಿ ಭವಿಷ್ಯ ನುಡಿದಿದ್ದಾರೆ.

ತೆಲಂಗಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮನೆ ಮೇಲೆ ಐಟಿ ರೇಡ್

ಹೈದರಾಬಾದ್ , ನ.9 (ಪಿಟಿಐ)- ಇದೇ 30 ರಂದು ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಖಮ್ಮಂ ಜಿಲ್ಲೆಯ ಪಲೈರ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ರ್ಪಧಿಸಿರುವ ಶ್ರೀನಿವಾಸ್ ರೆಡ್ಡಿ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಈ ಐಟಿ ದಾಳಿಯನ್ನು ಖಂಡಿಸಿ ಕಾಂಗ್ರೆಸ್ ನಾಯಕನ ಅನುಯಾಯಿಗಳು ಖಮ್ಮಂನಲ್ಲಿ ಪ್ರತಿಭಟಿಸಿ ಘೋಷಣೆಗಳನ್ನು ಕೂಗಿದರು. ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದಂತಹ ಕೇಂದ್ರ ಏಜೆನ್ಸಿಗಳು ತನ್ನನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಬಹುದು ಎಂದು ರೆಡ್ಡಿ ನಿನ್ನೆಯಷ್ಟೇ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ಕಳೆದ ಹಲವು ದಿನಗಳಿಂದ ಕೇಂದ್ರ ಏಜೆನ್ಸಿಗಳು ಕಾಂಗ್ರೆಸ್ ನಾಯಕರ ಮೇಲೆ ತಮ್ಮ ಮನೆ ಶೋಧನೆಯನ್ನು ಕೇಂದ್ರೀಕರಿಸುತ್ತಿವೆ ಎಂದು ರೆಡ್ಡಿ ಆರೋಪಿಸಿದ್ದಾರೆ. ತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್‍ಎಸ್ ಸರ್ಕಾರ ಮತ್ತು ಬಿಜೆಪಿ ನಾಯಕರುಗಳು ಕಾಂಗ್ರೆಸ್ ಪಕ್ಷದ ನಾಯಕರ ಮೇಲಿನ ದಾಳಿಯಲ್ಲಿ ಶಾಮೀಲಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

“ಬಡತನ ಏಕೈಕ ಜಾತಿ ಎನ್ನುವ ಮೋದಿ ಒಬಿಸಿ ಎಂದು ಗುರುತಿಕೊಳ್ಳುವುದೇಕೆ..?”

ಕೇಂದ್ರ ತನಿಖಾ ತಂಡಗಳು ನನಗೆ ಮತ್ತು ನನ್ನ ಕಂಪನಿಗಳಿಗೆ ತೊಂದರೆ ಉಂಟುಮಾಡುವ ಕಾರಣ ಯಾವುದೇ ಚಟುವಟಿಕೆಯನ್ನು ಆಶ್ರಯಿಸದಂತೆ ನಾನು ವಿನಂತಿಸುತ್ತೇನೆ ಎಂದು ರೆಡ್ಡಿ ತಮ್ಮ ಅನುಯಾಯಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಕಳೆದ ವಾರ ಮಹೇಶ್ವರಂ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ ಲಕ್ಷ್ಮಾ ರೆಡ್ಡಿ ಮತ್ತು ಬಡಂಗ್‍ಪೇಟೆ ಮಹಾನಗರ ಪಾಲಿಕೆ ಮೇಯರ್ ಚಿಗುರಿಂಥ ಪಾರಿಜಾತ ನರಸಿಂಹ ರೆಡ್ಡಿ ಅವರ ನಿವಾಸಗಳಲ್ಲಿ ಐಟಿ ಅಧಿಕಾರಿಗಳು ತಪಾಸಣೆ ನಡೆಸಿದ್ದರು

ಹೃದಯಘಾತದಿಂದ ಬಚಾವ್ ಮಾಡಿದ ಸ್ಮಾರ್ಟ್ ವಾಚ್‍..!

ಲಂಡನ್,ನ.9- ಹೃದಯಾಘಾತದಿಂದ ಬದುಕುಳಿಯಲು ಸ್ಮಾರ್ಟ್ ವಾಚ್ ಹೇಗೆ ಸಹಾಯ ಮಾಡಿತು ಎಂಬುದನ್ನು ಯುಕೆಯಲ್ಲಿ 42 ವರ್ಷದ ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ. ಇಂಗ್ಲೆಂಡನ್ ಹಾಕಿ ವೇಲ್ಸ್‍ನ ಸಿಇಒ ಆಗಿರುವ ಪಾಲ್ ವಾಪಾಮ್ ಅವರು ತಮ್ಮ ಬೆಳಿಗ್ಗೆ ಸ್ವಾನ್‍ಸಿಯ ಮಾರಿಸ್ಟನ್ ಪ್ರದೇಶದಲ್ಲಿ ತಮ್ಮ ಮನೆಯ ಬಳಿ ಓಡುತ್ತಿದ್ದಾಗ ತೀವ್ರ ಎದೆನೋವಿಗೆ ಒಳಗಾದರೂ ತಕ್ಷಣ ಅವರು ಅದನ್ನು ತನ್ನ ಸ್ಮಾರ್ಟ್ ವಾಚ್ ಮೂಲಕ ತನ್ನ ಹೆಂಡತಿಯನ್ನು ಸಂಪರ್ಕಿಸಿದರಿಂದ ಸರಿಯಾದ ಸಮಯಕ್ಕೆ ಅವರು ಆಸ್ಪತ್ರೆಗೆ ಸೇರಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಾವು ಸ್ಮಾರ್ಟ್ ವಾಚ್ ಬಳಸಿ ಪ್ರಾಣಾಪಾಯದಿಂದ ಪಾರಾಗಿರುವುದನ್ನು ಅವರು ವೇಲ್ಸ ಆನ್‍ಲೈನ್‍ನಲ್ಲಿ ಹಂಚಿಕೊಂಡಿದ್ದಾರೆ. ನಾನು ಸಾಮಾನ್ಯವಾಗಿ ಮಾಡುವಂತೆ ಬೆಳಿಗ್ಗೆ 7 ಗಂಟೆಗೆ ನಾನು ಬೆಳಿಗ್ಗೆ ಓಟಕ್ಕೆ ಹೋಗಿದ್ದೆ ಮತ್ತು ಸುಮಾರು ಐದು ನಿಮಿಷಗಳಲ್ಲಿ ನನ್ನ ಎದೆಯಲ್ಲಿ ಭಾರಿ ನೋವು ಕಾಣಿಸಿಕೊಂಡಿತು.

ನನ್ನ ಎದೆಯು ಬಿಗಿಯಾದಂತಾಯಿತು ಮತ್ತು ನಂತರ ನಾನು ರಸ್ತೆಯಲ್ಲಿ ನನ್ನ ಕೈ ಮತ್ತು ಮೊಣಕಾಲುಗಳ ಮೇಲೆ ಇದ್ದೆ. ಮೊದಮೊದಲು ತುಸು ಬಿಗಿಯಾಗಿದ್ದರೂ ನಂತರ ಹಿಂಡುತ್ತಿರುವಂತೆ ಭಾಸವಾಗುತ್ತಿತ್ತು. ನೋವು ನಂಬಲಸಾಧ್ಯವಾಗಿತ್ತು. ನನ್ನ ಹೆಂಡತಿ ಲಾರಾಗೆ ಫೋನ್ ಮಾಡಲು ನಾನು ನನ್ನ ಗಡಿಯಾರವನ್ನು ಬಳಸಿದೆ. ಅದೃಷ್ಟವಶಾತ್ ನಾನು ಕೇವಲ ಐದು ನಿಮಿಷಗಳ ದೂರದಲ್ಲಿದ್ದೆ, ಆದ್ದರಿಂದ ಅವಳು ನನ್ನನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದ ಪರಿಣಾಮ ನಾನು ಬದುಕುಳಿದೆ ಎಂದು ಅವರು ಹೇಳಿಕೊಂಡಿದ್ದಾರೆ.

“ಬಡತನ ಏಕೈಕ ಜಾತಿ ಎನ್ನುವ ಮೋದಿ ಒಬಿಸಿ ಎಂದು ಗುರುತಿಕೊಳ್ಳುವುದೇಕೆ..?”

ಆಸ್ಪತ್ರೆಯಲ್ಲಿ, ಅವರ ಅಪಧಮನಿಯೊಂದರಲ್ಲಿ ಸಂಪೂರ್ಣ ಅಡಚಣೆಯಿಂದಾಗಿ ಹೃದಯಾಘಾತವಾಗಿದೆ ಎಂದು ಕಂಡುಹಿಡಿಯಲಾಯಿತು. ನಂತರ ಅವರನ್ನು ಆಸ್ಪತ್ರೆಯ ಕಾರ್ಡಿಯಾಕ್ ಸೆಂಟರ್‍ನಲ್ಲಿರುವ ಕ್ಯಾತಿಟೆರೈಸೇಶನ್ ಪ್ರಯೋಗಾಲಯಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಅವರು ಈ ನಿರ್ಬಂಧಿಸಿದ ಅಪಧಮನಿಯನ್ನು ಅನ್‍ಕ್ಲೋಗ್ ಮಾಡುವ ಪ್ರಕ್ರಿಯೆಗೆ ಒಳಗಾದರು. ಮನೆಗೆ ಹಿಂದಿರುಗುವ ಮೊದಲು ಚೇತರಿಸಿಕೊಳ್ಳಲು ಅವರು ಆರು ದಿನಗಳ ಕಾಲ ಪರಿಧಮನಿಯ ಘಟಕದಲ್ಲಿ ಇದ್ದರು. ಅವರು ನಡೆಯುತ್ತಿರುವ ಪುನರ್ವಸತಿ ಭಾಗವಾಗಿ ಆಸ್ಪತ್ರೆಯಲ್ಲಿ ನಂತರದ ಆರೈಕೆ ಸೇವೆಗೆ ಹಾಜರಾಗಲಿದ್ದಾರೆ.

ನಾನು ಅಧಿಕ ತೂಕ ಹೊಂದಿಲ್ಲದ ಕಾರಣ ಇದು ಸ್ವಲ್ಪ ಆಘಾತವನ್ನುಂಟು ಮಾಡಿದೆ ಮತ್ತು ನಾನು ನನ್ನನ್ನು ಫಿಟ್ ಆಗಿಟ್ಟುಕೊಳ್ಳಲು ಪ್ರಯತ್ನಿಸುತ್ತೇನೆ ಆದ್ದರಿಂದ ನನಗೆ ಯಾವುದೇ ಅಪಾಯಕಾರಿ ಅಂಶಗಳಿಲ್ಲ. ಇದು ನನ್ನ ಕುಟುಂಬ ಸೇರಿದಂತೆ ಎಲ್ಲರಿಗೂ ಆಘಾತವಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಮಾಸ್ ಉಗ್ರರ ಸರ್ವನಾಶಕ್ಕೆ ರಾಮಸ್ವಾಮಿ ಕರೆ

ನವದೆಹಲಿ,ನ.9- ಹಮಾಸ್ ವಿರುದ್ಧ ಇಸ್ರೇಲ್‍ನ ಸರ್ವಾಂಗೀಣ ದಾಳಿಯನ್ನು ಬೆಂಬಲಿಸಿರುವ ಅಮೆರಿಕದ ಅಧ್ಯಕ್ಷೀಯ ಆಕಾಂಕ್ಷಿ ವಿವೇಕ್ ರಾಮಸ್ವಾಮಿ ಅವರು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ತನ್ನ ದಕ್ಷಿಣ ಗಡಿಯಲ್ಲಿ ಆ ಭಯೋತ್ಪಾದಕರನ್ನು ನಾಶಗೊಳಿಸಿ ಎಂದು ಕರೆ ನೀಡಿದ್ದಾರೆ.

ಭಾರತೀಯ-ಅಮೆರಿಕನ್ ವಾಣಿಜ್ಯೋದ್ಯಮಿ, ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಟ್ಯಾಗ್‍ನ ಭರವಸೆಯ ನಡುವೆ, ತಮ್ಮ ಪಕ್ಷದ ಮೂರನೇ ಅಧ್ಯಕ್ಷೀಯ ಚರ್ಚೆಯಲ್ಲಿ ಮಾತನಾಡುತ್ತಿದ್ದರು. ಕಳೆದ ಅಕ್ಟೋಬರ್ 7 ರಂದು ಹಮಾಸ್ ದಾಳಿಯಿಂದ ಪ್ರಚೋದಿತವಾದ ಯುದ್ಧದ ನಡುವೆ ನೆತನ್ಯಾಹುಗೆ ಏನು ಹೇಳುತ್ತೀರಿ ಎಂದು ಕೇಳಿದಾಗ, ನಾನು ಬೀಬಿಗೆ ಏನು ಹೇಳುತ್ತೇನೆ ಎಂದರೆ ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕು ಮತ್ತು ಜವಾಬ್ದಾರಿಯನ್ನು ಹೊಂದಿದೆ.

ತನ್ನ ನಿಲುವು ಸ್ಪಷ್ಟಪಡಿಸಲು ಭಾರತ ಸ್ವತಂತ್ರವಾಗಿದೆ : ಅಮೆರಿಕ

ನಾನು ಆ ಭಯೋತ್ಪಾದಕರನ್ನು ಸರ್ವನಾಶ ಮಾಡುವಂತೆ ಹೇಳುತ್ತೇನೆ ಅದೇ ರೀತಿ ನಾನು ಅಧ್ಯಕ್ಷರಾಗಿ ಆಯ್ಕೆಯಾದರೆ, ನಮ್ಮ ದಕ್ಷಿಣ ಗಡಿಯಲ್ಲಿ ಭಯೋತ್ಪಾದಕರಿಗೆ ಹೊಗೆ ಹಾಕುತ್ತೇನೆ ಎಂದಿದ್ದಾರೆ.

ಇತರ ಅಧ್ಯಕ್ಷೀಯ ಆಶಾವಾದಿಗಳು — ನಿಕ್ಕಿ ಹ್ಯಾಲಿ, ಟಿಮ್ ಸ್ಕಾಟ್, ರಾನ್ ಡಿಸಾಂಟಿಸ್ ಮತ್ತು ಕ್ರಿಸ್ ಕ್ರಿಸ್ಟಿ – ಹಮಾಸ್ ವಿರುದ್ಧ ಇಸ್ರೇಲ್ ಯುದ್ಧವನ್ನು ಬೆಂಬಲಿಸಿದರೆ, ರಾಮಸ್ವಾಮಿ ಅವರನ್ನು ನಿಯೋಕಾನ್ಸ್ ಎಂದು ಉಲ್ಲೇಖಿಸಿ ತಮ್ಮನ್ನು ತಾವು ಅಮೇರಿಕಾ ಫಸ್ಟ್ ಅಭ್ಯರ್ಥಿ ಎಂದು ಗುರುತಿಸಿಕೊಂಡರು.

ವಾಯಮಾಲಿನ್ಯ ತಡೆಗಟ್ಟಲು ನ.20 ರಂದು ನವದೆಹಲಿಯಲ್ಲಿ ಕೃತಕ ಮಳೆ

ನವದೆಹಲಿ,ನ.9- ನ್ಯಾಯಾಲಯ ಅನುಮತಿ ನೀಡಿದರೆ ಕಳೆದ ಒಂದು ವಾರದಿಂದ ಗಾಳಿಯ ಗುಣಮಟ್ಟದಲ್ಲಿ ತೀವ್ರ ಕುಸಿತದಿಂದ ಉಸಿರುಗಟ್ಟಿಸುತ್ತಿರುವ ದೆಹಲಿ ನಿವಾಸಿಗಳಿಗೆ ಪರಿಹಾರ ನೀಡಲು ಅರವಿಂದ್ ಕೇಜ್ರಿವಾಲ್ ಸರ್ಕಾರ ನ. 20 ಮತ್ತು 21 ರಂದು ಕೃತಕ ಮಳೆ ಸುರಿಸಲು ಮುಂದಾಗಿದೆ.

ನೆರೆಯ ರಾಜ್ಯಗಳಲ್ಲಿ ಸುಡುವ ಬೆಳೆಗಳ ಅವಶೇಷಗಳು ಮತ್ತು ವಾಹನಗಳ ಹೊರಸೂಸುವಿಕೆಯಂತಹ ಸ್ಥಳೀಯ ಅಂಶಗಳ ಸಂಯೋಜನೆಯಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟದ ಸೂಚ್ಯಂಕವು ಸತತ ಏಳನೆ ದಿನವೂ ಭಾರಿ ಕುಸಿತ ಕಂಡಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಮತ್ತು ಹಣಕಾಸು ಸಚಿವ ಅತಿಶಿ ಅವರು ಐಐಟಿ ಕಾನ್ಪುರದ ತಂಡದೊಂದಿಗೆ ಸಭೆ ನಡೆಸಿದರು, ಇದು ರಾಷ್ಟ್ರ ರಾಜಧಾನಿಯಲ್ಲಿ ವಾಯು ತುರ್ತುಸ್ಥಿತಿಯ ಮಧ್ಯೆ ಕೃತಕ ಮಳೆಯ ಕಾಗುಣಿತ ಸಹಾಯ ಮಾಡಬಹುದು ಎಂದು ಪ್ರಸ್ತಾಪಿಸಿದರು.

ದೆಹಲಿ ಸರ್ಕಾರ ಈಗ ಐಐಟಿ ತಂಡವನ್ನು ವಿವರವಾದ ಯೋಜನೆಯನ್ನು ಕೇಳಿದೆ. ಈ ಯೋಜನೆಯನ್ನು ಶುಕ್ರವಾರ ಸುಪ್ರೀಂ ಕೋರ್ಟ್‍ಗೆ ಸಲ್ಲಿಸಲಿದೆ. ದೆಹಲಿಯ ವಿಷಕಾರಿ ಗಾಳಿ ದಿನಗಳನ್ನು ಪರಿಹರಿಸಲು ತುರ್ತು ಕ್ರಮಗಳನ್ನು ಕೋರಿ ಸಲ್ಲಿಸಲಾದ ಅರ್ಜಿಗಳ ಗುಂಪನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ. ಸುಪ್ರೀಂ ಕೋರ್ಟ್ ಅನುಮತಿ ನೀಡಿದರೆ, ದೆಹಲಿ ಸರ್ಕಾರ ಮತ್ತು ಕೇಂದ್ರವು ಯೋಜನೆಯನ್ನು ಜಾರಿಗೆ ತರಲು ಕ್ರಮಗಳನ್ನು ತೆಗೆದುಕೊಳ್ಳುತ್ತದೆ.

ಕೃತಕ ಮಳೆ ಸೃಷ್ಟಿಸಲು ಕನಿಷ್ಠ ಶೇ.40ರಷ್ಟು ಮೋಡ ಕವಿದಿರುವುದು ಅಗತ್ಯ ಎಂದು ಐಐಟಿ ತಂಡ ಹೇಳಿದ್ದು, ನ.20-21ರಂದು ಮೋಡ ಕವಿದಿರುವ ಸಾಧ್ಯತೆ ಇದ್ದು, ಈ ಯೋಜನೆ ಜಾರಿಗೆ ಅನುಮತಿ ಸಿಕ್ಕರೆ, ನಾವು ಪ್ರಾಯೋಗಿಕ ಅಧ್ಯಯನವನ್ನು ನಡೆಸಬಹುದು ಎಂದು ಅವರು ಹೇಳಿದರು.

ಅಮೆರಿಕದಲ್ಲಿ ಇರಿತಕ್ಕೊಳಗಾಗಿದ್ದ ಭಾರತೀಯ ವಿದ್ಯಾರ್ಥಿ ವರಣ್ ಸಾವು

ಶುಕ್ರವಾರ ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆಯ ಸಮಯದಲ್ಲಿ, ನಾವು ಈ ಪ್ರಸ್ತಾಪವನ್ನು ಮುಂದಿಡುತ್ತೇವೆ ಇದರಿಂದ ನ್ಯಾಯಾಲಯವು ಅದನ್ನು ಪರಿಶೀಲಿಸಬಹುದು. ನ್ಯಾಯಾಲಯವು ಅನುಮತಿ ನೀಡಿದರೆ, ಅಗತ್ಯ ಅನುಮತಿಗಳನ್ನು ತೆಗೆದುಕೊಳ್ಳಲು ನಾವು ಕೇಂದ್ರದೊಂದಿಗೆ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.

ಸುಪ್ರೀಂ ಕೋರ್ಟ್ ಈ ಹಿಂದೆ ದೆಹಲಿಯಲ್ಲಿನ ಮಾಲಿನ್ಯವನ್ನು ತೀವ್ರವಾಗಿ ಗಮನಿಸಿತ್ತು ಮತ್ತು ಜನರ ಆರೋಗ್ಯದ ಕೊಲೆ ನಡುವೆ ರಾಜಕೀಯ ಯುದ್ಧವನ್ನು ಆಡಲು ಅನುಮತಿಸುವುದಿಲ್ಲ ಎಂದು ಹೇಳಿದೆ. ಪಂಜಾಬï, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ತಾನಕ್ಕೆ ಕೋರ್ಟು ಸುಡುವುದನ್ನು ತಕ್ಷಣವೇ ನಿಲ್ಲಿಸುವಂತೆ ನ್ಯಾಯಾಲಯ ಸೂಚಿಸಿತ್ತು.

ದೇಶ ವಿಭಜನೆಗೆ ಕಾಂಗ್ರೆಸ್ ಕಾರಣ ; ಯೋಗಿ

ನರಸಿಂಗ್‍ಪುರ, ನ.9- ದೇಶ ವಿಭಜನೆಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದ್ದಾರೆ. ಮಧ್ಯಪ್ರದೇಶದ ನರಸಿಂಗ್‍ಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್ ಅವರು, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೃಷ್ಟಿಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಹೇಳಿದರು.

ಕಾಂಗ್ರೆಸ್ ನಾಯಕರಿಗೆ ಅಧಿಕಾರದ ಅತಿಯಾದ ಆಸೆ ಇಲ್ಲದಿದ್ದರೆ ದೇಶ ಇಬ್ಭಾಗವಾಗುತ್ತಿರಲಿಲ್ಲ, ಒಂದಾಗುತ್ತಿರಲಿಲ್ಲ, 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ಕೂಡಲೇ ಸೋಮನಾಥನ ಪುನರುತ್ಥಾನದ ಕೆಲಸವನ್ನು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಮಾಡಿದ್ದರು. ಆಗಿನ ಪ್ರಧಾನಿ ಜವಾಹರ್ ಲಾಲ್ ನೆಹರು ಇದನ್ನು ವಿರೋಧಿಸಿದ್ದರು ಎಂದು ಅವರು ಹೇಳಿದರು.

ಮಧ್ಯಪ್ರದೇಶದಲ್ಲಿ ಬಿಜೆಪಿ ಸಾರ್ವಜನಿಕರೊಂದಿಗೆ ನಿಂತಿದೆ ಮತ್ತು ಕೇಂದ್ರ ಮಂತ್ರಿಗಳನ್ನು ಚುನಾವಣೆಯಲ್ಲಿ ನಿಲ್ಲಿಸಿದ ನಂತರ ಅವರ ಕಾರ್ಯಗಳಲ್ಲಿ ಇದು ಚೆನ್ನಾಗಿ ಪ್ರತಿಫಲಿಸುತ್ತದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಹೇಳಿದರು.

ಬಿಬಿಎಂಪಿಯಲ್ಲಿ 10 ಸಾವಿರ ಕೋಟಿ ರೂ. ಅವ್ಯವಹಾರ: ಪ್ರಧಾನಿಗೆ ದೂರು ಸಲ್ಲಿಕೆ

ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿಯು ಸಾರ್ವಜನಿಕರಿಗೆ ನಮ್ಮ ಪ್ರತಿಯೊಬ್ಬ ಕಾರ್ಯಕರ್ತರು ದಟ್ಟವಾಗಿ ನಿಮ್ಮ ಪರವಾಗಿ ನಿಲ್ಲುತ್ತಾರೆ ಎಂದು ಹೇಳಿದರು. ಬಿಜೆಪಿ ನಾಯಕ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‍ನ ಅರಾಜಕತೆ ಮತ್ತು ಗೂಂಡಾಗಿರಿಯ ವಿರುದ್ಧ ಬರಿಗಾಲಿನ ಹೋರಾಟದಿಂದ ಗಟ್ಟಿಯಾದ ಯೋಧ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಜನರು ಈಗಾಗಲೇ ಪ್ರಹ್ಲಾದ್ ಜೀ ಅವರನ್ನು ನಾಯಕ ಎಂದು ಪರಿಗಣಿಸಿದ್ದಾರೆ ಮತ್ತು ಅವರ ಹೋರಾಟಗಳಲ್ಲಿ ನಿರಂತರವಾಗಿ ಕೆಲಸ ಮಾಡಲು ಸಿದ್ಧರಾಗಿದ್ದಾರೆ ಎಂಬುದಕ್ಕೆ ಇಲ್ಲಿ ನೆರೆದಿರುವ ಸಹಸ್ರಾರು ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.