Home Blog Page 1839

ದೀಪಾವಳಿ ಬೋನಸ್ ರೂಪದಲ್ಲಿ ನೌಕರರಿಗೆ ಬೈಕ್ ಉಡುಗೊರೆ ನೀಡಿದ ಮಾಲೀಕ

ಕೊಯಮತ್ತೂರು, ನ.5- ತನ್ನ ಯಶಸ್ಸಿಗೆ ಕಾರಣರಾದ ಕಾರ್ಮಿಕರಿಗೆ ದೀಪಾವಳಿ ಹಬ್ಬದ ಬೋನಸ್ ರೂಪದಲ್ಲಿ ದುಬಾರಿ ಬೆಲೆಯ ಬೈಕ್ಗಳು ಹಾಗೂ ಎಲೆಕ್ಟ್ರಿಕ್ ಉಪಕರಣಗಳನ್ನು ಮಾಲೀಕರೊಬ್ಬರು ಉಡುಗೊರೆ ನೀಡಿರುವ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ. ತ್ರಿಪುರದ ವಂಜಿಪಾಳ್ಯಮ್ ನ ಪಿ. ಶಿವಕುಮಾರ್ ಅವರೇ ತಮ್ಮ ನೌಕರರಿಗೆ ದುಬಾರಿ ಮೌಲ್ಯದ ಉಡುಗೊರೆ ನೀಡಿರುವ ಮಾಲೀಕ ರಾಗಿದ್ದಾರೆ.

ಶಿವಕುಮಾರ್ (42) ಅವರು ನೀಲಗಿರಿಸ್ನಲ್ಲಿ 190 ಎಕರೆ ಟೀ ಎಸ್ಟೇಟ್, ಹಾಗೂ ಕೊಟಾಗಿರಿ ಬಳಿ 315 ಎಕರೆ ಜಮೀನಿನಲ್ಲಿ ಹೂವು, ತರಾಕಾರಿ ಹಾಗೂ ಇನ್ನಿತರ ಕೃಷಿ ಸಂಬಂತ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಅವರ ಬಳಿ 2 ದಶಕಕ್ಕೂ ಹೆಚ್ಚು ಕಾಲದಿಂದ 627 ಕಾರ್ಮಿಕರು ಕೆಲಸ ಮಾಡುತ್ತಿ ದ್ದಾರೆ.

1 ಶತಕೋಟಿ ಡಾಲರ್‌ಗಿಂತ ಹೆಚ್ಚು ಆದಾಯ ಕಳೆದುಕೊಂಡ ಅಫ್ಘಾನಿಸ್ತಾನ

ಶಿವಕುಮಾರ್ ಅವರಿಗೆ ತಂದೆಯ ಮೂಲದಿಂದ ಬಂದ ಗಾರ್ಮೆಂಟ್ಸ್ ಅನ್ನು ನಡೆಸುತ್ತಿದ್ದಾರೆ. ಆರಂಭದಲ್ಲಿ ಶಿವಕುಮಾರ್ ಅವರ ಬಳಿ ಕೇವಲ 60 ಎಕರೆ ಭೂಮಿ ಇತ್ತು. ಆದರೆ ನೌಕರರು ಹಾಗೂ ಕಾರ್ಮಿಕರ ಶ್ರಮದ ಫಲದಿಂದ ತಾನು ಸಾಕಷ್ಟು ಭೂಮಿ ಹಾಗೂ ಹಣವನ್ನು ಗಳಿಸಿದ್ದರು. ತನ್ನ ಏಳಿಗೆಗೆ ಕಾರಣರಾದ ನೌಕರರನ್ನು ಪ್ರೋತ್ಸಾಹಿಸುವ ಸಲುವಾಗಿ ಶಿವಕುಮಾರ್ ಅವರು ನೌಕರರು ಹಾಗೂ ಕಾರ್ಮಿಕರಿಗೆ ಬೋನಸ್ ನೀಡುವುದರ ಜೊತೆಗೆ ಮನೆಗೆ ಬೇಕಾಗುವ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೂಡ ಉಡುಗೊರೆ ರೂಪದಲ್ಲಿ ನೀಡುತ್ತಿದ್ದರು.

ನೌಕರರಿಗೆ ದುಬಾರಿ ಬೈಕ್ ನೀಡಿದ ಮಾಲೀಕ:
ಶಿವಕುಮಾರ್ ಅವರು ನೌಕರರನ್ನು ಮತ್ತಷ್ಟು ಉತ್ತೇಜಿಸುವ ಸಲುವಾಗಿ ಈ ವರ್ಷದ ದೀಪಾವಳಿ ಹಬ್ಬದ ಉಡುಗೊರೆ ರೂಪದಲ್ಲಿ ಮ್ಯಾನೇಜರ್, ಸೂಪರ್ವೈಸರ್, ಸ್ಟೋರ್ ಕೀಪರ್, ಕ್ಯಾಷಿಯರ್, ಚಾಲಕರು ಸೇರಿದಂತೆ 15 ಜನರಿಗೆ 2 ಲಕ್ಷ ಮೌಲ್ಯದ ದುಬಾರಿ ಬೈಕ್ಗಳು ಹಾಗೂ ಉಳಿದ ನೌಕರರು ಹಾಗೂ ಕಾರ್ಮಿಕರಿಗೆ ಎಲ್ಇಡಿ ಟಿವಿಗಳು ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ.

`ನನ್ನ ಬೆಳವಣಿಗೆಗೆ ನೌಕರರು ಸಾಕಷ್ಟು ಶ್ರಮ ವಹಿಸಿದ್ದಾರೆ ಆದ್ದರಿಂ ದಲೇ ಅವರನ್ನು ಪ್ರೋತ್ಸಾಹಿಸುವ ಸಲುವಾಗಿ ಅವರಿಗೆ ಪ್ರತಿ ವರ್ಷ ಬೋನಸ್ ಜೊತೆಗೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಉಡುಗೊರೆ ರೂಪದಲ್ಲಿ ನೀಡುತ್ತಿದ್ದೇನೆ. ಈ ಬಾರಿ 15 ನೌಕರರಿಗೆ 2 ಲಕ್ಷ ಮೌಲ್ಯದ ಬೈಕ್ಗಳು ಹಾಗೂ ಉಳಿದ ನೌಕರರಿಗೆ ಎಲ್ಸಿಟಿ ಟಿವಿಗಳು ಹಾಗೂ ಹಲವು ದುಬಾರಿ ಎಲೆಕ್ಟ್ರಾನಿಕ್ಸ್ ವಸ್ತುಗಳ ಜೊತೆಗೆ ಶೇ. 18ರಷ್ಟು ಬೋನಸ್ ಕೊಟ್ಟಿದ್ದೇನೆ’ ಎಂದು ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮಕ್ಕಳಿಗೆ ಉಚಿತ ಶಿಕ್ಷಣ:
ತನ್ನಲ್ಲಿ ಕೆಲಸ ಮಾಡುವ ನೌಕರರ ಮಕ್ಕಳಿಗೆ ಇಂಗ್ಲೀಷ್ ಶಾಲೆಯ ಸೌಲಭ್ಯ ಸಿಗಲಿ ಎಂಬ ಉದ್ದೇಶದಿಂದ ಕಳೆದ 3 ವರ್ಷಗಳಿಂದ ನಲಗೊಂಡ ಪಂಚಾಯಿತಿ ಪ್ರಾಥಮಿಕ ಶಾಲೆಯ ಪಕ್ಕ ಶಾಲೆಯೊಂದನ್ನು ತೆರೆದಿದ್ದಾರೆ. ಈ ಶಾಲೆಯಲ್ಲಿ 320 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಎಸ್ಟೇಟ್ನಲ್ಲಿ ಕೆಲಸ ಮಾಡುವ ನೌಕರರ 80 ಮಕ್ಕಳು ಕೂಡ ವಿದ್ಯಾಭ್ಯಾಸ ಮಾಡುತ್ತಿದ್ದು, ಅವರ ಶಿಕ್ಷಣದ ವೆಚ್ಚವನ್ನು ತಾವೇ ಬರಿಸುತ್ತಿದ್ದಾರೆ. ಅಲ್ಲದೆ ತನ್ನಲ್ಲಿ ಕೆಲಸ ಮಾಡುವವರ ನೌಕರರು ಹಾಗೂ ಕಾರ್ಮಿಕರ ಆರೋಗ್ಯದ ದುಬಾರಿ ವೆಚ್ಚವನ್ನು ಕೂಡ ಶಿವಕುಮಾರ್ ಭರಿಸುತ್ತಿದ್ದಾರೆ.

ದತ್ತಪೀಠವನ್ನು ಹಿಂದೂ ಪೂಜಾ ಕೇಂದ್ರವಾಗಿ ಉಳಿಸಲು ಸಿಎಂ ಮಧ್ಯಸ್ಥಿಕೆಗೆ ಮುತಾಲಿಕ್ ಆಗ್ರಹ

ಚಿಕ್ಕಮಗಳೂರು,ನ.5-  ತಾಲೂಕಿನ ದತ್ತಪೀಠ ಹಿಂದೂಗಳ ಪೂಜಾ ಕೇಂದ್ರವಾಗಿ ಉಳಿಸುವಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಸ್ಥಿಕೆ ವಹಿಸಬೇಕೆಂದು ರಾಷ್ಟ್ರೀಯ ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕರೆ ನೀಡಿದರು.20ನೇ ವರ್ಷದ ದತ್ತಮಾಲಾ ಅಭಿಯಾನದ ಅಂಗವಾಗಿ ನಗರದ ಶಂಕರ ಮಠದ ಮುಂಭಾಗ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು,  ಎಲ್ಲಾ ದಾಖಲೆಗಳು ಹಾಗೂ  ಸರ್ಕಾರಿ ದಾಖಲೆಗಳ ಪ್ರಕಾರ ದತ್ತಪೀಠ ಹಿಂದೂಗಳಿಗೆ ಸೇರಿದ್ದಾಗಿದೆ. ಈಗಾಗಲೇ ಇಬ್ಬರೂ ಹಿಂದು ಅರ್ಚಕರ ನೇಮಕಗೊಂಡು ತ್ರಿಕಾಲ ಪೂಜೆ ನಡೆಯುತ್ತಿದೆ ಎಂದರು.

ಮುಸ್ಲಿಮರ ಪವಿತ್ರ ಗ್ರಂಥ ಖುರಾನ್ ನ ಪ್ರಕಾರ ವಿವಾದವಿರುವ ಸ್ಥಳದಲ್ಲಿ ದರ್ಗಾ ಪ್ರಾರ್ಥನೆ ಸಲ್ಲಿಸುವಂತಿಲ್ಲ ಹಾಗಾಗಿ   ದತ್ತ ಪೀಠದಿಂದ ಸ್ವಲ್ಪವೇ ದೂರದಲ್ಲಿರುವ  ನಾಗೇನಹಳ್ಳಿ ಯಲ್ಲಿ ದರ್ಗಾ ಇದ್ದು ಅಲ್ಲಿ ಉರುಸ್ ಮಾಡಿಕೊಳ್ಳಲು ನಮ್ಮ ಯಾವುದೇ ಅಭ್ಯಂತರ ಇಲ್ಲ  ದತ್ತ ಪೀಠದ ಆವರಣದಲ್ಲಿರುವ ಗೋರಿಗಳನ್ನ ಸ್ಥಳಾಂತರಿಸಿ ಸಂಪೂರ್ಣ ಹಿಂದೂ ಭಕ್ತರ ಶ್ರದ್ಧಾ ಕೇಂದ್ರವಾಗಿ ಪರಿವರ್ತಿಸಲು ಹಿಂದೂ ಮುಸ್ಲಿಂ ಮುಖಂಡರನ್ನು ಚಿಕ್ಕಮಗಳೂರಿನಲ್ಲಿ ಸಭೆ ಸೇರಿಸಿ ಸೌಹಾರ್ದವಾಗಿ   ಬಗೆಹರಿಸಲು  ಮುಖ್ಯಮಂತ್ರಿಗಳು   ಮಧ್ಯಸ್ಥಿಕೆ ವಹಿಸಬೇಕೆಂದು ಮುಖ್ಯಮಂತ್ರಿಗಳನ್ನು  ಒತ್ತಾಯಿಸಿದರು.

 ಬಿಗಿ ಪೊಲೀಸ್ ಸರ್ಪಗಾವಲಿನಲ್ಲಿ  ಶೋಭ ಯಾತ್ರೆ

 ದತ್ತಮಾಲಾ ಅಭಿಯಾನದ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದು ಬಸ್ತ್‍ನೊಂದಿಗೆ ಶೋಭ ಯಾತ್ರೆ ಹಾಗೂ ದತ್ತಪೀಠದಲ್ಲಿ ದತ್ತಮಾಲಾ ವಿಸರ್ಜನೆ ನಡೆಯಿತು.  ದತ್ತ ಮಾಲೆ ಧರಿಸಿದ ನೂರಾರು ಕಾರ್ಯಕರ್ತರು ಹಾಗೂ ದತ್ತ ಭಕ್ತರು ಶೋಭಾ   ಯಾತ್ರೆಯಲ್ಲಿ ಪಾಲ್ಗೊಂಡಿದ್ದರು ರಾಜ್ಯದ ಹುಬ್ಬಳ್ಳಿ, ಬೆಳಗಾಂ, ಬಾಗಲಕೋಟೆ, ಕೋಲಾರ, ಉಡುಪಿ, ಮಂಗಳೂರು, ಚಿಕ್ಕಮಗಳೂರು, ಸೇರಿದಂತೆ ವಿವಿಧ   ಜಿಲ್ಲೆಗಳಿಂದ ಹಾಗೂ ಜಿಲ್ಲೆಯ  ತಾಲೂಕುಗಳಿಂದ ದತ್ತ ಮಾಲೆ ಧರಿಸಿ  ದತ್ತಮಾಲಾಧಾರಿಗಳು ಯಾತ್ರೆಯಲ್ಲಿ ಭಾಗವಹಿಸಿದ್ದರು.

ನಗರದ ಶಂಕರ ಮಠದಿಂದ ಹೊರಟ ಶೋಭಾ ಯಾತ್ರೆಯಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ರಾಜ್ಯಾಧ್ಯಕ್ಷ  ಗಂಗಾಧರ ಕುಲಕರ್ಣಿ, ಚಿಕ್ಕಮಗಳೂರು ವಿಭಾಗದ ಅಧ್ಯಕ್ಷ ರಂಜಿತ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ನವೀನಾ  ರಂಜಿತ್, ಜೇವರ್ಗಿ ಮಠದ ಸಿದ್ದಲಿಂಗ ಸ್ವಾಮೀಜಿ, ಅಲ್ಲಂ ಪುರದ ರಾಜೇಂದ್ರ ಸೇರಿದಂತೆ ಪಾಲ್ಗೊಂಡಿದ್ದರು.

ಸಿಎಂ ಕುರ್ಚಿ ಕಿತ್ತಾಟಕ್ಕೆ ಮತ್ತೊಂದು ಟ್ವಿಸ್ಟ್ ಕೊಟ್ಟ ಡಿಕೆಶಿ

 ಶಂಕರ್ ಮಠದಿಂದ ಹೊರಟ ಮೆರವಣಿಗೆ ಬಸವನಹಳ್ಳಿ ಮುಖ್ಯ  ರಸ್ತೆಯ ಮೂಲಕ ಆಜಾದ್ ಪಾರ್ಕ್ ತಲುಪಿತು. ಬೆಳಿಗ್ಗೆನಿಂದ ಸಂಜೆವರೆಗೂ ಬಸವನಹಳ್ಳಿ ಮುಖ್ಯರಸ್ತೆ ಹಾಗೂ ಎಂಜಿ ರಸ್ತೆಯಲ್ಲಿ ವಾಹನಗಳ ನಿಲುಗಡೆ ಹಾಗೂ ಸಂಚಾರ ನಿಷೇಸಲಾಗಿತ್ತು .ಎರಡು ರಸ್ತೆಗಳ ಅಡ್ಡ ರಸ್ತೆಗಳಿಗೆ ಬ್ಯಾರಿಕೆಡ್ ಹಾಕಲಾಗಿತ್ತು. ಶೋಭ ಯಾತ್ರೆ ಯುದ್ಧಕ್ಕೂ ದತ್ತ ಭಕ್ತರು ಭಜನೆ ಹಾಗೂ ಜಯ ಘೋಷಗಳನ್ನು ಕೂಗಿದರು. ಮೆರವಣಿಗೆಯಲ್ಲಿ ಶ್ರೀರಾಮನ ಸ್ತಬ್ಧಚಿತ್ರ ಗಮನ ಸೆಳೆಯಿತು.

 ಆಜಾದ್ ಪಾರ್ಕಿನಿಂದ ವಿವಿಧ ವಾಹನಗಳಲ್ಲಿ ದತ್ತಪೀಠಕ್ಕೆ ತೆರಳಿದ ದತ್ತ ಭಕ್ತರು ಜಿಲ್ಲಾಡಳಿತ ವ್ಯವಸ್ಥೆ ಮಾಡಿರುವ ಬ್ಯಾರಿಕ್ಯಾಡ್‍ನಲ್ಲಿ ಸಾಲಿನಲ್ಲಿ ನಿಂತು ದತ್ತ ಗುಹೆ ಪ್ರವೇಶಿಸಿ ದತ್ತಪಾದಿಕೆಗಳ ದರ್ಶನ ಪಡೆದರು.

ದತ್ತಪೀಠ ಮುಳ್ಳಯ್ಯನಗಿರಿ ಸೀತಾಳಯನ್ ಗಿರಿ, ಹೊನ್ನಮ್ಮನ ಹಳ್ಳ, ಗಾಳಿಕೆರೆ ಹಾಗೂ ಮಾಣಿಕ್ಯದಾರ ವಿವಿಧ ಪ್ರದೇಶಗಳಿಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಸಲಾಗಿತ್ತು. ಅತ್ತಿ ಗುಂಡಿ ಮಾಣಿಕ್ಯದಾರ ಹಾಗೂ ನಗರದಲ್ಲಿ ಮೆರವಣಿಗೆ ಹೋಗುವ ಸೂಕ್ಷ್ಮ ಪ್ರದೇಶಗಳಲ್ಲಿ ಡ್ರೋನ್ ಕ್ಯಾಮೆರಾ ಕಾರ್ಯಾಚರಣೆ ಮಾಡಲಾಗಿತ್ತು.

“ಕಾಂಗ್ರೆಸ್‍ನ ಒಬ್ಬ ಶಾಸಕನನ್ನು ಸೆಳೆಯಲೆತ್ನಿಸಿದರೆ ಬಿಜೆಪಿ-ಜೆಡಿಎಸ್‍ನಿಂದ 25 ಶಾಸಕರು ಕಾಂಗ್ರೆಸ್‍ಗೆ ಬರ್ತಾರೆ”

ಬೆಂಗಳೂರು,ನ.5- ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್‍ನ ಒಬ್ಬ ಶಾಸಕನನ್ನೂ ಸೆಳೆಯಲು ಬಿಜೆಪಿಯವರು ಯತ್ನಿಸಿದರೆ ಬಿಜೆಪಿ-ಜೆಡಿಎಸ್‍ನಿಂದ 25 ಶಾಸಕರು ಕಾಂಗ್ರೆಸ್‍ಗೆ ಬರಲು ಸಿದ್ದರಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲೂ ಬರ ಇದೆ. ರಾಜ್ಯ ಬಿಜೆಪಿಯಲ್ಲೂ ನಾಯಕತ್ವದ ಬರ ಇದೆ ಎಂದು ಲೇವಡಿ ಮಾಡಿದ್ದಾರೆ.

ವಿಧಾನಸಭೆ ಚುನಾವಣೆ ನಡೆದು ಆರು ತಿಂಗಳಾಗಿದೆ. ಬಜೆಟ್ ಅವೇಶನ ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಮುಗಿದಿವೆ. ಆದರೆ ಈವರೆಗೂ ವಿಧಾನಸಭೆ-ವಿಧಾನಪರಿಷತ್‍ನ ವಿರೋಧ ಪಕ್ಷದ ನಾಯಕರ ಆಯ್ಕೆಯಾಗಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರನ್ನೇ ನೇಮಿಸಲಾಗಿಲ್ಲ. ಹೈಕಮಾಂಡ್ ನಾಯಕರು ರಾಜ್ಯದ ಬಿಜೆಪಿಗರನ್ನು ಹತ್ತಿರಕ್ಕೂ ಸೇರಿಸುತ್ತಿಲ್ಲ ಎಂದು ಲೇವಡಿ ಮಾಡಿದರು.

ಬಿಜೆಪಿಯಲ್ಲಿ ನಾಯಕತ್ವದ ದಾರಿದ್ರ್ಯ ಇದೆ ಎಂಬುದನ್ನು ಒಪ್ಪಿಕೊಳ್ಳಲಾಗಿದೆ. ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲು ಹೇಳಲಾಗುತ್ತಿದೆ. ಬಿಜೆಪಿಯ ಬಸವರಾಜ ಬೊಮ್ಮಾಯಿ, ಅಶ್ವಥ್ ನಾರಾಯಣ, ಬಸನಗೌಡ ಪಾಟೀಲ್ ಯತ್ನಾಳ್, ವಿ.ಸುನೀಲ್ ಕುಮಾರ್ ಸೇರಿದಂತೆ ಎಲ್ಲರೂ ಅಸಮರ್ಥರೇ.ವಿರೋಧ ಪಕ್ಷದ ನಾಯಕನಾಗಲು ಇವರ್ಯಾರು ಲಾಯಕ್ಕಿಲ್ಲವೇ ಎಂದು ಪ್ರಶ್ನಿಸಿದರು.

1 ಶತಕೋಟಿ ಡಾಲರ್‌ಗಿಂತ ಹೆಚ್ಚು ಆದಾಯ ಕಳೆದುಕೊಂಡ ಅಫ್ಘಾನಿಸ್ತಾನ

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವುದಾದರೆ ಜೆಡಿಎಸ್‍ನ 19 ಶಾಸಕರು ಬೇಷರತ್ ಬೆಂಬಲ ನೀಡಲಿದ್ದಾರೆ ಎಂಬ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ನಾಟಕೀಯವಾಗಿದೆ. ಅವರ ಹೇಳಿಕೆಗೆ ಅವರೇ ಸ್ಪಷ್ಟನೆ ನೀಡಬೇಕು. ನಮ್ಮಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿರುವ ಅವರು ಯಶಸ್ವಿಯಾಗುವುದಿಲ್ಲ ಎಂದರು.

ಕಾಂಗ್ರೆಸ್‍ನ 50 ಶಾಸಕರು ಬಿಜೆಪಿ ಹೈಕಮಾಂಡ್ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಮಾಜಿ ಶಾಸಕ ಮುರುಗೇಶ್ ನಿರಾಣಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ್, ನಿರಾಣಿ ಸೋತು ಸುಣ್ಣವಾಗಿದ್ದಾರೆ. ಈಗ ಅವರು ಶಾಸಕರೂ ಕೂಡ ಅಲ್ಲ. ನಮ್ಮ ಶಾಸಕರ ಬಗ್ಗೆ ಅವರಿಗೇನು ಗೊತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.

ಮೊದಲು ಅವರ ಮನೆಯನ್ನು ನೋಡಿಕೊಳ್ಳಲಿ. ನಮ್ಮ ಪಕ್ಷದ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ನಿಲ್ಲಿಸಲಿ. ಕಾಂಗ್ರೆಸ್‍ನ ಒಬ್ಬ ಶಾಸಕರನ್ನು ಸೆಳೆಯಲು ಯತ್ನಿಸಿದರೆ, ನಮ್ಮ ಕಡೆಗೆ ಅವರಿಂದ ಐದಾರು ಮಂದಿ ಬರುತ್ತಾರೆ. ಈಗಾಗಲೇ ಜೆಡಿಎಸ್-ಬಿಜೆಪಿಯ 25 ಶಾಸಕರು ಕಾಂಗ್ರೆಸ್‍ಗೆ ಬರಲು ತಯಾರಿರುವುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್‍ನ 60 ಮಂದಿ ಶಾಸಕರನ್ನು ಸೆಳೆಯುವುದು ಸರಳವಲ್ಲ,ಅಸಾಧ್ಯ ಎಂದರು.

ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ 20 ಕ್ಷೇತ್ರಗಳನ್ನು ಗೆಲ್ಲಬೇಕಿದೆ ಎಂದು ಹೈಕಮಾಂಡ್ ನಮಗೆ ಗುರಿ ನಿಗದಿ ಮಾಡಿದೆ. ಕನಿಷ್ಟ 18ರಿಂದ 20 ಶಾಸಕರನ್ನು ಗೆಲ್ಲಲು ನಾವು ಕೂಡ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಸಚಿವರ ನೇತೃತ್ವದ ವೀಕ್ಷಕರ ಸಮಿತಿಗಳು ಲೋಕಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡುತ್ತಿವೆ ಎಂದು ಹೇಳಿದರು.

ಬಿಜೆಪಿಯವರು ಬರ ಅಧ್ಯಯನ ಮಾಡುವ ಬದಲು ದೆಹಲಿಗೆ ಹೋಗಿ ಪ್ರಧಾನಿಯವರನ್ನು ಭೇಟಿ ಮಾಡಿ ರಾಜ್ಯಕ್ಕೆ ಹೆಚ್ಚಿನ ಅನುದಾನ ಕೊಡಿಸಲು ಪ್ರಯತ್ನ ಮಾಡಲಿ. ಕೇಂದ್ರ ಸರ್ಕಾರ ಎನ್‍ಡಿಆರ್‍ಎಫ್‍ನಡಿ ನೀಡುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಉದಾಹರಣೆಗೆ ವಿಜಯಪುರ ಜಿಲ್ಲೆಯಲ್ಲಿ 7800 ಕೋಟಿ ರೂ. ಬೆಳೆ ನಷ್ಟವಾಗಿದೆ. ಕೇಂದ್ರ ನೀಡುವ ಪರಿಹಾರ 480ರಿಂದ 500 ಕೋಟಿ ರೂ. ಇದು ಯಾವುದಕ್ಕೂ ಸಾಲುವುದಿಲ್ಲ.

ಕನಿಷ್ಟ ಅರ್ಧದಷ್ಟಾದರೂ ಪರಿಹಾರ ಕೊಡಬೇಕು. ಎನ್‍ಡಿಆರ್‍ಎಫ್‍ನ ನಿಯಮಾವಳಿಗಳನ್ನು ಪರಿಷ್ಕರಣೆ ಮಾಡುವಂತೆ ಮುಖ್ಯಮಂತ್ರಿಯವರ ಮೂರು ತಿಂಗಳಿಂದಲೂ ಕೇಂದ್ರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ರಾಜ್ಯ ಬಿಜೆಪಿಗರು ಮೊದಲು ಆ ಕಡೆ ಗಮನಹರಿಸಲಿ ಎಂದು ಹೇಳಿದರು.

ಮಥುರಾದಲ್ಲಿ ಪಟಾಕಿ ಮಾರಾಟ ಮತ್ತು ಸಿಡಿಸುವುದು ನಿಷೇಧ

ಮಥುರಾ(ಯುಪಿ), ನ.5- ದೀಪಾವಳಿ ಹಿನ್ನಲೆಯಲ್ಲಿ ಕೃಷ್ಣ ಜನ್ಮಸ್ಥಾನ ದೇವಸ್ಥಾನ ಮತ್ತು ಪಕ್ಕದ ಶಾಹಿ ಈದ್ಗಾ ಮಸೀದಿಯ ಸುತ್ತಮುತ್ತಲಿನ ಕೆಂಪು ಮತ್ತು ಹಳದಿ ವಲಯಗಳಲ್ಲಿ ಪಟಾಕಿ ಸಂಗ್ರಹ, ಮಾರಾಟ ಮತ್ತು ಸಿಡಿಸುವುದನ್ನು ನಿಷೇಸಲಾಗಿದೆ ಎಂದು ಮಥುರಾ ಜಿಲ್ಲಾಡಳಿತ ತಿಳಿಸಿದೆ.

ಎರಡೂ ದೇವಾಲಯಗಳು 13.37 ಎಕರೆ ಪ್ರದೇಶದಲ್ಲಿ ಕೆಂಪು ವಲಯದಲ್ಲಿವೆ. ಆದರೆ ಅದರ ಹೊರಗೆ 20 ಎಕರೆ ಪ್ರದೇಶವು ಗೋವಿಂದನಗರ ಮತ್ತು ಜಗನ್ನಾಥಪುರಿ ಮುಂತಾದ ಪ್ರದೇಶಗಳನ್ನು ಒಳಗೊಂಡಿರುವ ಹಳದಿ ವಲಯವಾಗಿದೆ. ನಗರದ ಉಳಿದ ಭಾಗಗಳನ್ನು ಹಸಿರು ವಲಯ ಎಂದು ಗುರುತಿಸಲಾಗಿದೆ.

ಸಿಎಂ ಕುರ್ಚಿ ಕಿತ್ತಾಟಕ್ಕೆ ಮತ್ತೊಂದು ಟ್ವಿಸ್ಟ್ ಕೊಟ್ಟ ಡಿಕೆಶಿ

ಕೃಷ್ಣ ಜನ್ಮಸ್ಥಾನ ಮತ್ತು ಶಾಹಿ ಈದ್ಗಾ ಭದ್ರತೆಯ ದೃಷ್ಟಿಯಿಂದ ಹಿಂದಿನ ವರ್ಷದಂತೆ ಈ ವರ್ಷವೂ ದೇವಾಲಯ ಮತ್ತು ಮಸೀದಿಯ ಕೆಂಪು ಮತ್ತು ಹಳದಿ ವಲಯಗಳಲ್ಲಿ ಪಟಾಕಿ ಅಂಗಡಿಗಳನ್ನು ತೆರೆಯಲು ಅನುಮತಿಸಲಾಗುವುದಿಲ್ಲ ಎಂದು ನಗರ ಮ್ಯಾಜಿಸ್ಟ್ರೇಟ್ ಕಚೇರಿ ತಿಳಿಸಿದೆ.

ದೀಪಾವಳಿ ಸಂದರ್ಭದಲ್ಲಿ ದೇವಾಲಯಕ್ಕೆ ಭೇಟಿ ನೀಡುವವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಅಕಾರಿಗಳು ತಿಳಿಸಿದ್ದಾರೆ. ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದೆ ಮತ್ತು ದೀಪಾವಳಿ ನಂತರವೂ ಜಾರಿಯಲ್ಲಿರುತ್ತದೆ ಎಂದು ಅವರು ಹೇಳಿದರು.

1 ಶತಕೋಟಿ ಡಾಲರ್‌ಗಿಂತ ಹೆಚ್ಚು ಆದಾಯ ಕಳೆದುಕೊಂಡ ಅಫ್ಘಾನಿಸ್ತಾನ

ಇಸ್ಲಾಮಾಬಾದ್, ನ.5- ತಾಲಿಬಾನ್ ಗಸಗಸೆ ಕೃಷಿಯನ್ನು ನಿಷೇಧಿಸಿದ ನಂತರ ಅಫೀಮು ಮಾರಾಟದಿಂದ ಅಫ್ಘಾನಿಸ್ತಾನದ ರೈತರು ಒಂದು ಶತಕೋಟಿ ಡಾಲರ್‍ಗಿಂತ ಹೆಚ್ಚಿನ ಆದಾಯ ಕಳೆದುಕೊಂಡಿದ್ದಾರೆ ಎಂದು ಯುಎನ್ ಡ್ರಗ್ಸ್ ಏಜೆನ್ಸಿಯ ವರದಿ ಮಾಡಿದೆ.ಕಳೆದ ಆಗಸ್ಟ್ 2021ರಲ್ಲಿ ತಾಲಿಬಾನ್ ಅಕಾರವನ್ನು ವಶಪಡಿಸಿಕೊಂಡಾಗ ಆಫ್ಘಾನಿಸ್ತಾನ್ ವಿಶ್ವದ ಅತಿದೊಡ್ಡ ಅಫೀಮು ಉತ್ಪಾದಕ ಮತ್ತು ಯುರೋಪ್ ಮತ್ತು ಏಷ್ಯಾದಲ್ಲಿ ಹೆರಾಯಿನ್‍ಗೆ ಪ್ರಮುಖ ಮೂಲವಾಗಿತ್ತು.

ತಾಲಿಬಾನ್ ದೇಶದ ಔಷಧ ಕೃಷಿ ಉದ್ಯಮವನ್ನು ತೊಡೆದುಹಾಕಲು ಪ್ರತಿಜ್ಞೆ ಮಾಡಿತ್ತು. ಏಪ್ರಿಲ್ 2022ರಲ್ಲಿ ಔಪಚಾರಿಕ ನಿಷೇಧ ವಿಧಿಸಿದ್ದರಿಂದ ನೂರಾರು ಸಾವಿರ ರೈತರು, ದಿನಗೂಲಿ ನೌಕರರು ಬೆಳೆಯಿಂದ ಬರುವ ಆದಾಯವನ್ನು ಅವಲಂಬಿಸಿದ್ದಾರೆ. ನಿಷೇಧದ ನಂತರ ಅಫೀಮು ಕೃಷಿಯು ಶೇಕಡಾ 95ರಷ್ಟು ಕುಸಿದಿದೆ ಎಂದು ಡ್ರಗ್ಸ್ ಮತ್ತು ಕ್ರೈಮ್ ಕುರಿತ ಯುಎನ್ ಕಚೇರಿಯ ವರದಿ ತಿಳಿಸಿದೆ.

2023ರವರೆಗೆ ಅಫ್ಘಾನಿಸ್ತಾನದ ಓಪಿಯೇಟ್ ರಫ್ತುಗಳ ಮೌಲ್ಯವು ಅದರ ಕಾನೂನು ರಫ್ತುಗಳ ಮೌಲ್ಯವನ್ನು ಆಗಾಗ್ಗೆ ಮೀರಿಸುತ್ತದೆ. ಅಫೀಮು ಆರ್ಥಿಕತೆಯ ಸಂಕುಚಿತವು ದೇಶಕ್ಕೆ ದೂರಗಾಮಿ ಬಲವಾದ ಪರಿಣಾಮಗಳನ್ನು ಉಂಟುಮಾಡುವ ನಿರೀಕ್ಷೆಯಿದೆ ಎಂದು ಯುಎನ್ ಅಧಿಕಾರಿಗಳು ಹೇಳಿದ್ದಾರೆ.

ಸಿಎಂ ಕುರ್ಚಿ ಕಿತ್ತಾಟಕ್ಕೆ ಮತ್ತೊಂದು ಟ್ವಿಸ್ಟ್ ಕೊಟ್ಟ ಡಿಕೆಶಿ

ನಿಷೇಧವು ರಾಷ್ಟ್ರೀಯ ಜಿಡಿಪಿಯ 9-14 ಪ್ರತಿಶತದ ನಡುವೆ ಓಪಿಯೇಟ್ ರಫ್ತುಗಳನ್ನು ಹೊಂದಿದೆ. ಆಫ್ಘನ್ನರು ತಮ್ಮ ತಕ್ಷಣದ ಅಗತ್ಯಗಳನ್ನು ಪೂರೈಸಲು, ಕಳೆದುಹೋದ ಆದಾಯದ ಆಘಾತವನ್ನು ತಡೆದುಕೊಂಡು ಜೀವ ಉಳಿಸಲು ತುರ್ತು ಮಾನವೀಯ ನೆರವು ಅಗತ್ಯವಿದೆ ಎಂದು ಯುಎನ್‍ಒಡಿಸಿ ಕಾರ್ಯ ನಿರ್ವಾಹಕ ನಿರ್ದೇಶಕ ಘಡಾ ವಾಲಿ ತಿಳಿಸಿದ್ದಾರೆ. ಅಫ್ಘಾನಿಸ್ತಾನವು ಅಫೀಮುಗಳಿಂದ ದೂರವಿರುವ ಅವಕಾಶಗಳನ್ನು ಆಫ್ಘನ್ನರಿಗೆ ಒದಗಿಸಲು ಸುಸ್ಥಿರ ಜೀವನೋಪಾಯದಲ್ಲಿ ಬಲವಾದ ಹೂಡಿಕೆಯ ಅವಶ್ಯಕತೆಯಿದೆ ಎಂದು ಅವರು ಹೇಳಿದ್ದಾರೆ.

ಆಫ್ಘನ್ನರು ಬರ, ತೀವ್ರ ಆರ್ಥಿಕ ಸಂಕಷ್ಟ ಮತ್ತು ದಶಕಗಳ ಯುದ್ಧ ಮತ್ತು ನೈಸರ್ಗಿಕ ವಿಕೋಪಗಳ ನಿರಂತರ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ.ಹಿಂದಿನ ಪಾಶ್ಚಿಮಾತ್ಯ-ಬೆಂಬಲಿತ ಸರ್ಕಾರದ ಆರ್ಥಿಕತೆಯನ್ನು ಬೆಂಬಲಿಸಿದ ಅಂತರರಾಷ್ಟ್ರೀಯ ಹಣಕಾಸು ನಿಲುಗಡೆಯೊಂದಿಗೆ ಕುಸಿತವು ಜನರನ್ನು ಬಡತನ, ಹಸಿವು ಮತ್ತು ವ್ಯಸನಕ್ಕೆ ತಳ್ಳುತ್ತಿದೆ.

ಯುಎನ್‍ಒಡಿಸಿ ಸೆಪ್ಟೆಂಬರ್ ವರದಿಯ ಪ್ರಕಾರ ಅಫ್ಘಾನಿಸ್ತಾನವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೆಥಾಂಫೆಟಮೈನ್ ತಯಾರಕವಾಗಿದೆ, ಗಸಗಸೆ ಕೃಷಿ ಕುಗ್ಗುತ್ತಿದ್ದಂತೆ ಸಂಶ್ಲೇಷಿತ ಔಷಧದ ರೋಗಗ್ರಸ್ತವಾಗುವಿಕೆಗಳು ಹೆಚ್ಚುತ್ತಿವೆ.

ಓಪಿಯೇಟ್ ಪೂರೈಕೆ ಸರಪಳಿಯಲ್ಲಿ ಕಡಿಮೆ ಆದಾಯವು ಶಸ್ತ್ರಾಸ್ತ್ರಗಳು, ಜನರು ಅಥವಾ ಸಂಶ್ಲೇಷಿತ ಔಷಧಗಳ ಕಳ್ಳಸಾಗಣೆಯಂತಹ ಇತರ ಕಾನೂನುಬಾಹಿರ ಚಟುವಟಿಕೆಗಳನ್ನು ಉತ್ತೇಜಿಸಬಹುದು ಎಂದು ಇತ್ತೀಚಿನ ಯುಎನ್‍ಒಡಿಸಿ ವರದಿ ಹೇಳಿದೆ.

ವಿಷಕಾರಿ ಗಾಳಿ : ನ.10ರವರೆಗೆ ದೆಹಲಿಯಲ್ಲಿ ಶಾಲೆಗಳು ಬಂದ್

ನವದೆಹಲಿ,ನ.5- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ ನಗರದ ಎಲ್ಲಾ ಪ್ರಾಥಮಿಕ ಶಾಲೆಗಳನ್ನು ನ.10ರವರೆಗೆ ಮುಚ್ಚಲಾಗುವುದು ಎಂದು ದೆಹಲಿ ಶಿಕ್ಷಣ ಸಚಿವ ಅತಿಶಿ ತಿಳಿಸಿದ್ದಾರೆ.

ಈ ಕುರಿತು ತಮ್ಮ ಅಕೃತ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಮಾಹಿತಿ ನೀಡಿರುವ ಅವರು, ಮಾಲಿನ್ಯದ ಮಟ್ಟ ಹೆಚ್ಚಾಗಿರುವುದರಿಂದ ದೆಹಲಿಯ ಪ್ರಾಥಮಿಕ ಶಾಲೆಗಳು ನವೆಂಬರ್ 10 ರವರೆಗೆ ಮುಚ್ಚಲ್ಪಡುತ್ತವೆ. 6 ರಿಂದ 12ನೇ ತರಗತಿಗಳಿಗೆ ಆನ್‍ಲೈನ್ ಪಾಠ ನಡೆಸಲಾಗುವುದು ಎಂದು ಹೇಳಿದ್ದಾರೆ.

ಪ್ರತಿಕೂಲ ಗಾಳಿಯ ಪರಿಸ್ಥಿತಿಗಳು, ವಿಶೇಷವಾಗಿ ರಾತ್ರಿಯ ಸಮಯದಲ್ಲಿ ಶಾಂತವಾದ ಗಾಳಿಯಿಂದಾಗಿ ಮಾಲಿನ್ಯದ ಮಟ್ಟವು ಮತ್ತೊಮ್ಮೆ ತೀವ್ರವಾದ ಪ್ಲಸ್ ವರ್ಗವನ್ನು ತಲುಪಿದ ಕಾರಣ ಸತತ ಆರನೇ ದಿನವಾದ ಭಾನುವಾರವೂ ಸಹ ದೆಹಲಿಯ ಮೇಲೆ ವಿಷಕಾರಿ ಮಬ್ಬು ಆವರಿಸಿದೆ. ಶನಿವಾರ ಸಂಜೆ 4 ಗಂಟೆಗೆ 415 ಇದ್ದ ವಾಯು ಗುಣಮಟ್ಟ ಸೂಚ್ಯಂಕ ಭಾನುವಾರ ಬೆಳಗ್ಗೆ 7 ಗಂಟೆಗೆ 460ಕ್ಕೆ ಕುಸಿದಿದೆ.

ಮಾಲಿನ್ಯದ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಪ್ರಾಥಮಿಕ ಶಾಲೆಗಳನ್ನು ನವೆಂಬರ್ 3 ಮತ್ತು ನವೆಂಬರ್ 4ರಂದು ಮುಚ್ಚಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಹಿಂದೆ ಘೋಷಿಸಿದ್ದರು.

ಸಿಎಂ ಕುರ್ಚಿ ಕಿತ್ತಾಟಕ್ಕೆ ಮತ್ತೊಂದು ಟ್ವಿಸ್ಟ್ ಕೊಟ್ಟ ಡಿಕೆಶಿ

ಎಕ್ಯೂಐ450-ಅಂಕವನ್ನು ದಾಟಿದರೆ ಕೇಂದ್ರದ ವಾಯುಮಾಲಿನ್ಯ ನಿಯಂತ್ರಣ ಯೋಜನೆಯಡಿ, ಮಾಲಿನ್ಯಕಾರಕ ಟ್ರಕ್‍ಗಳು, ವಾಣಿಜ್ಯ ನಾಲ್ಕು-ಚಕ್ರ ವಾಹನಗಳು ಮತ್ತು ಎಲ್ಲಾ ರೀತಿಯ ನಿರ್ಮಾಣಗಳ ನಿಷೇಧ ಸೇರಿದಂತೆ ಎಲ್ಲಾ ತುರ್ತು ಕ್ರಮಗಳನ್ನು ಜಾರಿಗೊಳಿಸಲು ಕಡ್ಡಾಯವಾಗಿದೆ.

ಪಿಎಂ2.5 ನ ಸಾಂದ್ರತೆಯು, ಉಸಿರಾಟದ ವ್ಯವಸ್ಥೆಯಲ್ಲಿ ಆಳವಾಗಿ ಭೇದಿಸಬಲ್ಲ ಮತ್ತು ಆರೋಗ್ಯ ಸಮಸ್ಯೆಗಳನ್ನು ಪ್ರಚೋದಿಸುವ ಸಾಮಥ್ರ್ಯವಿರುವ ಸೂಕ್ಷಕಣಗಳ ಸಾಂದ್ರತೆಯು ದೆಹಲಿ-ಎನ್‍ಸಿಆರ್‍ನಾದ್ಯಂತ ಅನೇಕ ಸ್ಥಳಗಳಲ್ಲಿ ಪ್ರತಿ ಘನ ಮೀಟರ್‍ಗೆ 60 ಮೈಕ್ರೊಗ್ರಾಮ್‍ಗಳ ಸುರಕ್ಷಿತ ಮಿತಿಯನ್ನು ಏಳರಿಂದ ಎಂಟು ಪಟ್ಟು ಮೀರಿದೆ.

ಇದು ನಿಗದಿತ ಪ್ರತಿ ಘನ ಮೀಟರ್‍ಗೆ 5 ಮೈಕ್ರೋಗ್ರಾಂಗಳ ಆರೋಗ್ಯಕರ ಮಿತಿಗಿಂತ 80ರಿಂದ 100 ಪಟ್ಟು ಹೆಚ್ಚಿದೆ. ತಾಪಮಾನದಲ್ಲಿನ ಕ್ರಮೇಣ ಕುಸಿತ, ಮಾಲಿನ್ಯವನ್ನು ಹಿಡಿದಿಟ್ಟುಕೊಳ್ಳುವ ಶಾಂತ ಗಾಳಿ ಮತ್ತು ಪಂಜಾಬ್ ಮತ್ತು ಹರಿಯಾಣದಾದ್ಯಂತ ಸುಡುವ ನಂತರದ ಭತ್ತದ ಒಣಹುಲ್ಲಿನ ಉಲ್ಬಣದಿಂದಾಗಿ ದೆಹಲಿ-ಎನ್‍ಸಿಆರ್‍ನಲ್ಲಿ ಗಾಳಿಯ ಗುಣಮಟ್ಟ ಕಳೆದ ವಾರದಲ್ಲಿ ಕುಸಿದಿದೆ.

ಸಿಎಂ ಕುರ್ಚಿ ಕಿತ್ತಾಟಕ್ಕೆ ಮತ್ತೊಂದು ಟ್ವಿಸ್ಟ್ ಕೊಟ್ಟ ಡಿಕೆಶಿ

ಬೆಂಗಳೂರು,ನ.5- ಮುಖ್ಯಮಂತ್ರಿಗಳ ಉಪಹಾರಕೂಟದ ಬಳಿಕ ಅಕಾರ ಹಂಚಿಕೆಯ ಚರ್ಚೆ ತಣ್ಣಗಾಗಬಹುದೆಂಬ ನಿರೀಕ್ಷೆಗಳು ಹುಸಿಯಾಗಿದ್ದು, ಇನ್ನುಷ್ಟು ಮಂದಿ ಮತ್ತೆ ವಿವಾದವನ್ನು ಕೆಣಕಿದ್ದಾರೆ.ಖುದ್ದು ಡಿ.ಕೆ.ಶಿವಕುಮಾರ್ ಅವರೇ ತಾವು ಮುಖ್ಯಮಂತ್ರಿಯಾಗಲು ಆತುರ ಮಾಡುವುದಿಲ್ಲ. ಹೈಕಮಾಂಡ್ ಮೇಲೆ ನಂಬಿಕೆ ಇಟ್ಟಿದ್ದೇವೆ. ಸೂಕ್ತ ಕಾಲದಲ್ಲಿ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೆ ನಾನು ಕಾಯುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಅಧಿಕಾರ ಹಂಚಿಕೆಯ ಬೇಗುದಿಯನ್ನು ಜೀವಂತವಾಗಿಟ್ಟಿದ್ದಾರೆ.

ನಿನ್ನೆ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಸಚಿವರೊಂದಿಗೆ ಉಪಹಾರಕೂಟ ನಡೆಸಿದರು. ಅದರಲ್ಲಿ ಭಾಗವಹಿಸಿದ್ದ ಡಿ.ಕೆ.ಶಿವಕುಮಾರ್ ನಗುನಗುತ್ತಲೇ ಎಲ್ಲರೊಂದಿಗೆ ಸೌಹಾರ್ದಯುತವಾಗಿ ಚರ್ಚೆ ಮಾಡಿದರು. ಉಪಹಾರಕೂಟದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಶಾಸಕರು, ಸಚಿವರಾದಿಯಾಗಿ ಯಾರೂ ಕೂಡ ಅಕಾರ ಹಂಚಿಕೆ ಸೇರಿದಂತೆ ವಿವಾದಿತ ವಿಚಾರಗಳ ಬಗ್ಗೆ ಮಾತನಾಡಬಾರದು ಎಂದು ಕಟ್ಟಪ್ಪಣೆ ಮಾಡಿದರು.

ಹಿಂಗಾರು ಚೇತರಿಕೆ : ರಾಜ್ಯದಲ್ಲಿ 10 ದಿನ ಮಳೆ ಸಾಧ್ಯತೆ

ಆ ಬಳಿಕ ಸಂಜೆ ವೇಳೆಗೆ ಕುಮಾರಕೃಪದಲ್ಲಿ ಮತ್ತೆ ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿಯೂ ಡಿ.ಕೆ.ಶಿವಕುಮಾರ್, ಶಾಸಕರಿಗೆ, ಸಚಿವರಿಗೆ ಎಚ್ಚರಿಕೆಯನ್ನು ಪುನರುಚ್ಚಸಿದ್ದರು. ಅಕಾರ ಹಂಚಿಕೆ ವಿಚಾರದಲ್ಲಿ ತಮ್ಮ ಪರವಾಗಿ ಮಾತನಾಡುವವರಿಗೂ ನೋಟಿಸ್ ನೀಡುತ್ತೇನೆ ಎಂದು ಗುಡುಗಿದ್ದ ಡಿ.ಕೆ.ಶಿವಕುಮಾರ್ ಅದರ ಬೆನ್ನಲ್ಲೇ ತಮಗೆ ಹೈಕಮಾಂಡ್‍ಗೆ ನಂಬಿಕೆ ಇದೆ ಎಂದು ಹೇಳಿ ಗೊಂದಲ ಮೂಡಿಸಿದ್ದಾರೆ.

ಅತ್ತ ಮದ್ದೂರಿನಲ್ಲಿ ಶಾಸಕ ಕದಲೂರು ಉದಯ್ ಅವರು ಹಗಲು-ರಾತ್ರಿ ಡಿ.ಕೆ.ಶಿವಕುಮಾರ್ ಕೆಲಸ ಮಾಡುತ್ತಿದ್ದಾರೆ. ಅವರು ಪಕ್ಷಕ್ಕಾಗಿ ಶ್ರಮಪಡುತ್ತಿರುವುದನ್ನು ನಾವು ಕಣ್ಣಾರೆ ನೋಡಿದ್ದೇವೆ. ಪ್ರತಿದಿನ ಅವರು ಮಲಗುವುದು ರಾತ್ರಿ 2 ಗಂಟೆ ಆಗುತ್ತದೆ. ಅವರಿಂದಾಗಿ ಕಾಂಗ್ರೆಸ್ ಅಕಾರಕ್ಕೆ ಬಂದಿದೆ. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು. ಹೈಕಮಾಂಡ್ ಇದನ್ನು ಪರಿಗಣಿಸುತ್ತದೆ ಎಂಬ ನಂಬಿಕೆ ಇದೆ. ಮುಂದಿನ ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.

ತಮ್ಮ ಪರವಾಗಿ ಮಾತನಾಡಿದ ರಾಮನಗರ ಶಾಸಕ ಇಕ್ಬಾಲ್ ಅವರಿಗೂ ನೋಟಿಸ್ ನೀಡುತ್ತೇನೆ ಎಂದು ಹೇಳಿದ ಬೆನ್ನಲ್ಲೇ ಕದಲೂರು ಉದಯ್ ಅವರ ಹೇಳಿಕೆ ಕಾಂಗ್ರೆಸ್‍ನಲ್ಲಿ ಹಿಡಿತ ತಪ್ಪಿದ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಹೈಕಮಾಂಡ್‍ನ ಪ್ರತಿನಿಗಳು ಬೆಂಗಳೂರಿಗೆ ಬಂದು ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಹಂತದಲ್ಲಿ ತಾವೇ ಅಕಾರದಲ್ಲಿ ಮುಂದುವರೆಯುವುದಾಗಿ ಹೇಳಿಕೆ ನೀಡಿದರು. ಬಳಿಕ ಪರಿಸ್ಥಿತಿ ಸಮದೂಗಿಸಲು ಸಚಿವರ ಜೊತೆ ಉಪಹಾರಕೂಟ ನಡೆಸಿದರು. ಅದರಲ್ಲಿ ಭಾಗವಹಿಸಿದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಅಕಾರ ಹಂಚಿಕೆಯ ಬಗ್ಗೆ ಮಾತನಾಡಬಾರದು ಎಂಬ ಸೂಚನೆ ನೀಡಲಾಗಿದೆ. ಇನ್ನು ಮುಂದೆ ನಾವು ಮಾತಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಆದರೆ ಕದಲೂರು ಉದಯ್ ಹಾಗೂ ಇನ್ನು ಹಲವರು ಇದೇ ರೀತಿಯ ಚರ್ಚೆಯಲ್ಲಿ ಪಾಲ್ಗೊಂಡು ವಿವಾದವನ್ನು ಕೆಣಕುತ್ತಿರುವುದು ಕಂಡುಬಂದಿದೆ.

ಬರ ಪರಿಹಾರಕ್ಕಾಗಿ ಕೇಂದ್ರದ ಬಳಿ ಸರ್ವಪಕ್ಷ ನಿಯೋಗ ಕರೆದೊಯ್ಯಲು ಜೆಡಿಎಸ್ ಸಹಕಾರ ಕೇಳಿದ ಸಿಎಂ

ಬೆಂಗಳೂರು, ನ.5- ರಾಜ್ಯದ ಬರ ನಿರ್ವಹಣೆಗೆ ಹೆಚ್ಚಿನ ನೆರವು ಪಡೆದುಕೊಳ್ಳಲು ಕೇಂದ್ರದ ಬಳಿ ಸರ್ವ ಪಕ್ಷ ನಿಯೋಗ ಕರೆದುಕೊಂಡು ಹೋಗಲು ಸಹಕಾರ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್ ನಾಯಕರಲ್ಲಿ ಮನವಿ ಮಾಡಿದ್ದಾರೆ. ಜಾತ್ಯತೀತ ಜನತಾ ದಳ ನಾಡಿನ ಬರಪರಿಸ್ಥಿತಿಯ ವೀಕ್ಷಣೆಗೆ ರೈತ ಸಾಂತ್ವನ ಯಾತ್ರೆ ಕೈಗೊಳ್ಳುವುದನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಇದು ಒಂದು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಮಾಡಬೇಕಾದ ಕೆಲಸ. ಈ ಯಾತ್ರೆಯ ನಂತರ ಅವರು ಕೊಡುವ ವರದಿಯನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಶೀಲಿಸಲಿದೆ ಎಂದು ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ತಿಳಿಸಿದ್ದಾರೆ.

ರೈತ ಸಾಂತ್ವನ ಯಾತ್ರೆಯ ನಂತರ ತಮ್ಮ ಅನುಭವವನ್ನು ರಾಜ್ಯ ಸರ್ಕಾರದ ಜೊತೆಯಲ್ಲಿ ಮಾತ್ರವಲ್ಲ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರದ ಜೊತೆಯಲ್ಲಿಯೂ ಹಂಚಿಕೊಂಡರೆ ರಾಜ್ಯಕ್ಕೆ ಅನುಕೂಲವಾಗಬಹುದು. ಒಂದು ಪ್ರಾದೇಶಿಕ ಪಕ್ಷದ ಮುಖ್ಯಸ್ಥರಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಅವರಿಗೆ ಬರಪರಿಹಾರದ ವಿಷಯದಲ್ಲಿ ನಿರಂತರವಾಗಿ ಕರ್ನಾಟಕ ರಾಜ್ಯಕ್ಕೆ ಕೆಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯದ ವಿವರ ಖಂಡಿತ ತಿಳಿದಿದೆ ಎಂದು ಭಾವಿಸುವೆ ಎಂದಿದ್ದಾರೆ.

ಹಿಂಗಾರು ಚೇತರಿಕೆ : ರಾಜ್ಯದಲ್ಲಿ 10 ದಿನ ಮಳೆ ಸಾಧ್ಯತೆ

ಹೊಸ ಬೆಳವಣಿಗೆಯಲ್ಲಿ ಕುಮಾರಸ್ವಾಮಿಯವರು ಅವರು ಈಗ ಕೇಂದ್ರದಲ್ಲಿ ಅಕಾರದಲ್ಲಿರುವ ಭಾರತೀಯ ಜನತಾ ಪಕ್ಷದ ಜೊತೆ ತಮ್ಮ ಪಕ್ಷದ ಮೈತ್ರಿಗೆ ಮುಂದಾಗಿದ್ದಾರೆ. ರಾಜ್ಯದ ಬಿಜೆಪಿ ನಾಯಕರನ್ನು ದೂರ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಕುಟುಂಬದ ಸದಸ್ಯರ ಜೊತೆ ಆತ್ಮೀಯವಾಗಿ ಸಂಬಂಧ ಇಟ್ಟುಕೊಂಡಿದ್ದಾರೆ. ಈ ಸೌಹಾರ್ದ ಸಂಬಂಧವನ್ನು ಬಳಸಿಕೊಂಡು ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯ ದೊರಕಿಸಿಕೊಟ್ಟರೆ ಕನ್ನಡಿಗರು ಋಣಿಯಾಗಿರುತ್ತಾರೆ ಎಂದಿದ್ದಾರೆ.

ಬರಪರಿಹಾರಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಲು ನಮ್ಮ ಸರ್ಕಾರ ಸರ್ವಪಕ್ಷಗಳ ನಿಯೋಗವನ್ನು ಕರೆದೊಯ್ಯಲು ಸಿದ್ಧ ಇದೆ. ತಮ್ಮದೇ ಪಕ್ಷಕ್ಕೆ ಸೇರಿರುವ ಪ್ರಧಾನಮಂತ್ರಿಯವರನ್ನು ಭೇಟಿ ಮಾಡುವ ಧೈರ್ಯ ರಾಜ್ಯದ ಬಿಜೆಪಿ ನಾಯಕರಲ್ಲಿ ಇಲ್ಲ, ಕೇಂದ್ರದ ಬಿಜೆಪಿ ನಾಯಕರು ಕೂಡಾ ರಾಜ್ಯದ ಬಿಜೆಪಿ ನಾಯಕರನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಈ ವಿಷಯದಲ್ಲಿ ಸನ್ಮಾನ್ಯ ಹೆಚ್.ಡಿ.ದೇವೇಗೌಡರು ಮತ್ತು ಅವರ ಪಕ್ಷ ಹೆಚ್ಚಿನ ಮುತುವರ್ಜಿ ವಹಿಸಿದರೆ ಇದು ಸಾಧ್ಯವಾಗಬಹುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಹಿಂಗಾರು ಚೇತರಿಕೆ : ರಾಜ್ಯದಲ್ಲಿ 10 ದಿನ ಮಳೆ ಸಾಧ್ಯತೆ

ಬೆಂಗಳೂರು, ನ.5-ಈಶಾನ್ಯ ಹಿಂಗಾರು ಮಳೆ ಚೇತರಿಕೆಯಾಗಿದ್ದು ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಚದುರಿದಂತೆ ಮಳೆಯಾಗುತ್ತಿದೆ. ರಾಜಧಾನಿ ಬೆಂಗಳೂರು, ರಾಮನಗರ, ಮಂಡ್ಯ ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಿದೆ. ನಿನ್ನೆ ಸಂಜೆ ಸುರಿದ ಮಳೆಗೆ ರಾಮನಗರದ ಬಳಿ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಗಳಲ್ಲಿನ ಅಂಡರ್ ಪಾಸ್‍ಗಳಲ್ಲಿ ನೀರು ನಿಂತು ವಾಹನ ಸವಾರರಿಗೆ ತೊಂದರೆ ಉಂಟಾಗಿತ್ತು.

ನಿನ್ನೆ ಸಂಜೆ ಹಾಗೂ ರಾತ್ರಿ ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಚದುರಿದಂತೆ ಮಳೆಯಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಇನ್ನೂ ಐದುರಿಂದ ಹತ್ತು ದಿನಗಳ ಕಾಲ ರಾಜ್ಯದಲ್ಲಿ ಮಳೆ ಮುಂದುವರೆಯುವ ಸಾಧ್ಯತೆಗಳಿವೆ. ಅಕ್ಟೋಬರ್ ಕೊನೆಯ ವಾರದಲ್ಲಿ ಆರಂಭಗೊಂಡ ಹಿಂಗಾರು ದುರ್ಬಲವಾಗಿತ್ತು. ಇದರಿಂದ ರಾಜ್ಯದಲ್ಲಿ ಮಳೆ ಕೊರತೆ ಉಂಟಾಗಿತ್ತು. ನವೆಂಬರ್ ಒಂದರಿಂದ ಈ ತನಕ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.

ಮುಂಗಾರಿನಂತೆ ಹಿಂಗಾರು ಕೈಕೊಟ್ಟಿದೆ ಎಂದು ಜನರು ಅದರಲ್ಲೂ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಕಳೆದ ಎರಡು ದಿನಗಳಿಂದ ಕೆಲವೆಡೆ ಉತ್ತಮ ಮಳೆ ಹಾಗೂ ಉಳಿದೆಡೆ ಹಗುರದಿಂದ ಸಾಧಾರಣ ಮಳೆಯಾಗುತ್ತಿರುವುದು ಸದ್ಯಕ್ಕೆ ನಿಟ್ಟುಸಿರು ಬಿಡುವಂತಾಗಿದೆ.

ವಾತಾವರಣದಲ್ಲಿ ಕೆಲವೊಂದು ಬದಲಾವಣೆಗಳಾಗಿರುವ ಹಿನ್ನೆಲೆಯಲ್ಲಿ ಹಿಂಗಾರು ಚೇತರಿಸಿಕೊಂಡಿದ್ದು, ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಮುನ್ಸೂಚನೆಗಳು ಇವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ಅವರು ತಿಳಿಸಿದರು.

ಅರಣ್ಯ ಸಿಬ್ಬಂದಿ-ಕಳ್ಳಬೇಟೆಗಾರರ ನಡುವೆ ಗುಂಡಿನ ಚಕಮಕಿ, ಒಬ್ಬ ಬೇಟೆಗಾರ ಸಾವು

ರಾಜ್ಯದಲ್ಲಿ ಮುಂದಿನ ಹತ್ತು ದಿನಗಳ ಕಾಲ ಸಾಧಾರಣ ಮಳೆಯಾಗುವ ಲಕ್ಷಣಗಳಿವೆ. ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮುಂದಿನ 5ದಿನಗಳ ಕಾಲ ಹೆಚ್ಚು ಮಳೆಯಾಗಲಿದೆ. ಐದು ದಿನಗಳ ನಂತರ ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಅವರು ಹೇಳಿದರು. ಹಿಂಗಾರು ಮಳೆ ಮುಂದಿನ ಹತ್ತು ದಿನಗಳಲ್ಲಿ ರಾಜ್ಯದ ದಕ್ಷಿಣ ಒಳನಾಡಿನಲ್ಲಿ 75ರಿಂದ 100 ಮಿ.ಮೀ.ವರೆಗೂ ಮಳೆಯಾಗುವ ಸೂಚನೆಗಳಿವೆ.

ಉತ್ತರ ಒಳನಾಡಿನಲ್ಲಿ 16ರಿಂದಿ 65 ಮಿ.ಮೀ., ಕರಾವಳಿ 50-75 ಮಿ.ಮೀ. ಮಳೆಯಾಗಲಿದ್ದು, ಮಲೆನಾಡಿನಲ್ಲಿ 40ರಿದ 65 ಮಿ.ಮೀ.ನಷ್ಟು ಮಳೆಯಾಗುವ ಸಾಧ್ಯತೆಗಳಿವೆ ಎಂದು ಅವರು ವಿವರಿಸಿದರು.

ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ ಭಾಗದಲ್ಲಿ ನಾಲ್ಕೈದು ದಿನಗಳ ನಂತರ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ. ತಡವಾಗಿ ಹಿಂಗಾರು ಚೇತರಿಸಿಕೊಂಡಿರುವುದರಿಂದ ಕಟಾವಿಗೆ ಬಂದಿರುವ ಬೆಳೆಗಳಿಗೆ ತೊಂದರೆಯಾಗಲಿದೆ. ನೀರಿನ ಅವಶ್ಯಕತೆ ಇದ್ದ ಬೆಳಗಳಿಗೆ ಅನುಕೂಲವಾಗಲಿದೆ. ಜಾನುವಾರಗಳ ಮೇವು, ಕುಡಿಯುವ ನೀರಿಗೂ ಸಹಕಾರಿಯಾಗಲಿದೆ ಎಂದರು.

ಅರಣ್ಯ ಸಿಬ್ಬಂದಿ-ಕಳ್ಳಬೇಟೆಗಾರರ ನಡುವೆ ಗುಂಡಿನ ಚಕಮಕಿ, ಒಬ್ಬ ಬೇಟೆಗಾರ ಸಾವು

ಚಾಮರಾಜನಗರ, ನ.5-ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಮದ್ದೂರು ವನ್ಯಜೀವಿ ವಲಯದಲ್ಲಿ ಕಳ್ಳಬೇಟೆಗಾರರ ಗುಂಪು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಯ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಒಬ್ಬ ಕಳ್ಳಬೇಟೆಗಾರ ಮೃತಪಟ್ಟಿರುವ ಘಟನೆ ನಡೆದಿದೆ.

ಇಂದು ಬೆಳಗಿನಜಾವ 2 ಗಂಟೆ ಸುಮಾರಿನಲ್ಲಿ 8-10 ಜನರಿದ್ದ ಕಳ್ಳ ಬೇಟೆಗಾರರ ಗುಂಪು ಅರಣ್ಯದೊಳಗೆ ಅಕ್ರಮವಾಗಿ ಪ್ರವೇಶಿಸಿ, ಸಾಂಬಾರ (ಕಡವೆ) ಬೇಟೆ ಮಾಡುತ್ತಿರುವ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿ ಮೇಲೆ ಕಳ್ಳ ಬೇಟೆಗಾರರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಆತ್ಮರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ಪ್ರತಿ ದಾಳಿ ಮಾಡಿದ ಸಂದರ್ಭದಲ್ಲಿ ಒಬ್ಬ ಕಳ್ಳ ಬೇಟೆಗಾರ ಮೃತಪಟ್ಟಿದ್ದು, ಇತರರು ತಪ್ಪಿಸಿಕೊಂಡಿರುವುದಾಗಿ ವರದಿಯಾಗಿದೆ.

ಸ್ಥಳದಿಂದ ಸಾಂಬಾರ್ (ಕಡವೆ) ಮಾಂಸ (ತಲೆ ಮತ್ತು ಕಾಲಿನ ಭಾಗ) ಮತ್ತು ಬಂದೂಕನ್ನು ಸಹ ವಶಪಡಿಸಿಕೊಳ್ಳಲಾಗಿದ್ದು, ಜಿಲ್ಲಾ ದಂಡಾಧಿರಿಗಳೂ ಆದ ಜಿಲ್ಲಾಧಿಕಾರಿಗಳು ಮತ್ತು ಕೊಳ್ಳೇಗಾಲದ ಉಪ ವಿಭಾಗಾಕಾರಿಗಳಿಗೆ ಮಾಹಿತಿ ನೀಡಲಾಗಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-11-2023)

ನಂಜೇಗೌಡನ ಕಟ್ಟೆ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇದು ಕಾಡಿನ ಗಡಿಯಿಂದ ಸುಮಾರು 2 ಕಿ.ಮೀ ದೂರದಲ್ಲಿದೆ. ಬಂಡೀಪುರ ಅರಣ್ಯ ವಲಯದ ನಿರ್ದೇಶಕರು, ಚಾಮರಾಜನಗರ ಜಿಲ್ಲಾಧಿಕಾರಿ ಮತ್ತು ಕೊಳ್ಳೆಗಾಲ ಉಪ ವಿಭಾಗಾಕಾರಿಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.