Thursday, November 6, 2025
Home Blog Page 1845

ರಾಜ್ಯದಲ್ಲಿ ಝಿಕಾ ವೈರಸ್ ಪತ್ತೆ ಬೆನ್ನಲ್ಲೇ ಆರೋಗ್ಯ ಇಲಾಖೆ ಅಲರ್ಟ್

ಬೆಂಗಳೂರು,ನ.2-ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದಲ್ಲಿನ ಸೊಳ್ಳೆಗಳ ಪರೀಕ್ಷೆ ವೇಳೆ ಮಾರಕ ಝಿಕಾ ವೈರಸ್ ಪತ್ತೆಯಾದ ಬೆನ್ನಲ್ಲೇ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಆರಂಭಿಕ ಹಂತದಲ್ಲೇ ಮಾರಕ ವೈರಸ್‍ಗೆ ಕಡಿವಾಣ ಹಾಕಲು ಮುಂದಾಗಿರುವ ಆರೋಗ್ಯ ಇಲಾಖೆ ತಲಕಾಯಲಬೆಟ್ಟ ಗ್ರಾಮದ 5 ಕಿಮೀ ವ್ಯಾಪ್ತಿಯಲ್ಲಿರುವ 5 ಗ್ರಾಮಗಳಲ್ಲಿ 31 ಗರ್ಭಿಣಿಯರ ರಕ್ತ ಮಾದರಿಗಳನ್ನು ಸಂಗ್ರಹ ಮಾಡಿ ಪರೀಕ್ಷೆಗೆ ಕಳುಹಿಸಿದೆ. ಇನ್ನೂ ಜೊತೆಯಲ್ಲಿ 4 ಮಂದಿ ಜ್ವರಪೀಡಿತರ ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.

ಮಾದರಿ ಪರೀಕ್ಷೆಗಳ ವರದಿ ಬರಲು 15 ದಿನಗಳಾಗಲಿದ್ದು, ವರದಿ ಬಂದ ನಂತರ ಝಿಕಾ ವೈರಸ್ ಇದೆಯೋ ಇಲ್ಲವೋ ಎಂಬುದು ಖಚಿತವಾಗಲಿದೆ. ಅಲ್ಲಿಯವರೆಗೂ ಗರ್ಭಿಣಿಯರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಉತ್ತಮ ಪೋಷಕಾಂಶಯುಕ್ತ ಆಹಾರ ಸೇವನೆಗೆ ಸೂಚನೆ ನೀಡಲಾಗಿದೆ. ಸೊಳ್ಳೆ ಪರದೆ ಬಳಸಿಕೊಂಡು ಮಲಗಲು ಸೂಚಿಸಲಾಗಿದೆ. ಸೊಳ್ಳೆ ಕಡಿತದಿಂದ ಸ್ವಯಂ ರಕ್ಷಣೆ ಮಾಡಿಕೊಂಡು ಝಿಕಾ ವೈರಸ್ ಆತಂಕದಿಂದ ದೂರ ಇರಲು ಸಲಹೆ ನೀಡಲಾಗುತ್ತಿದೆ.

ಪ್ರಶಸ್ತಿ ಪುರಸ್ಕೃತರ ಹೆಸರನ್ನು ತಪ್ಪಾಗಿ ಓದಿ ನಗೆಪಾಟಲಿಗೀಡಾದ ಸಚಿವ ತಂಗಡಗಿ

ಮುಂಜಾಗ್ರತಾ ಕ್ರಮವಾಗಿ ರಾಜ್ಯದ 68 ಕಡೆಗಳಲ್ಲಿ ಕೀಟಶಾಸ್ತ್ರಜ್ಞರು ಸೊಳ್ಳೆಗಳ ಪರೀಕ್ಷೆ ನಡೆಸಿದ್ದರು. ಜಿಲ್ಲೆಯ 6 ಕಡೆಗಳಲ್ಲೂ ಸೊಳ್ಳೆಗಳ ಪರೀಕ್ಷೆ ನಡೆದಿತ್ತು. ತಲಕಾಯಲ ಬೆಟ್ಟದಲ್ಲಿ ನಡೆದ ಪರೀಕ್ಷೆಯಲ್ಲಿ ಸೊಳ್ಳೆಗಳಲ್ಲಿ ಝಿಕಾ ವೈರಸ್ ಇರುವುದು ಪತ್ತೆಯಾಗಿದೆ. ಈ ಬೆಟ್ಟ ವ್ಯಾಪ್ತಿಯ 5 ಕಿ.ಮೀ. ಸುತ್ತ ಮುತ್ತಲ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ತಲಕಾಯಲಬೆಟ್ಟದಲ್ಲಿ ಕೀಟಶಾಸ್ತ್ರಜ್ಞರು ಸೊಳ್ಳೆಗಳಲ್ಲಿ ಝಿಕಾ ವೈರಸ್ ಇರುವುದು ದೃಢಪಡಿಸಿದ ಬೆನ್ನಲ್ಲೇ ವಿಶೇಷ ಸಭೆ ನಡೆಸಿರುವ ಆರೋಗ್ಯ ಇಲಾಖೆ ಅಧಿಕಾರಿಗಳು, ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ತಲಕಾಯಲಬೆಟ್ಟದಿಂದ 5 ಕಿ.ಮೀ. ವ್ಯಾಪ್ತಿಯ ವೆಂಕಟಾಪುರ, ದಿಟ್ಟೂರಹಳ್ಳಿ, ಬಚ್ಚನಹಳ್ಳಿ, ವಡ್ಡಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮನೆ ಮನೆಗೆ ಭೇಟಿ ನೀಡಿ 30 ಮಂದಿ ಗರ್ಭಿಣಿಯರು ಮತ್ತು ಜ್ವರ ಪೀಡಿತ 7 ಮಂದಿ ರಕ್ತವನ್ನು ಪಡೆದು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಿದ್ದು, ವರದಿಗಾಗಿ ಕಾಯಲಾಗುತ್ತಿದೆ.

ಮಾರಕ ಝಿಕಾ ವೈರಸ್ ಗರ್ಭಿಣಿಯರಿಗೆ ಹರಡುವ ಸೋಂಕು. ಇದು ಮುಖ್ಯವಾಗಿ ಸೊಳ್ಳೆಗಳಿಂದ ಹರಡುವ ಕಾಯಿಲೆ. ಪ್ರಾರಂಭದಲ್ಲಿ ಸೌಮ್ಯ ಲಕ್ಷಣ ಇರಲಿದ್ದು, ನಂತರದಲ್ಲಿ ಜೀವ ತೆಗೆಯುವ ಮಾರಣಾಂತಿಕ ರೋಗವಾಗಿ ಬದಲಾಗುತ್ತದೆ. ಝಿಕಾ ಸ್ವತಃ ಮಾರಣಾಂತಿಕ ಅಲ್ಲದಿದ್ದರೂ ಅಪಾಯ ತಂದೊಡ್ಡಲಿದೆ. ಈ ರೋಗದ ಲಕ್ಷಣಗಳು ಒಂದು ವಾರದೊಳಗೆ ಕಣ್ಮರೆಯಾಗುತ್ತವೆ. ಗರ್ಭಿಣಿ ಸೋಂಕಿಗೆ ಒಳಗಾದಾಗ ಈ ರೋಗವು ಹುಟ್ಟಲಿರುವ ಮಗುವಿನ ಮೇಲೆ ವಿನಾಶಕಾರಿ ಪರಿಣಾಮ ಬೀರುತ್ತದೆ.

ಎಗಿಫ್ಟಿ ಮತ್ತು ಈಡಿಯಸ್ ಅಲ್ಲೋ ಪಿಕ್ಸಸ್ ಸೊಳ್ಳೆಗಳಿಂದ ಝಿಕಾ ವೈರಸ್ ಮನುಷ್ಯನಿಗೆ ಹರಡುತ್ತದೆ. ಸೊಳ್ಳೆಯು ಸೋಂಕಿತ ವ್ಯಕ್ತಿಯನ್ನು ಕಚ್ಚಿದ ನಂತರ, ಕಾ ವೈರಸ್ ಸೊಳ್ಳೆಯ ವ್ಯವಸ್ಥೆ ಪ್ರವೇಶಿಸುತ್ತದೆ. ಅದರ ದೇಹದಲ್ಲಿ ಪುನರಾವರ್ತಿಸುತ್ತದೆ ಮತ್ತು ಅದರ ಲಾಲಾರಸ ಗ್ರಂಥಿ ಗಳಿಗೆ ಹರಡುತ್ತದೆ. ಈ ವೈರಸ್ ಸೊಳ್ಳೆಯಲ್ಲಿ ಎಂಟರಿಂದ ಹತ್ತು ದಿನಗಳವರೆಗೆ ಕಾವು ಕೊಡುತ್ತದೆ. ಅಂತಹ ಸೊಳ್ಳೆ. ಕಚ್ಚಿದಾಗ ವೈರಸ್ ವ್ಯಕ್ತಿಗೆ ಹರಡುತ್ತದೆ. ಸೊಳ್ಳೆ ಕಚ್ಚಿದ ನಂತರ ವ್ಯಕ್ತಿಯಲ್ಲಿ ಕಾ ವೈರಸ್‍ನ ಕಾವು ಕಾಲಾವಧಿ ಮೂರರಿಂದ 12 ದಿನಗಳವರೆಗೆ ಇರುತ್ತದೆ.

ಝಿಕಾ ವೈರಸ್ ಲಕ್ಷಣಗಳು ಝಿಕಾ ವೈರಸ್ ಒಳಗಾದವರು ಸಾಮಾನ್ಯವಾಗಿ ಜ್ವರ, ತಲೆನೋವು, ತುರಿಕೆ, ಕಣ್ಣಿನ ಬಣ್ಣ ಬದಲಾವಣೆ, ಮೈ ಕೈ ನೋವಿನ ರೋಗದ ಲಕ್ಷಣ ಗಳನ್ನು ಅನುಭವಿಸುತ್ತಾರೆ ಅಥವಾ ತುಂಬಾ ಸೌಮ್ಯವಾದ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ. ಡೆಂಗ್ಯೂ ಮತ್ತು ಚಿಕೂನ್ ಗುನ್ಯಾದಂತೆ ಇರುತ್ತದೆ. ಜ್ವರ, ದದ್ದು, ತಲೆನೋವು, ಕೀಲುನೊವು, ಆಯಾಸ, ಕೆನ್ನೆಗಳ ಊತ, ಬೆವರುವುದು, ತಣ್ಣಗಾಗುವುದು, ವಾಂತಿ, ರಕ್ತಸಿಕ್ತ ಕಣ್ಣುಗಳು ಲಕ್ಷಣಗಳು ಗೋಚರಿಸುತ್ತವೆ.

ರಾಜಸ್ಥಾನ : ಇಡಿ ಅಧಿಕಾರಿಗಳನ್ನೇ ಬಂಧಿಸಿದ ಎಸಿಬಿ

ಝಿಕಾ ಬರದಂತೆ ತಡೆಗೆಟ್ಟುವುದು ಹೇಗೆ?:
ಸೋಂಕು ಬಂದ ಮೇಲೆ ಪರದಾಡುವುದಕ್ಕಿಂತ ಸೋಂಕು ಬಾರದಂತೆ ತಡೆಯುವುದು ಅತೀ ಅಗತ್ಯ. ಇದಕ್ಕಾಗಿ ಕೆಲವು ಮುನ್ನೆಚ್ಚರಿಕಾ ಕ್ರಮ ಗಳನ್ನು ಕೈಗೊಳ್ಳಬೇಕು. ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.

ಗರ್ಭಿಣಿಯರು, ಬಾಣಂತಿಯರು ಸೇರಿದಂತೆ ಎಲ್ಲರೂ ಸೊಳ್ಳೆಗಳ ಕಾಟ ತಡೆಗೆ ಕ್ರಮಕೈಗೊಳ್ಳಬೇಕು. ಪ್ರಸ್ತುತ ಝಿಕಾ ವೈರಸ್ ಸೋಂಕಿಗೆ ಯಾವುದೇ ನಿರ್ದಿಷ್ಟ ಔಷಧ ಇಲ್ಲ. ವಿಜ್ಞಾನಿಗಳು ದೀರ್ಘ ಕಾಲದವರೆಗೆ ವೈರಸ್ ಹಾನಿಕರವಲ್ಲ ಅಂತ ಭಾವಿಸಿದ್ದರು. ಸದ್ಯ ರೋಗ ಲಕ್ಷಣಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಆದ್ದರಿಂದ ವೈದ್ಯರು ಜ್ವರ ಕಡಿಮೆ ಮಾಡುವ ಔಷಧಿ ನೀಡುತ್ತಾರೆ. ವಾಂತಿ ಮತ್ತು ದದ್ದುಗಳಿಗೆ ಔಷಧಗಳನ್ನು ಸೂಚಿಸಬಹುದು.

ಇನ್ನೂ ಮುಂಜಾಗ್ರತಾ ಕ್ರಮವಾಗಿ ಜ್ವರದಿಂದ ಬಳಲುತ್ತಿರುವವರ ಮೇಲೆ ನಿಗಾವಹಿಸಲಾಗಿದೆಯಾದರೂ ಝಿಕಾ ವೈರಸ್ ಸೋಂಕು ಹುಟ್ಟುವ ಮಕ್ಕಳ ಅಂಗವೈಕಲ್ಯಕ್ಕೆ ತುತ್ತಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಗರ್ಭಿಣಿಯರ ಮೇಲೂ ನಿಗಾ ವಹಿಸಲಾಗಿದೆ.

ಝೆಡ್-ಕೆಟಗರಿ ಭದ್ರತೆ ಪಡೆಯದ ಯಡಿಯೂರಪ್ಪ

ಬೆಂಗಳೂರು,ನ.2- ರಾಜ್ಯ ಬಿಜೆಪಿಯ ಸರ್ವೋಚ್ಛ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೇಂದ್ರ ಗೃಹ ಸಚಿವಾಲಯವು ವಾರದ ಹಿಂದೆ ಝೆಡ್-ಕೆಟಗರಿ ಭದ್ರತೆಯನ್ನು ನೀಡಿತ್ತು, ಆದರೆ ಯಡಿಯೂರಪ್ಪನವರು ಇನ್ನೂ ಭದ್ರತೆಯನ್ನು ತೆಗೆದುಕೊಂಡಿಲ್ಲ.

ಯಡಿಯೂರಪ್ಪನವರು ಬಿಜೆಪಿಯಲ್ಲಿ ಪಕ್ಷದ ಅಧ್ಯಕ್ಷ ಅಥವಾ ವಿರೋಧ ಪಕ್ಷದ ನಾಯಕ ಸ್ಥಾನದ ಆಕಾಂಕ್ಷಿಯಲ್ಲ. ಮೇಲ್ ಅಥವಾ ಫೋನ್ ಮೂಲಕವೂ ಅವರಿಗೆ ಯಾವುದೇ ಬೆದರಿಕೆಗಳು ಬಂದಿಲ್ಲ. ಹಾಗಿರುವಾಗ ಕೇಂದ್ರ ಸರ್ಕಾರ ಅವರಿಗೆ ಈ ಮಟ್ಟದ ಭದ್ರತೆಯನ್ನು ಏಕೆ ನೀಡುತ್ತಿದೆ ಎಂಬ ಪ್ರಶ್ನೆ ಉದ್ಭವವಾಗಿದೆ.

ಎಲ್ಲಾ ಸಮಯದಲ್ಲೂ ನಾಯಕನ ಚಲನವಲನಗಳ ಮೇಲೆ ನಿಗಾ ಇರಿಸಿಕೊಳ್ಳಲು Z- ಮಟ್ಟದ ಭದ್ರತೆ ನೀಡಲಾಗುತ್ತದೆ. ಪ್ರಬಲ ಲಿಂಗಾಯತ ವಲಯಗಳಲ್ಲಿನ ಅನೇಕರು ಕೇಂದ್ರ ಗೃಹ ಸಚಿವಾಲಯವು ಮಾಜಿ ಸಿಎಂಗೆ ಅಂತಹ ಹೆಚ್ಚಿನ ಭದ್ರತೆಯನ್ನು ಒದಗಿಸುವಂತೆ ಮಾಡುತ್ತಿರುವ ಬೆದರಿಕೆಯ ಗ್ರಹಿಕೆ ಏನೆಂದು ಯೋಚಿಸುತ್ತಿದ್ದಾರೆ.

ವೀರಶೈವ ಮಹಾಸಭಾ ಕಾರ್ಯದರ್ಶಿ ರೇಣುಕಾ ಪ್ರಸನ್ನ, ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ರೀತಿ ಅವರ ಮೇಲೆ ನಿಗಾ ಇರಿಸಲು ಕೇಂದ್ರ ಸರ್ಕಾರ ಮುಂದಾಗಿದೆಯೇ ಎಂಬ ಸಂದೇಹ ವ್ಯಕ್ತವಾಗಿದೆ. ಕೆಲವು ಸಿಆರ್‍ಪಿಎಫ್ ಅಧಿಕಾರಿಗಳು ಮೊನ್ನೆ ಮಂಗಳವಾರ ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಯಡಿಯೂರಪ್ಪ ಅವರ ಆಪ್ತ ವಲಯದ ಮೂಲಗಳು, ಝಡ್ ಮಟ್ಟದ ಭದ್ರತೆಯನ್ನು ಒಪ್ಪಿಕೊಳ್ಳುವುದು-ಬಿಡುವುದು ಅವರಿಗೆ ಬಿಟ್ಟಿದ್ದು ಎನ್ನುತ್ತಾರೆ.

ಗೃಹ ಸಚಿವಾಲಯದ ಭದ್ರತೆ ವಿಷಯ ನಗೆಪಾಟಲಿಗೀಡಾಗಬಾರದು. ಯಡಿಯೂರಪ್ಪ ಗಾಂಧಿ ಬಜಾರ್‍ನಲ್ಲಿ ನಿಂತು ಯಾವುದೇ ಬೆದರಿಕೆಯಿಲ್ಲದೆ ಚಾಟ್ ತಿನ್ನುವ ರಾಜಕಾರಣಿ. ಅವರು ಎಲ್ಲರಿಗೂ ಒಪ್ಪಿಗೆಯಾಗುವ ಬಹು ಪ್ರೀತಿಯ ನಾಯಕ. ಬಹುಶಃ ಅವರು ಕರ್ನಾಟಕದ ಅತ್ಯಂತ ಜಾತ್ಯತೀತ ಬಿಜೆಪಿ ನಾಯಕರಾಗಿದ್ದಾರೆ. ಭದ್ರತೆ ಅವರಿಗೆ ಏಕೆ ಬೇಕು, ಅವರಿಗೆ ಯಾವುದಾದರೂ ಬೆದರಿಕೆಗಳು ಅಥವಾ ಎಚ್ಚರಿಕೆ ಪತ್ರಗಳು ಬಂದಿವೆಯೇ ಏನೂ ಇಲ್ಲವಲ್ಲ ಎನ್ನುತ್ತಾರೆ ಅವರ ಆಪ್ತ ವಲಯಗಳು.

ಕಾಂಗ್ರೆಸ್ ಉಸ್ತುವಾರಿಗಳು ಕರ್ನಾಟಕಕ್ಕೆ ಬರುವುದೇ ಹಣ ವಸೂಲಿಗಾಗಿ : ಬಿಎಸ್‌ವೈ

ಕರ್ನಾಟಕ ಉತ್ತರ ಪ್ರದೇಶವೇ ಅಥವಾ ಮಧ್ಯಪ್ರದೇಶವೇ? ದೆಹಲಿಯಲ್ಲಿ ಯಾರೋ ತಮ್ಮ ಲೆಕ್ಕಾಚಾರವನ್ನು ತಪ್ಪಾಗಿ ಗ್ರಹಿಸಿದ್ದಾರೆಂದು ತೋರುತ್ತಿದೆ. ಬಿಜೆಪಿಯ ಮಾಜಿ ಪದಾಕಾರಿಯೊಬ್ಬರು, ಬಹುಶಃ ಇದು ಕೇಂದ್ರದ ಗೌರವದ ವಿಧಾನವಾಗಿದೆ ಎಂದು ಹೇಳಿದರು. ಯಡಿಯೂರಪ್ಪನವರಿಗೆ ಯಾವುದೇ ಬೆದರಿಕೆಗಳ ಕುರಿತು ಅವರು, ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ಕೋಮು ಘಟನೆಯ ನಂತರ, ಯಾವುದನ್ನೂ ತಳ್ಳಿಹಾಕಲು ಸಾಧ್ಯವಿಲ್ಲ. ಅದು ಅವರ ಭದ್ರತೆಯನ್ನು ಮೇಲ್ದರ್ಜೆಗೇರಿಸಲು ಕಾರಣವಾಗಿರಬಹುದು.

ಕೆಲವು ಬೆದರಿಕೆ ಗ್ರಹಿಕೆ ಅಥವಾ ಕೆಲವು ಗುಪ್ತಚರ ಮಾಹಿತಿಗಳು ಇದ್ದಾಗ, ಕೇಂದ್ರ ಗೃಹ ಸಚಿವಾಲಯವು ಅಂತಹ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ಪಕ್ಷದ ಮುಖಂಡರು ಹೇಳುತ್ತಾರೆ.

ರಾಜಸ್ಥಾನ : ಇಡಿ ಅಧಿಕಾರಿಗಳನ್ನೇ ಬಂಧಿಸಿದ ಎಸಿಬಿ

ಜೈಪುರ,ನ.2-ಮಧ್ಯವರ್ತಿ ಮೂಲಕ 15 ಲಕ್ಷ ರೂಪಾಯಿ ಲಂಚ ಬೇಡಿಕೆ ಇಟ್ಟ ಹಿನ್ನಲೆಯಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಇಬ್ಬರು ಅಧಿಕಾರಿಗಳನ್ನು ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಬಂಧಿಸಿರುವ ಘಟನೆ ನಡೆದಿದೆ.ಬಂಧಿತರನ್ನು ನೇವಲ್ ಕಿಶೋರ್ ಮೀನಾ ಎಂದು ಗುರುತಿಸಲಾಗಿದ್ದು, ಮತ್ತೊಬ್ಬರ ಹೆಸರು ತಿಳಿದುಬಂದಿಲ್ಲ.

ರಾಜಸ್ಥಾನದಲ್ಲಿ ಇಂದು ಎಸಿಪಿ ಅಧಿಕಾರಿಗಳು ಹಲವಾರು ಕಡೆ ದಾಳಿ ನಡೆಸಿದ ಸಂದರ್ಭದಲ್ಲಿ ಇಡಿ ಅಧಿಕಾರಿಗಳು ಮಧ್ಯವರ್ತಿಗಳಿಂದ 15 ಲಕ್ಷ ಲಂಚಕಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಈ ಹಿನ್ನಲೆಯಲ್ಲಿ ಮಿಂಚಿನ ಕಾರ್ಯಚರಣೆ ನಡೆಸಿದ ಎಸಿಬಿ ಅಧಿಕಾರಿಗಳು, ಈ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ರಾಜಸ್ಥಾನದ ವಿವಿಧ ಕಡೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಅಕ್ರಮ ಹಣ ವಹಿವಾಟು ಪ್ರಕರಣ ಸಂಬಂಧ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಪುತ್ರ ವೈಭವ್ ಗೆಲ್ಹೋಟ್ ಹಾಗು ಅಲ್ಲಿನ ಸ್ಥಳೀಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು.

“ಪಾಪ ಸಿದ್ದರಾಮಯ್ಯನವರನ್ನು ನೋಡಿದರೆ ಅಯ್ಯೋ ಅನ್ನಿಸುತ್ತಿದೆ”

ಈ ಪ್ರಕರಣವು ರಾಷ್ಟ್ರಮಟ್ಟದಲ್ಲೂ ಸದ್ದು ಮಾಡಿತ್ತು. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಟ್ಟುಕೊಂಡು ಇಡಿ ಸಮನ್ಸ್ ಜಾರಿ ಮಾಡಿದೆ ಎಂದು ಮಾಜಿ ಡಿಸಿಎಂ ಸಚಿನ್ ಪೈಲೆಟ್ ಸೇರಿದಂತೆ ಅನೇಕ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು.

ಒಂದು ಕಡೆ ರಾಜಸ್ಥಾನದಲ್ಲಿ ಇಡಿ ಅಧಿಕಾರಿಗಳು ನಿರಂತರವಾಗಿ ದಾಳಿ ನಡೆಸುತ್ತಿರುವ ಸಂದರ್ಭದಲ್ಲೇ ಎಸಿಬಿಯವರು ಅದೇ ಇಡಿ ಅಧಿಕಾರಿಗಳನ್ನು ಲಂಚಕ್ಕೆ ಬೇಡಿಕೆಇಟ್ಟ ಆರೋಪದ ಹಿನ್ನಲೆಯಲ್ಲಿ ಬಂಧಿಸಿರುವುದು ಮುಂದಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಇನ್ನಷ್ಟು ಕಾನೂನಿನ ಸಂಘರ್ಷ ಉಂಟಾಗುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರ ರಾಜ್ಯಕ್ಕೆ ನಯಾಪೈಸೆ ಬರ ಪರಿಹಾರ ನೀಡಿಲ್ಲ : ಪರಮೇಶ್ವರ್

ಬೆಂಗಳೂರು, ನ.2- ರಾಜ್ಯದಲ್ಲಿನ ಬರ ಪರಿಹಾರ ಹಣ ನೀಡಬೇಕಾದ ಕೇಂದ್ರ ಸರ್ಕಾರ, ಅಧಿಕಾರಿಗಳ ತಂಡದಿಂದ ಕಾಟಾಚಾರದ ಅಧ್ಯಯನ ನಡೆಸಿದ್ದು, ಈವರೆಗೂ ರಾಜ್ಯಕ್ಕೆ ನಯಾ ಪೈಸೆ ಅನುದಾನ ನೀಡಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆರೋಪಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆ ನಿಂತು ಮೂರು ತಿಂಗಳಾಗಿದೆ, ಆಗಿನಿಂದಲೇ ಬರ ಪರಿಸ್ಥಿತಿ ಇದೆ. ಬಿಜೆಪಿಯವರು ಇಷ್ಟು ದಿನ ಏಕೆ ಸುಮ್ಮನ್ನಿದ್ದರು. ಈಗ ಬರ ಅಧ್ಯಯನ ಪ್ರವಾಸ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ರಾಜ್ಯ ಸರ್ಕಾರ 200ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದೆ. ಸುಮಾರು 32 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. 17 ಸಾವಿರ ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ, ಬಿಜೆಪಿಯವರು ಮೊದಲು ಹಣ ಕೊಡಿಸಲಿ ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರದಿಂದ ಈವರೆಗೂ ಒಂದು ಪೈಸೆ ಬಿಡುಗಡೆಯಾಗಿಲ್ಲ. ಕೇಂದ್ರದಿಂದ ಆಗಮಿಸಿದ ಬರ ಅಧ್ಯಯನ ತಂಡ ತಾವು ನೋಡಿದ ಕಡೆ ಹಸಿರು ಇದೆ ಎಂದು ವರದಿ ನೀಡಿದೆ. ತಂಡ ಬರುವ ಮುನ್ನಾ ಎರಡು ಮೂರು ದಿನ ರಾಜ್ಯದಲ್ಲಿ ಮಳೆಯಾಗಿತ್ತು, ಹಾಗಾಗಿ ಹಸಿರು ಕಾಣಿಸಿದೆ. ಅಂದ ಮಾತ್ರಕ್ಕೆ ಬೆಳೆಯಾಗಿದೆ ಎಂದು ಅರ್ಥವೇ. ಕೂಲಂಕುಶವಾಗಿ ಪರಿಶೀಲನೆ ನಡೆಸಬೇಕಿತ್ತಲ್ಲವೇ ? ಕೇಂದ್ರ ಸರ್ಕಾರಕ್ಕೆ ಬರ ಪರಿಹಾರಕ್ಕೆ ಹಣ ನೀಡಬೇಕು ಎಂಬ ಕಾಳಜಿ ಇದ್ದರೆ ಕೇಂದ್ರ ತಂಡ ರಾಜ್ಯದ ಅಕಾರಿಗಳು, ಸಚಿವರು, ಮುಖ್ಯಮಂತ್ರಿಯವರ ಜೊತೆ ಕುಲಂಕುಶವಾಗಿ ಚರ್ಚೆ ಮಾಡಬೇಕಿತ್ತು. ನೆಪ ಮಾತ್ರಕ್ಕೆ ಕಾಟಾಚಾರಕ್ಕೆ ಅಧ್ಯಯನ ಮಾಡಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆ ಆಧಾರಿಸಿ ಎನ್‍ಡಿಆರ್‍ಎಫ್ ಅಡಿ ನೀಡಬೇಕಾದ ಹಣವನ್ನಾದರೂ ಮುಂಗಡವಾಗಿ ನೀಡಬೇಕಿತ್ತು ಅಥವಾ ವಿಶೇಷ ಅನುದಾನವನ್ನಾದರೂ ನೀಡಬೇಕು. ಹಿಂದೆಲ್ಲಾ ಕಾಂಗ್ರೆಸ್ ಸರ್ಕಾರದಲ್ಲಿ ಮನಮೋಹನಸಿಂಗ್ ಪ್ರಧಾನಿಯಾಗಿದ್ದಾಗ ವಿಶೇಷ ಅನುದಾನವನ್ನಾಗಿ 2 ಸಾವಿರ ಕೋಟಿ ರೂಪಾಯಿ ನೀಡಲಾಗಿತ್ತು. ಈಗಲೂ ರಾಜ್ಯದ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಬರ ಪರಿಸ್ಥಿತಿಗೆ ಕೇಂದ್ರದಿಂದ ಹೆಚ್ಚಿನ ನೆರವು ಪಡೆಯಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ಸರ್ವ ಪಕ್ಷ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗಲು ಮುಖ್ಯಮಂತ್ರಿಯವರ ಜೊತೆ ಚರ್ಚೆ ನಡೆಸಲಾಗುವುದು. ಸಾಧ್ಯವಾಗದಿದ್ದರೆ ರಾಜ್ಯ ಸರ್ಕಾರದ ಎಲ್ಲಾ ಸಚಿವರು ದೆಹಲಿಗೆ ಹೋಗಿ ಪ್ರಯತ್ನಿಸುವ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದರು.

ಭಾರತಕ್ಕೆ ಬರುತ್ತಿದ್ದಾರೆ ಅಮೆರಿಕ ವಿದೇಶಾಂಗ, ರಕ್ಷಣಾ ಕಾರ್ಯದರ್ಶಿಗಳು

ಬಿಜೆಪಿಯವರು ವಸೂಲಿಗೆ ಬರುತ್ತಿದ್ದರೆ ?
ಕಾಂಗ್ರೆಸ್‍ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಬೆಂಗಳೂರಿಗೆ ಬಂದು ಸಭೆ ನಡೆಸಿದಾಕ್ಷಣ ಪಂಚರಾಜ್ಯಗಳ ಚುನಾವಣೆಗೆ ಹಣ ವಸೂಲಿ ಮಾಡಲು ಬಂದಿದ್ದರು ಎಂದು ಬಿಜೆಪಿಯವರು ಆಧಾರ ರಹಿತ ಟೀಕೆ ಮಾಡುತ್ತಿದ್ದಾರೆ. ಅದನ್ನು ಬಿಟ್ಟು ಅವರು ಬೇರೆ ಏನನ್ನು ಹೇಳಲು ಸಾಧ್ಯ. ಕಾಂಗ್ರೆಸ್‍ನ ನಾಯಕರು ಹಣವನ್ನು ಬ್ಯಾಗಿನಲ್ಲಿ ತುಂಬಿಕೊಂಡು ಹೆಗಲೆ ಮೇಲೆ ಹಾಕಿಕೊಂಡು ಹೋಗಿದ್ದಾರೆಯೇ ? ಸುಮ್ಮನ್ನೆ ಬಾಯಿಗೆ ಬಂದಂತೆ ಮಾತನಾಡಬಾರದು ಎಂದರು ತಿರುಗೇಟು ನೀಡದರು.

ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಅಕಾರದಲ್ಲಿದ್ದಾಗ ಅವರ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಪದೇ ಪದೇ ಬೆಂಗಳೂರಿಗೆ ಬರುತ್ತಿದ್ದರು. ಆಗಲೂ ವಸೂಲಿಗೆ ಬರುತ್ತಿದ್ದರೂ ಎಂದು ಭಾವಿಸಬೇಕಲ್ಲವೇ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್‍ನಲ್ಲಿ ಶಾಸಕರು, ಸಚಿವರು, ನಾಯಕರ ಪೈಕಿ ಸರ್ಕಾರದ ಪರವಾಗಿ ಮಾತನಾಡುವವರಿಗೆ ಅಡ್ಡಿ ಇಲ್ಲ. ಪಕ್ಷ ಅಥವಾ ಸರ್ಕಾರದ ವಿರುದ್ಧ ಮಾತನಾಡಬಾರದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಸೂಚನೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ನಮಗೆ ಹೆಚ್ಚಿನ ಮಾಹಿತಿ ಇಲ್ಲ. ನಮ್ಮನ್ನು ಕರೆಸಿ ಯಾವುದೇ ಚರ್ಚೆ ಮಾಡಿಲ್ಲ, ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತ್ರ ಚರ್ಚೆ ಮಾಡಿದ್ದಾರೆ. ನಿಗಮ ಮಂಡಳಿಯ ನೇಮಕಾತಿ ಬಗ್ಗೆ ಚರ್ಚೆ ನಡೆದಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದರು.

ಕನ್ನಡ ಬಾವುಟಕ್ಕೆ ಅಧಿಕೃತ ಸ್ಥಾನ ಮಾನ ದೊರೆಯಬೇಕಿದೆ. ನಿನ್ನೆ ಕೂಡ ಅದು ಚರ್ಚೆಯಾಗುತ್ತಿತ್ತು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಾನ್ಯತೆ ನೀಡುವಂತೆ ಮತ್ತೊಮ್ಮೆ ಪತ್ರ ಬರೆದು ಒತ್ತಡ ಹೇರಲಾಗುವುದು. ಅದನ್ನು ಬಿಟ್ಟು ತಲೆಯ ಮೇಲೆ ಕಲ್ಲು ಇಡಲಾಗುವುದಿಲ್ಲ ಎಂದರು.

ಕರ್ನಾಟಕ ಪರೀಕ್ಷಾ ಪ್ರಾಕಾರದಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತು ಪೆÇಲೀಸರಿಂದ ತನಿಖೆ ನಡೆಸಲಾಗುತ್ತಿದೆ. ಹಿಂದಿನ ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಆರೋಪಿಯಾಗಿದ್ದ ಆರ್.ಡಿ.ಪಾಟೀಲ್‍ಗೂ ಕೆಇಎ ಪರೀಕ್ಷೆಯ ಅಕ್ರಮದಲ್ಲಿ ಸಂಪರ್ಕ ಇದೆ ಎಂದು ಹೇಳಲಾಗುತ್ತಿದೆ. ಅದು ನಿಜವಾಗಿದ್ದರೆ ತನಿಖೆಗೆ ಮತ್ತಷ್ಟು ಸಾಕ್ಷ್ಯ ದೊರೆತು ಬೆಂಬಲವಾಗಲಿದೆ. ಮರು ಪರೀಕ್ಷೆ ನಡೆಸಬೇಕು ಎಂಬುದು ಗೃಹ ಇಲಾಖೆ ವ್ಯಾಪ್ತಿಯಲ್ಲಿಲ್ಲ. ಸಂಬಂಸಿದವರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

ಬಿಜೆಪಿ ಬರ ಅಧ್ಯಯನ ಮಾಡುತ್ತಿರುವ ತಂಡ ನಾಟಕ ಕಂಪನಿ: ಶಿವರಾಜ ತಂಗಡಗಿ

ಕೊಪ್ಪಳ: ಬಿಜೆಪಿಯವರು ಬರ ಅಧ್ಯಯನ ಮಾಡುತ್ತಿರುವುದು ನಾಟಕ ಕಂಪನಿ, ಅವರು ಮೊದಲು ಕೇಂದ್ರದ ಮೇಲೆ ಒತ್ತಡ ಮಾಡಲಿ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು. ಕೊಪ್ಪಳದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಬಂದಿದೆ. ಬರ ತಂಡ ಬಂದು ಹೋಗಿದೆ. ನಮ್ಮ ರಾಜ್ಯದ ನಾಲ್ಕು ಸಚಿವರು ಇದ್ದಾರೆ.

ಕೇಂದ್ರದಿಂದ ಸಹಕಾರ ನಮಗೆ ಸಿಗುತ್ತಿಲ್ಲ. ಕೇಂದ್ರ ಸರಕಾರದವರು ನಮ್ಮ ಪರ ಇಲ್ಲ. ನಮ್ಮ ಸಿಎಂ ಪತ್ರ ಬರೆದರೂ ಕೇಂದ್ರ ಸರಕಾರ ಸ್ಪಂದಿಸಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಸಿಎಂ ಸೀಟು ಖಾಲಿ ಇಲ್ಲ. ಹೈಕಮಾಂಡ್‌ ಈ ಕುರಿತು ನಿರ್ಧಾರ ಮಾಡಲಿದೆ, ರಮೇಶ್‌ ಜಾರಕಿಹೊಳಿಯವರು ಹಗಲುಗನಸು ಕಾಣುತ್ತಿದ್ದಾರೆ ಎಂದರು. ಮರಳು ಮಾಫಿಯಾ ತಡೆಯುತ್ತೇನೆ.‌

192 ಕೋಟಿ ರೂಪಾಯಿ ಕುಡಿವ ನೀರು ಯೋಜನೆಯಲ್ಲಿ ಆಗಿರುವ ವ್ಯವಾಹಾರ ತನಿಖೆ ಮಾಡಿಸಲಾಗಿದೆ ಎಂದರು. ದುಬೈಗೆ ಕಾಂಗ್ರೆಸ್ ಶಾಸಕರು ಹೋಗುತ್ತಿರುವುದು ವೈಯಕ್ತಿಕವಾಗಿ ಹೋಗುತ್ತಿದ್ದಾರೆ. ಅವರನ್ನು ಸರಕಾರದಿಂದ ಕಳುಹಿಸುತ್ತಿಲ್ಲ. ರಾಜ್ಯದ ಕಾಂಗ್ರೆಸ್‌ನಲ್ಲಿ ಅತೃಪ್ತಿ ಇಲ್ಲ. ಅತೃಪ್ತಿ ಎಂಬುವುದು ಕೇವಲ ಮಾಧ್ಯಮಗಳಲ್ಲಿ ಮಾತ್ರ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ತುಮಕೂರಿನಲ್ಲಿ ಅಗ್ನಿ ಅವಘಡ : ವ್ಯಕ್ತಿ ಸಜೀವ ದಹನ

ತುಮಕೂರು, ನ.2- ನಗರದ ಹೊರವಲಯದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಸಜೀವದಹನವಾಗಿರುವ ಘಟನೆ ನಡೆದಿದೆ. ಕ್ಯಾತ್ಸಂದ್ರದ ಗೋಕುಲ ಬಡಾವಣೆಯ ನಿವಾಸಿ ಶಿವಕುಮಾರ್ ಎನ್ನುವವರಿಗೆ ಸೇರಿದ ಕಟ್ಟಡದ ಕೆಳಗಡೆ ಗೋಬಿ ಅಂಗಡಿಗೆ ಬಾಡಿಗೆಗೆ ನೀಡಲಾಗಿತ್ತು. ಮೇಲಿನ ಭಾಗದ ಕೊಠಡಿಯಲ್ಲಿ ನಿರುಪಯುಕ್ತ ವಸ್ತುಗಳನ್ನು ಶೇಖರಿಸ ಲಾಗಿತ್ತು ಎನ್ನಲಾಗಿದೆ.

ಸ್ಥಳೀಯರು ಮತ್ತು ಸುತ್ತಮುತ್ತಲಿನವರಿಗೂ ಸತ್ತ ವ್ಯಕ್ತಿಯ ಬಗ್ಗೆ ಏನೂ ಮಾಹಿತಿ ಇದ್ದಂತಿಲ್ಲ. ಮಧ್ಯರಾತ್ರಿಯ ಸಮಯದಲ್ಲಿ ಶಾರ್ಟ್ ಸಕ್ರ್ಯೂಟಿನಿಂದಾಗಿ ಬೆಂಕಿ ಹತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿ ನಂದಿಸಿದ ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಕೊಠಡಿ ಒಳಗೆ ಹೋಗಿ ಪರಿಶೀಲಿಸಿದಾಗ ವ್ಯಕ್ತಿ ಶವ ಪತ್ತೆಯಾಗಿದೆ.

25 ದಿನಗಳ ಯುದ್ಧದಲ್ಲಿ 3600 ಪ್ಯಾಲೆಸ್ತೀನ್ ಮಕ್ಕಳು ಸಾವು

ಹಲವು ದಿನಗಳಿಂದ ನಿರುಪಯುಕ್ತವಾಗಿದ್ದ ಕೊಠಡಿಯಲ್ಲಿ ಈ ವ್ಯಕ್ತಿ ಯಾವಾಗ ಸೇರಿಕೊಂಡಿದ್ದ ಎನ್ನುವುದು ಕೂಡಾ ನಿಗೂಢವಾಗಿದ್ದು ತನಿಖೆಯ ನಂತರ ಸತ್ಯ ಹೊರಬೀಳಲಿದೆ. ಬೆಂಕಿಯ ಅರಿವಿಲ್ಲದೆ ಮಲಗಿದ್ದ ವ್ಯಕ್ತಿ ಸುಟ್ಟು ಕರಕಲಾಗಿರಬಹುದು ಎಂಬ ಮಾಹಿತಿ ಇದೆ.

ಸುದ್ದಿ ತಿಳಿದು ಸ್ಥಳಕ್ಕೆ ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಜಿಲ್ಲಾ ಆಸ್ಪತ್ರೆ ಶವಾಗಾರಕ್ಕೆ ಮೃತ ದೇಹ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

“ಪಾಪ ಸಿದ್ದರಾಮಯ್ಯನವರನ್ನು ನೋಡಿದರೆ ಅಯ್ಯೋ ಅನ್ನಿಸುತ್ತಿದೆ”

ಬೆಂಗಳೂರು,ನ.2- ಹಿಂದುಳಿದ ವರ್ಗಗಳ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಪಕ್ಷ ಈ ರೀತಿ ನಡೆಸಿಕೊಳ್ಳುತ್ತಿರುವುದು, ಅವರ ವಿರುದ್ದ ಕಾಂಗ್ರೆಸ್ ಗುಂಪುಗಾರಿಕೆ ನೋಡಿದರೆ ಲೋಕಸಭೆಯ ನಂತರ ಅವರ ಕುರ್ಚಿಗೆ ಕಂಟಕವೆಂದು ತೋರುತ್ತಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಪಾಪ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಅವರ ಸರ್ಕಾರದಲ್ಲೇ ನಡೆಯುತ್ತಿರುವ ಷಡ್ಯಂತ್ರವನ್ನು ನೋಡಿದರೆ ನಮಗೆ ಅಯ್ಯೋ ಅನ್ನಿಸುತ್ತಿದೆ. ಸಿದ್ದರಾಮಯ್ಯನವರು ಹಿಂದಿವಾಲಾ ಸುರ್ಜೆವಾಲಾ ಅವರನ್ನು ಸಮಸ್ಯೆ ಬಗೆಹರಿಸಲು ಕರ್ನಾಟಕಕ್ಕೆ ಸ್ವಾಗತಿಸಿರುವುದು ಅವರ ಅಸಹಾಯಕತೆಯನ್ನು ತೋರುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಮೊದಲು ಇದ್ದ ಎರಡು ಗುಂಪುಗಳು ಈಗ 5 ಆಗಿದ್ದು, ಎಲ್ಲಾ ಗುಂಪಿನ ನಾಯಕರು ಬೇರೆ ಬೇರೆ ರಾಜ್ಯಗಳಲ್ಲಿ ರೆಸಾರ್ಟ್ ಬುಕ್ ಮಾಡಿ ಕಾಯುತ್ತಿರುವಂತೆ ಇದೆ ಎಂದು ಟೀಕಿಸಿದ್ದಾರೆ. ರಾಜ್ಯದ ಜನರಿಗೆ ಇವರ ಅಗ್ರಿಮೆಂಟ್ ಎಷ್ಟು ವರ್ಷಕ್ಕೆ ಎಂದು ಕಾಂಗ್ರೆಸ್ ಪಕ್ಷ ಹಾಗು ಸಿದ್ದರಾಮಯ್ಯನವರು ಸ್ಪಷ್ಟಪಡಿಸಲಿ, ಒಂದು ವರ್ಷವೋ, ಎರಡೋ ! ನಂತರ ಯಾರು? ಈ ಮಂತ್ರಿ ಮಂಡಲ ಒಂದು ವರ್ಷಕ್ಕೋ , ಎರಡೋ ಅಥವಾ ಮೂರೋ! ಈ ಸರ್ಕಾರ ಒಂದು ವರ್ಷಕ್ಕೋ , ಎರಡೂ ಅಥವಾ ಮೂರೋ ಎಂದು ಕುಹುಕವಾಡಿದ್ದಾರೆ.

ಮಸೂದೆಗೆ ಅಂಗೀಕಾರ ನೀಡದ ರಾಜ್ಯಪಾಲರ ವಿರುದ್ಧ ಸುಪ್ರೀಂಗೆ ದೂರು

ಕಾಂಗ್ರೆಸ್ ಕಚೇರಿಯಲ್ಲಿ 3 ಗಂಟೆ ನಡೆದ ರಾಜಿಸಂಧಾನ ವಿಫಲವಾಗಿರುವುದರ ಹಿಂದೆ ಯಾರು ಕೊಟ್ಟಿರುವ ಉಡುಗೊರೆಗಳು ಕಾರಣ ಎಂದು ಕಾಂಗ್ರೆಸ್ ಕಚೇರಿಯ ಗೋಡೆಗಳೂ ಕೂಗುತ್ತಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಚುನಾವಣೆಯ ಸಂಧರ್ಭದಲ್ಲಿ ಪಿಎಸ್‍ಐ ಸ್ಕ್ಯಾಮ್ ಬಗ್ಗೆ ಬಾಯಿ ಬಡಿದುಕೊಂಡಿದ್ದ ಕಾಂಗ್ರೆಸ್ ನಾಯಕರು, ಈಗ ಅವರ ತನಿಖೆ ಎಲ್ಲಿಗೆ ಬಂದಿದೆ ಎಂದು ಜನರಿಗೆ ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಿದ್ದರಾಮಯ್ಯನವರು ಬೇಷರತ್ ಕ್ಷಮೆಯಾಚಿಸಬೇಕು. ಎಷ್ಟು ಜನರನ್ನು ಬಂಧಿಸಲಾಗಿದೆ? ಇವರ ತನಿಖೆಯಿಂದ ಯಾರ ಹೆಸರು ಈ ಹಗರಣದಲ್ಲಿ ಬೆಳಕಿಗೆ ಬಂದಿದೆ? ಇವೆಲ್ಲವನ್ನೂ ಬಹಿರಂಗಪಡಿಸಲಿ. ದಿನಕ್ಕೊಂದು ಪತ್ರಿಕಾಗೋಷ್ಠಿ ನಡೆಸುತ್ತಿದ್ದ ನಾಯಕರು ಈಗ ಎಲ್ಲಿ ತಪ್ಪಿಸಿಕೊಂಡು ತಿರುಗಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಮತ್ತೊಂದು ಟ್ವೀಟ್‍ನಲ್ಲಿ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು, ರಾಜ್ಯದ 200ಕ್ಕೂ ಅಧಿಕ ತಾಲ್ಲೂಕುಗಳು ಬರದ ಬೇಗೆಯಲ್ಲಿ ನಲುಗುತ್ತಿದೆ, ಬರ ಪರಿಹಾರ ಕೊಡಿ ಅಂದರೆ ಸರಕಾರದಲ್ಲಿ ಹಣ ಇಲ್ಲ. ರಾಜ್ಯ ವಿದ್ಯುಚ್ಛಕ್ತಿ ಕೊರತೆಯಿಂದ ನರಳುತ್ತಿದೆ , ವಿದ್ಯುತ್ ಕೊಂಡುಕೊಳ್ಳಲು ಸರಕಾರದಲ್ಲಿ ಹಣ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರೆಸಿ ಎಂದರೆ, ಅಭಿವೃದ್ಧಿ ಕಾಮಗಾರಿಗೆ ಸರಕಾರದಲ್ಲಿ ಹಣ ಇಲ್ಲ. ಅಂಗನವಾಡಿ ಮಕ್ಕಳಿಗೆ ನೀಡುತ್ತಿದ್ದ ಹಾಲು ಮೊಟ್ಟೆ ಕಡಿತ, ಯಾಕೆಂದರೆ ಮೊಟ್ಟೆ ನೀಡಲು ಸರಕಾರದಲ್ಲಿ ಹಣವಿಲ್ಲ ಎಂದು ಕಿಡಿಕಾರಿದ್ದಾರೆ. ಹೇಳುವುದಕ್ಕೆ ಸಮಾಜವಾದಿ, ಆದರೆ ಸ್ವ – ಮಜಾವಾದಿ !! ಎಂದು ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ಉಸ್ತುವಾರಿಗಳು ಕರ್ನಾಟಕಕ್ಕೆ ಬರುವುದೇ ಹಣ ವಸೂಲಿಗಾಗಿ : ಬಿಎಸ್‌ವೈ

ಬೆಂಗಳೂರು,ನ.2- ಎಐಸಿಸಿ ಕಾಂಗ್ರೆಸ್ ಉಸ್ತುವಾರಿಗಳು ಕರ್ನಾಟಕಕ್ಕೆ ಬರುವುದೇ ಹಣ ವಸೂಲಿಗೆ ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ಮೇಲೆ ಅನಗತ್ಯವಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇವರ ಆಂತರಿಕ ಕಚ್ಚಾಟದಿಂದಾಗಿ ಅಭಿವೃದ್ದಿ ಕಾಮಗಾರಿಗಳು ನಿಂತುಹೋಗಿವೆ ಎಂದು ಆರೋಪಿಸಿದರು.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸುರ್ಜೆವಾಲ ಮತ್ತು ಕೆ.ಸಿ.ವೇಣುಗೋಪಾಲ್ ಕರ್ನಾಟಕಕ್ಕೆ ಏಕಾಏಕಿ ಬಂದಿದ್ದು ಏಕೆ ಎಂಬುದು ಎಲ್ಲರಿಗೂ ಗೊತ್ತಿದೆ. ಸಚಿವರು ಮತ್ತು ಶಾಸಕರು ನಾಯಿನರಿಗಳ ತರ ಕಿತ್ತಾಡಿಕೊಳುತ್ತಿದ್ದಾರೆ. ಉಸ್ತುವಾರಿಗಳು ರಾಜ್ಯಕ್ಕೆ ಬರುವುದು ವಸೂಲಿಗೆ ಎಂಬುದು ಬಾಯ್ಬಿಟ್ಟು ಹೇಳಬೇಕೆ ಎಂದು ಪ್ರಶ್ನೆ ಮಾಡಿದರು.

ಕಾಂಗ್ರೆಸ್ ಸರ್ಕಾರ, ಅಧಿಕಾರಕ್ಕೆ ಬಂದು ಆರು ತಿಂಗಳಾಗಿದೆ. ಆದರೆ ಸರ್ಕಾರ ಮಾತ್ರ ಗಾಳಿಯಿಲ್ಲದೇ ಮುಂದೆ ಹೋಗುತ್ತಿಲ್ಲ. ತಮ್ಮ ಆಶ್ವಾಸನೆ ಈಡೇರಿಸಲು ಪರದಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಚಿತ್ರ ಪರಿಸ್ಥಿತಿಯಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು. ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳು ಸ್ಥಗಿತವಾಗಿವೆ.

ವಿದ್ಯುತ್ ದರದಲ್ಲಿ ಭಾರಿ ಹೆಚ್ಚಳ ಮಾಡಿದ್ದಾರೆ. ಬರ ಪೀಡಿತ ಪ್ರದೇಶಕ್ಕೆ ಸಿಎಂ ಸೇರಿ ಒಬ್ಬ ಮಂತ್ರಿ ಕೂಡ ಹೋಗಿಲ್ಲ. ಸರ್ಕಾರ ಯಾವ ರೀತಿ ದಿವಾಳಿ ಯಾಗಿದೆ ಎಂದರೆ ಶಾಸಕರ ಅನುದಾನ 2 ಕೋಟಿ ಬದಲು 50 ಲಕ್ಷ ಮಾತ್ರ ಬಿಡುಗಡೆ ಮಾಡಿದ್ದಾರೆ. ಅನುದಾನವನ್ನು ಸಹ ಸರಿಯಾಗಿ ಬಿಡುಗಡೆ ಮಾಡಿಲ್ಲ ಎಂದು ದೂರಿದರು.

ತಾಂಡಾ, ಬೋವಿ, ಅಂಬೇಡ್ಕರ್ ನಿಗಮಗಳಿಗೆ ಒಂದು ಪೈಸೆಯೂ ಬಿಡುಗಡೆ ಮಾಡಿಲ್ಲ. ರೈತ ಬರಗಾಲದಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಕೃಷಿ ಪಂಪ್‍ಸೆಟ್‍ಗೆ ಉಚಿತ ವಿದ್ಯುತ್ ನೀಡಲಾಗುತಿತ್ತು. ಮುಂದೆ ವಿದ್ಯುತ್ ಶುಲ್ಕ ರೈತನೇ ಭರಿಸುವ ಕೆಲಸ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು. ಸಿದ್ದರಾಮಯ್ಯನವರು ಅನಗತ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡುವ ಚಾಳಿ ಇಟ್ಟುಕೊಂಡಿದ್ದಾರೆ. ಅವರಿಗೆ ಮಾಹಿತಿ ಕೊರತೆ ಇರಬಹುದು. ಕೇಂದ್ರ ಸರ್ಕಾರ ಅಭಿವೃದ್ಧಿಗೆ ಸಾಕಷ್ಟು ಹಣ ಬಿಡುಗಡೆ ಮಾಡಿದೆ ಎಂದು ಸಮರ್ಥಿಸಿಕೊಂಡರು.

ಎನ್‍ಡಿಆರ್‍ಎಫ್‍ನಿಂದ 12,784 ಕೋಟಿ, ಎಸ್‍ಡಿಆರ್‍ಎಫ್‍ನಿಂದಲೂ ಹಣ ಬಿಡುಗಡೆಯಾಗಿದೆ. 5.23 ಲಕ್ಷ ಕೋಟಿ ಕೇಂದ್ರದ ಯೋಜನೆ ಹೊರತುಪಡಿಸಿ ಕೊಟ್ಟಿದ್ದಾರೆ. 37 ಲಕ್ಷ ಕೋಟಿ ರಸ್ತೆ ಕಾಮಗಾರಿಗೆ ನೀಡಲಾಗಿದೆ. ಹೆದ್ದಾರಿ ಕಾಮಗಾರಿಗೆ 47,200 ಕೋಟಿ, ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್ ವೇ ಜೊತೆಗೆ ಚೆನೈ-ಬೆಂಗಳೂರು ಎಕ್ಸ್ಪ್ರೆಸ್ ವೇ ನಿರ್ಮಾಣವಾಗುತ್ತಿದೆ ಎಂದರು.

ಕಿಸಾನ್ ಯೋಜನೆಗೆ ನಮ್ಮ ಸರ್ಕಾರ 4 ಸಾವಿರ ಕೊಡುತ್ತಿತ್ತು. ಈಗ ಸಿದ್ದರಾಮಯ್ಯನವರು ಅದನ್ನೂ ನಿಲ್ಲಿಸಿದ್ದಾರೆ. ಭದ್ರಾ ಯೋಜನೆಗೆ ನೀಡಲಾಗಿದೆ. ರಾಜ್ಯದ ರೈಲು ಯೋಜನೆಗೆ 800 ಕೋಟಿ ನೀಡಿದರೆ ಈಗ 3,700 ಕೋಟಿ ಕೊಡಲಾಗುತ್ತಿದೆ. ಬೆಂಗಳೂರು ಉಪರೈಲು ಯೋಜನೆಗೆ 400 ಕೋಟಿ ನೀಡಲಾಗಿದೆ. ಬೆಂಗಳೂರು ಮೆಟ್ರೋ ರೈಲು ಎರಡು, ಮೂರನೇ ಯೋಜನೆಗೆ ಹಣ ಬಿಡುಗಡೆ ಮಾಡಿದೆ. ಮೋದಿ ಅವರು ರಾಜಕೀಯ ಮಾಡದೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ನಾವು ಆರು ತಿಂಗಳು ಅವಕಾಶ ನೀಡಿದೆವು. ಆದರೆ ಆರು ತಿಂಗಳಲ್ಲಿ ಯಾವುದೇ ಸುಧಾರಣೆ ಆಗಲಿಲ್ಲ. ಹಾಗಾಗಿ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗಲಿದೆ. ಹೊಸ ಪಂಪ್‍ಸೆಟ್‍ಗೆ ರೈತ ಎರಡು ಲಕ್ಷ ಕೊಡಬೇಕಿದೆ ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಡಾ.ಸಿ.ಎನ್.ಅಶ್ವಥ್ ನಾರಾಯಣ, ರಘು, ಎಸ್.ಆರ್.ವಿಶ್ವನಾಥ್, ವಿಧಾನಪರಿಷತ್ ಸದಸ್ಯ ರವಿಕುಮಾರ್, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ಮಾಜಿ ಸಚಿವ ಗೋವಿಂದ ಕಾರಜೋಳ ಮತ್ತಿತರರು ಉಪಸ್ಥಿತರಿದ್ದರು.

ಐಐಟಿ ವಿದ್ಯಾರ್ಥಿ ಆತ್ಮಹತ್ಯೆ

ನವದೆಹಲಿ,ನ.2- ಐಐಟಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ತನ್ನ ಮನೆಯಲ್ಲಿ ಭಾರ ಎತ್ತುವ ರಾಡ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪೂರ್ವ ದೆಹಲಿಯ ವಿವೇಕ್ ವಿಹಾರ್ ಪ್ರದೇಶದಲ್ಲಿ ನಡೆದಿದೆ.

ನಾಲ್ಕನೇ ವರ್ಷದ ಬಿಟೆಕ್ ವಿದ್ಯಾರ್ಥಿ ಪನವ್ ಜೈನ್(23) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಪೋಷಕರು ವಾಕಿಂಗ್ ಮುಗಿಸಿ ನಿನ್ನೆ ರಾತ್ರಿ 9 ಗಂಟೆಗೆ ಮನೆಗೆ ಹಿಂತಿರುಗಿದಾಗ ಮಗ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ತಕ್ಷಣವೇ ಪೋಷಕರು ಅವರನ್ನು ಪುಷ್ಪಾಂಜಲಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆ ವೇಳೆಗೆ ಪನವ್ ಜೈನ್ ಮೃತಪಟ್ಟಿದ್ದಾನೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

25 ದಿನಗಳ ಯುದ್ಧದಲ್ಲಿ 3600 ಪ್ಯಾಲೆಸ್ತೀನ್ ಮಕ್ಕಳು ಸಾವು

ಪನವ್ ತಮ್ಮ ಮನೆಯಲ್ಲಿ ಅಳವಡಿಸಲಾಗಿದ್ದ ಭಾರ ಎತ್ತುವ ರಾಡ್‍ನಲ್ಲಿ ದುಪಟ್ಟಾ (ಸ್ಕಾರ್ಫ್) ನಿಂದ ನೇಣು ಹಾಕಿಕೊಂಡಿದ್ದಾನೆ. ತನ್ನ ಮಗ ಕಳೆದ ಕೆಲವು ತಿಂಗಳುಗಳಿಂದ ಒತ್ತಡ ಮತ್ತು ಖಿನ್ನತೆಯಿಂದ ಬಳಲುತ್ತಿದ್ದಾನೆ ಮತ್ತು ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದ ಎಂದು ಪವನ್ ತಂದೆ ತಿಳಿಸಿದ್ದಾರೆ.

ಈವರೆಗೂ ಯಾವುದೇ ಆತ್ಮಹತ್ಯೆಪತ್ರ ಪತ್ತೆಯಾಗಿಲ್ಲ . ಪ್ರಕರಣ ಕುರಿತು ಹೆಚ್ಚಿನ ತನಿಖೆಗೆ ಮುಂದಾಗಿರುವುದಾಗಿ ಪೋಲೀಸರು ತಿಳಿಸಿದ್ದಾರೆ.

ಇಡಿ ವಿಚಾರಣೆಗೆ ಕೇಜ್ರಿವಾಲ್ ಗೈರು

ನವದೆಹಲಿ,ನ.2- ದೆಹಲಿ ಅಬಕಾರಿ ನೀತಿ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೀಡಿರುವ ಸಮನ್ಸ್ ಕಾನೂನು ಬಾಹಿರ ಮತ್ತು ರಾಜಕೀಯ ಪ್ರೇರಿತ ಎಂದು ದೂರಿರುವ ಮುಖ್ಯಮಂತ್ರಿ ಕೇಜ್ರಿವಾಲ್ ವಿಚಾರಣೆಗೆ ಗೈರಾಗಿದ್ದಾರೆ. ಅಕ್ರಮ ಹಣ ವರ್ಗಾವಣೆ ಕುರಿತು ವಿಚಾರಣೆಗೆ ಇಂದು ಹಾಜರಾಗಬೇಕೆಂದು ಇಡಿ ಅಧಿಕಾರಿಗಳು ಕೇಜ್ರಿವಾಲ್‍ಗೆ ಸಮನ್ಸ್ ಜಾರಿ ಮಾಡಿದ್ದರು. ಈ ಸಮನ್ಸ್‍ಗೆ ಉತ್ತರ ನೀಡಿರುವ ಕೇಜ್ರಿವಾಲ್ ಇದು ಸಂಪೂರ್ಣವಾಗಿ ರಾಜಕೀಯ ಪ್ರೇರಿತ. ಬಿಜೆಪಿ ನಿರ್ದೇಶನದಂತೆ ನನಗೆ ಸಮನ್ಸ್ ಜಾರಿ ಮಾಡಲಾಗಿದೆ. ಮೊದಲು ಇದನ್ನು ಹಿಂಪಡೆಯಿರಿ ಎಂದು ಮನವಿ ಮಾಡಿದ್ದಾರೆ.

ರಾಜಕೀಯ ಪ್ರೇರಿತವಾದ ಸಮನ್ಸ್‍ಗೆ ನಾನು ವಿಚಾರಣೆಗೆ ಹಾಜರಾಗಬೇಕಾದ ಅಗತ್ಯವಿಲ್ಲ. ಐದು ರಾಜ್ಯಗಳ ವಿಧಾನಸಭೆ ಚುನಾವಣೆ ವೇಳೆ ನಾನು ಪ್ರಚಾರದಲ್ಲಿ ತೊಡಗಬಾರದೆಂಬ ಒಂದೇ ಕಾರಣಕ್ಕಾಗಿ ಸಮನ್ಸ್ ಜಾರಿ ಮಾಡಲಾಗಿದೆ. ಕೂಡಲೇ ಇಡಿ ಅಧಿಕಾರಿಗಳು ಸಮನ್ಸ್ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಮೂಲಗಳ ಪ್ರಕಾರ ಕೇಜ್ರಿವಾಲ್ ಇಂದು ಮಧ್ಯಪ್ರದೇಶದ ಸಿಂಗ್ರೌಲಿ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ರಾಣಿ ಅಗರ್‍ವಾಲ್ ಪರವಾಗಿ ರೋಡ್ ಶೋ ನಡೆಸಲಿದ್ದಾರೆ ಎನ್ನಲಾಗಿದೆ. ಮಧ್ಯಪ್ರದೇಶದಲ್ಲಿ ಎಎಪಿಯು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಸೇರಿದಂತೆ ಮತ್ತಿತರರು ಪ್ರಚಾರದಲ್ಲಿ ತಡಗಿಸಿಕೊಳ್ಳಲಿದ್ದಾರೆ.

ಬಿಜೆಪಿ ನನ್ನನ್ನು ಪ್ರಚಾರ ಮಾಡದಂತೆ ತಡೆಯಲು ಸರ್ಕಾರಿ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ನಾನು ತನಿಖಾ ಸಂಸ್ಥೆಗಳ ಬಗ್ಗೆ ಮಾತನಾಡುವುದಿಲ್ಲ. ಆದರೆ ಅವುಗಳು ಕಾನೂನಿನ ಪ್ರಕಾರ ನಡೆದುಕೊಳ್ಳಬೇಕು. ಎಲ್ಲವೂ ಕೇಂದ್ರ ಸರ್ಕಾರದ ನಿರ್ದೇಶನದಂತೆ ನಡೆಯುತ್ತಿರುವುದರಿಂದ ನನಗೆ ನೀಡಿರುವ ಸಮನ್ಸ್ ಕಾನೂನು ಬಾಹಿರ ಎಂದು ತಮ್ಮ ನಡೆಯನ್ನು ಕೇಜ್ರಿವಾಲ್ ಸಮರ್ಥಿಸಿಕೊಂಡಿದ್ದಾರೆ.

25 ದಿನಗಳ ಯುದ್ಧದಲ್ಲಿ 3600 ಪ್ಯಾಲೆಸ್ತೀನ್ ಮಕ್ಕಳು ಸಾವು

ಏನಿದು ಪ್ರಕರಣ:
ದೆಹಲಿ ಸರ್ಕಾರ 2021ರ ನವೆಂಬರ್ 17ರಂದು ಈ ಹೊಸ ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಭ್ರಷ್ಟಾಚಾರ ಆರೋಪದ ಮೇಲೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಇದನ್ನು ರದ್ದುಗೊಳಿಸಲಾಯಿತು. ಈ ಅಬಕಾರಿ ನೀತಿಯು ಆರ್ಥಿಕ ಲಾಭ ಪಡೆಯುವ ಸಲುವಾಗಿ ಮದ್ಯದ ಪರವಾನಗಿಯನ್ನು ಅನರ್ಹರಿಗೂ ನೀಡುವಲ್ಲಿ ಸರ್ಕಾರ ಒಲವು ತೋರಿಸಿದೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ದೆಹಲಿ ಸರ್ಕಾರ ಮತ್ತು ಸಿಸೋಡಿಯಾ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದರು.

ಕಳೆದ ಫೆಬ್ರವರಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮತ್ತು ಅ.4ರಂದು ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರನ್ನು ಬಂಸಿದ ಅದೇ ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ಇಡಿ ಸಮನ್ಸ್ ನೀಡಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್‍ನಲ್ಲಿ ಕೇಜ್ರಿವಾಲ್ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಸುಮಾರು ಒಂಬತ್ತು ಗಂಟೆಗಳ ಕಾಲ ಪ್ರಶ್ನಿಸಿತ್ತು. ದೆಹಲಿ ಸರ್ಕಾರದ 2021-22ರ ಅಬಕಾರಿ ನೀತಿಯನ್ನು ಇಡಿ ಮತ್ತು ಸಿಬಿಐ ತನಿಖೆ ನಡೆಸುತ್ತಿದೆ.ಏಕೆಂದರೆ ಇದು ಕೆಲವು ಮದ್ಯದ ವ್ಯಾಪಾರಿಗಳಿಗೆ ಒಲವು ತೋರಿದೆ ಎಂದು ಆಪಾದಿಸಲಾಗಿದೆ.

2024ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಭಾರತೀಯ ಮೈತ್ರಿಕೂಟದ ಉನ್ನತ ನಾಯಕರನ್ನು ಗುರಿಯಾಗಿಸುವ ಬಿಜೆಪಿಯ ಯೋಜನೆಯ ಭಾಗವಾಗಿ ದೆಹಲಿ ಮುಖ್ಯಮಂತ್ರಿಯನ್ನು ಮೊದಲು ಬಂಧಿಸಲಾಗುವುದು ಎಂದು ಕೇಜ್ರಿವಾಲ್ ಪಕ್ಷ ಆರೋಪಿಸಿದೆ.

ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಎಎಪಿ ನಾಯಕ ರಾಘವ್ ಚಡ್ಡಾ ಅವರು 2014 ರಿಂದ ತನಿಖಾ ಸಂಸ್ಥೆಗಳು ದಾಖಲಾದ ಶೇಕಡಾ 95 ರಷ್ಟು ಪ್ರಕರಣಗಳು ವಿರೋಧ ಪಕ್ಷದ ನಾಯಕರ ವಿರುದ್ಧವಾಗಿವೆ ಎಂದಿದ್ದಾರೆ. ಇದೀಗ ಭಾರತ ಮೈತ್ರಿಕೂಟ ರಚನೆಯಾದ ನಂತರ ಬಿಜೆಪಿಯು ಕಂಗಾಲಾಗಿದೆ. ಅವರು ಭಾರತದ ಉನ್ನತ ನಾಯಕರನ್ನು ಗುರಿಯಾಗಿಸಲು ಯೋಜನೆ ರೂಪಿಸಿದ್ದಾರೆ ಎಂದು ನಮಗೆ ಮೂಲಗಳಿಂದ ತಿಳಿದುಬಂದಿದೆ. ಈ ಯೋಜನೆಯಲ್ಲಿ ಮೊದಲ ಬಂಧನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಗಿರುತ್ತದೆ ಎಂದು ಅವರು ಹೇಳಿದರು.

ಬಿಜೆಪಿಯು ದೆಹಲಿಯ ಎಲ್ಲಾ ಏಳು ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳುತ್ತಿದೆ ಎಂದು ತಿಳಿದಿದೆ. ಕೇಜ್ರಿವಾಲ್ ಅವರನ್ನು ಚುನಾವಣೆಯಲ್ಲಿ ಸ್ರ್ಪಸಲು ಸಾಧ್ಯವಾಗದಂತೆ ಕೇಜ್ರಿವಾಲ್ ಅವರನ್ನು ಬಂಧಿಸಲು ಅದು ಯೋಜಿಸುತ್ತಿದೆ ಎಂದು ಚಡ್ಡಾ ಆರೋಪಿಸಿದ್ದರು.