Home Blog Page 1862

ಏಷ್ಯನ್ ಚಾಂಪಿಯನ್‍ಶಿಪ್‍ನ ಏರ್ ರೈಫಲ್‍ನಲ್ಲಿ ಬೆಳ್ಳಿ ಗೆದ್ದ ಬಾಬುಟಾ

ನವದೆಹಲಿ, ಅ 27 (ಪಿಟಿಐ) – ಕೊರಿಯಾದ ಚಾಂಗ್ವಾನ್‍ನಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಇಂದು ಭಾರತದ ಶೂಟರ್ ಅರ್ಜುನ್ ಬಾಬುಟಾ ಅವರು ಪುರುಷರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಪ್ಯಾರಿಸ್ ಒಲಿಂಪಿಕ್ ಕೋಟಾದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಬಾಬುತಾ ಅವರು ಭಾರತಕ್ಕೆ ಒಲಂಪಿಕ್ ಕೋಟಾ ಸ್ಥಾನವನ್ನು ಗಳಿಸಿದ ಒಂಬತ್ತನೇ ಭಾರತೀಯ ಶೂಟರ್ ಆಗಿದ್ದಾರೆ. ಅವರು ಪ್ಯಾರಿಸ್ ಸ್ಥಾನವನ್ನು ಗಳಿಸಿದ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಆರನೇ ರೈಫಲ್ ಶೂಟರ್ ಆಗಿ ಹೊರಹೊಮ್ಮಿದ್ದಾರೆ.

ಭಾರತೀಯ ಶೂಟರ್‍ಗಳು ರೈಫಲ್‍ನಲ್ಲಿ ಆರು ಕೋಟಾ ಸ್ಥಾನಗಳನ್ನು ಪಡೆದಿದ್ದಾರೆ, ಶಾಟ್‍ಗನ್‍ನಲ್ಲಿ ಎರಡು ಮತ್ತು ಪಿಸ್ತೂಲ್‍ನಲ್ಲಿ ಕೇವಲ ಒಂದು ಸ್ಥಾನ ಪಡೆದಿದ್ದಾರೆ. ಚಂಡೀಗಢದಿಂದ ಬಂದವರು ಆದರೆ ಕರ್ಣಿ ಸಿಂಗ್ ರೇಂಜ್‍ಗಳಲ್ಲಿ ಶೂಟಿಂಗ್ ಕ್ರೀಡೆಗಾಗಿ ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್‍ನಲ್ಲಿ ತರಬೇತಿ ಪಡೆಯುತ್ತಿರುವ ಬಾಬುತಾ, 10 ಮೀಟರ್ ಏರ್ ರೈಫಲ್‍ನಲ್ಲಿ ದೇಶಕ್ಕೆ ಎರಡನೇ ಮತ್ತು ಅಂತಿಮ ಒಲಿಂಪಿಕ್ ಕೋಟಾವನ್ನು ಲಾಕ್ ಮಾಡಿದರು, ದೇಶವಾಸಿ ರುದ್ರಂ?ï ಪಾಟೀಲ್ 2022 ರ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಮೊದಲಿಗರಾಗಿದ್ದಾರೆ.

ಕನಕಪುರವನ್ನು ಬೆಂಗಳೂರಿಗೆ ವಿಚಾರ ಖಂಡಿಸಿದ ಅಶ್ವಥ್ ನಾರಾಯಣ್

ನಿರ್ದಿಷ್ಟ ಶೂಟಿಂಗ್ ಈವೆಂಟ್‍ನಲ್ಲಿ ದೇಶವು ಗರಿಷ್ಠ ಎರಡು ಕೋಟಾ ಸ್ಥಾನಗಳನ್ನು ಗೆಲ್ಲಬಹುದು. ಎಂಟು ಶೂಟರ್‍ಗಳ ಫೈನಲ್‍ನಲ್ಲಿ ಬಾಬುತಾ 251.2 ಎಸೆತದಲ್ಲಿ 2022 ರ ಟೋಕಿಯೊ ಒಲಿಂಪಿಕ್ಸ್‍ನಲ್ಲಿ ಬೆಳ್ಳಿ ಪದಕ ವಿಜೇತ ಚೀನಾದ ಶೆಂಗ್ ಲಿಹಾವೊ ನಂತರ 252.1 ಶೂಟ್ ಗಳಿಸಿದರು. ಮತ್ತೊಬ್ಬ ಭಾರತೀಯ ದಿವ್ಯಾಂಶ್ ಪನ್ವಾರ್ ಕೂಡ ಫೈನಲ್‍ಗೆ ಪ್ರವೇಶಿಸಿದರು, ಆದರೆ 209.6 ಅಂಕ ಗಳಿಸಿ ನಾಲ್ಕನೇ ಸ್ಥಾನ ಪಡೆದರು.

ಬಾಬುತಾ ಅರ್ಹತಾ ಸುತ್ತಿನಲ್ಲಿ 633.4 ಅಂಕಗಳನ್ನು ಗಳಿಸಿ ಅಗ್ರಸ್ಥಾನದಲ್ಲಿದ್ದರೆ, ದಿವ್ಯಾನ್ 632.3 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರು. ಭಾರತದ ಇತರ ಇಬ್ಬರು ಶೂಟರ್‍ಗಳಾದ ರವಿಶಂಕರ್ ಕಾರ್ತಿಕ್ (631.5) ಮತ್ತು ರುದ್ರಂ? (630.8) ಕೂಡ ಉತ್ತಮ ಸ್ಕೋರ್‍ಗಳನ್ನು ಗಳಿಸಿ ಅಗ್ರ-ಎಂಟರಲ್ಲಿ ಸ್ಥಾನ ಪಡೆದರು.

ಆದರೆ ಕಾರ್ತಿಕ್ ಮತ್ತು ರುದ್ರಂ? ಎಂಟು ಆಟಗಾರರ ಫೈನಲ್ ಪ್ರವೇಶಿಸಲು ಸಾಧ್ಯವಾಗಲಿಲ್ಲ ಏಕೆಂದರೆ ಅವರು ಶ್ರೇಯಾಂಕದ ಅಂಕಗಳಿಗಾಗಿ ಮಾತ್ರ ಸ್ರ್ಪಧಿಸುತ್ತಿದ್ದರು ಮತ್ತು ಹೀಗಾಗಿ ಫೈನಲ್‍ಗೆ ಅರ್ಹರಾಗಿರಲಿಲ್ಲ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-10-2023)

ನಿತ್ಯ ನೀತಿ : ಮನುಷ್ಯ ಪಶುಭಾವದಿಂದ ಬಾಳುವುದನ್ನು ಬಿಟ್ಟು ತನ್ನಲ್ಲಿರುವ ದೈವೀಗುಣಗಳನ್ನು ಜಾಗೃತಗೊಳಿಸಿಕೊಳ್ಳಬೇಕು. ಆಗ ಮಾತ್ರ ದೈವತ್ವ ಪ್ರಜ್ಞೆ ಜಾಗೃತವಾಗುತ್ತದೆ.

ಶುಕ್ರವಾರ ಪಂಚಾಂಗ 27-10-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ತ್ರಯೋದಶಿ / ನಕ್ಷತ್ರ: ಉತ್ತರಾಭಾದ್ರ / ಯೋಗ: ಹರ್ಷಣ / ಕರಣ: ಗರಜ

ಸೂರ್ಯೋದಯ : ಬೆ.06.12
ಸೂರ್ಯಾಸ್ತ : 05.55
ರಾಹುಕಾಲ : 10.30-12.00
ಯಮಗಂಡ ಕಾಲ : 3.00-4.30
ಗುಳಿಕ ಕಾಲ : 7.30-9.00

ರಾಶಿ ಭವಿಷ್ಯ
ಮೇಷ
: ಅಮೂಲ್ಯ ವಸ್ತುಗಳ ಖರೀದಿಗೆ ಇಂದು ಬಹಳ ಉತ್ತಮವಾದ ದಿನ. ದೂರ ಪ್ರಯಾಣ ಮಾಡುವಿರಿ.
ವೃಷಭ: ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಸಾಕಷ್ಟು ಸಮಯ ಕಳೆಯಲು ಬಯಸುವಿರಿ.
ಮಿಥುನ: ಅಧ್ಯಯನ ಮಾಡುವಾಗ ಕೆಲವು ಸವಾಲು ಗಳನ್ನು ಎದುರಿಸಬೇಕಾಗುತ್ತದೆ.

ಕಟಕ: ಉದ್ಯೋಗ ಬದಲಾಯಿಸಲು ಯೋಚಿಸುವಿರಿ. ನೆರೆಹೊರೆ ಯವರೊಂದಿಗೆ ಕಲಹ ಉಂಟಾಗಲಿದೆ.
ಸಿಂಹ: ಯೋಜಿತ ರೀತಿಯಲ್ಲಿ ಹೋದರೆ ಸಮಸ್ಯೆಗಳು ನಿವಾರಣೆಯಾಗುವುದರಲ್ಲಿ ಸಂದೇಹವಿಲ್ಲ.
ಕನ್ಯಾ: ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ ಕಾರ್ಯಕ್ಷಮತೆ ಬಹಳ ಉತ್ತಮವಾಗಿರುತ್ತದೆ. ಅನಿರೀಕ್ಷಿತ ಧನಾಗಮನ.

ತುಲಾ: ಅನಾರೋಗ್ಯ ಕಾರಣದಿಂದಾಗಿ ಮನಸ್ಸಿಗೆ ಕಿರಿಕಿರಿ ಉಂಟಾಗಲಿದೆ. ದೂರ ಪ್ರಯಾಣ ಮಾಡುವಿರಿ.
ವೃಶ್ಚಿಕ: ಯಶಸ್ಸು ಸಾಧಿಸಲು ಯಾವುದೇ ಅಪಾಯವನ್ನಾದರೂ ಎದುರಿಸಲು ಸಿದ್ಧರಾಗಿರುತ್ತೀರಿ.
ಧನುಸ್ಸು: ಕುಟುಂಬದ ಸದಸ್ಯರಿಂದ ಒಳ್ಳೆಯ ಸುದ್ದಿ ಕೇಳುವಿರಿ. ಅತ್ತಿಗೆಯಿಂದ ಲಾಭವಾಗಲಿದೆ.

ಮಕರ: ವೈದ್ಯವೃತ್ತಿಯಲ್ಲಿರುವವರು ಅಕ ಶ್ರಮ ಪಡುವುದರಿಂದ ಆಯಾಸ ಉಂಟಾಗಲಿದೆ.
ಕುಂಭ: ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ. ಇಲ್ಲದಿದ್ದರೆ ಅಪಘಾತ ಸಂಭವಿಸಬಹುದು.
ಮೀನ: ಸ್ವಯಂಕೃತ ಅಪರಾಧಗಳಿಂದ ನಷ್ಟ ಅನುಭವಿಸುವಿರಿ. ಸಾಲದ ಚಿಂತೆ ಕಾಡಲಿದೆ.

ಕನಕಪುರವನ್ನು ಬೆಂಗಳೂರಿಗೆ ವಿಚಾರ ಖಂಡಿಸಿದ ಅಶ್ವಥ್ ನಾರಾಯಣ್

ಬೆಂಗಳೂರು, ಅ.26- ಬೆಂಗಳೂರಿಗೆ ಕನಕಪುರವನ್ನು ಸೇರಿಸುವ ಡಿ.ಕೆ.ಶಿವಕುಮಾರ್ ಚಿಂತನೆಯನ್ನು ಮಾಜಿ ಸಚಿವ ಸಿಎನ್ ಅಶ್ವಥ್ ನಾರಾಯಣ್ ಖಂಡಿಸಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ಬೆಂಗಳೂರಿಗೂ ತಮಗೂ ಏನು ಸಂಬಂಧ ಎಂದು ಕೇಳಿದಾಗಲೆಲ್ಲ ಉತ್ತರಿಸಲಾಗದೇ ತಡಬಡಿಸುತ್ತಿದ್ದ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನ ಜೊತೆ ಸಂಬಂಧ ಕಲ್ಪಿಸಿಕೊಳ್ಳಲು ಶಾರ್ಟ್‍ಕಟ್ ಮಾರ್ಗ ಅನುಸರಿಸಿದಂತಿದೆ. ಕನಕಪುರವನ್ನು ಬೆಂಗಳೂರಿಗೆ ಸೇರಿಸಿದರೆ ತಾವು ಬೆಂಗಳೂರಿನವರು ಎಂದು ಹೇಳಿಕೊಳ್ಳಬಹುದು ಎನ್ನುವ ಆಲೋಚನೆ ಅವರದ್ದಾಗಿರಬಹುದು ಎಂದು ಟಾಂಗ್ ನೀಡಿದ್ದಾರೆ.

ರಾಮನಗರಕ್ಕಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡ್ತೀನಿ : ಹೆಚ್‌ಡಿಕೆ

ಕನಕಪುರವನ್ನು ಬೆಂಗಳೂರಿಗೆ ಸೇರಿಸಿದರೆ ಆಸ್ತಿಯ ಮೌಲ್ಯ ಹತ್ತುಪಟ್ಟು ಹೆಚ್ಚಾಗಲಿದೆ ಎನ್ನುವ ಮೂಲಕ ನಿಮ್ಮ ಕೃಷಿ ಭೂಮಿಯನ್ನು ಮಾರಿಕೊಳ್ಳಿ ಎಂದು ಡಿ.ಕೆ.ಶಿವಕುಮಾರ್ ಅವರು ಪರೋಕ್ಷವಾಗಿ ರೈತರಿಗೆ ಕರೆ ನೀಡಿದ್ದಾರೆ. ಕನಕಪುರವನ್ನು ಕನಕಪುರವಾಗಿ ಅಭಿವೃದ್ಧಿಪಡಿಸಲಾಗದ ಅವರಿಗೆ ಈ ಆಲೋಚನೆ ಬಂದಿರುವುದು ಹಾಸ್ಯಾಸ್ಪದ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬೆಂಗಳೂರಿಂದ ಕನಕಪುರ ಮಾರ್ಗವಾಗಿ ದಿಂಡಿಗಲ್ಲಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣವಾಗಿತ್ತಿದ್ದು, ಕನಕಪುರದ ಆರ್ಥಿಕ ಚಟುವಟಿಕೆಗೆ ವೇಗ ಸಿಗಲಿದೆ. ಜಲ ಜೀವನ್ ಮಿಷನ್ ಅಡಿ ರಾಮನಗರದ ಮನೆ ಮನೆಗೂ ಕುಡಿಯುವ ನೀರು ಸೌಲಭ್ಯ ಕಲ್ಪಿಸಿದ್ದೇವೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಬೆಂಗಳೂರು ಸ್ಯಾಟಲೈಟ್ ಟೌನ್‍ಶಿಪ್ ರಿಂಗ್ ರೋಡ್ ನಿರ್ಮಾಣವಾಗುತ್ತಿದೆ, ಸಬ್ ಅರ್ಬನ್ ರೈಲು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಕನಕಪುರದ ಜನತೆಯ ಜೀವನ ಮಟ್ಟ ಸುಧಾರಿಸಲು ಅಭಿವೃದ್ಧಿಯ ಮಾರ್ಗ ಹಿಡಿಯುವುದನ್ನು ಬಿಟ್ಟು ಈ ರೀತಿಯ ಅಡ್ಡ ಮಾರ್ಗ ಹಿಡಿದರೆ ಕಬ್ಬಾಳಮ್ಮ ಮೆಚ್ಚುವಳೇ? ಎಂದು ಪ್ರಶ್ನಿಸಿದ್ದಾರೆ.

ನಮ್ಮ ಸರ್ಕಾರದ ಅವಯಲ್ಲಿ ಜಿಲ್ಲೆಯ ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ ಸುಧಾರಣೆಗೆ ಆದ್ಯತೆ ನೀಡಿದ್ದೇವೆ. ಕನಕಪುರವನ್ನು ಬೆಂಗಳೂರಿಗೆ ಸೇರಿಸುವುದರಿಂದ ಭೂಮಿಯ ಮೌಲ್ಯ ಹೆಚ್ಚಾಗುತ್ತದೆ ಎಂಬ ಕಪೋಲ ಕಲ್ಪಿತ ಆಲೋಚನೆಯನ್ನು ಮುಗ್ಧ ಜನರ ತಲೆಯಲ್ಲಿ ತುಂಬಿ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ. ಬದಲಾಗಿ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡಿ ಎಂದು ಸಲಹೆ ನೀಡಿದ್ದಾರೆ.

“ಬಿಜೆಪಿ ನಾಯಕರಿಗೆ ಮಾಡೋಕೆ ಕೆಲಸ ಇಲ್ಲ, ಬಾಯಿ ಚಟಕ್ಕೆ ಮಾತಾಡ್ತಾರೆ”

ಕೆಂಗಲ್ ಹನುಮಂತಯ್ಯ, ಶಿವಕುಮಾರ ಸ್ವಾಮೀಜಿಗಳು, ಬಾಲಗಂಗಾಧರನಾಥ ಸ್ವಾಮೀಜಿಯವರು ಜನಿಸಿದ ಪುಣ್ಯ ಭೂಮಿಯಲ್ಲಿ ಸೇವೆ ಮಾಡುವ ಸದವಕಾಶವನ್ನು ಈ ಭಾಗದ ಜನತೆ ತಮಗೆ ಕಲ್ಪಿಸಿದ್ದಾರೆ. ಆದರೆ, ನಾವು ರಾಮನಗರದವರೇ ಅಲ್ಲ ಎನ್ನುವ ನಿಮ್ಮ ಮಾತನ್ನು ರಾಮದೇವರ ಬೆಟ್ಟದ ಮೇಲಿರುವ ಆ ಶ್ರೀರಾಮಚಂದ್ರ ಮೆಚ್ಚುವನೇ? ಎಂದು ಪ್ರಶ್ನೆ ಹಾಕಿದ್ದಾರೆ.

ಲೂಟಿ ಹೊಡೆಯಲು ಬೆಂಗಳೂರಿನಲ್ಲಿ ಸುರಂಗ ಮಾರ್ಗ : ಬಿಜೆಪಿ ಆರೋಪ

ಬೆಂಗಳೂರು,ಅ.26- ಲೂಟಿ ಹೊಡೆಯುವ ಉದ್ದೇಶದಿಂದ ಬೆಂಗಳೂರಿನಲ್ಲಿ ಸುರಂಗ ಮಾರ್ಗ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಆರೋಪ ಮಾಡಿದೆ. ಈ ಕುರಿತಾಗಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ( ಟ್ವಿಟ್ಟರ್) ನಲ್ಲಿ ಬಿಡುಗಡೆ ಮಾಡಿರುವ ಬಿಜೆಪಿ, ಇಸ್ರೇಲ್ ನಿರ್ನಾಮ ಮಾಡಲು ಹಮಾಸ್ ಗಾಜಾದಲ್ಲಿ 500 ಕಿ.ಮೀ ಸುರಂಗ ನಿರ್ಮಾಣ ಮಾಡಿದ್ದಾರೆ. ಅದೇ ರೀತಿಯಲ್ಲಿ ಕರ್ನಾಟವನ್ನು ದೋಚಲು ಸುರಂಗ ತೋಡುವ ಕೆಲಸಕ್ಕೆ ಕೈಹಾಕುತ್ತಿದೆ ಎಂದು ಆರೋಪಿಸಿದೆ.

ಅಷ್ಟೇ ಅಲ್ಲದೆ ಈ ಸುರಂಗ ಮಾರ್ಗದಲ್ಲಿ ಯಾರಿಗೆ ಎಷ್ಟು ಪಾಲು ಎಂಬ ನಿಟ್ಟಿನಲ್ಲಿ ಜಂಗೀಕುಸ್ತಿ ನಡೆಯುತ್ತಿದೆ ಎಂದು ಆರೋಪಿಸಿ ಬಿಜೆಪಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಆರೋಪ ಮಾಡಿದೆ.

ರಾಮನಗರಕ್ಕಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡ್ತೀನಿ : ಹೆಚ್‌ಡಿಕೆ

ಡಿಕೆಶಿ ಹಾಗೂ ಸತೀಶ್ ಜಾರಕಿಹೊಳಿ ನಡುವಿನ ತಿಕ್ಕಾಟಕ್ಕೆ ಪ್ರಮುಖ ಕಾರಣವಾಗಿರುವುದು ಭ್ರಷ್ಟಾಚಾರ ಮಾಡಲು ಬೆಂಗಳೂರು ನಗರದಲ್ಲಿ ತೋಡಲು ಹೊರಟಿರುವ ಸರಂಗ ಮಾರ್ಗವಾಗಿದೆ ಎಂದು ವಿಡಿಯೋದಲ್ಲಿ ಆರೋಪ ಮಾಡಲಾಗಿದೆ.

ಕಿ. ಮೀಟರ್‍ಗೆ 450 ಕೋಟಿ ಖರ್ಚು ಮಾಡಿ 190 ಕಿ. ಮೀಗೆ ಲಕ್ಷ ಕೋಟಿ ರೂಪಾಯಿ ಖರ್ಚು ಆಗುತ್ತದೆ. ಈಗಾಗಲೇ 65 ಕಿ.ಮೀ ಸುರಂಗ ಕೊರೆಯಲು ಆದಷ್ಟು ಬೇಗ ಟೆಂಡರ್ ಕರೆದು ತಮ್ಮ ಜೇಬು ತುಂಬಿಸಿಕೊಳ್ಳುವ ಉದ್ದೇಶವನ್ನು ಡಿಕೆಶಿ ಹಾಗೂ ಸತೀಶ್ ಜಾರಕಿಹೊಳಿ ಹೊಂದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಚಳಿಗಾಲಕ್ಕೂ ಮುನ್ನವೇ ಮಂಜು ಮುಸುಕಿದ ವಾತಾವರಣ

ಬೆಂಗಳೂರು, ಅ.26- ಚಳಿಗಾಲ ದಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿದ್ದ ಮಂಜು ಕವಿಯುವ ವಾತಾವರಣ ಅಕ್ಟೋಬರ್‍ನಲ್ಲೇ ಕೆಲವೆಡೆ ಗೋಚರಿಸುತ್ತಿದೆ. ರಾಜ್ಯದ ಹಲವೆಡೆ ಬೆಳಗಿನ ಜಾವ ಮಂಜು ಮುಸುಕಿದ ವಾತಾ ವರಣವಿದ್ದು, ಮಳೆ ಬರುವ ಸಾಧ್ಯತೆ ತೀರಾ ವಿರಳ. ಹವಾಮಾನದಲ್ಲಿ ಉಂಟಾಗಿರುವ ಬದಲಾವಣೆಯ ಪರಿಣಾಮದಿಂದ ಹಿಂಗಾರು ಮಳೆ ಆರಂಭವಾಗಬೇಕಿದ್ದ ಸಂದರ್ಭ ದಲ್ಲೇ ಮಂಜು ಮುಸುಕಿದ ವಾತಾವರಣವಿದೆ.

ಹಿಂಗಾರು ಮಳೆಗಾಲ ಮುಗಿದು ತೀವ್ರ ಚಳಿಯಿದ್ದ ಸಮಯದಲ್ಲಿ ಬೆಳಗಿನ ಜಾವ ಮಂಜು ಕವಿಯು ವುದು ಸಹಜ. ಕೆಲವೆಡೆ ದಟ್ಟ ಮಂಜು ಆವರಿಸುವುದು ಉಂಟು. ಅಕ್ಟೋಬರ್ ಮೊದಲ ವಾರದಲ್ಲಿ ಆರಂಭವಾಗಬೇಕಿದ್ದ ಹಿಂಗಾರು ಎರಡು ವಾರಗಳಷ್ಟು ವಿಳಂಬವಾಗಿದೆ. ಮುಂಗಾರಿನ ನಿರ್ಗಮನವು ಕೂಡ ವಿಳಂಬ ವಾಗಿದೆ. ಹಿಂಗಾರು ಆರಂಭವಾಗಿ ವಾರ ಕಳೆದರೂ ಎಲ್ಲೂ ಕೂಡ ವಾಡಿಕೆ ಪ್ರಮಾಣದ ಮಳೆಯಾಗುತ್ತಿಲ್ಲ. ಒಣ ಹವೆ ಇದ್ದು ಹಗಲಿನ ವೇಳೆ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿದೆ.

“ಬಿಜೆಪಿ ನಾಯಕರಿಗೆ ಮಾಡೋಕೆ ಕೆಲಸ ಇಲ್ಲ, ಬಾಯಿ ಚಟಕ್ಕೆ ಮಾತಾಡ್ತಾರೆ”

ರಾತ್ರಿ ವೇಳೆ ತಂಪಾದ ವಾತಾ ವರಣ ಕಂಡುಬರುತ್ತದೆ. ಅ.1ರಿಂದ ನಿನ್ನೆಯವರೆಗೆ ರಾಜ್ಯದಲ್ಲಿ ವಾಡಿಕೆಗಿಂತ ಶೇ.64ರಷ್ಟು ಕಡಿಮೆ ಮಳೆಯಾಗಿದೆ. ಅಂದರೆ ಬಹುತೇಕ ಒಣಹವೆಯೇ ಮುಂದುವರೆದಿದೆ.
ಜುಲೈ ಹೊರತುಪಡಿಸಿದರೆ ಆನಂತರದ ಮೂರು ತಿಂಗಳು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಮುಂದಿನ ಒಂದು ವಾರದಲ್ಲಿ ಉತ್ತಮ ಮಳೆಯಾಗುವ ಲಕ್ಷಣಗಳು ಇಲ್ಲ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಅಕ್ಟೋಬರ್ ಕೊನೆಯ ವಾರದಲ್ಲಿ ಬೆಳಗಿನ ಜಾವ ಕೆಲವೆಡೆ ಮಂಜು ಕವಿಯುವುದು, ಇಬ್ಬನಿ ಬೀಳುವುದು ಸಾಮಾನ್ಯ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.

ಬೆಂಕಿ ಹಚ್ಚಿ ಹೆತ್ತ ತಾಯಿಯನ್ನೇ ಕೊಂದ ಮಗ

ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಅಕ್ಟೋಬರ್ ನಲ್ಲೇ ಮಂಜು ಕವಿಯುವುದು ಸರ್ವೆ ಸಾಮಾನ್ಯ. ಮಂಜು ಕವಿಯು ವುದರಿಂದ ತಂಪಾದ ವಾತಾವರಣ ಬೆಳಗಿನ ಜಾವ ಕಂಡುಬರುತ್ತದೆ. ಡಿಸೆಂಬರ್ ಅಂತ್ಯದವರೆಗೂ ಆಗಾಗ್ಗೆ ಕೆಲವೆಡೆ ಮಂಜು ಕವಿಯು ವುದು ಕಂಡುಬರಲಿದೆ ಎಂದು ಹೇಳಿದರು.

ವಾತಾವರಣದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಸದ್ಯಕ್ಕೆ ಮಳೆ ಬರುವಂತಹ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಮಂಜು ಕವಿಯುವ ಸಂದರ್ಭದಲ್ಲಿ ಮಳೆ ಬರುವ ಸಾಧ್ಯತೆಗಳು ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಮೋದಿಗೆ ಆಹ್ವಾನ : ಪ್ರತಿಪಕ್ಷಗಳು ಕೆಂಡ

ನವದೆಹಲಿ,ಅ.26- ಅಯೋಧ್ಯೆಯಲ್ಲಿ ನಿರ್ಮಾಣ ವಾಗುತ್ತಿರುವ ಮಂದಿರದಲ್ಲಿ ಮುಂದಿನ ಜನವರಿ 22ರಂದು ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಪ್ರಧಾನಿ ನರೇಂದ್ರಮೋದಿಯವರಿಗೆ ಆಹ್ವಾನ ನೀಡಿರುವುದನ್ನು ಪ್ರತಿಪಕ್ಷಗಳು ಪ್ರಶ್ನಿಸಿವೆ.ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಮಾಡಲು ನರೇಂದ್ರಮೋದಿ ಅವರಿಗೆ ಆಹ್ವಾನವನ್ನು ನೀಡಿರುವ ಟ್ರಸ್ಟ್ ಕ್ರಮಕ್ಕೂ ಟೀಕಾ ಪ್ರಹಾರ ನಡೆಸಿರುವ ಪ್ರತಿಪಕ್ಷಗಳು, ಇದೇನು ಬಿಜೆಪಿ ಕಾರ್ಯಕ್ರಮವೇ ಎಂದು ಪ್ರಶ್ನಿಸಿವೆ.

ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪಿಸಲು ಪ್ರಧಾನಿಗೆ ಆಹ್ವಾನ ಕೊಟ್ಟಿರುವುದು ಏಕೆ? ಕೇವಲ ಬಿಜೆಪಿಯನ್ನು ಮಾತ್ರ ಆಹ್ವಾನಿಸಿ ಉಳಿದ ಪಕ್ಷಗಳನ್ನು ಕಡೆಗಣಿಸಿರುವ ಟ್ರಸ್ಟ್‍ನ ದುರದ್ದೇಶವೇನು ಎಂದು ಕಾಂಗ್ರೆಸ್ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಪ್ರಶ್ನಿಸಿದ್ದಾರೆ.

ಟ್ರಸ್ಟ್‍ನ ಕ್ರಮವನ್ನು ನೋಡಿದರೆ ಇದು ಬಿಜೆಪಿ ಕಾರ್ಯಕ್ರಮ ಎಂಬುದರಲ್ಲಿ ಎರಡು ಮಾತಿಲ್ಲ. ದೇವರು ಎಲ್ಲರಿಗೂ ಸೇರಿದ್ದಾನೆ. ಇದರಲ್ಲಿ ತಾರತಮ್ಯ ಮಾಡುವುದು ಏಕೆ. ಬಿಜೆಪಿಯನ್ನು ಆಹ್ವಾನಿಸಿ ಉಳಿದ ಪಕ್ಷಗಳನ್ನು ಕಡೆಗಣಿಸಿದರೆ ನಮಗೆ ರಾಮನ ಮೇಲೆ ಭಕ್ತಿ ಇಲ್ಲವೆ ಎಂಬುದನ್ನು ಬಿಂಬಿಸಲು ಟ್ರಸ್ಟ್ ಹೊರಟಂತಿದೆ ಎಂದು ಕಿಡಿಕಾರಿದರು.

“ಬಿಜೆಪಿ ನಾಯಕರಿಗೆ ಮಾಡೋಕೆ ಕೆಲಸ ಇಲ್ಲ, ಬಾಯಿ ಚಟಕ್ಕೆ ಮಾತಾಡ್ತಾರೆ”

ಶಿವಸೇನೆ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಕೂಡ ವಿರೋಧ ವ್ಯಕ್ತಪಡಿಸಿದ್ದು, ರಾಮಮಂದಿರ ನಿರ್ಮಾಣವಾಗಬೇಕೆಂಬುದು ಶತಕೋಟಿ ಭಾರತೀಯರ ಕನಸು, ಆದರೆ ಮೂರ್ತಿ ಪ್ರತಿಷ್ಠಾಪನೆಗೆ ಒಂದು ಪಕ್ಷವನ್ನು ಪ್ರತಿನಿಸುವ ಪ್ರಧಾನಿಯನ್ನು ಆಹ್ವಾನಿಸಿ ಬೇರೆಯವರಿಗೆ ಆಹ್ವಾನ ಕೊಡದಿರುವುದು ಯಾವ ಕಾರಣಕ್ಕೆ? ಶ್ರೀರಾಮ ಕೇವಲ ಬಿಜೆಪಿಗೆ ಮಾತ್ರ ಸೇರಿದ್ದಾರೆಯೇ? ನಾವು ಕೂಡ ರಾಮನ ಭಕ್ತರು ಎಂದು ಹೇಳಿದರು.

ರಾಮಮಂದಿರ ಬಿಜೆಪಿ ಇಲ್ಲವೇ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ. ಸನಾತನ ಧರ್ಮದ ಅತ್ಯಂತ ದೊಡ್ಡ ಸಂಕೇತ ಶ್ರೀರಾಮ. ರಾಮಮಂದಿರವನ್ನು ನಿರ್ಮಿಸುತ್ತಿರುವುದಕ್ಕೆ ಎಲ್ಲರೂ ಹೆಮ್ಮೆ ಪಡುತ್ತೇವೆ. ಆದರೆ ಇದರಲ್ಲಿ ಕ್ಷುಲ್ಲಕ ರಾಜಕಾರಣವನ್ನು ನಾವು ಸಹಿಸುವುದಿಲ್ಲ ಎಂದು ಗುಡುಗಿದರು.

ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರ ಆಯ್ಕೆ ಕುರಿತು ಸಿಎಂ ಸಭೆ

ಬೆಂಗಳೂರು, ಅ.26- ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯ ಸಮಿತಿ ಉನ್ನತ ಮಟ್ಟದ ಸಭೆ ಇಂದು ಗೃಹ ಕಚೇರಿ ಕೃಷ್ಣದಲ್ಲಿಂದು ನಡೆಯಿತು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಸಚಿವರಾದ ಡಾ. ಜಿ.ಪರಮೇಶ್ವರ್, ಡಾ. ಹೆಚ್.ಸಿ.ಮಹದೇವಪ್ಪ, ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹ್ಮದ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎನ್.ಮಂಜುಳಾ, ನಿರ್ದೇಶಕಿ ಧರಣಿದೇವಿ ಮಾಲಗತ್ತಿ, ಆಯ್ಕೆ ಸಮಿತಿ ಸದಸ್ಯರಾದ ಪ್ರೊ. ಜಾಣಗೆರೆ ವೆಂಕಟರಾಮಯ್ಯ,

ಡಾ. ಎಚ್.ಎಲ್.ಪುಷ್ಪ, ಡಾ.ವೀರಣ್ಣ ದಂಡೆ, ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಅಲ್ಲಮಪ್ರಭು ಬೆಟ್ಟದೂರ, ಕಾ.ತ.ಚಿಕ್ಕಣ್ಣ, ಪಿಂಡಿಪಾಪನಹಳ್ಳಿ ವೆಂಕಟಪ್ಪ, ಟಾಕಪ್ಪ ಕಣ್ಣೂರು, ಪಿಚ್ಚಳ್ಳಿ ಶ್ರೀನಿವಾಸ್, ಡಾ.ವಿಠಲ್ ಐ.ಬೆಣಗಿ ಕೃಷಿ, ಡಾ.ಸಣ್ಣರಾಮು, ವೆಂಕಟರಾಮಯ್ಯ, ಡಾ.ಎಂ.ಎಸ್.ಮೂರ್ತಿ, ಡಾ.ಗೀತಾ ಶಿವಮೊಗ್ಗ , ಡಾ.ಜಯದೇವಿ ಜಂಗಮ ಶೆಟ್ಟಿ , ಐರೋಡಿ ಗೋವಿಂದಪ್ಪ, ಸಾಧುಕೋಕಿಲ, ಸುಕನ್ಯಾ ಪ್ರಭಾಕರ್, ಫಯಾಜ್ ಖಾನ್, ಹೃಷಿಕೇಶ್ ಬಹದ್ದೂರ್ ದೇಸಾಯಿ, ನರಸಿಂಹಲು ವಡವಾಟಿ, ಡಿ.ಎನ್.ನರಸಿಂಹರಾಜು, ಡಾ.ಪುರುಷೋತ್ತಮ ಬಿಳಿಮಲೆ, ಚನ್ನಬಸವಣ್ಣ, ಶೈಲೇಶ್ ಚಂದ್ರಗುಪ್ತ , ಜೆ.ಲೋಕೇಶ್ ಉಪಸ್ಥಿತರಿದ್ದರು.

“ಬಿಜೆಪಿ ನಾಯಕರಿಗೆ ಮಾಡೋಕೆ ಕೆಲಸ ಇಲ್ಲ, ಬಾಯಿ ಚಟಕ್ಕೆ ಮಾತಾಡ್ತಾರೆ”

ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ಅರ್ಹರಿಗೆ ಪ್ರಶಸ್ತಿ ನೀಡಬೇಕು. ಪ್ರಾದೇಶಿಕ ನ್ಯಾಯ ಕಡ್ಡಾಯವಾಗಿ ಪಾಲಿಸಬೇಕು. ಎಲ್ಲಾ ಜಾತಿ, ಧರ್ಮ, ಲಿಂಗಗಳಿಗೂ ಪ್ರಾತಿನಿಧ್ಯ ದೊರಕಬೇಕು ಎಂದು ಸೂಚಿಸಿದರು. ಕರ್ನಾಟಕ ಎಂದು ಮರುನಾಮಕರಣ ವಾಗಿ 50 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಕನ್ನಡದ ಪರವಾಗಿ ಕಾರ್ಯನಿರ್ವಹಿಸಿರುವ ಸಂಘ ಸಂಸ್ಥೆಗಳಿಗೆ ಒಟ್ಟಾರೆ 10 ಪ್ರಶಸ್ತಿಗಳನ್ನು ನೀಡಬೇಕು ಎಂದು ಆಯ್ಕೆ ಸಮಿತಿ ಸದಸ್ಯರು ಅಭಿಪ್ರಾಯ ಪಟ್ಟರು.

ಈ ಬಾರಿ 68 ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡಬೇಕಿದ್ದು, ಕರ್ನಾಟಕ ಸಂಭ್ರಮದ ಪ್ರಯುಕ್ತ ಸಂಘ ಸಂಸ್ಥೆಗಳಿಗೆ 10 ಪ್ರಶಸ್ತಿಗಳನ್ನು ನೀಡಲು ಸಭೆಯಲ್ಲಿ ತೀರ್ಮಾನ ಮಾಡಲಾಯಿತು. ಅರ್ಜಿ ಕೊಡುವವವರು ಹೆಚ್ಚಿದ್ದ ಕಾರಣ, ಅದಕ್ಕೆ ಕಡಿವಾಣ ಹಾಕಲು ಏಕೀಕರಣ ಆಗಿ ಎಷ್ಟು ವರ್ಷಗಳಾಯಿತೋ, ಅಷ್ಟು ಪ್ರಶಸ್ತಿ ಗಳನ್ನು ನೀಡಲು ಹಿಂದೆ ನಮ್ಮ ಸರ್ಕಾರವೇ ತೀರ್ಮಾನ ಕೈಗೊಂಡಿತ್ತು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಈ ಬಾರಿ 68ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ 68 ಮಂದಿಗೆ ಪ್ರಶಸ್ತಿ ನೀಡಬೇಕಿತ್ತು. ಅದಕ್ಕೆ ಸಾಧಕರನ್ನು ಗುರುತಿಸಲು ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪುರಷ್ಕøತರ ವಯೋಮಿತಿಯನ್ನು 60 ವರ್ಷಕ್ಕಿಂತ ಕಡಿಮೆ ಮಾಡುವ ಹಾಗೂ ನಗದು ಪುರಸ್ಕಾರವನ್ನು ಒಂದು ಲಕ್ಷ ರೂಪಾಯಿಗೆ ಹೆಚ್ಚಿಸುವ ನಿರ್ಧಾರ ಪ್ರಕಟಿಸಿದ್ದರು.

ಕಾವಲುಗಾರನ ಸಮಯಪ್ರಜ್ಞೆಯಿಂದ ತಪ್ಪಿದ ರೈಲು ದುರಂತ

ಈ ಮೊದಲು ರಾಜಕೀಯ ಒತ್ತಡಕ್ಕೆ ಮಣಿದು ಮಿತಿ ಇಲ್ಲದಂತೆ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗುತ್ತಿತ್ತು. ಸಿದ್ದರಾಮಯ್ಯ ಅವರು ಮೊದಲ ಅವಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ವರ್ಷಾಚರಣೆಗೆ ಅನುಗುಣವಾಗಿ ಪ್ರಶಸ್ತಿಗಳ ಸಂಖ್ಯೆಯನ್ನು ನಿಗದಿ ಮಾಡಿದರು. ಅಂದಿನಿಂದಲೂ ಪ್ರತಿವರ್ಷ ಒಂದೊಂದೆ ಪ್ರಶಸ್ತಿಯ ಸಂಖ್ಯೆ ಹೆಚ್ಚಾಗುತ್ತಿದೆ. ಕಲೆ, ಸಾಹಿತ್ಯ, ಜಾನಪದ, ವೈದ್ಯಕೀಯ, ಕ್ರೀಡೆ, ಸಾಮಾಜಿಕ ಸೇವೆ, ಪತ್ರಿಕೋದ್ಯಮ, ಉದ್ಯಮ, ಅನಿವಾಸಿ ಭಾರತೀಯರು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗಣ್ಯ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ.

ರೋಹಿತ್ ಟ್ರೋಫಿ ಗೆಲ್ತಾರೆ : ಎಬಿಡಿ

ನವದೆಹಲಿ,ಅ.26- ತವರು ನೆಲದಲ್ಲಿ ನಡೆಯುತ್ತಿರುವ 2023ರ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರು ಭಾರತಕ್ಕೆ 2 ದಶಕಗಳ ಐಸಿಸಿ ಬರವನ್ನು ನೀಗಿಸಲಿದ್ದಾರೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿಡಿವಿಲಿಯರ್ಸ್ ಹೇಳಿದ್ದಾರೆ.

ಪ್ರಸ್ತುತ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಿರುವ 5ಪಂದ್ಯಗಳಲ್ಲೂ ಗೆಲುವು ಸಾಧಿಸಿರುವ ಟೀಮ್ ಇಂಡಿಯಾ, ಎಲ್ಲ ವಿಭಾಗಗಳನ್ನು ಬಲಿಷ್ಠಪಡಿಸಿಕೊಂಡಿದ್ದು 2011ರ ವಿಶ್ವಕಪ್ ಟೂರ್ನಿಯಂತೆ ತವರಿನಲ್ಲಿ ಮತ್ತೊಮ್ಮೆ ಟ್ರೋಫಿ ಗೆಲ್ಲಲಿದೆ ಎಂದು ಎಬಿಡಿ ಹೇಳಿದ್ದಾರೆ.

ರಾಮನಗರಕ್ಕಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡ್ತೀನಿ : ಹೆಚ್‌ಡಿಕೆ

ಭಾನುವಾರ ಟೀಮ್ ಇಂಡಿಯಾ ಡಿಫೆಂಡಿಂಗ್ ಚಾಂಪಿಯನ್ ಇಂಗ್ಲೆಂಡ್ ತಂಡದ ಸವಾಲು ಎದುರಿಸಲಿದ್ದು ಈ ಪಂದ್ಯ ಗೆದ್ದು ಸೆಮೀಸ್ ಹತ್ತಿರವಾಗುವ ಲೆಕ್ಕಾಚಾರ ಹಾಕಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ ವಿಷಯದಲ್ಲಿ ಒತ್ತಡಕ್ಕೆ ಮಣಿಯುವುದಿಲ್ಲ : ಖಂಡ್ರೆ

ಬೆಂಗಳೂರು, ಅ.26- ವನ್ಯಜೀವ ಸಂರಕ್ಷಣಾ ಕಾಯ್ದೆ ಜಾರಿಯ ವಿಷಯದಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೇ ನೆಲದ ಕಾನೂನನ್ನು ಸಮರ್ಥವಾಗಿ ಜಾರಿಗೊಳಿಸುವಂತೆ ಅರಣ್ಯ ಮತ್ತು ಪರಿಸರ ರಕ್ಷಣಾ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿಂದು ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಕಾಯ್ದೆ ಜಾರಿಗೆ ಬಂದ ಬಳಿಕ ದಾಖಲಿಸಲಾದ ಪ್ರಕರಣಗಳು, ಈವರೆಗೂ ಎಷ್ಟು ಮಂದಿ ತಮ್ಮ ಬಳಿ ವನ್ಯಜೀವಿಗಳ ಅವಶೇಷಗಳಿವೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಪರಿಶೀಲನೆಗ ರಚಿಸಲಾಗಿರುವ ಹಿರಿಯ ಅಧಿಕಾರಿಗಳ ಉನ್ನತಾಧಿಕಾರಿಗಳ ಸಮಿತಿ ಶೀಘ್ರವೇ ವರದಿ ನೀಡಬೇಕು ಎಂದು ಸೂಚನೆ ನೀಡಿದರು.

ಖ್ಯಾತನಾಮರಷ್ಟೆ ಅಲ್ಲ, ಯಾವುದೇ ಪ್ರಭಾವಿ ವ್ಯಕ್ತಿ ಕಾಯ್ದೆಯನ್ನು ಉಲ್ಲಂಘಿಸಿದರು ಕರ್ನಾಟಕ ಅರಣ್ಯ ಕಾಯ್ದೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು. ನಿನ್ನೆ ನಡೆದ ದಾಳಿ ಪ್ರಕರಣದಲ್ಲಿ ವಶ ಪಡಿಸಿಕೊಂಡ ವಸ್ತುಗಳನ್ನು ವೈಜ್ಞಾನಿಕ ಪರೀಕ್ಷೆ ಒಳಪಡಿಸಬೇಕು. ವಸ್ತು ಸ್ಥಿತಿಯ ವರದಿ ಆಧಾರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ರಾಮನಗರಕ್ಕಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡ್ತೀನಿ : ಹೆಚ್‌ಡಿಕೆ

ಕೆಲವರ ಮೇಲಷ್ಟೆ ಕ್ರಮ ಕೈಗೊಂಡು ಪ್ರಭಾವಿಗಳನ್ನು ಕೈ ಬಿಟ್ಟರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ತಪ್ಪು ಯಾರೇ ಮಾಡಿದರೂ ಕಟ್ಟುನಿಟ್ಟಿನ ಕ್ರಮ ಜರುಗಿಸಿ, ಅರಣ್ಯಸಂರಕ್ಷಣಾಧಿಕಾರಿಗಳ ಕಚೇರಿಗೆ ನೀಡಿರುವ ಪೊಲೀಸ್ ಅಧಿಕಾರವನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಿ. ಮಾಹಿತಿ ತಿಳಿದ ತಕ್ಷಣ ಶೋಧ ಕಾರ್ಯಾಚರಣೆ ನಡೆಸಿ, ಕ್ರಮ ಜರುಗಿಸಿ. ಪ್ರಭಾವಿಗಳನ್ನು ರಕ್ಷಣೆ ಮಾಡಲು ಯತ್ನಿಸಿದರೆ ಮುಂದಿನ ದಿನಗಳಲ್ಲಿ ಯಾರಾದರೂ ಕಾನೂನಿನ ಮೊರೆ ಹೋಗಬಹುದು. ಆ ವೇಳೆ ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಈ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಸಲಹೆ ನೀಡಿದ್ದಾರೆ.

ಇದು ಈಗ ಸಾರ್ವಜನಿಕ ವಿಷಯವಾಗಿರುವುದರಿಂದ ಮುಚ್ಚಿಟ್ಟುಕೊಳ್ಳುವ ಅಥವಾ ತೆರೆಮರೆಯಲ್ಲಿ ಕ್ರಮ ಜರುಗಿಸಲು ಸಾಧ್ಯವಿಲ್ಲ. ಪಾರದರ್ಶಕತೆ ಹಾಗೂ ಕಾನೂನು ಬದ್ಧವಾಗಿ ನಡೆದುಕೊಳ್ಳಿ. ಪ್ರತಿ ಹಂತದಲ್ಲೂ ಹಿರಿಯ ಅಧಿಕಾರಿಗಳಿಗೆ ವರದಿ ನೀಡಿ ಎಂದು ಸೂಚಿಸಿದರು.

ಪ್ಯಾರಾಗೇಮ್ಸ್ : ಕನ್ನಡತಿ ರಕ್ಷಿತಾ ರಾಜುಗೆ ಒಲಿದ ಚಿನ್ನ

ಹ್ಯಾಂಗ್‍ಝೌ, ಅ.26- ಚೀನಾದ ಹ್ಯಾಂಗ್‍ಝೌನಲ್ಲಿ ಜರುಗುತ್ತಿರುವ ಏಷ್ಯನ್ ಪ್ಯಾರಾಗೇಮ್ಸ್‍ನಲ್ಲಿ ರಾಜ್ಯದ ಮೂಡುಗೆರೆ ಜಿಲ್ಲೆಯ ರಕ್ಷಿತಾ ರಾಜು ಅವರು ಚಿನ್ನದ ಪದಕ ಗೆಲ್ಲುವ ಮೂಲಕ ದೇಶ ಹಾಗೂ ರಾಜ್ಯದ ಕೀರ್ತಿಪತಾಕೆಯನ್ನು ಹಾರಿಸಿದ್ದಾರೆ.

ರಾಮನಗರಕ್ಕಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡ್ತೀನಿ : ಹೆಚ್‌ಡಿಕೆ

ಟಿ-11 ಸ್ಪರ್ಧೆಯಲ್ಲಿ 1500 ಮೀಟರ್ ಓಟವನ್ನು ಕೇವಲ 5 ನಿಮಿಷ 21.45 ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸುವ ಮೂಲಕ ಸ್ವರ್ಣ ಪದಕವನ್ನು ತಮ್ಮ ಕೊರಳಿಗೇರಿಸಿಕೊಂಡಿದ್ದರೆ, ಭಾರತದವರೇ ಆದ ಕಿಲ್ಲಕ ಲಲಿತಾ ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದ್ದಾರೆ.

ಪ್ರಧಾನಿ ಶ್ಲಾಘನೆ:
ಭಾರತದ ಕ್ರೀಡಾಪಟುಗಳ ಸಾಧನೆಯನ್ನು ತಮ್ಮ ಅಕೃತ ಎಕ್ಸ್ ಖಾತೆಯಲ್ಲಿ ಪ್ರಶಂಸಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, `ಈ ಅಸಾಧಾರಣವಾದ ಪ್ರದರ್ಶನ ಮತ್ತು ಅಚಲವಾದ ಸಮರ್ಪಣೆ ಭಾರತದ ಹೃದಯಗಳನ್ನು ಸಂತಸ ಮತ್ತು ಮೆಚ್ಚುಗೆಯಿಂದ ತುಂಬುವಂತೆ ಮಾಡಿದ್ದು, ಇನ್ನಷ್ಟು ಅಮೋಘ ಸಾಧನೆ ಮಾಡಿ ಮುನ್ನಗ್ಗಲಿ’ ಎಂದು ಹಾರೈಸಿದ್ದಾರೆ.