Home Blog Page 1865

ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಮನೆ ಸೇರಿದಂತೆ ಹಲವೆಡೆ ಇಡಿ ದಾಳಿ

ಕೋಲ್ಕತ್ತಾ, ಅ.26- ಬಹುಕೋಟಿ ಪಡಿತರ ವಿತರಣೆ ಹಗರಣದ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಪಶ್ಚಿಮ ಬಂಗಾಳದ ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಅವರ ನಿವಾಸದಲ್ಲಿ ಇಂದು ಮುಂಜಾನೆ ಶೋಧ ಆರಂಭಿಸಿದ್ದಾರೆ.

ಕೋಲ್ಕತ್ತಾದ ಸಾಲ್ಟ್ ಲೇಕ್ ಪ್ರದೇಶದಲ್ಲಿ ಪ್ರಸ್ತುತ ರಾಜ್ಯ ಅರಣ್ಯ ಸಚಿವರಾಗಿರುವ ಮಲ್ಲಿಕ್ ಅವರಿಗೆ ಸೇರಿದ ಎರಡು ಫ್ಲಾಟ್‍ಗಳ ಮೇಲೆ ಕೇಂದ್ರೀಯ ಪಡೆಗಳ ತಂಡದಿಂದ ಇಡಿ ದಾಳಿ ನಡೆಸಲಾಗಿದೆ ಎಂದು ಅವರು ಅಧಿಕಾರಿಗಳು ತಿಳಿಸಿದ್ದಾರೆ.

ನಕಲಿ ಆಧಾರ್, ಡಿಎಲ್, ಮತದಾರರ ಗುರುತಿನ ಚೀಟಿ ಪ್ರಕರಣ : ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯ

ಮಲ್ಲಿಕ್ ಅವರು ಆಹಾರ ಸಚಿವರಾಗಿದ್ದಾಗ ಅವರ ಮಾಜಿ ಆಪ್ತ ಸಹಾಯಕರ ನಿವಾಸಗಳು ಸೇರಿದಂತೆ ಇತರ ಎಂಟು ಫ್ಲಾಟ್‍ಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಇಂದು ದಾಳಿಯ ಸಮಯದಲ್ಲಿ ಮನೆಯಲ್ಲಿ ಸಚಿವರು ಇರಲಿಲ್ಲ ನಂತರ ಮಾಹಿತಿ ತಿಳಿದು ಬಂದು ಮೊಬೈಲ್ ಫೋನ್ ತೆಗೆದುಕೊಂಡು ಹೋಗಿದ್ದಾರೆ ಒಳಗೆ ಎಂಟು ಅಧಿಕಾರಿಗಳು ಶೋಧನೆಯಲ್ಲಿದ್ದರು. ಸವಿವರ ಮನೆ ಸೇರಿ ಹಲವು ಸ್ಥಳಗಳಲ್ಲಿಯೂ ಶೋಧ ನಡೆಸುತ್ತಿದ್ದೇವೆ ಎಂದು ಇಡಿ ತಿಳಿಸಿದೆ.

ಕೇಂದ್ರ ತನಿಖಾ ಸಂಸ್ಥೆಯು ಈಗಾಗಲೇ ಸಚಿವ ಮಲ್ಲಿಕ್‍ಗೆ ನಿಕಟ ಸಂಪರ್ಕ ಹೊಂದಿರುವ ಒಬ್ಬ ವ್ಯಕ್ತಿಯನ್ನು ಬಂಧಿಸಿದೆ ತನಿಖೆ ನಡೆಸುತ್ತಿದ್ದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಅಮೇರಿಕಾದಲ್ಲಿ ಗುಂಡಿನ ಮೊರೆತ, 22 ಮಂದಿ ಸಾವು

ವಾಷಿಂಗ್ಟನ್(ಅಮೆರಿಕಾ),ಅ.26- ಲೆವಿಸ್ಟನ್ ನಗರದ ಮೈನೆಯಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಗೆ 22 ಮಂದಿ ಸಾವನ್ನಪ್ಪಿ, 60 ಜನ ಗಾಯಗೊಂಡಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ. ದಾಳಿಯಲ್ಲಿ 12ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ಮೈನೆಯ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾದ ಲೆವಿಸ್ಟನ್‍ನಲ್ಲಿರುವ ಬೌಲಿಂಗ್ ಅಲ್ಲೆ, ರೆಸ್ಟೋರೆಂಟ್ ಮತ್ತು ವಾಲ್‍ಮಾರ್ಟ್ ವಿತರಣಾ ಕೇಂದ್ರದಲ್ಲಿ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಗುಂಡಿನ ದಾಳಿ ನಡೆದಿದೆ.

ಹುಲಿ ಉಗುರಿನ ವಿಚಾರದಲ್ಲಿ ಎಲ್ಲರ ವಿರುದ್ಧವೂ ಕ್ರಮ ಜರುಗಿಸುತ್ತೇವೆ : ಖಂಡ್ರೆ

ಗುಂಡಿನ ದಾಳಿಯ ಸ್ಥಳಗಳಲ್ಲಿ ಪೊಲೀಸರು, ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಶೋಧಕಾರ್ಯ ನಡೆಸುತ್ತಿದ್ದು, ಸ್ಥಳೀಯ ಪೊಲೀಸರು ಶಂಕಿತ ಶೂಟರ್‍ನ ಫೋಟೋಗಳ ಜೊತೆಗೆ ಆತ ಬಳಸಿದ ಕಾರಿನ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಬಿಡುಗಡೆಯಾದ ಛಾಯಾಚಿತ್ರಗಳಲ್ಲಿ, ಶಂಕಿತ ವ್ಯಕ್ತಿ ಉದ್ದನೆಯ ತೋಳಿನ ಶರ್ಟ್ ಮತ್ತು ಜೀನ್ಸ್ ಧರಿಸಿದ್ದಾನೆ. ಅಲ್ಲದೇ ಗಡ್ಡ ಬಿಟ್ಟಿದ್ದು, ಕೈಯಲ್ಲಿ ರೈಫಲ್ ಹಿಡಿದುಕೊಂಡಿದ್ದಾನೆ. ಈತ ತಲೆಮರೆಸಿಕೊಂಡಿದ್ದಾನೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಅಧಿಕಾರಿಗಳು ಚಿತ್ರದಲ್ಲಿರುವ ಶಂಕಿತನನ್ನು ಗುರುತಿಸಲು ಸಾರ್ವಜನಿಕರ ಸಹಕಾರ ಕೇಳಿದ್ದಾರೆ. ಲೆವಿಸ್ಟನ್ ನಗರದಲ್ಲಿ ಶೂಟರ್ ಸಕ್ರಿಯವಾಗಿದ್ದು, ಯಾರೂ ಮನೆಯಿಂದ ಹೊರಗಡೆ ಬರಬೇಡಿ. ಬಾಗಿಲು ಹಾಕಿಕೊಂಡು ಒಳಗಡೆ ಇರಿ. ಕಾನೂನು ಜಾರಿ ಅಧಿಕಾರಿಗಳನ್ನು ಬೆಂಬಲಿಸಿ. ನೀವು ಯಾವುದೇ ಅನುಮಾನಾಸ್ಪದ ಚಟುವಟಿಕೆ ಅಥವಾ ವ್ಯಕ್ತಿಗಳನ್ನು ನೋಡಿದರೆ ದಯವಿಟ್ಟು 911ಗೆ ಕರೆ ಮಾಡಿ ಎಂದು ಪೋಸ್ಟ್ ಮಾಡಿದ್ದಾರೆ.

ದಾಳಿಯಾದ ಲೆವಿಸ್ಟನ್‍ನಲ್ಲಿ ಸೆಂಟ್ರಲ್ ಮೈನೆ ವೈದ್ಯಕೀಯ ಕೇಂದ್ರವಿದೆ. ಈ ದಾಳಿ ಬೆನ್ನಲ್ಲೆ ರೋಗಿಗಳನ್ನು ಸ್ಥಳಾಂತರಿಸಲಾಗುತ್ತಿದೆ. ಬೌಲಿಂಗ್ ಅಲ್ಲೆ, ರೆಸ್ಟೋರೆಂಟ್ ಮತ್ತು ವಾಲ್ಮಾರ್ಟ್ ವಿತರಣಾ ಕೇಂದ್ರದಲ್ಲಿ ಪ್ರತ್ಯೇಕ ದಾಳಿ ನಡೆದಿದ್ದು ತುರ್ತು ಸಿಬ್ಬಂದಿಯನ್ನು ಕರೆಯಲಾಯಿತು ಎಂದು ಸನ್ ಜರ್ನಲ್ ವರದಿ ಮಾಡಿದೆ.

ಮೃತರ ಸಂಖ್ಯೆಯನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ. ಲೆವಿಸ್ಟನ್ ಸಿಟಿ ಕೌನ್ಸಿಲರ್ ರಾಬರ್ಟ್ ಮೆಕಾರ್ಥಿ ಇದುವರೆಗೆ 22 ಜನರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಮೊಲ್ಲಿಸನ್ ವೇಯಲ್ಲಿನ ಬಿಡುವಿನ ವೇಳೆಯ ಮನರಂಜನೆ, ಲಿಂಕನ್ ಸ್ಟ್ರೀಟ್‍ನಲ್ಲಿರುವ ಸ್ಕೀಮಿಂಗೀಸ್ ಬಾರ್ ಮತ್ತು ಗ್ರಿಲ್ ರೆಸ್ಟೋರೆಂಟ್ ಮತ್ತು ಆಲ್ರೆಡ್ ಎ ಪ್ಲೌರ್ಡೆ ಪಾಕ್ರ್ವೇಯಲ್ಲಿರುವ ವಾಲ್‍ಮಾರ್ಟ್ ವಿತರಣಾ ಕೇಂದ್ರವನ್ನು ಗುರಿಯಾಗಿರಿಸಿಕೊಂಡು ಗುಂಡಿನ ದಾಳಿ ನಡೆಸಲಾಗಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-10-2023)

ನಿತ್ಯ ನೀತಿ : ನಮ್ಮ ಧರ್ಮಗಳನ್ನು ಪ್ರೀತಿಸುವುದು ಹಾಗೂ ಇತರರ ಧರ್ಮಗಳನ್ನು ಗೌರವಿಸುವುದು ಮುಖ್ಯ. ನಮಗೆ ನಮ್ಮ ಧರ್ಮದ ಮೇಲೆ ಎಷ್ಟು ಗೌರವವಿರುತ್ತದೋ ಅಷ್ಟೇ ಗೌರವ ಇತರರಿಗೆ ಅವರ ಧರ್ಮದ ಮೇಲೂ ಇರುತ್ತದೆಂಬ ಸತ್ಯ ಅರಿತಿರಬೇಕು.

ಪಂಚಾಂಗ ಗುರುವಾರ 26-10-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ಪೂರ್ವಾಭಾದ್ರ / ಯೋಗ: ಧ್ರುವ-ವ್ಯಾಘಾತ / ಕರಣ: ಕೌಲವ

ಸೂರ್ಯೋದಯ : ಬೆ.06.12
ಸೂರ್ಯಾಸ್ತ : 05.56
ರಾಹುಕಾಲ : 1.30-3.00
ಯಮಗಂಡ ಕಾಲ : 6.00-7.30
ಗುಳಿಕ ಕಾಲ : 9.00-10.30

ರಾಶಿ ಭವಿಷ್ಯ
ಮೇಷ
: ವ್ಯವಹಾರದಲ್ಲಿ ತ್ವರಿತ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾದರೆ ಬಹಳ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.
ವೃಷಭ: ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಒಳಿತು. ಸಂಗಾತಿಯೊಂದಿಗೆ ಪ್ರವಾಸ ಕೈಗೊಳ್ಳುವಿರಿ.
ಮಿಥುನ: ಕುಟುಂಬದಲ್ಲಿ ಪರಿಸ್ಥಿತಿಗಳು ಏರಿಳಿತಗಳಿಂದ ಕೂಡಿರುತ್ತವೆ. ವೈವಾಹಿಕ ಜೀವನದ ಬಗ್ಗೆ ಗಮನ ಕೊಡಿ

ಕಟಕ: ರಕ್ತ ಸಂಬಂಧಿಗಳ ವಿರೋಧ ಎದುರಿಸ ಬೇಕಾಗುತ್ತದೆ.
ಸಿಂಹ: ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಬೆಳೆಯುವ ನಿಮಗೆ ಸಂತೃಪ್ತಿಯ ದಿನ.
ಕನ್ಯಾ: ಲಾಭ ಗಳಿಸಲು ಮತ್ತು ಆರ್ಥಿಕ ಸ್ಥಿತಿ ಬಲಪಡಿಸಲು ಅನೇಕ ಅವಕಾಶಗಳು ಸಿಗಲಿವೆ. ಜನಪ್ರಿಯತೆ ಗಳಿಸುವಿರಿ.

ತುಲಾ: ಹಳೆಯ ಕಾನೂನು ವಿಷಯಗಳಿಗೆ ಪರಿಹಾರ ದೊರೆಯಲಿದೆ. ದೂರ ಪ್ರಯಾಣ ಬೇಡ.
ವೃಶ್ಚಿಕ: ವಿವಿಧ ಕ್ಷೇತ್ರ ಗಳಲ್ಲಿ ಅನೇಕ ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಧನುಸ್ಸು: ಉದ್ಯೋಗದಲ್ಲಿ ಬಡ್ತಿ ಮತ್ತು ವೇತನ ಹೆಚ್ಚಳವಾಗುವ ಅವಕಾಶಗಳಿವೆ.

ಮಕರ: ಹಣದ ವಿಷಯದಲ್ಲಿ ಸಾಮಾನ್ಯ ದಿನಕ್ಕಿಂತ ಇಂದು ಉತ್ತಮವಾಗಿರುತ್ತದೆ.
ಕುಂಭ: ಪೂರ್ವಜರ ಆಸ್ತಿಯಿಂದ ಲಾಭ ಸಿಗಲಿದೆ. ಕಿರಿಯ ಸಹೋದ್ಯೋಗಿಗಳಿಗೆ ಸಹಾಯ ಮಾಡುವಿರಿ.
ಮೀನ: ನೀವು ಮಾಡುವ ಒಳ್ಳೆಯ ಕಾರ್ಯಗಳು ನಿಮ್ಮ ಕುಟುಂಬದ ಹಿರಿಮೆಯನ್ನು ಹೆಚ್ಚಿಸುತ್ತದೆ.

ನಕಲಿ ಆಧಾರ್, ಡಿಎಲ್, ಮತದಾರರ ಗುರುತಿನ ಚೀಟಿ ಪ್ರಕರಣ : ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯ

ಬೆಂಗಳೂರು,ಅ.25- ನಗರದ ಹೆಬ್ಬಾಳ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿರುವ ನಕಲಿ ಮತದಾರರ ಗುರಿತಿನ ಚೀಟಿ, ಡಿಎಲ್, ಆಧಾರ್ ಪ್ರಿಂಟ್ ಪ್ರಕರಣವನ್ನು ರಾಜ್ಯಸರ್ಕಾರ ಕೂಡಲೇ ಸಿಬಿಐ ಇಲ್ಲವೇ ಎನ್‍ಐಎ ತನಿಖೆಗೆ ವಹಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವರಾದ ಎಸ್.ಸುರೇಶ್‍ಕುಮಾರ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಮುಖಂಡ ವಿವೇಕ್ ರೆಡ್ಡಿ ಅವರು, ಇದು ಅತ್ಯಂತ ಗಂಭೀರವಾದ ಪ್ರಕರಣವಾಗಿರುವುದರಿಂದ ನಿಷ್ಟಕ್ಷಪಾತ ತನಿಖೆಯಾಗಬೇಕಾದರೆ ಸಿಬಿಐ ಇಲ್ಲವೇ ಎನ್‍ಐಎ ಗೆ ವಹಿಸುವಂತೆ ಆಗ್ರಹಿಸಿದರು.

ಮಾಜಿ ಸಚಿವ ಎಸ್.ಸುರೇಶ್‍ಕುಮಾರ್ ಮಾತನಾಡಿ, ಹೆಬ್ಬಾಳ ಕ್ಷೇತ್ರ ವ್ಯಾಪ್ತಿಯಲ್ಲಿ ನಕಲಿ ಮತದಾರರ ಗುರುತಿನ ಚೀಟಿ, ಚಾಲನವಾ ಪರವಾನಗಿ ಹಾಗೂ ಆಧಾರ್‍ಕಾರ್ಡ್ ಪ್ರಿಂಟ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಆರೋಪಿಗಳೆಲ್ಲರೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಆಪ್ತರು ಎಂದು ದೂರಿದರು.

ರಾಷ್ಟ್ರೀಯ ಭದ್ರತಾ ವಿರುದ್ಧವಾಗಿ ಗುರುತಿನ ಚೀಟಿಗಳನ್ನು ಪ್ರಿಂಟ್ ಮಾಡಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಉದ್ದೇಶಪೂರಕವಾಗಿಯೇ ಮತದಾರರನ್ನು ಹೆಚ್ಚಿಸಿಕೊಳ್ಳಲು ನಡೆಸಿರುವ ಹುನ್ನಾರವಾಗಿದೆ. ಈ ಹಿಂದೆ ಹೆಬ್ಬಾಳದ ಬಿಜೆಪಿ ಮುಖಂಡ ಕಟ್ಟಾ ಜಗದೀಶ್ ಆರೋಪ ಮಾಡಿದ್ದರು ಎಂದರು.

7 ಜನ್ಮವೆತ್ತಿದರೂ ರಾಮನಗರ ಛಿದ್ರ ಮಾಡಲು ಸಾಧ್ಯವಿಲ್ಲ ; ಎಚ್‍ಡಿಕೆ ಆಕ್ರೋಶ

ವಿಧಾನಸಭೆ ಚುನಾವಣೆಗೂ ಮುನ್ನವೇ ನಾವು ನಕಲಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದಾರೆ ಎಂದು ದೂರಿದ್ದೆವು. ಆಗ ಸಾಕ್ಷಿ ಎಲ್ಲಿ ಎಂದು ಕೆಲವರು ಕೇಳಿದ್ದರು. ಈಗ ಸಚಿವ ಭೈರತಿ ಸುರೇಶ್ ಆಪ್ತರೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಇದಕ್ಕಿಂತ ಬೇರೆ ಸಾಕ್ಷಿ ಇನ್ನೇನು ಬೇಕು ಎಂದು ಸುರೇಶ್ ಕುಮಾರ್ ಪ್ರಶ್ನೆ ಮಾಡಿದರು.

ಇದು ರಾಷ್ಟ್ರೀಯ ಆಂತರಿಕ ಭದ್ರತೆಗೆ ಸಂಬಂಧಪಟ್ಟ ಪ್ರಕರಣವಾಗಿದೆ. ಒಂದು ಕಡೆ ಭೈರತಿ ಸುರೇಶ್ ಆಪ್ತರು ನೇರ ಭಾಗಿಯಾಗಿದ್ದಾರೆ. ಮತ್ತೊಂದು ಕಡೆ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರಮಾಪ್ತರು. ಇದು ರಾಜ್ಯ ಪೊಲೀಸರಿಂದ ನಿಷ್ಪಕ್ಷಪಾತವಾದ ತನಿಖೆ ನಡೆಯಲು ಸಾಧ್ಯವಿಲ್ಲ. ಆದರೆ ಸಿಬಿಐ ಇಲ್ಲವೇ ಎನ್‍ಐಎ ಗೆ ವಹಿಸಬೇಕೆಂದು ಮನವಿ ಮಾಡಿದರು.

ಪ್ರಕರಣವನ್ನು ನಾವು ಇಲ್ಲಿಗೇ ಬಿಡುವುದಿಲ್ಲ. ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇನೆ. ಮುಖ್ಯಮಂತ್ರಿಗಳು ಕೂಡ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ತನ್ನ ನಂಟ, ಭಂಟ ಎನ್ನುವುದನ್ನು ಬಿಟ್ಟು ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು. ಪೊಲೀಸರು ಭೈರತಿ ಸುರೇಶ್ ಅವರನ್ನು ವಿಚಾರಣೆಗೆ ಒಳಪಡಿಸಲಿ ಎಂದು ಆಗ್ರಹಿಸಿದರು.

ಸ್ಕೂಟರ್ ಹತ್ತಿಕೊಂಡು ಅವರ ಜೊತೆ ಕ್ಷೇತ್ರದಲ್ಲಿ ತಿರುಗಾಡುತ್ತಾರೆ ಎಂದು ಸಿಸಿಬಿಗೆ ಸಿಕ್ಕಿಬಿದ್ದಿರುವ ಆರೋಪಿಗಳಿ ಭೈರತಿ ಸುರೇಶ್ ಕಡೆಯವರೇ. ಪ್ರಕರಣ ಹೊರಬರುತ್ತಿದ್ದಂತೆ ಈಗ ಅಂತರ ಕಾಯ್ದುಕೊಳ್ಳುವ ಸಲುವಾಗಿ ತಮಗೆ ಪರಿಚಯವಿಲ್ಲ ಎಂದು ಹೇಳುತ್ತಿದ್ದಾರೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ತನಿಖೆಯಾಗಬೇಕು ಎಂದು ಹೇಳಿದರು.

ಬಿಜೆಪಿ-ಜೆಡಿಎಸ್ ನಡುವೆ ಕ್ಷೇತ್ರ ಹಂಚಿಕೆ ವಿಳಂಬ

ಬಿಜೆಪಿ ಕಾನೂನು ಘಟಕದ ಮುಖ್ಯಸ್ಥ ವಿವೇಕ್ ರೆಡ್ಡಿ ಮಾತನಾಡಿ, ಇದೊಂದು ರಾಷ್ಟ್ರೀಯ ಅಪರಾಧ. ಆಧಾರ್‍ಕಾರ್ಡ್ ಮೂಲಕ ಮತದಾರರ ಗುರುತಿನ ಚೀಟಿ ನೀಡುವುದು ಶಿಕ್ಷಾರ್ಹ ಅಪರಾಧ. ಪೊಲೀಸರು ಬಹಳ ಲಘುವಾಗಿ ತೆಗೆದುಕೊಂಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಇದರ ಮೂಲಜಾಲ ಹೊರಗೆಳೆಯಬೇಕು. ಕೇವಲ ಆರೋಪಿಗಳಿಗೆ ನೋಟಿಸ್ ಕೊಟ್ಟು ಬಿಟ್ಟುಕಳುಹಿಸಿದ್ದಾರೆ. ಮೇಲ್ನೋಟಕ್ಕೆ ಸಚಿವರ ಪ್ರಭಾವದಿಂದ ಪ್ರಕರಣವನ್ನು ಮುಚ್ಚಿಹಾಕಲು ಷಡ್ಯಂತರ ನಡೆದಿದೆ. ಈ ಜಾಲದ ಹಿಂದೆ ಇರುವವರನ್ನು ಕೂಡಲೇ ಬಂಧಿಸಬೇಕೆಂದು ವಿವೇಕ್ ರೆಡ್ಡಿ ಆಗ್ರಹಿಸಿದರು.

ಹುಲಿ ಉಗುರಿನ ವಿಚಾರದಲ್ಲಿ ಎಲ್ಲರ ವಿರುದ್ಧವೂ ಕ್ರಮ ಜರುಗಿಸುತ್ತೇವೆ : ಖಂಡ್ರೆ

ಕಲ್ಬುರ್ಗಿ,ಅ.25- ವನ್ಯಜೀವಿ ಸಂರಕ್ಷಣಾ ಕಾಯ್ದೆ ಎಲ್ಲರಿಗೂ ಒಂದೇ ಆಗಿದ್ದು, ಪ್ರಭಾವಿಗಳಿರಲಿ, ಜನಸಾಮಾನ್ಯರಿರಲಿ ಎಲ್ಲರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಅರಣ್ಯ ಮತ್ತು ಪರಿಸರ ಸಂರಕ್ಷಣಾ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಕಲ್ಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1972 ರಲ್ಲಿ ಜಾರಿಗೆ ಬಂದಿರುವ ವನ್ಯಜೀವಿ ಸಂರಕ್ಷಣಾ ಕಾಯ್ದೆಗೆ 2002 ರಲ್ಲಿ ಮತ್ತು 2022 ರಲ್ಲಿ ತಿದ್ದುಪಡಿಗಳಾಗಿವೆ. ಅದರ ಪ್ರಕಾರ ಯಾವುದೇ ವನ್ಯಜೀವಿಗಳ ಉಗುರು, ಚರ್ಮ, ದಂತ, ಕೊಂಬುಗಳನ್ನು ಸಂಗ್ರಹಣೆ ಮಾಡುವುದು, ಮಾರಾಟ, ಸಾಗಾಣಿಕೆ ಮಾಡುವುದು ಅಥವಾ ಸ್ವಂತ ಬಳಕೆಗೆ ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದಿದ್ದಾರೆ.

ಏಷ್ಯನ್ ಪ್ಯಾರಾಗೇಮ್ಸ್ : ಜಾವೆಲಿನ್‍ನಲ್ಲಿ ಭಾರತಕ್ಕೆ ಚಿನ್ನ

ಕಾಯ್ದೆ ತೋರ್ಪಡಿಕೆಗಾಗಿ ಇಲ್ಲ. ಅದು ಕಠಿಣ ರೀತಿಯಲ್ಲಿ ಜಾರಿಗೆ ಬಂದಿದೆ. ನೆಲದ ಕಾನೂನನ್ನು ಎಲ್ಲರೂ ಪಾಲನೆ ಮಾಡಬೇಕು. ಸೆಲೆಬ್ರಿಟಿಗಳು ಸೇರಿದಂತೆ ಯಾರೇ ಆದರೂ ಹುಲಿ ಉಗುರು, ಚರ್ಮ, ದಂತ, ಕೊಂಬುಗಳನ್ನು ಬಳಕೆ ಮಾಡುತ್ತಿದ್ದರೆ ಅವುಗಳನ್ನು ಪರಿಶೀಲಿಸಿ ಕ್ರಮ ಜರುಗಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ.

ತಾವು ಯಾರ ಹೆಸರನ್ನೂ ವೈಯಕ್ತಿಕವಾಗಿ ಉಲ್ಲೇಖಿಸಲು ಬಯಸುವುದಿಲ್ಲ ಎಂದು ತಿಳಿಸಿದರು.
ಅರಣ್ಯ ಮತ್ತು ವನ್ಯಸಂಪತ್ತನ್ನು ಸಂರಕ್ಷಿಸುವುದು ಎಲ್ಲರ ಆದ್ಯಕರ್ತವ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕು, ಕಾನೂನನ್ನು ಪಾಲಿಸಬೇಕು ಎಂದು ಸಲಹೆ ನೀಡಿದ್ದಾರೆ.

ಕೆಲವರು ಹುಲಿ ಉಗುರನ್ನು ಕೊರಳಿಗೆ ಹಾಕಿಕೊಂಡಿದ್ದಾರೆ. ಇನ್ನೂ ಕೆಲವರು ಹುಲಿ ಚರ್ಮವನ್ನು ತಮ್ಮ ಮನೆಯಲ್ಲಿ ಬಳಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಅದನ್ನು ಪರಿಶೀಲಿಸಿ ಅಕಾರಿಗಳು ಕ್ರಮ ಜರುಗಿಸುತ್ತಾರೆ ಎಂದರು.

ಮತ್ತೆ ಮುನ್ನೆಲೆಗೆ ಬಂತು ಈದ್ಗಾ ಮೈದಾನ ವಿವಾದ

ಬೆಂಗಳೂರು,ಅ.25- ಮತ್ತೆ ಈದ್ಗಾ ಮೈದಾನ ಬಳಕೆ ವಿವಾದ ಭುಗಿಲೇಳುವ ಸಾಧ್ಯತೆಗಳಿವೆ. ಕನ್ನಡ ರಾಜ್ಯೋತ್ಸವಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ಇಡೀ ರಾಜ್ಯದ ಗಮನ ಸೆಳೆದಿದ್ದ ಚಾಮರಾಜಪೇಟೆ ಈದ್ಗಾ ಮೈದಾನ ವಿಚಾರ ಮತ್ತೆ ಮುನ್ನೇಲೆಗೆ ಬಂದಿದೆ.

ಸ್ವಾತಂತ್ರ್ಯ ದಿನಾಚರಣೆ, ಗಣೇಶ ಚತುರ್ಥಿ ಆಚರಣೆಗೆ ಪರ-ವಿರೋಧ ಮುಗಿದ ಬಳಿಕ ಇದೀಗ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುವ ಕೂಗು ಕೇಳಿಬರ್ತಿದೆ. ಚಾಮರಾಜಪೇಟೆ ನಾಗರಿಕ ಒಕ್ಕೂಟದಿಂದ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಪಟ್ಟು ಹಿಡಿದಿದ್ದು, ಇದಕ್ಕೆ ಕನ್ನಡ ಪರ ಹಾಗೂ ಹಿಂದೂಪರ ಸಂಘಟನೆಗಳು ಬೆಂಬಲ ಘೋಷಿಸಿವೆ. ಕನ್ನಡ ಸಾಹಿತ್ಯ ಪರಿಷತ್ ಕೂಡ ಮೈದಾನದಲ್ಲಿ ನಾಡಧ್ವಜ ಹಾರಿಸಲು ಅವಕಾಶ ನೀಡುವಂತೆ ಒತ್ತಡ ಏರಿದೆ.

ಭೂಗತ ಪಾತಕಿ ರವಿಪೂಜಾರಿ ಸಹಚರ ಶಾರ್ಪ್ ಶೂಟರ್ ಮುನ್ನಾ ಅರೆಸ್ಟ್

ಹೀಗಾಗಿ ನವಂಬರ್ 1 ರಂದು ಈದ್ಗಾ ಮೈದಾನದಲ್ಲಿ ರಾಜ್ಯೋತ್ಸವಕ್ಕೆ ಅವಕಾಶ ಕೋಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಚಾಮರಾಜಪೇಟೆ ನಾಗರಿಕ ಒಕ್ಕೂಟ ಮನವಿ ಮಾಡಿಕೊಂಡಿದೆ. ಆದರೆ, ಈ ಮನವಿಯನ್ನು ಜಿಲ್ಲಾಧಿಕಾರಿಗಳು ತಿರಸ್ಕರಿಸಿದ್ದು, ಯಾವುದೇ ಕಾರಣಕ್ಕೂ ಅನುಮತಿ ಕೊಡಲ್ಲ ಅಂತ ಹೇಳಿಕೆ ನೀಡಿರುವುದು ವಿವಾದ ಭುಗಿಲೇಳಲು ಕಾರಣವಾಗಿದೆ.

ಈ ಕುರಿತಂತೆ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿರುವುದಾಗಿ ಚಾಮರಾಜಪೇಟೆ ನಾಗರಿಕ ಒಕ್ಕೂಟದ ಖಜಾಂಚಿ ಯಶವಂತ್ ತಿಳಿಸಿದ್ದಾರೆ. ಒಂದು ವೇಳೆ ಕನ್ನಡ ರಾಜ್ಯೋತ್ಸವ ಆಚರಣೆಗೆ ಅವಕಾಶ ನೀಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ನಟ ದರ್ಶನ್ ವಿರುದ್ಧ ದೂರು

ಬೆಂಗಳೂರು,ಅ.25- ಹುಲಿ ಉಗುರಿನ ಪೆಂಡೆಂಟ್ ಹಾಕಿಕೊಂಡಿರುವ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಖ್ಯಾತ ಚಿತ್ರ ನಟ ದರ್ಶನ್ ವಿರುದ್ಧ ದೂರು ದಾಖಲಾಗಿದೆ. ದರ್ಶನ್ ಅವರು ಹುಲಿ ಉಗುರಿನ ಪೆಂಡೆಂಟ್ ಹಾಕಿಕೊಂಡಿರುವ ಬಗ್ಗೆ ಜನತಾ ಪಕ್ಷ ಅರಣ್ಯ ಇಲಾಖೆಗೆ ಫೋಟೋ ಸಮೇತ ದೂರು ನೀಡಿತ್ತು.

ಹೀಗಾಗಿ ದರ್ಶನ್ ವಿರುದ್ಧ ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಈಗಾಗಲೇ ಹುಲಿ ಉಗುರಿನ ಪೆಂಡೆಂಟ್ ಬಳಕೆ ಮಾಡಿರುವ ಬಗ್ಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟ ಜಗ್ಗೇಶ್, ಅವಧೂತ ವಿನಯ್ ಗುರೂಜಿ, ಧನಂಜಯ್ ಗುರೂಜಿ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.

ಸೆಲೆಬ್ರೆಟಿಗಳಿಗೆ ಸಂಕಷ್ಟ ತಂದಿಟ್ಟ ಹುಲಿ ಉಗುರು

ಖಾಸಗಿ ಚಾನಲ್ ನಡೆಸಿಕೊಡುತ್ತಿರುವ ಬಿಗ್‍ಬಾಸ್ ರೀಯಾಲಿಟಿ ಶೋನ ಸ್ಪರ್ಧಿ ವರ್ತೂರು ಸಂತೋಷ್ ಅವರು ಹುಲಿ ಉಗುರಿನ ಪೆಂಡೆಂಟ್ ಬಳಕೆ ಮಾಡಿರುವ ಆರೋಪದ ಮೇಲೆ ಅವರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಯಾರ್ಯಾರು ಹುಲಿ ಉಗುರು ಬಳಸಿದ್ದರೋ ಅಂತವರ ವಿರುದ್ಧ ಪ್ರಕರಣಗಳು ದಾಖಲಾಗುತ್ತಿವೆ.

ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 50ನೇ ಶತಕ ಬಾರಿಸುತ್ತಾರೆ : ಗವಾಸ್ಕರ್

ಬೆಂಗಳೂರು, ಅ. 25- ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಒಡಿಐ ವಿಶ್ವಕಪ್ ಟೂರ್ನಿಯ ಮುಂದಿನ ಎರಡು ಪಂದ್ಯಗಳಲ್ಲಿ ಶತಕ ಸಿಡಿಸಿ ಗಾಡ್ ಆಫ್ ಕ್ರಿಕೆಟ್ ಖ್ಯಾತಿಯ ಸಚಿನ್ ತೆಂಡೂಲ್ಕರ್ ಅವರ ಶತಕವನ್ನು ಸರಿಗಟ್ಟಲಿದ್ದಾರೆ ಎಂದು ಲಿಟ್ಲ್ ಮಾಸ್ಟರ್ ಸುನೀಲ್ ಗವಾಸ್ಕರ್ ಹೇಳಿದ್ದಾರೆ.

2023ರ ಒಡಿಐ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಫಾರ್ಮ್‍ನಲ್ಲಿರುವ ವಿರಾಟ್ ಕೊಹ್ಲಿ ಬಾಂಗ್ಲಾದೇಶ ವಿರುದ್ಧ ಅಜೇಯ 103 ರನ್ ಗಳಿಸುವ ಮೂಲಕ 48ನೇ ಒಡಿಐ ಶತಕವನ್ನು ಪೂರ್ಣಗೊಳಿಸಿದ್ದರು. ನ್ಯೂಜಿಲ್ಯಾಂಡ್ ವಿರುದ್ಧ ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಚೇಸಿಂಗ್ ಮಾಸ್ಟರ್ ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ ಅವರ ಸೆಂಚುರಿಗಳ ದಾಖಲೆಯನ್ನು ಸರಿಗಟ್ಟುತ್ತಾರೆ ಎಂದು ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಿದ್ದರು.

ಅದಕ್ಕೆ ತಕ್ಕಂತೆ ಕಿವೀಸ್ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ದ ವಿರಾಟ್ ಕೊಹ್ಲಿ 95 ರನ್ ಗಳಿಸಿದ್ದಾಗ ಸಿಕ್ಸರ್ ಬಾರಿಸಿ ಶತಕ ಸಿಡಿಸುವ ಲೆಕ್ಕಾಚಾರ ಹಾಕಿಕೊಂಡಿದ್ದರು, ಆದರೆ ಗ್ಲೆನ್ ಫಿಲಿಪ್ಸ್‍ಗೆ ಕ್ಯಾಚಿತ್ತು ಸಚಿನ್ ದಾಖಲೆ ಸರಿಗಟ್ಟುವ ಅವಕಾಶ ತಪ್ಪಿಸಿಕೊಂಡರು.

ಸೆಲೆಬ್ರೆಟಿಗಳಿಗೆ ಸಂಕಷ್ಟ ತಂದಿಟ್ಟ ಹುಲಿ ಉಗುರು

ಇನ್ನೆರಡು ಪಂದ್ಯಗಳಲ್ಲಿ ಕೊಹ್ಲಿ 49ನೇ ಶತಕ ಸಿಡಿಸುತ್ತಾರೆ:
2023ರ ಒಡಿಐ ವಿಶ್ವಕಪ್ ಟೂರ್ನಿಯಲ್ಲಿ ಕಳೆದ 5 ಪಂದ್ಯಗಳಿಂದ 354 ರನ್‍ಗಳನ್ನು ಬಾರಿಸಿ ಉತ್ತಮ ಫಾರ್ಮ್‍ನಲ್ಲಿದ್ದು , ಮುಂಬರುವ ಇಂಗ್ಲೆಂಡ್ ಅಥವಾ ಶ್ರೀಲಂಕಾ ವಿರುದ್ಧ ಕೊಹ್ಲಿ ಶತಕ ಬಾರಿಸಿ ಸಚಿನ್ ತೆಂಡೂಲ್ಕರ್ ಅವರ 49 ಸೆಂಚುರಿ ದಾಖಲೆಯನ್ನು ಸರಿಗಟ್ಟಲಿದ್ದಾರೆ ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ 50ನೇ ಶತಕ ಗಳಿಸುತ್ತಾರೆ:
ನವೆಂಬರ್ 5 ರಂದು ವಿರಾಟ್ ಕೊಹ್ಲಿ ಅವರು ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು ಅಂದು ನಡೆಯಲಿರುವ ವಿಶ್ವಕಪ್ ಟೂರ್ನಿಯ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ತಮ್ಮ 50ನೇ ಒಡಿಐ ಶತಕ ಪೂರೈಸಿ ದಾಖಲೆ ನಿರ್ಮಿಸುವ ಮೂಲಕ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಕೊಡಲಿದ್ದಾರೆ ಎಂದು ಸನ್ನಿ ಹೇಳಿದ್ದಾರೆ.

`ವಿರಾಟ್ ಕೊಹ್ಲಿ ಕೋಲ್ಕತ್ತಾ ಈಡನ್ ಗಾರ್ಡನ್‍ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುವ ಪಂದ್ಯದಲ್ಲಿ 50ನೇ ಒಡಿಐ ಶತಕ ಸಿಡಿಸಲಿದ್ದಾರೆ. ಅವರು ತಮ್ಮ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಉತ್ತಮ ಉಡುಗೊರೆ ಕೊಡಲು ಇದಕ್ಕಿಂತ ಕ್ರೀಡಾಂಗಣ ಸಿಗಲಾರದು. ಅದಕ್ಕೂ ಮುನ್ನ ನಡೆಯುವ 2 ಪಂದ್ಯಗಳಲ್ಲಿ ತಮ್ಮ 49ನೇ ಒಡಿಐ ಶತಕ ಪೂರೈಸಿ ಕೋಲ್ಕತ್ತಾ ಈಡನ್‍ಗಾರ್ಡನ್‍ಗೆ ಕೊಹ್ಲಿ ಹೋಗಲಿದ್ದು ಅಲ್ಲಿ ಶತಕ ಸಿಡಿಸಿ ಅಭಿಮಾನಿಗಳಿಂದ ಗೌರವ ಸ್ವೀಕರಿಸಲಿದ್ದಾರೆ ಎಂದಿದ್ದಾರೆ.

ವಿಶ್ವಕಪ್‍ನ ಮತ್ತೆರಡು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಹಾರ್ದಿಕ್ ಪಾಂಡ್ಯ

ಬೆಂಗಳೂರು, ಅ. 25- ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗಾಯದ ಸಮಸ್ಯೆಗೆ ಒಳಗಾಗಿರುವ ಟೀಮ್ ಇಂಡಿಯಾದ ಉಪನಾಯಕ ಹಾರ್ದಿಕ್ ಪಾಂಡ್ಯ ಮತ್ತೆರಡು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಅಕ್ಟೋಬರ್ 19 ರಂದು ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ತಮ್ಮದೇ ಬೌಲಿಂಗ್‍ನಲ್ಲಿಲಿಟನ್ ದಾಸ್ ಹೊಡೆದ ಚೆಂಡನ್ನು ಕಾಲಿನಲ್ಲಿ ತಡೆಯಲು ಹೋದ ಹಾರ್ದಿಕ್ ಪಾಂಡ್ಯ ಪಾದದ ಗಾಯದ ಸಮಸ್ಯೆ ಒಳಗಾಗಿ ಅಂದಿನ ಪಂದ್ಯದಿಂದ ಹೊರಗುಳಿದಿದ್ದರು.

ಅಕ್ಟೋಬರ್ 22 ರಂದು ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ ಪಂದ್ಯದಿಂದಲೂ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ, ಸಂಪೂರ್ಣವಾಗಿ ಚೇತರಿಸಿ ಕೊಂಡಿದ್ದು ಅಕ್ಟೋಬರ್ 29 ರಂದು ಲಖನೌದ ಏಕನಾ ಕ್ರೀಡಾಂಗಣದಲ್ಲಿ ಡಿಫೆಂಡಿಂಗ್ ಚಾಂಪಿಯನ್ಸ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪ್ಲೇಯಿಂಗ್ 11ಗೆ ಲಭ್ಯರಾಗಲಿದ್ದಾರೆ ಎಂದು ಹೇಳಲಾಗಿತ್ತು.

ಬಿಜೆಪಿ-ಜೆಡಿಎಸ್ ನಡುವೆ ಕ್ಷೇತ್ರ ಹಂಚಿಕೆ ವಿಳಂಬ

ಆದರೆ ಈಗ ತಾನೇ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ಹಾರ್ದಿಕ್ ಪಾಂಡ್ಯ, ಇಂಗ್ಲೆಂಡ್ ಪಂದ್ಯವು ಸೇರಿದಂತೆ ನವೆಂಬರ್ 2 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಸದ್ಯ ಬೆಂಗಳೂರಿನ ಎನ್‍ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿರುವ ಹಾರ್ದಿಕ್ ಪಾಂಡ್ಯ, ದಕ್ಷಿಣ ಆಫ್ರಿಕಾ ಹಾಗೂ ನೆದರ್‍ಲ್ಯಾಂಡ್ಸ್ ವಿರುದ್ಧದ ಪಂದ್ಯಕ್ಕೆ ಪಾಂಡ್ಯ ಲಭ್ಯರಾಗಲಿದ್ದಾರೆ.

ನಾನು ಧರಿಸದ್ದ ಹುಲಿ ಉಗುರು ಒರಿಜಿನಲ್ ಅಲ್ಲ ; ನಿಖಿಲ್ ಸ್ಪಷ್ಟನೆ

ಬೆಂಗಳೂರು,ಅ.25- ನಾನು ಧರಿಸಿದ್ದ ಹುಲಿ ಉಗುರು ಮಾದರಿಯ ಪೆಂಡೆಂಟ್ ಕೃತಕವಾದದ್ದೇ ಹೊರತು ನೈಜವಾದುದ್ದಲ್ಲ ಎಂದು ನಟ ಹಾಗೂ ಜೆಡಿಎಸ್ ಯುವ ಘಟಕದ ಮಾಜಿ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಪೆಂಡೆಂಟ್ ಅನ್ನು ನನ್ನ ಮದುವೆ ಸಮಯದಲ್ಲಿ ಉಡುಗೊರೆ ನೀಡಿದ್ದು, ಅದು ಈಗಲೂ ನನ್ನ ಬಳಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬಹುದು ಎಂದು ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಅವರು ತಿಳಿಸಿದ್ದಾರೆ.

ಭೂಗತ ಪಾತಕಿ ರವಿಪೂಜಾರಿ ಸಹಚರ ಶಾರ್ಪ್ ಶೂಟರ್ ಮುನ್ನಾ ಅರೆಸ್ಟ್

ಮದುವೆ ಸಮಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರು ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿರುವುದು ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಗಂಭೀರತೆ ಬಗ್ಗೆ ಅರಿವಿದೆ. ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಯಾರೂ ಪ್ರಸಾರ ಮಾಡಬಾರದು ಎಂದು ಅವರು ವಿನಂತಿಸಿದ್ದಾರೆ.