Home Blog Page 1874

ರೂಪ್‍ಟಾಪ್ ಬಾರ್‌ಗಳ ಮೇಲೆ ಬಿಬಿಎಂಪಿ ಕಣ್ಣು

ಬೆಂಗಳೂರು,ಅ.20- ಅನಧಿಕೃತ ಪಬ್ಸ್, ಬಾರ್‌ಗಳ ಮೇಲೆ ಬಿಬಿಎಂಪಿ ಸಮರ ಸಾರಿದೆ. ಕಟ್ಟಡಗಳ ರೂಪ್‍ಟಾಪ್‍ಗಳ ಮೇಲೆ ನಿರ್ಮಾಣ ಮಾಡಿರುವ ಬಾರ್‌ಗಳಲ್ಲಿ ಅವಘಡಗಳು ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಕ್ರಮ ರೂಪ್‍ಟಾಪ್ ಬಾರ್‌ಗಳ ಮೇಲೆ ದಾಳಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‍ಗಿರಿನಾಥ್ ತಿಳಿಸಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಕೋರಮಂಗಲದಲ್ಲಿ ಪಬ್ ಒಂದರ ರೂಪ್ ಟಾಪ್ ಮೇಲೆ ಬೆಂಕಿ ಅವಘಡ ಸಂಭವಿಸಿರುವುದನ್ನು ಮನಗಂಡು ನಾವು ಈ ತೀರ್ಮಾನ ಕೈಗೊಂಡಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ. ಬಿಬಿಎಂಪಿಯಿಂದ ಅನುಮತಿ ಸಿಗದಿದ್ದರೂ ಕೆಲ ಕಡೆಗಳಲ್ಲಿ ಅನಧಿಕೃತ ರೂಪ್‍ಟಾಪ್ ಬಾರ್‌ಗಳನ್ನು ನಿರ್ಮಾಣ ಮಾಡಿಕೊಂಡಿರುವ ಕೆಲವರು ವಾರ್ಷಿಕ ಕೋಟ್ಯಂತರ ರೂ.ಆದಾಯಗಳಿಸುತ್ತಿದ್ದಾರೆ.

ಸತೀಶ್ ಜಾರಕಿಹೊಳಿ ಅಸಮಾಧಾನದಿಂದ ಪಕ್ಷಕ್ಕೆ ನಷ್ಟವಿಲ್ಲ : ಸಚಿವ ರಾಜಣ್ಣ

ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ತಿಳಿದಿದ್ದರೂ ಜಾಣ ಕುರುಡರಂತೆ ವರ್ತಿಸುತ್ತಿರುವುದು ಕಂಡು ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಆಯುಕ್ತರು ಯಾವುದೇ ಮುಲಾಜಿಲ್ಲದೆ ರೂಪ್‍ಟಾಪ್ ಬಾರ್‍ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ 200 ಕ್ಕೂ ಹೆಚ್ಚು ಬಾರ್ ಪಬ್‍ಗಳಲ್ಲಿ ಅನಧಿಕೃತ ರೂಪ್ ಟಾಪ್ ನಿರ್ಮಾಣ ಮಾಡಲಾಗಿದೆ ಆದರಲ್ಲೂ ನಗರದ ಪೂರ್ವ ಹಾಗೂ ದಕ್ಷೀಣ ವಲಯದಲ್ಲಿ ಅತಿ ಹೆಚ್ಚು ಅನಧಿಕೃತ ರೂಪ್ ಟಾಪ್ ನಿರ್ಮಾಣವಾಗಿರುವುದು ಕಂಡು ಬಂದಿದೆ.

ಗುತ್ತಿಗೆದಾರನ ಅಪಹರಣ : ಮಾಜಿ ಕಾರ್ಪೊರೇಟರ್ ಸಿಸಿಬಿ ವಶಕ್ಕೆ

ಬೆಂಗಳೂರು, ಅ.20- ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಜಿಕೆ ವೆಂಕಟೇಶ್ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಗುತ್ತಿಗೆದಾರ ಚಂದ್ರು ಎಂಬುವರನ್ನು ಅಪಹರಿಸಿ ಮೂರು ಕೋಟಿ ಹಣಕ್ಕೆ ಬೇಡಿಕೆ ಇಟ್ಟು ನಂತರ ಚೆಕ್ ಪಡೆದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ವೆಂಕ ಟೇಶ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.

ವೆಂಕಟೇಶ್ ಅವರ ವಾರ್ಡ್ ವ್ಯಾಪ್ತಿಯಲ್ಲಿ ಚಂದ್ರು ಅವರು ಗುತ್ತಿಗೆ ಪಡೆದು ಕಾಮಗಾರಿ ಮಾಡಿಸಿದ್ದರು. ನಮ್ಮ ವ್ಯಾಪ್ತಿಯಲ್ಲಿ ಹೇಗೆ ಕಂಟ್ರಾಕ್ಟ ಮಾಡುತ್ತೀಯಾ ಎಂದು ಚಂದ್ರು ಅವರನ್ನು ಅಪಹರಿಸಿ, ಬೆದರಿಕೆವೊಡ್ಡಿ ಮೂರು ಕೋಟಿ ರೂ. ಚೆಕ್ ಪಡೆದು ನಂತರ ಬಿಡುಗಡೆ ಮಾಡಿದ್ದರು.

ಇಂಡಿಯಾ ಮೈತ್ರಿಕೂಟಕ್ಕೆ ಮರ್ಮಾಘಾತ ಕೊಟ್ಟ ಜೆಡಿಯು-ಎಸ್‍ಪಿ

ಈ ಸಂಬಂಧ ಸಿಸಿಬಿ ಪೊಲೀಸರಿಗೆ ಗುತ್ತಿಗೆದಾರ ಚಂದ್ರು ದೂರು ನೀಡಿದ್ದಾರೆ. ಇದರನ್ವಯ ಸಿಸಿಬಿ ಪೊಲೀಸರು ಇದೀಗ ವೆಂಕಟೇಶ್ ಅವರನ್ನು ವಿಚಾರಣೆಗೊಳಪಡಿಸಿದ್ದು, ಈ ಬಗ್ಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

317 ಕಿ.ಮೀ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಕ್ರಮ : ಸಿಎಂ

ಬೆಂಗಳೂರು,ಅ.20- ಬೆಂಗಳೂರು ನಗರವು ವೇಗವಾಗಿ ಬೆಳೆಯುತ್ತಿದ್ದು, ಬೆಂಗಳೂರಿನಲ್ಲಿ 2031ರ ವೇಳೆಗೆ 317 ಕಿ.ಮೀ.ಗಳ ಮೆಟ್ರೋ ಮಾರ್ಗಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಬೆಂಗಳೂರಿನ ಎರಡು ರೈಲು ಮಾರ್ಗಗಳನ್ನು ಪ್ರಧಾನಿಯವರು ವಿಡಿಯೋ ಕಾನರೆನ್ಸ್ ಮೂಲಕ ಉದ್ಘಾಟಿಸಿ ಕಾರ್ಯಕ್ರಮದಲ್ಲಿ ವರ್ಚುವಲ್ ಮಾದರಿಯಲ್ಲಿ ಹಾಜರಿದ್ದು ಮುಖ್ಯಮಂತ್ರಿಯವರು ಮಾತನಾಡಿದರು.

ಸಿಎಂಪಿ ಪ್ಲಾನ್‍ನಲ್ಲಿ ಅನುಮೋದಿಸಿದೆ. ಈಗಾಗಲೇ 257 ಕಿ.ಮೀ.ಗಳ ಮಾರ್ಗವು ಕಾರ್ಯಾಚರಣೆ, ನಿರ್ಮಾಣ ಮತ್ತು ಯೋಜನೆ ಹಂತದಲ್ಲಿದೆ. ಇನ್ನುಳಿದ 60 ಕಿ.ಮೀ.ಗಳ ಮೆಟ್ರೊ ಮಾರ್ಗಗಳ ಕಾರ್ಯಸಾಧ್ಯತೆಯ ಸಮೀಕ್ಷೆಯನ್ನು ಶೀಘ್ರದಲ್ಲೇ ಕೈಗೊಳ್ಳಲಾಗುವುದು ಎಂದರು.

ಪ್ರಧಾನಮಂತ್ರಿಯವರು ವಿಡಿಯೋ ಕಾನರೆನ್ಸ್ ಮೂಲಕ ಎರಡು ಮೆಟ್ರೋ ಮಾರ್ಗಗಳನ್ನು ಉದ್ಘಾಟಿಸಿದ್ದಾರೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಅತ್ಯಕವಾಗಿದೆ. ಅದನ್ನು ನಿವಾರಣೆ ಮಾಡಲು ಮೆಟ್ರೋ ಯೋಜನೆ ಸಹಕಾರಿಯಾಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಪ್ರಯತ್ನದಿಂದ ಪ್ರಮುಖ ಎರಡು ಮಾರ್ಗಗಳಾದ ಕೃಷ್ಣರಾಜಪುರದಿಂದ ಬೈಯಪ್ಪನಹಳ್ಳಿ ನಡುವಿನ 2.10 ಕಿ.ಮೀ.ಗಳ ಉದ್ದ ಮತ್ತು ಕೆಂಗೇರಿಯಿಂದ ಚಲ್ಲಘಟ್ಟವರೆಗಿನ 2.05 ಕಿ.ಮೀ.ಗಳ ಉದ್ದದ ಮಾರ್ಗವನ್ನು ಇದೇ ತಿಂಗಳ 9ರಂದು ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗಿದೆ.

ಈ ಎರಡು ಪ್ರಮುಖ ಮಾರ್ಗಗಳನ್ನು ತೆರೆಯುವುದರೊಂದಿಗೆ, ನಗರವು ಪೂರ್ವದಿಂದ ಪಶ್ಚಿಮಕ್ಕೆ ತಡೆರಹಿತ ಸಂಪರ್ಕ ಹೊಂದಿದೆ ಮತ್ತು ಮೆಟ್ರೋ ಜಾಲ 74 ಕಿ.ಮೀ.ಗಳಿಗೆ ವಿಸ್ತರಿಸಿದೆ ಎಂದರು.ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ-1ರ 42.3 ಕಿ.ಮೀ.ಗಳ ಉದ್ದದ ಮಾರ್ಗವನ್ನು ರೂ. 14,133 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ನಮ್ಮ ಸರ್ಕಾರದ ಹಿಂದಿನ ಅವಯಲ್ಲಿ ರಾಷ್ಟ್ರಪತಿಗಳಾಗಿದ್ದ ಪ್ರಣಬ್ ಮುಖರ್ಜಿ ಉದ್ಘಾಟಿಸಿದರು. ಈ ಯೋಜನೆಗಾಗಿ ರಾಜ್ಯ ಸರ್ಕಾರವು ರೂ. 5630 ಕೋಟಿಗಳಷ್ಟು ವೆಚ್ಚ ಮಾಡಿದೆ.

ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ-2ರಲ್ಲಿ 75.06 ಕಿ.ಮೀ.ಗಳ ಉದ್ದದ ಮಾರ್ಗ ಹೊಂದಿದ್ದು, ಸದರಿ ಯೋಜನೆಗೆ ರೂ. 30,695 ಕೋಟಿಗಳ ವೆಚ್ಚವಾಗಲಿದೆ. ಈಗಾಗಲೇ ಕಾಮಗಾರಿಗಳು ಭರದಿಂದ ನಿರ್ಮಾಣವಾಗುತ್ತಿದ್ದು, 32 ಕಿ.ಮೀ.ಗಳ ಉದ್ದದ ಮಾರ್ಗವನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗಿದೆ. ಪ್ರಸ್ತುತ ಬೆಂಗಳೂರು ಮೆಟ್ರೋ ಜಾಲದ ಕಾರ್ಯಾಚರಣೆಯು 74 ಕಿ.ಮೀ.ಗಳಿಗೆ ಏರಿಕೆಯಾಗಿದೆ ಎಂದರು.

ಇಂಡಿಯಾ ಮೈತ್ರಿಕೂಟಕ್ಕೆ ಮರ್ಮಾಘಾತ ಕೊಟ್ಟ ಜೆಡಿಯು-ಎಸ್‍ಪಿ

ನಾಗಸಂದ್ರದಿಂದ ಮಾದವಾರದವರೆಗಿನ ಉತ್ತರ ವಿಸ್ತರಣೆ 3.14 ಕಿ.ಮೀ.ಗಳ ಉದ್ದದ ಮಾರ್ಗವು ಮತ್ತು ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ 19.15 ಕಿ.ಮೀ.ಗಳ ಉದ್ದದ ಹೊಸ ಮಾರ್ಗಗಳು ಮುಕ್ತಾಯದ ಹಂತದಲ್ಲಿದ್ದು, 2024ರ ಏಪ್ರಿಲ್ ವೇಳೆಗೆ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲು ಯೋಜಿಸಲಾಗಿದೆ. ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ 21.26 ಕಿ.ಮೀ.ಗಳ ಉದ್ದದ ಹೊಸ ಮಾರ್ಗವನ್ನು 2025ರ ಮಾರ್ಚ್ ವೇಳೆಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ.

ಈ ಮಾರ್ಗಗಳನ್ನು ಪೂರ್ಣಗೊಳಿಸುವು ದರೊಂದಿಗೆ, ಕಾರ್ಯಾಚರಣೆಯ ಜಾಲವು 117 ಕಿ.ಮೀ.ಗಳಿಗೆ ವಿಸ್ತಾರಗೊಳ್ಳುತ್ತದೆ ಮತ್ತು 12 ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆಯಿದೆ. ಹಂತ-2 ಯೋಜನೆಗಾಗಿ, ಕರ್ನಾಟಕ ಸರ್ಕಾರವು ರೂ. 11583.08 ಕೋಟಿಗಳನ್ನು ಬಿಡುಗಡೆ ಮಾಡಿದೆ.

ಓಆರ್‍ಆರ್-ಏರ್‍ಪೊರ್ಟ್ ಮೆಟ್ರೋ ಎಂದು ಕರೆಯಲ್ಪಡುವ 58 ಕಿ.ಮೀ.ಗಳ ಉದ್ದದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‍ನಿಂದ ಹೆಬ್ಬಾಳ ಜಂಕ್ಷನ್ ಮೂಲಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಂತ 2ಎ ಮತ್ತು 2ಬಿ ಯೋಜನೆಯನ್ನು ಅಂದಾಜು ರೂ. 14788.1 ಕೋಟಿಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, 2026ರ ವೇಳೆಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಕರ್ನಾಟಕ ಸರ್ಕಾರವು ಇದುವರೆಗೆ ರೂ. 4775.36 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಯೋಜನೆಯು ಪೂರ್ಣಗೊಂಡ ನಂತರ, ಮೆಟ್ರೋ ಜಾಲವು 176 ಕಿ.ಮೀ.ಗಳು ಆಗಲಿದೆ ಮತ್ತು ಪ್ರತಿದಿನ ಸುಮಾರು 20 ಲಕ್ಷ ಪ್ರಯಾಣಿಕರು ಸಂಚರಿಸಲಿದ್ದಾರೆ.

ದೇಶದ ಮೊದಲ ರ‍್ಯಾಪಿಡ್-​ಎಕ್ಸ್ ಪ್ರೆಸ್​ ರೈಲಿಗೆ ಮೋದಿ ಚಾಲನೆ

ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ಬೆಂಗಳೂರು ಮೆಟ್ರೊ ರೈಲು ಯೋಜನೆಯ 3ನೇ ಹಂತದಲ್ಲಿ 45 ಕಿ.ಮೀ.ಗಳ ಉದ್ದದ ಮಾರ್ಗವನ್ನು ಅಂದಾಜು ರೂ. 15,611 ಕೋಟಿಗಳ ವೆಚ್ಚದಲ್ಲಿ ನಿರ್ಮಿಸಲು ವಿಸ್ತೃತ ಯೋಜನಾ ವರದಿ (ಡಿಪಿಆರ್)ನ್ನು ಕೇಂದ್ರ ಸರ್ಕಾರದ ಅನುಮೋದನೆಗಾಗಿ ಸಲ್ಲಿಸಲಾಗಿದೆ. ಈ ಯೋಜನೆಗೆ ಶೀಘ್ರವಾಗಿ ಅನುಮೋದನೆ ನೀಡುವಂತೆ ಪ್ರಧಾನಮಂತ್ರಿಯವರಲ್ಲಿ ಒತ್ತಾಯಿಸಿದರು.

ಸರ್ಜಾಪುರದಿಂದ ಹೆಬ್ಬಾಳದವರೆಗಿನ 37 ಕಿ.ಮೀ.ಗಳ ಉದ್ದದ ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-3ಎಗೆ ಡಿಪಿಆರ್ ತಯಾರಿಸಲಾಗುತ್ತಿದೆ. ಮೆಟ್ರೋ ಯೋಜನೆಯನ್ನು ಸಾಕಾರಗೊಳಿಸಿದ ಪ್ರಧಾನಿಯವರಿಗೆ, ಕೇಂದ್ರ ಸಚಿವರಿಗೆ, ಸಾಧಾರಣ ಬಡ್ಡಿದರಗಳೊಂದಿಗೆ ದೀರ್ಘಾವ ಸಾಲವನ್ನು ಒದಗಿಸುವ ಮೂಲಕ ಮೆಟ್ರೋ ರೈಲು ಯೋಜನೆಗೆ ಬೆಂಬಲ ನೀಡಿದ ಎಲ್ಲಾ ವಿದೇಶೀ ಹಣಕಾಸು ಸಂಸ್ಥೆಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಹೇಳಿದರು.

ಈ ಯೋಜನೆಯಲ್ಲಿ ಕೆಲಸ ಮಾಡಿದ ಎಲ್ಲಾ ಗುತ್ತಿಗೆದಾರರಿಗೆ ಹಾಗೂ ಈ ಯೋಜನೆಗಳಲ್ಲಿ ತೊಡಗಿರುವ 14 ಸಾವಿರಕ್ಕೂ ಹೆಚ್ಚು ಕಾರ್ಮಿಕರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದರು.

ಕರಾವಳಿ-ಮಲೆನಾಡಿಗರ ಬವಣೆ ನಿವಾರಣೆಗೆ ಸಮಾಲೋಚನೆ

ಬೆಂಗಳೂರು,ಅ.20- ಮಲೆನಾಡು ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಸೇರಿದಂತೆ ಏಳು ಜಿಲ್ಲಾಗಳ ಸಮಸ್ಯೆಗಳನ್ನು ಸಮಾಲೋಚಿಸಿ ಪರಿಹಾರ ಹುಡುಕಲು ಮತ್ತು ನಮ್ಮ ವಿವಿಧ ಹಕ್ಕುಗಳ ಹಕ್ಕೊತ್ತಾಯವನ್ನು ಮಾಡಲು ಅ.31ರಂದು ಬೆಳಗ್ಗೆ 10 ಗಂಟೆಗೆ ನಗರದ ವಿಜಯನಗರ ಆದಿಚುಂಚನಗಿರಿ ಮಠದ ಸಭಾಂಗಣದಲ್ಲಿ ಸಮಾಲೋಚನಾ ಸಭೆ ನಡೆಸಲು ಮಲೆನಾಡು ಕರಾವಳಿ ಜನಪರ ಒಕ್ಕೂಟ ತೀರ್ಮಾನಿಸಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಮುರೋಳಿ ತಿಳಿಸಿದರು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಲೆನಾಡು ಕರಾವಳಿ ಜನಪರ ಒಕ್ಕೂಟ ಅನೇಕ ವರ್ಷಗಳಿಂದ ಮಲೆನಾಡು ಕರಾವಳಿ ಭಾಗದ ಜಿಲ್ಲೆಗಳ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚು ಒತ್ತುಕೊಟ್ಟು ಹೋರಾಟ ಮಾಡುತ್ತಾ ಬಂದಿದೆ. ಸ್ಥಳೀಯ ಸಮಸ್ಯೆಗಳ ವಿರುದ್ಧ ಧ್ವನಿಯೆತ್ತಿ ಪರಿಹಾರಗಳನ್ನು ಹುಡುಕಿಕೊಳ್ಳುವಲ್ಲಿ ಶ್ರಮಿಸುತ್ತಿದೆ.

ಇಲ್ಲಿನ ಭಾಗದಲ್ಲಿ ರೈತಾಪಿ ವರ್ಗ, ಮೀನುಗಾರರು ಸೇರಿದಂತೆ ಅನೇಕರು ಬದುಕು ಕಟ್ಟಿಕೊಂಡಿದ್ದಾರೆ. ಈ ಭಾಗದಿಂದ ಸಂಸ್ಕøತಿ, ಭಾಷೆ, ರಾಜಕೀಯ, ಸಾಹಿತ್ಯ, ಕಲೆಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಅಪಾರವಾದ ಕೊಡುಗೆ ಇದೆ. ಆದರೆ, ಈ ಭಾಗದ ಜನ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದರು.

ಇಂಡಿಯಾ ಮೈತ್ರಿಕೂಟಕ್ಕೆ ಮರ್ಮಾಘಾತ ಕೊಟ್ಟ ಜೆಡಿಯು-ಎಸ್‍ಪಿ

ಕರಾವಳಿ ಮತ್ತು ಕಾಡು ಇಲ್ಲಿನ ಜನರಿಗೆ ಹೆಚ್ಚು ಉದ್ಯೋಗವನ್ನು ಒದಗಿಸಿ ಕೊಟ್ಟಿದ್ದು, ಸರ್ಕಾರಗಳಿಂದ ಸೂಕ್ತ ಮಾನ್ಯತೆ ಸಿಕ್ಕಿಲ್ಲ. ಅರಣ್ಯ ಹಕ್ಕು ಕಾಯ್ದೆ ಸೇರಿದಂತೆ ಜನಪರ ಕಾಯ್ದೆಗಳು ಇಲ್ಲದಿರುವುದು ಇಲ್ಲಿನ ಸಾಮಾನ್ಯ ಜನರಿಗೆ ಅನಾನುಕೂಲವಾಗಿದೆ. ಮಲೆನಾಡು ಕರಾವಳಿ ಭಾಗಕ್ಕೆ ಮೆಡಿಕಲ್ ಕಾಲೇಜು, ಐಐಟಿ ಸೇರಿದಂತೆ ಉನ್ನತ ಶಿಕ್ಷಣಕ್ಕೆ ನೆರವಾಗುವ ಯೋಜನೆಗಳನ್ನು ರೂಪಿಸಬೇಕು ಎಂದು ಹೇಳಿದರು.

ಚಿಕ್ಕಮಗಳೂರಿನ ಕಾಫಿ ಬೆಳೆಗಾರರು, ಮೀನುಗಾರರ ಸಮಸ್ಯೆ, ಅರಣ್ಯ ಹೊತ್ತುವರಿ ಪರಿಹಾರ, ಕಸ್ತೂರಿ ರಂಗನ್ ವರದಿಗಾಗಿ ಹೊಸ ಸೂತ್ರ ರಚನೆ, ಹೊಸ ತಾಲೂಕುಗಳ ಅಭಿವೃದ್ಧಿ, ಉಡುಪಿ ಆಗುಂಬೆ ಹೆದ್ದಾರಿ ನವೀಕರಣ, ನದಿ ಮೂಲಗಳ ರಕ್ಷಣೆ, ಪ್ರಕೃತಿ ಸಹಜ ನದಿ ಜೋಡಣೆಗೆ ಮಹತ್ವ, ಚಿಕ್ಕಮಗಳೂರು-ಮಡಿಕೇರಿ ಹಾಗೂ ಸೂಕ್ತ ಪ್ರದೇಶಕ್ಕೆ ರೈಲ್ವೆ ಪಥ ವಿಸ್ತರಣೆ, ಜಾತಿ ಮತ ಭೇದ ಇಲ್ಲದೆ ಅಸ್ಪೃಶ್ಯತೆ ವಿರುದ್ಧ ಸಂಘಟನೆ ಮಾಡುತ್ತಾ ಶೋಷಿತರ ಕೂಗಾಗಿದ್ದ ಕ್ರಾಂತಿಕಾರಿ ಸಾಮಾಜಿಕ ಸಮಾನತೆಯ ಹರಿಕಾರ ನಾರಾಯಣ ಗುರುಗಳ ಹೆಸರಲ್ಲಿ ವಿಶ್ವವಿದ್ಯಾನಿಲಯ ನಿರ್ಮಾಣ ಆಗಬೇಕು ಎಂಬ ಇನ್ನಿತರ ಅನೇಕ ವಿಷಯಗಳನ್ನು ಇದೇ ವೇಳೆ ಸರ್ಕಾರದ ಮುಂದಿಟ್ಟರು.

ಒಕ್ಕೂಟದ ಸಂಚಾಲಕರಾದ ಅನಿಲ್ ಹೊಸಕೊಪ್ಪ ಮಾತನಾಡಿ, ಜನಪರ ಒಕ್ಕೂಟದ ಮೂಲಕ ಏಳು ಜಿಲ್ಲೆಗಳನ್ನು ಒಳಗೊಂಡ ಮಲೆನಾಡು ಕರಾವಳಿ ಪ್ರದೇಶದ ಸಮಸ್ಯೆಗಳನ್ನು ಹೋರಾಟಗಳ ಮೂಲಕ ಸರ್ಕಾರದ ಮುಂದಿಡುವುದು ನಮ್ಮ ಮುಖ್ಯ ಉದ್ದೇಶ ವಾಗಿದೆ. ಕರಾವಳಿ ಮಲೆನಾಡು ಪಶ್ಚಿಮ ಘಟ್ಟದಲ್ಲಿ ರೈತರು, ಸಾರ್ವಜನಿಕರು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮತ್ತಷ್ಟು ಸದೃಢರಾಗಬೇಕಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಗಳ ಕಣ್ಣು ತೆರೆಸುಲು ನಾವು ಶ್ರಮಿಸುತ್ತಿದ್ದೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ತೇಜ್ ಶೆಟ್ಟಿ, ಮಹೇಶ್ ಶಿರಸಿ, ಸಂತೋಷ್ ಶೆಟ್ಟಿ, ಅಬ್ಬಾಸ್ ಕೆಗ್ಗ, ಅಬ್ಬಾಸ್ ಧರ್ಮಸ್ಥಳ, ನವೀನ್ ಮಾವಿನಕಟ್ಟೆ, ಕಿರಣ್ ಮಲ್ನಾಡ್ ಉಪಸ್ಥಿತರಿದ್ದರು.

ಸತೀಶ್ ಜಾರಕಿಹೊಳಿ ಅಸಮಾಧಾನದಿಂದ ಪಕ್ಷಕ್ಕೆ ನಷ್ಟವಿಲ್ಲ : ಸಚಿವ ರಾಜಣ್ಣ

ಬೆಂಗಳೂರು,ಅ.20- ತಮ್ಮ ಮೌನವನ್ನು ದೌರ್ಬಲ್ಯ ಎಂದು ಪರಿಗಣಿಸಬಾರದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳುವ ಮೂಲಕ ಅಸಮಧಾನ ಇರುವುದನ್ನು ಹೊರ ಹಾಕಿದ್ದಾರೆ. ಆದರೆ ಅದರಿಂದ ಪಕ್ಷಕ್ಕಾಗಲಿ ಸರ್ಕಾರಕ್ಕಾಗಿಲಿ ಯಾವುದೇ ನಷ್ಟ ವಾಗುವುದಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚುವರಿ ಉಪಮುಖ್ಯಮಂತ್ರಿಗಳ ಹುದ್ದೆಗಳ ಸೃಷ್ಟಿಗೆ ನಾನು ಹೈಕಮಾಂಡ್‍ಗೆ ಮನವಿ ಮಾಡಿದ್ದೆ. ಅದು ನಮ್ಮ ಮಟ್ಟದಲ್ಲಿ ಮುಗಿದ ಅಧ್ಯಾಯ. ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಪಕ್ಷಕ್ಕೆ ಬಿಟ್ಟ ವಿಚಾರ ಎಂದರು.

ಸತೀಶ್ ಜಾರಕಿಹೊಳಿ ಆಪ್ತ ಶಾಸಕರೊಂದಿಗೆ ಪ್ರವಾಸ ಮಾಡುತ್ತಿರುವುದು ಭಿನ್ನಮತವಲ್ಲ. ಸತೀಶ್ ಜಾರಕಿಹೊಳಿ ತತ್ವಾಧಾರಿತ, ಸಿದ್ಧಾಂತದ ಮೇಲೆ ಹೋರಾಟ ಮಾಡುವ ಮುತ್ಸದ್ಧಿ ನಾಯಕ. ಅವರು ಯಾವತ್ತೂ ಅಧಿಕಾರಕ್ಕೆ ಆಸೆ ಪಟ್ಟವರಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನತೆ ಸಿಗಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ನನಗೆ ಅಸಮಾದಾನ ಇರಬಹುದು, ಅಂದ ಮಾತ್ರಕ್ಕೆ ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡುವುದಿಲ್ಲ.

ನನ್ನ ಮೌನ ದೌರ್ಬಲ್ಯ ಎಂದು ಅರ್ಥೈಸಿಕೊಳ್ಳಬಾರದು ಎಂದು ಸತೀಶ್ ಜಾರಕಿಹೊಳಿ ಅವರೇ ನೀಡಿರುವ ಹೇಳಿಕೆ ಬಹಳಷ್ಟು ಅರ್ಥ ಕಲ್ಪಿಸುತ್ತದೆ. ನಾನು ಸುಮ್ಮನಿದ್ದೆ ಎಂದು ನನ್ನ ಮೇಲೆ ಸವಾರಿ ಮಾಡುತ್ತಿದ್ದಾರೆ, ಇನೂ ಮುಂದೆ ನಾನು ಸುಮ್ಮನಿರುವುದಿಲ್ಲ ಎಂದು ಸೂಚ್ಯವಾಗಿ ಹೇಳಿದ್ದಾರೆ. ಅವರ ಮಾತಿನಲ್ಲಿ ಅಸಮದಾನ ಅಂಶ ಇರುವುದನ್ನು ಗಮನಿಸಬಹುದು. ರಾಜಕಾರಣದಲ್ಲಿ ಏರುಪೇರು ಇದ್ದಿದ್ದೆ. ಎಲ್ಲವನೂ ಸಹಿಸಿಕೊಂಡು ಹೋಗಬೇಕು. ಆದರೆ ಸತೀಶ್ ಜಾರಕಿಹೊಳಿ ಅವರ ಅಸಮದಾನ ಪಕ್ಷಕ್ಕೆ ಹಾನಿ ಮಾಡುವುದಿಲ್ಲ ಎಂದು ದೃಢವಾದ ನಂಬಿಕೆ ನಮಗಿದೆ ಎಂದರು.

ಕಮಿಷನ್ ಹೊಡೆಯುವುದರಲ್ಲಿ ಸಿಎಂ-ಡಿಸಿಎಂ ಪೈಪೋಟಿ : ಡಿವಿಎಸ್ ಆರೋಪ

ಎಲ್ಲಾ ಜಿಲ್ಲೆಗಳಲ್ಲೂ ಗುಂಪು ರಾಜಕಾರಣ ಇದ್ದೆ ಇರುತ್ತದೆ. ಒಂದು ಜಿಲ್ಲೆಯಲ್ಲಿ ಹೆಚ್ಚಿರುತ್ತದೆ, ಕೆಲವು ಕಡೆಗಳಲ್ಲಿ ಕಡಿಮೆ ಇರುತ್ತದೆ. ಗುಂಪು ರಾಜಕಾರಣ ಇಲ್ಲದ ಜಿಲ್ಲೆಗಳೇ ಇಲ್ಲ. ತುಮಕೂರಿನಲ್ಲಿ ಮಾತ್ರ ಗುಂಪು ರಾಜಕಾರಣ ಇಲ್ಲ, ಹಿಂದೆ ಇದ್ದ ಗುಂಪುಗಾರಿಕೆ ಇಲ್ಲವಾಗಿದೆ. ರಾಜಕಾರಣದಲ್ಲಿ ಕರೆದು ಅಧಿಕಾರ ನೀಡುವುದಿಲ್ಲ. ಅಧಿಕಾರ ಇಲ್ಲದವರು ಅಧಿಕಾರದಲ್ಲಿದ್ದವರಿಂದ ಕಿತ್ತುಕೊಳ್ಳಲು, ಅಧಿಕಾರದಲ್ಲಿದ್ದವರು ಅದನ್ನು ಉಳಿಸಿಕೊಳ್ಳಲು ಯತ್ನಿಸುವುದು ಸಾಮಾನ್ಯ. ರಾಜಕಾರಣದ ಇದನ್ನೆ ಸಂಘರ್ಷ ಎಂದು ಕರೆಯುವುದು ಎಂದರು.

ಸತೀಶ್ ಜಾರಕಿಹೊಳಿ ಉಪಮುಖ್ಯಮಂತ್ರಿಯಷ್ಟೆ ಅಲ್ಲ. ಮುಖ್ಯಮಂತ್ರಿಯಾಗುವ ಅರ್ಹತೆಯನ್ನೇ ಹೊಂದಿದ್ದಾರೆ. ತಾವು ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಪ್ರಸ್ತಾಪ ಮಾಡಿದ್ದಕ್ಕೂ ಸತೀಶ್ ಜಾರಕಿಹೊಳಿ ಅವರ ಆಪ್ತ ಶಾಸಕರ ಪ್ರವಾಸಕ್ಕೂ ಸಂಬಂಧ ಇಲ್ಲ. ನವರಾತ್ರಿ ಹಾಗೂ ಪಂಚರಾಜ್ಯಗಳ ಚುನಾವಣೆ ಬಳಿಕ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಹಾಗೂ ಇತರ ವಿಚಾರಗಳ ಬಗ್ಗೆ ಲಿಖಿತ ಮಾಹಿತಿ ನೀಡುತ್ತೇನೆ ಎಂದರು.

ರಾಜ್ಯದಲ್ಲಿ ಜೆಡಿಎಸ್ ಇನ್ನೂ ಇದ್ಯಾ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಬಳಿಕ ವಿಲೀನವಾಗಿರಬಹುದು ಎಂದುಕೊಂಡಿದ್ದೆ. ಈ ಇಳಿ ವಯಸ್ಸಿನಲ್ಲೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಗಾಲಿ ಕುರ್ಚಿಯಲ್ಲಿ ಬಂದು ಪಕ್ಷ ಉಳಿಸಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಅದನ್ನು ನೋಡಿದರೆ ದೇವೇಗೌಡರಿಗೆ ಹ್ಯಾಟ್ಸ್ ಅಪ್ ಹೇಳಲೇಬೇಕು. ಬೇರೆ ಇನ್ಯಾರಾಗಿದ್ದರೂ ಆಗಿದ್ರೆ ಏನು ಆಗುತ್ತದೆಯೋ ಆಗಲಿ ಎಂದು ಸುಮ್ಮನಾಗುತ್ತಿದ್ದರು ಎಂದರು.

ಅನ್ಯ ಪಕ್ಷಗಳಿಂದ ಸಾಕಷ್ಟು ನಾಯಕರು, ಶಾಸಕರಾದಿಯಾಗಿ ಕಾಂಗ್ರೆಸ್‍ಗೆ ಸೇರ್ಪಡೆಯಾಗುವವರ ದೊಡ್ಡ ಪಟ್ಟಿಯೇ ಇದೆ. ಸದ್ಯಕ್ಕೆ ತಾವು ಯಾರ ಹೆಸರನ್ನೂ ಹೇಳುವುದಿಲ್ಲ. ಸಮಯ ಬಂದಾಗ ಎಲ್ಲವೂ ಬಹಿರಂಗವಾಗುತ್ತದೆ ಎಂದರು.

ಬಿಜೆಪಿಯವರು ಸೋತು ಹತಾಶರಾಗಿದ್ದಾರೆ. ನಿರುದ್ಯೋಗಳಾಗಿರುವ ಅವರಿಗೆ ಈವರೆಗೂ ಆ ಪಕ್ಷದಿಂದ ವಿರೋಧ ಪಕ್ಷದ ನಾಯಕನ್ನನು ಆಯ್ಕೆ ಮಾಡಿಕೊಳ್ಳಲು ಆಗಿಲ್ಲ. ರಾಜ್ಯದಲ್ಲಿ ಪ್ರಭಾವಿಗಳಾಗಿದ್ದ ಬಹಳಷ್ಟು ನಾಯಕರು ಪ್ರಧಾನಿ ಬಂದಾಗ ಪುಟ್‍ಪಾತ್ ಮೇಲೆ ನಿಂತು ವಿಷ್ ಮಾಡಿದ್ದನ್ನು ನೋಡಿದ್ದೇವೆ. ಅಂತಹವರ ಮಾತುಗಳಿಗೆ ಯಾವ ಬೆಲೆ ಇದೆ ಎಂದು ಗೋತ್ತಿದೆ ಎಂದರು.

ಡಿಸಿಎಂ ರಾಜೀನಾಮೆಗೆ ಈಶ್ವರಪ್ಪ ಆಗ್ರಹ

ರಾಯಚೂರು,ಅ.20- ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶ ನೀಡಿರುವುದರಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಇಲ್ಲವೇ ಸಿಎಂ ಅವರು ಸಂಪುಟದಿಂದ ವಜಾಗೊಳಿ ಸಬೇಕೆಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ಗಾಂಭೀರ್ಯ ಅರಿತು ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶ ಕೊಟ್ಟಿದೆ. ನ್ಯಾಯಾಲಯದ ಆದೇಶ ಹೊರಬೀಳುತ್ತಿದ್ದಂತೆ ಶಿವಕುಮಾರ್ ನೈತಿಕತೆ ಪ್ರದರ್ಶಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು. ಅವರು ಇನ್ನು ಸಂಪುಟದಲ್ಲಿ ಮುಂದುವರೆದಿರುವುದು ಬಂಡತನದ ಪರಮಾವಧಿ ಎಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಲಾದರೂ ತಮ್ಮ ಗಟ್ಟಿತನ ತೋರಿಸಿ ಶಿವಕುಮಾರ್ ಅವರಿಂದ ರಾಜೀನಾಮೆ ಪಡೆಯಬೇಕು. ಇಲ್ಲದಿದ್ದರೆ ಸಂಪುಟದಿಂದ ಅವರನ್ನು ವಜಾಗೊಳಿಸಬೇಕು. ಸಂಪುಟಕ್ಕೆ ಸಿಎಂ ಅವರೇ ಸುಪ್ರೀಂ ಆಗಿರುವುದರಿಂದ ಯಾರ ಒಪ್ಪಿಗೂ ಬೇಕಿಲ್ಲ ಎಂದರು.

ಇಂಡಿಯಾ ಮೈತ್ರಿಕೂಟಕ್ಕೆ ಮರ್ಮಾಘಾತ ಕೊಟ್ಟ ಜೆಡಿಯು-ಎಸ್‍ಪಿ

2024ರ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಸರ್ಕಾರ ಬಿದ್ದುಹೋಗತ್ತದೆ. ದೇಶದಲ್ಲೇ ಕಾಂಗ್ರೆಸ್ ನವರಿಗೆ ಅಧಿಕಾರ ಇರಲಿಲ್ಲ. ರಾಜ್ಯದಲ್ಲಿ ಈಗ ಅದು ಗ್ಯಾರಂಟಿಯಾಗಿದೆ. ಮೋಸ ಮಾಡಿ ಸುಳ್ಳು ಹೇಳಿ ಕಾಂಗ್ರೆಸ್‍ನವರು ಅಧಿಕಾರಕ್ಕೆ ಬಂದಿದ್ದಾರೆ. ಈಗ ಅಕ್ರಮ ಅಸ್ತಿ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಕರಣ ಬಂದಿದೆ ಎಂದರು. ಇನ್ನೂ ಸಚಿವರಾದ ಸತೀಶ್ ಜಾರಕಿಹೋಳಿ ಎಷ್ಟು ಜನರನ್ನು ಕರೆದೊಯ್ತಾರೊ ಗೊತ್ತಿಲ್ಲ. ಸರ್ಕಾರ ಬಿದ್ದೊಗತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಭವಿಷ್ಯ ನುಡಿದರು.

ನನ್ನ ವಿರುದ್ಧ ಆರೋಪ ಬಂದಾಗ ಪ್ರತಿಪಕ್ಷಗಳು ರಾಜೀನಾಮೆ ಕೇಳುವ ಮೊದಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದೆ. ಪ್ರಧಾನಿ ನರೇಂದ್ರಮೋದಿ, ಗೃಹಸಚಿವ ಅಮಿತ್ ಷಾ, ಪಕ್ಷದ ರಾಷ್ಟಾಧ್ಯಕ್ಷ ಜೆ.ಪಿ.ನಡ್ಡಾ ರಾಜೀನಾಮೆಗೆ ಒತ್ತಡರ ಹಾಕಿರಲಿಲ್ಲ. ಈಗ ಇದೇ ನಿಲುವನ್ನು ಡಿ.ಕೆ.ಶಿವಕುಮಾರ್ ತೋರಿಸಬೇಕೆಂದು ಈಶ್ವರಪ್ಪ ಒತ್ತಾಯಿಸಿದರು.

ಮೈಸೂರಿಗೂ ಮೆಟ್ರೋ ರೈಲು : ಪ್ರಧಾನಿ ಮೋದಿ ಘೋಷಣೆ

ನವದೆಹಲಿ,ಅ.20- ಸಾಂಸ್ಕøತಿಕ ನಗರಿ ಮೈಸೂರಿಗೂ ಮೆಟ್ರೋ ರೈಲು ಯೋಜನೆ ವಿಸ್ತರಿಸುವುದಾಗಿ ಪ್ರಧಾನಿ ನರೇಂದ್ರಮೋದಿ ಘೋಷಣೆ ಮಾಡಿದ್ದಾರೆ. ನಮ್ಮ ಮೆಟ್ರೊದ ನೇರಳೆ ಮಾರ್ಗಗಳಾದ ಬೈಯಪ್ಪನಹಳ್ಳಿ – ಕೃಷ್ಣರಾಜಪುರ ಹಾಗೂ ಕೆಂಗೇರಿ-ಚಲ್ಲಘಟ್ಟ ನಡುವಿನ ಮೆಟ್ರೊ ಮಾರ್ಗಗಳನ್ನು ವಿಡಿಯೋ ಕಾನರೆನ್ಸ್ ಮೂಲಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ದೇಶದಲ್ಲಿ ಮೆಟ್ರೊ ಮತ್ತು ನಮೋ ರೈಲುಗಳು ಕ್ರಾಂತಿಯನ್ನು ಉಂಟು ಮಾಡಲಿವೆ. ನೋಯ್ಡಾ, ಗಾಜಿಯಾಬಾದ್, ಮೀರತ್, ಲಖ್ನೋ, ಆಗ್ರಾ, ಕಾನ್ಪುರದಂತಹ ನಗರಗಳಲ್ಲಿ ಮೆಟ್ರೊ ಸಂಚರಿಸಲಿವೆ. ಇದೇ ರೀತಿ ಬೆಂಗಳೂರು ಮತ್ತು ಮೈಸೂರನ್ನು ಮೆಟ್ರೊ ನಗರಗಳನ್ನಾಗಿ ಪರಿವರ್ತಿಸುವುದಾಗಿ ಪ್ರಕಟಿಸಿದರು. ದೇಶದ ಅನೇಕ ಕಡೆ ಸುಗಮ ಸಂಚಾರಕ್ಕಾಗಿ ಮೆಟ್ರೊ ರೈಲು ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ. ಈಗ 2ನೇ ಹಂತದ ನಗರಗಳಲ್ಲೂ ಇದರ ಅವಶ್ಯಕತೆ ಕಂಡುಬರುತ್ತಿದೆ ಎಂದು ಹೇಳಿದರು.

ಭಾರತ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿಯಲ್ಲಿ ಹೊಸ ದಿಕ್ಕಿನತ್ತ ಮುಖ ಮಾಡಿದೆ. ಚಂದ್ರಯಾನದ ಮೂಲಕ ಚಂದ್ರನನ್ನು ತಲುಪಿದೆ. ವಿಶ್ವದಲ್ಲಿ ನಮ್ಮ ದೇಶ ಪ್ರಕಾಶಿಸುತ್ತಿದೆ. ಜಿ-20 ಶೃಂಗಸಭೆಯನ್ನು ವ್ಯವಸ್ಥಿತವಾಗಿ ಆಯೋಜನೆ ಮಾಡಿ ಜಗತ್ತಿನ ಗಮನ ಸೆಳೆದಿದ್ದೇವೆ. ಏಷ್ಯನ್ ಕ್ರೀಡಾಕೂಟದಲ್ಲಿ ನಮ್ಮ ಕ್ರೀಡಾಪಟುಗಳು 107 ಪದಕಗಳನ್ನು ಗೆದ್ದಿದ್ದಾರೆಂದು ದೇಶದ ಸಾಧನೆಯನ್ನು ಕೊಂಡಾಡಿದರು.

ಕಮಿಷನ್ ಹೊಡೆಯುವುದರಲ್ಲಿ ಸಿಎಂ-ಡಿಸಿಎಂ ಪೈಪೋಟಿ : ಡಿವಿಎಸ್ ಆರೋಪ

ಪ್ಲಾಟ್‍ಫಾರಂನಲ್ಲಿ ಸ್ಕ್ರೀನ್‍ವಿಂಡೋವನ್ನು ಮೆಡ್ ಇಂಡಿಯಾ ಯೋಜನೆಯಲ್ಲೇ ರೂಪಿಸಲಾಗಿದೆ. ನಮೋ ಭಾರತ್ ರೈಲಿನಲ್ಲಿ ಗಾಳಿಗಿಂತಲೂ ಕಡಿಮೆ ಶಬ್ದ ಇದೆ. ಸುಖಕರ ಪ್ರಯಾಣಕ್ಕೆ ಪೂರಕವಾಗಿದೆ. ಮೊದಲ ಹಂತದಲ್ಲಿ ದೆಹಲಿ, ಉತ್ತರಪ್ರದೇಶ, ಹರಿಯಾಣ ಹಾಗೂ ರಾಜಸ್ಥಾನಗಳನ್ನು ನಮೋ ಭಾರತ್ ರೈಲು ಸಂಪರ್ಕಿಸಲಿದೆ ಎಂದು ತಿಳಿಸಿದರು.

ಮೂರನೇ ದಶಕದಲ್ಲಿ ಭಾರತೀಯ ರೈಲ್ವೆಗೆ ಕಾಯಕಲ್ಪ ನೀಡುವ ಅಗತ್ಯವಿದೆ. ಚಿಕ್ಕಕನಸು ಕಾಣಲು ನನಗೆ ಸಾಧ್ಯವಿಲ್ಲ. ಸಾಯುತ್ತ ತೆಳಲುವುದಿಲ್ಲ. ಈ ದಶಕದ ಕೊನೆಯಲ್ಲಿ ಭಾರತದ ರೈಲ್ವೆ ವಿಶ್ವದ ಯಾವುದೇ ರೈಲು ವ್ಯವಸ್ಥೆಗಿಂತಲೂ ಕಡಿಮೆ ಇರುವುದಿಲ್ಲ ಎಂದು ಭರವಸೆ ನೀಡಿದರು.

ದೇಶದ ಮೊದಲ ರ‍್ಯಾಪಿಡ್-​ಎಕ್ಸ್ ಪ್ರೆಸ್​ ರೈಲಿಗೆ ಮೋದಿ ಚಾಲನೆ

ನಮೋ ಭಾರತ್ ಶುರುವಾಗಿದೆ. ಇದಕ್ಕೂ ಮೊದಲು ವಂದೇ ಭಾರತ್ ಯೋಜನೆಯಡಿ ಆಧುನಿಕ ಸೌಲಭ್ಯ ಒದಗಿಸಲಾಗಿದೆ. ಅಮೃತ್ ಭಾರತ್, ಒಂದೇ ಭಾರತ್ ಸೇರಿದಂತೆ ಹಲವು ಯೋಜನೆಗಳ ಮೂಲಕ ಸಂಪರ್ಕ ಯೋಜನೆಗಳು ಸುಧಾರಿಸಲಾಗುತ್ತಿದೆ. ಬಹುಮಾದರಿ ಸೌಲಭ್ಯಗಳ ಮೂಲಕ ಸಂಪರ್ಕವನ್ನು ಹೆಚ್ಚಿಸಲಾಗುತ್ತಿದೆ ಎಂದು ಹೇಳಿದರು.

ಗ್ಯಾರಂಟಿ ಸರ್ಕಾರದ ಕಲೆಕ್ಷನ್ ವಂಶಾವಳಿ ಪೋಸ್ಟರ್ ಬಿಡುಗಡೆ ಮಾಡಿದ ಬಿಜೆಪಿ

ಬೆಂಗಳೂರು,ಅ.20- ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೈಕೊಡವಿ ಎದ್ದು ನಿಂತಿರುವ ಪ್ರತಿಪಕ್ಷ ಬಿಜೆಪಿ ತನ್ನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಎಟಿಎಂ ಸರ್ಕಾರದ ವಿರುದ್ಧ ಕಲೆಕ್ಷನ್ ವಂಶಾವಳಿ ಎಂಬ ಪೋಸ್ಟರ್ ಬಿಡುಗಡೆ ಮಾಡಿದೆ. ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಡಿ.ವಿ.ಸದಾನಂದಗೌಡ, ಶಾಸಕ ಎಲ್.ರವಿಸುಬ್ರಹ್ಮಣ್ಯ, ವಿಧಾನಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಛಲವಾದಿ ನಾರಾಯಣ ಸ್ವಾಮಿ ಅವರು ಪೋಸ್ಟರ್‍ಗಳನ್ನು ಬಿಡುಗಡೆ ಮಾಡಿದರು.

ಕನ್ನಡ ಹಾಗೂ ಇಂಗ್ಲಿಷ್‍ನಲ್ಲಿರುವ ಈ ಎರಡು ಪೋಸ್ಟರ್‍ಗಳಿಗೆ ಎಟಿಎಂ ಸರ್ಕಾರದ ಕಲೆಕ್ಷನ್ ವಂಶಾವಳಿ ಎಂದು ಶೀರ್ಷಿಕೆ ನೀಡಲಾಗಿದೆ. ಇತ್ತೀಚೆಗೆ ಉದ್ಯಮಿ ಅಂಬಿಕಾಪತಿ ಮನೆಯ ಮಂಚದ ಕೆಳಗೆ ಬಾಕ್ಸ್‍ನಲ್ಲಿ ಸಿಕ್ಕ 500 ಮುಖಬೆಲೆಯ ನೋಟುಗಳನ್ನು ಪ್ರದರ್ಶಿಸಲಾಗಿದೆ.

ಸಿಲಿಂಡರ್‌ಗೆ ಬೆಂಕಿ ತಗುಲಿ ಒಂದೇ ಕುಟುಂಬದ ಮೂವರು ಸಾವು

ಮೇಲ್ಭಾಗದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಲಭಾಗದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಎಡಭಾಗದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಮಧ್ಯಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಂದು ಭಾಗದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಳಭಾಗದಲ್ಲಿ ಡಾ.ಯತೀಂದ್ರ, ಸಚಿವ ಭೈರತಿ ಸುರೇಶ್, ಅಂಬಿಕಾಪತಿ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಪ್ರದೀಪ್, ಪ್ರಮೋದ್, ಪ್ರಹ್ಲಾದ್, ಅವರ ಭಾವಚಿತ್ರಗಳನ್ನು ಹಾಕಲಾಗಿದೆ.

ರಾಮಯ್ಯ ಮತ್ತು ಕೆಂಪಣ್ಣ ಅವರನ್ನು ಕಾಂಗ್ರೆಸ್ ಸರ್ಕಾರದ ಕಲೆಕ್ಷನ್ ಏಜೆಂಟ್‍ಗಳೆಂದು ಆರೋಪಿಸಿರುವ ಬಿಜೆಪಿ ಮತ್ತೊಂದು ಚಿತ್ರದಲ್ಲಿ ಪ್ರದೀಪ್, ಪ್ರಮೋದ್, ಪ್ರಹ್ಲಾದ್ ಅವರುಗಳನ್ನು ಕಲೆಕ್ಷನ್ ಏಜೆಂಟ್ ಜೊತೆಗೆ ಕಾಂಗ್ರೆಸ್ ಪಕ್ಷ ಲೂಟಿ ಕಂಪನಿ ಎಂದು ಆರೋಪಿಸಿದೆ.

ಕಮಿಷನ್ ಹೊಡೆಯುವುದರಲ್ಲಿ ಸಿಎಂ-ಡಿಸಿಎಂ ಪೈಪೋಟಿ : ಡಿವಿಎಸ್ ಆರೋಪ

ಬೆಂಗಳೂರು,ಅ.20- ಕಮಿಷನ್ ಹೊಡೆಯುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಪೈಪೋಟಿ ಏರ್ಪಟ್ಟಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಡಿ.ವಿ.ಸದಾನಂದಗೌಡ ಆರೋಪಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪೋಸ್ಟರ್ ಬಿಡುಗಡೆ ಮಾಡಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ಐದು ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಎತ್ತ ಸಾಗುತ್ತಿದೆ ಎಂಬುದು ರಾಜ್ಯದ ಜನತೆಗೆ ಗೊತ್ತಾಗಿದೆ ಎಂದು ವಾಗ್ದಾಳಿ ನಡೆಸಿದರು.

100ನೇ ವಸಂತಕ್ಕೆ ಕಾಲಿರಿಸಿದ ಅಚ್ಯುತಾನಂದನ್

ಸಿಎಂ ಹಾಗೂ ಡಿಸಿಎಂ ನಡುವೆ ಕಮಿಷನ್ ಪಡೆಯುವುದರಲ್ಲಿ ಪೈಪೋಟಿ ಏರ್ಪಟ್ಟಿದೆ. ನಾನು ಹೆಚ್ಚು ಹೊಡೆಯಬೇಕು, ಅವರು ಹೆಚ್ಚು ಹೊಡೆಯಬೇಕೋ ಎಂದು ಸ್ಪರ್ಧೆಗಿಳಿದ್ದವರಂತೆ ವಸೂಲಿ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಕಲೆಕ್ಷನ್ ಸರ್ಕಾರ ಮುಖ್ಯಸ್ಥ ಎಂದು ಟೀಕಾ ಪ್ರಹಾರ ನಡೆಸಿದರು.ಐದು ತಿಂಗಳಿನಿಂದ ಸರ್ಕಾರದ ಆಡಳಿತ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಕಲೆಕ್ಷನ್ ಸರ್ಕಾರ ಎಂದು ನಾವು ಹೇಳುತ್ತಿಲ್ಲ. ಜನರೇ ಹಾದಿಬೀದಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ದೆಹಲಿಯು ಕಾಂಗ್ರೆಸ್ ಸರ್ಕಾರದ ಕಲೆಕ್ಷನ್ ಕೇಂದ್ರಬಿಂದು ಎಂದು ದೂರಿದರು.

ಕರ್ನಾಟಕದಲ್ಲಿ ವಸೂಲಿ ಮಾಡುವ ಕಮಿಷನ್ ಹಣದಲ್ಲಿ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಗೂ ಹೋಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಕಲೆಕ್ಷನ್ ಮಾಡಿ ಸುರ್ಜೆವಾಲಗೆ ನೀಡಿದರೆ ಶಿವಕುಮಾರ್ ವೇಣುಗೋಪಾಲ್‍ಗೆ ಕೊಡಬೇಕು, ಸಿಎಂ ಮತ್ತು ಡಿಸಿಎಂ ಬಣದ ಗುತ್ತಿಗೆದಾರರು ಕಮೀಷನ್ ಕಲೆಕ್ಷನ್‍ನ ಪ್ರಮುಖ ರೂವಾರಿಗಳೆಂದು ಹೇಳಿದರು.

ಶಿವಕುಮಾರ್ ಬೆಳಗಾವಿಗೆ ಹೋಗಿದ್ದು ಯಾವ ರೀತಿ ಕಲೆಕ್ಷನ್ ಆಗಬಹುದೆಂದು ಪರಿಶೀಲಿಸಲು ಹೋಗಿರಬಹುದೆಂದು ಜನರೇ ಮಾತನಾಡಿಕೊಳ್ಳುತ್ತಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಕಮಿಷನ್ ತಪ್ಪಿಸಲು ಹೋಗಿರಬಹುದು. ಕಲೆಕ್ಷನ್‍ನಲ್ಲೂ ಪೈಪೋಟಿ ನಡೆಯುತ್ತದೆ, ಇಂದಿರಾ ಕ್ಯಾಂಟಿನ್, ಕಲಾವಿದರು, ಕಾಮಾಗಾರಿಗಳಿಗೆ ಹಣ ಬಿಡುಗಡೆ ಮಾಡಲು ಕಮಿಷನ್ ಫಿಕ್ಸ್ ಆಗಿದೆ.

ಸಂಸತ್‍ನಲ್ಲಿ ಮೋದಿ ವಿರುದ್ಧ ಪ್ರಶ್ನೆ ಕೇಳಲು ಲಂಚ ಪಡೆದ ಪ್ರಕರಣಕ್ಕೆ ಸ್ಪೋಟಕ ತಿರುವು

ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಹೈಕೋರ್ಟ್ ಸಿಬಿಐ ತನಿಖೆಗೆ ಸುಖಾಸುಮ್ಮನೆ ಕೊಟ್ಟಿಲ್ಲ. ಅಕ್ರಮ ಆಸ್ತಿ ಸಂಪಾದನೆ ಮಾಡಿರಬಹುದೆಂಬ ಅನುಮಾನದ ಮೇಲೆ ಆದೇಶ ನೀಡಿದೆ. ಆದಾಯ ತೆರಿಗೆ ಅಧಿಕಾರಿಗಳು ಹಣವನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಬಹುದು. ಆದರೆ ಹಣದ ಮೂಲ ಮತ್ತು ಅಪರಾಧ ಹಿನ್ನಲೆಯನ್ನು ಪತ್ತೆ ಮಾಡಲು ಸಿಬಿಐ ತನಿಖೆ ಅಗತ್ಯವಿದೆ ಎಂದರು.

ಡಿಸಿಎಂ ನೈತಿಕವಾಗಿ ತಮ್ಮ ಸ್ಥಾನದಲ್ಲಿ ಮುಂದುವರೆಯಬಾರದು. ಅವರು ತಪ್ಪಿತಸ್ಥ ಅಲ್ಲ ಅಂದರೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ. ಕಾಂಗ್ರೆಸ್ ಹೈಕಮಾಂಡ್ ತಕ್ಷಣ ಡಿಕೆಶಿಯಿಂದ ರಾಜೀನಾಮೆ ಪಡೆಯಲಿ ಎಂದು ಸವಾಲು ಹಾಕಿದರು. ಇಡೀ ರಾಜ್ಯಾದ್ಯಂತ ಬಿಜೆಪಿಯಿಂದ ಕಾಂಗ್ರೆಸ್ ವಿರುದ್ಧ ಧರಣಿ ನಡೆಸಿದ್ದೇವೆ. ಹಬ್ಬ ಮುಗಿದ ಮೇಲೆ ಈ ಪೋಸ್ಟರ್ ಗಳನ್ನು ರಾಜ್ಯಾದ್ಯಂತ ಹಾಕುತ್ತೇವೆ. ಸರ್ಕಾರದ ನಿಜ ಬಣ್ಣ ಜನರಿಗೆ ತಿಳಿಸುತ್ತೇವೆ.

ಸಿನಿಮಾ ಪೋಸ್ಟರ್ ಥರ ಈ ಪೋಸ್ಟರ್‍ಗಳನ್ನು ಹಾಕುತ್ತೇವೆ. ರಾಜ್ಯದ ಹಣ ಕೊಳ್ಳೆ ಹೊಡೆಯುವವರ ವಿರುದ್ಧ ನಾವಿದ್ದೇವೆ. ಇದಕ್ಕೆ ಬೇಕಾದರೆ ನಮ್ಮನ್ನು ಐಟಿ ವಕ್ತಾರರು ಅಂದರೂ ಅದಕ್ಕೆ ನಾವು ಸ್ವಾಗತ ಎಂದರು.ಬಿಜೆಪಿಯವರು ಐಟಿ ವಕ್ತಾರರು ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮೆಲ್ಲ ನಾಯಕರೂ ಹೋಗಿ ಪೋಸ್ಟರ್ ಅಂಟಿಸುತ್ತೇವೆ. ಮೈತ್ರಿ ಸೀಟು ಹಂಚಿಕೆ ವಿಚಾರ ರಾಷ್ಟ್ರಮಟ್ಟದಲ್ಲಿ ಆಗುವ ತೀರ್ಮಾನ. ರಾಜ್ಯ ಮಟ್ಟದಲ್ಲಿ ಆಗುವ ಕೆಲಸ ನಾವು ಮಾಡುತ್ತೇವೆ. ಮೈತ್ರಿ ಸೀಟು ಹಂಚಿಕೆ ಬಗ್ಗೆ ಹಬ್ಬದ ಬಳಿಕ ಮಾತುಕತೆ ನಡೆಯುತ್ತದೆ ಎಂದು ಹೇಳಿದರು.

ಇಂಡಿಯಾ ಮೈತ್ರಿಕೂಟಕ್ಕೆ ಮರ್ಮಾಘಾತ ಕೊಟ್ಟ ಜೆಡಿಯು-ಎಸ್‍ಪಿ

ನವದೆಹಲಿ,ಅ.20- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಂದಾಗಲು ಮುಂದಾಗುತ್ತಿರುವ ಇಂಡಿಯ ಮೈತ್ರಿಕೂಟಕ್ಕೆ ಜೆಡಿಯು ಮತ್ತು ಎಸ್‍ಪಿ ಮರ್ಮಾಘಾತ ಕೊಟ್ಟಿದೆ. ಏಕೆಂದರೆ ಬಿಹಾರದ ಮುಖ್ಯಮಂತ್ರಿ ನಿತೀಶ್‍ಕುಮಾರ್ ಹಾಗೂ ಉತ್ತರಪ್ರದೇಶದ ಮಾಜಿ ಸಿಎಂ ಹಾಗೂ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಅಖಿಲೇಶ್ ಯಾದವ್ ಅವರು ಇಂಡಿಯ ಮೈತ್ರಿಕೂಟದಲ್ಲಿ ಮುಂದುವರೆಯುವ ಬಗ್ಗೆ ಮರುಚಿಂತನೆ ನಡೆಸುವ ಸುಳಿವನ್ನು ಕೊಟ್ಟಿದ್ದಾರೆ.

ಈ ಎರಡೂ ರಾಷ್ಟ್ರೀಯ ಪಕ್ಷಗಳ ಮುಖಂಡರು ನೀಡಿರುವ ಹೇಳಿಕೆಯಿಂದಾಗಿ ಎನ್‍ಡಿಎ ಮೈತ್ರಿಕೂಟದ ವಿರುದ್ಧ ಪ್ರಬಲ ಹೋರಾಟಕ್ಕಿಳಿಯಲು ಮುಂದಾಗಿದ್ದ ಇಂಡಿಯಾ ಕೂಟಕ್ಕೆ ಭಾರೀ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗಿದೆ. ಮುಂದಿನ ತಿಂಗಳು ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ, ಛತೀಸ್‍ಘಡ ಹಾಗೂ ಮಿಜೋರಾಂ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಐದೂ ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂಬ ಇಂಡಿಯ ಕೂಟದ ಲೆಕ್ಕಾಚಾರ ತಪ್ಪಿರುವುದೇ ನಿತೀಶ್‍ಕುಮಾರ್ ಮತ್ತು ಅಖಿಲೇಶ್ ಯಾದವ್ ಮುನಿಸಿಗೆ ಕಾರಣ ಎನ್ನಲಾಗುತ್ತಿದೆ.

ನಿಜ್ಜರ್ ಹತ್ಯೆ ಹೇಳಿಕೆ ಮುನ್ನ ಭಾರತದೊಂದಿಗೆ ಚರ್ಚೆ ನಡೆಸಿದ್ದೇವೆ ; ಕೆನಡಾ

ಈ ಐದು ರಾಜ್ಯಗಳಿಗೆ ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ತನ್ನ ಮಿತ್ರ ಪಕ್ಷಗಳನ್ನು ಸೌಜನ್ಯಕ್ಕಾದರೂ ಕೇಳದೆ ಏಕಪಕ್ಷೀಯವಾಗಿ ಟಿಕೆಟ್ ಘೋಷಣೆ ಮಾಡಿರುವುದು ಮೈತ್ರಿಕೂಟದ ಎರಡು ಪ್ರಬಲ ಪಕ್ಷಗಳಾದ ಜೆಡಿಯು ಮತ್ತು ಎಸ್‍ಪಿ ಕಣ್ಣು ಕೆಂಪಾಗುವಂತೆ ಮಾಡಿದೆ.

ಕಾಂಗ್ರೆಸ್ ಇತರೆ ಪಕ್ಷಗಳನ್ನು ಲಘವಾಗಿ ಪರಿಗಣಿಸಿದೆ. ವಿಧಾನಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತಿಲ್ಲ. ಇದೇ ಮನೋಧರ್ಮವನ್ನು ಕಾಂಗ್ರೆಸ್ ಮುಂದುವರಿಸಿದರೆ ಮೈತ್ರಿಯಲ್ಲಿ ಮುಂದುವರಿಯುವ ಬಗ್ಗೆ ಮರು ಚಿಂತನೆ ನಡೆಸಬೇಕಾಗುತ್ತದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಎಚ್ಚರಿಕೆ ನೀಡಿದ್ದಾರೆ.

ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಸಮಾಜವಾದಿ ಪಕ್ಷದ ಬಗ್ಗೆ ಕಾಂಗ್ರೆಸ್ ತೆಗೆದಿರುವ ತಕರಾರಿಗೆ ಪ್ರತಿಕ್ರಿಯೆ ನೀಡಿರುವ ಅಖಿಲೇಶ್ ಯಾದವ್, ಕಾಂಗ್ರೆಸ್ ನಾಯಕರ ಧೋರಣೆ ಐಎನ್‍ಡಿಐಎ ಮೈತ್ರಿ ಕೇವಲ ಲೋಕಸಭಾ ಚುನಾವಣೆಗೆ ಮಾತ್ರ ಎಂಬಂತಿದೆ. ಕಾಂಗ್ರೆಸ್ ಚಿಂತನೆ ಇದೇ ಆಗಿದ್ದರೆ ವಿಧಾನಸಭಾ ಚುನಾವಣೆಗೆ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಹೋರಾಡಲು ನಾವು ಸಿದ್ಧ ಎಂದು ಹೇಳಿದ್ದಾರೆ.

ರಾಜ್ಯ ವಿಧಾನಸಭೆಗಳ ಚುನಾವಣೆಯಲ್ಲಿ ಸ್ಥಾನ ಹಂಚಿಕೆಗೆ ಕಾಂಗ್ರೆಸ್ ನಿರಾಕರಿಸಿದರೆ 2024ರ ಲೋಕಸಭೆಗೆ ಸಮಾಜವಾದಿ ಪಕ್ಷ ಉತ್ತರಪ್ರದೇಶದ ಎಲ್ಲಾ 80 ಸ್ಥಾನಗಳಿಗೆ ಸ್ಪರ್ಧೆ ಮಾಡಲಿದೆಎಂದು ಅಖಿಲೇಶ್ ತಿಳಿಸಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಯುಪಿಎ ಒಕ್ಕೂಟದ ಸರಕಾರಕ್ಕಿಂತ ಎನ್‍ಡಿಎ ಸರಕಾರವೇ ಅತ್ಯುತ್ತಮವಾಗಿ ಕೆಲಸ ಮಾಡಿದೆ ಎಂದು ಹೇಳುವ ಮೂಲಕ ಬಿಹಾರದ ಮುಖ್ಯಮಂತ್ರಿ ನಿತೀಶ್‍ಕುಮಾರ್ ಹೊಸ ರಾಜಕೀಯ ಸಮೀಕರಣದ ಸುಳಿವು ನೀಡಿದ್ದಾರೆ.

2014ರಲ್ಲಿ ಎನ್‍ಡಿಎ ಸರಕಾರ ಅಧಿಕಾರಕ್ಕೆ ಬರುವವರೆಗೂ ಬಿಹಾರ ಸರಕಾರದ ಬೇಡಿಕೆಯನ್ನು ಹಿಂದೆಯಿದ್ದ ಯುಪಿಎ ಸರಕಾರ ಪರಿಗಣಿಸಿರಲಿಲ್ಲ. ಮನಮೋಹನ್ ಸಿಂಗ್ ನೇತೃತ್ವದ ಮೈತ್ರಿ ಸರಕಾರ 10 ವರ್ಷಗಳ ಕಾಲ ನಮ್ಮ ಪ್ರಸ್ತಾಪಕ್ಕೆ ಪೂರಕವಾಗಿ ಸ್ಪಂದಿಸಿರಲಿಲ್ಲ ಎಂದು ಹೇಳಿದ್ದಾರೆ.

ಮಧ್ಯಪ್ರದೇಶ ಚುನಾವಣೆ : ಫೈನಲ್ ಆಯ್ತು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

ನಿತೀಶ್ ಕುಮಾರ್ ಮತ್ತೆ ಎನ್‍ಡಿಎ ತೆಕ್ಕೆಗೆ ಮರಳಲಿದ್ದಾರೆ ಎಂಬ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ರಾಜಕೀಯವೇ ಬೇರೆ ಸ್ನೇಹವೇ ಬೇರೆ, ಕೆಲಸ ಮಾಡಿದವರನ್ನು ಹೊಗಳುವುದರಲ್ಲಿ ತಪ್ಪಿಲ್ಲ. ಅದು ಮೋದಿಯಾದರೂ ಸರಿ ಬೇರೆ ಯಾರಾದರೂ ಸರಿ. ಉತ್ತಮ ಕೆಲಸ ಮಾಡಿದ ವ್ಯಕ್ತಿಗಳನ್ನು ನೆನೆಯಬೇಕು ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ನಾವು ಒಂದು ಕಡೆ ಇದ್ದೇವೆ, ನೀವು ಮತ್ತೊಂದು ಕಡೆ ಇದ್ದೀರಿ. ಆದರೆ ಬದುಕಿರುವವರೆಗೂ ನಮ್ಮ ವೈಯಕ್ತಿಕ ಸ್ನೇಹ ಮುಂದುವರಿಯಲಿ ಎಂದು ಬಿಜೆಪಿ ನಾಯಕರ ಜತೆಗಿನ ಗೆಳೆತನ ಮುರಿಯಲಾರದು ಎಂದು ಹೇಳಿದ್ದಾರೆ.