Thursday, December 5, 2024
Homeರಾಜ್ಯಕರಾವಳಿ-ಮಲೆನಾಡಿಗರ ಬವಣೆ ನಿವಾರಣೆಗೆ ಸಮಾಲೋಚನೆ

ಕರಾವಳಿ-ಮಲೆನಾಡಿಗರ ಬವಣೆ ನಿವಾರಣೆಗೆ ಸಮಾಲೋಚನೆ

ಬೆಂಗಳೂರು,ಅ.20- ಮಲೆನಾಡು ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಸೇರಿದಂತೆ ಏಳು ಜಿಲ್ಲಾಗಳ ಸಮಸ್ಯೆಗಳನ್ನು ಸಮಾಲೋಚಿಸಿ ಪರಿಹಾರ ಹುಡುಕಲು ಮತ್ತು ನಮ್ಮ ವಿವಿಧ ಹಕ್ಕುಗಳ ಹಕ್ಕೊತ್ತಾಯವನ್ನು ಮಾಡಲು ಅ.31ರಂದು ಬೆಳಗ್ಗೆ 10 ಗಂಟೆಗೆ ನಗರದ ವಿಜಯನಗರ ಆದಿಚುಂಚನಗಿರಿ ಮಠದ ಸಭಾಂಗಣದಲ್ಲಿ ಸಮಾಲೋಚನಾ ಸಭೆ ನಡೆಸಲು ಮಲೆನಾಡು ಕರಾವಳಿ ಜನಪರ ಒಕ್ಕೂಟ ತೀರ್ಮಾನಿಸಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಮುರೋಳಿ ತಿಳಿಸಿದರು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಲೆನಾಡು ಕರಾವಳಿ ಜನಪರ ಒಕ್ಕೂಟ ಅನೇಕ ವರ್ಷಗಳಿಂದ ಮಲೆನಾಡು ಕರಾವಳಿ ಭಾಗದ ಜಿಲ್ಲೆಗಳ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚು ಒತ್ತುಕೊಟ್ಟು ಹೋರಾಟ ಮಾಡುತ್ತಾ ಬಂದಿದೆ. ಸ್ಥಳೀಯ ಸಮಸ್ಯೆಗಳ ವಿರುದ್ಧ ಧ್ವನಿಯೆತ್ತಿ ಪರಿಹಾರಗಳನ್ನು ಹುಡುಕಿಕೊಳ್ಳುವಲ್ಲಿ ಶ್ರಮಿಸುತ್ತಿದೆ.

ಇಲ್ಲಿನ ಭಾಗದಲ್ಲಿ ರೈತಾಪಿ ವರ್ಗ, ಮೀನುಗಾರರು ಸೇರಿದಂತೆ ಅನೇಕರು ಬದುಕು ಕಟ್ಟಿಕೊಂಡಿದ್ದಾರೆ. ಈ ಭಾಗದಿಂದ ಸಂಸ್ಕøತಿ, ಭಾಷೆ, ರಾಜಕೀಯ, ಸಾಹಿತ್ಯ, ಕಲೆಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಅಪಾರವಾದ ಕೊಡುಗೆ ಇದೆ. ಆದರೆ, ಈ ಭಾಗದ ಜನ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದರು.

ಇಂಡಿಯಾ ಮೈತ್ರಿಕೂಟಕ್ಕೆ ಮರ್ಮಾಘಾತ ಕೊಟ್ಟ ಜೆಡಿಯು-ಎಸ್‍ಪಿ

ಕರಾವಳಿ ಮತ್ತು ಕಾಡು ಇಲ್ಲಿನ ಜನರಿಗೆ ಹೆಚ್ಚು ಉದ್ಯೋಗವನ್ನು ಒದಗಿಸಿ ಕೊಟ್ಟಿದ್ದು, ಸರ್ಕಾರಗಳಿಂದ ಸೂಕ್ತ ಮಾನ್ಯತೆ ಸಿಕ್ಕಿಲ್ಲ. ಅರಣ್ಯ ಹಕ್ಕು ಕಾಯ್ದೆ ಸೇರಿದಂತೆ ಜನಪರ ಕಾಯ್ದೆಗಳು ಇಲ್ಲದಿರುವುದು ಇಲ್ಲಿನ ಸಾಮಾನ್ಯ ಜನರಿಗೆ ಅನಾನುಕೂಲವಾಗಿದೆ. ಮಲೆನಾಡು ಕರಾವಳಿ ಭಾಗಕ್ಕೆ ಮೆಡಿಕಲ್ ಕಾಲೇಜು, ಐಐಟಿ ಸೇರಿದಂತೆ ಉನ್ನತ ಶಿಕ್ಷಣಕ್ಕೆ ನೆರವಾಗುವ ಯೋಜನೆಗಳನ್ನು ರೂಪಿಸಬೇಕು ಎಂದು ಹೇಳಿದರು.

ಚಿಕ್ಕಮಗಳೂರಿನ ಕಾಫಿ ಬೆಳೆಗಾರರು, ಮೀನುಗಾರರ ಸಮಸ್ಯೆ, ಅರಣ್ಯ ಹೊತ್ತುವರಿ ಪರಿಹಾರ, ಕಸ್ತೂರಿ ರಂಗನ್ ವರದಿಗಾಗಿ ಹೊಸ ಸೂತ್ರ ರಚನೆ, ಹೊಸ ತಾಲೂಕುಗಳ ಅಭಿವೃದ್ಧಿ, ಉಡುಪಿ ಆಗುಂಬೆ ಹೆದ್ದಾರಿ ನವೀಕರಣ, ನದಿ ಮೂಲಗಳ ರಕ್ಷಣೆ, ಪ್ರಕೃತಿ ಸಹಜ ನದಿ ಜೋಡಣೆಗೆ ಮಹತ್ವ, ಚಿಕ್ಕಮಗಳೂರು-ಮಡಿಕೇರಿ ಹಾಗೂ ಸೂಕ್ತ ಪ್ರದೇಶಕ್ಕೆ ರೈಲ್ವೆ ಪಥ ವಿಸ್ತರಣೆ, ಜಾತಿ ಮತ ಭೇದ ಇಲ್ಲದೆ ಅಸ್ಪೃಶ್ಯತೆ ವಿರುದ್ಧ ಸಂಘಟನೆ ಮಾಡುತ್ತಾ ಶೋಷಿತರ ಕೂಗಾಗಿದ್ದ ಕ್ರಾಂತಿಕಾರಿ ಸಾಮಾಜಿಕ ಸಮಾನತೆಯ ಹರಿಕಾರ ನಾರಾಯಣ ಗುರುಗಳ ಹೆಸರಲ್ಲಿ ವಿಶ್ವವಿದ್ಯಾನಿಲಯ ನಿರ್ಮಾಣ ಆಗಬೇಕು ಎಂಬ ಇನ್ನಿತರ ಅನೇಕ ವಿಷಯಗಳನ್ನು ಇದೇ ವೇಳೆ ಸರ್ಕಾರದ ಮುಂದಿಟ್ಟರು.

ಒಕ್ಕೂಟದ ಸಂಚಾಲಕರಾದ ಅನಿಲ್ ಹೊಸಕೊಪ್ಪ ಮಾತನಾಡಿ, ಜನಪರ ಒಕ್ಕೂಟದ ಮೂಲಕ ಏಳು ಜಿಲ್ಲೆಗಳನ್ನು ಒಳಗೊಂಡ ಮಲೆನಾಡು ಕರಾವಳಿ ಪ್ರದೇಶದ ಸಮಸ್ಯೆಗಳನ್ನು ಹೋರಾಟಗಳ ಮೂಲಕ ಸರ್ಕಾರದ ಮುಂದಿಡುವುದು ನಮ್ಮ ಮುಖ್ಯ ಉದ್ದೇಶ ವಾಗಿದೆ. ಕರಾವಳಿ ಮಲೆನಾಡು ಪಶ್ಚಿಮ ಘಟ್ಟದಲ್ಲಿ ರೈತರು, ಸಾರ್ವಜನಿಕರು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮತ್ತಷ್ಟು ಸದೃಢರಾಗಬೇಕಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಗಳ ಕಣ್ಣು ತೆರೆಸುಲು ನಾವು ಶ್ರಮಿಸುತ್ತಿದ್ದೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ತೇಜ್ ಶೆಟ್ಟಿ, ಮಹೇಶ್ ಶಿರಸಿ, ಸಂತೋಷ್ ಶೆಟ್ಟಿ, ಅಬ್ಬಾಸ್ ಕೆಗ್ಗ, ಅಬ್ಬಾಸ್ ಧರ್ಮಸ್ಥಳ, ನವೀನ್ ಮಾವಿನಕಟ್ಟೆ, ಕಿರಣ್ ಮಲ್ನಾಡ್ ಉಪಸ್ಥಿತರಿದ್ದರು.

RELATED ARTICLES

Latest News