Home Blog Page 1875

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ವೈವಾಹಿಕ ಜೀವನ ಬಿರುಕು

ಮುಂಬೈ,ಅ.20-ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತಿ ಉದ್ಯಮಿ ರಾಜ್ ಕುಂದ್ರಾ ನಡುವಿನ ವೈವಾಹಿಕ ಜೀವನ ಬಿರುಕು ಕಂಡಿದೆ. ಏಕೆಂದರೆ ರಾಜ್ ಕುಂದ್ರಾ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಮಾಡಿರುವ ಫೋಸ್ಟ್ ಇಂತಹ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ನಾವಿಬ್ಬರು ಬೇರ್ಪಟ್ಟಿದ್ದೇವೆ ಮತ್ತು ಈ ಕಷ್ಟದ ಅವಧಿಯಲ್ಲಿ ನಮಗೆ ಸಮಯ ನೀಡುವಂತೆ ದಯವಿಟ್ಟು ವಿನಂತಿಸುತ್ತೇವೆ ಎಂದು ಬರೆದಿದ್ದಾರೆ. ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ 2009ರಲ್ಲಿ ವಿವಾಹವಾಗಿದ್ದರು. ಅವರಿಗೆ ವಿಯಾನ್ ಮತ್ತು ಸಮೀಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಶಿಲ್ಪಾ ಶೆಟ್ಟಿಗೆ ರಾಜ್ ಕುಂದ್ರಾ ಅಧಿಕೃತವಾಗಿ ವಿವಾಹ ವಿಚ್ಛೇಧನ ನೀಡಿದ್ದಾರೆಯೇ ಎಂಬುದು ದೃಢಪಟ್ಟಿಲ್ಲ. ಆದರೆ ಇಬ್ಬರು ನಡುವಿನ ಸಂಬಂಧ ಹಲವು ವರ್ಷಗಳಿಂದ ನಾನೊಂದು ತೀರ, ನೀನೊಂದು ತೀರ ಎಂಬಂತಿತ್ತು.

ಇದಕ್ಕೆ ಪುಷ್ಟಿ ನೀಡುವಂತೆ ಅವರು ಮಾಡಿರುವ ಪೋಸ್ಟ್ ವಿಚ್ಛೇಧನಕ್ಕೆ ಇಂಬು ಕೊಡುವಂತಿದೆ. ಆದರೆ ರಾಜ್‍ಕುಂದ್ರಾ ಪೋಸ್ಟ್‍ಗೆ ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಸಾಮಾಜಿಕ ಮಾಧ್ಯಮದ ಒಂದು ಸಣ್ಣ ವಿಭಾಗವು ಅವರ ಬಯೋಪಿಕ್ ಯುಟಿ 69ರ ಬಿಡುಗಡೆಗೆ ಮುಂಚಿತವಾಗಿ ಇದನ್ನು ಪ್ರಚಾರದ ಗಿಮಿಕ್ ಎಂದು ಕರೆದಿದೆ.

ನಿಜ್ಜರ್ ಹತ್ಯೆ ಹೇಳಿಕೆ ಮುನ್ನ ಭಾರತದೊಂದಿಗೆ ಚರ್ಚೆ ನಡೆಸಿದ್ದೇವೆ ; ಕೆನಡಾ

ಮತ್ತೊಬ್ಬ ನೆಟ್ಟಿಗ ಇದು ನಿಜಕ್ಕೂ ಆಘಾತಕಾರಿ ಸುದ್ದಿ. ಬೇರ್ಪಟ್ಟು ಎಂದರೆ ವಿಚ್ಛೇದನವೇ ಎಂದು ಪ್ರಶ್ನಿಸಿದ್ದಾರೆ. ಇತ್ತೀಚೆಗೆ, ರಾಜ್ ಕುಂದ್ರಾ ಅವರು ತಮ್ಮ ಜೀವನಚರಿತ್ರೆ ಯುಟಿ 69ರ ಟ್ರೈಲರ್ ಬಿಡುಗಡೆಯಲ್ಲಿ ಪೋರ್ನ್ ಹಗರಣದಲ್ಲಿ ಜೈಲಿನಲ್ಲಿದ್ದ ಸಮಯದ ಬಗ್ಗೆ ಮೌನ ಮುರಿದಿದ್ದರು. ಅಶ್ಲೀಲ ಸಿನಿಮಾಗಳನ್ನು ಚಿತ್ರೀಕರಿಸಿ, ಅದನ್ನು ವಿವಿಧ ಆಪ್‍ಗಳ ಮೂಲಕ ವಿತರಣೆ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ರಾಜ್ ಕುಂದ್ರಾರನ್ನು ಪೊಲೀಸರು ಬಂಧಿಸಿದ್ದರು.

ಅಶ್ಲೀಲ ಚಿತ್ರಗಳನ್ನು ತಯಾರಿಸಿ, ಅವುಗಳನ್ನು ವಿವಿಧ ಆಪ್‍ಗಳ ಮೂಲಕ ರಿಲೀಸ್ ಮಾಡುತ್ತಿದ್ದಾರೆ ಎಂದು ಫೆಬ್ರವರಿಯಲ್ಲೇ ಕ್ರೈಮ್ ಬ್ರ್ಯಾಂಚ್‍ನಲ್ಲಿ ಪ್ರಕರಣ ದಾಖಲಾಗಿತ್ತು. ನೀಲಿ ಸಿನಿಮಾಗಳ ನಿರ್ಮಾಣದ ಪ್ರಮುಖ ಆರೋಪಿ ರಾಜ್ ಕುಂದ್ರಾ ಅವರೇ ಆಗಿದ್ದಾರೆ. ಸದ್ಯ ಅವರನ್ನು ಬಂಸಿದ್ದೇವೆ ಎಂದು ಮುಂಬೈ ಪೊಲೀಸ್ ಕಮಿಷನರ್ ಹೇಮಂತ್ ನಗ್ರಾಳೆ ಹೇಳಿದ್ದರು. ಸದ್ಯ ರಾಜ್ ಕುಂದ್ರಾ ಮೇಲೆ ಇಂಥದ್ದೊಂದು ಆರೋಪ ಬಂದಿರುವುದು ಚಿತ್ರರಂಗದಲ್ಲಿ ದೊಡ್ಡ ಸಂಚಲವನ್ನು ಉಂಟು ಮಾಡಿದೆ.

ದೇಶದ ಮೊದಲ ರ‍್ಯಾಪಿಡ್-​ಎಕ್ಸ್ ಪ್ರೆಸ್​ ರೈಲಿಗೆ ಮೋದಿ ಚಾಲನೆ

ನವದೆಹಲಿ,ಅ.20- ಪ್ರಧಾನಿ ನರೇಂದ್ರಮೋದಿ ಅವರು ಭಾರತದ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ ಕಾರಿಡಾರ್‍ನ್ನು ಪ್ರಾರಂಭಿಸುವ ಮೂಲಕ ದೇಶದ ಮೊದಲ ಇಂಟರ್ಸಿಟಿ ರ‍್ಯಾಪಿಡ್-​ಎಕ್ಸ್ ಪ್ರೆಸ್​​ ರೈಲಿಗೆ ಚಾಲನೆ ನೀಡಿದರು.ಇಂದು ಬೆಳಗ್ಗೆ 11:15ಕ್ಕೆ ದೆಹಲಿ-ಗಾಜಿಯಾಬಾದ್-ಮೀರತ್ ಆರ್ ಆರ್ ಟಿಎಸ್ ಕಾರಿಡಾರ್‌ನ ಆದ್ಯತೆಯ ವಿಭಾಗವನ್ನು ಉತ್ತರ ಪ್ರದೇಶದ ಸಾಹಿಬಾಬಾದ್ ರಾಪಿಡ್‍ಎಕ್ಸ್ ನಿಲ್ದಾಣದಲ್ಲಿ ಲೋಕಾರ್ಪಣೆ ಮಾಡಿದರು.

ಭಾರತದಲ್ಲಿ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್ ಆರ್ ಟಿಎಸ್) ಆರಂಭದ ಅಂಗವಾಗಿ ಅವರು ಸಾಹಿಬಾಬಾದ್‍ನಿಂದ ದುಹೈ ಡಿಫೋಗೆ ಸಂಪರ್ಕಿಸುವ ರಾಪಿಡ್‍ಎಕ್ಸ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. ಮೊದಲ ಹಂತದಲ್ಲಿ ಈ ರೈಲು ಸಾಹಿಬಾಬಾದ್, ಗಾಜಿಯಾಬಾದ್ ಗುಲ್ಧರ್, ದುಹೈ ಮತ್ತು ದುಹೈ ಡಿಫೋ ಸೇರಿದಂತೆ 5 ನಿಲ್ದಾಣಗಳಲ್ಲಿ ಕಾರ್ಯ ನಿರ್ವಹಿಸಲಿವೆ.

ಹೊಸ ವಿಶ್ವ ದರ್ಜೆಯ ಸಾರಿಗೆ ಮೂಲಸೌಕರ್ಯಗಳ ನಿರ್ಮಾಣದ ಮೂಲಕ ದೇಶದಲ್ಲಿ ಪ್ರಾದೇಶಿಕ ಸಂಪರ್ಕವನ್ನು ಪರಿವರ್ತಿಸುವ ಪ್ರಧಾನ ಮಂತ್ರಿಯವರ ದೂರದೃಷ್ಟಿಗೆ ಅನುಗುಣವಾಗಿ, ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್ ಆರ್ ಟಿಎಸ್) ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ.

ಆರ್ ಆರ್ ಟಿಎಸ್ ಹೊಸ ರೈಲು-ಆಧಾರಿತ, ಸೆಮಿ-ಹೈಸ್ಪೀಡ್, ಹೆಚ್ಚಿನ ಪ್ರಯಾಣಿಕರ ಸಾರಿಗೆ ವ್ಯವಸ್ಥೆಯಾಗಿದೆ. ಪ್ರತಿ ಗಂಟೆಗೆ 180 ಕಿಲೋಮೀಟರ್ ವಿನ್ಯಾಸದ ವೇಗದೊಂದಿಗೆ, ಆರ್ ಆರ್ ಟಿಎಸ್ ಒಂದು ಪರಿವರ್ತನಾಶೀಲ ಪ್ರಾದೇಶಿಕ ಅಭಿವೃದ್ಧಿ ಉಪಕ್ರಮವಾಗಿದೆ. ಇದು ಪ್ರತಿ 15 ನಿಮಿಷಗಳಿಗೊಮ್ಮೆ ಅಂತರನಗರ ಪ್ರಯಾಣಕ್ಕಾಗಿ ಹೈ-ಸ್ಪೀಡ್ ರೈಲುಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ, ಇದರಡಿ ರೈಲು ಅವಶ್ಯಕತೆಗೆ ಅನುಗುಣವಾಗಿ ಪ್ರತಿ 5 ನಿಮಿಷಗಳ ಪುನರಾರ್ತನೆ ಆಗುತ್ತಿರುತ್ತದೆ.

ಮಧ್ಯಪ್ರದೇಶದ ಪ್ರಸ್ತುತ 230 ಶಾಸಕರಲ್ಲಿ 186 ಮಂದಿ ಕೋಟ್ಯಾಧಿಪತಿಗಳು

ಎನ್‍ಸಿಆರ್‍ನಲ್ಲಿ ಒಟ್ಟು ಎಂಟು ಆರಾರ್ಟಿಎಸ್ ಕಾರಿಡಾರ್‍ಗಳನ್ನು ಅಭಿವೃದ್ಧಿಪಡಿಸಲು ಗುರುತಿಸಲಾಗಿದೆ, ಅವುಗಳಲ್ಲಿ ಮೂರು ಕಾರಿಡಾರ್‍ಗಳನ್ನು ದೆಹಲಿ ಘಾಜಿಯಾಬಾದ್ ಮೀರತ್ ಕಾರಿಡಾರ್ ಸೇರಿದಂತೆ ಒಂದನೇ ಹಂತದಲ್ಲಿ ಜಾರಿಗೊಳಿಸಲು ಆದ್ಯತೆ ನೀಡಲಾಗಿದೆ.

ದೆಹಲಿ – ಗುರುಗ್ರಾಮ್, ಎಸ್‍ಎನ್‍ಬಿ- ಅಳ್ವಾರ್ ಕಾರಿಡಾರ್, ಮತ್ತು ದೆಹಲಿ ಪಾಣಿಪತ್ ಕಾರಿಡಾರ್. ದೆಹಲಿ-ಗಾಜಿಯಾಬಾದ್-ಮೀರತ್ ಆರ್ ಆರ್ ಟಿಎಸ್ ಅನ್ನು 30,000 ಕೋಟಿ ರೂ. ಅಕ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು ದೆಹಲಿಯಿಂದ ಮೀರತ್‍ಗೆ ಒಂದು ಗಂಟೆಯ ಪ್ರಯಾಣದ ಸಮಯದಲ್ಲಿ ಘಾಜಿಯಾಬಾದ್, ಮುರ್ದಾನಗರ ಮತ್ತು ಮೋದಿನಗರದ ನಗರ ಕೇಂದ್ರಗಳ ಮೂಲಕ ಸಂಪರ್ಕಿ ಕಲ್ಪಿಸುತ್ತದೆ. ಇದು ದೇಶದಲ್ಲಿ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಆಧುನಿಕ ಅಂತರ ನಗರ ಪ್ರಯಾಣದ ಪರಿಹಾರಗಳನ್ನು ಒದಗಿಸುತ್ತದೆ.

ಎನ್‍ಸಿಆರ್ ಸುತ್ತಮುತ್ತಲಿನ 5 ಪಟ್ಟಣಗಳನ್ನು ಸಂಪರ್ಕಿಸುವ ದೆಹಲಿ-ಗಾಜಿಯಾಬಾದ್-ಮೀರತ್ ಆರಾರ್ಟಿಎಸ್ ಕಾರಿಡಾರ್ ಆದ್ಯತೆಯ ವಿಭಾಗವು ಸಾಹಿಬಾಬಾದ್ ನಿಲ್ದಾಣವನ್ನು ದುಹೈ ಡಿಫೋಗೆ ಸಂಪರ್ಕಿಸುತ್ತದೆ ಮತ್ತು ಗಾಜಿಯಾಬಾದ್, ಗುಲ್ಧರ್ ಮತ್ತು ದುಹೈ ಸೇರಿದಂತೆ 3 ಇತರ ನಿಲ್ದಾಣಗಳಲ್ಲಿಯೂ ನಿಲ್ಲುತ್ತದೆ.

ಗಂಟೆಗೆ ಸುಮಾರು 160 ಕಿ.ಮೀ ವೇಗವನ್ನು ಹೊಂದಿರುವ ಈ ಕಾರಿಡಾರ್ ದೆಹಲಿಯಿಂದ ಮೀರತ್‍ಗೆ ಪ್ರಯಾಣಿಸಲು 1 ಗಂಟೆ ತೆಗೆದುಕೊಳ್ಳುತ್ತದೆ. ಈ ನಡುವೆ ನಗರ ಕೇಂದ್ರಗಳಾದ ಗಾಜಿಯಾಬಾದ್, ಮುರಾದ್‍ನಗರ ಮತ್ತು ಮೋದಿನಗರದ ಮೂಲಕ ಹಾದುಹೋಗುತ್ತದೆ.

ವಿಶೇಷತೆ:
ಪ್ರತಿ ರ್ಯಾಪಿಡ್ ಎಕ್ಸ್ ರೈಲು ಒಂದು ಪ್ರೀಮಿಯಂ ಕೋಚ್‍ನ್ನು ಹೊಂದಿದ್ದು, ಒರಗುವ ಆಸನಗಳು, ಕೋಟ್ ಹುಕ್ಸ್, ಮ್ಯಾಗಜೀನ್ ಹೋಲ್ಡರ್ಗಳು ಮತ್ತು ಫುಟ್‍ರೆಸ್ಟರ್‍ಗಂತಹ ವ್ಯವಸ್ಥೆಗಳನ್ನು ಹೊಂದಿದೆ. ಈ ಕೋಚ್‍ಗೆ ಪ್ಲಾಟ್‍ಫಾಮ್‍ನಲ್ಲಿರುವ ಪ್ರೀಮಿಯಂ ಲಾಂಜ್ ಮೂಲಕ ಮಾತ್ರ ಪ್ರವೇಶಿಸಬಹುದು. ರೈಲಿನಲ್ಲಿ ಒಂದು ಕೋಚ್‍ನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಕೊನೆಯ ಕೋಚ್‍ನಲ್ಲಿ ಗಾಲಿಕುರ್ಚಿಗಳು ಮತ್ತು ಸ್ಟ್ರೆಚರ್‍ಗಳನ್ನು ಇಡಲು ಸ್ಥಳವನ್ನು ಒದಗಿಸಲಾಗಿದೆ.

ಸಂಪೂರ್ಣ ಹವಾನಿಯಂತ್ರಿತ ರ್ಯಾಪಿಡ್‍ಎಕ್ಸ್ ರೈಲುಗಳನ್ನು ಪ್ರಾದೇಶಿಕ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾದೆ. 2*2 ಅಡ್ಡ ಆಸನಗಳು, ವಿಶಾಲವಾದ ಸ್ಟ್ಯಾಂಡಿಂಗ್ ಸ್ಪೇಸ್, ಲಗೇಜ್ ರ್ಯಾಕ್‍ಗಳು, ಸಿಸಿಟಿವಿ ಕ್ಯಾಮೆರಾಗಳು, ಲ್ಯಾಪ್‍ಟಾಪ್ ಅಥವಾ ಮೊಬೈಲ್ ಚಾರ್ಜಿಂಗ್ ಸೌಲಭ್ಯದಂತಹ ಫೀಚರ್‍ಗಳನ್ನು ಹೊಂದಿದೆ. ಡೈನಾಮಿಕ್ ರೂಟ್ ಮ್ಯಾಪ್‍ಗಳು, ಆಟೋ ಕಂಟ್ರೋಲ್ ಆಂಬಿಯೆಂಟ್ ಲೈಟಿಂಗ್ ಸಿಸ್ಟಮ್, ಹೀಟಿಂಗ್ ವೆಂಟಿಲೇಶನ್, ಹವಾನಿಯಂತ್ರಣ ವ್ಯವಸ್ಥೆ ಸೇರಿದಂತೆ ಇತರ ಸೌಕರ್ಯಗಳು ಇದರಲ್ಲಿವೆ.

100ನೇ ವಸಂತಕ್ಕೆ ಕಾಲಿರಿಸಿದ ಅಚ್ಯುತಾನಂದನ್

ಪ್ರತಿ ರ್ಯಾಪಿಡ್‍ಎಕ್ಸ್ ರೈಲು 6 ಕೋಚ್‍ಗಳನ್ನು ಹೊಂದಿದ್ದು, ಸುಮಾರು 1,700 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮಥ್ರ್ಯ ಹೊಂದಿದೆ. ಸ್ಟ್ಯಾಂಡರ್ಡ್ ಕೋಚ್‍ನಲ್ಲಿ 72 ಸೀಟುಗಳು ಮತ್ತು ಪ್ರೀಮಿಯಂ ಕೋಚ್‍ನಲ್ಲಿ 62 ಸೀಟುಗಳಿವೆ. ಸ್ಟಾಂಡರ್ಡ್ ಕೋಚ್‍ಗಳಿಗೆ ಕನಿಷ್ಠ ದರ 20 ರೂ. ಮತ್ತು ಗರಿಷ್ಠ ದರ 50 ರೂ. ಇದ್ದು, ಪ್ರೀಮಿಯಂ ಕೋಚ್‍ಗಳಿಗೆ ಕನಿಷ್ಠ ದರ 40 ರೂ. ಮತ್ತು ಗರಿಷ್ಠ 100 ರೂ. ಇದೆ.
ಈ ಯೋಜನೆಯನ್ನು ಅಭಿವೃದ್ಧಿಪಡಿಸಲು 30,000 ಕೋಟಿ ರೂ. ವೆಚ್ಚವಾಗಿದೆ. ಇದರ ಸಂಪೂರ್ಣ 82 ಕಿ.ಮೀ ನ ಕಾರಿಡಾರ್ 2025ರ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದೆ.

ಲೋಕಸಭಾ ಚುನಾವಣೆಗೂ ಮುನ್ನವೇ ರಾಜ್ಯ ಸಚಿವ ಸಂಪುಟ ಪುನಾರಚನೆ..?

ಬೆಂಗಳೂರು,ಅ.20- ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಲು ತೆರೆಮೆರೆಯಲ್ಲಿ ಚಟುವಟಿಕೆಗಳು ನಡೆಯುತ್ತಿವೆ ಎಂಬ ವದಂತಿಯ ನಡುವೆ ಆಡಳಿತರೂಢ ಪಕ್ಷದ ಶಾಸಕರನ್ನು ಭದ್ರಪಡಿಸಿಕೊಳ್ಳಲು ಸಚಿವ ಸಂಪುಟ ಪುನಾರಚನೆಯ ತುಪ್ಪವನ್ನು ಮೂಗಿಗೆ ಸವರುವಂತಹ ಪ್ರಯತ್ನವನ್ನು ಹೈಕಮಾಂಡ್ ಮಾಡಿದೆ.

ಇತ್ತೀಚೆಗೆ ಬೆಂಗಳೂರಿಗೆ ದಿಢೀರ್ ಆಗಮಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ನಿಗಮಮಂಡಳಿ ನೇಮಕಾತಿ, ಸಚಿವ ಸಂಪುಟ ಪುನಾರಚನೆ ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಮಾಲೋಚನೆ ನಡೆದಿದೆ ಎಂದು ಹೇಳಲಾಗಿದೆ. ಅದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‍ನ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೆವಾಲ ಕೆಲವು ಶಾಸಕರನ್ನು ಸಂಪರ್ಕಿಸಿದ್ದು ಮುಂದಿನ ಸಚಿವ ಸಂಪುಟ ಪುನಾರಚನೆ ವೇಳೆ ನಿಮಗೆ ಅವಕಾಶ ಸಿಗಲಿದೆ ಎಂದು ಹೇಳಿರುವ ಮಾಹಿತಿಗಳಿವೆ.

ನಿಜ್ಜರ್ ಹತ್ಯೆ ಹೇಳಿಕೆ ಮುನ್ನ ಭಾರತದೊಂದಿಗೆ ಚರ್ಚೆ ನಡೆಸಿದ್ದೇವೆ ; ಕೆನಡಾ

ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾದ ಬೆನ್ನಲ್ಲೇ ಸರ್ಕಾರದ ವಿರುದ್ಧ ಹೋರಾಟ ಮತ್ತು ಚಟುವಟಿಕೆಗಳು ತೀವ್ರಗೊಂಡಿದೆ ಈಗಾಗಲೇ ಹಲವು ಬಾರಿ ಡಿ.ಕೆ.ಶಿವಕುಮಾರ್ ಅವರು ಬಹಿರಂಗ ಹೇಳಿಕೆ ನೀಡಿ ಸರ್ಕಾರ ಪತನಗೊಳಿಸುವ ಸಂಚು ನಡೆದಿದೆ ಎಂದು ಆರೋಪಿಸಿದರು.

ಬಿಜೆಪಿಯ ಒಂದು ತಂಡ ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿ ಆಮಿಷವೊಡ್ಡುವ ಕೆಲಸ ಮಾಡುತ್ತಿದೆ. ನಮ್ಮ ಶಾಸಕರು ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಿದ್ದಾರೆ. ಸಮಯ ಬಂದಾಗ ಎಲ್ಲವನ್ನು ಬಹಿರಂಗಪಡಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ರಾಜ್ಯ ಮಟ್ಟದಲ್ಲಿ ನಾಯಕರುಗಳು ಶಾಸಕರನ್ನು ಸಂಪರ್ಕಿಸಿ ಅಭಿಪ್ರಾಯ ಕ್ರೂಢೀಕರಿಸುವ ಪ್ರಯತ್ನ ಮಾಡಿದ್ದಾರೆ. ಈಗಾಗಲೇ ಒಂದು ಸುತ್ತು ಜಿಲ್ಲಾ ಮಟ್ಟದಲ್ಲಿ ಶಾಸಕರು ಮತ್ತು ಸಚಿವರ ಸಭೆ ನಡೆಸಲಾಗಿದೆ. ಅದರ ಹೊರತಾಗಿಯೂ ಕೆಲವರು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುತ್ತಿಲ್ಲ ಎಂಬ ಹೇಳಿಕೆಗಳನ್ನು ಬಹಿರಂಗವಾಗಿ ನೀಡಿ ಆಕ್ಷೇಪಿಸುತ್ತಿದ್ದಾರೆ.

ಇದು ಮುಜುಗರದ ಸನ್ನಿವೇಶವಾಗಿದೆ. ಮತ್ತೊಂದೆಡೆ ಸರ್ಕಾರ ಪತನಗೊಳಿಸಲು ತೆರೆಮರೆಯಲ್ಲಿ ಸದ್ದಿಲ್ಲದೆ ನಡೆಯುತ್ತಿರುವ ಆಪರೇಷನ್ ಕಮಲದ ಕಸರತ್ತು ಕಾಂಗ್ರೆಸಿಗರ ನಿದ್ದೆಗೆಡಿಸಿದೆ. ದೇಶದಲ್ಲೇ ಅದರಲ್ಲೂ ದಕ್ಷಿಣ ಭಾರತದಲ್ಲಿ ಪ್ರಮುಖ ರಾಜ್ಯವಾಗಿರುವ ಕರ್ನಾಟಕದಲ್ಲಿ ಆಡಳಿತದಲ್ಲಿರುವುದು ಕಾಂಗ್ರೆಸ್‍ಗೆ ಜೀವ ಕಣವಾಗಿದೆ. ಇಲ್ಲಿಯ ಸರ್ಕಾರವನ್ನು ಕಳೆದುಕೊಂಡರೆ ಕಾಂಗ್ರೆಸ್ ಅಸ್ತಿತ್ವವೇ ಪ್ರಶ್ನಾರ್ಹವಾಗುವ ಆತಂಕವಿದೆ.

ಈ ಹಿನ್ನಲೆಯಲ್ಲಿ ಪ್ರತಿ ಬೆಳವಣಿಗೆಯ ಮೇಲೂ ಕಟ್ಟೆಚ್ಚರ ವಹಿಸಬೇಕು. ಯಾವುದೇ ಸಂದರ್ಭದಲ್ಲೂ ಸರ್ಕಾರವನ್ನು ಬಿಟ್ಟುಕೊಡಬಾರದು. ಆಪರೇಷನ್ ಕಮಲ ಸೇರಿದಂತೆ ಎಂಥದ್ದೇ ಚಟುವಟಿಕೆಗಳಿದ್ದರೂ ತಿರುಗೇಟು ನೀಡಬೇಕೆಂದು ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚಿಸಿದೆ ಎಂದು ಹೇಳಲಾಗಿದೆ. ಇದು ಸಾಲದು ಎಂಬಂತೆ ಕೆಲವು ಶಾಸಕರನ್ನು ಸಂಪರ್ಕಿಸಿ ಸಚಿವ ಸಂಪುಟ ಪುನಾರಚನೆ ವೇಳೆ ಅವಕಾಶ ನೀಡಲಾಗುವುದು. ಬಿಜೆಪಿ ಮತ್ತು ಜೆಡಿಎಸ್‍ನ ಯಾವುದೇ ಆಮಿಷಗಳಿಗೆ ಒಳಗಾಗಬೇಡಿ ಎಂದು ಹೈಕಮಾಂಡ್ ನಾಯಕರು ಮನವೊಲಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಮಧ್ಯಪ್ರದೇಶ ಚುನಾವಣೆ : ಫೈನಲ್ ಆಯ್ತು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

ಈ ಬಗ್ಗೆ ಕೆಲವು ಶಾಸಕರು ತಮ್ಮ ಅಭಿಪ್ರಾಯಗಳನ್ನು ಹೇಳಿಕೊಂಡಿದ್ದು, ಸಚಿವ ಸಂಪುಟ ಪುನಾರಚನೆ ನಿಗದಿಯಂತೆ ಸರ್ಕಾರದ ಎರಡೂವರೆ ವರ್ಷಗಳ ಬಳಿಕ ನಡೆಯಲಿದೆ. ಈ ನಡುವೆ ಕ್ಷಿಪ್ರ ಬೆಳವಣಿಗಳಾದರೆ ಹೈಕಮಾಂಡ್ ಯಾವ ರೀತಿಯ ನಿರ್ಧಾರವನ್ನಾದರೂ ತೆಗೆದುಕೊಳ್ಳಬಹುದು. ಲೋಕಸಭೆ ಚುನಾವಣೆಗೂ ಮುನ್ನವೇ ಸಂಪುಟ ಪುನಾರಚನೆಯಾದರೆ ಅಚ್ಚರಿಪಡಬೇಕಿಲ್ಲ ಎಂದು ಮೂಲಗಳು ತಿಳಿಸಿವೆ.

ಸಂಸತ್‍ನಲ್ಲಿ ಮೋದಿ ವಿರುದ್ಧ ಪ್ರಶ್ನೆ ಕೇಳಲು ಲಂಚ ಪಡೆದ ಪ್ರಕರಣಕ್ಕೆ ಸ್ಪೋಟಕ ತಿರುವು

ನವದೆಹಲಿ,ಅ.20- ಪ್ರಧಾನಿ ನರೇಂದ್ರಮೋದಿ ಮತ್ತು ಅದಾನಿ ಗ್ರೂಪ್‍ನ್ನು ಗುರಿಯಾಗಿಸಿಕೊಂಡು ಪ್ರಶ್ನೆ ಕೇಳಲು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು, ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ಲಂಚ ಸ್ವೀಕರಿಸಿದ್ದಾರೆ ಎಂಬ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ಸಂಸದೆಯ ಪರವಾಗಿ ಪ್ರಶ್ನೆಗಳನ್ನು ಫೋಸ್ಟ್ ಮಾಡಲು ಅವರ ಸಂಸತ್ತಿನ ಲಾಗಿನ್ ಐಡಿ ಮತ್ತು ಪಾಸ್‍ವರ್ಡ್‍ನ್ನು ಹಂಚಿಕೊಂಡಿದ್ದಾರೆ ಎಂದು ಉದ್ಯಮಿ ದರ್ಶನ್ ಹಿರಾನಂದನಿಯವರು ಸಂಸತ್ತಿನ ನೈತಿಕ ಸಮಿತಿಗೆ ಸಲ್ಲಿಸಿರುವ ಅಫಿಡವಿಟ್‍ನಲ್ಲಿ ಆರೋಪಿಸಿದ್ದಾರೆ.

ಹಿರಾನಂದಿನಿ ಅಫಿಡವಿಟ್ ಹೊರಗಡೆ ಬರುತ್ತಿದ್ದಂತೆ ಮಹುವಾ ಮೊಯಿತ್ರಾ ಕೂಡ ತಮ್ಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಉದ್ಯಮಿಯ ಅಫಿಡೆವಿಟ್‍ನ ದೃಢೀಕರಣವನ್ನು ಪ್ರಶ್ನೆ ಮಾಡಿದ್ದಾರೆ. ಪ್ರಧಾನಿ ನರೇಂದ್ರಮೋದಿ ವಿರುದ್ಧ ವಾಗ್ದಾಳಿ ನಡೆಸಲು ಇರುವುದು ಒಂದೇ ಮಾರ್ಗ ಎಂಬ ಅನಿಸಿಕೆ ಸಂಸದೆಯಲ್ಲಿತ್ತು. ಈ ಕಾರಣದಿಂದ ಅದಾನಿ ಸಮೂಹದ ವಿರುದ್ಧ ಪ್ರಶ್ನೆಗಳನ್ನು ರೂಪಿಸಲು ತಮಗೆ ಸಂಸತ್ ಖಾತೆಯ ಲಾಗಿನ್ ಐಡಿ ನೀಡಿದ್ದರು ಎಂದು ಹೀರಾನಂದಾನಿ ಮೂರು ಪುಟಗಳ ಅಫಿಡವಿಟ್ ಸಲ್ಲಿಸಿದ್ದಾರೆ.

ಮೊಯಿತ್ರಾ ವಿರುದ್ಧ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮಾಡಿರುವ ಕೆಲವು ಆರೋಪಗಳಲ್ಲಿ ಹೀರಾನಂದಾನಿ ತಪ್ಪೋಪ್ಪಿಕೊಂಡಿದ್ದಾರೆ. ಆದರೆ ತಮ್ಮ ಎದುರಾಳಿ ಉದ್ಯಮ ಅದಾನಿ ಸಮೂಹವನ್ನು ಟಾರ್ಗೆಟ್ ಮಾಡಲು ಹೀರಾನಂದಾಗಿ ಸಮೂಹದ ಪರವಾಗಿ ಮೊಯಿತ್ರಾ 50 ಪ್ರಶ್ನೆಗಳನ್ನು ಸಂಸತ್‍ನಲ್ಲಿ ಕೇಳಿದ್ದರು ಎಂಬ ಮುಖ್ಯ ಆರೋಪದ ಬಗ್ಗೆ ಅದರಲ್ಲಿ ಅವರು ಉಲ್ಲೇಖ ಮಾಡಿಲ್ಲ.

ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಮೊಯಿತ್ರಾ ಲಂಚ ಸ್ವೀಕರಿಸಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಮೊಯಿತ್ರಾ ಮತ್ತು ಉದ್ಯಮಿ ಹಿರಾನಂದಾನಿ ನಡುವೆ ಲಂಚ ವಿನಿಮಯವಾಗಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದಿರುವ ದುಬೆ, ಸುಪ್ರೀಂಕೋರ್ಟ್ ವಕೀಲ ಜೈ ಅನಂತ್ ದೇಹದ್ರಾಯ್ ಅವರ ಪತ್ರವನ್ನು ಉಲ್ಲೇಖಿಸಿದ್ದಾರೆ.

ಮಹುವಾ ಮೊಯಿತ್ರಾ ಅವರು ಕ್ಷಿಪ್ರವಾಗಿ ರಾಷ್ಟ್ರ ರಾಜಕಾರಣದಲ್ಲಿ ಮಿಂಚಲು ಬಯಸಿದ್ದರು. ನರೇಂದ್ರ ಮೋದಿ ಅವರನ್ನು ವೈಯಕ್ತಿಕವಾಗಿ ನಿಂದಿಸುವ ಮೂಲಕ ವೇಗವಾಗಿ ಜನಪ್ರಿಯತೆ ಗಳಿಸಲು ಗೆಳೆಯರಿಂದ ಸಲಹೆ ಪಡೆದಿದ್ದರು ಎಂಬುದಾಗಿಯೂ ಉಲ್ಲೇಖಿಸಲಾಗಿದೆ.

ಟಿಎಂಸಿ ಸಂಸದೆ ಮೇಲುಗೈ ಸಾಧಿಸಲು ಬಯಸುವ ಹಾಗೂ ಆಸೆಬುರುಕರಾಗಿದ್ದು, ತಮ್ಮ ಬೆಂಬಲವನ್ನು ಉಳಿಸಿಕೊಳ್ಳಲು ಮತ್ತು ಆಪ್ತರ ವಲಯದಲ್ಲಿ ಉಳಿಯಲು ವಿವಿಧ ಸಹಾಯಗಳಿಗೆ ಬೇಡಿಕೆ ಇರಿಸಿದ್ದರು. ಈ ಪಟ್ಟಿಯಲ್ಲಿ ತಮಗೆ ದುಬಾರಿ ಐಷಾರಾಮಿ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು, ದೆಹಲಿಯಲ್ಲಿ ತಮಗೆ ಅಧಿಕೃತವಾಗಿ ಹಂಚಿಕೆಯಾದ ಬಂಗಲೆಯನ್ನು ನವೀಕರಿಸುವುದು, ಪ್ರಯಾಣ ವೆಚ್ಚಗಳು ಮತ್ತು ರಜಾ ವಿಹಾರಗಳ ವೆಚ್ಚವನ್ನು ಭರಿಸುವುದು ಮುಂತಾದವು ಸೇರಿದ್ದವು.

ನಿಜ್ಜರ್ ಹತ್ಯೆ ಹೇಳಿಕೆ ಮುನ್ನ ಭಾರತದೊಂದಿಗೆ ಚರ್ಚೆ ನಡೆಸಿದ್ದೇವೆ ; ಕೆನಡಾ

ಆಕೆಗೆ ಅಸಮಾಧಾನ ಉಂಟುಮಾಡಲು ನನಗೆ ಸಾಧ್ಯವಾಗುತ್ತಿರಲಿಲ್ಲ ಎಂದು ಅಫಿಡವಿಟ್‍ನಲ್ಲಿ ಹೀರಾನಂದಾನಿ ತಿಳಿಸಿದ್ದಾರೆ. ಅವರು ನನ್ನನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಮತ್ತು ನಾನು ಬಯಸದ ಸಂಗತಿಗಳಿಗಾಗಿ ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ನನಗೆ ಅನೇಕ ಬಾರಿ ಅನಿಸಿತ್ತು. ಆದರೆ ನನಗೆ ಬೇರೆ ಆಯ್ಕೆ ಇರಲಿಲ್ಲ ಎಂದಿದ್ದಾರೆ.

ಈ ಪ್ರಯತ್ನದಲ್ಲಿ ಮೊಯಿತ್ರಾ ಇತರರಿಂದಲೂ ಸಹಾಯ ಪಡೆದಿದ್ದರು. ಪತ್ರಕರ್ತರು, ವಿರೋಧ ಪಕ್ಷಗಳ ನಾಯಕರು ಮತ್ತು ಅದಾನಿ ಸಮೂಹದ ಮಾಜಿ ಉದ್ಯೋಗಿಗಳು ದೃಢಪಡದ ಮಾಹಿತಿಗಳನ್ನು ಮೊಯಿತ್ರಾಗೆ ನೀಡಿದ್ದರು ಎಂದಿದ್ದಾರೆ. ಇದರಲ್ಲಿ ಅವರು ಪತ್ರಕರ್ತೆ ಸುಚೇತಾ ದಲಾಲ್ ಹೆಸರು ಉಲ್ಲೇಖಿಸಿದ್ದಾರೆ. ಇದನ್ನು ಸುಚೇತಾ ನಿರಾಕರಿಸಿದ್ದಾರೆ.

ಮೊಯಿತ್ರಾ ತಿರುಗೇಟು: ಇದಕ್ಕೆ ಪ್ರತಿಯಾಗಿ ಎರಡು ಪುಟಗಳ ಹೇಳಿಕೆ ಹಾಗೂ ಐದು ಪ್ರಶ್ನೆಗಳನ್ನು ಎತ್ತಿರುವ ಮೊಯಿತ್ರಾ, ಪ್ರಧಾನಿ ಕಚೇರಿಯು ಹೀರಾನಂದಾನಿ ಅವರ ತಲೆಗೆ ಗನ್ ಇರಿಸಿದ್ದು, ಬಿಳಿ ಹಾಳೆ ಮೇಲೆ ಸಹಿ ಮಾಡಿಸಿಕೊಂಡಿದೆ ಮತ್ತು ಬಳಿಕ ಅದನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದೆ ಎಂದು ಅಫಿಡವಿಟ್‍ನಲ್ಲಿನ ಅಂಶಗಳನ್ನು ಅಲ್ಲಗಳೆದಿದ್ದಾರೆ.

ಆದರೆ ಹೀರಾನಂದಾನಿ ಅವರ ಹೇಳಿಕೆ ಮೊಯಿತ್ರಾರಿಗೆ ಭಾರಿ ಹಿನ್ನಡೆ ಉಂಟುಮಾಡಿದೆ. ಹೀರಾನಂದಾನಿ ಅವರಿಗೆ ಮೊಯಿತ್ರಾ ತಮ್ಮ ಲಾಗಿನ್ ಐಡಿ ನೀಡಿದ್ದರು ಎಂದು ಬಿಜೆಪಿ ಆರೋಪಿಸಿತ್ತು. ಇದು ಸಾಬೀತಾದರೆ ಅವರು ತಮ್ಮ ಸವಲತ್ತು ಉಲ್ಲಂಘಿಸಿದಂತಾಗಲಿದೆ. ಅವರನ್ನು ಅಮಾನತುಗೊಳಿಸುವ ಆದೇಶ ಹೊರಡಿಸಬಹುದಾಗಿದೆ.

ಮಧ್ಯಪ್ರದೇಶದ ಪ್ರಸ್ತುತ 230 ಶಾಸಕರಲ್ಲಿ 186 ಮಂದಿ ಕೋಟ್ಯಾಧಿಪತಿಗಳು

ಕಾಸಿಗಾಗಿ ಪ್ರಶ್ನೆ ವಿವಾದದಲ್ಲಿ ಸಿಲುಕಿರುವ ದರ್ಶನ್ ಹೀರಾನಂದಾನಿ, ಈ ಪ್ರಕರಣವು ತಮ್ಮನ್ನು ಒಳಗೊಂಡಿರುವುದರಿಂದ ಮತ್ತು ಸಂಸತ್‍ನ ನಿಲುವಳಿ ಸಮಿತಿ ಹಾಗೂ ನ್ಯಾಯಾಂಗದ ವ್ಯಾಪ್ತಿಗೆ ಬರುವಂತಹ ರಾಜಕೀಯ ತೀವ್ರತೆ ಪಡೆದಿರುವುದರಿಂದ ಅಫಿಡವಿಟ್ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದಾರೆ.

ಇಂಧನ ಮತ್ತು ಮೂಲಸೌಕರ್ಯಗಳ ಒಪ್ಪಂದವನ್ನು ಅದಾನಿ ಗ್ರೂಪ್ ಎದುರು ಪಡೆಯಲು ಹಿರಾನಂದನಿ ಪಡೆಯಲು ವಿಫಲವಾಗಿತ್ತು. ಹಾಗಾಗಿ, ಹಿರಾನಂದನಿ ವ್ಯಾಪಾರಿ ಹಿತಾಸಕ್ತಿಗೆ ಅನುಗುಣವಾಗಿ ಸಂಸದೆ ಮಹುವಾ ಮೊಯಿತ್ರಾ ಅವರು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಓಂ ಬಿರ್ಲಾ ಅವರಿಗೆ ಬರೆದ ಪತ್ರದಲ್ಲಿ ದುಬೆ ಅವರು ಆರೋಪಿಸಿದ್ದಾರೆ. ಅಲ್ಲದೇ, ಐಫೋನ್‍ನಂಥ ದುಬಾರಿ ಗಿಫ್ಟ್ ಮಾತ್ರವಲ್ಲದೇ, 2 ಕೋಟಿ ಹಣವನ್ನು ಕಂಪನಿಯಿಂದ ಮಹುವಾ ಮೋಯಿತ್ರಾ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಸಿಲಿಂಡರ್‌ಗೆ ಬೆಂಕಿ ತಗುಲಿ ಒಂದೇ ಕುಟುಂಬದ ಮೂವರು ಸಾವು

ಲಕ್ನೋ,ಅ.20-ಅಡುಗೆ ಅನಿಲ ಸಿಲಿಂಡರ್‌ಗೆ ಬೆಂಕಿ ತಗುಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಬದೋನ್ ಜಿಲ್ಲೆಯಲ್ಲಿ ಸಂಭವಿಸಿದೆ. ನಿನ್ನೆ ರಾತ್ರಿ ಉಜಾನಿ ಪಟ್ಟಣದ ಮೊಹಲ್ಲಾ ಗಡ್ಡಿ ತೋಲಾದಲ್ಲಿ ನಡೆದ ಈ ಘಟನೆಯಲ್ಲಿ ಕುಟುಂಬದ ಇಬ್ಬರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ ಎಂದು ಅವರು ತಿಳಿಸಿದ್ದಾರೆ.

ಘಟನೆಯಲ್ಲಿ ಮೃತಪಟ್ಟವರನ್ನು ಸುಖ್ಬೀರ್ ಮೌರ್ಯ (35) ಮತ್ತು ಅವರ ಮಕ್ಕಳಾದ ಗೋಪಾಲ್ (8) ಮತ್ತು ಯಶ್ (6) ಎಂದು ಗುರುತಿಸಲಾಗಿದೆ. ಅವರ ಪತ್ನಿ ಮತ್ತು ತಾಯಿಯು ಆಹಾರ ತಯಾರಿಸುವಾಗ ಬೆಂಕಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಒ ಪಿ ಸಿಂಗ್ ತಿಳಿಸಿದ್ದಾರೆ.

ಮಧ್ಯಪ್ರದೇಶದ ಪ್ರಸ್ತುತ 230 ಶಾಸಕರಲ್ಲಿ 186 ಮಂದಿ ಕೋಟ್ಯಾಧಿಪತಿಗಳು

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದರು.
ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಮನೆಯ ನೆಲ ಮಹಡಿಯಲ್ಲಿ ವಾಸಿಸುತ್ತಿರುವ ಮೌರ್ಯ ಅವರ ಹಿರಿಯ ಸಹೋದರ ಭೂಪ್ ಸಿಂಗ್ ಹೇಳಿದ್ದಾರೆ.

ಬೆಂಕಿ ಹೊತ್ತಿಕೊಂಡ ನಂತರ ಮೌರ್ಯ ಅವರ ಪತ್ನಿ ಎಚ್ಚರಿಕೆ ನೀಡಿದರು. ಎಲ್ಲರೂ ಮೇಲಕ್ಕೆ ಧಾವಿಸಿದರು, ಅಲ್ಲಿ ಮೌರ್ಯ ಮತ್ತು ಅವರ ಮಕ್ಕಳು ಕೋಣೆಯಲ್ಲಿ ಸಿಕ್ಕಿಬಿದ್ದರು ಎಂದು ಸಿಂಗ್ ಹೇಳಿದರು.ಸಿಲಿಂಡರ್ ಹೊರತೆಗೆಯಲು ಯತ್ನಿಸಿದರೂ ಅದು ಸಿಲುಕಿ ಬೆಂಕಿ ವ್ಯಾಪಿಸಿತು. ವಿಧಿವಿಜ್ಞಾನ ತಂಡವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ತನಿಖೆ ನಡೆಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಮ್ಮುವಿನಲ್ಲಿ ಟ್ರಕ್ ಉರುಳಿ ಬಿದ್ದು ನಾಲ್ವರು ಸಾವು

ಜಮ್ಮು, ಅ 20 (ಪಿಟಿಐ) – ರಸ್ತೆ ಬದಿ ಸೇತುವೆಗೆ ಟ್ರಕ್ ಉರುಳಿ ನಾಲ್ವರು ಸಾವನ್ನಪ್ಪಿರುವ ಘಟನೆ ಜಮ್ಮು-ಕಾಶ್ಮೀರದಲ್ಲಿ ನಡೆದಿದೆ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಸೇತುವೆಯಿಂದ ಉರುಳಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಮಧ್ಯಪ್ರದೇಶ ಚುನಾವಣೆ : ಫೈನಲ್ ಆಯ್ತು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

ಜಜ್ಜರಕೋಟ್ಲಿಯಲ್ಲಿ ಟ್ರಕ್ ಸೇತುವೆಯ ಡಿವೈಡರ್‍ಗೆ ಡಿಕ್ಕಿ ಹೊಡೆದು ರಸ್ತೆ ಬದಿಯ ಸೇತುವೆಗೆ ಉರುಳಿಬಿತ್ತು.
ಈ ಘಟನೆಯಲ್ಲಿ ಟ್ರಕ್ ಚಾಲಕ ಮತ್ತು ಕ್ಲೀನರ್ ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ.

100ನೇ ವಸಂತಕ್ಕೆ ಕಾಲಿರಿಸಿದ ಅಚ್ಯುತಾನಂದನ್

ತಿರುವನಂತಪುರಂ, ಅ 20 (ಪಿಟಿಐ)-ಕೇರಳ ಆಡಳಿತಾರೂಢ ಸಿಪಿಐ(ಎಂ)ನ ಇತಿಹಾಸದಲ್ಲೇ ಅತ್ಯಂತ ಜನಪ್ರಿಯ ನಾಯಕರಲ್ಲಿ ಒಬ್ಬರಾದ ಹಿರಿಯ ಕಮ್ಯುನಿಸ್ಟ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ವಿ ಎಸ್ ಅಚ್ಯುತಾನಂದನ್ ಅವರು ಇಂದು 100 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

1964 ರಲ್ಲಿ ಅವಿಭಜಿತ ಸಿಪಿಐನಿಂದ ಬೇರ್ಪಟ್ಟ ನಂತರ ಸಿಪಿಐ(ಎಂ)ನ ಸಂಸ್ಥಾಪಕ-ನಾಯಕರಾಗಿದ್ದ ವೆಲಿಕ್ಕಾಕತ್ತು ಶಂಕರನ್ ಅಚ್ಯುತಾನಂದನ್ ಅವರ ಅಭಿಮಾನಿಗಳಿಂದ ಕಾಮ್ರೇಡ್ ವಿಎಎಸ್ ಎಂದು ಜನಪ್ರಿಯರಾಗಿದ್ದರು.

ವಯೋಸಹಜ ಸಮಸ್ಯೆಗಳಿಂದಾಗಿ ಅನುಭವಿ ಸಾಕಷ್ಟು ಸಮಯದಿಂದ ಸಾರ್ವಜನಿಕ ಮತ್ತು ಮಾಧ್ಯಮದ ಪ್ರಜ್ವಲಿಸುವಿಕೆಯಿಂದ ದೂರವಿದ್ದರೂ, ಅಪ್ರತಿಮ ನಾಯಕನ ಆದರ್ಶಗಳು ಮತ್ತು ವಿವಿಧ ಸಾಮಾಜಿಕ ಮತ್ತು ರಾಜಕೀಯ ವಿಷಯಗಳಲ್ಲಿ ಅವರು ತೆಗೆದುಕೊಂಡ ಕಠಿಣ ನಿಲುವುಗಳು ಇನ್ನೂ ಚರ್ಚೆಯ ವಿಷಯವಾಗಿದೆ.

ಅವರು ತಮ್ಮ ಪುತ್ರ ಅರುಣ್ ಕುಮಾರ್ ಅವರ ನಿವಾಸದಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ದಿನವನ್ನು ಕಳೆಯುತ್ತಿದ್ದಾರೆ ಮತ್ತು ಅವರ ಆರೋಗ್ಯವನ್ನು ಪರಿಗಣಿಸಿ ಸಂದರ್ಶಕರು ಅವರನ್ನು ನೇರವಾಗಿ ಸ್ವಾಗತಿಸಲು ಅನುಮತಿಸಲಾಗುವುದಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮಧ್ಯಪ್ರದೇಶ ಚುನಾವಣೆ : ಫೈನಲ್ ಆಯ್ತು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

ಮಾಕ್ರ್ಸ್‍ವಾದಿ ನಾಯಕನ 100ನೇ ಜನ್ಮದಿನಾಚರಣೆ ಅಂಗವಾಗಿ ಪಕ್ಷ ಹಾಗೂ ರಾಜಕೀಯ ಭೇದವಿಲ್ಲದೆ ಸಮಾಜದ ವಿವಿಧ ಕ್ಷೇತ್ರಗಳ ಜನರು ಅವರಿಗೆ ಶುಭಾಶಯ ಕೋರಿದರು. ರಾಜ್ಯಪಾಲ ಆರಿ ಮೊಹಮ್ಮದ್ ಖಾನ್ ಅವರು ದೂರವಾಣಿ ಮೂಲಕ ಅಚ್ಯುತಾನಂದನ್ ಅವರಿಗೆ ಹೃತ್ಪೂರ್ವಕ ಶುಭಾಶಯಗಳು ಮತ್ತು ಶುಭಾಶಯಗಳನ್ನು ತಿಳಿಸಿದ್ದಾರೆ ಎಂದು ಕೇರಳ ರಾಜಭವನ ತಿಳಿಸಿದೆ.

ಮಾಜಿ ಮುಖ್ಯಮಂತ್ರಿ ಅಚ್ಯುತಾನಂದನ್ ಅವರ 100 ನೇ ಹುಟ್ಟುಹಬ್ಬದಂದು ನನ್ನ ಹೃತ್ಪೂರ್ವಕ ಶುಭಾಶಯಗಳು ಮತ್ತು ಶುಭಾಶಯಗಳು. ಪ್ರೀತಿಯ ಮತ್ತು ಗೌರವಾನ್ವಿತ ಜನನಾಯಕನಿಗೆ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಬಯಸುವ ಕೇರಳದ ಜನರೊಂದಿಗೆ ನಾನು ಸೇರುತ್ತೇನೆ ಎಂದು ಅವರು ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಆಧುನಿಕ ಕೇರಳದ ಇತಿಹಾಸದ ಜೊತೆಗೆ ಪಯಣಿಸಿದ ವ್ಯಕ್ತಿ ಕಾಮ್ರೇಡ್ ವಿಎಸ್ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ದಕ್ಷಿಣದ ರಾಜ್ಯವನ್ನು ಇಂದಿನ ಕೇರಳವನ್ನಾಗಿ ಪರಿವರ್ತಿಸುವಲ್ಲಿ ವಿಎಸ್ ಸೇರಿದಂತೆ ನಾಯಕರ ಪಾತ್ರ ನಿರ್ವಿವಾದವಾಗಿದೆ ಎಂದು ಅವರು ಸಂದೇಶದಲ್ಲಿ ತಿಳಿಸಿದ್ದಾರೆ.

ವಸುಂಧರಾ ರಾಜೆ ಅವರನ್ನು ಸ್ಮರಿಸಿಕೊಂಡ ಗೆಹ್ಲೋಟ್

ಜನಪ್ರತಿನಿ„ಯಾಗಿ, ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಯಾಗಿ ವಿವಿಧ ಸಮಸ್ಯೆಗಳಲ್ಲಿ ಅವರು ಮಧ್ಯಸ್ಥಿಕೆ ವಹಿಸಿರುವುದು ಗಮನಾರ್ಹ ಎಂದು ಹೇಳಿದ ವಿಜಯನ್ ಅವರು ಅಚ್ಯುತಾನಂದನ್ ಅವರು ಜನಸಾಮಾನ್ಯರೊಂದಿಗೆ ಮತ್ತು ಅವರ ಶೋಷಣೆಯ ವಿರುದ್ಧ ನಿಂತ ನಾಯಕರಾಗಿದ್ದರು ಎಂದು ಬಣ್ಣಿಸಿದ್ದಾರೆ.

ರಾಮ್‍ಲೀಲಾ ಪಂಡಲ್ ಹಿಂದೆ ಯುವಕನ ಹತ್ಯೆ

ಗುರುಗ್ರಾಮ್,ಅ. 20 (ಪಿಟಿಐ)- ಇಂದು ಮುಂಜಾನೆ ಇಲ್ಲಿನ ರಾಮಲೀಲಾ ಪಂಡಲ್‍ನ ಹಿಂದೆ ಇಬ್ಬರು ವ್ಯಕ್ತಿಗಳೊಂದಿಗೆ ನಡೆದ ವಾಗ್ವಾದದ ನಂತರ ಯುವಕನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭೀಮ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಡಿಜೆ ಆಪರೇಟರ್ ಜೊತೆ ಕೆಲಸ ಮಾಡುತ್ತಿದ್ದ ಆಶಿಶ್ (20) ಕೊಲೆಯಾದ ದುರ್ದೈವಿಯಾಗಿದ್ದಾನೆ. ಈತ ಸ್ನೇಹಿತನೊಂದಿಗೆ ರಾಮಲೀಲಾ ವೀಕ್ಷಿಸಲು ತೆರಳಿದ್ದ. ಜಗಳದ ಹಿಂದಿನ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಜಗಳದ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿ ಭೀಮ್ ನಗರದ ನಿವಾಸಿ ಆಶಿಶ್ ಅವರನ್ನು ಆಸ್ಪತ್ರೆಗೆ ಸಾಗಿಸಿತು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಆಶಿಶ್ ಅವರ ಚಿಕ್ಕಪ್ಪ ಸೂರಜ್ ನೀಡಿದ ದೂರಿನ ಪ್ರಕಾರ, ಗುರುವಾರ ರಾತ್ರಿ ಅವರ ಸೋದರಳಿಯ ತನ್ನ ಸ್ನೇಹಿತ ಕರಣ್ ಅವರೊಂದಿಗೆ ರಾಮಲೀಲಾ ವೀಕ್ಷಿಸಲು ಹೋಗಿದ್ದರು. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸೂರಜ್‍ಗೆ ಆಶಿಶ್‍ಗೆ ಗುಂಡು ತಗುಲಿದ ಮಾಹಿತಿ ಲಭಿಸಿದೆ.

ವಸುಂಧರಾ ರಾಜೆ ಅವರನ್ನು ಸ್ಮರಿಸಿಕೊಂಡ ಗೆಹ್ಲೋಟ್

ಆಸ್ಪತ್ರೆಗೆ ತಲುಪಿದ ನಂತರ, ಆಶಿಶ್ ಸ್ನೇಹಿತರಾದ ಕರಣ್ ಮತ್ತು „ೀರಜ್ ಅವರು ನಿಶಿ ಮತ್ತು ರೋಹನ್ ಎಂಬ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ, ಅವರೊಂದಿಗೆ ಜಗಳವಾಡಿದರು ಎಂದು ಸೂರಜ್ ದೂರಿನಲ್ಲಿ ತಿಳಿಸಿದ್ದಾರೆ.

ಸೂರಜ್ ದೂರಿನ ಆಧಾರದ ಮೇಲೆ ನಿಶಿ ಮತ್ತು ರೋಹನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 34 (ಸಾಮಾನ್ಯ ಉದ್ದೇಶ) ಮತ್ತು ಶಸಾಸ ಕಾಯ್ದೆಯಡಿಯಲ್ಲಿ FIR ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಗ್ವಾದದ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆರೋಪಿಗಳು ಪರಾರಿಯಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತನಿಖಾಧಿಕಾರಿ ಸಬ್ ಇನ್ಸ್‍ಪೆಕ್ಟರ್ ಬಹಿ ರಾಮ್ ಕಟಾರಿಯಾ ತಿಳಿಸಿದ್ದಾರೆ.

ನಿಜ್ಜರ್ ಹತ್ಯೆ ಹೇಳಿಕೆ ಮುನ್ನ ಭಾರತದೊಂದಿಗೆ ಚರ್ಚೆ ನಡೆಸಿದ್ದೇವೆ ; ಕೆನಡಾ

ಒಟ್ಟಾವಾ,ಅ.20- ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ನವದೆಹಲಿ ಭಾಗಿಯಾಗಿರುವ ಕುರಿತು ಕೆನಡಾ ಸಂಸತ್ತಿನಲ್ಲಿ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಹೇಳಿಕೆ ನೀಡುವ ಮುನ್ನ ನಾವು ಭಾರತ ಸರ್ಕಾರದೊಂದಿಗೆ ಹಲವಾರು ಮಾತುಕತೆಗಳನ್ನು ನಡೆಸಿದ್ದೇವು ಎಂದು ಕೆನಡಾ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಹೇಳಿದ್ದಾರೆ.

ಒಟ್ಟಾವಾದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜೋಲಿ, ಈ ಸಂಭಾಷಣೆಗಳಲ್ಲಿ ಭಾರತೀಯ ಅಧಿಕಾರಿಗಳಿಗೆ ವಿಶ್ವಾಸಾರ್ಹ ಆರೋಪಗಳ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ಅವರು ಹೇಳಿದರು. 41 ಕೆನಡಾದ ರಾಜತಾಂತ್ರಿಕರು ಮತ್ತು ದೆಹಲಿಯಲ್ಲಿರುವ ಅವರ ಅವಲಂಬಿತರಿಗೆ ರಾಜತಾಂತ್ರಿಕ ವಿನಾಯಿತಿಗಳನ್ನು ತೆಗೆದುಹಾಕುವ ನಿರ್ಧಾರವನ್ನು ನಂಬಲಸಾಧ್ಯ ಎಂದು ಅವರು ಬಣ್ಣಿಸಿದ್ದಾರೆ.

ಭಾರತ-ಜರ್ಮನ್ ನಡುವೆ ಬಾಂಧವ್ಯ ಉತ್ತಮವಾಗಿದೆ : ಫಿಲಿಪ್ ಅಕರ್‍ಮನ್

ಕೆನಡಾವು ಭಾರತಕ್ಕೆ ತನ್ನ ಹಕ್ಕುಗಳ ಬಗ್ಗೆ ಪುರಾವೆಗಳನ್ನು ತೋರಿಸಿದೆಯೇ ಎಂಬ ಪ್ರಶ್ನೆಗೆ, ಜೋಲಿ, ಪ್ರಧಾನಿ ಮನೆ ಮುಂದೆ ಹೋಗಿ ಘೋಷಣೆ ಮಾಡುವ ಮೊದಲು ನಾವು ಭಾರತದೊಂದಿಗೆ ಹಲವಾರು ಮಾತುಕತೆಗಳನ್ನು ನಡೆಸಿದ್ದೇವೆ. ಇದು ಭಾರತ ಸರ್ಕಾರಕ್ಕೆ ಆಶ್ಚರ್ಯವೇನಿಲ್ಲ ಮತ್ತು ಈ ವಿಭಿನ್ನ ಸಂಭಾಷಣೆಗಳ ಮೂಲಕ ಭಾರತೀಯ ಅಧಿಕಾರಿಗಳಿಗೆ ನಂಬಲರ್ಹ ಆರೋಪಗಳ ಬಗ್ಗೆ ಅರಿವು ಮೂಡಿಸಲಾಯಿತು.

ಹಾಗಾಗಿ ಅದರ ಆಧಾರದ ಮೇಲೆ, 41 ರಾಜತಾಂತ್ರಿಕರ ರಾಜತಾಂತ್ರಿಕ ವಿನಾಯಿತಿಯನ್ನು ಪೂರ್ವನಿದರ್ಶನವಾಗಿ ಹೊಂದಿಸುವ ಮತ್ತು ಹಿಂತೆಗೆದುಕೊಳ್ಳುವ ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಭಾರತ ನಿರ್ಧರಿಸಿದೆ, ಇದು ಅಭೂತಪೂರ್ವ ಮಾತ್ರವಲ್ಲ, ಅಂತರರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದೆ ಎಂದಿದ್ದಾರೆ.

ಮಧ್ಯಪ್ರದೇಶದ ಪ್ರಸ್ತುತ 230 ಶಾಸಕರಲ್ಲಿ 186 ಮಂದಿ ಕೋಟ್ಯಾಧಿಪತಿಗಳು

ನವದೆಹಲಿ,ಅ.20- ಮಧ್ಯ ಪ್ರದೇಶದ ಪ್ರಸ್ತುತ 230 ಹಾಲಿ ಶಾಸಕರ ಪೈಕಿ 186 ಶಾಸಕರು ಕೋಟ್ಯಾಧಿಪತಿಗಳಾಗಿದ್ದಾರೆ ಎಂದು ಅಸೋಸಿಯೇಷನ್ ಫರ್ ಡೆಮಾಕ್ರಟಿಕ್ ರಿಫಮ್ರ್ಸ್ ಹೇಳಿದೆ. 230 ಹಾಲಿ ಶಾಸಕರು Rs 10.76 ಕೋಟಿ ಮೌಲ್ಯದ ಸರಾಸರಿ ಆಸ್ತಿ ಹೊಂದಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ, ಇದು 2013 ರ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಚುನಾಯಿತರಾದ ಪ್ರತಿ ಶಾಸಕರ Rs 5.24 ಕೋಟಿಗಿಂತ 105% ಹೆಚ್ಚು ಮತ್ತು Rs 1.44 ಕೋಟಿ ಸರಾಸರಿ ಆಸ್ತಿಗಿಂತ 647% ಹೆಚ್ಚಾಗಿದೆ.

ವರದಿಯ ಪ್ರಕಾರ, 129 ಭಾರತೀಯ ಜನತಾ ಪಕ್ಷದ ಶಾಸಕರಲ್ಲಿ 107 ಕೋಟ್ಯಾ„ಪತಿಗಳಾಗಿದ್ದರೆ, 97 ಕಾಂಗ್ರೆಸ್ ಶಾಸಕರಲ್ಲಿ 76 ಕೋಟ್ಯಾಧಿಪತಿಗಳಿದ್ದರೆ ನಾಲ್ಕು ಸ್ವತಂತ್ರ ಶಾಸಕರಲ್ಲಿ ಮೂವರು ಕೋಟ್ಯಾಧಿಪತಿಗಳಾಗಿದ್ದಾರೆ. ಮಧ್ಯಪ್ರದೇಶ 2008 ರ ಚುನಾವಣೆಯಲ್ಲಿ ಆಯ್ಕೆಯಾದ ಕೋಟ್ಯಾಧಿಪತಿ ಶಾಸಕರ ಸಂಖ್ಯೆ ಕೇವಲ 84 ಆಗಿತ್ತು, ಇದು 2013 ರ ಚುನಾವಣೆಯಲ್ಲಿ ಚುನಾಯಿತರಾದ 161 ಕೋಟ್ಯಾ„ಪತಿ ಶಾಸಕರಿಗೆ 92% ರಷ್ಟು ಹೆಚ್ಚಾಗಿದೆ. 2018 ರ ಚುನಾವಣೆಯಲ್ಲಿ ಚುನಾಯಿತರಾದ ಕೋಟ್ಯಾ„ಪತಿ ಶಾಸಕರ ಸಂಖ್ಯೆಯು 186 ಶಾಸಕರಿಗೆ 15.5% ರಷ್ಟು ಹೆಚ್ಚಾಗಿದೆ.

ವಸುಂಧರಾ ರಾಜೆ ಅವರನ್ನು ಸ್ಮರಿಸಿಕೊಂಡ ಗೆಹ್ಲೋಟ್

2013 ರಲ್ಲಿ 118 ರಷ್ಟಿದ್ದ ಆಡಳಿತಾರೂಢ ಬಿಜೆಪಿಯ ಕೋಟ್ಯಾಧಿಪತಿ ಶಾಸಕರ ಸಂಖ್ಯೆ 2018 ರ ಚುನಾವಣೆಯಲ್ಲಿ ಶೇ.9 ರಷ್ಟು ಕುಸಿದು 107 ಕ್ಕೆ ತಲುಪಿದೆ, ಆದರೆ 2013 ರಲ್ಲಿ 40 ರಷ್ಟಿದ್ದ ಕೋಟ್ಯಾ„ಪತಿ ಕಾಂಗ್ರೆಸ್ ಶಾಸಕರ ಸಂಖ್ಯೆ 2018 ರಲ್ಲಿ 97 ಕ್ಕೆ 142 ಪರ್ಸೆಂಟ್‍ಗೆ ಜಿಗಿದಿದೆ. ಬಿಜೆಪಿಯ ಸಂಜಯ್ ಪಾಠಕ್ ಮಧ್ಯಪ್ರದೇಶದ ಅತ್ಯಂತ ಶ್ರೀಮಂತ ಶಾಸಕ ಇವರು 2013 ರಲ್ಲಿ ? 141 ಕೋಟಿಗಿಂತ ಶೇ.60ರಷ್ಟಯ ಹೆಚ್ಚು ಒಟ್ಟು Rs 226 ಕೋಟಿ ಮೌಲ್ಯದ ಒಟ್ಟು ಆಸ್ತಿಯನ್ನು ಹೊಂದಿದ್ದಾರೆ.

ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಅವರು ಶ್ರೀಮಂತ ಶಾಸಕರ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದು, ಒಟ್ಟು Rs 124 ಕೋಟಿ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು 2018 ರ ಚುನಾವಣೆಯಲ್ಲಿ ಸಲ್ಲಿಸಿದ ಅಫಿಡವಿಟ್ ಪ್ರಕಾರ Rs 7 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿದ್ದಾರೆ.

ಮಧ್ಯಪ್ರದೇಶದ ಬಡ ಶಾಸಕರು
ಮಧ್ಯಪ್ರದೇಶದ ಆರು ಬಿಜೆಪಿ ಶಾಸಕರು ಮತ್ತು ನಾಲ್ವರು ಕಾಂಗ್ರೆಸ್ ನಾಯಕರು ಅತಿ ಕಡಿಮೆ ಆಸ್ತಿ ಹೊಂದಿದ್ದಾರೆ. ಪಂಧನಾ ಕ್ಷೇತ್ರದಿಂದ ಬಿಜೆಪಿಯ ಮೊದಲ ಬುಡಕಟ್ಟು ಶಾಸಕ ರಾಮ್ ಡಂಗೋರ್ 50,000 ರೂ.ಮೌಲ್ಯದ ಆಸ್ತಿ ಹೊಂದಿದ್ದರೆ, ಮೂರನೇ ಬಾರಿ ಬಿಜೆಪಿ ಶಾಸಕಿ ಮತ್ತು ಸಚಿವೆ ಉಷಾ ಠಾಕೂರ್ 7 ಲಕ್ಷ ಮೌಲ್ಯದ ಆಸ್ತಿ ಹೊಂದಿದ್ದಾರೆ. ಆಡಳಿತ ಪಕ್ಷದ ಬುಡಕಟ್ಟು ಶಾಸಕ ಶರದ್ ಕೋಲ್ ಕೂಡ 8.4 ಲಕ್ಷ ಮೌಲ್ಯದ ಒಟ್ಟು ಆಸ್ತಿ ಹೊಂದಿರುವ ಪಟ್ಟಿಯಲ್ಲಿದ್ದಾರೆ.

41 ರಾಜತಾಂತ್ರಿಕರನ್ನು ಭಾರತದಿಂದ ವಾಪಸ್ ಕರೆಸಿಕೊಂಡ ಕೆನಡಾ

ಮಧ್ಯಪ್ರದೇಶದ ಶೇ.40ರಷ್ಟು ಶಾಸಕರು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದು, ಇವರಲ್ಲಿ ಶೇ.20ರಷ್ಟು ಶಾಸಕರು ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ವರದಿ ಹೇಳಿದೆ.

ಆಡಳಿತಾರೂಢ ಬಿಜೆಪಿಯಲ್ಲಿ ಒಟ್ಟು 129 ಶಾಸಕರ ಪೈಕಿ ಶೇ.30ರಷ್ಟು ಮಂದಿ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದು, ಶೇ.16ರಷ್ಟು ಮಂದಿ ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ. ಕಾಂಗ್ರೆಸ್‍ನಲ್ಲಿ, ಒಟ್ಟು 97 ಶಾಸಕರಲ್ಲಿ 54 ಮಂದಿ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದರೆ, ಶೇ,26ರಷ್ಟು ಶಾಸಕರು ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ.