Thursday, November 6, 2025
Home Blog Page 1883

ಶಾಹೀದ್ ಅಫ್ರಿದಿ ಸಹೋದರಿ ಸಾವು

ಇಸ್ಲಾಮಾಬಾದ್.ಅ.17- ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಅವರ ಸಹೋದರಿ ಇಂದು ನಿಧನರಾಗಿದ್ದಾರೆ, ತಮ್ಮ ಸಹೋದರಿ ಇಹಲೋಕ ತ್ಯಜಿಸಿದ್ದಾರೆ. ಅವರು ನಮ್ಮೊಂದಿಗೆ ಇನ್ನಿಲ್ಲ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಫ್ರಿದಿ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಪ್ರಕಟಿಸಿದ್ದಾರೆ.

ತನ್ನ ಸಹೋದರಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದರು ಆದರೆ, ಇಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅಫ್ರಿದಿ ಹೇಳಿಕೊಂಡಿದ್ದಾರೆ. ಖಂಡಿತವಾಗಿಯೂ ನಾವು ಅಲ್ಲಾಹನಿಗೆ ಸೇರಿದ್ದೇವೆ ಮತ್ತು ನಾವು ಹಿಂತಿರುಗುತ್ತೇವೆ.

ನಮ್ಮ ಪ್ರೀತಿಯ ಸಹೋದರಿ ನಿಧನರಾದರು ಮತ್ತು ಅವರ ನಮಾಜ್ ಇ ಜನಜಾಹ್ 17.10.2023 ಕ್ಕೆ ಝುಹುರ್ ಪ್ರಾರ್ಥನೆಯ ನಂತರ ಜಕರಿಯಾ ಮಸೀದಿ ಮುಖ್ಯ 26 ನೇ ಬೀದಿ ಖಯಾಬಾನ್ ಇ ಗಾಲಿಬ್ ನಲ್ಲಿ ನಡೆಯಲಿದೆ ಎಂದು ನಾವು ಭಾರವಾದ ಹೃದಯದಿಂದ ನಿಮಗೆ ತಿಳಿಸುತ್ತೇವೆ ಎಂದು ಅಫ್ರಿದಿ ಎಕ್ಸ್ ಮಾಡಿದ್ದಾರೆ.

ನಿಂತಿದ್ದ ಬೈಕ್‍ಗೆ ಟ್ಯಾಂಕರ್ ಡಿಕ್ಕಿ, ಅವಳಿ ಸಹೋದರಿಯರ ಸಾವು

ದುರಂತದ ನಂತರ ಕ್ರಿಕೆಟಿಗನಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಮಂದಿ ಸಂತಾಪ ಸೂಚಿಸಿದ್ದಾರೆ.

ಬೆಂಗಳೂರಿನ 4 ದಿಕ್ಕಿನಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಆಕ್ರೋಶ

ಬೆಂಗಳೂರು,ಅ.17- ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಸ ವಿಲೇವಾರಿ ಘಟಕಗಳ ಸ್ಥಾಪನೆಗೆ ಬಿಬಿಎಂಪಿ ಹುಡುಕಾಟ ನಡೆಸಿದ್ದಾರೆ. ಬಿಬಿಎಂಪಿಯ ಈ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ನಗರದಲ್ಲಿ ದಿನೇ ದಿನೇ ಕಸದ ಸಮಸ್ಯೆ ಉಲ್ಬಣಗೊಳ್ಳುತ್ತಿರುವುದರಿಂದ ಬೆಂಗಳೂರಿನ ಅಕ್ಕಪಕ್ಕದ ತಾಲೂಕುಗಳಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಜಾಗ ಹುಡುಕಾಟ ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಪ್ರತಿ ನಿತ್ಯ ನಗರದಲ್ಲಿ 1600 ರಿಂದ 1700 ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಕಸ ವಿಲೇವಾರಿಗೆ ಸಮಸ್ಯೆ ಉಂಟಾಗಿರುವುದರಿಂದ ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡಲು ಹುಡುಕಾಟ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ನಿಂತಿದ್ದ ಬೈಕ್‍ಗೆ ಟ್ಯಾಂಕರ್ ಡಿಕ್ಕಿ, ಅವಳಿ ಸಹೋದರಿಯರ ಸಾವು

ಬಿಬಿಎಂಪಿಯ ಈ ನಿರ್ಧಾರಕ್ಕೆ ಬೆಂಗಳೂರು ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ರಾಜಧಾನಿ ಕಸವನ್ನು ನಮ್ಮ ಪ್ರದೇಶಗಳಿಗೆ ತರಬೇಡಿ ತಂದರೆ ಭಾರಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಸದ್ಯ ಬೆಂಗಳೂರಿನ ಏಳು ಸಂಸ್ಕರಣ ಘಟಕಗಳಿವೆ ಇದರ ಜತೆ ನಗರದ 2ಎರಡು ಭಾಗದಲ್ಲಿ ಲ್ಯಾಂಡ್ ಫಿಲಿಂಗ್ ಸಹ ಮಾಡಲಾಗುತ್ತಿದೆ.

ಮಿಟಗಾನ ಹಳ್ಳಿ ಹಾಗೂ ಬೆನ್ನಿಗಾನ ಹಳ್ಳಿಯಲ್ಲಿ ಕಸವನ್ನು ಡಂಪ್ ಮಾಡಲಾಗುತ್ತಿದೆ. ಇದೀಗಾ ಹೊಸದಾಗಿ ನಗರದ ಹೊರ ವಲಯದ ನಾಲ್ಕು ಭಾಗದಲ್ಲಿ ಹೊಸ ಜಾಗ ಹುಡುಕಾಟಕ್ಕೆ ಬಿಬಿಎಂಪಿ ಮುಂದಾಗಿದೆ. ನೆಲಮಂಗಲ, ಯಲಹಂಕ, ಬಿಡದಿ ಹಾಗೂ ರಾಮನಗರದಲ್ಲಿ ಕಸ ಸಂಸ್ಕರಣ ಘಟಕ ನಿರ್ಮಾಣಕ್ಕೆ ಬಿಬಿಎಂಪಿ ಲೆಕ್ಕಚಾರ ಹಾಕಿರುವ ವಿಚಾರ ತಿಳಿದಿರುವ ಅಲ್ಲಿನ ಸ್ಥಳೀಯರು ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸದ್ಯ ಇರುವ ಏಳು ಸಂಸ್ಕರಣ ಘಟಕಗಳ ಸಂಸ್ಕರಣ ಸಾಮಥ್ರ್ಯ ಕಡಿಮೆಯಾಗಿದೆ ಈ ಸಂಸ್ಕರಣ ಘಟಕಗಳು ಸಾರ್ವಜನಿಕ ವಲಯದಲ್ಲಿದ್ದು ಸಾರ್ವಜನಿಕರಿಂದ ಘಟಕಗಳ ತೆರವಿಗೆ ಆಕ್ರೋಶ ಹೆಚ್ಚಾಗಿದೆ ಹೀಗಾಗಿ ಮುಂದಿನ ದಿನಗಳಲ್ಲಿ ಕಸ ಉತ್ಪಾದನೆ ಹೆಚ್ಚಾಗುವುದನ್ನು ಗಮನವಿರಿಸಿ ಹೊರವಲಯಗಳಲ್ಲಿ ಹೊಸ ಘಟಕಗಳ ಸ್ಥಾಪನೆಗೆ ಬಿಬಿಎಂಪಿ ಮುಂದಾಗಿದೆ. ಆದರಲ್ಲೂ ನೆಲಮಂಗಲ, ಬಿಡದಿ, ರಾಮನಗರ, ಯಲಹಂಕ ಭಾಗದಲ್ಲಿ ಸಂಸ್ಕರಣ ಘಟಕ ಸ್ಥಾಪಿಸಿ ಪ್ರತಿ ಘಟಕದಲ್ಲಿ 1000 ಟನ್ ಸಾಮಥ್ರ್ಯದ ಕಸ ಸಂಸ್ಕರಣೆ ಮಾಡುವ ಉದ್ದೇಶವನ್ನು ಬಿಬಿಎಂಪಿ ಹೊಂದಿದೆ ಎನ್ನಲಾಗಿದೆ.

ಈ ಘಟಕಗಳಲ್ಲಿ ಲ್ಯಾಂಡ್ ಫಿಲಿಂಗ್ ಮಾಡಲ್ಲ ಸಂಸ್ಕರಣ ಘಟಕ ಮಾಡ್ತಿವಿ. ಕಸವನ್ನು ಡಂಪ್ ಮಾಡೋದಿಲ್ಲ ಕಸವನ್ನು ವೇಸ್ಟ್ ಟೂ ಎನರ್ಜಿಯಾಗಿ ಸಂಸ್ಕರಣೆ ಮಾಡ್ತಿವಿ. ಒಂದೇ ಕಡೆ ಸಂಸ್ಕರಣ ಘಟಕ ಮಾಡಿದ್ರೆ ಸಾಗಾಣಿಕೆ ವೆಚ್ಚ ಹೆಚ್ಚಾಗುತ್ತೆ ಎನ್ನುತ್ತಾರೆ ತುಷಾರ್ ಗಿರಿನಾಥ್.

ವಿಷ ಅನಿಲ ಉತ್ಪಾದನೆ ಮಾಡದ, ನೆಲ ಜಲಕ್ಕೆ ಹಾನಿ ಮಾಡದ ಡ್ರೈ ಕಸ ಮಾತ್ರ ಲ್ಯಾಂಡ್ ಫಿಲಿಂಗ್ ಮಾಡಲು ನಿರ್ಧಾರ ಮಾಡಿದ್ದೇವೆ ಎನ್ನುತ್ತಾರೆ ಅವರು ಆದರೆ ಅವರ ಮಾತನ್ನು ನಂಬಲು ಸಾಧ್ಯವಿಲ್ಲ. ನಮ್ಮ ಭಾಗದಲ್ಲಿ ಯಾವುದೆ ಘಟಕ ಬೇಡ ಎನ್ನುತ್ತಿದ್ದಾರೆ ನಗರದ ಸುತ್ತಮುತ್ತಲಿನ ಜನ. ಇದೀಗ ಎದುರಾಗಿರುವ ಈ ಸಮಸ್ಯೆಗೆ ಸರ್ಕಾರ ಯಾವ ರೀತಿ ಬಗೆಹರಿಸಿ ನಗರದ ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದೋ ಕಾದು ನೋಡಬೇಕಿದೆ.

ಟ್ರಕ್‍ಗೆ ಬೆಂಕಿ, ನಾಲ್ವರ ಸಜೀವ ದಹನ

ಪೂನಾ,ಅ.17- ಮಹಾರಾಷ್ಟ್ರದ ಪುಣೆಯಲ್ಲಿ ತಡ ರಾತ್ರಿ ಟ್ಯಾಂಕರ್‌ಗೆ ಟ್ರಕ್‍ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಪುಣೆ-ಬೆಂಗಳೂರು ಹೆದ್ದಾರಿಯ ಸ್ವಾಮಿನಾರಾಯಣ ದೇವಸ್ಥಾನ ಮತ್ತು ನವ್ಲೆ ಸೇತುವೆಯ ಬಳಿ ರಾತ್ರಿ 09.30 ರ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇಲ್ನೋಟಕ್ಕೆ ಬ್ರೇಕ್ ವೈಫಲ್ಯದಿಂದ ಟ್ರಕ್ ಕಂಟೇನರ್‌ಗೆ ಡಿಕ್ಕಿ ಹೊಡೆದು ನಂತರ ಮತ್ತೊಂದು ಟ್ರಕ್‍ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿ ಮೇರೆಗೆ ಪುಣೆ ಮಹಾನಗರ ಪಾಲಿಕೆಯ ಅಗ್ನಿಶಾಮಕ ದಳದ ಅ„ಕಾರಿಗಳ ತಂಡ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ.

ನಿಂತಿದ್ದ ಬೈಕ್‍ಗೆ ಟ್ಯಾಂಕರ್ ಡಿಕ್ಕಿ, ಅವಳಿ ಸಹೋದರಿಯರ ಸಾವು

ಸಂತ್ರಸ್ತರ ದೇಹಗಳನ್ನು ಉರಿಯುತ್ತಿರುವ ಟ್ರಕ್‍ನಿಂದ ಹೊರತೆಗೆಯಲಾಯಿತು ಮತ್ತು ಮುಂದಿನ ಪ್ರಕ್ರಿಯೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಘಟನೆ ನಡೆದಾಗ ಟ್ರಕ್‍ನಲ್ಲಿ ಆರು ಮಂದಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅವರಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ, ಇನ್ನಿಬ್ಬರು ಟ್ರಕ್‍ನಿಂದ ಹಾರಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅಪಘಾತದಲ್ಲಿ ಅವರಿಗೂ ಗಾಯಗಳಾಗಿವೆ ಎಂದು ಅವರು ಹೇಳಿದರು. ಆದರೆ ಬಲಿಪಶುಗಳನ್ನು ಇನ್ನೂ ಗುರುತಿಸಲಾಗಿಲ್ಲ ಎಂದು ಅವರು ಹೇಳಿದರು. ಘಟನೆಯ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಹೊರ ರಾಜ್ಯದ ವಾಹನಗಳಿಗೆ ವಿನಾಯತಿ ನೀಡಿದ ಕರ್ನಾಟಕ ಸರ್ಕಾರ

ಬೆಂಗಳೂರು,ಅ.17- ಒಂಬತ್ತು ದಿನಗಳ ಕಾಲ ನಡೆಯುವ ನಾಡಹಬ್ಬ ದಸರಾ ಹಿನ್ನಲೆಯಲ್ಲಿ ವಿಶೇಷವಾಗಿ ಹೊರ ರಾಜ್ಯದಿಂದ ಬರುವ ವಾಹನಗಳಿಗೆ ಪ್ರವೇಶ ಶುಲ್ಕದಿಂದ ವಿನಾಯಿತಿ ನೀಡಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಇತರೆ ರಾಜ್ಯಗಳಿಂದ ಮೈಸೂರು ಮತ್ತು ಕೃಷ್ಣರಾಜ ಸಾಗರಕ್ಕೆ (ಕೆಆರೆಸ್) ತೆರಳುವ ಪ್ರವಾಸಿ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಮತ್ತು ಪ್ರವಾಸೋದ್ಯಮಕ್ಕೆ ಬೆಂಬಲ ನೀಡಲು ಈ ಆದೇಶ ನೀಡಲಾಗಿದೆ.

ಇತರೆ ರಾಜ್ಯಗಳಲ್ಲಿ ನೋಂದಣಿಯಾಗಿರುವ ಪ್ರವಾಸಿ ವಾಹನಗಳು ಮತ್ತು ಆ ರಾಜ್ಯಗಳಲ್ಲಿ ರಸ್ತೆ ತೆರಿಗೆ ಪಾವತಿಸುವ ವಾಹನಗಳಿಗೆ ಅಕ್ಟೋಬರ್ 16 ಮತ್ತು 24ರ ನಡುವೆ ಕರ್ನಾಟಕದಲ್ಲಿ ಪ್ರವೇಶ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗುತ್ತದೆ ಎಂದು ಸಾರಿಗೆ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ.

ಬೆಲ್ಜಿಯಂನಲ್ಲಿ ಭಯೋತ್ಪಾದನಾ ಕೃತ್ಯಕ್ಕೆ ಇಬ್ಬರು ಬಲಿ

ದಸರಾ ಮಹೋತ್ಸವದ ಒಂಬತ್ತು ದಿನಗಳ ಅವಧಿಯಲ್ಲಿ ಮೈಸೂರು ನಗರ ಮತ್ತು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆಆರ್‍ಎಸ್ ಅಣೆಕಟ್ಟೆಗೆ ತೆರಳುವ ವಾಹನಗಳು ಮಾತ್ರ ಶುಲ್ಕ ವಿನಾಯಿತಿ ಪಡೆಯಲು ಅರ್ಹವಾಗಿರುತ್ತವೆ. ತೆರಿಗೆ ವಿನಾಯಿತಿಗಳಿಗೆ ಅರ್ಹರಾಗಲು ಅವರು ವಿಶೇಷ ಪರವಾನಗಿ ಪಡೆಯಬೇಕಾಗುತ್ತದೆ ಎಂದು ಇಲಾಖೆ ಹೇಳಿದೆ. ಕೇರಳ ಮತ್ತು ತಮಿಳುನಾಡಿನಿಂದ ಮ್ಯಾಕ್ಸಿ ಕ್ಯಾಬ್‍ಗಳು, ಟ್ಯಾಕ್ಸಿಗಳು ಮತ್ತು ಪ್ರವಾಸಿ ಬಸ್‍ಗಳು ತೆರಿಗೆ ವಿನಾಯಿತಿಯಿಂದ ಹೆಚ್ಚಿನ ಪ್ರಯೋಜನ ಪಡೆಯಲಿವೆ.

ದಸರಾ ಸಂದರ್ಭದಲ್ಲಿ ಪ್ರತಿದಿನ 2,000 ಟ್ಯಾಕ್ಸಿಗಳು, 1,000 ಮ್ಯಾಕ್ಸಿ ಕ್ಯಾಬ್‍ಗಳು ಮತ್ತು 300 ಪ್ರವಾಸಿ ಬಸ್‍ಗಳು ಮೈಸೂರು ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಬರುತ್ತವೆ. ಪ್ರವೇಶ ಶುಲ್ಕ ಟ್ಯಾಕ್ಸಿಗಳಿಗೆ 300 ರೂ. ಮ್ಯಾಕ್ಸಿ ಕ್ಯಾಬ್‍ಗಳಿಗೆ 1,800-2,000 ರೂ. ಮತ್ತು ಬಸ್‍ಗಳಿಗೆ ಅವುಗಳ ಆಸನ ಸಾಮಥ್ರ್ಯದ ಆಧಾರದ ಮೇಲೆ 15,000 ರೂ.ವರೆಗೆ ಇರುತ್ತದೆ. ಪ್ರತಿ ಪ್ರವೇಶಕ್ಕೆ ಶುಲ್ಕ ವಿಧಿಸಲಾಗುತ್ತದೆ ಅದು ಏಳು ದಿನಗಳವರೆಗೆ ಮಾನ್ಯವಾಗಿರುತ್ತದೆ.

ಸ್ಥಳೀಯ ಆರ್ಥಿಕತೆ ಸುಧಾರಣೆ ತೆರಿಗೆ ವಿನಾಯಿತಿ ಇರುವುದರಿಂದ ದಸರಾ ಸಮಯದಲ್ಲಿ ಮೈಸೂರು ಮತ್ತು ಕೆಆರ್‍ಎಸ್‍ಗೆ ಹೆಚ್ಚಿನ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದ್ದು, ಹೋಟೆಲ್ ಉದ್ಯಮದ ಜೊತೆ ಸ್ಥಳೀಯ ಆರ್ಥಿಕತೆ ಸುಧಾರಣೆಗೆ ಇದು ಅನುಕೂಲವಾಗಲಿದೆ. ಮೈಸೂರು ದಸರಾದಂತೆ ಮಂಗಳೂರು ದಸರಾ ಕೂಡ ವಿಶೇಷವಾಗಿರುವುದರಿಂದ ಇಲ್ಲಿಗೂ ಕೂಡ ತೆರಿಗೆ ವಿನಾಯಿತಿ ಘೋಷಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ರಾಹುಲ್ ಪ್ರಧಾನಿ : ತರೂರ್

32 ಒಕ್ಕೂಟಗಳನ್ನು ಪ್ರತಿನಿಧಿಸುವ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟವು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯಿಂದ ನಷ್ಟವಾಗಿರುವುದರಿಂದ ಸರ್ಕಾರ ಈ ವರ್ಷ ತೆರಿಗೆ ವಿನಾಯಿತಿಯನ್ನು ಘೋಷಿಸುವುದಿಲ್ಲ ಎಂದು ಆತಂಕದಲ್ಲಿತ್ತು.

ಬಿಹಾರದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು

ಬಕ್ಸರ್,ಅ.17- ಬಿಹಾರದ ಬಕ್ಸರ್ ಜಿಲ್ಲೆಯ ಡುಮಾರಾನ್ ನಿಲ್ದಾಣದ ಬಳಿ ಗೂಡ್ಸ್ ರೈಲಿನ ಕೋಚ್ ಹಳಿತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೆ ವಕ್ತಾರರ ಪ್ರಕಾರ, ಘಟನೆ ನಡೆದಾಗ ಗೂಡ್ಸ್ ರೈಲು ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್‍ನಿಂದ ಬಕ್ಸರ್ ಮೂಲಕ ಫತುಹಾಗೆ ತೆರಳುತ್ತಿತ್ತು. ಒಂದು ಕೋಚ್‍ನ ನಾಲ್ಕು ಚಕ್ರಗಳು ಹಳಿತಪ್ಪಿದ ಪರಿಣಾಮ ಲೊಕೊ ಪೈಲಟ್ ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದರು.

ಮಾಹಿತಿಯ ಮೇರೆಗೆ ಹಿರಿಯ ರೈಲ್ವೇ ಅಧಿಕಾರಿಗಳ ತಂಡ ಕೂಡ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು.ರೈಲ್ವೇ ಸಿಬ್ಬಂದಿ ಕೂಡ ಸ್ಥಳಕ್ಕೆ ಆಗಮಿಸಿದ್ದು, ಹಳಿತಪ್ಪಿದ ಕೋಚ್ ಅನ್ನು ಮತ್ತೆ ಹಳಿಗೆ ತರಲು ಪ್ರಯತ್ನ ನಡೆಸುತ್ತಿದ್ದಾರೆ.

ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ರಾಹುಲ್ ಪ್ರಧಾನಿ : ತರೂರ್

ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ವರದಿಯಾದ ಎರಡನೇ ಹಳಿ ತಪ್ಪಿದ ಘಟನೆ ಇದಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಅಕ್ಟೋಬರ್ 11 ರಂದು, ಬಕ್ಸಾರ್‍ನಲ್ಲಿ ಕಾಮಾಖ್ಯ-ಬೌಂಡ್ ನಾರ್ತ್ ಈಸ್ಟ್ ಎಕ್ಸ್‍ಪ್ರೆಸ್‍ನ 21 ಬೋಗಿಗಳು ಹಳಿತಪ್ಪಿದ ನಂತರ ನಾಲ್ವರು ಸಾವನ್ನಪ್ಪಿದರು ಮತ್ತು 42 ಮಂದಿ ಗಾಯಗೊಂಡಿದ್ದರು.

ಪ್ರೇಮ್ ಚಂದ್ ಯಾದವ್ ಮನೆ ಧ್ವಂಸ ಆದೇಶಕ್ಕೆ ತಡೆಯಾಜ್ಞೆ

ಪ್ರಯಾಗ್‍ರಾಜ್,ಆ.17-ಇತ್ತೀಚೆಗೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ನಡೆದಿದ್ದ ಆರು ಮಂದಿಯ ಕೊಲೆ ಪ್ರಕರಣದಲ್ಲಿ ಪ್ರೇಮ್ ಚಂದ್ ಯಾದವ್ ಅವರ ಮನೆಯನ್ನು ಕೆಡವಲು ಡಿಯೋರಿಯಾ ಜಿಲ್ಲೆಯ ಕಂದಾಯ ಅಧಿಕಾರಿಯೊಬ್ಬರ ಆದೇಶಕ್ಕೆ ಅಲಹಾಬಾದ್ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಡಿಯೋರಿಯಾ ತಹಸೀಲ್ದಾರ್ ಅಕ್ಟೋಬರ್ 11 ರಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪ್ರೇಮ್ ಚಂದ್ ಅವರ ಮನೆಯನ್ನು ಕೆಡವಲು ಆದೇಶ ಹೊರಡಿಸಿದ್ದಾರೆ. ಈ ಆದೇಶದ ವಿರುದ್ಧ ಅವರ ತಂದೆ ರಾಮ್ ಭವನ್ ಯಾದವ್ ಹೈಕೋರ್ಟ್ ಮೊರೆ ಹೋಗಿದ್ದರು.

ಅಕ್ಟೋಬರ್ 2 ರಂದು, 50 ವರ್ಷದ ಪ್ರೇಮ್ ಚಂದ್ ಅವರ ಮನೆಗೆ ಹೋದಾಗ ಅವರ ಪ್ರತಿಸ್ಪರ್„ ಸತ್ಯಪ್ರಕಾಶ್ ದುಬೆ ಮತ್ತು ಅವರ ಕುಟುಂಬದವರು ಹರಿತವಾದ ಆಯುಧಗಳಿಂದ ಹಲ್ಲೇನಡೆಸಿ ಹತ್ಯೆ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ, ಪ್ರೇಮ್ ಚಂದ್ ಬೆಂಬಲಿಗರು ದುಬೆ ಅವರ ಮನೆಯ ಮೇಲೆ ದಾಳಿ ಮಾಡಿದರು ಮತ್ತು ದುಬೆ ಮತ್ತು ಮಕ್ಕಳು ಸೇರಿದಂತೆ ಅವರ ಕುಟುಂಬದ ಐದು ಸದಸ್ಯರನ್ನು ಬರ್ಬರವಾಗಿ ಕೊಂದು ಹಾಕಿದ್ದರು.
ಈ ಆದೇಶದ ವಿರುದ್ಧ ರಾಮ್ ಭವನ್ ಯಾದವ್ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ನ್ಯಾಯಮೂರ್ತಿ ಚಂದ್ರಕುಮಾರ್ ರೈ ಈ ಆದೇಶ ನೀಡಿದ್ದಾರೆ.

ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ರಾಹುಲ್ ಪ್ರಧಾನಿ : ತರೂರ್

ಯುಪಿ ಕಂದಾಯ ಸಂಹಿತೆ, 2006 ರ ಸೆಕ್ಷನ್ 67 (5) ರ ಅಡಿಯಲ್ಲಿ ಮೇಲ್ಮನವಿಯ ಪರಿಹಾರವನ್ನು ಪಡೆಯದೆ ರಾಮ ಭವನವು ತ್ವರಿತ ಅರ್ಜಿಯನ್ನು ಸಲ್ಲಿಸಿರುವುದರಿಂದ ಅ„ಕಾರಿಗಳು ಮನೆಯನ್ನು ಕೆಡವಲು ಹಠ ಹಿಡಿದಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.

ನಿಂತಿದ್ದ ಬೈಕ್‍ಗೆ ಟ್ಯಾಂಕರ್ ಡಿಕ್ಕಿ, ಅವಳಿ ಸಹೋದರಿಯರ ಸಾವು

ಪೂನಾ,ಅ.17-ಇಲ್ಲಿನ ವಿಶ್ರಾಂತಿವಾಡಿ ಚೌಕ್‍ನಲ್ಲಿ ಪೆಟ್ರೋಲ್ ಟ್ಯಾಂಕರ್ ಒಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂರು ವರ್ಷದ ಅವಳಿ ಸಹೋದರಿಯರು ಸಾವನ್ನಪ್ಪಿ ಅವರ ಪೋಷಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಪೊಲೀಸರ ಪ್ರಕಾರ, ಸತೀಶ್ ಕುಮಾರ್ ಝಾ (40) ತನ್ನ 3 ವರ್ಷದ ಅವಳಿ ಹೆಣ್ಣುಮಕ್ಕಳು ಮತ್ತು ಹೆಂಡತಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ವಿಶ್ರಂತಿವಾಡಿ ಚೌಕ್‍ನಲ್ಲಿ ಟ್ರಾಫಿಕ್ ಲೈಟ್‍ನಲ್ಲಿ ನಿಲ್ಲಿಸಿದ್ದಾಗ ಈ ಅಪಘಾತ ಸಂಭವಿಸಿದೆ.

ಸಿಗ್ನಲ್‍ನಲ್ಲಿ ಲೈಟ್ ಹಸಿರು ಬಣ್ಣಕ್ಕೆ ತಿರುಗುತ್ತಿದ್ದಂತೆ ಹಿಂದಿನಿಂದ ಬಂದ ಪೆಟ್ರೋಲ್ ಟ್ಯಾಂಕರ್ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ನೆಲಕ್ಕೆ ಬಿದ್ದ ಇಬ್ಬರು ಮಕ್ಕಳು ತಕ್ಷಣವೇ ಸಾವನ್ನಪ್ಪಿದ್ದರೆ, ಅವರ ಪೋಷಕರು ಇಬ್ಬರೂ ಗಾಯಗೊಂಡಿದ್ದಾರೆ ಎಂದುಪೊಲೀಸರು ತಿಳಿಸಿದ್ದಾರೆ. ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ. ಅಪಘಾತವಾದ ತಕ್ಷಣವೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಶ್ವಸಂಸ್ಥೆಗೆ ಭಾರತದ ರಾಯಭಾರಿಯಾಗಿ ಅರಿಂದಮ್ ಬಾಗ್ಚಿ ನೇಮಕ

ಅಪಘಾತದಲ್ಲಿ ತಾಯಿ ಗಂಭೀರವಾಗಿ ಗಾಯಗೊಂಡಿದ್ದು, ಸಸೂನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಂದೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತ ಮಾಡಿದ ಪೆಟ್ರೋಲ್ ಟ್ಯಾಂಕರ್ ಚಾಲಕನನ್ನು ಬಂಧಿಸಲಾಗಿದೆ. ಚೌಕ್‍ನಲ್ಲಿ ಸಿಗ್ನಲ್ ಹಸಿರು ಬಣ್ಣಕ್ಕೆ ತಿರುಗಿದ ತಕ್ಷಣ ಟ್ಯಾಂಕರ್ ಮೋಟಾರ್‍ಸೈಕಲ್‍ಗೆ ಡಿಕ್ಕಿ ಹೊಡೆದಿದೆ. ಟ್ರಕ್‍ನ ಚಾಲಕನನ್ನು ಭಾರತೀಯ ದಂಡ ಸಂಹಿತೆ ಮತ್ತು ಮೋಟಾರು ವಾಹನ ಕಾಯ್ದೆಯ ಸಂಬಂ„ತ ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಲ್ಜಿಯಂನಲ್ಲಿ ಭಯೋತ್ಪಾದನಾ ಕೃತ್ಯಕ್ಕೆ ಇಬ್ಬರು ಬಲಿ

ಬ್ರಸೆಲ್ಸ್, ಅ 17 – ಇಬ್ಬರು ಸ್ವೀಡನ್ನರ ಮೇಲೆ ಬ್ರಸೆಲ್ಸ್‍ನಲ್ಲಿ ಮಾರಣಾಂತಿಕ ಗುಂಡಿನ ದಾಳಿಯ ನಂತರ ಬೆಲ್ಜಿಯಂ ಅಧಿಕಾರಿಗಳು ರಾಜಧಾನಿಯಲ್ಲಿ ಭಯೋತ್ಪಾದನಾ ಎಚ್ಚರಿಕೆ ನೀಡಿದ್ದಾರೆ. ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸ್ವೀಡನ್ನರು ಸಾವನ್ನಪ್ಪಿದ್ದಾರೆ ಮತ್ತು ಬೆಲ್ಜಿಯಂನ ಪ್ರಧಾನಿ ಅಲೆಕ್ಸಾಂಡರ್ ಡಿ ಕ್ರೂ ಅವರು ಈ ದಾಳಿಯು ಭಯೋತ್ಪಾದನೆ ಯೊಂದಿಗೆ ಸಂಬಂಧ ಹೊಂದಿದೆ ಎಂದು ತಿಳಿಸಿದ್ದಾರೆ.

ಬ್ರಸೆಲ್ಸ್‍ನಲ್ಲಿ ಸ್ವೀಡಿಷ್ ನಾಗರಿಕರ ಮೇಲೆ ನಡೆದ ಭೀಕರ ದಾಳಿಗೆ ನನ್ನ ಪ್ರಾಮಾಣಿಕ ಸಂತಾಪವನ್ನು ನೀಡಿದ್ದೇನೆ ಎಂದು ಡಿ ಕ್ರೂ ಎಕ್ಸ್ ನಲ್ಲಿ ತಿಳಿಸಿದ್ದಾರೆ. ಇಸ್ರೇಲ-ಹಮಾಸ್ ಯುದ್ಧದ ಕುರಿತಾದ ಅಂತರರಾಷ್ಟ್ರೀಯ ಕೋಲಾಹಲಕ್ಕೆ ಗುಂಡಿನ ದಾಳಿಗೆ ಸಂಬಂಧವಿದೆಯೇ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಬಿಹಾರದಲ್ಲಿ ಕಳ್ಳಬಟ್ಟಿ ಸಾರಾಯಿ ಕುಡಿದು ಇಬ್ಬರು ಸಾವು

ಬ್ರಸೆಲ್ಸ್‍ನಲ್ಲಿ ಭೀಕರ ಶೂಟಿಂಗ್, ಮತ್ತು ಅಪರಾಧಿಯನ್ನು ಸಕ್ರಿಯವಾಗಿ ಪತ್ತೆಹಚ್ಚಲಾಗುತ್ತಿದೆ ಎಂದು ಆಂತರಿಕ ಸಚಿವ ಅನ್ನೆಲೀಸ್ ವೆರ್ಲಿಂಡೆನ್ ಹೇಳಿದರು, ಅವರು ರಾಷ್ಟ್ರೀಯ ಬಿಕ್ಕಟ್ಟು ಕೇಂದ್ರದಲ್ಲಿ ಸರ್ಕಾರದ ಮಾತುಕತೆಗೆ ಸೇರುತ್ತಿದ್ದಾರೆ ಎಂದು ಹೇಳಿದರು.

ಮಾಧ್ಯಮ ವರದಿಗಳು ಹವ್ಯಾಸಿ ವೀಡಿಯೊಗಳನ್ನು ಪ್ರಸಾರ ಮಾಡಿದ್ದು, ವ್ಯಕ್ತಿಯೊಬ್ಬರು ಪಿಸ್ತೂಲ್ ಬಳಸಿ ನಿಲ್ದಾಣದ ಬಳಿ ಹಲವಾರು ಬಾರಿ ಗುಂಡು ಹಾರಿಸಿದ ಪರಿಣಾಮ ಇಬ್ಬರು ಸ್ವೀಡಿಸ್‍ಗಳು ಮೃತಪಟ್ಟಿದ್ದಾರೆ. ಸ್ವೀಡಿಷ್ ರಾಷ್ಟ್ರೀಯ ಫುಟ್‍ಬಾಲ್ ತಂಡವು ಬೆಲ್ಜಿಯಂ ವಿರುದ್ಧ ಹೈಸೆಲ್ ಸ್ಟೇಡಿಯಂನಲ್ಲಿ ಫುಟ್‍ಬಾಲ್ ಪಂದ್ಯ ನಡೆಯಬೇಕಿದ್ದ ಸಂದರ್ಭದಲ್ಲೇ ಈ ಅವಘಡ ಸಂಭವಿಸಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ

ಮಡಿಕೇರಿ,ಅ.17-ಕನ್ನಡ ನಾಡಿನ ಜೀವನದಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ಸಕಲಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಇಂದು ರಾತ್ರಿ 1.27ಕ್ಕೆ ಸಲ್ಲುವ ಕರ್ಕಾಟಕ ಲಗ್ನದಲ್ಲಿ ಪವಿತ್ರ ಕುಂಡಿಕೆಯಲ್ಲಿ ಕಾವೇರಿ ಮಾತೆ ತೀರ್ಥರೂಪದಲ್ಲಿ ಪ್ರತ್ಯಕ್ಷವಾಗಲಿದ್ದು, ಈ ಅದ್ಭುತ ಕ್ಷಣವನ್ನು ಕಣ್ತುಂಬಿಕೊಳ್ಳಲು ಜನರು ಕಾತುರದಿಂದ ಕಾಯುತ್ತಿದ್ದಾರೆ.

ಈಗಾಗಲೇ ಜಿಲ್ಲಾಡಳಿತ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯಿಂದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ತೀರ್ಥೋದ್ಭವದ ವೇಳೆ ದೇವಾಲಯದ ಸುತ್ತಮುತ್ತ ನೂಕುನುಗ್ಗಲು ಬ್ಯಾರಿಕೇಡ್ ಹಾಗೂ ಲೈಟ್‍ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಬಿಹಾರದಲ್ಲಿ ಕಳ್ಳಬಟ್ಟಿ ಸಾರಾಯಿ ಕುಡಿದು ಇಬ್ಬರು ಸಾವು

ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಲಿದ್ದು, ಪಾರ್ಕಿಂಗ್, ಬಸ್ ವ್ಯವಸ್ಥೆ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಅಂತಿಮ ಸಿದ್ದತೆಗಳನ್ನು ಪೂರ್ಣಗೊಳಿಸಲಾಗಿದೆ. ನಾಳೆ ಸಂಜೆವರೆಗೂ ಸಾರ್ವಜನಿಕರಿಗೆ ತೀರ್ಥ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಇಂದು ಸಂಜೆ 5.30ಕ್ಕೆ ಸಾರ್ವಜನಿಕ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ನಂತರ ರಾತ್ರಿ 10.30ಕ್ಕೆ ತೀರ್ಥ ಸ್ನಾನ, ಪವಿತ್ರ ಪಠಣಗಳು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ.

ತೀರ್ಥೋದ್ಭವದ ಕ್ಷಣವನ್ನು ವೀಕ್ಷಿಸಲು ಎಲ್‍ಇಡಿ ಪರದೆ ವ್ಯವಸ್ಥೆ ಕೂಡ ಮಾಡಲಾಗಿದೆ. ಶ್ರೀ ಭಗಂಡೇಶ್ವರ ದೇವಾಲಯ ಹಾಗೂ ತಲಕಾವೇರಿ ಕ್ಷೇತ್ರದಲ್ಲಿ ವಿಶೇಷ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.

ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ರಾಹುಲ್ ಪ್ರಧಾನಿ : ತರೂರ್

ತಿರುವನಂತಪುರಂ, ಅ 17 (ಪಿಟಿಐ) -ಮುಂಬರುವ 2024 ರ ಲೋಕಸಭೆ ಚುನಾವಣೆಯಲ್ಲಿ ಭಾರತ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಪಕ್ಷವು ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅಥವಾ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಧಾನಿಯಾಗಿ ನಾಮನಿರ್ದೇಶನ ಮಾಡಬಹುದು ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ವಿಪಕ್ಷಗಳ ಒಕ್ಕೂಟ ಇರುವುದರಿಂದ ಅಚ್ಚರಿಯ ಫಲಿತಾಂಶ ಬರಬಹುದು ಮತ್ತು ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎಯನ್ನು ಮಣಿಸಿ ಕೇಂದ್ರದಲ್ಲಿ ಭಾರತ ಮೈತ್ರಿಕೂಟ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ ಎಂದು ತರೂರ್ ಹೇಳಿದರು.

ಆದ್ದರಿಂದ ನಾವು ಕಾದು ನೋಡಬೇಕಾಗಿದೆ ಎಂದು ಅವರು ಟೆಕ್ನೋಪಾರ್ಕ್‍ನಲ್ಲಿ ತಮ್ಮ ಕಚೇರಿಯನ್ನು ಉದ್ಘಾಟಿಸಿದ ನಂತರ ಅಮೆರಿಕ ಮೂಲದ ಮತ್ತು ಸಿಲಿಕಾನ್ ವ್ಯಾಲಿ-ಇನ್‍ಕ್ಯುಬೇಟೆಡ್ ಡಿ2ಸಿ ಮಾರುಕಟ್ಟೆಯ ವೇಬ್.ಕಾಮ್‍ನ ವೃತ್ತಿಪರರೊಂದಿಗೆ ಸಂವಾದ ನಡೆಸುವಾಗ ಹೇಳಿದರು.

20 ಶಾಸಕರ ಜೊತೆ ಪ್ರವಾಸಕ್ಕೆ ಸತೀಶ್ ಜಾರಕಿಹೊಳಿ ಪ್ಲಾನ್!

ಚುನಾವಣೋತ್ತರ ಸನ್ನಿವೇಶದ ಕುರಿತು ಮಾತನಾಡಿದ ಅವರು, ಒಮ್ಮೆ ಫಲಿತಾಂಶ ಬಂದರೆ, ಅದು ಒಂದು ಪಕ್ಷವಲ್ಲದ ಸಮ್ಮಿಶ್ರವಾಗಿರುವ ಕಾರಣ, ಆ ಪಕ್ಷಗಳ ನಾಯಕರು ಒಟ್ಟಾಗಿ ಯಾರನ್ನಾದರೂ ಆರಿಸಬೇಕಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಆದರೆ ನನ್ನ ಊಹೆ ಏನೆಂದರೆ. ಕಾಂಗ್ರೆಸ್ ಪಕ್ಷದಿಂದ, ಅದು ಖರ್ಗೆ ಆಗಿರಬಹುದು, ಆಗ ಅವರು ಭಾರತದ ಮೊದಲ ದಲಿತ ಪ್ರಧಾನಿಯಾಗುತ್ತಾರೆ ಅಥವಾ ರಾಹುಲ್ ಗಾಂಧಿ ಆಗಿರಬಹುದು, ಏಕೆಂದರೆ ಅದು (ಕಾಂಗ್ರೆಸ್) ಅನೇಕ ವಿಧಗಳಲ್ಲಿ ಕುಟುಂಬ ನಡೆಸುವ ಪಕ್ಷವಾಗಿದೆ.

ಮಾಜಿ ಕೇಂದ್ರ ಸಚಿವರಾಗಿರುವ ತರೂರ್, ಪ್ರಧಾನಿ ಸಮಾನರಲ್ಲಿ ಮೊದಲಿಗರು ಮತ್ತು ಅವರಿಗೆ ವಹಿಸಲಾದ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸುವ ಸಾಮಥ್ರ್ಯದ ಬಗ್ಗೆ ಅವರು ವಿಶ್ವಾಸ ಹೊಂದಿದ್ದಾರೆ ಎಂದು ಹೇಳಿದರು.