Home Blog Page 1883

ಎಟಿಎಂ ಯಂತ್ರ ಹಿಡಿದು ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

ಬೆಂಗಳೂರು,ಅ.17- ಉದ್ಯಮಿಗಳು ಹಾಗೂ ಗುತ್ತಿಗೆದಾರರ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರುವ ಹಿನ್ನಲೆಯಲ್ಲಿ ಪ್ರತಿಪಕ್ಷ ಬಿಜೆಪಿ ಮೂರು ಎಟಿಎಂ ಯಂತ್ರಗಳನ್ನು ಹಿಡಿದುಕೊಂಡು ವಿನೂತನ ಪ್ರತಿಭಟನೆ ನಡೆಸುವ ಮೂಲಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.

ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಸಚಿವರಾದ ಆರ್. ಅಶೋಕ್, ಡಾ.ಸಿ.ಎನ್.ಅಶ್ವಥ್ ನಾರಾಯಣ, ವಿಧಾನಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್, ಶಾಸಕ ರವಿಸುಬ್ರಹ್ಮಣ್ಯ ಸೇರಿದಂತೆ ಶಾಸಕರು ಹಾಗೂ ಪಕ್ಷದ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರತಿಭಟನೆ ವೇಳೆ ಕೈಯಲ್ಲಿ ಮೂರು ಎಟಿಎಂ ಮಿಷನ್‍ಗಳನ್ನು ಹಿಡಿದುಕೊಂಡಿದ್ದ ಪ್ರತಿಭಟನಾನಿರತರು ನೋಟುಗಳನ್ನು ಹಾಕಿ ತೆಗೆದುಕೊಳ್ಳುವ ಮೂಲಕ ಕಾಂಗ್ರೆಸ್ ಹೈಕಮಾಂಡ್‍ಗೆ ಕರ್ನಾಟಕ ಎಟಿಎಂ ಆಗಿದೆ ಎಂದು ವ್ಯಂಗ್ಯವಾಡಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಆರ್. ಅಶೋಕ್, ಒಂದು ಕಡೆ ಕತ್ತಲೆ ಭಾಗ್ಯ,ಇನ್ನೊಂದು ಕಡೆ ಉಚಿತ ಸ್ಕೀಂ ಎಂದು ಕೈ ಎತ್ತಿದ್ದಾರೆ. ಮಕ್ಕಳು ಕುಡಿಯುವ ಹಾಲು ಹಾಲ್ಕೋಹಾಲ್ ಎರಡರ ಹಣ ಹೆಚ್ಚಾಗಿದೆ. ಈ ಸರ್ಕಾರದ ಅವಯಲ್ಲಿ ಸಾಕಷ್ಟು ತಪ್ಪುಗಳು ನಡೆಯುತ್ತಿದೆ. ಹೀಗಾಗಿ ಈ ಸರ್ಕಾರ ತೊಲಗಬೇಕೆಂಬುದು ಜನರ ಭಾವನೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ನಮ್ಮ ಸರ್ಕಾರದ ಮೇಲೆ 40% ಕಮಿಷನ್ ಎಂದು ಆರೋಪ ಮಾಡಿದ್ದರು. ಸಾಕ್ಷಿ ಕೇಳಿದಾಗ ಸಾಕ್ಷಿ ಕೊಡಲಿಲ್ಲ. ತನಿಖೆ ಮಾಡಿ ಎಂದು ಹೇಳಿದ್ದೆವು. ಈಗ ಅವರದೇ ಸರ್ಕಾರದ ಅವಧಿಯಲ್ಲಿ ಸಾಕ್ಷಿ ಸಿಕ್ಕಿದೆ. ಇದಕ್ಕಿಂತ ಇನ್ನೇನು ಬೇಕು ಎಂದು ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆರೋಪಕ್ಕೆ ತಿರುಗೇಟು ಕೊಟ್ಟ ಅಶೋಕ್, ಇದೇ ಪಕ್ಷದಲ್ಲಿ 40 ವರ್ಷ ಇದ್ದು ಈಗ ನಮ್ಮ ಬಗ್ಗೆ ಮಾತನಾಡಲು ಯಾವ ನೈತಿಕತೆಯಿದೆ. ಪಕ್ಷದ ಎಲ್ಲಾ ಸ್ಥಾನಗಳನ್ನು ಅನುಭವಿಸಿದ್ದಾರೆ. ಈಗ ಹೋಗಿ 4 ತಿಂಗಳಿಗೆ ಕಾಂಗ್ರೆಸ್ ಪಕ್ಷವನ್ನು ಇಷ್ಟು ಹೊಗಳಿದರೆ ಹೇಗೆ? ಎಂದು ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಮಾತನಾಡಿ, ಹೊಟೇಲ್ ನಲ್ಲಿ ಊಟ ತಿಂಡಿಗೆ ರೇಟ್ ಲೀಸ್ಟ್ ಇರತ್ತದೆ. ಆದರೆ ಈ ಸರ್ಕಾರದಲ್ಲಿ ಚಟ್ನಿ ಸಾಂಬಾರ್‍ಗೂ ರೇಟ್ ಲೀಸ್ಟ್ ಮಾಡಿದ್ದಾರೆ. ಈ ಮಾತನ್ನು ಹಿರಿಯರೊಬ್ಬರು ನನಗೆ ಹೇಳಿದ್ದಾರೆ ಎಂದು ವ್ಯಂಗ್ಯವಾಡಿದರು.

ಕೆಂಪಣ್ಣನವರು ಐಟಿ ರೈಡ್ ಆದ ಮನೆಗೆ ಹೋಗಿದ್ದರು. ಅಂಬಿಕಾಪತಿ ಯಾಕೆ ಹೋಗಿದ್ದರು ಎಂದು ಹೇಳಬೇಕು. ಮಾಧ್ಯಮದ ಮುಂದೆ ಹೇಳಿಕೆ ಕೊಡಬೇಕು ಅವರು ಒತ್ತಾಯಿಸಿದರು. ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಅದಕ್ಕಾಗಿ ಭೇಟಿ ಮಾಡಿದರೋ, ಮಾರ್ಗದರ್ಶನ ಪಡೆಯುವುದಕ್ಕೆ ಹೋಗಿದ್ದರೋ, ಮಾರ್ಗದರ್ಶನ ಮಾಡುವುದಕ್ಕೋ? ಪ್ರಕರಣ ಮುಚ್ಚಿ ಹಾಕುವ ಯತ್ನ ಇದು ಪರದೇಕೆ ಪೀಚೆ ಏನೋ ನಡೆಯುತ್ತಿದೆ ಇದೆ, ಅದು ಬಯಲಾಗಬೇಕು. ಹೀಗಾಗಿ ಸಿಬಿಐ ಸ್ವಮೋಟೊ ಕೇಸ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ಅಶ್ವಥ್ ನಾರಾಯಣ ಮಾತನಾಡಿ, ಕೆಲವು ನಾಮಾಕಾವಸ್ತೆ ಭಾಗ್ಯಗಳನ್ನು ಜನರಿಗೆ ತೋರಿಸಿದ್ದಾರೆ. ತಮಗಾಗಿ ಅತೀ ದೊಡ್ಡ ಭಾಗ್ಯ ಲೂಟಿ ಭಾಗ್ಯ ಜಾರಿ ಮಾಡಿದ್ದಾರೆ. ಸರ್ಕಾರದ ಅಧಿಕಾರಿಗಳು ಲೂಟಿ ಭಾಗ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.

ಬೆಂಗಳೂರಿನ 4 ದಿಕ್ಕಿನಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಆಕ್ರೋಶ

ಈ ಸರ್ಕಾರದವರು ಗುತ್ತಿಗೆದಾರರಿಂದ, ಬಿಲ್ಡರ್‍ಗಳಿಂದ ಹಣ ಪಡೆದು ಸರ್ಕಾರಿ ಸೇವೆ ಕೊಡುತ್ತಿದ್ದಾರೆ. ಈ ಸರ್ಕಾರದ ಮೇಲೆ ನಾವು ಭ್ರಷ್ಟಾಚಾರದ ಆರೋಪ ಮಾಡಿದಾಗ ಸಾಕ್ಷಿ ಎಲ್ಲಿದೆ ಅಂದರು. ಈಗ ಸಾಕ್ಷಿ ಸಿಕ್ಕಿದೆ, ಆದರೆಇದು ನಮ್ಮದಲ್ಲ, ಇವರೆಲ್ಲ ಬಿಜೆಪಿ ಗುತ್ತಿಗೆದಾರರು ಎನ್ನುತ್ತಿದ್ದಾರೆ. ಆಗಲಿ ತನಿಖೆ ಮಾಡಿ ಅಂದರೂ ಮಾಡಲ್ಲ ಎನ್ನುತ್ತಿದ್ದಾರೆ. ಇದು ಯಾರ ಹಣ ಅಂತ ಸಿಎಂಗೆ ಉತ್ತರಿಸಲು ಆಗ್ತಿಲ್ಲ, ಮಾತು ಬರುತ್ತಿಲ್ಲ. ಸಿದ್ದರಾಮಯ್ಯ ಭಂಡತನ ತೋರಿಸುತ್ತಿದ್ದಾರೆ. ಪಂಚೆ ಎತ್ಕೊಂಡು ನಮ್ಮ ವಿರುದ್ಧ ಪೇಸಿಎಂ ಆರೋಪ ಮಾಡಿದ್ದರೀ ಈಗ ಎಲ್ಲಿ ಉಡುಗಿಹೋಗಿದೆ ನಿಮ್ಮ ದನಿ ಎಂದು ಪ್ರಶ್ನಿಸಿದರು.

ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಪಂಚರಾಜ್ಯ ಚುನಾವಣೆ, ಲೋಕಸಭಾ ಚುನಾವಣೆ ಇದೆ. ಸಮಯ ಕಡಿಮೆ ಇದೆ. ಹೀಗಾಗಿ, ಕಾಂಗ್ರೆಸ್ ಸರ್ಕಾರ ಕಲೆಕ್ಷನ್ ಬ್ಯಾಟಿಂಗ್ ಶುರುಮಾಡಿದ್ದಾರೆ. ಕಂಟ್ರ್ಯಾಕ್ಟರ್‍ಗಳಿಗೆ ಹಣ ಬಿಡುಗಡೆ ಮಾಡಿ, ಏಜೆಂಟರ್ ಬಿಟ್ಟು ಕಲೆಕ್ಷನ್ ಮಾಡುತ್ತಾರೆ ಎಂದು ಆರೋಪಿಸಿದರು.
ಮಂಚದ ಕೆಳಗೆ 42 ಕೋಟಿ ರೂ. ಮಲಗಿತ್ತು. ಐಟಿ ರೈಡ್ ಮಾಡಿ ಹಿಡಿದಿದ್ದಾರೆ. ವಾರಸುದಾರರು ಯಾರು ಎಂದು ಹೇಳುತ್ತಿಲ್ಲ. ಬಿಜೆಪಿ ಬಳಿ ಹಣವೇ ಇರಲಿಲ್ಲ, ಆದರೂ 40% ಕಮಿಷನ್ ಆರೊಪ ಮಾಡಿದರು. ನಾವು ಸುಳ್ಳು ಹೇಳಿದ್ದೀವಿ ಎಂದು ಡಿ.ಕೆ.ಶಿವಕುಮಾರ್ ಅವರೇ ಒಪ್ಪಿಕೊಂಡಿದ್ದಾರೆ.

ಕೆಂಪಣ್ಣನವರನ್ನ ಏಜೆಂಟ್ ಮಾಡಿಕೊಂಡು ಸುಳ್ಳು ಹೇಳಿಸಿದರು. ಈಗ ಅಬಕಾರಿ ಇಲಾಖೆಯಡಿ ಬಾರ್- ರೆಸ್ಟೋರೆಂಟ್‍ನವರಿಂದ ಸುಲಿಗೆ ಆಗುತ್ತಿದೆ. ದಸರಾದಲ್ಲಿ ಕಲಾವಿದರಿಂದ ಕಮಿಷನ್ ಕೇಳಿದ್ದಾರೆ. 5 ಲಕ್ಷ ರೂ. ನಲ್ಲಿ 3 ಲಕ್ಷ ರೂ. ವಾಪಸ್ ಕೊಡಬೇಕು ಎಂದು ಕಮಿಷನ್ ಕೇಳಿದ್ದಾರೆ. ಅಂದರೆ ಇದು 60% ಸರ್ಕಾರ ಎಂದು ತಿರುಗೇಟು ಕೊಟ್ಟರು.

ತೋಟಗಾರಿಕೆ, ಕೃಷಿ ಇಲಾಖೆ ಅಕಾರಿಗಳೇ ಪತ್ರ ಬರೆದರು. ಅಕಾರಿಗಳ ವರ್ಗಾವಣೆಗೆ ದರ ಫಿಕ್ಸ್ ಆಗಿದೆ. ಕಾಂಗ್ರೆಸ್ ಖಜಾನೆಗೆ ಹಣ ಹೋಗುವುದು ಫಿಕ್ಸ್ ಆಗಿದೆ. ಪ್ಲಾನ್ ಸೆಂಕ್ಷನ್ ಗೆ ಪ್ರತಿ ಅಡಿಗೆ 100 ರೂ. ಫಿಕ್ಸ್ ಮಾಡಿ, 25% ಡಿಸ್ಕೌಂಟ್ ಕೊಟ್ಟಿದ್ದಾರೆ ಎಂದು ಆರೋಪಿಸಿದರು.

ಬಿಹಾರದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು

ಪಾಕಿಸ್ಥಾನದಲ್ಲಿ ಇರುವಂತ ಪರಿಸ್ಥಿತಿ ರಾಜ್ಯಕ್ಕೆ ಬರಲಿದೆ. ಈ ಸರ್ಕಾರ ಅಂತ ಸ್ಥಿತಿ ತಂದಿಟ್ಟಿದೆ. ಆರೋಪ ಮಾಡಿದವರ ಮೇಲೆ ಎಫ್‍ಐಆರ್ ಹಾಕುತ್ತಾರೆ. ಹೋರಾಟ ನಮ್ಮ ಹಕ್ಕು. ಅದನ್ನ ಕಿತ್ತುಕೊಳ್ಳಲು ಬಿಡುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಕೂಡಲೇ ಕೊಡಬೇಕು ಎಂದು ಆಗ್ರಹಿಸಿದರು.

ಸಿಎಂ ಇಬ್ರಾಹಿಂಗೆ ಟಾಂಗ್ ಕೊಟ್ಟ ಶರವಣ

ಬೆಂಗಳೂರು, ಅ.17-ಸಮಾನ ಮನಸ್ಕರ ಚಿಂತನ-ಮಂಥನ ಸಭೆಯನ್ನು ಜೆಡಿಎಸ್ ರಾಜ್ಯಾಧ್ಯಕ್ಷರು ನಡೆಸಿದ್ದು, ಅದು ಸಮಾನ ದುಖಃಸ್ಥರ ಸಭೆ ಎಂದೆನಿಸತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಟಿ.ಎ. ಶರವಣ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಂತನ- ಮಂಥನ ಸಭೆಯಲ್ಲಿ ಪಕ್ಷದ ವರಿಷ್ಠರು ಇರಬೇಕಾಗಿತ್ತು. ಇದನ್ನು ಪಕ್ಷದ ವೇದಿಕೆ ಎಂದು ಕರೆಯಬಹುದೆ ಎಂದು ಪ್ರಶ್ನಿಸಿದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ..ದೇವೇಗೌಡರು ಚಿಂತನ- ಮಂಥನ ಸಭೆಗೆ ಅನುಮತಿ ಕೊಟ್ಟಿದ್ದರಾ ಎಂದು ಪ್ರಶ್ನಿಸಿದರು. ದೇವೇಗೌಡರ ಕಣ್ಮುಂದೆ ಇರುವು ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದು. ಕಷ್ಟದ ಸಮಯದಲ್ಲಿ ನಾವು ಜೊತೆಯಲ್ಲಿ ಇದ್ದೇವೆ. ಮುಂಬರುವ ಲೋಕಸಭಾ ಚುನಾವಣೆಗೆ ಏನು ಮಾಡಬೇಕು ಎಂಬ ಚರ್ಚೆಯಲ್ಲಿ ಇದ್ದೇವೆ ಎಂದು ಹೇಳಿದರು.

ರಾಜ್ಯಾಧ್ಯಕ್ಷರು ನಡೆಸಿರುವ ಸಭೆ ವಿಚಾರವಾಗಿ ದೇವೇಗೌಡರು ತೀರ್ಮಾನ ಮಾಡುತ್ತಾರೆ. ಪಕ್ಷದ ವರಿಷ್ಠರು ಮೈತ್ರಿಗೂ ಮುನ್ನ ಸಭೆ ಕರೆದು ಚರ್ಚಿಸಿದ್ದಾರೆ. ಮೈತ್ರಿ ಬಗ್ಗೆ ಏಕ ಪಕ್ಷೀಯ ನಿರ್ಧಾರ ತೆಗೆದುಕೊಂಡಿಲ್ಲ. ನಾವೆಲ್ಲಾ ಒಪ್ಪಿದ ಮೇಲೆಯೇ ಅವರು ಮುಂದುವರೆದಿದ್ದು. ಒಳಗೊಂದು ಹೊರಗೊಂದು ಮಾತಾಡೋದು ಸರಿಯಲ್ಲ. ಅವರು ಕೂಡ ಹಿರಿಯರಿದ್ದಾರೆ ಎಂದು ಅವರು ಹೇಳಿದರು.

ಟ್ರಕ್‍ಗೆ ಬೆಂಕಿ, ನಾಲ್ವರ ಸಜೀವ ದಹನ

ನಿನ್ನ ನಡೆದ ಘಟನೆ ನಮಗೂ ನೋವಾಗಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ದೆಹಲಿಗೆ ದೇವೇಗೌಡರ ಅನುಮತಿ ಪಡೆದೇ ಹೋಗಿದ್ದರು. ಶಾಸಕಾಂಗ ಸಭೆ ಕರೆದಾಗ ಎಲ್ಲರೂ ಬಂದಿದ್ದರು. ವರಿಷ್ಠರು ಏನೇ ನಿರ್ಧಾರ ತೆಗೆದುಕೊಂಡರೆ ಜೊತೆಗೆ ಇರುತ್ತೇವೆ ಅಂದಿದ್ದಾರೆ. ಶಾಸಕರು ಸಂಪರ್ಕದಲ್ಲಿ ಇದ್ದಾರೆ ಎಂಬುದು ಗಾಳಿಯಲ್ಲಿ ಗುಂಡು ಅಷ್ಟೆ ಎಂದರು.

ದೇವೇಗೌಡರಿಗೆ ಇನ್ನೂ ನೋವು ಕೊಡಬೇಡಿ. ನನಗೂ ಸೇರಿ ಪಕ್ಷದ ಪ್ರಮುಖರಿಗೆ ಕರೆ ಮಾಡಿದ್ದರು.ಆದರೆ ನಾವ್ಯಾರೂ ಸಭೆಗೆ ಹೋಗಿಲ್ಲ. ನೋವಿನಿಂದ ಆ ಸಭೆ ಮಾಡಿದ್ದಾರೆ ಅಷ್ಟೆ. ಇಲ್ಲಿ ಬ್ಲಾಕ್ ಮೇಲ್ ಏನೂ ಬರೋದಿಲ್ಲ ಎಂದು ಅವರು ಹೇಳಿದರು.

ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದು, ಇಬ್ರಾಹಿಂ ದೊಡ್ಡವರು. ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಅವರು ಕೊಟ್ಟಿರು ಹೇಳಿಕೆಯನ್ನು ಪಕ್ಷದ ವರಿಷ್ಠರು ಗಮನಿಸುತ್ತಿದ್ದಾರೆ. ಯಾರ್ಯಾರನ್ನ ಕರೆಸಬೇಕು ಅನ್ನೋದು ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.

ದೇಶದೊಂದಿಗೆ ಪಾಲುದಾರರಾಗಲು ಹೂಡಿಕೆದಾರರಿಗೆ ಮೋದಿ ಕರೆ

ಮುಂಬೈ, ಅ17 (ಪಿಟಿಐ)- ಹೂಡಿಕೆದಾರರಿಗೆ ದೇಶದೊಂದಿಗೆ ಪಾಲುದಾರರಾಗಲು ಅವಕಾಶವಿದೆ ಮತ್ತು ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (ಐಎಂಇಸಿ) ನ ಭಾಗವಾಗಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಇಲ್ಲಿನ ಗ್ಲೋಬಲ್ ಮ್ಯಾರಿಟೈಮ್ ಇಂಡಿಯಾ ಶೃಂಗಸಭೆಯನ್ನು ಉದ್ಘಾಟಿಸಿದ ನಂತರ ಮಾತನಾಡಿದ ಮೋದಿ, ಜಿ-20 ಶೃಂಗಸಭೆಯಲ್ಲಿ ಭಾರತವು ಕಾರಿಡಾರ್ ಕುರಿತು ಒಮ್ಮತವನ್ನು ರೂಪಿಸಲು ಮುಂದಾಳತ್ವ ವಹಿಸಿದೆ ಎಂದು ಹೇಳಿದರು.

ಕೆಲವೇ ದೇಶಗಳು ಅಭಿವೃದ್ಧಿ, ಜನಸಂಖ್ಯಾಶಾಸ, ಪ್ರಜಾಪ್ರಭುತ್ವ ಮತ್ತು ಬೇಡಿಕೆಯಿಂದ ಆಶೀರ್ವದಿಸಲ್ಪಟ್ಟಿವೆ ಎಂದು ಮೋದಿ ಹೇಳಿದರು ಮತ್ತು ಭಾರತದ ಬೆಳವಣಿಗೆಯ ಪ್ರಯಾಣದ ಭಾಗವಾಗಲು ಜಾಗತಿಕ ಹೂಡಿಕೆದಾರರನ್ನು ಆಹ್ವಾನಿಸಿದರು.

ಇತಿಹಾಸದಲ್ಲಿ ಭಾರತದ ಕಡಲ ಸಾಮಥ್ರ್ಯವು ಪ್ರಬಲವಾಗಿದೆ ಎಂದ ಅವರು, ದೇಶ ಮತ್ತು ಪ್ರಪಂಚವು ಅದರ ಪ್ರಯೋಜನವನ್ನು ಪಡೆದುಕೊಂಡಿದೆ ಮತ್ತು ಕಳೆದ 9-10 ವರ್ಷಗಳಲ್ಲಿ ತಮ್ಮ ಸರ್ಕಾರವು ಕಡಲ ಕ್ಷೇತ್ರವನ್ನು ಬಲಪಡಿಸಲು ಕೆಲಸ ಮಾಡುತ್ತಿದೆ ಎಂದು ಹೇಳಿದರು.

ನಿಂತಿದ್ದ ಬೈಕ್‍ಗೆ ಟ್ಯಾಂಕರ್ ಡಿಕ್ಕಿ, ಅವಳಿ ಸಹೋದರಿಯರ ಸಾವು

ಶೃಂಗಸಭೆಯ ಮೂರನೇ ಆವೃತ್ತಿಯಲ್ಲಿ 18,800 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಬಂದರು ಸಂಬಂ„ತ ಯೋಜನೆಗಳಿಗೆ ಪ್ರಧಾನಿ ಮೋದಿ ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ಮಾಡಿದರು. ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್‍ಗೆ ಸಹಾಯ ಮಾಡಲು ಅಭಿವೃದ್ಧಿಪಡಿಸಲಾಗುತ್ತಿರುವ ಗುಜರಾತ್‍ನ ದೀನದಯಾಳ್ ಬಂದರು ಪ್ರಾ„ಕಾರದಲ್ಲಿ ರೂ 4,539 ಕೋಟಿ ವೆಚ್ಚದ ಟ್ಯೂನ ಟೆಕ್ಕ್ರಾ ಆಲ-ವೆದರ್ ಡೀಪ್ ಡ್ರಾ-ï್ಟ ಟರ್ಮಿನಲ್‍ಗೆ ಅವರು ಶಂಕುಸ್ಥಾಪನೆಯನ್ನು ನೆರವೇರಿಸಿದರು.

ನಾಳೆ ಇಸ್ರೇಲ್‍ಗೆ ಅಮೆರಿಕ ಅಧ್ಯಕ್ಷ ಬಿಡನ್ ಭೇಟಿ

ಟೆಲ್ ಅವಿವ್, ಅ.17- ಹಮಾಸ್ ದಾಳಿಯ ನಂತರ ಅಮೆರಿಕ ಅಧ್ಯಕ್ಷ ಜೋ ಬಿಡನ್ ಬುಧವಾರ ಇಸ್ರೇಲ್‍ಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಹೇಳಿದ್ದಾರೆ. ಗಾಜಾಕ್ಕೆ ನೆರವು ನೀಡುವ ಯೋಜನೆಯನ್ನು ಅಭಿವೃದ್ಧಿಪಡಿಸಲು ಇಸ್ರೇಲ್ ಮತ್ತು ವಾಷಿಂಗ್ಟನ್ ಒಪ್ಪಿಕೊಂಡಿವೆ ಎಂದು ಅವರು ಹೇಳಿದರು.

ಅ 7 ರಂದು ಹಮಾಸ್ ದಾಳಿಯ ನಂತರ ಯುಎಸ್ ರಾಜತಾಂತ್ರಿಕರ ಎರಡನೇ ಭೇಟಿಯ ಕುರಿತು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ರಕ್ಷಣಾ ಸಚಿವಾಲಯದಲ್ಲಿ ಸುಮಾರು ಎಂಟು ಗಂಟೆಗಳ ಕಾಲ ಭೇಟಿಯಾದ ನಂತರ ಬ್ಲಿಂಕನ್ ಮಾತನಾಡಿದರು.

ನಾಳೆ ನಾನು ಹಮಾಸ್‍ನ ಕ್ರೂರ ಭಯೋತ್ಪಾದಕ ದಾಳಿಯನ್ನು ಎದುರಿಸಲು ಒಗ್ಗಟ್ಟಿನಿಂದ ನಿಲ್ಲಲು ಇಸ್ರೇಲ್‍ಗೆ ಪ್ರಯಾಣಿಸುತ್ತೇನೆ. ನಂತರ ನಾನು ತೀವ್ರ ಮಾನವೀಯ ಅಗತ್ಯಗಳನ್ನು ಪರಿಹರಿಸಲು ಜೋರ್ಡಾನ್‍ಗೆ ಪ್ರಯಾಣಿಸುತ್ತೇನೆ, ನಾಯಕರನ್ನು ಭೇಟಿ ಮಾಡುತ್ತೇನೆ ಮತ್ತು ಹಮಾಸ್ ಪ್ಯಾಲೆಸ್ಟೀನಿಯರ ಸ್ವ-ನಿರ್ಣಯದ ಹಕ್ಕಿಗಾಗಿ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ ಎಂದು ಬಿಡೆನ್ ಹೇಳಿದ್ದಾರೆ ಎಂದು ಬ್ಲಿಂಕೆನ್ ತಿಳಿಸಿದ್ದಾರೆ.

ನಿಂತಿದ್ದ ಬೈಕ್‍ಗೆ ಟ್ಯಾಂಕರ್ ಡಿಕ್ಕಿ, ಅವಳಿ ಸಹೋದರಿಯರ ಸಾವು

ಹಮಾಸ್ ಮತ್ತು ಇತರ ಭಯೋತ್ಪಾದಕರಿಂದ ತನ್ನ ಜನರನ್ನು ರಕ್ಷಿಸಲು ಮತ್ತು ಭವಿಷ್ಯದ ದಾಳಿಯನ್ನು ತಡೆಯಲು ಇಸ್ರೇಲ್ ಹಕ್ಕು ಮತ್ತು ಕರ್ತವ್ಯವನ್ನು ಹೊಂದಿದೆ ಎಂದು ಬ್ಲಿಂಕನ್ ಹೇಳಿದರು. ಬಿಡೆನ್ ಆ ಅಗತ್ಯಗಳನ್ನು ಪೂರೈಸಲು ನಾವು ಕಾಂಗ್ರೆಸ್‍ನೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುವುದರಿಂದ ತನ್ನ ಜನರನ್ನು ರಕ್ಷಿಸಲು ಏನು ಬೇಕು ಎಂದು ಇಸ್ರೇಲ್‍ನಿಂದ ಕೇಳುತ್ತಾರೆ ಎಂದು ಅವರು ಹೇಳಿದರು.

ಶಾಹೀದ್ ಅಫ್ರಿದಿ ಸಹೋದರಿ ಸಾವು

ಇಸ್ಲಾಮಾಬಾದ್.ಅ.17- ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಅವರ ಸಹೋದರಿ ಇಂದು ನಿಧನರಾಗಿದ್ದಾರೆ, ತಮ್ಮ ಸಹೋದರಿ ಇಹಲೋಕ ತ್ಯಜಿಸಿದ್ದಾರೆ. ಅವರು ನಮ್ಮೊಂದಿಗೆ ಇನ್ನಿಲ್ಲ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಫ್ರಿದಿ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಪ್ರಕಟಿಸಿದ್ದಾರೆ.

ತನ್ನ ಸಹೋದರಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದರು ಆದರೆ, ಇಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅಫ್ರಿದಿ ಹೇಳಿಕೊಂಡಿದ್ದಾರೆ. ಖಂಡಿತವಾಗಿಯೂ ನಾವು ಅಲ್ಲಾಹನಿಗೆ ಸೇರಿದ್ದೇವೆ ಮತ್ತು ನಾವು ಹಿಂತಿರುಗುತ್ತೇವೆ.

ನಮ್ಮ ಪ್ರೀತಿಯ ಸಹೋದರಿ ನಿಧನರಾದರು ಮತ್ತು ಅವರ ನಮಾಜ್ ಇ ಜನಜಾಹ್ 17.10.2023 ಕ್ಕೆ ಝುಹುರ್ ಪ್ರಾರ್ಥನೆಯ ನಂತರ ಜಕರಿಯಾ ಮಸೀದಿ ಮುಖ್ಯ 26 ನೇ ಬೀದಿ ಖಯಾಬಾನ್ ಇ ಗಾಲಿಬ್ ನಲ್ಲಿ ನಡೆಯಲಿದೆ ಎಂದು ನಾವು ಭಾರವಾದ ಹೃದಯದಿಂದ ನಿಮಗೆ ತಿಳಿಸುತ್ತೇವೆ ಎಂದು ಅಫ್ರಿದಿ ಎಕ್ಸ್ ಮಾಡಿದ್ದಾರೆ.

ನಿಂತಿದ್ದ ಬೈಕ್‍ಗೆ ಟ್ಯಾಂಕರ್ ಡಿಕ್ಕಿ, ಅವಳಿ ಸಹೋದರಿಯರ ಸಾವು

ದುರಂತದ ನಂತರ ಕ್ರಿಕೆಟಿಗನಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಮಂದಿ ಸಂತಾಪ ಸೂಚಿಸಿದ್ದಾರೆ.

ಬೆಂಗಳೂರಿನ 4 ದಿಕ್ಕಿನಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಆಕ್ರೋಶ

ಬೆಂಗಳೂರು,ಅ.17- ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಸ ವಿಲೇವಾರಿ ಘಟಕಗಳ ಸ್ಥಾಪನೆಗೆ ಬಿಬಿಎಂಪಿ ಹುಡುಕಾಟ ನಡೆಸಿದ್ದಾರೆ. ಬಿಬಿಎಂಪಿಯ ಈ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ನಗರದಲ್ಲಿ ದಿನೇ ದಿನೇ ಕಸದ ಸಮಸ್ಯೆ ಉಲ್ಬಣಗೊಳ್ಳುತ್ತಿರುವುದರಿಂದ ಬೆಂಗಳೂರಿನ ಅಕ್ಕಪಕ್ಕದ ತಾಲೂಕುಗಳಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಜಾಗ ಹುಡುಕಾಟ ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಪ್ರತಿ ನಿತ್ಯ ನಗರದಲ್ಲಿ 1600 ರಿಂದ 1700 ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಕಸ ವಿಲೇವಾರಿಗೆ ಸಮಸ್ಯೆ ಉಂಟಾಗಿರುವುದರಿಂದ ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡಲು ಹುಡುಕಾಟ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ನಿಂತಿದ್ದ ಬೈಕ್‍ಗೆ ಟ್ಯಾಂಕರ್ ಡಿಕ್ಕಿ, ಅವಳಿ ಸಹೋದರಿಯರ ಸಾವು

ಬಿಬಿಎಂಪಿಯ ಈ ನಿರ್ಧಾರಕ್ಕೆ ಬೆಂಗಳೂರು ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ರಾಜಧಾನಿ ಕಸವನ್ನು ನಮ್ಮ ಪ್ರದೇಶಗಳಿಗೆ ತರಬೇಡಿ ತಂದರೆ ಭಾರಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಸದ್ಯ ಬೆಂಗಳೂರಿನ ಏಳು ಸಂಸ್ಕರಣ ಘಟಕಗಳಿವೆ ಇದರ ಜತೆ ನಗರದ 2ಎರಡು ಭಾಗದಲ್ಲಿ ಲ್ಯಾಂಡ್ ಫಿಲಿಂಗ್ ಸಹ ಮಾಡಲಾಗುತ್ತಿದೆ.

ಮಿಟಗಾನ ಹಳ್ಳಿ ಹಾಗೂ ಬೆನ್ನಿಗಾನ ಹಳ್ಳಿಯಲ್ಲಿ ಕಸವನ್ನು ಡಂಪ್ ಮಾಡಲಾಗುತ್ತಿದೆ. ಇದೀಗಾ ಹೊಸದಾಗಿ ನಗರದ ಹೊರ ವಲಯದ ನಾಲ್ಕು ಭಾಗದಲ್ಲಿ ಹೊಸ ಜಾಗ ಹುಡುಕಾಟಕ್ಕೆ ಬಿಬಿಎಂಪಿ ಮುಂದಾಗಿದೆ. ನೆಲಮಂಗಲ, ಯಲಹಂಕ, ಬಿಡದಿ ಹಾಗೂ ರಾಮನಗರದಲ್ಲಿ ಕಸ ಸಂಸ್ಕರಣ ಘಟಕ ನಿರ್ಮಾಣಕ್ಕೆ ಬಿಬಿಎಂಪಿ ಲೆಕ್ಕಚಾರ ಹಾಕಿರುವ ವಿಚಾರ ತಿಳಿದಿರುವ ಅಲ್ಲಿನ ಸ್ಥಳೀಯರು ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸದ್ಯ ಇರುವ ಏಳು ಸಂಸ್ಕರಣ ಘಟಕಗಳ ಸಂಸ್ಕರಣ ಸಾಮಥ್ರ್ಯ ಕಡಿಮೆಯಾಗಿದೆ ಈ ಸಂಸ್ಕರಣ ಘಟಕಗಳು ಸಾರ್ವಜನಿಕ ವಲಯದಲ್ಲಿದ್ದು ಸಾರ್ವಜನಿಕರಿಂದ ಘಟಕಗಳ ತೆರವಿಗೆ ಆಕ್ರೋಶ ಹೆಚ್ಚಾಗಿದೆ ಹೀಗಾಗಿ ಮುಂದಿನ ದಿನಗಳಲ್ಲಿ ಕಸ ಉತ್ಪಾದನೆ ಹೆಚ್ಚಾಗುವುದನ್ನು ಗಮನವಿರಿಸಿ ಹೊರವಲಯಗಳಲ್ಲಿ ಹೊಸ ಘಟಕಗಳ ಸ್ಥಾಪನೆಗೆ ಬಿಬಿಎಂಪಿ ಮುಂದಾಗಿದೆ. ಆದರಲ್ಲೂ ನೆಲಮಂಗಲ, ಬಿಡದಿ, ರಾಮನಗರ, ಯಲಹಂಕ ಭಾಗದಲ್ಲಿ ಸಂಸ್ಕರಣ ಘಟಕ ಸ್ಥಾಪಿಸಿ ಪ್ರತಿ ಘಟಕದಲ್ಲಿ 1000 ಟನ್ ಸಾಮಥ್ರ್ಯದ ಕಸ ಸಂಸ್ಕರಣೆ ಮಾಡುವ ಉದ್ದೇಶವನ್ನು ಬಿಬಿಎಂಪಿ ಹೊಂದಿದೆ ಎನ್ನಲಾಗಿದೆ.

ಈ ಘಟಕಗಳಲ್ಲಿ ಲ್ಯಾಂಡ್ ಫಿಲಿಂಗ್ ಮಾಡಲ್ಲ ಸಂಸ್ಕರಣ ಘಟಕ ಮಾಡ್ತಿವಿ. ಕಸವನ್ನು ಡಂಪ್ ಮಾಡೋದಿಲ್ಲ ಕಸವನ್ನು ವೇಸ್ಟ್ ಟೂ ಎನರ್ಜಿಯಾಗಿ ಸಂಸ್ಕರಣೆ ಮಾಡ್ತಿವಿ. ಒಂದೇ ಕಡೆ ಸಂಸ್ಕರಣ ಘಟಕ ಮಾಡಿದ್ರೆ ಸಾಗಾಣಿಕೆ ವೆಚ್ಚ ಹೆಚ್ಚಾಗುತ್ತೆ ಎನ್ನುತ್ತಾರೆ ತುಷಾರ್ ಗಿರಿನಾಥ್.

ವಿಷ ಅನಿಲ ಉತ್ಪಾದನೆ ಮಾಡದ, ನೆಲ ಜಲಕ್ಕೆ ಹಾನಿ ಮಾಡದ ಡ್ರೈ ಕಸ ಮಾತ್ರ ಲ್ಯಾಂಡ್ ಫಿಲಿಂಗ್ ಮಾಡಲು ನಿರ್ಧಾರ ಮಾಡಿದ್ದೇವೆ ಎನ್ನುತ್ತಾರೆ ಅವರು ಆದರೆ ಅವರ ಮಾತನ್ನು ನಂಬಲು ಸಾಧ್ಯವಿಲ್ಲ. ನಮ್ಮ ಭಾಗದಲ್ಲಿ ಯಾವುದೆ ಘಟಕ ಬೇಡ ಎನ್ನುತ್ತಿದ್ದಾರೆ ನಗರದ ಸುತ್ತಮುತ್ತಲಿನ ಜನ. ಇದೀಗ ಎದುರಾಗಿರುವ ಈ ಸಮಸ್ಯೆಗೆ ಸರ್ಕಾರ ಯಾವ ರೀತಿ ಬಗೆಹರಿಸಿ ನಗರದ ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದೋ ಕಾದು ನೋಡಬೇಕಿದೆ.

ಟ್ರಕ್‍ಗೆ ಬೆಂಕಿ, ನಾಲ್ವರ ಸಜೀವ ದಹನ

ಪೂನಾ,ಅ.17- ಮಹಾರಾಷ್ಟ್ರದ ಪುಣೆಯಲ್ಲಿ ತಡ ರಾತ್ರಿ ಟ್ಯಾಂಕರ್‌ಗೆ ಟ್ರಕ್‍ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಪುಣೆ-ಬೆಂಗಳೂರು ಹೆದ್ದಾರಿಯ ಸ್ವಾಮಿನಾರಾಯಣ ದೇವಸ್ಥಾನ ಮತ್ತು ನವ್ಲೆ ಸೇತುವೆಯ ಬಳಿ ರಾತ್ರಿ 09.30 ರ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇಲ್ನೋಟಕ್ಕೆ ಬ್ರೇಕ್ ವೈಫಲ್ಯದಿಂದ ಟ್ರಕ್ ಕಂಟೇನರ್‌ಗೆ ಡಿಕ್ಕಿ ಹೊಡೆದು ನಂತರ ಮತ್ತೊಂದು ಟ್ರಕ್‍ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿ ಮೇರೆಗೆ ಪುಣೆ ಮಹಾನಗರ ಪಾಲಿಕೆಯ ಅಗ್ನಿಶಾಮಕ ದಳದ ಅ„ಕಾರಿಗಳ ತಂಡ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ.

ನಿಂತಿದ್ದ ಬೈಕ್‍ಗೆ ಟ್ಯಾಂಕರ್ ಡಿಕ್ಕಿ, ಅವಳಿ ಸಹೋದರಿಯರ ಸಾವು

ಸಂತ್ರಸ್ತರ ದೇಹಗಳನ್ನು ಉರಿಯುತ್ತಿರುವ ಟ್ರಕ್‍ನಿಂದ ಹೊರತೆಗೆಯಲಾಯಿತು ಮತ್ತು ಮುಂದಿನ ಪ್ರಕ್ರಿಯೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಘಟನೆ ನಡೆದಾಗ ಟ್ರಕ್‍ನಲ್ಲಿ ಆರು ಮಂದಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅವರಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ, ಇನ್ನಿಬ್ಬರು ಟ್ರಕ್‍ನಿಂದ ಹಾರಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅಪಘಾತದಲ್ಲಿ ಅವರಿಗೂ ಗಾಯಗಳಾಗಿವೆ ಎಂದು ಅವರು ಹೇಳಿದರು. ಆದರೆ ಬಲಿಪಶುಗಳನ್ನು ಇನ್ನೂ ಗುರುತಿಸಲಾಗಿಲ್ಲ ಎಂದು ಅವರು ಹೇಳಿದರು. ಘಟನೆಯ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಹೊರ ರಾಜ್ಯದ ವಾಹನಗಳಿಗೆ ವಿನಾಯತಿ ನೀಡಿದ ಕರ್ನಾಟಕ ಸರ್ಕಾರ

ಬೆಂಗಳೂರು,ಅ.17- ಒಂಬತ್ತು ದಿನಗಳ ಕಾಲ ನಡೆಯುವ ನಾಡಹಬ್ಬ ದಸರಾ ಹಿನ್ನಲೆಯಲ್ಲಿ ವಿಶೇಷವಾಗಿ ಹೊರ ರಾಜ್ಯದಿಂದ ಬರುವ ವಾಹನಗಳಿಗೆ ಪ್ರವೇಶ ಶುಲ್ಕದಿಂದ ವಿನಾಯಿತಿ ನೀಡಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಇತರೆ ರಾಜ್ಯಗಳಿಂದ ಮೈಸೂರು ಮತ್ತು ಕೃಷ್ಣರಾಜ ಸಾಗರಕ್ಕೆ (ಕೆಆರೆಸ್) ತೆರಳುವ ಪ್ರವಾಸಿ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಮತ್ತು ಪ್ರವಾಸೋದ್ಯಮಕ್ಕೆ ಬೆಂಬಲ ನೀಡಲು ಈ ಆದೇಶ ನೀಡಲಾಗಿದೆ.

ಇತರೆ ರಾಜ್ಯಗಳಲ್ಲಿ ನೋಂದಣಿಯಾಗಿರುವ ಪ್ರವಾಸಿ ವಾಹನಗಳು ಮತ್ತು ಆ ರಾಜ್ಯಗಳಲ್ಲಿ ರಸ್ತೆ ತೆರಿಗೆ ಪಾವತಿಸುವ ವಾಹನಗಳಿಗೆ ಅಕ್ಟೋಬರ್ 16 ಮತ್ತು 24ರ ನಡುವೆ ಕರ್ನಾಟಕದಲ್ಲಿ ಪ್ರವೇಶ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗುತ್ತದೆ ಎಂದು ಸಾರಿಗೆ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ.

ಬೆಲ್ಜಿಯಂನಲ್ಲಿ ಭಯೋತ್ಪಾದನಾ ಕೃತ್ಯಕ್ಕೆ ಇಬ್ಬರು ಬಲಿ

ದಸರಾ ಮಹೋತ್ಸವದ ಒಂಬತ್ತು ದಿನಗಳ ಅವಧಿಯಲ್ಲಿ ಮೈಸೂರು ನಗರ ಮತ್ತು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆಆರ್‍ಎಸ್ ಅಣೆಕಟ್ಟೆಗೆ ತೆರಳುವ ವಾಹನಗಳು ಮಾತ್ರ ಶುಲ್ಕ ವಿನಾಯಿತಿ ಪಡೆಯಲು ಅರ್ಹವಾಗಿರುತ್ತವೆ. ತೆರಿಗೆ ವಿನಾಯಿತಿಗಳಿಗೆ ಅರ್ಹರಾಗಲು ಅವರು ವಿಶೇಷ ಪರವಾನಗಿ ಪಡೆಯಬೇಕಾಗುತ್ತದೆ ಎಂದು ಇಲಾಖೆ ಹೇಳಿದೆ. ಕೇರಳ ಮತ್ತು ತಮಿಳುನಾಡಿನಿಂದ ಮ್ಯಾಕ್ಸಿ ಕ್ಯಾಬ್‍ಗಳು, ಟ್ಯಾಕ್ಸಿಗಳು ಮತ್ತು ಪ್ರವಾಸಿ ಬಸ್‍ಗಳು ತೆರಿಗೆ ವಿನಾಯಿತಿಯಿಂದ ಹೆಚ್ಚಿನ ಪ್ರಯೋಜನ ಪಡೆಯಲಿವೆ.

ದಸರಾ ಸಂದರ್ಭದಲ್ಲಿ ಪ್ರತಿದಿನ 2,000 ಟ್ಯಾಕ್ಸಿಗಳು, 1,000 ಮ್ಯಾಕ್ಸಿ ಕ್ಯಾಬ್‍ಗಳು ಮತ್ತು 300 ಪ್ರವಾಸಿ ಬಸ್‍ಗಳು ಮೈಸೂರು ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಬರುತ್ತವೆ. ಪ್ರವೇಶ ಶುಲ್ಕ ಟ್ಯಾಕ್ಸಿಗಳಿಗೆ 300 ರೂ. ಮ್ಯಾಕ್ಸಿ ಕ್ಯಾಬ್‍ಗಳಿಗೆ 1,800-2,000 ರೂ. ಮತ್ತು ಬಸ್‍ಗಳಿಗೆ ಅವುಗಳ ಆಸನ ಸಾಮಥ್ರ್ಯದ ಆಧಾರದ ಮೇಲೆ 15,000 ರೂ.ವರೆಗೆ ಇರುತ್ತದೆ. ಪ್ರತಿ ಪ್ರವೇಶಕ್ಕೆ ಶುಲ್ಕ ವಿಧಿಸಲಾಗುತ್ತದೆ ಅದು ಏಳು ದಿನಗಳವರೆಗೆ ಮಾನ್ಯವಾಗಿರುತ್ತದೆ.

ಸ್ಥಳೀಯ ಆರ್ಥಿಕತೆ ಸುಧಾರಣೆ ತೆರಿಗೆ ವಿನಾಯಿತಿ ಇರುವುದರಿಂದ ದಸರಾ ಸಮಯದಲ್ಲಿ ಮೈಸೂರು ಮತ್ತು ಕೆಆರ್‍ಎಸ್‍ಗೆ ಹೆಚ್ಚಿನ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದ್ದು, ಹೋಟೆಲ್ ಉದ್ಯಮದ ಜೊತೆ ಸ್ಥಳೀಯ ಆರ್ಥಿಕತೆ ಸುಧಾರಣೆಗೆ ಇದು ಅನುಕೂಲವಾಗಲಿದೆ. ಮೈಸೂರು ದಸರಾದಂತೆ ಮಂಗಳೂರು ದಸರಾ ಕೂಡ ವಿಶೇಷವಾಗಿರುವುದರಿಂದ ಇಲ್ಲಿಗೂ ಕೂಡ ತೆರಿಗೆ ವಿನಾಯಿತಿ ಘೋಷಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ರಾಹುಲ್ ಪ್ರಧಾನಿ : ತರೂರ್

32 ಒಕ್ಕೂಟಗಳನ್ನು ಪ್ರತಿನಿಧಿಸುವ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟವು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯಿಂದ ನಷ್ಟವಾಗಿರುವುದರಿಂದ ಸರ್ಕಾರ ಈ ವರ್ಷ ತೆರಿಗೆ ವಿನಾಯಿತಿಯನ್ನು ಘೋಷಿಸುವುದಿಲ್ಲ ಎಂದು ಆತಂಕದಲ್ಲಿತ್ತು.

ಬಿಹಾರದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು

ಬಕ್ಸರ್,ಅ.17- ಬಿಹಾರದ ಬಕ್ಸರ್ ಜಿಲ್ಲೆಯ ಡುಮಾರಾನ್ ನಿಲ್ದಾಣದ ಬಳಿ ಗೂಡ್ಸ್ ರೈಲಿನ ಕೋಚ್ ಹಳಿತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೆ ವಕ್ತಾರರ ಪ್ರಕಾರ, ಘಟನೆ ನಡೆದಾಗ ಗೂಡ್ಸ್ ರೈಲು ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್‍ನಿಂದ ಬಕ್ಸರ್ ಮೂಲಕ ಫತುಹಾಗೆ ತೆರಳುತ್ತಿತ್ತು. ಒಂದು ಕೋಚ್‍ನ ನಾಲ್ಕು ಚಕ್ರಗಳು ಹಳಿತಪ್ಪಿದ ಪರಿಣಾಮ ಲೊಕೊ ಪೈಲಟ್ ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದರು.

ಮಾಹಿತಿಯ ಮೇರೆಗೆ ಹಿರಿಯ ರೈಲ್ವೇ ಅಧಿಕಾರಿಗಳ ತಂಡ ಕೂಡ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು.ರೈಲ್ವೇ ಸಿಬ್ಬಂದಿ ಕೂಡ ಸ್ಥಳಕ್ಕೆ ಆಗಮಿಸಿದ್ದು, ಹಳಿತಪ್ಪಿದ ಕೋಚ್ ಅನ್ನು ಮತ್ತೆ ಹಳಿಗೆ ತರಲು ಪ್ರಯತ್ನ ನಡೆಸುತ್ತಿದ್ದಾರೆ.

ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ರಾಹುಲ್ ಪ್ರಧಾನಿ : ತರೂರ್

ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ವರದಿಯಾದ ಎರಡನೇ ಹಳಿ ತಪ್ಪಿದ ಘಟನೆ ಇದಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಅಕ್ಟೋಬರ್ 11 ರಂದು, ಬಕ್ಸಾರ್‍ನಲ್ಲಿ ಕಾಮಾಖ್ಯ-ಬೌಂಡ್ ನಾರ್ತ್ ಈಸ್ಟ್ ಎಕ್ಸ್‍ಪ್ರೆಸ್‍ನ 21 ಬೋಗಿಗಳು ಹಳಿತಪ್ಪಿದ ನಂತರ ನಾಲ್ವರು ಸಾವನ್ನಪ್ಪಿದರು ಮತ್ತು 42 ಮಂದಿ ಗಾಯಗೊಂಡಿದ್ದರು.

ಪ್ರೇಮ್ ಚಂದ್ ಯಾದವ್ ಮನೆ ಧ್ವಂಸ ಆದೇಶಕ್ಕೆ ತಡೆಯಾಜ್ಞೆ

ಪ್ರಯಾಗ್‍ರಾಜ್,ಆ.17-ಇತ್ತೀಚೆಗೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ನಡೆದಿದ್ದ ಆರು ಮಂದಿಯ ಕೊಲೆ ಪ್ರಕರಣದಲ್ಲಿ ಪ್ರೇಮ್ ಚಂದ್ ಯಾದವ್ ಅವರ ಮನೆಯನ್ನು ಕೆಡವಲು ಡಿಯೋರಿಯಾ ಜಿಲ್ಲೆಯ ಕಂದಾಯ ಅಧಿಕಾರಿಯೊಬ್ಬರ ಆದೇಶಕ್ಕೆ ಅಲಹಾಬಾದ್ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಡಿಯೋರಿಯಾ ತಹಸೀಲ್ದಾರ್ ಅಕ್ಟೋಬರ್ 11 ರಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪ್ರೇಮ್ ಚಂದ್ ಅವರ ಮನೆಯನ್ನು ಕೆಡವಲು ಆದೇಶ ಹೊರಡಿಸಿದ್ದಾರೆ. ಈ ಆದೇಶದ ವಿರುದ್ಧ ಅವರ ತಂದೆ ರಾಮ್ ಭವನ್ ಯಾದವ್ ಹೈಕೋರ್ಟ್ ಮೊರೆ ಹೋಗಿದ್ದರು.

ಅಕ್ಟೋಬರ್ 2 ರಂದು, 50 ವರ್ಷದ ಪ್ರೇಮ್ ಚಂದ್ ಅವರ ಮನೆಗೆ ಹೋದಾಗ ಅವರ ಪ್ರತಿಸ್ಪರ್„ ಸತ್ಯಪ್ರಕಾಶ್ ದುಬೆ ಮತ್ತು ಅವರ ಕುಟುಂಬದವರು ಹರಿತವಾದ ಆಯುಧಗಳಿಂದ ಹಲ್ಲೇನಡೆಸಿ ಹತ್ಯೆ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ, ಪ್ರೇಮ್ ಚಂದ್ ಬೆಂಬಲಿಗರು ದುಬೆ ಅವರ ಮನೆಯ ಮೇಲೆ ದಾಳಿ ಮಾಡಿದರು ಮತ್ತು ದುಬೆ ಮತ್ತು ಮಕ್ಕಳು ಸೇರಿದಂತೆ ಅವರ ಕುಟುಂಬದ ಐದು ಸದಸ್ಯರನ್ನು ಬರ್ಬರವಾಗಿ ಕೊಂದು ಹಾಕಿದ್ದರು.
ಈ ಆದೇಶದ ವಿರುದ್ಧ ರಾಮ್ ಭವನ್ ಯಾದವ್ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ನ್ಯಾಯಮೂರ್ತಿ ಚಂದ್ರಕುಮಾರ್ ರೈ ಈ ಆದೇಶ ನೀಡಿದ್ದಾರೆ.

ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ರಾಹುಲ್ ಪ್ರಧಾನಿ : ತರೂರ್

ಯುಪಿ ಕಂದಾಯ ಸಂಹಿತೆ, 2006 ರ ಸೆಕ್ಷನ್ 67 (5) ರ ಅಡಿಯಲ್ಲಿ ಮೇಲ್ಮನವಿಯ ಪರಿಹಾರವನ್ನು ಪಡೆಯದೆ ರಾಮ ಭವನವು ತ್ವರಿತ ಅರ್ಜಿಯನ್ನು ಸಲ್ಲಿಸಿರುವುದರಿಂದ ಅ„ಕಾರಿಗಳು ಮನೆಯನ್ನು ಕೆಡವಲು ಹಠ ಹಿಡಿದಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.