Home Blog Page 1889

ಗಾಜಾದಲ್ಲಿ ಆಹಾರ, ನೀರು ಇಲ್ಲದೆ 2.3 ಮಿಲಿಯನ್ ಜನರ ನರಳಾಟ

ಡೀರ್-ಇಎಲ್-ಬಾಲಾಹ್ (ಗಾಜಾ ಪಟ್ಟಿ), ಅ.15- ಹಮಾಸ್ ಉಗ್ರಗಾಮಿಗಳು ಇಸ್ರೇಲ್ ಮೇಲೆ ಮಾರಣಾಂತಿಕ ದಾಳಿಯನ್ನು ಪ್ರಾರಂಭಿಸಿದ ಒಂದು ವಾರದ ನಂತರ ಗಾಜಾದ 2.3 ಮಿಲಿಯನ್ ನಾಗರಿಕರು ಆಹಾರ, ನೀರು ಮತ್ತು ಸುರಕ್ಷತೆಗಾಗಿ ಪರದಾಡುವಂತಾಗಿದೆ. ಸಾವಿರಾರು ಜನ ನಿರಾಶ್ರಿತರನ್ನು ಉತ್ತರದಿಂದ ಸ್ಥಳಾಂತರಿಸಲು ಇಸ್ರೇಲ್ ಆದೇಶಿಸಿದೆ, ಇನ್ನೂ ಕೆಲವರು ಆಸ್ಪತ್ರೆಗಳಲ್ಲಿ ಬಂಧಿಯಾಗಿದ್ದಾರೆ.

ಈ ಪ್ರದೇಶದಲ್ಲಿ ಇಸ್ರೇಲ್ ಪಡೆಗಳೊಂದಿಗೆ ಅಮೆರಿಕಾದ ಯುದ್ಧನೌಕೆಗಳ ನಿಯೋಜನೆ ಹೆಚ್ಚಾಗುತ್ತಿದೆ. ಗಾಜಾದ ಗಡಿಯುದ್ದಕ್ಕೂ ಉಗ್ರರು ತಮ್ಮನ್ನು ತಾವು ರಕ್ಷಿಸಲು ಅಡುಗುತಾಣಗಳನ್ನು ಮಾಡಿಕೊಂಡಿದ್ದಾರೆ. ಅದೇ ರೀತಿ ಇಸ್ರೆಲಿಗಳು ಅಡುತಾಣಗಳನ್ನು ರಚಿಸಿಕೊಳ್ಳುತ್ತಿದ್ದಾರೆ. ಹಮಾಸ್ ಉಗ್ರರ ರಾಕೇಟ್ ದಾಳಿಯಿಂದ ಗಾಯಗೊಂಡಿರುವ ಇಸ್ರೆಲ್ ತಕ್ಕ ಪ್ರತ್ಯುತ್ತರಕ್ಕಾಗಿ ತಯಾರು ಮಾಡಿಕೊಳ್ಳುತ್ತಿದೆ. ಉಗ್ರರ ಆಕ್ರಮಣದ ಬಳಿಕ ಇಸ್ರೆಲ್ ಪ್ರತಿದಾಳಿ ನಡೆಸಿದ್ದರಿಂದ ಈವರೆಗೂ 2,329 ಪ್ಯಾಲೆಸ್ಟೀನಿಯಾದವರು ಕೊಲ್ಲಲ್ಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ಹೇಳಿದೆ. ಇದು ಐದು ಯುದ್ಧಗಳಿಗಿಂತಲೂ ಹೆಚ್ಚು ಜನರನ್ನು ಬಲಿ ಪಡೆದ ಆಕ್ರಮಣವಾಗಿದೆ..

ಕನ್ನಡದ ಶಾಂತಿ ಮಂತ್ರ ವಿಶ್ವಕ್ಕೆ ಪಸರಿಸಿ : ದಸರಾ ಮಹೋತ್ಸವಕ್ಕೆ ಹಂಸಲೇಖ ಚಾಲನೆ

ಅಮೆರಿಕಾದ ಅಂಕಿಅಂಶಗಳ ಪ್ರಕಾರ 2014 ರ ಬೇಸಿಗೆಯಲ್ಲಿ ನಡೆದ ಯುದ್ಧದಲ್ಲಿ 1,462 ನಾಗರಿಕರು ಸೇರಿದಂತೆ 2,251 ಪ್ಯಾಲೆಸ್ಟೀನಿಯನ್ನರು ಕೊಲ್ಲಲ್ಪಟ್ಟಿದ್ದರು. ಆರು ವಾರಗಳ ಕಾಲ ನಡೆದ ಯುದ್ಧದಲ್ಲಿ ಆರು ನಾಗರಿಕರು ಸೇರಿದಂತೆ 74 ಇಸ್ರೆಲಿಗಳು ಕೊಲ್ಲಲ್ಪಟ್ಟರು.

ಹಮಾಸ್ ಉಗ್ರರು ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ನಡೆಸಿದ ದಾಳಿಯಲ್ಲಿ1,300 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 1973ರಲ್ಲಿ ಈಜಿಪ್ಟ್ ಮತ್ತು ಸಿರಿಯಾದೊಂದಿಗಿನ ಸಂಘರ್ಷದ ನಂತರ ಇಸ್ರೇಲ್‍ಗೆ ಇದು ಅತ್ಯಂತ ಮಾರಕ ಯುದ್ಧವಾಗಿದೆ.

ಗಾಜಾ ಪ್ರದೇಶದ ಉತ್ತರದಲ್ಲಿರುವ ಪ್ಯಾಲೆಸ್ಟೀಯನಿಯರಿಗೆ ಕರಪತ್ರ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಿರುವ ಇಸ್ರೆಲ್ ದಕ್ಷಿಣ ಭಾಗಕ್ಕೆ ಸ್ಥಳಾಂತರಗೊಳ್ಳುವಂತೆ ಸಲಹೆ ನೀಡಿದೆ. ಗಾಜಾ ನಗರದ ಉತ್ತರದಲ್ಲಿ ಉಗ್ರರ ಭೂಗತ ಅಡಗುತಾಣಗಳನ್ನು ಗುರುತಿಸಿ ತೀವ್ರ ಸ್ವರೂಪದ ಕಾರ್ಯಾಚರಣೆ ನಡೆಸಲು ಸಿದ್ಧತೆಗಳಾಗಿವೆ. ನಾಗರಿಕರನ್ನು ಗುರಾಣಿಯಂತೆ ಬಳಕೆ ಮಾಡಲು ಮುಂದಾಗಿರುವ ಹಮಾಸ್ ಯಾರು ಸ್ಥಳಾಂತರಗೊಳ್ಳಬಾರದು. ಮನೆ ಬಿಟ್ಟು ಹೊರ ಬರಬಾರದು ಎಂದು ಎಚ್ಚರಿಕೆ ನೀಡುತ್ತಿದೆ. ಅತ್ತ ಇಸ್ರೆಲ್ ದಾಳಿಯ ಆತಂಕ ಇತ್ತ ಹಮಾಸ್ ಉಗ್ರರ ಬೆದರಿಕೆ ಸಾಮಾನ್ಯ ಜನರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 40 ಕಿಲೋಮೀಟರ್ ಉದ್ದದ (25 ಮೈಲಿ ಉದ್ದದ) ಕರಾವಳಿ ಪ್ರದೇಶವನ್ನು ಇಸ್ರೆಲ್‍ನ ಸಂಪೂರ್ಣ ಮುತ್ತಿಗೆ ಹಾಕಲು ನಿರ್ಧರಿಸಿದೆ.

ದಾಳಿಗೂ ಮುನ್ನಾ ಸ್ಥಳಾಂತರಕ್ಕೂ ಹಲವು ಆತಂಕಗಳು ಎದರಾಗಿವೆ. ಉತ್ತರ ಆಸ್ಪತ್ರೆಯ ಇನ್ಕ್ಯುಬೇಟರ್‍ಗಳಲ್ಲಿನ ನವಜಾತ ಶಿಶುಗಳು ಮತ್ತು ತೀವ್ರ ನಿಗಾದಲ್ಲಿರುವ ಒಟ್ಟು 2ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಸ್ಥಳಾಂತರಿಸುವುದು ಮರಣದಂಡನೆಗೆ ಸಮ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವಿಶ್ವಸಂಸ್ಥೆ ಪ್ರಕಾರ ಗಾಜಾದ ಆಸ್ಪತ್ರೆಗಳ ತೀವ್ರ ನಿಗಾಘಟಕಗಳಿಗೆ ಅಗತ್ಯ ಶಕ್ತಿ ಪೂರೈಸುವ ಜನರೇಟರ್‍ಗಳಿಗೆ ಎರಡು ದಿನಗಳಲ್ಲಿ ಇಂಧನ ಖಾಲಿಯಾಗುವ ನಿರೀಕ್ಷೆಯಿದೆ. ಅದರಿಂದಲೂ ಸಾವಿರಾರು ರೋಗಿಗಳ ಜೀವ ಹಾನಿಯಾಗುವ ಆತಂಕವಿದೆ.

ಮಿನಿ ಬಸ್ ಕಂಟೈನರ್‌ಗೆ ಡಿಕ್ಕಿಯಾಗಿ 12 ಮಂದಿ ಸಾವು

ಆಕ್ರಮಣದ ಬಳಿಕ ಇಸ್ರೇಲ್ ಗಾಜಾವನ್ನು ಸುತ್ತುವರೆದಿದ್ದು, ನೀರು ಮತ್ತು ವೈದ್ಯಕೀಯ ಸರಬರಾಜುಗಳ ಕೊರತೆಯಿಂದಾಗಿ ಮಾನವೀಯ ಬಿಕ್ಕಟ್ಟು ಉದ್ಭವಿಸಿದೆ. ಇಂಧನವಿಲ್ಲದೆ ವಿದ್ಯುತ್ ಸ್ಥಾವರಗಳನ್ನು ಮುಚ್ಚುವ ಅನಿವಾರ್ಯತೆ ಎದುರಾಗಿದೆ. ಬೇಕರಿಗಳು ಮುಚ್ಚಿರುವುದರಿಂದ ನಿವಾಸಿಗಳು ತಮ್ಮ ಮಕ್ಕಳಿಗೆ ಬ್ರೆಡ್ ಖರೀದಿಸಲು ಸಾಧ್ಯವಾಗುತ್ತಿಲ್ಲ. ನಾವು ಯಾರನ್ನು ಕೊಂದಿಲ್ಲ ನಮಗೇಕೆ ಈ ಶಿಕ್ಷೆ ಎಂದು ಗಾಜಾ ನಗರದ ಹೈಫಾ ಖಾಮಿಸ್ ಅಲ್-ಶುರಾಫಾ ಅಳಲು ತೊಡಿಕೊಂಡಿದ್ದಾರೆ. ತಮ್ಮ ಕುಟುಂಬದ ಆರು ಮಂದಿ ಸದಸ್ಯರೊಂದಿಗೆ ಕಾರಿನಲ್ಲಿ ದಕ್ಷಿಣದತ್ತ ಅವರು ವಲಸೆ ಹೋಗಿದ್ದಾರೆ.

ದಕ್ಷಿಣಕ್ಕೆ ತೆರಳಲು ಗಾಜಾದ ಎರಡು ಸುರಕ್ಷಿತ ಮುಖ್ಯಮಾರ್ಗಗಳಲ್ಲಿ ಪ್ರಯಾಣಿಸಲು ಶನಿವಾರ ಮಧ್ಯಾಹ್ನದ ವರೆಗೂ ಅವಕಾಶ ಕಲ್ಪಿಸಲಾಗಿತ್ತು. ಸ್ಥಳಾಂತರಕ್ಕೆ ಅಂತಿಮ ಗಡುವು ಕುರಿತು ಸ್ಪಷ್ಟತೆ ಇಲ್ಲ.

ಇಸ್ರೆಲ್‍ನಿಂದ ದೆಹಲಿಗೆ ಬಂದಿಳಿದ 471 ಭಾರತೀಯರು

ನವದೆಹಲಿ, ಅ.15- ಇಸ್ರೆಲ್‍ನ ಟೆಲ್ ಅವೀವ್‍ನಿಂದ ಒಟ್ಟು 471 ಭಾರತೀಯರನ್ನು ಹೊತ್ತ ಎರಡು ವಿಮಾನಗಳು ಭಾನುವಾರ ಬೆಳಿಗ್ಗೆ ದೆಹಲಿಗೆ ಬಂದಿಳಿದಿವೆ. ಒಂದು ವಿಮಾನ ಏರ್ ಇಂಡಿಯಾ ಮತ್ತು ಇನ್ನೊಂದು ವಿಮಾನ ಸ್ಪೈಸ್ ಜೆಟ್ ಸಂಸ್ಥೆಗಳಿಗೆ ಸೇರಿದ್ದವು. ಉಗ್ರಗಾಮಿ ಗುಂಪು ಹಮಾಸ್‍ನೊಂದಿಗೆ ತೀವ್ರ ಸಂಘರ್ಷ ನಡೆಯುತ್ತಿರುವ ಇಸ್ರೆಲ್‍ನಿಂದ ಹಿಂತಿರುಗಲು ಬಯಸುವ ಭಾರತೀಯರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರವು ಪ್ರಾರಂಭಿಸಿದ ಆಪರೇಷನ್ ಅಜಯ್ ಅಡಿಯಲ್ಲಿ ಒಟ್ಟು ನಾಲ್ಕು ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ.

197 ಪ್ರಯಾಣಿಕರೊಂದಿಗೆ ಮೂರನೇ ವಿಮಾನವು ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಭಾನುವಾರ ಹೇಳಿದ್ದಾರೆ.

ಮಿನಿ ಬಸ್ ಕಂಟೈನರ್‌ಗೆ ಡಿಕ್ಕಿಯಾಗಿ 12 ಮಂದಿ ಸಾವು

274 ಪ್ರಯಾಣಿಕರನ್ನು ಹೊಂದಿರುವ ನಾಲ್ಕನೇ ವಿಮಾನವು ರಾಷ್ಟ್ರ ರಾಜಧಾನಿಯನ್ನು ಮುಟ್ಟಿದೆ ಎಂದು ಅವರು ಸಾಮಾಜಿಕ ಮಾಧ್ಯಮ ಎಕ್ಸ್‍ನಲ್ಲಿ ಪೋಸ್ಟ್ ಗಳಲ್ಲಿ ತಿಳಿಸಿದ್ದು, ಪ್ರಯಾಣಿಕರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಏರ್ ಇಂಡಿಯಾದಿಂದ ನಿರ್ವಹಿಸಲ್ಪಡುವ ಟೆಲ್ ಅವಿವ್‍ನಿಂದ ಎರಡು ಚಾರ್ಟರ್ಡ್ ವಿಮಾನಗಳು ಶುಕ್ರವಾರ ಮತ್ತು ಶನಿವಾರದಂದು ಒಟ್ಟು 435 ಕ್ಕೂ ಹೆಚ್ಚು ಪ್ರಯಾಣಿಕರೊಂದಿಗೆ ಬಂದಿವೆ.

ಬೆಂಗಳೂರಿನಲ್ಲಿ ಮತ್ತೊಂದು ಐಟಿ ದಾಳಿ, ಮತ್ತೆ 45 ಕೋಟಿ ರೂ. ಪತ್ತೆ!

ಬೆಂಗಳೂರು, ಅ.13- ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರಿನಲ್ಲಿ ಮತ್ತೊಬ್ಬ ಗುತ್ತಿಗೆದಾರರ ಮನೆಯ ಮೇಲೆ ದಾಳಿ ನಡೆಸಿದ್ದು, ಮತ್ತೆ 45 ಕೋಟಿ ರೂಪಾಯಿ ಪತ್ತೆ ಹಚ್ಚಿದ್ದಾರೆ. ಪಂಚರಾಜ್ಯಗಳ ವಿಧಾನಸಭೆ ಹಾಗೂ ಮುಂದಿನ ವರ್ಷದ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಳೆದ ಹತ್ತು ದಿನಗಳಿಂದ ರಾಜ್ಯದ ಬೆಂಗಳೂರು ಸೇರಿದಂತೆ ಹಲವು ಕಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಿರಂತರವಾಗಿ ತಪಾಸಣೆ ನಡೆಸುತ್ತಿದ್ದಾರೆ. ಅಕ್ಟೋಬರ್ 12ರಂದು ಬೆಂಗಳೂರಿನ ಆರ್.ಟಿ.ನಗರ ಸೇರಿದಂತೆ ಇತರ ಭಾಗಗಳಲ್ಲಿ ತಪಾಸಣೆ ನಡೆಸಿ ನಲವತ್ತು ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಪತ್ತೆ ಹಚ್ಚಲಾಗಿದೆ ಎಂದು ಹೇಳಲಾಗಿತ್ತು.

ಮತ್ತೊಂದು ಕಾರ್ಯಾಚರಣೆಯಲ್ಲಿ ಬೆಂಗಳೂರಿನ ರಾಜಾಜಿನಗರದ ಕೇತಮಾರನಹಳ್ಳಿಯಲ್ಲಿರುವ ಪ್ಲಾಟ್‍ವೊಂದರ ಮೇಲೆ ನಿನ್ನೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ಗುತ್ತಿಗೆದಾರ ಸಂತೋಷ್ ಅವರಿಗೆ ಸೇರಿದ ಈ ಪ್ಲಾಟ್‍ನಲ್ಲಿ 45 ಕೋಟಿ ರೂಪಾಯಿ ಹಣ ಪತ್ತೆಯಾಗಿದೆ.

ಪಾರ್ಟಿಯಲ್ಲಿ ಶೂಟೌಟ್ ಮೂವರ ಸಾವು

ಆರಂಭದಲ್ಲಿ ಐದು ಮಂದಿ ಅಧಿಕಾರಿಗಳು ತಪಾಸಣೆ ನಡೆಸಿದ್ದು, ಹಣ ಪತ್ತೆಯಾದ ಬಳಿಕ ಮತ್ತಷ್ಟು ಮಂದಿಯನ್ನು ಕರೆಸಿಕೊಂಡಿದ್ದಾರೆ. ಮೂರು ಟ್ರಂಕ್, ಮೂರು ಬ್ಯಾಗ್ ಹಾಗೂ ಎರಡು ಸೂಟ್‍ಕೇಸ್‍ನಲ್ಲಿ ಹಣವನ್ನು ಬಚ್ಚಿಡಲಾಗಿತ್ತು ಎಂಬ ಮಾಹಿತಿಗಳು ಹರಿದಾಡುತ್ತಿವೆ. ಒಟ್ಟು 15 ಮಂದಿ ಅಧಿಕಾರಿಗಳು ತಡ ರಾತ್ರಿವರೆಗೂ ತಪಾಸಣೆ ನಡೆಸಿ 32 ಬಾಕ್ಸ್‍ಗಳಲ್ಲಿ ಹಣವನ್ನು ತುಂಬಿಕೊಂಡು ಹೋಗಿದ್ದು, ಹಣದ ಬಗ್ಗೆ ಮಾಹಿತಿ ನೀಡುವಂತೆ ಸಂತೋಷ್‍ಗೆ ನೋಟಿಸ್ ನೀಡಲಾಗಿದೆ ಎಂದು ಹೇಳಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಗುತ್ತಿಗೆ ಕಾಮಗಾರಿಗಳಿಗೆ ಬಾಕಿ ಇದ್ದ ಬಿಲ್ ಪಾವತಿಗೆ ಕಮಿಷನ್ ಪಡೆಯಲಾಗುತ್ತಿದೆ. ಅದರಿಂದ ಸಂಗ್ರಹಿಸಿದ ಹಣವನ್ನು ಬೇರೆ ಬೇರೆ ಕಡೆ ಇರಿಸಲಾಗಿದ್ದು, ಅದರ ಜಾಡು ಹಿಡಿದು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಆರ್.ಟಿ.ನಗರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಡೆಸಿದ ವಿಚಾರಣೆಯ ಮಾಹಿತಿ ಆಧಾರಿಸಿ ಆದಾಯ ತೆರಿಗೆ ಅಧಿಕಾರಿಗಳು ಮತ್ತಷ್ಟು ಮಂದಿಯ ಮೇಲೆ ಕಣ್ಣಿಟ್ಟಿದ್ದರು. ಎರಡು ಕಾರ್ಯಾಚರಣೆಯಲ್ಲಿ ಒಟ್ಟು 80 ಕೋಟಿ ರೂಪಾಯಿಗೂ ಅಕ ಮೊತ್ತದ ಹಣ ಪತ್ತೆ ಮಾಡಿದ್ದಾರೆ ಎಂಬ ಮಾಹಿತಿ ಇದೆ.

ಮಿನಿ ಬಸ್ ಕಂಟೈನರ್‌ಗೆ ಡಿಕ್ಕಿಯಾಗಿ 12 ಮಂದಿ ಸಾವು

ವಿಚಾರಣೆಯ ವೇಳೆ ಈ ಹಣ ವಿಧಾನಪರಿಷತ್‍ನ ಮಾಜಿ ಸದಸ್ಯ ಕಾಂತರಾಜು ಅವರಿಗೆ ಸೇರಿದೆ ಎಂದು ಸಂತೋಷ್ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದಕ್ಕೆ ಸ್ಪಷ್ಟನೆ ನೀಡಿದ ಕಾಂತರಾಜು ಅವರು ಸಂತೋಷ್ ಯಾರು ಎಂದು ತಮಗೆ ಗೋತ್ತೆ ಇಲ್ಲ, ನಾನು ಆತನನ್ನು ನೋಡಿಯೇ ಇಲ್ಲ. ಆದಾಯ ತೆರಿಗೆ ಅಧಿಕಾರಿಗಳ ದಾಳಿಯಲ್ಲಿ ಸಿಕ್ಕ ಹಣಕ್ಕೂ ತಮಗೂ ಸಂಬಂಧವೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ನಾನು ನೆಲಮಂಗಲದ ನನ್ನ ಮನೆಯಲ್ಲೇ ಇದ್ದೇನೆ, ಆದಾಯ ತೆರಿಗೆ ದಾಳಿಗೆ ಸಂಬಂಧಪಟ್ಟಂತೆ ನನಗೆ ಯಾವ ನೋಟಿಸ್ ಬಂದಿಲ್ಲ. ನನಗೆ ಯಾವ ಸಹೋದರರು ಇಲ್ಲ, ಹೀಗಾಗಿ ನನ್ನ ಸಹೋದರರನ್ನು ವಿಚಾರಣೆ ನಡೆಸುವ ಸಾಧ್ಯತೆಯೂ ಇಲ್ಲ ಎಂದಿದ್ದಾರೆ.

ಕನ್ನಡದ ಶಾಂತಿ ಮಂತ್ರ ವಿಶ್ವಕ್ಕೆ ಪಸರಿಸಿ : ದಸರಾ ಮಹೋತ್ಸವಕ್ಕೆ ಹಂಸಲೇಖ ಚಾಲನೆ

ಮೈಸೂರು,ಅ.15- ಕನ್ನಡದ ಶಾಂತಿ ಮಂತ್ರ ವಿಶ್ವಕ್ಕೆ ಪಸರಿಸಬೇಕು ಎಂದು ನಾದಬ್ರಹ್ಮ, ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ ಕರೆ ನೀಡಿದರು. ಚಾಮುಂಡಿ ಬೆಟ್ಟದಲ್ಲಿಂದು ನಾಡಹಬ್ಬ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಕನ್ನಡವನ್ನು ಪ್ರಪಂಚದ ವೇದಿಕೆಯಲ್ಲಿ ಪ್ರತಿಷ್ಠಾಪಿಸಬೇಕು. ಆಗ ಕನ್ನಡ ಜಗತ್ತಿನ ಭಾಷೆಯಾಗಿ ಬೆಳೆಯಲು ಸಾಧ್ಯವಿದೆ. ಅಭಿವೃದ್ಧಿ ಮತ್ತು ಶಾಂತಿ ಸಂವೃದ್ದಿ ಕನ್ನಡಿಗರ ಒಂದು ಅಂಶ ಕಾರ್ಯಸೂಚಿಯಾಗಬೇಕು ಎಂದರು.

ಪೂಜ್ಯ ಕನ್ನಡ – ಕನ್ನಡಿಗರಿಗೆ ನನ್ನ ನಮನ ಎಂದು ಭಾಷಣ ಆರಂಭಿಸಿದ ಅವರು, ಈ ಬಾರಿಯ ದಸರಾ ಮಹೋತ್ಸವವನ್ನು ಕರ್ನಾಟಕ ಐದಶ ಎಂದು ಕರೆಯೋಣ, ಕರ್ನಾಟಕದ ಏಕೀಕರಣವಾಗಿ 50 ವರ್ಷಗಳಾಗಿದೆ ಹಾಗೆಯೇ ನನ್ನ ಕಲಾ ಸೇವೆಯು ಆರಂಭವಾಗಿ 50 ವರ್ಷಗಳು ತುಂಬಿದೆ .ಹಾಗಾಗಿ ಈ ಬಾರಿಯ ದಸರಾ ಮಹೋತ್ಸವವನ್ನು ಕರ್ನಾಟಕ ಐದಶ ಎಂದು ಕರೆಯೋಣ. ನನ್ನ ಐವತ್ತು ವರ್ಷಗಳ ಸೇವೆಗೆ ಸಿಕ್ಕಿರುವ ಇದು ಬಹಳ ದೊಡ್ಡ ಬೆಲೆ ಬಾಳುವಂತದು ಎಂದರು.

ಈ ದೇವಾಲಯ, ಈ ಬೆಟ್ಟ, ಈ ದೇವಿ, ಹಬ್ಬ, ಈ ದಿಬ್ಬ, ಈ ದೀಪ ಹಚ್ಚೋದು, ನನ್ನ ಸೌಭಾಗ್ಯ. ದೈವಸಮಾನಾವಾದ ಈ ನುಡಿಗೆ , ಕನ್ನಡ ನಾಡಿಗೆ , ಈ ದೇವಾಲಯಕ್ಕೆ , ಈ ಪ್ರೇಮಾಯಣಕ್ಕೆ ಸಾವಿರದ ಶರಣುಗಳು ಎಂದು ಹೇಳಿದರು.ಈ ಅವಕಾಶಕ್ಕಾಗಿ ಯಾರನ್ನು ನೆನೆಯಬೇಕು, ಅಪ್ಪ ಗೋವಿಂದರಾಜು, ಅವ್ವ ರಾಜವ್ವ, ಗುರು ನೀಲಕಂಠನನ್ನೇ, ರಕ್ತದೊಳಗಿನ ನಾದವನ್ನೇ, ಚಂದನವನವನ್ನೇ, ಸರ್ಕಾರವನ್ನೇ , ಸಂವಿಧಾನವನ್ನೇಎಂದು ಬಣ್ಣಿಸಿದರು.

ಚಾಮುಂಡಿ ಬೆಟ್ಟಕ್ಕೆ ಸಾವಿರ ಮೆಟ್ಟಿಲುಗಳಿವೆ. ದಸರಾ ಸಮಾರಂಭದಲ್ಲಿ ಭಾಗವಹಿಸಲು ನಾನು ಸಾವಿರ ಮೆಟ್ಟಿಲುಗಳನ್ನು ಹತ್ತಿ ಬಂದಿದ್ದೇನೆ. ಈ ಅವಕಾಶಕ್ಕಾಗಿ ನಿರಾಯಾಸವಾಗಿ ಬಂದಿಲ್ಲ , ನಾನು ಸಹ ಸಾವಿರ ಮೆಟ್ಟಿಲುಗಳನ್ನು ಜೀವನದಲ್ಲಿ ಹತ್ತಿ ಇಂದು ಇಂತಹ ಒಂದು ದೊಡ್ಡ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದೇನೆ ಎಂದು ಸಂತಸಪಟ್ಟರು.

ಪಾರ್ಟಿಯಲ್ಲಿ ಶೂಟೌಟ್ ಮೂವರ ಸಾವು

ಸಮೀಕ್ಷೆ ನಡೆಯಬೇಕು: ಕರ್ನಾಟಕದಲ್ಲಿ ಕನ್ನಡ ಮಾತನಾಡುವವರ ಕುರಿತು ಒಂದು ಸಮೀಕ್ಷೆ ನಡೆಯಬೇಕು ಕರ್ನಾಟಕದಲ್ಲಿ ಎಷ್ಟು ಮಂದಿಗೆ ಕನ್ನಡ ಬರುತ್ತದೆ. ಕನ್ನಡ ಬರೆಯಲು ಬರುತ್ತದೆ. ಕನ್ನಡ ಓದಲು ಬರುತ್ತದೆ ಎಂಬ ಎಲ್ಲಾ ವಿಷಯ ಕುರಿತು ಮಾಹಿತಿಯನ್ನು ಸಂಗ್ರಹಿಸಿ ಸಮೀಕ್ಷೆಯನ್ನು ನಡೆಸಬೇಕು ಎಂದು ಅವರು ಹೇಳಿದರು.

ಇದೊಂದು ಡೇಟಾ ಆಗಬೇಕು. ಈ ಮಾಹಿತಿ ನಮ್ಮಲ್ಲಿ ಇರಬೇಕು ಎಂದು ಸರ್ಕಾರಕ್ಕೆ ಇದೇ ವೇಳೆ ಹಂಸಲೇಖ ಅವರು ಮನವಿ ಮಾಡಿದರು. ಸರ್ಕಾರ ಹಾಗೂ ಸಾರ್ವಜನಿಕರ ಒತ್ತಾಸೆ ಮೇರೆಗೆ ಇದನ್ನು ಮಾಡಬೇಕು. ಕನ್ನಡ ಕಲಿಯಬೇಕು ಎಂದು ಮುಂದೆ ಬರುವವರಿಗೆ ಕರ್ನಾಟಕದಲ್ಲಿ 30 ದಿನಗಳೊಳಗೆ ಕನ್ನಡವನ್ನು ಕಲಿಸಬೇಕು. ಅವರು ಕನ್ನಡ ಕಲಿತ ಮೇಲೆ ಅವರಿಗೆ ಕನ್ನಡ ಪಟ್ಟ ನೀಡಬೇಕು. ಕನ್ನಡ ಪಟ್ಟ ಎಂದರೆ ಇದೊಂದು ದಾಖಲೆಯಾಗಿರುತ್ತದೆ ಎಂದರು.

ಮಿನಿ ಬಸ್ ಕಂಟೈನರ್‌ಗೆ ಡಿಕ್ಕಿಯಾಗಿ 12 ಮಂದಿ ಸಾವು

ಎಪಿಎಲ್ , ಬಿಪಿಎಲ್ ಕಾರ್ಡ್ ಇಲ್ಲದಿದ್ದರೂ ಈ ಕನ್ನಡ ಪಟ್ಟ ಹೊಂದಿರುವವರಿಗೆ ಕರ್ನಾಟಕದಲ್ಲಿ ಕೆಲಸ ಸಿಗುವಂತಾಗಬೇಕು ಎಂದವರು ಈ ಸಂದರ್ಭದಲ್ಲಿ ಅವರು ಒತ್ತಾಯಿಸಿದರು. ಇಂದಿನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಹೆಚ್.ಸಿ.ಮಹದೇವಪ್ಪ, ಶಿವರಾಜ್ ತಂಗಡಗಿ, ಕೆ.ಜೆ.ಜಾರ್ಜ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಶ್ರೀವತ್ಸ, ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ಮೇಯರ್ ಶಿವಕುಮಾರ್ ಸೇರಿದಂತೆ ಮತ್ತಿತರ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಥಾಣೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಅನಿಲ ಸೋರಿಕೆ

ಥಾಣೆ, ಅ. 15 -ಮಹಾರಾಷ್ಟ್ರದ ಥಾಣೆ ನಗರದ ಆಸ್ಪತ್ರೆಯೊಂದರಲ್ಲಿ ಮಧ್ಯರಾತ್ರಿಯ ಸಿಲಿಂಡರ್‌ನಿಂದ ಆಮ್ಲಜನಕದ ಅನಿಲ ಸೋರಿಕೆಯಾಗಿದ್ದು ಯಾವುದೇ ಅನಾಹುತ ನಡೆದಿಲ್ಲ. ವಾಗ್ಲೆ ಎಸ್ಟೇಟ್‍ನ ಶ್ರೀನಗರ ಪ್ರದೇಶದಲ್ಲಿರುವ ಮಾತೋಶ್ರೀ ಗಂಗೂಬಾಯಿ ಸಂಭಾಜಿ ಶಿಂಧೆ ಆಸ್ಪತ್ರೆಯಲ್ಲಿ ಮಧ್ಯರಾತ್ರಿ 12.25ಕ್ಕೆ ಈ ಘಟನೆ ನಡೆದಿದೆ.

ಅನಿಲ ಸೋರಿಕೆಯಿಂದಾಗಿ ಯಾವುದೇ ರೋಗಿಗೆ ತೊಂದರೆಯಾಗಿಲ್ಲ ಎಂದು ಥಾಣೆ ಮುನ್ಸಿಪಲ್ ಕಾಪೆರ್ರೇಷನ್‍ನ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಯಾಸಿನ್ ತಾದ್ವಿ ತಿಳಿಸಿದ್ದಾರೆ. ಮೂಲಗಳ ಪ್ರಕಾರ 390 ಕೆಜಿ ಸಿಲಿಂಡರ್‍ನಲ್ಲಿ ಒತ್ತಡ ಹೆಚ್ಚಾದಂತೆ ಅದರ ಸುರಕ್ಷತಾ ಕವಾಟ ಬಾಗಿ ಅನಿಲ ಸೋರಿಕೆಯಾಗ ತೊಡಗಿತು ಎಚ್ಚೆತ್ತ ಅಟೆಂಡೆಂಟ್ ಒತ್ತಡವನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ವಿಶ್ವಕಪ್ ಪಂದ್ಯ : ಭಾರತಕ್ಕೆ 192 ರನ್ ಟಾರ್ಗೆಟ್ ಪಾಕ್

ಸುಮಾರು 45 ನಿಮಿಷ ಆಮ್ಲಜನಕದ ಅನಿಲ ಸೋರಿಕೆಯಾಗಿ ನಂತರ ಅದನ್ನು ಮುಚ್ಚಲಾಯಿತು ಆಸ್ಪತ್ರೆಯಲ್ಲಿ 390 ಕೆಜಿಯ ಮತ್ತೊಂದು ಆಮ್ಲಜನಕ ಗ್ಯಾಸ್ ಸಿಲಿಂಡರ್ ಇದ್ದು ಯಾವುದೇ ತೊಂದರೆಯಾಗಿಲ್ಲ .
ತುರ್ತು ಸಂಸರ್ಭದಲ್ಲಿ ರೋಗಿಗಳಿಗೆ ಪೂರೈಕೆಯಲ್ಲಿ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಮಿನಿ ಬಸ್ ಕಂಟೈನರ್‌ಗೆ ಡಿಕ್ಕಿಯಾಗಿ 12 ಮಂದಿ ಸಾವು

ಮುಂಬೈ, ಅ.15- ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ಸಮೃದ್ಧಿ ಎಕ್ಸ್‍ಪ್ರೆಸ್‍ವೇಯಲ್ಲಿ ಇಂದು ಮುಂಜಾನೆ ವೇಗವಾಗಿ ಬಂದ ಮಿನಿ ಬಸ್ ಕಂಟೈನರ್‌ಗೆ ಡಿಕ್ಕಿ ಹೊಡೆದ ನಡೆದ ಭೀಕರ ಅಪಘಾತದಲ್ಲಿ 12 ಜನರು ಸಾವನ್ನಪ್ಪಿದ್ದಾರೆ ಮತ್ತು 23 ಮಂದಿ ಗಾಯಗೊಂಡಿದ್ದಾರೆ.

ಮುಂಬೈನಿಂದ ಸುಮಾರು 350 ಕಿಮೀ ದೂರದಲ್ಲಿರುವ ವೈಜಾಪುರ ಪ್ರದೇಶದ ಎಕ್ಸ್‍ಪ್ರೆಸ್‍ವೇಯ ಮಧ್ಯರಾತ್ರಿ 12.30 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಅವರು ಪೊಲೀಸರು ಹೇಳಿದರು.ಈ ಮಿನಿ ಬಸ್‍ನಲ್ಲಿ ಸುಮಾರು 35 ಜನರು ಪ್ರಯಾಣಿಸುತ್ತಿದ್ದರು ಎಂದು ಗೊತ್ತಾಗಿದೆ.

ಕಿಯೊನಿಕ್ಸ್ ನಲ್ಲಿ ಮುಕ್ತ ಟೆಂಡರ್ ವ್ಯವಸ್ಥೆಗೆ ಚಾಲನೆ

ಮಿನಿ ಬಸ್ ಚಾಲಕ ನಿಯಂತ್ರಣ ಕಳೆದುಕೊಂಡು ಹಿಂಬದಿಯಿಂದ ಕಂಟೇನರ್‍ಗೆ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ ಇದರ ರಭಸಕ್ಕೆ ವಾಹನ ಪಲ್ಟಿ ಹೊಡೆದಿದೆ ,ಹನ್ನೆರಡು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಐವರು ಪುರುಷರು, ಆರು ಮಹಿಳೆಯರು ಮತ್ತು ಬಾಲಕಿ ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಅಂಬುಲೆನ್ಸ್ ಮೂಲಕ ಗಾಯಗೊಂಡಿದ್ದವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.

ಪಾರ್ಟಿಯಲ್ಲಿ ಶೂಟೌಟ್ ಮೂವರ ಸಾವು

ಡೆನ್ವರ್ (ಅಮೆರಿಕ), ಅ.15- ರಸ್ತೆಯಲ್ಲಿ ಪಾರ್ಟಿ ಮಾಡುವಾಗ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಅಮೆರಿಕ ಉತ್ತರ ಭಾಗದ ಕೊಲೊರಾಡೋ ರಾಜಧಾನಿ ಡೆನ್ವರ್ ನಗರದಲ್ಲಿ ನಡೆದಿದೆ. ಸುಮಾರು 8 ಮಂದಿ ಡೆನ್ವರ್‍ನ ಅಂಗಡಿಯ ಮುಂಭಾಗದಲ್ಲಿ ರಾತ್ರಿ ಪಾರ್ಟಿ ಮಾಡುತ್ತಿದ್ದರು ಮುಂಜಾನೆ ಅವರ ನಡುವೆ ಜಗಳವಾಗಿ ಇಬ್ಬರು ಬಂದೂಕಿನಿಂದ ಗುಂಡು ಹಾರಿಸಿದ್ದಾರೆ.

ಗಾಯಾಳುಗಳನ್ನು ಸ್ಥಳೀಯ ಭಧ್ರತಾ ಸಿಬ್ಬಂದಿ ಆಸ್ಪತ್ರೆಗೆ ಸಾಗಸಿದ್ದಾರೆ ಅಲ್ಲಿ ಮೂವರು ಪುರುಷರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ, ಒಬ್ಬ ಪುರುಷ ಮತ್ತು ಇಬ್ಬರು ಮಹಿಳೆಯರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಶ್ವಕಪ್ ಪಂದ್ಯ : ಭಾರತಕ್ಕೆ 192 ರನ್ ಟಾರ್ಗೆಟ್ ಪಾಕ್

ಸಾವನ್ನಪ್ಪಿರುವವರ ಹೆಸರುಗಳು ಮತ್ತು ವಯಸ್ಸು ತಕ್ಷಣವೇ ಲಭ್ಯವಿಲ್ಲ,ಮಾಹಿತಿ ಕಲೆಹಾಕಲಾಗುತ್ತಿದೆ.ಇನ್ನು ಗುಂಡಿನ ದಾಳಿ ಮಾಡಿದವರ ಬಗ್ಗೆಯೂ ಶೋಧ ಕಾರ್ಯ ನಡೆದಿದೆ ಎಂದು ಮಾಧ್ಯಮಕ್ಕೆ ಪೊಲೀಸರು ತಿಳಿಸಿದ್ದಾರೆ.

ಪಾರ್ಟಿ ವೇಳೆ ಹಲವು ಗುಂಡು ಹಾರಿರುವ ಪುರಾವೆಗಳು ಕಂಡುಬಂದಿದೆ ಅಂಗಡಿಯಲ್ಲಿದ್ದ ಕೆಲಸಗಾರರು ಗುಂಡಿನ ಸದ್ದು ಕೇಳುತ್ತಿದಂತೆ ಬೆಚ್ಚಿಬಿದ್ದಿದ್ದಾರೆ ಪೊಲೀಸರಿಗೆ ಇಮೇಲ್‍ನಲ್ಲಿ ಮಾಹಿತಿ ನೀಡಿದ್ದಾರೆ, ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆಯಾಗಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-10-2023)

ನಿತ್ಯ ನೀತಿ : ಎಷ್ಟೇ ಮೇಧಾವಿಯಾಗಿ ಬೆಳೆದರೂ ಅವರಲ್ಲೂ ಏರು-ಪೇರುಗಳು ಇದ್ದೇ ಇರುತ್ತವೆ. ಅದನ್ನು ಅರ್ಥೈಸಿಕೊಂಡು ಇನ್ನೊಬ್ಬರನ್ನು ಗೌರವಿಸಬೇಕು.

ಪಂಚಾಂಗ ಭಾನುವಾರ 15-10-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ಚಿತ್ತಾ / ಯೋಗ: ವೈಧೃತಿ / ಕರಣ: ಕಿಂಸ್ತುಘ್ನ

ಸೂರ್ಯೋದಯ : ಬೆ.06.10
ಸೂರ್ಯಾಸ್ತ : 06.01
ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30

ರಾಶಿ ಭವಿಷ್ಯ
ಮೇಷ
: ಶುಭ ಸಮಾರಂಭಗಳು ನಡೆಯುವುದರಿಂದ ಮನೆಯಲ್ಲಿ ಸಂತಸದ ವಾತಾವರಣವಿರಲಿದೆ.
ವೃಷಭ: ವೃತ್ತಿ ಮತ್ತು ಮುಂದಿನ ಬದುಕಿನ ಬಗ್ಗೆ ಗಂಭೀರವಾಗಿ ಚಿಂತಿಸುವ ಅಗತ್ಯವಿದೆ.
ಮಿಥುನ: ಆಸ್ತಿ ಕಳೆದುಕೊಳ್ಳುವ ಭೀತಿ ಎದುರಾಗಲಿದೆ. ಆರೋಗ್ಯ ಸಮಸ್ಯೆ ಕಾಡುವುದು.

ಕಟಕ: ಸಹೋದರರ ಆಗಮನದಿಂದ ಮನಸ್ಸಿಗೆ ಸಂತಸವಾಗಲಿದೆ. ದೂರ ಪ್ರಯಾಣ ಮಾಡುವಿರಿ.
ಸಿಂಹ: ರಫ್ತು, ಆಮದು ವ್ಯವಹಾರದಲ್ಲಿ ಉತ್ತಮ ಅವಕಾಶಗಳು ಸಿಗಲಿವೆ.
ಕನ್ಯಾ: ನೀವು ಮಾಡುವ ಕೆಲಸ -ಕಾರ್ಯಗಳಿಂದ ಗೌರವಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಿ.

ತುಲಾ: ಮಧ್ಯವರ್ತಿಗಳ ಸಹಾಯದಿಂದಾಗಿ ವಿವಾಹದ ವಿಷಯದಲ್ಲಿ ಅನುಕೂಲವಾಗಲಿದೆ.
ವೃಶ್ಚಿಕ: ವೃತ್ತಿ ಜೀವನದಲ್ಲಿ ಬಹಳಷ್ಟು ಬದಲಾವಣೆಗಳಾಗಲಿವೆ. ವಾಹನ ಚಾಲನೆಯಲ್ಲಿ ಜಾಗ್ರತೆ ವಹಿಸಿ.
ಧನುಸ್ಸು: ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವಿರಿ. ಪ್ರಯಾಣದಲ್ಲಿ ಕಿರಿಕಿರಿ ಉಂಟಾಗಬಹುದು.

ಮಕರ: ಕಾರ್ಯ ನಿಮಿತ್ತ ದೂರ ಪ್ರಯಾಣ ಮಾಡ ಬೇಕಾಗಬಹುದು. ಪಾಲುದಾರಿಕೆಯಲ್ಲಿ ನಷ್ಟ.
ಕುಂಭ: ಸಮೀಪ ವರ್ತಿಗಳಿಂದ ಮೋಸ ಹೋಗುವ ಸಾಧ್ಯತೆಗಳಿವೆ. ಎಚ್ಚರ ವಹಿಸಿ.
ಮೀನ: ನಿಮ್ಮ ನೆಚ್ಚಿನ ಕಾರ್ಯಯೋಜನೆಗಳು ಕೈಗೂಡಲಿವೆ. ಸಂಭ್ರಮದ ದಿನ.

ವಿಶ್ವಕಪ್ ಪಂದ್ಯ : ಭಾರತಕ್ಕೆ 192 ರನ್ ಟಾರ್ಗೆಟ್ ಪಾಕ್

ಅಹಮದಾಬಾದ್ : ಅ.14 : ಇಂದು ಅಹಮದಾಬಾದ್ ನಲ್ಲಿ ನಡೆದ ರೋಚಕ ಭಾರತ-ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯದ ಮೊದಲ ಇನ್ನಿಗ್ಸ್ ಮುಕ್ತಾಯಗೊಂಡಿದ್ದು, ಭಾರತಕ್ಕೆ ಪಾಕಿಸ್ತಾನ 192 ರನ್ ಗಳ ಸಾಧಾರಣ ಗುರಿ ನೀಡಿದೆ. ಟಾಸ್ ಸೋತು ಬ್ಯಾಂಟಿಂಗ್ ಗೆ ಇಳಿದ ಪಾಕ್ ರನ್ ಕಲೆಹಾಕಲು ಹರಸಾಹಸಪಟ್ಟಿತು, ಆರಂಭಿಕರಾಗಿ ಬ್ಯಾಟಿಂಗ್ ಗೆ ಇಳಿದ ಅಬ್ದುಕ್ ಶಫೀಕ್ ಮತ್ತು ಇಮಾಮ್ ಉಲ್ ಹಕ್ ಉತ್ತಮ ರನ್ ಕಲೆಹಾಕಲು ಪರದಾಡಿದರು, ಅಬ್ದುಕ್ ಶಫೀಕ್ ಕೇವಲ 20ರನ್ ಗಳಿಸಿ ವಿಕೆಟ್ ಸಿರಾಜ್ ಗೆ ಒಪ್ಪಿಸಿದರೆ, 36 ರನ್ ಗಳಿಸಿದ ಇಮಾಮ್ ಹಾರ್ದಿಕ್ ಎಸೆತದಲ್ಲಿ ಕ್ಯಾಚ್ ಕೊಟ್ಟು ಹೊರನಡೆದರು.

ನಂತರ ಬಂದ ನಾಯಕ ಬಾಬರ್ ಅಜಂ ಶಾಂತಚಿತ್ತದಿಂದ ಇನ್ನಿಂಗ್ಸ್ ಕಟ್ಟುಲು ಪ್ರಯತ್ನಿಸಿದರೂ , ಅಜಂಗೆ ಸಾಥ್ ಕೊಟ್ಟ ಮೊಹಮ್ಮದ್ ರಿಜ್ವಾನ್ ಉತ್ತಮ ಜೊತೆಯಾಟ ಪ್ರದರ್ಶಿಸಿದರಾದರೂ. ನಾಯಕ ಬಾಬರ್ ಅರ್ಧ ಶತಕ ಸಿಡಿಡಿ ವಿಕೆಟ್ ಒಪ್ಪಿಸಿದರೆ ಅಹಮದ್ ರಿಜ್ವಾನ್ ಕೂಡ 49 ರನ್ ಗಳಿಸಿ ಅರ್ಧ ಶತಕ ವಂಚಿತರಾಗಿ ಹೊರನಡೆದರು.

ವಿಪಕ್ಷಗಳ ಮೇಲಷ್ಟೇ ಏಕೆ ಐಟಿ ದಾಳಿ..? : ಸಚಿವ ಪ್ರಿಯಾಂಕ್ ಖರ್ಗೆ

ನಂತರ ಬಂದ ಬ್ಯಾಟರ್ ಗಳು ಎರಡಂಕಿ ದಾಟಲೂ ಕೂಡ ಸಾಧ್ಯವಾಗದೆ ಒಬ್ಬರ ಹಿಂದೆ ಒಬ್ಬರು ವಿಕೆಟ್ ಒಪ್ಪಿಸಿ ಪೆವಿಲಿಯನ್ ನತ್ತ ಸಾಗಿದರು. ಅಂತಿಮಗಾಗಿ ಪಾಕ್ 42.5 ಓವರ್ ನಲ್ಲಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು 191 ರನ್ ಗಳಿಸಲಷ್ಟೇ ಶಕ್ತವಾಯಿತು.

ಇನ್ನು ಉತ್ತಮ ಪ್ರದರ್ಶನ ನೀಡಿದ ಭಾರತೀಯ ಬೌಲರ್ ಗಳಾದ ಬೂಮ್ರಾ, ಸಿರಾಜ್, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್ ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.

ಈ ವರೆಗೂ ವಿಶ್ವಕಪ್ ನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಯಾವುದೇ ಪಂದ್ಯದಲ್ಲಿ ಸೋಲು ಕಂಡಿಲ್ಲ, ಅದೇ ರೀತಿ ಈ ಪಂದ್ಯದಲ್ಲೂ ಬೌಲಿಂಗ್ ಪ್ರದರ್ಶನ ನೀಡಿದ್ದು ಭಾರತ ಎಂದುನಂತೆ ಗೆಲುವು ಸಾಧಿಸಲಿದೆ ಎಂಬ ನಿರೀಕ್ಷೆಗಳಿವೆ.
ಸ್ಕೋರ್ :
ಪಾಕಿಸ್ತಾನ : 191(42.5)

ಕಿಯೊನಿಕ್ಸ್ ನಲ್ಲಿ ಮುಕ್ತ ಟೆಂಡರ್ ವ್ಯವಸ್ಥೆಗೆ ಚಾಲನೆ

ಬೆಂಗಳೂರು,ಅ.14- ಕಿಯೊನಿಕ್ಸ್ ಸಂಸ್ಥೆಯಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಕಾಪಾಡಿಕೊಂಡು ಸಾರ್ವಜನಿಕ ಸಂಪನ್ಮೂಲವನ್ನು ರಕ್ಷಿಸುವ ಸಲುವಾಗ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಆಡಿಟ್ ಜನರಲ್ ಕಚೇರಿ ಇತ್ತೀಚೆಗೆ ಕಿಯೊನಿಕ್ಸ್ ಸಂಸ್ಥೆಯ ಲೆಕ್ಕ ಪರಿಶೋಧನಾ ವರದಿಯನ್ನು ಸಲ್ಲಿಸಿದ್ದು, ಅದರಲ್ಲಿ ಹಲವು ಲೋಪಗಳನ್ನು ಗುರುತಿಸಿದೆ. ಅವುಗಳನ್ನು ಗಮನಿಸಲಾಗಿದ್ದು, ಭವಿಷ್ಯದಲ್ಲಿ ಸುಸ್ಥಿರತೆ ಹಾಗೂ ಪಾರದರ್ಶಕತೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಕಿಯೊನಿಕ್ಸ್ ಸಂಸ್ಥೆಯು ವಿವಿಧ ಸರ್ಕಾರಿ ಇಲಾಖೆಗಳು, ಮಂಡಳಿಗಳು ಮತ್ತು ನಿಗಮಗಳಿಗೆ ಒದಗಿಸಿದ ಹೆಚ್ಚಿನ ಸರಕುಗಳು ಮತ್ತು ಸೇವೆಗಳಿಗೆ ಮೂರನೇ ವ್ಯಕ್ತಿಯ ತಪಾಸಣೆ ನಡೆಸದೆ ಬಿಲ್ ಪಾವತಿಸಲಾಗಿತ್ತು. ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಿ ಅಕ್ರಮ ಪಾವತಿಗಳು, ಕೆಲವು ಒಪ್ಪಂದಗಳಲ್ಲಿ ಮೂಲ ದರವನ್ನು ತಪ್ಪಾಗಿ ಅಳವಡಿಸುವುದು, ಎಂಪ್ಯಾನಲ್ಮೆಂಟ್ ಉಲ್ಲಂಘನೆಗಳು, ಬಿಲ್ಡರ್‍ಗಳು ಸಲ್ಲಿಸಿದ್ದ ಆಸಕ್ತಿಯ ಅಭಿವ್ಯಕ್ತಿಯ ಮೌಲ್ಯಮಾಪನಕ್ಕೆ ಸಮಿತಿಗಳನ್ನು ರಚಿಸದಿರುವುದು, ಪಾರದರ್ಶಕ ಕಾಯ್ದೆ ಉಲ್ಲಂಘಿಸಿ ಮಾಹಿತಿ ತಂತ್ರಜ್ಞಾನ ಸಂಬಂಧಿಸಿದ ಸರಬರಾಜುಗಳ ಸಂಗ್ರಹಣೆ, ಪ್ರಮಾಣಿತ ಟೆಂಡರ್ ದಾಖಲೆಗಳನ್ನು ಅಳವಡಿಸಿಕೊಳ್ಳದಿರುವುದು, ಟೆಂಡರ್ ವಿಭಜನೆ, ಒಪ್ಪಂದಗಳಲ್ಲಿ ಕಾರ್ಯಕ್ಷಮತೆಯ ಭದ್ರತೆಯನ್ನು ಗಮನಿಸಿದಿರುವುದು, ಬಿಲ್ಡರ್ಸ್‍ಗಳಿಂದ ಇಎಂಡಿ ಸಂಗ್ರಹ ಸೇರಿದಂತೆ ಹಲವು ಲೋಪಗಳು ನಡೆದಿವೆ ಎಂದು ವಿವರಿಸಲಾಗಿದೆ.

ನಾಳೆ ನಾಡಹಬ್ಬ ದಸರಾಗೆ ಚಾಲನೆ ನೀಡಲಿದ್ದಾರೆ ನಾದಬ್ರಹ್ಮ ಹಂಸಲೇಖ

ಕಿಯೊನಿಕ್ಸ್‍ನಲ್ಲಿ ಬಾಕಿ ಇರುವ ಬಿಲ್‍ಗಳಿಗಾಗಿ ವೆಂಡರ್‍ಗಳು ಮತ್ತು ಭಾದ್ಯಸ್ಥರು ಪ್ರಸ್ತಾವನೆಗಳನ್ನು ಸಲ್ಲಿಸಿದ್ದಾರೆ. ಅವುಗಳನ್ನು ಆದ್ಯತೆ ಮತ್ತು ಲೆಕ್ಕಪರಿಶೋಧನೆಗಳ ಅವಲೋಕನಗಳ ಆಧಾರದ ಮೇಲೆ ಪರಿಶೀಲಿಸಲಾಗುವುದು. ಹಣಕಾಸು ಇಲಾಖೆಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಅನುಸರಣೆ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಸುಗಮ ವ್ಯವಹಾರಕ್ಕಾಗಿ ಜಿಎಸ್‍ಟಿ ಪುರಾವೆಯನ್ನು ಸಮರ್ಪಕವಾಗಿ ಪರಿಶೀಲಿಸಲಾಗುತ್ತಿದೆ. ಆಡಿಟ್ ವರದಿಯಲ್ಲಿನ ಅಂಶಗಳು ಮರುಪರಿಶೀಲನೆಗೆ ಒಳಪಡಿಸಿದ್ದು, ಸರ್ಕಾರಕ್ಕೆ ಯಾವುದೇ ನಷ್ಟವಾಗದಂತೆ ಎಚ್ಚರಿಕೆ ವಹಿಸಲಾಗುವುದು. ಕರ್ನಾಟಕ ಪಾರದರ್ಶಕ ಕಾಯ್ದೆ ನಿಬಂಧನೆಗಳನ್ನು ಅನುಸರಿಸಲಾಗುವುದು.

ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿದ 235 ಭಾರತೀಯರು

2023 ರ ಅಕ್ಟೋಬರ್ 11 ರಂದು ನಡೆದ ಟೆಂಡರ್ ಪರಿಶೀಲನಾ ಸಂಸ್ಥೆಯ ಮೊದಲ ಸಭೆಯಲ್ಲಿ ಟೆಂಡರ್ ಪ್ರಸ್ತಾವನೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗಿದೆ ಎಂದು ವಿವರಿಸಿದ್ದಾರೆ. 4 ಜಿ ವಿನಾಯಿತಿಯಲ್ಲಿ ಕೆಲವು ಲೋಪಗಳು ಕಂಡುಬಂದಿವೆ. ಅವುಗಳನ್ನು ಸರಿಪಡಿಸಲು ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ಜೊತೆಗೆ ಮುಕ್ತ ಟೆಂಡರ್ ವ್ಯವಸ್ಥೆಯನ್ನು ಆರಂಭಿಸುವುದಾಗಿ ತಿಳಿಸಿದ್ದಾರೆ.