Thursday, November 6, 2025
Home Blog Page 1895

25 ಸಾವಿರ ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆ : ಸಚಿವ ಎಂ.ಬಿ.ಪಾಟೀಲ್

ಬೆಂಗಳೂರು, ಅ.12- ಅಮೆರಿಕದಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ಕೈಗೊಂಡಿದ್ದ ಪ್ರವಾಸದಿಂದ ರಾಜ್ಯದಲ್ಲಿ ಸುಮಾರು 25 ಸಾವಿರ ಕೋಟಿ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಇದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 25ರಿಂದ ಅ. 6ರವರೆಗೆ 12 ದಿನಗಳ ಕಾಲ ಅಮೆರಿಕಾದ ವಿವಿಧ ನಗರಗಳಲ್ಲಿ ಪ್ರವಾಸ ಕೈಗೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ವಿಶ್ವದ ಅತ್ಯುತ್ತಮ ಕಂಪೆನಿಗಳ, ಉದ್ಯಮಿಗಳ, ಹೂಡಿಕೆದಾರರ ಜೊತೆ ಸಭೆಗಳನ್ನು ನಡೆಸಿ ಕರ್ನಾಟಕದಲ್ಲಿ ಹೂಡಿಕೆಗಿರುವ ಅವಕಾಶಗಳ ಬಗ್ಗೆ ಚರ್ಚೆ ಮಾಡಿದ್ದೇವೆ.

ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ರಾಜ್ಯ ಸರ್ಕಾರದ ನಿಯೋಗವು ಅಮೆರಿಕಾದ ವಿವಿಧ ಸ್ಥಳಗಳಲ್ಲಿ ವಿವಿಧ ಕಂಪೆನಿಗಳ ಉನ್ನತ ಅಧಿಕಾರಿಗಳ ಜೊತೆ ವಿಸ್ತೃತವಾದ ವಿಚಾರ ವಿನಿಮಯ ನಡೆಸಲಾಯಿತು. ಕರ್ನಾಟಕದಲ್ಲಿರುವ ಹೂಡಿಕೆ ಸ್ನೇಹಿ ನೀತಿ, ಪರಿಸರ ಉತ್ತೇಜನ ಎಲ್ಲವನ್ನೂ ಮನವರಿಕೆ ಮಾಡಿಕೊಟ್ಟಿದ್ದು, ಅಮೆರಿಕ ಪ್ರವಾಸ ಯಶಸ್ವಿ ಭೇಟಿಯಾದಂತಾಗಿದೆ ಎಂದರು. ವೇಗವಾಗಿ ಬದಲಾಗುತ್ತಿರುವ ಪ್ರಸ್ತುತ ಭೌಗೋಳಿಕ ರಾಜಕೀಯ ಪರಿಸ್ಥಿತಿಯಲ್ಲಿ ಅಮೆರಿಕಾ ಬೇಟಿ ಅಗತ್ಯವಿದ್ದು, ಹೆಚ್ಚಿನ ಸಂಖ್ಯೆಯ ಜಾಗತೀಕ ಹೂಡಿಕೆದಾರರು ಭಾರತದ ಹೂಡಿಕೆಯನ್ನು ಆಕರ್ಷಕ ಹಾಗೂ ಹೂಡಿಕೆಗೆ ಸುರಕ್ಷಿತ ತಾಣ ಎಂದು ಭಾವಿಸಿದ್ದಾರೆ.

ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾದ ಗುತ್ತಿಗೆದಾರರು

ಎಲ್ಲ ಉದ್ಯಮ ಸ್ನೇಹಿ ನೀತಿಗಳು ಲಾಭ ದಾಯಕ ಪ್ರೋತ್ಸಾಹಗಳು, ತಾಂತ್ರಿಕ ಅರ್ಹತೆ, ನುರಿತ ಉದ್ಯೋಗಿಗಳ ಲಭ್ಯತೆಯೊಂದಿಗೆ ವಿದೇಶಿ ಹೂಡಿಕೆಗೆ ಕರ್ನಾಟಕವೂ ಪ್ರಸಕ್ತ ತಾಣವಾಗಿದೆ ಎಂಬುದನ್ನು ಈ ಪ್ರವಾಸದ ಸಂದರ್ಭದಲ್ಲಿ ಮನವರಿಕೆ ಮಾಡಿಕೊಟ್ಟಿದ್ದೇವೆ. 12 ದಿನಗಳಲ್ಲಿ ಈ ನಿಯೋಗವು ವಿವಿಧ ವಲಯಗಳ ಕಂಪೆನಿ ಪ್ರತಿನಿಧಿಗಳೊಂದಿಗೆ 27 ಮುಖಾಮುಖಿ ಸಭೆಗಳು 9 ಸಂವಾದ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಅದರಲ್ಲಿ ಮುಖ್ಯವಾಗಿ ಎಲೆಕ್ಟ್ರಾನಿಕ್, ಸೆಮಿ ಕಂಡಕ್ಟರ್, ಏರೋಸ್ಪೇಸ್, ರಕ್ಷಣೆ, ಆಟೋ ಮೊಬೈಲ್, ಇವಿ, ಮತ್ತಿತರ ವಲಯ ಗಳಲ್ಲಿ ಹೂಡಿಕೆಗೆ ಅವಕಾಶಗಳನ್ನು ಶೋಸಲಾಯಿತು. ಇದರಿಂದ ಪೂರೈಕೆದಾರರ ನೆಲೆ ವಿಸ್ತರಣೆ ಈ ಅಸ್ತಿತ್ವದಲ್ಲಿರುವ ಸಂಶೋಧನೆ ಮತ್ತು ಅಭಿವೃದ್ಧಿ ಪರಿಸರ ವ್ಯವಸ್ಥೆ ಬಲಪಡಿಸುವುದು ರಾಜ್ಯ ಸರ್ಕಾರದ ಸಹಯೋಗ ದೊಂದಿಗೆ ಉತ್ಕøಷ್ಠ ಕೇಂದ್ರಗಳ ಸ್ಥಾಪನೆ ಕುರಿತು ಉದ್ಯಮಿಗಳೊಂದಿಗೆ ಚರ್ಚೆ ನಡೆಸಲಾಯಿತು.

ರಾಜ್ಯದಲ್ಲಿ ಸದೃಡ ಕೈಗಾರಿಕ ಪರಿಸರ, ವಿಶ್ವ ದರ್ಜೆ ಮೂಲಸೌಕರ್ಯ, ಸುಗಮ ವ್ಯಾಪಾರ, ಕಾರ್ಯಾಚರಣೆ, ನುರಿತ ಹಾಗೂ ತರಬೇತಿ ಪಡೆದ ಕಾರ್ಮಿಕ ಶಕ್ತಿಜೊತೆಗೆ ಉದ್ಯಮಶೀಲ ರಾಜ್ಯವಾಗಿದೆ ಎಂದು ಮನವರಿಕೆ ಮಾಡಿಕೊಟ್ಟಿದೆ. ಪರಿಸರ ಸ್ನೇಹಿ ವಾತಾವರಣವನ್ನು ಕರ್ನಾಟಕದಲ್ಲಿದೆ ಎಂದು ಹೇಳಿದ್ದೇವೆ.

ಹಮಾಸ್ ಸರ್ವನಾಶದ ಶಪಥ ಮಾಡಿದ ಇಸ್ರೇಲ್

ತಯಾರಿಕಾ ವಲಯಕ್ಕೆ ಒತ್ತು:
ಐಟಿ- ಬಿಟಿ ಪ್ರಿಯಾಂಕ ಖರ್ಗೆ ಮಾತನಾಡಿ, ತಯಾರಿಕಾ ವಲಯದಲ್ಲಿ ಹೆಚ್ಚಿನ ಒತ್ತು ನೀಡುವ ಬಗ್ಗೆ ಚರ್ಚೆ ಮಾಡಿದ್ದೇವೆ. ಬಯೋಟೆಕ್ನಾಲಜಿಯಲ್ಲಿ ಶಾಮ್‍ಫರ್ಡ್ ವಿಶ್ವವಿದ್ಯಾಲಯ ಜೊತೆ ನವೋದ್ಯಮ ಹೆಚ್ಚಿಸಲು ಪಾಲುದಾರಿಕೆಗೆ ಮಾಡಿಕೊಳ್ಳಲು ಚರ್ಚಿಸಲಾಗಿದೆ ಅದಕ್ಕೆ ಅವರು ಒಪ್ಪಿದ್ದಾರೆ.

ಅವಿಷ್ಕಾರದಲ್ಲಿ 18ನೇ ಸ್ಥಾನದಲ್ಲಿದ್ದು, ಅದನ್ನು 10ರೊಳಗೆ ತರಲು ಬೇರೆ ಬೇರೆ ದೇಶಗಳೊಂದಿಗೆ ಒಪ್ಪಂದ ಅನಿವಾರ್ಯವಾಗಲಿದೆ. ರಾಜ್ಯದಲ್ಲಿ ಸುಮಾರು 28 ಸಾವಿರ ನವೋದ್ಯಮಗಳಿವೆ. ಹೊಸ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ಕೊಡುವ ಪ್ರಯತ್ನದ ಬಗ್ಗೆ ಮಾಡಿದ್ದೇವೆ. ವಿದೇಶಿಗಳಷ್ಟೇ ಅಲ್ಲ ಬೇರೆ ಬೇರೆ ರಾಜ್ಯಗಳು ಕೂಡ ನಮಗೆ ಸ್ರ್ಪಧಿಯಾಗಿವೆ. ಈ ನಿಟ್ಟಿನಲ್ಲಿ ರಾಜ್ಯಸರ್ಕಾರ ಹೂಡಿಕೆ ಬಗ್ಗೆ ಗಂಭೀರ ಪ್ರಯತ್ನ ಮಾಡುತ್ತಿದೆ.

ಹೂಡಿಕೆದಾರರು ಕೌಶಲ್ಯಾ ಧರಿತ ಮಾನವ ಸಂಪನ್ಮೂಲ ಉದ್ಯಮಶೀಲತೆ ಬಗ್ಗೆ ಅಪೇಕ್ಷಿತರಾಗಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಎಲ್. ಸೆಲ್ವ ಕುಮಾರ್ ಕೈಗಾರಿಕಾ ಅಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ, ಐಟಿ-ಬಿಟಿ ವಿಜ್ಞಾನ- ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಏಕರೂಪ್ ಕೌರ್ ಉಪಸ್ಥಿತರಿದ್ದರು.

ಸಿನಿಮೀಯ ರೀತಿಯಲ್ಲಿ ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸುತ್ತಿದೆ ಬಿಜೆಪಿ : ಡಿಕೆಶಿ

ಬೆಂಗಳೂರು,ಅ.12- ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಲು ಬಿಜೆಪಿಯ ತಂಡ ಸಿನಿಮೀಯ ರೀತಿಯಲ್ಲಿ ಕಾಂಗ್ರೆಸ್ ಶಾಸಕರುಗಳನ್ನು ಸಂಪರ್ಕ ಮಾಡುತ್ತಿದೆ ಎಂದು ಸ್ಪೋಟಕ ಮಾಹಿತಿ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅನ್ಯ ಪಕ್ಷಗಳಿಂದ 42 ಮಂದಿ ಪ್ರಮುಖ ನಾಯಕರು ಪಕ್ಷ ಸೇರಲು ಅರ್ಜಿ ಹಾಕಿದ್ದಾರೆ ಎಂದು ಬಹಿರಂಗಪಡಿಸಿದರು.

ಕೆಪಿಸಿಸಿ ಕಚೇರಿಯಲ್ಲಿಂದು ಬಿಜೆಪಿಯಿಂದ ಶಿರಹಟ್ಟಿ ಕ್ಷೇತ್ರದ ಮಾಜಿ ಶಾಸಕ ರಾಮಣ್ಣ ಲಮಾಣಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವರು 2024 ಕ್ಕೆ ವಿಧಾನಸಭೆಗೆ ಚುನಾವಣೆ ನಡೆಯಲಿದೆ ಎಂದು ಹೇಳುತ್ತಿದ್ದಾರೆ. ನಾನು ಅದರ ಬಗ್ಗೆ ವ್ಯಾಖ್ಯಾನ ಮಾಡಲು ಹೋಗುವುದಿಲ್ಲ ಎಂದರು.

ಬಿಜೆಪಿಯ ಒಂದು ತಂಡ ಸಿನಿಮೀಯ ರೀತಿಯಲ್ಲಿ ನಮ್ಮ ಶಾಸಕರನ್ನು ಭೇಟಿ ಮಾಡುತ್ತಿದೆ. ಯಾರನ್ನೆಲ್ಲಾ ಭೇಟಿ ಮಾಡಿದ್ದಾರೆ ಎಂಬ ಮಾಹಿತಿ ತಮ್ಮ ಹತ್ತಿರ ಇದೆ. ಬಿಜೆಪಿ ತಂಡದವರು ನಡೆಸಿರುವ ಮಾತುಕತೆಯ ಇಂಚಿಂಚೂ ಮಾಹಿತಿಯನ್ನು ನಮ್ಮ ಶಾಸಕರು ತಮ್ಮ ಬಳಿ ಹಂಚಿಕೊಳ್ಳುತ್ತಿದ್ದಾರೆ.

ಸದ್ಯಕ್ಕೆ ಈ ಬಗ್ಗೆ ಚರ್ಚಿಸಲು ಹೋಗುವುದಿಲ್ಲ. ಯಾವ ಪ್ರಶ್ನೆಗಳಿಗೂ ತಾವು ಉತ್ತರ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ರಾಜ್ಯದಲ್ಲಿ ಲೋಕಸಭೆ ಚುನಾವಣೆಗೂ ಮುನ್ನವೇ ಸರ್ಕಾರ ಪತನಗೊಳಿಸಲು ಹುನ್ನಾರ ನಡೆದಿರುವುದನ್ನು ಡಿ.ಕೆ.ಶಿವಕುಮಾರ್ ಬಹಿರಂಗಪಡಿಸಿದರು.

ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾದ ಗುತ್ತಿಗೆದಾರರು

ತಮ್ಮ ಮಾತು ಮುಂದುವರೆಸಿದ ಅವರು, ಕಾಂಗ್ರೆಸ್‍ಗೆ ಸೇರ್ಪಡೆಯಾಗುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಮಾಜಿ ಶಾಸಕರು ಸೇರಿದಂತೆ 42 ಕ್ಕೂ ಹೆಚ್ಚು ಮಂದಿ ಶಾಸಕರು ಅರ್ಜಿ ಹಾಕಿದ್ದಾರೆ. ಈವರೆಗೂ ತಾವು ಈ ಸಂಖ್ಯೆಯನ್ನು ಬಹಿರಂಗಪಡಿಸಿರಲಿಲ್ಲ. ಆದರೆ ಈಗ ಅನಿವಾರ್ಯವಾಗಿ ಹೇಳಲೇಬೇಕಿದೆ ಎಂದರು.

ಅಮ್‍ಆದ್ಮಿ ಪಕ್ಷದಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ 100 ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಸೇರುವುದಾಗಿ ತಮ್ಮನ್ನು ಸಂಪರ್ಕಿಸಿದ್ದಾರೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಭಾಗಗಳಲ್ಲಿ ಈ ರೀತಿಯ ಸೇರ್ಪಡೆ ಕಾರ್ಯಕ್ರಮಗಳು ಹೆಚ್ಚಾಗಿವೆ. ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ ನೇತೃತ್ವದಲ್ಲಿ ಸೇರ್ಪಡೆಯಾಗಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳಿದರು.

ಹೊಸದಾಗಿ ಪಕ್ಷ ಸೇರ್ಪಡೆಯಾಗುವವರನ್ನು ಜಿಲ್ಲಾ ಮಟ್ಟದಲ್ಲಿಯೇ ಸೇರಿಸಿಕೊಳ್ಳಲು ಚಿಂತನೆ ನಡೆಯಲಾಗಿದೆ. ಯಾವುದೇ ಷರತ್ತು ಇಲ್ಲದೇ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಎಂದರು. ಡಿ.ಕೆ.ಶಿವಕುಮಾರ್ ಅವರು ಮಾತನಾಡುತ್ತಿದ್ದ ವೇಳೆ ಕೇಂದ್ರ ಸರ್ಕಾರದ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ದೇಶಾದ್ಯಂತ ರವಾನಿಸಲಾದ ಎಚ್ಚರಿಕೆಯ ಸಂದೇಶಗಳು ಏಕಕಾಲಕ್ಕೆ ಎಲ್ಲರ ಮೊಬೈಲ್‍ನಲ್ಲೂ ರಿಂಗಣಿಸಲಾರಂಭಿಸಿದವು. ಇದರಿಂದ ಕೆಲಕಾಲ ಗೊಂದಲ ನಿರ್ಮಾಣವಾಯಿತು. ಡಿ.ಕೆ.ಶಿವಕುಮಾರ ಕೂಡ ಗುಯ್‍ಗುಯ್‍ಗುಡುವ ಸದ್ದನ್ನು ಕೇಳಿ ಕೆಲಕ್ಷಣ ಮಾತು ನಿಲ್ಲಿಸಿದರು.

ಹಮಾಸ್ ಸರ್ವನಾಶದ ಶಪಥ ಮಾಡಿದ ಇಸ್ರೇಲ್

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಅದು ಟೆಸ್ಟ್ ಮೆಸೇಜ್ ಎಂದು ಮಾಹಿತಿ ನೀಡಿದರು. ಲಕ್ಷ್ಮಣ್ ಸವದಿ ಅವರು ಇದು ಪ್ರಾಯೋಗಿಕ ಸಂದೇಶ. ಯಾರೂ ಗಾಬರಿಯಾಗಬೇಡಿ ಎಂದು ವರದಿಯಾಗಿದೆ ಎಂದು ಹೇಳಿದರು.ಅದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ಅವರು ನಮಗೂ, ನಿಮಗೂ ಕೇಂದ್ರ ಸರ್ಕಾರ ಎಚ್ಚರಿಕೆ ನೀಡುತ್ತಿದೆ. ರಾಜ್ಯದಲ್ಲಿ ಜೆಡಿಎಸ್, ಬಿಜೆಪಿಯವರು ಎಚ್ಚರವಾಗಿದ್ದಾರೆ, ನಾವೂ ಎಚ್ಚರವಾಗಿರೋಣ ಎಂದು ಮಾರ್ಮಿಕವಾಗಿ ಹೇಳಿದರು.

ಮಾಜಿ ಶಾಸಕ ರಾಮಪ್ಪ ಲಮಾಣಿ ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು,ಅ.12- ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಬಿಜೆಪಿಯ ಮಾಜಿ ಶಾಸಕ ಶಿರಹಟ್ಟಿ ಕ್ಷೇತ್ರದ ರಾಮಪ್ಪ ಲಮಾಣಿ ಇಂದು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ರಾಮಪ್ಪ ಲಮಾಣಿ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮ್ಮದ್, ಬಿ.ಎನ್.ಚಂದ್ರಪ್ಪ, ಗದಗ್‍ನ ಜಿಲ್ಲಾಧ್ಯಕ್ಷರೂ ಆಗಿರುವ ಶಾಸಕ ಜಿ.ಎಸ್.ಪಾಟೀಲ್, ಶಾಸಕರಾದ ವಿನಯ್ ಕುಲಕರ್ಣಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಜಗದೀಶ್ ಶೆಟ್ಟರ್ ಅವರು, ವಿಧಾನಸಭೆ ಚುನಾವಣೆ ಫಲಿತಾಂಶ ಭಾರೀ ಪರಿಣಾಮ ಬೀರಿದೆ. ಐದು ಭರವಸೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಎಲ್ಲರೂ ಹೇಳುತ್ತಿದ್ದರೂ, ನಿರೀಕ್ಷೆ ಮೀರಿ ಸರ್ಕಾರ ಭರವಸೆಗಳನ್ನು ಈಡೇರಿಸಿದೆ. ಇದು ರಾಷ್ಟ್ರಕ್ಕೆ ಮಾದರಿ. ಬೇರೆ ರಾಜ್ಯಗಳಲ್ಲೂ ಕಾಂಗ್ರೆಸ್ ಭರವಸೆಗಳಂತಹ ಕಾರ್ಯಕ್ರಮಗಳ ಜಾರಿಗೆ ಒತ್ತಡ ಹೆಚ್ಚಿದೆ. ಜೊತೆಯಲ್ಲಿ ಕಾಂಗ್ರೆಸ್ ಮೇಲೆ ಭರವಸೆ ಹೆಚ್ಚುತ್ತಿದೆ ಎಂದು ಹೇಳಿದರು.

ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾದ ಗುತ್ತಿಗೆದಾರರು

ದೇಶದಲ್ಲಿ ರಾಜಕೀಯ ದ್ರುವೀಕರಣವಾಗುತ್ತಿದೆ. ಸದ್ಯಕ್ಕೆ ಘೋಷಣೆಯಾಗಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಸೆಮಿಫೈನಲ್ ಆಗಿದ್ದು, 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ದೇಶದಲ್ಲಿ ಅಧಿಕಾರಕ್ಕೆ ಮರಳಲಿದೆ ಎಂದರು.

ರಾಮಣ್ಣ ಲಮಾಣಿ ಬಿಜೆಪಿಯಿಂದ ಎರಡು ಬಾರಿ ಎಂಎಲ್‍ಎ ಆಗಿದ್ದರು, ಒಮ್ಮೆ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದರು, ಕಾಂಗ್ರೆಸ್ ತತ್ವಕ್ಕೆ ಬದ್ಧರಾಗಿ ಇಂದು ಕಾಂಗ್ರೆಸ್ ಸೇರಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಂದಿ ಕಾಂಗ್ರೆಸ್ ಸೇರುತ್ತಾರೆ ಎಂದು ಹೇಳಿದರು. ಇದೇ ವೇಳೆ ರಾಮಣ್ಣ ಲಮಾಣಿ ಮಾತನಾಡಿ, ಬಿಜೆಪಿ ಅಧೋಗತಿಗೆ ಹೋಗುತ್ತಿದೆ. ಅಲ್ಲಿ ಹೆಚ್ಚು ಅನುಭವಸ್ಥರು ಇಲ್ಲ, ರಾಜ್ಯಾದ್ಯಂತ 15 ಕ್ಕೂ ಹೆಚ್ಚು ಮಂದಿ ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲು ಸಿದ್ಧರಾಗಿದ್ದಾರೆ. ಇದೇ 20 ರಂದು ಮತ್ತಷ್ಟು ಮಂದಿ ಕಾಂಗ್ರೆಸ್‍ಗೆ ಬರಲಿದ್ದಾರೆ ಎಂದರು.

ಹಾಡಹಗಲೇ ಗುಂಡು ಹಾರಿಸಿ ಚಿನ್ನ ದರೋಡೆ

ಬೆಂಗಳೂರು,ಅ.12- ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲರಿ ಮಳಿಗೆಯೊಳಗೆ ಬಂದ ನಾಲ್ವರು ದರೋಡೆಕೋರರು ಮಾಲೀಕನಿಗೆ ಗುಂಡು ಹಾರಿಸಿ ಒಂದು ಕೆಜಿಗೂ ಹೆಚ್ಚು ಚಿನ್ನಾಭರಣಗಳನ್ನು ಸಿನಿಮೀಯ ರೀತಿ ದರೋಡೆ ಮಾಡಿಕೊಂಡು ಪರಾರಿಯಾಗಿರುವ ಘಟನೆ ಇಂದು ಬೆಳ್ಳಂಬೆಳ್ಳಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿನಾಯಕ ಜ್ಯುವೆಲರ್ಸ್ ಮಾಲೀಕ ಮನೋಜ್ ಲೋಹರ್(30) ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೋಜ್‍ಕುಮಾರ್ ಅವರು ದೊಡ್ಡ ಗೊಲ್ಲರಹಟ್ಟಿಯ ಪೈಪ್‍ಲೈನ್ ರಸ್ತೆಯಲ್ಲಿ ವಿನಾಯಕ ಜ್ಯುವೆಲರಿ ಮಳಿಗೆ ಇಟ್ಟುಕೊಂಡಿದ್ದು, ಇಂದು ಬೆಳಗ್ಗೆ ಎಂದಿನಂತೆ ಅಂಗಡಿ ತೆರೆದು ಕುಳಿತಿದ್ದರು.

ಮೊಬೈಲ್‌ನಲ್ಲಿ ಸೈರನ್ ಶಬ್ದ ಕೇಳಿ ಜನ ಶಾಕ್, ಕೇಂದ್ರ ಸರ್ಕಾರದಿಂದ ‘Emergency Alert’ ಪರೀಕ್ಷೆ

ಸುಮಾರು 10.45ರ ಸಮಯದಲ್ಲಿ ನಾಲ್ವರು ದರೋಡೆಕೋರರು ಎರಡು ಬೈಕ್‍ಗಳಲ್ಲಿ ಬಂದು ಇವರ ಅಂಗಡಿ ಮುಂದೆ ಬೈಕ್‍ಗಳನ್ನು ನಿಲ್ಲಿಸಿ ಆಭರಣ ಕೊಳ್ಳುವ ನೆಪದಲ್ಲಿ ಅಂಗಡಿಯೊಳಗೆ ಹೋಗಿ ರಿಂಗ್ ತೋರಿಸುವಂತೆ ಹೇಳಿದ್ದಾರೆ. ಮನೋಜ್ ಕುಮಾರ್ ಅವರು ಉಂಗುರ ತೋರಿಸುತ್ತಿದ್ದಂತೆ ಇಬ್ಬರು ಅವರನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಇನ್ನಿಬ್ಬರು ತಾವು ತಂದಿದ್ದ ಬ್ಯಾಗ್‍ಗಳಲ್ಲಿ ಮಳಿಗೆಯಲ್ಲಿದ್ದ ಸುಮಾರು 60 ಲಕ್ಷಕ್ಕೂ ಹೆಚ್ಚು ರೂ. ಮೌಲ್ಯದ ಒಂದು ಕೆಜಿಗೂ ಅಧಿಕ ಆಭರಣಗಳನ್ನೆಲ್ಲ ತುಂಬಿಕೊಂಡಿದ್ದಾರೆ.

ಆ ಸಂದರ್ಭದಲ್ಲಿ ಮನೋಜ್‍ಕುಮಾರ್ ಅವರು ಪ್ರತಿರೋಧ ವ್ಯಕ್ತಪಡಿಸಿದಾಗ ಅವರ ಕಾಲಿಗೆ ಪಿಸ್ತೂಲಿನಿಂದ ಗುಂಡು ಹಾರಿಸಿ ಆಭರಣಗಳಿದ್ದ ಬ್ಯಾಗಳೊಂದಿಗೆ ದರೋಡೆಕೋರರು ಬೈಕ್‍ಗಳಲ್ಲಿ ಪರಾರಿಯಾಗಿದ್ದಾರೆ.
ತಕ್ಷಣ ಮನೋಜ್‍ಕುಮಾರ್ ಮನೆಗೆ ಕರೆ ಮಾಡಿ ವಿಷಯ ತಿಳಿಸಿ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದು ಬ್ಯಾಡರಹಳ್ಳಿ ಠಾಣೆ ಪೊಲೀಸರು ಸ್ಥಳಕೆ ಧಾವಿಸಿದ್ದಾರೆ. ಡಿಸಿಪಿ ಗಿರೀಶ್ ಅವರು ಸ್ಥಳಕ್ಕೆ ಬಂದು ಚಿನ್ನಾಭರಣ ಮಳಿಗೆಯನ್ನು ಪರಿಶೀಲಿಸಿದ್ದಾರೆ.

ಖಲಿಸ್ತಾನಿ ಭಯೋತ್ಪಾದಕ ಲಖ್ಬೀರ್ ಸಿಂಗ್ ಆಸ್ತಿ ಮುಟ್ಟುಗೋಲು

ಬೆರಳಚ್ಚು ತಜ್ಞರ ತಂಡ, ಶ್ವಾನದಳ ಹಾಗೂ ಎಫ್‍ಎಸ್‍ಎಲ್ ತಜ್ಞರ ತಂಡಗಳು ಪರಿಶೀಲನೆ ನಡೆಸಿವೆ.
ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜ್ಯುವೆಲರಿ ಅಂಗಡಿ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿಟಿವಿಗಳನ್ನು ಪರಿಶೀಲಿಸಿ ಅದರಲ್ಲಿನ ದೃಶ್ಯಾವಳಿ ಆಧರಿಸಿ ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ. ಹಾಡಹಗಲೇ ಗುಂಡು ಹಾರಿಸಿ ಚಿನ್ನಾಭರಣ ದೋಚಿರುವ ಬಗ್ಗೆ ಸುತ್ತಮುತ್ತಲಿನ ಅಂಗಡಿಯವರು ಆತಂಕಗೊಂಡಿದ್ದಾರೆ.

ವಿಶೇಷ ತಂಡ ರಚನೆ:
ಜ್ಯುವೆಲರಿ ಮಾಲೀಕನಿಗೆ ಗುಂಡು ಹಾರಿಸಿ ಆಭರಣಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿರುವ ದರೋಡೆಕೋರರ ಪತ್ತೆಗಾಗಿ ಡಿಸಿಪಿ ಗಿರೀಶ್ ಅವರು ವಿಶೇಷ ತಂಡವನ್ನು ರಚಿಸಿದ್ದಾರೆ.

ಭಾರತದ ಸಂಸ್ಕೃತಿ ಜಾತ್ಯತೀತವಾಗಿದೆ : ಮೋಹನ್ ಭಾಗವತ್

ನವದೆಹಲಿ, ಅ.12 – ಭಾರತದ 5,000 ವರ್ಷಗಳಷ್ಟು ಹಳೆಯ ಸಂಸ್ಕೃತಿ ಜಾತ್ಯತೀತವಾಗಿದ್ದು, ಜನರು ಒಗ್ಗಟ್ಟಾಗಿದ್ದು ವಿಶ್ವದ ಮುಂದೆ ಮಾನವ ನಡವಳಿಕೆಯ ಅತ್ಯುತ್ತಮ ಉದಾಹರಣೆಯನ್ನು ಪ್ರಸ್ತುತಪಡಿಸಬೇಕು ಎಂದು ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಹಿರಿಯ ಆರ್‍ಎಸ್‍ಎಸ್ ಕಾರ್ಯಾಧ್ಯಕ್ಷ ರಂಗಾ ಹರಿ ಬರೆದ ಪೃಥ್ವಿ ಸೂಕ್ತ – ಆನ್ ಓಡ್ ಟು ಮದರ್ ಅರ್ಥ್ ಅನ್ನು ಬಿಡುಗಡೆ ಮಾಡುವ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ 5,000 ವರ್ಷಗಳಷ್ಟು ಹಳೆಯ ಸಂಸ್ಕೃತಿಯು ಜಾತ್ಯತೀತವಾಗಿದೆ. ಅದು ಹಾಗೆ ಎಲ್ಲಾ ತತ್ವ ಜ್ಞಾನದಲ್ಲಿ (ಅಂಶಗಳ ಜ್ಞಾನ), ಇದು ತೀರ್ಮಾನವಾಗಿದೆ ಎಂದರು.

ಮೊಬೈಲ್‌ನಲ್ಲಿ ಸೈರನ್ ಶಬ್ದ ಕೇಳಿ ಜನ ಶಾಕ್, ಕೇಂದ್ರ ಸರ್ಕಾರದಿಂದ ‘Emergency Alert’ ಪರೀಕ್ಷೆ

ಇಡೀ ಪ್ರಪಂಚವು ಒಂದು ಕುಟುಂಬ, ಇದು ನಮ್ಮ ಭಾವನೆ. ಇದು ಸಿದ್ಧಾಂತವಲ್ಲ. ಅದನ್ನು ತಿಳಿದುಕೊಳ್ಳಿ, ಅರಿತುಕೊಳ್ಳಿ ಮತ್ತು ಅದರಂತೆ ನಡೆದುಕೊಳ್ಳಿ ಎಂದು ಅವರು ಹೇಳಿದರು. ದೇಶದಲ್ಲಿ ತುಂಬಾ ವೈವಿಧ್ಯತೆಗಳಿವೆ. ಪರಸ್ಪರ ಜಗಳವಾಡಬೇಡಿ. ನಾವು ಒಂದೇ ಎಂದು ಜಗತ್ತಿಗೆ ಕಲಿಸಲು ನಿಮ್ಮ ದೇಶವನ್ನು ಸಮರ್ಥವಾಗಿ ಮಾಡಿ ಇದು ಭಾರತದ ಅಸ್ತಿತ್ವದ ಏಕೈಕ ಉದ್ದೇಶವಾಗಿದೆ. ವಿಶ್ವ ಕಲ್ಯಾಣಕ್ಕಾಗಿ ದಾರ್ಶನಿಕರು ಭಾರತವನ್ನು ರಚಿಸಿದ್ದಾರೆ. ಅವರು ಸಮಾಜವನ್ನು ಸೃಷ್ಟಿಸಿ ತಮ್ಮ ಜ್ಞಾನವನ್ನು ಕಟ್ಟಕಡೆಯ ವ್ಯಕ್ತಿಗೂ ಹಸ್ತಾಂತರಿಸಿದ್ದಾರೆ ಎಂದು ಹೇಳಿದರು.

ಭಾರತವು ಮುಖ್ಯವಾಗಿ ಆರ್ಥಿಕ ವಿಷಯಗಳ ಕುರಿತು ಚರ್ಚಿಸುವ ವೇದಿಕೆಯಾಗಿರುವ ಜಿ20 ಅನ್ನು ಮಾನವೀಯತೆಯ ಬಗ್ಗೆ ಯೋಚಿಸುವ ವೇದಿಕೆಯಾಗಿ ಪರಿವರ್ತಿಸುವುದರಲ್ಲಿ ಆಶ್ಚರ್ಯವಿಲ್ಲ. ವಸುಧೈವ ಕುಟುಂಬಕಂ ಎಂಬ ಭಾವನೆಯನ್ನು ನೀಡುವ ಮೂಲಕ ನಾವು ಅದನ್ನು ಮಾಡಿದ್ದೇವೆ. ಮಾನವರ ಬಗ್ಗೆ ಯೋಚಿಸುವ ವೇದಿಕೆ ಎಂದರು.

ಪಾರ್ವತಿಕುಂಡದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಮೋದಿ

ಡೆಹ್ರಾಡೂನ್,ಅ.12- ವಿವಿಧ ಅಭಿವೃದ್ದಿ ಯೋಜನೆಗಳಿಗೆ ಚಾಲನೆ ನೀಡಲು ಉತ್ತರಾಖಂಡ್‍ಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆಯೇ ಇಲ್ಲಿನ ಪೀಥೋರ್‍ಘಡದಲ್ಲಿರುವ ಇತಿಹಾಸ ಪ್ರಸಿದ್ದ ಪಾರ್ವತಿಕುಂಡದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಉತ್ತರಾಖಂಡ್‍ನ ಕುಮುನ್ ಪ್ರದೇಶದಲ್ಲಿ ಮೋದಿ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಸಾವಿರಾರು ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಕೊಟ್ಟರು. ಇದಕ್ಕೂ ಮುನ್ನ ಬೆಳಗ್ಗೆ ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಉತ್ತರಾಖಂಡ್ ರಾಜಧಾನಿ ಡೆಹ್ರಾಡೂನ್‍ಗೆ ಆಗಮಿಸಿದ ಮೋದಿ ಅವರನ್ನು ಮೋದಿ ಅವರು ಪುಷ್ಕರ್‍ಸಿಂಗ್ ಧಮಿ ಆತ್ಮೀಯವಾಗಿ ಬರಮಾಡಿಕೊಂಡರು.

ಅಲ್ಲಿಂದ ಭಾರತೀಯ ವಾಯುಪಡೆಗೆ ಸೇರಿದ ವಿಶೇಷ ಹೆಲಿಕಾಪ್ಟರ್ ಮೂಲಕ ಜೋಲಿಂಗ್‍ಕಾನ್‍ನಲ್ಲಿರುವ ಶಿವನ ನಿವಾಸ ಮತ್ತು ಕೈಲಾಸ ಶಿಖರಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆಪುನಸ್ಕಾರ ನೆರವೇರಿಸಿದರು. ಅಲ್ಲಿಂದ ಮೋದಿ ಕುಂಜಿ ಗ್ರಾಮಕ್ಕೆ ತೆರಳಿ ಸ್ಥಳೀಯರು ಹಾಗೂ ಭದ್ರತಾ ಪಡೆಗಳನ್ನು ಭೇಟಿ ನೀಡಿ ಉಭಯ ಕುಶಲೋಪರಿ ವಿಚಾರಿಸಿದರು.

ಮೊಬೈಲ್‌ನಲ್ಲಿ ಸೈರನ್ ಶಬ್ದ ಕೇಳಿ ಜನ ಶಾಕ್, ಕೇಂದ್ರ ಸರ್ಕಾರದಿಂದ ‘Emergency Alert’ ಪರೀಕ್ಷೆ

ಐಟಿಬಿಪಿ ಮಹಿಳಾ ಸೈನಿಕರನ್ನೂ ಪ್ರಧಾನಿ ಭೇಟಿ ಮಾಡಲಿದ್ದಾರೆ. ಸಾಂಪ್ರದಾಯಿಕ ವೇಷಭೂಷಣಗಳಲ್ಲಿ ಸ್ಥಳೀಯ ಕಲಾವಿದರು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು. ಉತ್ತರಾಖಂಡಕ್ಕೆ ತೆರಳುವ ಮುನ್ನ ಪ್ರಧಾನಮಂತ್ರಿಯವರು ಕುಂಜಿ ಗ್ರಾಮದ ಜನರೊಂದಿಗೆ ಸಂವಹನ ನಡೆಸಿ, ಪಾರ್ವತಿ ಕುಂಡಕ್ಕೆ ಭೇಟಿ ನೀಡುತ್ತೇನೆ. ಜಾಗೇಶ್ವರ ಧಾಮದಲ್ಲಿ ಪೂಜೆ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾದ ಗುತ್ತಿಗೆದಾರರು

ಬೆಂಗಳೂರು,ಅ.12- ಗುತ್ತಿಗೆದಾರರ ಬಾಕಿ ಬಿಲ್‍ಗೆ ಸಂಬಂಧಪಟ್ಟಂತೆ ರಾಜ್ಯಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ ಮತ್ತೆ ಹೋರಾಟಕ್ಕೆ ಮುಂದಾಗಿದೆ. ರಾಜ್ಯಸರ್ಕಾರ ರಚನೆಯಾಗಿ 5 ತಿಂಗಳು ಕಳೆದಿದ್ದರೂ ಬಾಕಿ ಬಿಲ್ ಪಾವತಿಯಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ತನಿಖೆಯ ಹೆಸರಿನಲ್ಲಿ ಕಿರುಕುಳ ನೀಡಲಾಗುತ್ತಿದೆ.

ದ್ದೇಶಪೂರ್ವಕವಾಗಿಯೇ ಕಾಮಗಾರಿಗಳ ಬಿಲ್ ಅನ್ನು ತಡೆಹಿಡಿಯಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಈ ಹಿಂದೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪತ್ರಿಕಾಗೋಷ್ಠಿ ನಡೆಸಿ ರಾಜ್ಯಸರ್ಕಾರದ ವಿರುದ್ಧ ಕಿಡಿಕಾರಿದರು. ಅದರ ನಂತರ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದಿಷ್ಟು ಬಾಕಿ ಬಿಲ್ ಪಾವತಿಯಾಗಿದ್ದವು. ಅದರ ಹೊರತಾಗಿಯೂ ಇನ್ನೂ ಸಾವಿರಾರು ಕೋಟಿ ರೂ.ಗಳು ಬಿಡುಗಡೆಯಾಗಬೇಕಿದೆ.

ಇಸ್ರೇಲ್‍ನಲ್ಲಿರುವ ಭಾರತೀಯರ ರಕ್ಷಣೆಗೆ ‘ಆಪರೇಷನ್ ಅಜಯ್’ ಕಾರ್ಯಾಚರಣೆ ಆರಂಭ

ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರದ ಮೇಲೆ ಒತ್ತಡ ಹೇರಲು ಗುತ್ತಿಗೆದಾರರ ಸಂಘ ಮುಂದಾಗಿದೆ. ನಾಳೆ ಬೆಳಿಗ್ಗೆ ಸಂಘದ ಸಭೆ ಕರೆಯಲಾಗಿದ್ದು, ಅಲ್ಲಿ ಮುಂದಿನ ಹೋರಾಟಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿದೆ.

ರಾಜ್ಯಸರ್ಕಾರ ಲೋಕೋಪಯೋಗಿ, ಸಮಾಜ ಕಲ್ಯಾಣ, ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಬಿಬಿಎಂಪಿ ಸೇರಿದಂತೆ ಮತ್ತಿತರ ಇಲಾಖೆಗಳಲ್ಲಿ ಬಾಕಿ ಇರುವ ಬಿಲ್‍ಗಳನ್ನು ಶೀಘ್ರ ಬಿಡುಗಡೆ ಮಾಡುವಂತೆ ಒತ್ತಡ ಹೇರಲಾಗಿದೆ.

ಅ.15 ರಿಂದ ಅ.21 ರವರೆಗೆ ದಸರಾ ಕುಸ್ತಿ ಪಂದ್ಯಾವಳಿ

ಮೈಸೂರು, ಅ.12- ಈ ಬಾರಿ ದಸರಾ ಮಹೋತ್ಸವದಲ್ಲಿ ಕುಸ್ತಿ ಪಂದ್ಯಾವಳಿ ಅಭಿಮಾನಿಗಳಿಗೆ ರೋಮಾಂಚನ ನೀಡಲಿದೆ. ಅ.15 ರಿಂದ ಅ.21ರವರೆಗೆ ಆರು ದಿನಗಳ ಕಾಲ ಸಿಎಂ ಕಪ್, ದಸರಾ ಕೇಸರಿ, ದಸರಾ ಕಂಠೀರವ ಹಾಗೂ ಮೈಸೂರು ವಿಭಾಗದ ಕುಮಾರ ಹಾಗೂ ಕಿಶೋರಿ ಕುಸ್ತಿ ಪಂದ್ಯಾವಳಿ ನಡೆಯಲಿದೆ. ಪಂದ್ಯಾವಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

ಈ ಕುರಿತು ದಸರಾ ಕುಸ್ತಿ ಉಪಸಮಿತಿಯ ವಿಶೇಷಾಧಿಕಾರಿ, ಅಪರ ಪೊಲೀಸ್ ಅೀಧಿಕ್ಷಕಿ ಡಾ.ಬಿ.ಎನ್.ನಂದಿನಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅ.15 ರ ಸಂಜೆ 4 ಗಂಟೆಗೆ ಸಿಎಂ ಸಿದ್ದರಾಮಯ್ಯ ಕುಸ್ತಿಗೆ ಚಾಲನೆ ನೀಡುವರು. 16 ರಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 2ರ ವರೆಗೆ ಕುಸ್ತಿಪಟುಗಳ ದೇಹ ತೂಕ, ನಂತರ 16ರ ಮಧ್ಯಾಹ್ನ 3 ರಿಂದ ಎಲ್ಲಾ ವಿಭಾಗದ ಪಂದ್ಯಾವಳಿ ಚಾಲನೆ ಸಿಗಲಿವೆ ಎಂದು ಹೇಳಿದರು.

ಇಸ್ರೇಲ್‍ನಲ್ಲಿರುವ ಭಾರತೀಯರ ರಕ್ಷಣೆಗೆ ‘ಆಪರೇಷನ್ ಅಜಯ್’ ಕಾರ್ಯಾಚರಣೆ ಆರಂಭ

17 ರಂದು ದಸರಾ ಕಿಶೋರಿ, ದಸರಾ ಕೇಸರಿ, ದಸರಾ ಕಂಠೀರವ ಹಾಗೂ ಮೈಸೂರು ವಿಭಾಗದ ದಸರಾ ಕುಮಾರ, ದಸರಾ ಕಿಶೋರಿ ತೂಕ ತೆಗೆದುಕೊಳ್ಳಲಾಗುವುದು. ಅಂದೆ ಸಿಎಂ ಕಪ್ ಕುಸ್ತಿ ಪಂದ್ಯಾವಳಿ ಸಹ ನಡೆಯಲಿದೆ ಎಂದು ನಂದಿನಿ ವಿವರಿಸಿದರು.

ಕತ್ತು ಕೊಯ್ದು ಮಗಳನ್ನೇ ಕೊಂದ ತಂದೆ

ದೇವನಹಳ್ಳಿ, ಅ.12- ಪ್ರೀತಿಯ ಬಲೆಗೆ ಬಿದ್ದಿದ್ದ ಮಗಳನ್ನು ತಂದೆಯೇ ಕತ್ತುಕೊಯ್ದು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬಿದಲೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಕವನಾ(20) ಕೊಲೆಯಾದ ದುರ್ದೈವಿ.

ಬಿದಲೂರು ಗ್ರಾಮದ ನಿವಾಸಿ ಮಂಜುನಾಥ್ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡುತ್ತಿದ್ದರು. ಈ ನಡುವೆ ಈ ಇಬ್ಬರೂ ಹೆಣ್ಣು ಮಕ್ಕಳು ಪ್ರೀತಿಯ ಬಲೆಗೆ ಬಿದ್ದಿದ್ದಾರೆ. ಇತ್ತೀಚೆಗೆ ಕಿರಿಯ ಮಗಳು ಪ್ರೀತಿಸಿದವನ ಜೊತೆ ಹೋಗುವುದಾಗಿ ಮನೆಯಲ್ಲಿ ಪೋಷಕರೊಂದಿಗೆ ಜಗಳವಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರಿಂದ ಪೊಲೀಸರು ಆಕೆಗೆ ಬುದ್ಧಿವಾದ ಹೇಳಿ ನಂತರ ಸಾಂತ್ವನ ಕೇಂದ್ರಕ್ಕೆ ಆಕೆಯನ್ನು ಸೇರಿಸಲಾಗಿದೆ.

ಮೊಬೈಲ್‌ನಲ್ಲಿ ಸೈರನ್ ಶಬ್ದ ಕೇಳಿ ಜನ ಶಾಕ್, ಕೇಂದ್ರ ಸರ್ಕಾರದಿಂದ ‘Emergency Alert’ ಪರೀಕ್ಷೆ

ಇದೀಗ ಹಿರಿಯ ಮಗಳು ಕವನಾ ಯುವಕನೊಬ್ಬನನ್ನು ಪ್ರೀತಿಸುತ್ತಿರುವ ವಿಷಯ ಆಕೆಯ ಪೋಷಕರಿಗೆ ಗೊತ್ತಾಗಿದೆ. ಈ ಬಗ್ಗೆ ಮಗಳಿಗೆ ಪೋಷಕರು ಬುದ್ಧಿವಾದ ಹೇಳಿದರೂ ಆಕೆ ಕೇಳುತ್ತಿರಲಿಲ್ಲ. ಮಗಳ ವರ್ತನೆಯಿಂದ ಬೇಸತ್ತ ತಂದೆ ಮಂಜುನಾಥ್ ಅವರು ಮಗಳನ್ನು ಕೊಲೆ ಮಾಡಲು ನಿರ್ಧರಿಸಿ ಆಕೆ ನಿದ್ರೆಗೆ ಜಾರಿದಾಗ ಕೋಳಿಕೊಯ್ಯುವ ಚಾಕುವಿನಿಂದ ಕವನಾಳ ಕತ್ತುಕೊಯ್ದು ಕೊಲೆ ಮಾಡಿ ನಂತರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾರೆ.

ವಿಶ್ವನಾಥಪುರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮಗಳ ವರ್ತನೆಯಿಂದ ಎಲ್ಲಿ ಮರ್ಯಾದೆ ಹೋಗುವುದೆಂದು ಭಾವಿಸಿ ತಂದೆ ಈ ಕೃತ್ಯ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಹಮಾಸ್ ಸರ್ವನಾಶದ ಶಪಥ ಮಾಡಿದ ಇಸ್ರೇಲ್

ಜೆರುಸಲೇಂ, ಅ 12- ಪ್ರತಿ ಹಮಾಸ್ ಸದಸ್ಯ ಸತ್ತ ಮನುಷ್ಯ ಇದ್ದಂತೆ. ಇಸ್ರೇಲ್ ತನ್ನ ಮೇಲಿನ ದಾಳಿಗೆ ಪ್ರತಿಕ್ರಿಯೆಯಾಗಿ ಹಮಾಸ್ ಅನ್ನುಸಂಪೂರ್ಣ ನಾಶಪಡಿಸುತ್ತೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶಪಥ ಮಾಡಿದ್ದಾರೆ. ಅಭೂತಪೂರ್ವ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲಿ ವಿಮಾನಗಳು ಗಾಜಾವನ್ನು ಹೊಡೆ ದುರುಳಿಸಿದಾಗ ನೆತನ್ಯಾಹು ತಡರಾತ್ರಿ ದೂರದರ್ಶನದ ಈ ರೀತಿಯ ಭಾಷಣ ಮಾಡಿದ್ದಾರೆ.

ಹೊಸ ಕ್ಯಾಬಿನೆಟ್ ವರ್ಷಗಳ ಕಟುವಾದ ವಿಭಜನೆಯ ರಾಜಕೀಯದ ನಂತರ ಏಕತೆಯ ಮಟ್ಟವನ್ನು ಸ್ಥಾಪಿಸುತ್ತದೆ ಮತ್ತು ಇಸ್ರೇಲಿ ಮಿಲಿಟರಿ ಗಾಜಾಕ್ಕೆ ನೆಲದ ಆಕ್ರಮಣವನ್ನು ಪ್ರಾರಂಭಿಸುವ ಸಾಧ್ಯತೆ ಹೆಚ್ಚಿದೆ. ಯುದ್ಧವು ಈಗಾಗಲೇ ಎರಡೂ ಕಡೆಗಳಲ್ಲಿ ಕನಿಷ್ಠ 2,300 ಜೀವಗಳನ್ನು ಬಲಿ ತೆಗೆದುಕೊಂಡಿದೆ.

ಹಮಾಸ್‍ನ ಉಗ್ರಗಾಮಿಗಳು ಶನಿವಾರ ಗಡಿ ಬೇಲಿಯ ಮೂಲಕ ನುಗ್ಗಿ ನೂರಾರು ಇಸ್ರೇಲಿಗಳನ್ನು ಅವರ ಮನೆಗಳಲ್ಲಿ, ಬೀದಿಗಳಲ್ಲಿ ಮತ್ತು ಹೊರಾಂಗಣ ಸಂಗೀತ ಉತ್ಸವದಲ್ಲಿ ಕಗ್ಗೊಲೆ ಮಾಡಿದ ನಂತರ ಇಸ್ರೇಲಿ ಸರ್ಕಾರವು ಹಮಾಸ್ ಅನ್ನು ನಾಶಪಡಿಸುವ ತೀವ್ರ ಒತ್ತಡದಲ್ಲಿದೆ.

ಇಸ್ರೇಲ್‍ನಲ್ಲಿರುವ ಭಾರತೀಯರ ರಕ್ಷಣೆಗೆ ‘ಆಪರೇಷನ್ ಅಜಯ್’ ಕಾರ್ಯಾಚರಣೆ ಆರಂಭ

ದೂರದರ್ಶನದ ಭಾಷಣದಲ್ಲಿ, ನೆತನ್ಯಾಹು ದಾಳಿಯ ಸಮಯದಲ್ಲಿ ನಡೆದ ದೌರ್ಜನ್ಯಗಳನ್ನು ವಿವರಿಸಿದರು. ತಲೆಗೆ ಗುಂಡು ಹಾರಿಸಿದ ಹುಡುಗರು ಮತ್ತು ಹುಡುಗಿಯರನ್ನು ಬಂಧಿಸಿರುವುದನ್ನು ನಾವು ನೋಡಿದ್ದೇವೆ. ಪುರುಷರು ಮತ್ತು ಮಹಿಳೆಯರು ಜೀವಂತವಾಗಿ ಸುಟ್ಟು ಹಾಕಿದರು. ಅತ್ಯಾಚಾರ ಮತ್ತು ಹತ್ಯೆಗೆ ಒಳಗಾದ ಯುವತಿಯರು. ಶಿರಚ್ಛೇದ ಮಾಡಿದ ಸೈನಿಕರು, ಎಂದು ಅವರು ಹೇಳಿದರು.

ಈ ರೀತಿ ಇಸ್ರೇಲಿಗಳ ಮೇಲೆ ದಾಳಿ ನಡೆಸಿರುವ ಹಮಾಸ್ ಉಗ್ರರನ್ನು ಜೀವ ಸಹಿತ ಉಳಿಸುವುದಿಲ್ಲ ಅದಕ್ಕೆ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಅವರು ದೇಶದ ಜನರಿಗೆ ಭರವಸೆ ನೀಡಿದರು.