Home Blog Page 1902

ಬಿಗ್‍ಬಾಸ್‍ನಿಂದ ಹೊರಬಂದು ಪ್ರದೀಪ್ ಈಶ್ವರ್ ಹೇಳಿದ್ದೇನು..?

ಬೆಂಗಳೂರು,ಅ.10-ಬಿಗ್‍ಬಾಸ್‍ಗೆ ನಾನು ಸ್ರ್ಪಧಿಯಾಗಿ ಹೋಗಿರಲಿಲ್ಲ. ಖಾಸಗಿ ಚಾನೆಲ್‍ನ ಸ್ನೇಹಿತರು ಆಹ್ವಾನಿಸಿದ್ದಕ್ಕಾಗಿ ಎರಡು ಮೂರು ಗಂಟೆ ಭಾಗವಹಿಸಿದ್ದೆ. ಆದರೆ ನಾನೇ ಸ್ರ್ಪಧಿ ಎಂದು ಉದ್ದೇಶಪೂರ್ವಕವಾಗಿಯೇ ಫ್ರಾಂಕ್ ಮಾಡಲಾಗಿತ್ತು ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.

ಮಾಜಿ ಸಚಿವ ಡಾ. ಸುಧಾಕರ್ ಅವರು ನಿನ್ನೆ ಪತ್ರಿಕಾಗೋಷ್ಠಿ ನಡೆಸಿ ಶಾಸಕರು ಬಿಗ್‍ಬಾಸ್‍ಗೆ ಹೋಗಿದ್ದರಿಂದಾಗಿ ನಗೆಪಾಟಲಿನ ವಾತಾವರಣ ನಿರ್ಮಾಣವಾಗಿದೆ ಎಂದು ಟೀಕೆ ಮಾಡಿದರು. ಇದಕ್ಕೆ ತಿರುಗೇಟು ನೀಡಿದ ಪ್ರದೀಪ್ ಈಶ್ವರ್, ಈ ಹಿಂದೆ ಚಿಕ್ಕಬಳ್ಳಾಪುರ ಉತ್ಸವ ಮಾಡಿ ದೊಡ್ಡ ದೊಡ್ಡ ಸ್ಟಾರ್‌ಗಳನ್ನೇ ಕರೆಸಿದ್ದ ಸುಧಾಕರ್‌ರವರು  ಸೋಲು ಕಂಡಿದ್ದಾರೆ. ಈಗ ನಾನು ಬಿಗ್‍ಬಾಸ್‍ಗೆ ಹೋಗಿದ್ದಕ್ಕಾಗಿ ಟೀಕೆ ಮಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕನಾಗಿ ಕನಿಷ್ಠ ಸರಿಯಾಗಿ ವಿಮರ್ಶೆ ಮಾಡಲು ಅವರಿಗೆ ಬರುತ್ತಿಲ್ಲ ಎಂದರು.

ಟೀಕೆ ಮಾಡುವುದು ವಿರೋಧಪಕ್ಷದವರ ಹಕ್ಕು. ಒಂದು ವೇಳೆ ನಾನೇ ಸುಧಾಕರ್ ಅವರ ಸ್ಥಾನದಲ್ಲಿದ್ದರೆ ಆಟವೇ ಬೇರೆಯಾಗಿರುತ್ತಿತ್ತು. ನನ್ನ ಪ್ರಕಾರ ಸುಧಾಕರ್ ಅವರು ಬೆಳಿಗ್ಗೆಯಿಂದ ಸಂಜೆವರೆಗೂ ಚಾನಲ್‍ನಲ್ಲೇ ಕುಳಿತುಕೊಂಡಿರಬೇಕಿತ್ತು. ಬಿಗ್‍ಬಾಸ್‍ಗೆ ಹೋಗಿರುವುದು ನಗೆಪಾಟಲು ಎಂದಿದ್ದಾರೆ. ಅದೊಂದು ದೊಡ್ಡ ವೇದಿಕೆ. ಕೋಟ್ಯಂತರ ಜನ ನೋಡುತ್ತಾರೆ. ನಾನು ಯುವಜನರಿಗೆ ಒಂದಷ್ಟು ಸಕಾರಾತ್ಮಕ ಸಂದೇಶಗಳನ್ನು ನೀಡಬೇಕಿತ್ತು. ಈಗಾಗಲೇ ಹಲವಾರು ಮಾಧ್ಯಮಗಳಲ್ಲಿ, ವೇದಿಕೆಗಳಲ್ಲಿ ನನ್ನ ಅನಿಸಿಕೆಗಳನ್ನು ಹಂಚಿಕೊಂಡಿದ್ದೇನೆ. ಬಿಗ್‍ಬಾಸ್ ಕೂಡ ದೊಡ್ಡ ವೇದಿಕೆಯಾದ್ದರಿಂದ ಅದರಲ್ಲಿ ಭಾಗವಹಿಸಿದ್ದೆ ಎಂದರು.

ಪುರಾತನ ದೇವರ ವಿಗ್ರಹ ಕದ್ದಿದ್ದ ಕಳ್ಳನ ಬಂಧನ

ಶೋ ನಡೆಸುವ ಖಾಸಗಿ ಚಾನಲ್‍ನಲ್ಲಿ ನನ್ನ ಸ್ನೇಹಿತರಿದ್ದಾರೆ. ಅವರ ಮನವಿ ಮೇರೆಗೆ ಸೌಜನ್ಯದಿಂದ ನಾನು ಬಿಗ್‍ಬಾಸ್‍ಗೆ ಹೋಗಿದ್ದೆ. ಬೆಳಿಗ್ಗೆಯಿಂದ ಕ್ಷೇತ್ರದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿದ್ದೆ. ಸಂಜೆ ಬೆಂಗಳೂರಿಗೆ ಬಂದು 8.30 ರ ವೇಳೆಗೆ ಶೋಗೆ ಹೋದೆ. 11.30 ರ ವೇಳೆಗೆ ವಾಪಸ್ ಬಂದೆ. ಚಾನಲ್‍ನವರು ಮಾರುಕಟ್ಟೆ ದೃಷ್ಟಿಯಿಂದ ನನ್ನನ್ನು ಸ್ರ್ಪಧಿ ಎಂದು ಫ್ರಾಂಕ್ ಮಾಡುವುದಾಗಿ ಹೇಳಿದರು. ಅನುಕೂಲವಾಗುವುದಾದರೆ ಆಗಲಿ ಎಂದು ನಾನು ಸುಮ್ಮನಿದ್ದೆ ಎಂದು ಹೇಳಿದರು.

ನಾನು ಬಿಗ್‍ಬಾಸ್‍ಗೆ ಅತಿಥಿಯಾಗಿ ಹೋಗಿದ್ದೇನೆ ಹೊರತು ಸ್ರ್ಪಧಿಯಲ್ಲ. ಅಲ್ಲಿರುವ ಸ್ರ್ಪಧಿಗಳು 100 ದಿನ ಮನೆಯವರಿಂದ ದೂರ ಇರುತ್ತಾರೆ. ಅವರನ್ನು ಪ್ರೇರೇಪಿಸುವ ಸಂದೇಶ ನೀಡುವುದು ನನ್ನ ಉದ್ದೇಶವಾಗಿತ್ತು. ನಾನು ಬಿಗ್‍ಬಾಸ್‍ಗೆ ಹೋಗಿದ್ದು ಏಕೆ ಎಂದು ಮಾಜಿ ಶಾಸಕರಿಗೆ ಅರ್ಥವಾಗಿಲ್ಲ. ಹೋಗಲಿ ಅವರು ಅಂದುಕೊಂಡತೆಯಾದರೂ ಸರಿಯಾಗಿ ಟೀಕೆ ಮಾಡಿಲ್ಲ. ಇನ್ನು ಕೆಲವು ಸಂಘಟನೆಗಳು ನನ್ನ ವಿರುದ್ಧ ವಿಧಾನಸಭಾಧ್ಯಕ್ಷರಿಗೆ ದೂರು ನೀಡಿದ್ದಾರೆ. ಇದು ಅವರ ಅಸ್ತಿತ್ವದ ಪ್ರಶ್ನೆ. ನನ್ನ ಆಕ್ಷೇಪವೇನಿಲ್ಲ. ಟೀಕೆಗಳನ್ನು ಎದುರಿಸಲು ಸಿದ್ಧವಾಗಿಯೇ ರಾಜಕಾರಣಕ್ಕೆ ಬಂದಿದ್ದೇನೆ. ಇಂತವರಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

ಉದ್ಯಮಿಗೆ 5.39 ಕೋಟಿ ಪಂಗನಾಮ : ಹೆಚ್ಚು ಲಾಭಕ್ಕಾಗಿ ಹೂಡಿಕೆ ಮಾಡುವ ಮುನ್ನ ಹುಷಾರ್..!

ಬಿಗ್‍ಬಾಸ್‍ಗೆ ತೆರಳುವ ಮುನ್ನ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡಿದ್ದೆ. ಪ್ರತಿಯೊಂದಕ್ಕೂ ಸರ್ಕಾರದ ಅನುಮತಿ ಕೇಳುವ ಅಗತ್ಯವಿಲ್ಲ. ನಮಗೂ ವೈಯಕ್ತಿಕ ಸ್ವಾತಂತ್ರವಿದೆ. ಕ್ಷೇತ್ರ ಬಿಟ್ಟು ಬಿಗ್‍ಬಾಸ್‍ನಲ್ಲಿ ಕುಳಿತುಕೊಳ್ಳಬೇಕೇ, ಬೇಡವೇ ಎಂಬುದರ ಅರಿವಿದೆ ಎಂದು ಹೇಳಿದರು.

ವಿದ್ಯುತ್ ಸಮಸ್ಯೆ ಕುರಿತು ಶ್ವೇತಪತ್ರಕ್ಕೆ ಹೆಚ್‍ಡಿಕೆ ಆಗ್ರಹ

ಬೆಂಗಳೂರು, ಅ.10- ಅಡ್ಡದಾರಿಯಲ್ಲಿ ಅಧಿಕಾರ ಪಡೆಯಲು 5 ಗ್ಯಾರಂಟಿ ಕೊಟ್ಟ ಕಾಂಗ್ರೆಸ್, 6ನೇ ಗ್ಯಾರಂಟಿ ಕತ್ತಲೆಭಾಗ್ಯವನ್ನು ನವರಾತ್ರಿಗೆ ಮೊದಲೇ ಖಾತರಿಪಡಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಈ ಹೊಸ ಭಾಗ್ಯ ಡಿಸೆಂಬರಿಗೋ, ಜನವರಿಗೋ ಎಂದಷ್ಟೇ ತೀರ್ಮಾನ ಆಗಬೇಕಿದೆ.

ಕೂಡಲೇ ವಿದ್ಯುತ್ ದುಸ್ಥಿತಿಯ ಬಗ್ಗೆ ರಾಜ್ಯಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಸಾಮಾಜಿಕ ಮಾಧ್ಯಮ ಎಕ್ಸ್‍ನಲ್ಲಿ ಆಗ್ರಹಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಈಗಾಗಲೇ 5 ಅರೆಬರೆ ಗ್ಯಾರಂಟಿಗಳನ್ನು ಕೊಟ್ಟು ಕೈ ತೊಳೆದುಕೊಂಡಿದೆ. ಶೀಘ್ರವೇ 6ನೇ ಗ್ಯಾರಂಟಿ ಕೊಡಲು ಸಿದ್ಧತೆ ನಡೆಸಿದೆ. ಅದರ ಹೆಸರು ಕತ್ತಲೆಭಾಗ್ಯ ಎಂದು ಅವರು ಟೀಕಿಸಿದ್ದಾರೆ.

ಡಿಸೆಂಬರ್ ತಿಂಗಳ ಹೊತ್ತಿಗೆ ಕರ್ನಾಟಕ ಈ ಕತ್ತಲೆಭಾಗ್ಯದ ಕೂಪಕ್ಕೆ ಬೀಳುವುದು ಖಚಿತ. 2024ರ ಹೊಸ ವರ್ಷಕ್ಕೆ ತಾನು ಕೊಟ್ಟ ಗೃಹಜ್ಯೋತಿಗೆ ಎಳ್ಳುನೀರು ಬಿಟ್ಟು ಕಗ್ಗತ್ತಲ ಕರ್ನಾಟಕದ ಉದಯ ಮಾಡಿಸುವುದು ಗ್ಯಾರಂಟಿ. ಇದು ಸತ್ಯ ಎಂದಿದ್ದಾರೆ. ಕಾವೇರಿ ಬಗ್ಗೆ ಸರ್ಕಾರ ಕಳ್ಳಾಟ ಆಡಿದೆ. ತಮಿಳುನಾಡು ವಿಧಾನಸಭೆಯಲ್ಲಿ ರಾಜ್ಯದ ವಿರುದ್ಧ ನಿಲುವಳಿ ಸೂಚನೆ ಅಂಗೀಕಾರವಾಗಿದೆ. ಎಮ್ಮೆ ಚರ್ಮದ ಸರ್ಕಾರಕ್ಕೆ ಕಾವೇರಿ ಒಡಲಾಳದ ಬೇಗುದಿ ಬಗ್ಗೆ ಜಾಣ ಕುರುಡು ಪ್ರದರ್ಶಿಸಿದೆ.

ಸರ್ಕಾರ ರಾಜ್ಯದ ಉದ್ದಗಲಕ್ಕೂ ಅನಧಿಕೃತ ಲೋಡ್ ಶೆಡ್ಡಿಂಗ್ ಹೇರಿ ದಿನಕ್ಕೆ 2 ಗಂಟೆ ವಿದ್ಯುತ್ತಿಗೂ ದಿಕ್ಕಿಲ್ಲದ ದುಸ್ಥಿತಿ ನಿರ್ಮಾಣ ಮಾಡಿದೆ. ನಮ್ಮ ರೈತರಿಗೆ ಲೋಡ್ ಶೆಡ್ಡಿಂಗ್, ತಮಿಳುನಾಡಿಗೆ ಸಮೃದ್ಧ ನೀರು ಎಂದು ವಾಗ್ದಾಳಿ ನಡೆಸಿದ್ದಾರೆ.

ಹ್ಯಾಟ್ರಿಕ್ ಗೆಲುವಿನೊಂದಿಗೆ ಮತ್ತೆ ಕೆಸಿಆರ್ ಅಧಿಕಾರಕ್ಕೆ : ಕೆಟಿಆರ್ ವಿಶ್ವಾಸ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವಿದ್ಯುತ್ ಅಭಾವದಿಂದ ನೀರು ಹರಿಸಲಾಗದೇ ಬೆಳೆಗಳು ಒಣಗುತ್ತಿವೆ. ನಾಲೆಗಳಲ್ಲೂ ನೀರಿಲ್ಲ, ಬೋರ್‍ವೆಲ್‍ಗಳಿಂದ ಪಂಪ್ ಮಾಡಲು ವಿದ್ಯುತ್ತೂ ಇಲ್ಲ. ಮೊದಲೇ ಕಷ್ಟದಲ್ಲಿರುವ ರೈತನ ಬೆನ್ನಿನ ಮೇಲೆ ಬರೆಯ ಮೇಲೆ ಬರೆ ಎಳೆಯುತ್ತಿದೆ ಕಾಂಗ್ರೆಸ್ ಸರ್ಕಾರ ಎಂದು ಅವರು ಆರೋಪಿಸಿದ್ದಾರೆ. ವಿದ್ಯುತ್ ಕ್ಷಾಮಕ್ಕೆ ಮೊದಲೇ ಕರ್ನಾಟಕ ವಿದ್ಯುತ್‍ಉತ್ಪಾದನೆಯಲ್ಲಿ ಕೊರತೆಯಾಗಿದೆ. ಉತ್ಪಾದನೆಗೆ ಅಗತ್ಯವಾದ ಮೂಲಗಳ ಕ್ಷಾಮಕ್ಕೆ ತುತ್ತಾಗಿ, ಪರರಾಜ್ಯಗಳ ಮುಂದೆ ದೈನೇಸಿಯಾಗಿ ನಿಂತು ವಿದ್ಯುತ್ ಸಾಲಕ್ಕೆ ಅರ್ಜಿ ಹಾಕಿಕೊಳ್ಳುತ್ತಿದೆ.

ಜಲ, ಪವನ, ಸೌರ ವಿದ್ಯುತ್ ಉತ್ಪಾದನೆ ಕುಸಿತವಾಗಿದೆ. ಇದು ದೂರದೃಷ್ಟಿಯ ಕೊರತೆ ಹಾಗೂ ನಿರ್ವಹಣೆಯ ವೈಫಲ್ಯ ಎಂದು ಟೀಕಿಸಿದ್ದಾರೆ. ಜಲಾಶಯಗಳು ಖಾಲಿಯಾಗಿದ್ದು, ವಿದ್ಯುತ್ ಉತ್ಪಾದನೆ ಮಿತವಾಗಿ ಮಾಡುವಂತೆ ಸರ್ಕಾರವೇ ಆದೇಶಿಸಿದೆ. ಇನ್ನೊಂದೆಡೆ ಉಷ್ಣ ವಿದ್ಯುತ್ ಸ್ಥಾವರಗಳು ಕಲ್ಲಿದ್ದಲು ಬವಣೆಯಿಂದ ಅಲ್ಪಸ್ವಲ್ಪ ಉತ್ಪಾದಿಸುತ್ತಿವೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ಒಟ್ಟಾರೆ ಬೇಡಿಕೆಯಲ್ಲಿ ಶೇ.20ರಷ್ಟು ವಿದ್ಯುತ್ತನ್ನು ಸರ್ಕಾರ ಹೊರಗಿನಿಂದಲೇ ಪಡೆಯುತ್ತಿದೆ. ರಾಜ್ಯವನ್ನು ವಿದ್ಯುತ್ ಸಾಲಕ್ಕೆ ತಳ್ಳಿ, ಕರುನಾಡನ್ನು ಬರ್ಬಾದ್ ಮಾಡಲಿದೆ ಕಾಂಗ್ರೆಸ್ ಸರ್ಕಾರ.ಆದರೆ, ವಿದ್ಯುತ್ ಸಾಲ ನೀಡುವ ಸ್ಥಿತಿಯಲ್ಲಿ ಇತರೆ ರಾಜ್ಯಗಳೂ ಇಲ್ಲ. ಹಾಗಾದರೆ ಮುಂದೇನು? ಸಂಬಂಧಪಟ್ಟ ಸಚಿವರು ಮೌನವ್ರತ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ನಿರ್ವಹಣೆ, ರಿಪೇರಿ ನೆಪದಲ್ಲಿ ಇಡೀ ದಿನ ವಿದ್ಯುತ್ ಕಡಿತ ಮಾಡುತ್ತಿರುವ ಸರ್ಕಾರದ ಸದಾರಮೆ ಆಟ ಈಗಷ್ಟೇ ಗೊತ್ತಾಗುತ್ತಿದೆ. ಹಿಂದೆ ಬರದಂತಹ ಕ್ಲಿಷ್ಟ ಸ್ಥಿತಿ ಇದ್ದರೂ ವಿದ್ಯುತ್ ಖರೀದಿಗೆ ಹಣ ಇರುತ್ತಿತ್ತು. ಈಗ ಖಜಾನೆ ಖಾಲಿಯಂತೆ ಎಂದು ಟೀಕಿಸಿದ್ದಾರೆ.

ಉದ್ಯಮಿಗೆ 5.39 ಕೋಟಿ ಪಂಗನಾಮ : ಹೆಚ್ಚು ಲಾಭಕ್ಕಾಗಿ ಹೂಡಿಕೆ ಮಾಡುವ ಮುನ್ನ ಹುಷಾರ್..!

ಲೋಕಸಭೆ ಚುನಾವಣೆವರೆಗೂ ಜನರನ್ನು ಗ್ಯಾರಂಟಿಗಳ ಅಮಲಿನಲ್ಲಿ ತೇಲಿಸಿ, ಆಮೇಲೆ ಕೈ ಎತ್ತಿಬಿಡುವ ದುಷ್ಟ ಹುನ್ನಾರ ಸರ್ಕಾರದ್ದು. ಆ ಕಾರಣಕ್ಕಾಗಿಯೇ ಸರ್ಕಾರ ಸತ್ಯ ಮರೆಮಾಚಿ ಮೊಸಳೆ ಕಣ್ಣೀರು ಹಾಕುತ್ತಿದೆ.ಆದರೆ, ಕತ್ತಲೆಭಾಗ್ಯ ಕರುಣಿಸುವ ಮುನ್ನ ಜನತೆಗೆ ಸತ್ಯವನ್ನೇ ಹೇಳಲಿ. ಬೇಡ ಎಂದವರು ಯಾರು? ವಿದ್ಯುತ್ ಸಾಲಕ್ಕೂ ದಿಕ್ಕಿಲ್ಲದ ಸರ್ಕಾರವು, ಖಾಸಗಿ ವಿದ್ಯುತ್ ಪೂರೈಕೆದಾರರಿಗೆ ಕಳೆದ ಆರೇಳು ತಿಂಗಳಿಂದ ಬಾಕಿ ಹಣ ನೀಡಿಲ್ಲ ಎನ್ನುವ ಮಾಹಿತಿ ಇದೆ. ಕೆಲ ಕಂಪನಿಗಳಿಗೆ 11 ತಿಂಗಳಿಂದ ಬಿಡಿಗಾಸು ಕೊಟ್ಟಿಲ್ಲವಂತೆ ಎಂದು ವ್ಯಂಗ್ಯವಾಡಿದ್ದಾರೆ.

ಇದು ಹೌದು ಎಂದಾದರೆ, ರಾಜ್ಯದ ಭವಿಷ್ಯದ ಗತಿ ಏನು? ಕೃಷಿ, ಕೈಗಾರಿಕೆಗಳ ಪಾಡೇನು? ಬೇಕಾಬಿಟ್ಟಿ ಬೆಲೆ ಏರಿಕೆ ಬರೆ ಎಳೆಸಿಕೊಂಡು ಏದುಸಿರು ಬಿಡುತ್ತಿರುವ ಜನರಿಗೆ ಸರ್ಕಾರದ ಉತ್ತರವೇನು ಎಂದು ಅವರು ಪ್ರಶ್ನಿಸಿದ್ದಾರೆ. ಕೃತಕ ಕತ್ತಲು ಸೃಷ್ಟಿಸಿ ಕಬ್ಬೆಕ್ಕಿನಂತೆ ಕದ್ದು ಹಾಲು ಕುಡಿಯುತ್ತೇವೆ ಎಂದರೆ ಆಗುವುದಿಲ್ಲ. ಜನರಿಗೂ ಕಳ್ಳಬೆಕ್ಕಿನ ಕಣ್ಣಾಮುಚ್ಚಾಲೆ ಈಗೀಗ ಚೆನ್ನಾಗಿ ಅರ್ಥವಾಗುತ್ತಿದೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ಬಿಜೆಪಿ-ಜೆಡಿಎಸ್ ಮೈತ್ರಿ ಅಪಸ್ವರ ; ಸ್ಥಳೀಯ ನಾಯಕರಿಗೆ ಹೈ ಎಚ್ಚರಿಕೆ

ಬೆಂಗಳೂರು,ಅ.10- ಬಿಜೆಪಿ-ಜೆಡಿಎಸ್ ಮೈತ್ರಿಗೆ ಅಪಸ್ವರ ಎತ್ತುತ್ತಿರುವ ನಾಯಕರ ಬಾಯಿಗೆ ಬೀಗ ಹಾಕಲು ಮುಂದಾಗಿರುವ ರಾಷ್ಟ್ರೀಯ ನಾಯಕರು ಪಕ್ಷದ ತೀರ್ಮಾನವನ್ನು ಪ್ರತಿಯೊಬ್ಬರೂ ಗೌರವಿಸದಿದ್ದರೆ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ಕೊಟ್ಟಿದೆ. ರಾಷ್ಟ್ರ ಹಾಗೂ ಪಕ್ಷದ ಹಿತದೃಷ್ಟಿಯಿಂದ ಕೆಲವು ಸಂದರ್ಭದಲ್ಲಿ ಇಷ್ಟವಿಲ್ಲದಿದ್ದರೂ ಕೆಲವು ರಾಜಕೀಯ ತೀರ್ಮಾನವನ್ನು ತೆಗೆದುಕೊಳ್ಳಬೇಕಾಗುತ್ತದೆ.

ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ಏನೇ ಅಪಸ್ವರ, ಟೀಕೆಗಳು ಇದ್ದರೂ ಹೈಕಮಾಂಡ್ ತೀರ್ಮಾನವನ್ನು ಯಾರೊಬ್ಬರೂ ಪ್ರಶ್ನೆ ಮಾಡುವಂತಿಲ್ಲ ಎಂದು ತಾಕೀತು ಮಾಡಿದೆ. ಸಂಸದರಾದ ಬಿ.ಎನ್.ಬಚ್ಚೇಗೌಡ, ಡಿ.ವಿ.ಸದಾನಂದಗೌಡ, ಶಾಸಕರಾದ ಎಸ್.ಟಿ.ಸೋಮಶೇಖರ್, ಮಾಜಿ ಸಚಿವರಾದ ವಿ.ಸೋಮಣ್ಣ, ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಪ್ರೀತಂ ಗೌಡ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಹೈಕಮಾಂಡ್ ಈ ಸಂದೇಶ ಮಹತ್ವ ಪಡೆದುಕೊಂಡಿದೆ.

2024 ರ ಲೋಕಸಭೆ ಚುನಾವಣೆಯಲ್ಲಿ ನಮಗೆ ಒಂದೊಂದು ಕ್ಷೇತ್ರವೂ ಕೂಡ ಅತಿ ಮುಖ್ಯವಾಗಿರುತ್ತದೆ. ಕಾಂಗ್ರೆಸ್ ತನ್ನ ವೈಮನಸ್ಸು ಮರೆತು ಬಿಟ್ಟು ಹೋಗಿದ್ದ ಪಕ್ಷಗಳನ್ನೆಲ್ಲಾ ಒಗ್ಗೂಡಿಸಿಕೊಂಡು ಹೋಗುತ್ತಿದೆ. ಅಲ್ಲಿ ಸಣ್ಣ ಅಪಸ್ವರವೂ ಇಲ್ಲದಿರುವಾಗ ಇಲ್ಲಿ ಇಷ್ಟು ದೊಡ್ಡ ವಿರೋಧವೇಕೆ ಎಂದು ದೆಹಲಿ ನಾಯಕರು ಪ್ರಶ್ನಿಸಿದ್ದಾರೆ.

ಹ್ಯಾಟ್ರಿಕ್ ಗೆಲುವಿನೊಂದಿಗೆ ಮತ್ತೆ ಕೆಸಿಆರ್ ಅಧಿಕಾರಕ್ಕೆ : ಕೆಟಿಆರ್ ವಿಶ್ವಾಸ

ಮಹಾರಾಷ್ಟ್ರದಲ್ಲಿ ಶಿವಸೇನೆ ವಿರುದ್ಧ ಕಾಂಗ್ರೆಸ್ ಎನ್‍ಸಿಪಿ ಅನೇಕ ದಶಕಗಳಿಂದ ಹೋರಾಟ ಮಾಡಿಕೊಂಡೇ ಬಂದಿತ್ತು. ಉಗ್ರ ಹಿಂದುತ್ವದ ಬಿಜೆಪಿ ಹಾಗೂ ಶಿವಸೇನೆ ಮೈತ್ರಿಯನ್ನು ಅನೇಕ ಸಂದರ್ಭಗಳಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಅನೇಕರು ಟೀಕೆ ಮಾಡಿದ್ದರು.

ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅದೇ ಶಿವಸೇನೆ ಬಿಜೆಪಿ ಜೊತೆ ಮೈತ್ರಿ ಮುರಿದುಕೊಂಡು ಕಾಂಗ್ರೆಸ್ ಹಾಗೂ ಎನ್‍ಸಿಪಿ ಜೊತೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಿತು. ಅಲ್ಲಿನ ಯಾವುದಾದರೂ ಸ್ಥಳೀಯ ನಾಯಕರು ಅಪಸ್ವರ ತೆಗೆದರೆ ಎಂದು ರಾಜ್ಯ ನಾಯಕರಿಗೆ ಪ್ರಶ್ನಿಸಿದೆ ಎಂದು ಗೊತ್ತಾಗಿದೆ.

ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಕೆಳಹಂತದ ಕಾರ್ಯಕರ್ತರು ಒಪ್ಪಿಕೊಳ್ಳುತ್ತಿಲ್ಲ ಎಂದು ನಮ್ಮ ಗಮನಕ್ಕೂ ಬಂದಿದೆ. ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕಾಂಗ್ರೆಸ್ ಪ್ರವರ್ಧಮಾನಕ್ಕೆ ಬರುತ್ತಿದೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಂತೇ ಲೋಕಸಭೆ ಚುನಾವಣೆಯಲ್ಲೂ ಅದೇ ಫಲಿತಾಂಶ ಪುನರಾವರ್ತನೆಯಾದರೆ 28 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದರೂ ಅಚ್ಚರಿ ಪಡಬೇಕಾಗಿಲ್ಲ. ಇದೀಗ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡಿರುವುದಿರಂದ ಕನಿಷ್ಟ ಪಕ್ಷ ನಮಗೆ 18 ರಿಂದ 20 ಸ್ಥಾನಗಳನ್ನು ಗೆಲ್ಲುವ ಅವಕಾಶವಿದೆ. ಇದಕ್ಕೆ ಯಾರೂ ಕೂಡ ವಿರೋಧ ವ್ಯಕ್ತಪಡಿಸಬಾರದು, ಜೊತೆಗೆ ಬಹಿರಂಗ ಹೇಳಿಕೆ ನೀಡಬಾರದು ಎಂದು ನಿರ್ಬಂಧ ಹಾಕಿದೆ.

ಯಶವಂತಪುರದ ಶಾಸಕ ಎಸ್.ಟಿ.ಸೋಮಶೇಖರ್ ಮೈತ್ರಿಗೆ ಏಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆಂಬ ಮರ್ಮವನ್ನು ಮೊದಲು ತಿಳಿದುಕೊಳ್ಳಿ. ಲೋಕಸಭೆ ಚುನಾವಣೆ ಬರುತ್ತಿದ್ದಂತೆ ಅವರು ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡುವುದು ಬಹುತೇಕ ಖಚಿತ.

ಶಾಸಕ ಶಿವರಾಂ ಹೆಬ್ಬಾರ್ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಮಾಜಿ ಸಚಿವರಾದ ವಿ.ಸೋಮಣ್ಣ, ಎಂ.ಪಿ.ರೇಣುಕಾಚಾರ್ಯ ಮತ್ತಿತರರು ಕಾಂಗ್ರೆಸ್ ಕದ ತಟ್ಟಿದ್ದಾರೆ. ಇವರ ಹೇಳಿಕೆಗೆ ಹೆಚ್ಚಿನ ಗಮನ ಕೊಡಬೇಡಿ. ಶೀಘ್ರದಲ್ಲೇ ಎರಡು ಪಕ್ಷಗಳ ವತಿಯಿಂದ ಬೃಹತ್ ಸಮಾವೇಶವನ್ನು ನಡೆಸಲಾಗುವುದು. ಪಕ್ಷವಿರೋಧಿ ಹೇಳಿಕೆ ಕೊಟ್ಟರೆ ಶಿಸ್ತುಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ರಾಷ್ಟ್ರೀಯ ನಾಯಕರು ಎಚ್ಚರಿಕೆ ಕೊಟ್ಟಿದ್ದಾರೆ.

ಉದ್ಯಮಿಗೆ 5.39 ಕೋಟಿ ಪಂಗನಾಮ : ಹೆಚ್ಚು ಲಾಭಕ್ಕಾಗಿ ಹೂಡಿಕೆ ಮಾಡುವ ಮುನ್ನ ಹುಷಾರ್..!

ಕರ್ನಾಟಕದ ವಾಸ್ತವ ಸ್ಥಿತಿ ಏನೆಂಬುದನ್ನು ತಿಳಿದೇ ಮೈತ್ರಿ ಮಾಡಿಕೊಂಡಿದ್ದೇವೆ. ಬಿಜೆಪಿ-ಜೆಡಿಎಸ್ ಬೆಂಬಲಕ್ಕೆ ನಿಂತಿರುವ ಪ್ರಬಲ ಎರಡು ಸಮುದಾಯಗಳು ಕೈ ಹಿಡಿದರೆ ಫಲಿತಾಂಶ ಏನು ಬೇಕಾದರೂ ಆಗಬಹುದು. ಕೆಳಹಂತದ ನಾಯಕರನ್ನು ಮನವೊಲಿಸಬೇಕು. ಮಾಧ್ಯಮಗಳ ಮುಂದೆ ಅತಿಯಾದ ಹೇಳಿಕೆ ಕೊಡಬೇಕಾದ ಅಗತ್ಯವಿಲ್ಲ ಎಂದು ರಾಷ್ಟ್ರೀಯ ನಾಯಕರು ಕಟ್ಟಪ್ಪಣೆ ವಿಸಿದ್ದಾರೆ.

ಪಾಕ್ – ಭಾರತ ಪಂದ್ಯಕ್ಕೆ ರಾಸಾಯನಿಕ ದಾಳಿ ಬೆದರಿಕೆ

ನವದೆಹಲಿ,ಅ.10- ಇದೇ 14 ರಂದು ಗುಜರಾತ್‍ನ ನರೇಂದ್ರ ಮೋದಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಕ್ಕೆ ಹಿಂದೆಂದೂ ಕಾಣದ ಅಭೂತಪೂರ್ವ ಭದ್ರತೆಯನ್ನು ಒದಗಿಸಲಾಗಿದೆ. ಪಂದ್ಯದ ಆರಂಭಕ್ಕೂ ಮುನ್ನವೇ ಬೆದರಿಕೆ ಕರೆಗಳು ಬಂದಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕ್ರೀಡಾಂಗಣ ಸುತ್ತಮುತ್ತ ಏಳು ಸುತ್ತಿನ ಸರ್ಪಗಾವಲಿನ ಭದ್ರತೆಯನ್ನು ಒದಗಿಸಲಾಗಿದೆ.

ಸುಮಾರು 11 ಸಾವಿರ ಎನ್‍ಎಸ್‍ಜಿ ಕ್ಷಿಪ್ರ ಕಾರ್ಯಾಪಡೆ, ಗೃಹರಕ್ಷಕ ದಳ, ಗುಜರಾತ್ ಪೊಲೀಸರು ಸೇರಿದಂತೆ ವಿವಿಧ ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿದೆ. ಕಳೆದ 20 ವರ್ಷಗಳಿಂದ ಅಹಮ್ಮದಾಬಾದ್ ನಗರದಲ್ಲಿ ಒಂದೇ ಒಂದು ಸಣ್ಣ ಕೋಮುಗಲಭೆ ಸಂಭವಿಸಿಲ್ಲ. ಅದೇ ರೀತಿ ಇದೇ 14 ರಂದು ನಡೆಯುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ನಾವು ಎಲ್ಲಾ ರೀತಿಯ ಭದ್ರತೆಯನ್ನು ಒದಗಿಸಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಜಿ.ಎಸ್.ಮಲ್ಲಿಕ್ ಹೇಳಿದ್ದಾರೆ.

ಪ್ರತಿ ಕ್ಷಣವೂ ಅಲರ್ಟ್ ಆಗಿರುತ್ತಿದ್ದ ಇಸ್ರೇಲ್ ಎಡವಿದ್ದೆಲ್ಲಿ..?, ಮೊಸಾದ್ ವಿಫಲವಾಗಿದ್ದೇಕೆ..?

ಪಂದ್ಯ ವೀಕ್ಷಿಸಲು ಅಂದಾಜು ಒಂದು ಲಕ್ಷ ಪ್ರೇಕ್ಷಕರು ಆಗಮಿಸುವ ಸಾಧ್ಯತೆ ಇದೆ. ನಮಗೆ ನಿಖರವಾಗಿ ಬೆದರಿಕೆ ಕರೆ ಬಂದಿದೆ. ಯಾವುದೇ ಕಾರಣಕ್ಕೂ ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು. ಪಂದ್ಯವನ್ನು ಯಶಸ್ವಿಯಾಗಿ ನಡೆಸಿಕೊಡಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಗುಜರಾತ್ ಪೊಲೀಸ್ ಮೀಸಲು ಪಡೆಯ 13 ಕಂಪನಿಗಳ ಜೊತೆಗೆ ಕ್ಷಿಪ್ರ ಕಾರ್ಯಾಪಡೆ ಕಾರ್ಯ ನಿರ್ವಹಿಸಲಿದೆ. ಬೆದರಿಕೆ ಕರೆಯಿಂದ ಕೆಲವು ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗುವ ಸಂಭವವಿದೆ. ಹೀಗಾಗಿ ನಾವು ಇದಕ್ಕಾಗಿಯೇ ವಿಶೇಷ ಕ್ಷಿಪ್ರ ಕಾರ್ಯಪಡೆಯನ್ನು ನಿಯೋಜನೆ ಮಾಡಿದ್ದೇವೆ. ಒಂದೇ ಒಂದು ಸಣ್ಣ ಅಹಿತಕರ ಘಟನೆ ನಡೆಯದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಸಿದ್ಧರಾಗಿದ್ದೇವೆ ಎಂದಿದ್ದಾರೆ.

ನಗರ ಇಲ್ಲವೇ ಕ್ರೀಡಾಂಗಣದ ಅಕ್ಕಪಕ್ಕ ಶಂಕಿತ ಉಗ್ರರು ರಾಸಾಯನಿಕ ವಿಕರಣಗಳನ್ನು ಚೆಲ್ಲಿ ಸ್ಪೋಟಿಸುವ ಬೆದರಿಕೆಯೊಡ್ಡಿದ್ದಾರೆ. ಇದಕ್ಕಾಗಿ ನಾವು ನುರಿತ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯ ತಂಡವನ್ನು ನಿಯೋಜನೆ ಮಾಡಿದ್ದೇವೆ. ಜೊತೆಗೆ ಬಾಂಬ್ ನಿಷ್ಕ್ರಿಯ ದಳ ನುರಿತ ಶ್ವಾನಗಳು ಸೇರಿದಂತೆ ಹಲವು ಶ್ರೇಣಿಯ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ.

ದೆಹಲಿಯಲ್ಲಿ ಗುಂಪು ಘರ್ಷಣೆಗೆ ಇಬ್ಬರು ಬಲಿ, ಮತ್ತೊಬ್ಬ ಗಂಭೀರ

ಗ್ಯಾಂಗ್‍ಸ್ಟಾರ್ ಲಾರೆನ್ಸ್ ಬಿಶ್ಣೋಯ್ ಅವರನ್ನು ಬಿಡುಗಡೆ ಮಾಡಬೇಕೆಂದು ವಿದೇಶದಿಂದ ಬೆದರಿಕೆ ಕರೆಯೊಂದು ಕೆಲದಿನಗಳ ಹಿಂದೆ ಬಂದಿತ್ತು. 500 ಕೋಟಿ ರೂ. ನಗದು ನೀಡುವಂತೆ ಬೇಡಿಕೆ ಇಡಲಾಗಿದೆ. ಈ ಹಿನ್ನೆಲೆಯಲ್ಲಿ ಪಂದ್ಯಕ್ಕೆ ಸಣ್ಣದೊಂದು ಅಹಿತಕರ ಘಟನೆ ಉಂಟಾಗದಂತೆ ಗುಜರಾತ್ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ.

ಪಾಕ್ ಪಂದ್ಯಕ್ಕೂ ಗಿಲ್ ಅಲಭ್ಯ !

ನವದೆಹಲಿ,ಅ.10- ತೀವ್ರ ಜ್ವರದಿಂದ ಬಳಲುತ್ತಿರುವ ಭಾರತದ ಯಶಸ್ವಿ ಆರಂಭಿಕ ಆಟಗಾರ ಶುಭ್‍ಮನ್‍ಗಿಲ್ ಬಹುನಿರೀಕ್ಷಿತ ಪಾಕಿಸ್ತಾನ ವಿರುದ್ಧದ ಕ್ರಿಕೆಟ್ ಪಂದ್ಯಕ್ಕೂ ಲಭ್ಯವಾಗುವ ಸಾಧ್ಯತೆಗಳು ಕ್ಷೀಣಿಸಿದೆ.

ಪ್ರಸ್ತುತ ಚೆನ್ನೈನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಿಲ್‍ಗೆ ವೈಟ್‍ಪ್ಲೇಟ್ಸ್(ಬಿಳಿರಕ್ತ ಕಣಗಳು) ಸಂಖ್ಯೆ ಕಡಿಮೆಯಾಗಿದ್ದು, ಇನ್ನೂ ಕೆಲವು ದಿನ ಅವರು ವಿಶ್ರಾಂತಿ ಪಡೆಯಬೇಕಿದ್ದು, ವೈದ್ಯರು ಸೂಚಿಸಿರುವುದಾಗಿ ಬಿಸಿಸಿಐ ಮೂಲಗಳು ತಿಳಿಸಿವೆ.

24 ವರ್ಷದ ಗಿಲ್ ನಾಳೆ ಆಫ್ಘಾನಿಸ್ತಾನದ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಸೇರ್ಪಡೆಯಾಗಲು ಉತ್ಸುಕತೆ ತೋರಿದ್ದರು. ಆದರೆ ಡೆಂಗ್ಯೂವಿನಿಂದ ಅವರ ಬಿಳಿರಕ್ತ ಕಣಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಇಂತಹ ಸಂದರ್ಭದಲ್ಲಿ ಪಂದ್ಯವಾಡುವುದು ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ ಎಂದು ವೈದ್ಯರು ಸಲಹೆ ಮಾಡಿದ್ದಾರೆ.

ಎಎಪಿ ಶಾಸಕ ಅಮಾನತುಲ್ಲಾ ಖಾನ್ ನಿವಾಸದ ಮೇಲೆ ಇಡಿ ದಾಳಿ

ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಟ್ಟಿರುವ ಗಿಲ್ ಅಹಮದಾಬಾದ್‍ನಲ್ಲಿ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಲಭ್ಯರಾಗುವ ಸಾಧ್ಯತೆಯನ್ನು ವೈದ್ಯರು ಖಚಿತವಾಗಿ ಹೇಳಿಲ್ಲ. ಚೆನ್ನೈನ ಕಾವೇರಿ ಆಸ್ಪತ್ರೆಯ ತಜ್ಞ ಡಾ.ರಿಜ್ವಾನ್‍ಖಾನ್ ಅವರು ಚಿಕಿತ್ಸೆ ನೀಡುತ್ತಿದ್ದು, ಬಿಳಿರಕ್ತ ಕಣಗಳು ಎಷ್ಟು ಪ್ರಮಾಣದಲ್ಲಿ ಏರಿಕೆಯಾಗುತ್ತದೆ ಎಂಬುದರ ಮೇಲೆ ಅವರು ಪಂದ್ಯಕ್ಕೆ ಮರಳುವ ಬಗ್ಗೆ ಹೇಳಬಹುದು. ಆದರೆ ಸದ್ಯಕ್ಕೆ ಬುಧವಾರದವರೆಗೂ ಪಂದ್ಯವಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಒಂದು ವೇಳೆ ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೂ ಗಿಲ್ ಗೈರಾದರೆ ಇಶಾಂತ್ ಕಿಶಾನ್ ಬದಲಿಗೆ ರೋಹಿತ್ ಶರ್ಮ ಜೊತೆ ಬೇರೊಬ್ಬ ಆಟಗಾರನನ್ನು ಕಣಕ್ಕಿಳಿಸಲು ಬಿಸಿಸಿಐ ತೀರ್ಮಾನಿಸಿದೆ.

ಪುರಾತನ ದೇವರ ವಿಗ್ರಹ ಕದ್ದಿದ್ದ ಕಳ್ಳನ ಬಂಧನ

ಮೇದಿನಿನಗರ,ಅ.10-ಜಾರ್ಖಂಡ್‍ನ ಪಲಮು ಜಿಲ್ಲೆಯ 150 ವರ್ಷಗಳಷ್ಟು ಹಳೆಯದಾದ ದೇವಾಲಯದಿಂದ ಕಳವು ಮಾಡಲಾದ ಅಮೂಲ್ಯ ವಿಗ್ರಹವನ್ನು ಗರ್ವಾ ಜಿಲ್ಲೆಯಿಂದ ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದ ಪ್ರಮುಖ ಆರೋಪಿಯನ್ನು ದೆಹಲಿಯಲ್ಲಿ ಬಂಧಿಸಲಾಗಿದೆ.

ಮೇದಿನಿನಗರದ ಕೋಯೆಲ್ ನದಿಯ ದಡದಲ್ಲಿರುವ ಪ್ರಸಿದ್ಧ ದೇವಾಲಯದಿಂದ ಅಷ್ಟಧಾತುವಿನಿಂದ ಮಾಡಿದ ಲಡ್ಡು ಗೋಪಾಲನ ವಿಗ್ರಹ ಮತ್ತು ವಿಷ್ಣು ಮತ್ತು ಲಕ್ಷ್ಮಿ ದೇವಿಯ ಬೆಳ್ಳಿಯ ಕಿರೀಟಗಳನ್ನು ಸೆಪ್ಟೆಂಬರ್ 11 ರ ರಾತ್ರಿ ಕಳವು ಮಾಡಲಾಗಿತ್ತು.

ದೇಗುಲದ ಅರ್ಚಕ ಸುನೀಲ್ ಕುಮಾರ್ ಚೌಬೆ ಅವರ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡು ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‍ಐಟಿ) ರಚಿಸಲಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ರೀಷ್ಮಾ ರಮೇಶ ತಿಳಿಸಿದ್ದಾರೆ.

ದೆಹಲಿಯಲ್ಲಿ ಗುಂಪು ಘರ್ಷಣೆಗೆ ಇಬ್ಬರು ಬಲಿ, ಮತ್ತೊಬ್ಬ ಗಂಭೀರ

ಕಳ್ಳತನದ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳ ಆಧಾರದ ಮೇಲೆ ಆರೋಪಿ ದಿಲ್ಕಾಶ್ ರೋಷನ್ (30) ನನ್ನು ದೆಹಲಿಯ ಗೋವಿಂದಪುರಿ ಪ್ರದೇಶದಲ್ಲಿ ಬಂಧಿಸಲಾಗಿದೆ.

ರೋಷನ್ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಗರ್ವಾದಲ್ಲಿರುವ ದಂತ ವೈದ್ಯಕೀಯ ಕಾಲೇಜಿನ ಮುಖ್ಯ ಗೇಟ್‍ನ ಪಕ್ಕದಲ್ಲಿ ಹೂತಿಟ್ಟಿದ್ದ ವಿಗ್ರಹವನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು. ಕದ್ದ ಕಿರೀಟಗಳನ್ನು ವಶಪಡಿಸಿಕೊಂಡು ಪ್ರಕರಣಕ್ಕೆ ಸಂಬಂಧಿಸಿದಂತೆ ಹದಿನೈದು ದಿನಗಳ ಹಿಂದೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಸುರ್ಜೀತ್ ಕುಮಾರ್ ತಿಳಿಸಿದ್ದಾರೆ.

ಬಂಧಿತ ಇಬ್ಬರಲ್ಲಿ ರೋಷನ್‍ನ ಸಹಚರ ಎಂಡಿ ಸೊಹೈಲ್ ಮತ್ತು ಬಿಹಾರದ ಸಸಾರಾಮ್‍ನಲ್ಲಿ ಆಭರಣ ವ್ಯಾಪಾರಿ ಉಪೇಂದ್ರ ಕುಮಾರ್ ಸೇಠ್ ಸೇರಿದ್ದಾರೆ. ಸೊಹೈಲ್ ಮತ್ತು ರೋಷನ್ ಕಿರೀಟಗಳನ್ನು ಆಭರಣ ವ್ಯಾಪಾರಿಗೆ ಮಾರಾಟ ಮಾಡಿದ್ದರು.

ಹ್ಯಾಟ್ರಿಕ್ ಗೆಲುವಿನೊಂದಿಗೆ ಮತ್ತೆ ಕೆಸಿಆರ್ ಅಧಿಕಾರಕ್ಕೆ : ಕೆಟಿಆರ್ ವಿಶ್ವಾಸ

ಹೈದರಾಬಾದ್,ಅ.10- ನವೆಂಬರ್ 30 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧಿಸಲಿದೆ ಎಂದು ಆಡಳಿತಾರೂಢ ಬಿಆರ್‍ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚುನಾವಣೆಗಳು ನಡೆಯಲಿವೆ. ನವೆಂಬರ್ 30 ರಂದು ಚುನಾವಣೆ ಇದೆ. ಡಿಸೆಂಬರ್ 03 ರಂದು ಮತ ಎಣಿಕೆ ಇದೆ. ಈ ಬಾರಿ ಅಂಕಿಅಂಶಗಳು ನಮ್ಮ ಪರವಾಗಿವೆ ಎಂದು ತೋರುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಹ್ಯಾಟ್ರಿಕ್ ಬಾರಿಸುವ ಮೂಲಕ ನಮ್ಮ ತಂದೆ ಕೆಸಿಆರ್ ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ದೆಹಲಿಯಲ್ಲಿ ಗುಂಪು ಘರ್ಷಣೆಗೆ ಇಬ್ಬರು ಬಲಿ, ಮತ್ತೊಬ್ಬ ಗಂಭೀರ

3+3 ಆರು. ನಮ್ಮ ಅದೃಷ್ಟ ಸಂಖ್ಯೆ ಕೂಡ ಆರು. ಕೆಸಿಆರ್ ಸರ್ ಸಿಎಂ ಆಗುವುದು ಖಚಿತ ಮತ್ತು ದಿನಾಂಕಗಳು ಸಹ ಅನುಕೂಲಕರವಾಗಿವೆ ಎಂದು ಅವರು ಪರ್ಕಳದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಹೇಳಿದರು. ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ, ಕೆಟಿಆರ್ ಎಂದು ಕರೆಯಲ್ಪಡುವ ರಾಮರಾವ್ ಅವರು, ಜನರು ಎರಡು ಬಾರಿ ಆಶೀರ್ವಾದ ಮಾಡಿದ್ದಾರೆ ಮತ್ತು ಮೂರನೇ ಬಾರಿಗೆ ಗೆಲುವು ನೀಡಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.

ಯುದ್ಧವನ್ನು ನಾವು ಆರಂಭಿಸಿಲ್ಲ, ಆದರೆ ನಾವೇ ಕೊನೆಗೊಳಿಸುತ್ತೇವೆ ; ನೆತನ್ಯಾಹು ಘರ್ಜನೆ

ಡಿಸೆಂಬರ್ 3 ರಂದು ಪ್ರಕಟವಾಗಲಿರುವ ಫಲಿತಾಂಶದಲ್ಲಿ ಕೆಸಿಆರ್ ಅವರಿಗೆ ಇದು ಮೂರನೇ ಬಾರಿಯ ಗೆಲುವು. ಇದು ದಕ್ಷಿಣ ಭಾರತದಲ್ಲಿ ಹೊಸ ಅಧ್ಯಾಯವಾಗಿದ್ದು, ಒಬ್ಬ ಸಮರ್ಥ ನಾಯಕನಿಗೆ ಪಟ್ಟಾಭಿಷೇಕವಾಗಲಿದೆ ಎಂದು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರ ಕೆಟಿಆರ್ ಹೇಳಿದ್ದಾರೆ.

ಉದ್ಯಮಿಗೆ 5.39 ಕೋಟಿ ಪಂಗನಾಮ : ಹೆಚ್ಚು ಲಾಭಕ್ಕಾಗಿ ಹೂಡಿಕೆ ಮಾಡುವ ಮುನ್ನ ಹುಷಾರ್..!

ನಾಗ್ಪುರ,ಅ.10- ವಿದೇಶಗಳಲ್ಲಿ ಹೂಡಿಕೆ ಮೇಲೆ ಹೆಚ್ಚಿನ ಆದಾಯ ಕೊಡಿಸುವುದಾಗಿ ಹೇಳಿ ನಾಗ್ಪುರ ಮೂಲದ ಉದ್ಯಮಿಯೊಬ್ಬರಿಗೆ 18 ಜನರ ತಂಡ 5.39 ಕೋಟಿ ರೂ.ವಂಚಿಸಿದ್ದಾರೆ. ಕಲ್ಲಿದ್ದಲು ವ್ಯಾಪಾರಿ ಅಂಕುರಕುಮಾರ್ ಅಗರವಾಲ್ ಅವರು ಧಂತೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಅದರ ಆಧಾರದ ಮೇಲೆ ತನಿಖೆ ಆರಂಭವಾಗಿದೆ ಎಂದು ಆರ್ಥಿಕ ಅಪರಾಧ ವಿಭಾಗದ ಅಧಿಕಾರಿ ತಿಳಿಸಿದ್ದಾರೆ.

ಮಂದರ್ ಕೋಲ್ಟೆ ಎಂದು ಗುರುತಿಸಲಾದ ವ್ಯಕ್ತಿಯೊಬ್ಬರು ಅವರ ಸಂಪರ್ಕಕ್ಕೆ ಬಂದರು ಮತ್ತು ವಿದೇಶಗಳಲ್ಲಿ ಹೂಡಿಕೆ ಮಾಡುವ ಯೋಜನೆಗೆ ಆಮಿಷ ಒಡ್ಡಿದರು. ಕೋಲ್ಟೆಗೆ 17 ಜನರು ಸಹಾಯ ಮಾಡಿದರು, ಅವರಲ್ಲಿ ಹೆಚ್ಚಿನವರು ಮುಂಬೈನಿಂದ ಬಂದವರು ಅವರನ್ನು ಅಗರವಾಲ್ ಅನ್ನು ವಿವಿಧ ಪಂಚತಾರಾ ಹೋಟೆಲ್‍ಗಳಿಗೆ ಕರೆದೊಯ್ದರು.

ಸಂತ್ರಸ್ತರು ಹೂಡಿಕೆ ಯೋಜನೆಯ ಪ್ರಕಾರ ಆರೋಪಿಯ ವಿವಿಧ ಬ್ಯಾಂಕ್ ಖಾತೆಗಳಿಗೆ 5.39 ಕೋಟಿಯನ್ನು ವರ್ಗಾಯಿಸಿದ್ದಾರೆ ಆದರೆ ಶೀಘ್ರದಲ್ಲೇ ಅವರು ಮೋಸ ಹೋಗಿದ್ದಾರೆಂದು ಅರಿತುಕೊಂಡರು. ಆರೋಪಿಗಳು ಅವರಿಗೆ ನೀಡಿದ ಡಿಮ್ಯಾಂಡ್ ಡ್ರಾಫ್ಟ್ ಕೂಡ ನಕಲಿಯಾಗಿದೆ ಎಂದು ತಿಳಿದುಬಂದಿದೆ.

ದೆಹಲಿಯಲ್ಲಿ ಗುಂಪು ಘರ್ಷಣೆಗೆ ಇಬ್ಬರು ಬಲಿ, ಮತ್ತೊಬ್ಬ ಗಂಭೀರ

ವಂಚನೆ, ಸೋಗು ಹಾಕುವಿಕೆ, ಕ್ರಿಮಿನಲ್ ನಂಬಿಕೆ ಉಲ್ಲಂಘನೆ ಮತ್ತು ಇತರ ಅಪರಾಧಗಳಿಗಾಗಿ 18 ಜನರ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು. ಪ್ರಕರಣದಲ್ಲಿ ಯಾರನ್ನೂ ಬಂ„ಸಲಾಗಿಲ್ಲ ಮತ್ತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರತಿ ಕ್ಷಣವೂ ಅಲರ್ಟ್ ಆಗಿರುತ್ತಿದ್ದ ಇಸ್ರೇಲ್ ಎಡವಿದ್ದೆಲ್ಲಿ..?, ಮೊಸಾದ್ ವಿಫಲವಾಗಿದ್ದೇಕೆ..?

ಟೆಲ್ ಅವಿವ್, ಅ. 10- ಗಾಜಾದಲ್ಲಿ ಇಸ್ರೇಲ್‍ನ ಹದ್ದಿನ ಕಣ್ಣುಗಳು ಎಂದಿಗೂ ಮೀರಲ್ಲ ,ಕಣ್ಗಾವಲು ಡ್ರೋನ್‍ಗಳು ಆಕಾಶದಲ್ಲಿ ನಿರಂತರವಾಗಿ ಸದ್ದು ಮಾಡುತ್ತವೆ. ಅತ್ಯಂತ ಭದ್ರತೆಯಿರುವ ಗಡಿಯಲ್ಲಿ ಭದ್ರತಾ ಕ್ಯಾಮೆರಾಗಳು ಮತ್ತು ಕಾವಲು ಸೈನಿಕರಿದ್ದಾರೆ. ಗುಪ್ತಚರ ಏಜೆನ್ಸಿಗಳು ಮಾಹಿತಿಯ ಗುಂಪು ಮತ್ತು ವಿಶ್ವದ ಆಧುನಿಕ ಸೈಬರ್ ಸಾಮಥ್ರ್ಯವಿದ್ದರೂ ಅಡೆತಡೆಗಳನ್ನು ಮುರಿದು ನೂರಾರು ಉಗ್ರಗಾಮಿಗಳು ನುಗ್ಗಿ ನೂರಾರು ಜನರನ್ನು ಕೊಂದಿದ್ದು ಹೇಗೆ..? ತಪ್ಪು ಎಲ್ಲಾಯಿತು ಎಂಬ ಪ್ರಶ್ನೆ ಕಾಡಿದೆ.

ಇಸ್ರೇಲಿ ಗಡಿ ಅಡೆತಡೆಗಳನ್ನು ಮುರಿದು ನೂರಾರು ಉಗ್ರಗಾಮಿಗಳನ್ನು ಹಲವರು ಜನರನ್ನು ಕೊಂದಿದ್ದಾರೆ. ಇಸ್ರೇಲ್‍ನ ಗುಪ್ತಚರ ಏಜೆನ್ಸಿಗಳು ಹಲವಾರು ಸಾಧನೆಗಳನ್ನು ವಿಫಲಗೊಳಿಸಿ ದಾಳಿ ನಡೆಸಿರುವುದು ಅಚ್ಚರಿ ಮೂಡಿಸಿದೆ. ದುಬೈನಲ್ಲಿ ಹಮಾಸ್ ಕಾರ್ಯಕರ್ತರನ್ನು ಕೊಂದು ಮತ್ತು ಇರಾನ್‍ನ ಹೃದಯಭಾಗದಲ್ಲಿ ಇರಾನ್ ಪರಮಾಣು ವಿಜ್ಞಾನಿಗಳನ್ನು ಕೊಂದಿದೆ ಎಂಬ ಆರೋಪ ಇಸ್ರೇಲ್ ಮೊಸಾದ್ ಗುಪ್ತಚರ ಸಂಸ್ಥೆ ಮೇಲಿದೆ. ಇದಕ್ಕೆ ಪ್ರತೀಕಾರವಾಗಿ ದಾಳಿ ನಡೆಸಿದೆಯೇ?

ಯಾವುದೇ ಕಾರಣಕ್ಕೂ ತಂಬಾಕು ಉತ್ಪನ್ನಗಳ ಜಾಹಿರಾತು ಮಾಡಲ್ಲ : ಅಕ್ಷಯ್ ಕುಮಾರ್

ಪ್ರಸ್ತುತ ಆಕ್ರಮಣದಲ್ಲಿ ಇಸ್ರೇಲ್‍ನ ಕಾವಲುಗಾರನನ್ನು ಹಿಡಿದಿಟ್ಟುಕೊಂಡಿತು. 24 ಗಂಟೆಗಳ ನಂತರ, ಹಮಾಸ್ ಉಗ್ರಗಾಮಿಗಳು ಇಸ್ರೇಲಿ ಪಡೆಗಳೊಂದಿಗೆ ಯುದ್ಧವನ್ನು ಮುಂದುವರೆದಿದೆ. ಇದು ದೊಡ್ಡ ಭದ್ರತಾ ವೈಫಲ್ಯವಾಗಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಯಾಕೋವ್ ಅಮಿಡ್ರೋರ್ ಹೇಳಿದ್ದಾರೆ.

ಈ ಕಾರ್ಯಾಚರಣೆಯು ವಾಸ್ತವವಾಗಿ ಗಾಜಾದಲ್ಲಿ (ಗುಪ್ತಚರ) ಸಾಮಥ್ರ್ಯಗಳು ಉತ್ತಮವಾಗಿಲ್ಲ ಎಂದು ಸಾಬೀತುಪಡಿಸುತ್ತದೆ ಎಂದಿದ್ದಾರೆ. ಮುಖ್ಯ ಸೇನಾ ವಕ್ತಾರರಾದ ರಿಯರ್ ಅಡ್ಮಿ ಡೇನಿಯಲ್ ಹಗರಿ ಹೇಳಿದ್ದಾರೆ. ಸೇನೆಯು ಸಾರ್ವಜನಿಕರಿಗೆ ವಿವರಣೆ ನೀಡಬೇಕಿದೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಈಗ ಅದಕ್ಕೆ ಸಮಯವಿಲ್ಲ, ಮೊದಲು ಹೋರಾಟ ಮಾಡಿ ನಂತರ ತನಿಖೆ ನಡೆಸುತ್ತೇವೆ ಎಂದಿದ್ದಾರೆ.

ಕಳೆದ 15 ವರ್ಷದಲ್ಲಿ ಗಾಜಾ ಪಟ್ಟಿಯಲ್ಲಿ ಹಲವಾರು ಬಾರಿ ದಾಳಿ ನಡೆದಿದೆ. ಹಲವರು ಹತರಾಗಿದ್ದಾರೆ. ಆದರೆ, ದೇಶದ ಒಂದಿಂಚೂ ಜಾಗವನ್ನೂ ಬಿಟ್ಟುಕೊಡದೆ ಯಶಸ್ವಿಯಾಗಿ ಹಮಾಸ್ ಉಗ್ರರನ್ನು ಹಿಮ್ಮೆಟ್ಟಿಸಲಾಗಿದೆ. ಆದರೆ, ಈಗ ಅವರು ಯಾವುದೇ ಅಂಜಿಕೆ ಇಲ್ಲದೆ ಪ್ಯಾರಾಚೂಟ್‍ಗಳು ಹಾಗೂ ವಿವಿಧ ಕಾರು ಹಾಗೂ ಹಡಗುಗಳಲ್ಲಿ ದಕ್ಷಿಣ ಭಾಗದ ಇಸ್ರೇಲ್ ಮೇಲೆ ದಾಳಿ ನಡೆಸಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಅಮಿಡ್ರೋರ್ ಹೇಳಿದ್ದಾರೆ.

ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ ಇಬ್ಬರು ಎಲ್‍ಇಟಿ ಉಗ್ರರು ಹತ್ಯೆ

ಇದನ್ನು ನಂಬಲು ಕೂಡ ಸಾಧ್ಯವಾಗುತ್ತಿಲ್ಲ. ಇದರ ಹಿಂದೆ ಏನಾದರೂ ರಾಜಕೀಯ ದುರುದ್ದೇಶವಿದೆಯೇ ಎಂಬುದು ಕೂಡ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ.

ಮಧ್ಯಪ್ರದೇಶ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ

ಭೋಪಾಲï, ಅ. 10 (ಪಿಟಿಐ) – ಮುಂದಿನ ತಿಂಗಳು 17 ರಂದು ನಡೆಯಲಿರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ನಡೆಸಿದೆ. ಕೇಸರಿ ಪಕ್ಷವು ರಾಜ್ಯದ ಒಟ್ಟು 230 ವಿಧಾನಸಭಾ ಸ್ಥಾನಗಳ ಪೈಕಿ ಈಗಾಗಲೇ 136 ಸ್ಥಾನಗಳಿಗೆ ನಾಲ್ಕು ಪ್ರತ್ಯೇಕ ಪಟ್ಟಿಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದೆ, ಆದರೆ ಕಾಂಗ್ರೆಸ್ ಇನ್ನೂ ತನ್ನ ಮೊದಲ ನಾಮನಿರ್ದೇಶಿತ ಪಟ್ಟಿಯನ್ನು ಹೊರತಂದಿಲ್ಲ.

ಚುನಾವಣಾ ಆಯೋಗವು ಮಧ್ಯಪ್ರದೇಶ ಮತ್ತು ಇತರ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕಗಳನ್ನು ಸೋಮವಾರ ಪ್ರಕಟಿಸಿದೆ. ಮಧ್ಯಪ್ರದೇಶದಲ್ಲಿ ನವೆಂಬರ್ 17 ರಂದು ಒಂದೇ ಹಂತದ ಮತದಾನ ನಡೆಯಲಿದ್ದು, ಇತರೆ ರಾಜ್ಯಗಳೊಂದಿಗೆ ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.

ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ಸುಮಾರು ಎರಡು ತಿಂಗಳ ಮೊದಲು ಆಗಸ್ಟ್ 17 ರಂದು ಬಿಜೆಪಿ ತನ್ನ 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದಾಗ ರೀತಿಯ ಇತಿಹಾಸವನ್ನು ಸೃಷ್ಟಿಸಿತು. ಕಳೆದ ಏಳು ತಿಂಗಳಲ್ಲಿ, ಬಿಜೆಪಿಯ ಪ್ರಮುಖ ಚುನಾವಣಾ ಪ್ರಚಾರಕರಾದ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಸಭೆಗಳು ಮತ್ತು ಕಾರ್ಯಕ್ರಮಗಳನ್ನು ಉದ್ದೇಶಿಸಿ ಮಾತನಾಡಲು ಹೆಚ್ಚಾಗಿ ಒಂಬತ್ತು ಬಾರಿ ಸಂಸದರನ್ನು ಭೇಟಿ ಮಾಡಿದ್ದಾರೆ.

ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ ಇಬ್ಬರು ಎಲ್‍ಇಟಿ ಉಗ್ರರು ಹತ್ಯೆ

ಬಿಜೆಪಿಯ ಮುಖ್ಯ ಚುನಾವಣಾ ತಂತ್ರಜ್ಞ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಏಳು ತಿಂಗಳಲ್ಲಿ ಐದು ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಸ್ಟಾರ್ ಪ್ರಚಾರಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಜಬಲ್ಪುರದಿಂದ ತಮ್ಮ ಪಕ್ಷದ ಪ್ರಚಾರವನ್ನು ಪ್ರಾರಂಭಿಸಿದಾಗ ಜೂನ್ 12 ರಿಂದ ಮೂರು ಬಾರಿ ಸಂಸದರಿಗೆ ಭೇಟಿ ನೀಡಿದ್ದಾರೆ ಮತ್ತು ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಆಕೆಯ ಸಹೋದರ ಮತ್ತು ಕಾಂಗ್ರೆಸ್ ನಾಯಕ, ವಿರೋಧ ಪಕ್ಷದ ಮತ್ತೊಬ್ಬ ಸ್ಟಾರ್ ಪ್ರಚಾರಕ ರಾಹುಲ್ ಗಾಂಧಿ ಇದುವರೆಗೆ ಕೇವಲ ಒಂದು ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಮಧ್ಯಪ್ರದೇಶದ ಜನರನ್ನು ತಲುಪುವಲ್ಲಿಯೂ ಬಿಜೆಪಿ ಮುನ್ನಡೆ ಸಾಧಿಸಿದೆ. 223 ಅಸೆಂಬ್ಲಿ ಸ್ಥಾನಗಳನ್ನು ಒಳಗೊಂಡಿರುವ ಅದರ ಜನ ಆಶೀರ್ವಾದ ಯಾತ್ರೆ ಸೆಪ್ಟೆಂಬರ್ 3 ರಂದು ಪ್ರಾರಂಭವಾಯಿತು ಮತ್ತು ಸೆಪ್ಟೆಂಬರ್ 25 ರಂದು ರಾಜ್ಯ ರಾಜಧಾನಿ ಭೋಪಾಲ್‍ನಲ್ಲಿ ಪ್ರಧಾನಿ ಮೋದಿಯವರ ಭಾಷಣದೊಂದಿಗೆ ಕೊನೆಗೊಂಡಿತು.

ಯುದ್ಧವನ್ನು ನಾವು ಆರಂಭಿಸಿಲ್ಲ, ಆದರೆ ನಾವೇ ಕೊನೆಗೊಳಿಸುತ್ತೇವೆ ; ನೆತನ್ಯಾಹು ಘರ್ಜನೆ

ಎಲ್ಲಾ 230 ಸ್ಥಾನಗಳಲ್ಲಿ ಸಂಚರಿಸಿದ ಕಾಂಗ್ರೆಸ್‍ನ ಜನ ಆಕ್ರೋಷ್ ಯಾತ್ರೆ ಸೆಪ್ಟೆಂಬರ್ 19 ರಂದು ಪ್ರಾರಂಭವಾಯಿತು ಮತ್ತು ಅಕ್ಟೋಬರ್ 5 ರಂದು ಪ್ರಿಯಾಂಕಾ ಗಾಂಧಿ ಅವರು ಧಾರ್ ಜಿಲ್ಲಾಯಲ್ಲಿ ರ್ಯಾಲಿಯೊಂದಿಗೆ ಮುಕ್ತಾಯಗೊಂಡಿತು.