Home Blog Page 1907

ಇಸ್ರೇಲ್‍ ಸೈನಿಕರ ನೆರವಿಗೆ ಯುದ್ಧ ನೌಕೆ ಕಳಿಸಿದ ಅಮೆರಿಕ

ಇಸ್ರೇಲ್,ಅ.9-ಉಗ್ರಗಾಮಿ ಸಂಘಟನೆ ಹಮಾಸ್ ಬಗ್ಗುಬಡಿಯಲು ಇಸ್ರೇಲ್‍ಗೆ ನೆರವಾಗಲು ಅಮೆರಿಕ ಯುದ್ಧ ನೌಕೆಯನ್ನು ಕಳುಹಿಸಿದೆ, ಇಸ್ರೇಲ್ ಸೈನಿಕರಿಗೆ ಸಹಾಯವಾಗುವಂತೆ ಯುದ್ಧ ನೌಕೆಯನ್ನು ಕಳುಹಿಸಿದ್ದು ಕಾರ್ಯಾಚರಣೆ ಆರಂಭಿಸಿದೆ. ಇದಲ್ಲದೆ ಯುದ್ಧ ವಿಮಾನವನ್ನು ಕೂಡ ಕಳುಹಿಸಲು ಸನ್ನದ್ದವಾಗಿದೆ.

ಇಸ್ರೇಲ್‍ಗೆ ಎಲ್ಲಾ ರೀತಿ ಸಹಾಯ ಮಾಡಲು ಬಹಿರಂಗವಾಗಿ ಅಮೆರಿಕ ಘೋಷಿಸಿದ್ದು ಮೂಲಗಳ ಪ್ರಕಾರ ಅಧ್ಯಕ್ಷ ಜೋ ಬಿಡನ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ತರುವಾಯ ,ಮೆಡಿಟರೇನಿಯನ್ ಸಮುದ್ರಕ್ಕೆ ಯುದ್ಧ ಹಡಗುಗಳನ್ನು ಕಳುಹಿಸಿದೆ.

ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿಯಲ್ಲಿ ನಾಲ್ವರು ಅಮೆರಿಕನ್ ಪ್ರಜೆಗಳೂ ಸಾವನ್ನಪ್ಪಿದ್ದಾರೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದಾರೆ ಯುದ್ದ ಬೀಕರತೆ ಬಡೆಯುತ್ತಿದ್ದು ಪ್ಯಾಲಿಸ್ತೇನ್ ಅಡು ತಾಣಗಳ ಮೇಲೆ ಇಸ್ರೇಲ್ ಸೇನೆ ಮಿಂಚಿನ ದಾಳಿ ನಡೆಸಿದೆ.

ವೈಯಕ್ತಿಕ ದಾಖಲೆ ಮರೆತು ದೇಶಕ್ಕಾಗಿ ಟ್ರೋಫಿ ಗೆಲ್ಲಿ : ಹರ್ಭಜನ್‍ ಸಿಂಗ್

ಗಾಜಾ ಪಟ್ಟಿಯ ಬಳಿ ದಾಳಿ ವೇಳೆ ಸುಮಾರು 1500 ಜನರು ಸಾವನ್ನಪ್ಪಿದ್ದಾರೆ ಉಗ್ರರ ದಾಳಿಯಲ್ಲಿ ಹಲವು ಸೈನಿಕರು ಮತ್ತು ಪೊಲೀಸರು ಸೇರಿದಂತೆ ಹೆಚ್ಚು ಜನ ಮೃತಪಟ್ಟಿದ್ದಾರೆ ಮತ್ತು 2,048ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಳಕಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗಾಜಾ ಗಡಿಯಲ್ಲಿ ಇಸ್ರೇಲ್ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಎಲ್ಲಾ ಭಯೋತ್ಪಾದಕರನ್ನು ತಟಸ್ಥಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸೇನಾ ಮೂಲಗಳನ್ನು ಉದ್ದೇಶಿಸಿ ಇಲ್ಲಿನ ಮಾಧ್ಯಮ ವರದಿ ಮಾಡಿದೆ.

ಸಂಗೀತ ಕಾರ್ಯಕ್ರಮದ ವೇಲೆ ಉಗ್ಗರ ದಾಳಿಯಲ್ಲಿ ಸುಮಾರು 260 ಜನರು ಬಲಿಯಾಗಿದ್ದು ಅವರ ಶವಗಳನ್ನು ತೆರವುಗೊಳಿಸಿ ಪ್ರದೇಶವನ್ನು ಸೇನೆ ಸುತ್ತುವರೆದಿದೆ

ಸಿಬಿಐ ದಾಳಿ ವೇಳೆ ಇನ್‌ಸ್ಪೆಕ್ಟರ್‌ ಪರಾರಿ

ಧಾರವಾಡ,ಅ.8- ನಗರದಲ್ಲಿ ನಡೆದ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಹಿಂದಿನ ತನಿಖಾಧಿಕಾರಿಯಾಗಿದ್ದ ಇನ್‌ಸ್ಪೆಕ್ಟರ್‌ ಚೆನ್ನಕೇಶವ ಟಿಂಗರಿಕರ್ ಮನೆ ಮೇಲೆ ಸಿಬಿಐ ಅಧಿಕಾರಿಗಳು ಇಂದು ಬೆಳಿಗ್ಗೆ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಮನೆಯಿಂದ ಚೆನ್ನಕೇಶವ ಪರಾರಿಯಾದ ಘಟನೆ ನಡೆದಿದೆ.

ಧಾರವಾಡದ ಮಲಪ್ರಭಾ ನಗರದಲ್ಲಿರುವ ಚೆನ್ನಕೇಶವ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸದ್ಯ ಚೆನ್ನಕೇಶವ ಅವರು ಬೆಳಗಾವಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 2016ರ ಜೂನ್ 15ರಂದು ಯೋಗೇಶ್ ಗೌಡ ಕೊಲೆ ನಡೆದಾಗ ಧಾರವಾಡ ಉಪನಗರ ಠಾಣೆ ಇನ್‌ಸ್ಪೆಕ್ಟರ್‌ ಆಗಿದ್ದ ಟಿಂಗರಿಕರ್ ವಿರುದ್ಧ ಸಾಕ್ಷಿ ನಾಶ ಹಾಗೂ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ.ಬಳಿಕ ಧಾರವಾಡ ಹೈಕೋರ್ಟ್‍ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದ ಟಿಂಗರಿಕರ್, ಎಫ್ಐಆರ್‌ಗೆ ತಡೆ ತರಲು ಯತ್ನಿಸಿದ್ದರು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-10-2023)

ತನ್ನ ವಿರುದ್ಧ ದಾಖಲಾದ ಎಫ್ಐಆರ್‌ಗೆ ತಡೆ ನೀಡುವಂತೆ ಕೋರಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ಕೋರ್ಟ್, ಕಳೆದ ವಾರ ಅರ್ಜಿ ವಜಾಗೊಳಿಸಿತ್ತು. ಅಲ್ಲದೆ , ಜನಪ್ರತಿನಿಧಿಗಳ ಕೋರ್ಟ್‍ನಲ್ಲಿ ನಡೆದ ವಿಚಾರಣೆ ವೇಳೆ ಟಿಂಗರಿಕರ್ ಅವರು ಗೈರಾಗಿದ್ದರು. ಹೀಗಾಗಿ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು.

ಕೋರ್ಟ್ ವಾರೆಂಟ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಚೆನ್ನಕೇಶವ ಟಿಂಗರಿಕರ್ ಅವರನ್ನು ಬಂಧಿಸಲು ಸಿಬಿಐ ಅಧಿಕಾರಿಗಳು ಟಿಂಗರಿಕರ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಟಿಂಕರಿಗರ್ ಮನೆಯಿಂದ ಪರಾರಿಯಾಗಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-10-2023)

ನಿತ್ಯ ನೀತಿ : ಎರಡು ಕೈಗಳಿಂದ ಒಂದೇ ಬಾರಿಗೆ ಐವತ್ತು ಜನರನ್ನು ಹೊಡೆಯಲಾಗದು. ಆದರೆ ಎರಡು ಕೈಗಳನ್ನು ಜೋಡಿಸಿ ನಮಿಸುವುದರಿಂದ ಕೋಟ್ಯಂತರ ಜನರ ಹೃದಯವನ್ನು ಗೆಲ್ಲಬಹುದು.

ಪಂಚಾಂಗ ಸೋಮವಾರ 09-10-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ: ದಶಮಿ / ನಕ್ಷತ್ರ: ಆಶ್ಲೇಷಾ / ಯೋಗ: ಸಿದ್ಧ / ಕರಣ: ಭವ

ಸೂರ್ಯೋದಯ : ಬೆ.06.09
ಸೂರ್ಯಾಸ್ತ : 06.05
ರಾಹುಕಾಲ : 7.30-9.00
ಯಮಗಂಡ ಕಾಲ : 10.30-12.00
ಗುಳಿಕ ಕಾಲ : 1.30-3.00

ರಾಶಿ ಭವಿಷ್ಯ
ಮೇಷ
: ಕೆಲಸ-ಕಾರ್ಯಗಳಲ್ಲಿ ಅಲ್ಪ ವಿಳಂಬವಾಗಲಿದೆ. ಅಲಂಕಾರಿಕ ವಸ್ತುಗಳನ್ನು ಖರೀದಿಸುವಿರಿ.
ವೃಷಭ: ಹತ್ತಿರದ ಸ್ನೇಹಿತರಿಂದಲೇ ನಿಮ್ಮ ಬಗ್ಗೆ ಕೆಟ್ಟ ಮಾತುಗಳು ಕೇಳಿಬರಲಿವೆ.
ಮಿಥುನ: ಅನಿರೀಕ್ಷಿತ ಖರ್ಚು ಹೆಚ್ಚಾಗಲಿದೆ. ಮಾನಸಿಕ ಒತ್ತಡ.

ಕಟಕ: ಮಾನಸಿಕ ಧೈರ್ಯ, ಸಾಮಥ್ರ್ಯ ಹೆಚ್ಚಿಸಿಕೊಳ್ಳಲು ಧ್ಯಾನ ಮಾಡುವುದು ಒಳಿತು.
ಸಿಂಹ: ಕಾರ್ಯಸಾಧನೆಗೆ ಅಕ್ಕಪಕ್ಕದವರ ಅಢ್ಡಗಾಉ ಅಥವಾ ಸಹೋದ್ಯೋಗಿಗಳ ನಿರ್ಧಾರಗಳಿಂದ ಸಮಸ್ಯೆಯಾಗಲಿದೆ.
ಕನ್ಯಾ: ಧಾರ್ಮಿಕ ಕಾರ್ಯಗಳಿಗೆ ಹಣ ವ್ಯಯ ಮಾಡುವಿರಿ. ಮಕ್ಕಳಿಂದ ಸಂತೋಷ ಸಿಗಲಿದೆ.

ತುಲಾ: ಉದ್ಯೋಗ ನಿಮಿತ್ತ ಪ್ರಯಾಣ ಮಾಡುವಿರಿ. ಆರೋಗ್ಯ ಸಮಸ್ಯೆಗೆ ವೈದ್ಯರನ್ನು ಭೇಟಿ ಮಾಡಿ.
ವೃಶ್ಚಿಕ:ಹಿಂಜರಿಕೆ ಮತ್ತು ಭಯದ ಸ್ವಭಾವ ಕಾರ್ಯಕ್ಷೇತ್ರದಲ್ಲಿ ಹಿನ್ನಡೆಗೆ ಕಾರಣವಾಗಲಿದೆ.
ಧನುಸ್ಸು: ರಿಯಲ್ ಎಸ್ಟೇಟ್ ವ್ಯಾಪಾರಿಗಳಿಗೆ ಲಾಭದಾಯಕವಾದ ದಿನ.

ಮಕರ: ಎಷ್ಟೇ ಹಣ ಬಂದರೂ ಸಾಕಾಗುವುದಿಲ್ಲ. ನೀವಾಡುವ ಮಾತಿನಲ್ಲಿ ಹಿಡಿತವಿರಲಿ.
ಕುಂಭ: ಕಚೇರಿಯಲ್ಲಿ ಮಹಿಳಾ ಉದ್ಯಮಿಗಳಿಗೆ ಒತ್ತಡ ಹೆಚ್ಚಾಗಲಿದೆ. ವಾಹನ ಚಾಲನೆಯಲ್ಲಿ ಜಾಗ್ರತೆ.
ಮೀನ: ವೃತ್ತಿ ಬದಲಾವಣೆ ಮಾಡುವ ಬಗ್ಗೆ ಪತ್ನಿಯೊಂದಿಗೆ ಮತ್ತು ಸ್ನೇಹಿತರೊಂದಿಗೆ ಚರ್ಚಿಸಿ ತೀರ್ಮಾನಿಸಿ.

BREAKING : ಈಜಿಪ್ಟ್‌ನಲ್ಲಿ 7 ಇಸ್ರೇಲಿ ಪ್ರವಾಸಿಗರ ಹತ್ಯೆ

ಕೈರೋ,ಅ.8-ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಹಮಾಸ್ ನಡುವಿನ ಯುದ್ಧ ಆರಂಭವಾದ ಬೆನ್ನಲ್ಲೇ ವಿವಿಧ ದೇಶಗಳಲ್ಲಿ ಇಸ್ರೇಲಿಗರ ಮೇಲೆ ದಾಳಿ ನಡೆಯುತ್ತಿರುವ ಕುರಿತು ವರದಿಗಳು ಬಂದಿವೆ. ಈ ನಡುವೆ ಈಜಿಪ್ಟ್ ನಲ್ಲಿ 7 ಇಸ್ರೇಲಿ ಪ್ರವಾಸಿಗರನ್ನು ಪೊಲೀಸರು ಹತ್ಯೆ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಅಲೆಕ್ಸಾಂಡ್ರಿಯಾಕ್ಕೆ ಭೇಟಿ ನೀಡಿದ ಇಸ್ರೇಲಿ ಪ್ರವಾಸಿಗರ ಗುಂಪಿನ ಮೇಲೆ ಪೊಲೀಸನೊಬ್ಬ ಬಂದೂಕಿನಿಂದ ಮನಬಂದಂತೆ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.

ಇಸ್ರೇಲ್ ವಿರುದ್ದ ದ್ವೇಷದಿಂದ ಈ ಕೃತ್ಯ ನಡೆದಿದೆ.ಈಜಿಪ್ಟ್ ಶಾಂತಿ ಒಪ್ಪಂದ ಮಾಡಿಕೊಂಡು ಇಸ್ರೇಲ್ ಜೊತೆ ಸ್ನೇಹ ಬೆಳೆಸಿತ್ತು ಆದರೆ ಇಸ್ರೇಲ್-ಪ್ಯಾಲೆಸ್ತೀನ್ ದಾಳಿಗಳಿಂದ ಇತರೆ ಮುಸ್ಲಿಂ ದೇಶಗಳಲ್ಲೂ ಇಸ್ರೇಲಿ ಯಹೂದಿಗಳ ಮೇಲೆ ದಾಳಿಗಳು ನಡೆಯುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.

ವೈಯಕ್ತಿಕ ದಾಖಲೆ ಮರೆತು ದೇಶಕ್ಕಾಗಿ ಟ್ರೋಫಿ ಗೆಲ್ಲಿ : ಹರ್ಭಜನ್‍ ಸಿಂಗ್

ಬೆಂಗಳೂರು, ಅ.8- ತವರು ಅಂಗಳದಲ್ಲಿ ನಡೆಯುತ್ತಿರುವ 2023ರ ಒಡಿಐ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಆಟಗಾರರು ವೈಯಕ್ತಿಕ ದಾಖಲೆಗಾಗಿ ಆಡದೆ ದೇಶಕ್ಕೆ ಟ್ರೋಫಿ ಗೆದ್ದುಕೊಡುವುದಾಗಿ ಒಗ್ಗಟ್ಟಿನಿಂದ ಆಡಿ ಎಂದು ಭಾರತದ ಟರ್ಬನೇಟರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.

2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಟೀಮ್ ಇಂಡಿಯಾ ಶ್ರೀಲಂಕಾವನ್ನು ಮಣಿಸಿ 2ನೇ ಬಾರಿ ವಿಶ್ವ ಟ್ರೋಫಿ ಗೆದ್ದ ನಂತರ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರನ್ನು ಹೆಗಲ ಮೇಲೆ ಹೊತ್ತು ಮುಂಬೈನ ವಾಂಖೆಡೆ ಕ್ರೀಡಾಂಗಣ ಸುತ್ತ ಹೊತ್ತು ತಿರುಗಿ ಗೌರವ ಸಲ್ಲಿಸಲಾಗಿತ್ತು. ಸಚಿನ್ ತಮ್ಮ 6ನೇ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.

ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಸಿಗ್ತಿಲ್ಲ ಉದ್ಯೋಗ

2011ರ ವಿಶ್ವಕಪ್ ಟೂರ್ನಿಯ ವೇಳೆ ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡೂಲ್ಕರ್‍ಗೆ ಸಿಕ್ಕಂತಹ ಗೌರವ ಇದುವರೆಗೂ ಯಾವ ಆಟಗಾರರಿಗೂ ಸಿಕ್ಕಿರಲಿಲ್ಲ. ವಿಶ್ವಕಪ್ ಮುಕುಟ ಗೆದ್ದು ಕೊಟ್ಟ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಗೌರವಕ್ಕೆ ಪಾತ್ರರಾಗಿದ್ದರು. ಆದ ನಂತರ ಇದೇ ಗೌರವವನ್ನು ಬೇರೆ ಆಟಗಾರರು ಪಡೆದಿದ್ದನ್ನು ನಾನು ನೋಡಿಲ್ಲ' ಎಂದು ಮಾಜಿ ಆಫ್ ಸ್ಪಿನ್ನರ್ ಹೇಳಿದ್ದಾರೆ. ನಾನು ದೇಶಕ್ಕಾಗಿ ಆಡಿದ್ದೆ , ವೈಯಕ್ತಿಕ ದಾಖಲೆಗಾಗಿ ಅಲ್ಲ: ನೀವು ಭಾರತ ದೇಶದ ಧ್ವಜಕ್ಕೆ ಗೌರವ ಸಲ್ಲಿಸುವ ದೃಷ್ಟಿಯಿಂದ ಆಡಬೇಕು.

ನಾನು ಯಾವಾಗಲೂ ಭಾರತಕ್ಕಾಗಿ ಆಡಿದ್ದೇನೆಯೇ ಹೊರತು ವೈಯಕ್ತಿಕ ದಾಖಲೆಗಳ ಬಗ್ಗೆ ಎಂದಿಗೂ ಚಿಂತಿಸಿರಲಿಲ್ಲ. ನಾನು ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಹಾಗೂ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಡಿ ಆಡಿದ್ದೇನೆ. ನನಗೆ ನಾಯಕರು ಯಾರು ಎಂಬುದು ಮುಖ್ಯ ಆಗಿರಲಿಲ್ಲ, ಬದಲಿಗೆ ನನ್ನ ಆಟದ ಬಗ್ಗೆ ಸಾಕಷ್ಟು ಗಮನ ಹರಿಸಿದ್ದೆ’ ಎಂದು ಖ್ಯಾತ ಕ್ರಿಕೆಟ್ ವಿಶ್ಲೇಷಕ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ನಗರಾಭಿವೃದ್ಧಿ ಸಚಿವ ನಿವಾಸದ ಮೇಲೆ ಸಿಬಿಐ ದಾಳಿ

ದೇಶಕ್ಕಾಗಿ ಟ್ರೋಫಿ ಗೆಲ್ಲಬೇಕು:
`ನಾನು ಬೇರೆ ವಿಚಾರಗಳ ಬಗ್ಗೆ ಚಿಂತಿಸದೆ, ದೇಶಕ್ಕಾಗಿ ಮಾತ್ರ ಆಡಿದ್ದೇನೆ. ತವರಿನ ಅಂಗಳದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನಾವು ಭಾರತದ ಗೆಲುವಿಗಾಗಿ ಆಡಬೇಕು, ಅದು ಬಿಟ್ಟು ವಿರಾಟ್ ಕೊಹ್ಲಿಗಾಗಿ ಆಗಲಿ, ರಾಹುಲ್ ದ್ರಾವಿಡ್‍ಗಾಗಿ ಗೆಲುವು ಸಾಸುವುದಲ್ಲ’ ಎಂದು ಹರ್ಭಜನ್‍ಸಿಂಗ್ ಹೇಳಿದ್ದಾರೆ.

ಪಟಾಕಿ ದುರಂತ : ನರಹತ್ಯೆ ಸೇರಿ ಗಂಭೀರ ಸೆಕ್ಷನ್‍ಗಳಡಿ ಕಾನೂನು ಕ್ರಮ

ಬೆಂಗಳೂರು, ಅ.8- ಅತ್ತಿಬೆಲೆ ಪಟಾಕಿ ದುರಂತದ ಪ್ರಕರಣದಲ್ಲಿ ಮೃತಪಟ್ಟ 12 ಮಂದಿಯ ಗುರುತನ್ನು ಪತ್ತೆ ಹಚ್ಚಲಾಗಿದ್ದು, ಶವವನ್ನು ಸಂಬಂಧಿತರಿಗೆ ಹಸ್ತಾಂತರಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ನರಹತ್ಯೆ ಸೇರಿದಂತೆ ಕಠಿಣ ಕಾನೂನುಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ತಿಳಿಸಿದ್ದಾರೆ.

ಅತ್ತಿಬೆಲೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟಾಕಿ ಮಾರಾಟದ ಮಳಿಗೆ ಮತ್ತು ಗೋಡನ್‍ಗಳಲ್ಲಿ ಅಗ್ನಿನಂದಕ ಸಲಕರಣೆಗಳನ್ನು ಇಟ್ಟಿರಲಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಹೇಳಿದ್ದಾರೆ.

ಗೋಡನ್‍ನ ಮಾಲಿಕರು, ಆತನ ಪುತ್ರ, ಮ್ಯಾನೇಜರ್ ಸೇರಿದಂತೆ ಐವರ ವಿರುದ್ಧ ಸ್ಪೋಟಕ ಕಾನೂನು, ಕೊಲೆಯಲ್ಲದ ನರಹತ್ಯೆ ಆರೋಪ ಸೇರಿದಂತೆ ಕಠಿಣ ಕಾನೂನುಗಳಡಿ ಪ್ರಕರಣ ದಾಖಲಿಸಲಾಗಿದೆ. ಘಟನೆ ಹೇಗೆ ನಡೆಯಿತು ಎಂಬುದರ ಬಗ್ಗೆ ಎಫ್‍ಎಸ್‍ಎಲ್, ಅಗ್ನಿಶಾಮಕ ಮತ್ತು ಸೀನಫ್ ಕ್ರೈಂ ತಜ್ಞರು ವರದಿ ನೀಡಲಿದ್ದಾರೆ. ಅದರ ನಂತರ ತನಿಖೆ ಮುಂದುವರೆಯಲಿದೆ ಎಂದು ಹೇಳಿದರು.

ಲೋಕಸಭೆ ಚುನಾವಣೆ : ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸದ್ಯದಲ್ಲೇ ಹೈಕಮಾಂಡ್‍ಗೆ ರವಾನೆ

ಈವರೆಗೂ 14 ಮೃತದೇಹಗಳು ಪತ್ತೆಯಾಗಿವೆ. ಅದರಲ್ಲಿ 12 ಮಂದಿಯ ಪಾರ್ಥೀವ ಶರೀರಗಳನ್ನು ಗುರುತಿಸಲಾಗಿದೆ. ಸಂಬಂಕರ ಮಾಹಿತಿ ಆಧರಿಸಿ ಶವಗಳನ್ನು ಹಸ್ತಾಂತರಿಸಲಾಗುತ್ತಿದೆ ಎಂದು ಹೇಳಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಪಟಾಕಿ ದಾಸ್ತಾನು ಮತ್ತು ಮಾರಾಟ ಮಳಿಗೆಗಳಲ್ಲಿ ಏನೆಲ್ಲಾ ಇರಬೇಕು, ಏನೆಲ್ಲಾ ಇಲ್ಲ ಎಂಬುದನ್ನು ತನಿಖೆ ನಡೆಸಲು ಪೊಲೀಸ್ ಮಹಾ ನಿರ್ದೇಶಕರು ಈಗಾಗಲೇ ಸೂಚನೆ ನೀಡಿದ್ದಾರೆ. ಅದರಂತೆ ಕ್ರಮ ಕೈಗೊಳ್ಳುತ್ತೇವೆ. ಎಲ್ಲವೂ ತನಿಖೆಯ ಬಳಿಕ ಸ್ಪಷ್ಟವಾಗಲಿದೆ ಎಂದು ಹೇಳಿದರು.

ಕಠಿಣ ಕಾನೂನಿನಡಿ ಪ್ರಕರಣ :
ಘಟನೆ ಕುರಿತಂತೆ ಸ್ಥಳೀಯ ಕಾರ್ಮಿಕ ಲೋಗೇಶ್ವರನ್ ನೀಡಿರುವ ದೂರು ಆಧರಿಸಿ, ಅತ್ತಿಬೆಲೆಯ ಶ್ರೀ ಬಾಲಾಜಿ ಟ್ರೇಡರ್ಸ್‍ನ ಮಾಲಿಕ ರಾಮಸ್ವಾಮಿ ರೆಡ್ಡಿ, ಇವರ ಪುತ್ರ ನವೀನ್‍ರೆಡ್ಡಿ, ಸಂಸ್ಥೆ ವ್ಯವಸ್ಥಾಪಕ ಲೋಕೇಶ್, ಗೋಧಾಮಿಗೆ ಕಟ್ಟಡ ಬಾಡಿಗೆ ನೀಡಿದ ಶ್ರೀಮತಿ ಜಯಮ್ಮ ಹಾಗೂ ಟ್ರೇಡರ್ಸ್‍ನ ಅನಿಲ್‍ರೆಡ್ಡಿ ಯವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪಶ್ಚಿಮ ಬಂಗಾಳದ ನಗರಾಭಿವೃದ್ಧಿ ಸಚಿವ ನಿವಾಸದ ಮೇಲೆ ಸಿಬಿಐ ದಾಳಿ

ಎಫ್‍ಐಆರ್‍ನಲ್ಲಿ ಸೋಟಕ ನಿರ್ವಹಣಾ ಕಾಯಿದೆ ಸೆಕ್ಷನ್ 9 ಬಿ, ಭಾರತೀಯ ದಂಡ ಸಂಹಿತೆ 427 (ದುರ್ನಡತೆಯಿಂದ ನಷ್ಟ ಉಂಟು ಮಾಡುವುದು), 285 (ಉದಾಸೀನತೆಯಿಂದ ಬೆಂಕಿ ಅನಾಹುತಕ್ಕೆ ಕಾರಣವಾಗುವುದು), 286 (ಸೋಟಕಗಳ ನಿರ್ಲಕ್ಷತೆ ನಿರ್ವಹಣೆ), 304 (ಕೊಲೆಯಲ್ಲದ ನರಹತ್ಯೆ), 337 (ಉದಾಸೀನತೆಯಿಂದ ಮಾನವ ಜೀವಕ್ಕೆ ಅಪಾಯ ತಂದೊಡ್ಡುವುದು), 338 (ಜೀವ ಭದ್ರತೆಗೆ ಧಕ್ಕೆಯಾಗುವಂತ ಘಾಸಿ ಮಾಡುವುದು ಮತ್ತು ಇತರ ಸುರಕ್ಷತೆಯನ್ನು ನಿರ್ಲಕ್ಷಿಸುವುದು) ಸೇರಿದಂತೆ ಪ್ರಮುಖ ಕಾಯಿದೆಗಳಡಿ ಪ್ರಕರಣ ದಾಖಲಿಸಲಾಗಿದೆ.

ವಿಶ್ವಕಪ್ 2023 : ಗಿಲ್ ಔಟ್, ಇಶಾನ್ ಇನ್

ಚೆನ್ನೈ, ಅ.8- 2023ರ ವಿಶ್ವಕಪ್ ಟೂರ್ನಿಯಲ್ಲಿ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಶುಭಮನ್ ಗಿಲ್ ಅವರು ಪ್ಲೇಯಿಂಗ್ 11ನಿಂದ ಹೊರ ನಡೆದಿದ್ದು, ಯುವ ವಿಕೆಟ್ ಕೀಪರ್, ಬ್ಯಾಟರ್ ಇಶಾನ್ ಕಿಶನ್ ಅವರು ರೋಹಿತ್ ಶರ್ಮಾರೊಂದಿಗೆ ಇನಿಂಗ್ಸ್ ಕಟ್ಟುವ ಜವಾಬ್ದಾರಿ ಹೊರಲಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ ಮ್ಯಾಚ್ ರೆಫ್ರಿಯೊಂದಿಗೆ ಮಾತನಾಡಿ, ನಾವು ನಿಜಕ್ಕೂ ಉತ್ತಮ ಸ್ಥಿತಿಯಲ್ಲಿ ನಿಂತಿದ್ದೇವೆ, ಅಲ್ಲದೆ ಉತ್ತಮ ತಂಡವನ್ನು ಹೊಂದಿದ್ದೇವೆ, ಈ ಹಿಂದಿನ ಪಂದ್ಯದ ಫಲಿತಾಂಶವನ್ನು ಮರೆತು ಹೊಸದಾಗಿ ಪಂದ್ಯ ಆರಂಭಿಸಲಿದ್ದೇವೆ.

ಹೊಸ ಮದ್ಯದಂಗಡಿಗೆ ಅನುಮತಿ ನೀಡುವಂತೆ ಸಿಎಂ ಮೇಲೆ ಶಾಸಕರ ಒತ್ತಡ

ಗಾಯಗೊಂಡಿರುವ ಟ್ರಾವಿಸ್ ಹೆಡ್ ಅವರು ಇನ್ನೂ ಅಡಿಲೇಡ್‍ನಲ್ಲೇ ಇದ್ದಾರೆ. ಜೊತೆಗೆ ಸ್ಟಾರ್ ಆಲ್ ರೌಂಡರ್ ಮಾರ್ಕಸ್ ಸ್ಟೋನ್ನಿಸ್ ಅವರ ಸೇವೆಯನ್ನು ತಂಡ ಕಳೆದುಕೊಂಡಿದೆ’ ಎಂದು ಹೇಳಿದ್ದಾರೆ.

ಪಿಚ್ ಬೌಲರ್‍ಗಳಿಗೆ ಸಹಕಾರಿಯಾಗಿದೆ: ರೋಹಿತ್ ಶರ್ಮಾ
`ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣವು ಸ್ಪಿನ್ನರ್‍ಗಳಿಗೆ ಹೆಚ್ಚು ಸಹಕಾರಿ ಆಗಿದೆ, ಪಂದ್ಯ ಸಾಗುತ್ತಿದ್ದಂತೆ ಚೆಂಡು ಹೆಚ್ಚು ತಿರುವು ಪಡೆಯುವ ಸಾಧ್ಯತೆಗಳಿವೆ. ಪಂದ್ಯ ಗೆಲ್ಲಲು ಬೇಕಾದ ಅಂಶಗಳನ್ನು ನಾವು ಪೂರ್ಣಗೊಳಿಸಿದ್ದೇವೆ. ಡೆಂಗ್ಯು ಜ್ವರದಿಂದ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳದ ಶುಭಮನ್ ಗಿಲ್‍ಅವರು ಇಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದು ಅವರ ಜಾಗದಲ್ಲಿ ಇಶಾನ್ ಕಿಶನ್ ಆಡಲಿದ್ದಾರೆ’ ‘ ಎಂದು ಹಿಟ್ ಮ್ಯಾನ್ ಹೇಳಿದ್ದಾರೆ.

ಪ್ಯಾಲೆಸ್ತೇನ್‍ನ ಉಗ್ರರ ನೆರವಿಗೆ ಬಂದ ಇರಾನ್ ಸೇನೆ

ಐಪಿಎಲ್ ಸೇರಿದಂತೆ ಕೆಲವು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಚಿದಂಬರಂ ಕ್ರೀಡಾಂಗಣವು ಸ್ಪಿನ್ನರ್ ಗಳಿಗೆ ಹೆಚ್ಚು ನೆರವು ನೀಡಿರುವುದನ್ನು ಗಮನಿಸಿರುವ ಟೀಮ್ ಇಂಡಿಯಾ ಸೆಲೆಕ್ಟರ್ಸ್‍ಗಳು ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಹಾಗೂ ಕುಲ್ದೀಪ್ ಯಾದವ್‍ಗೆ ತಂಡದಲ್ಲಿ ಸ್ಪಿನ್ನರ್‍ಗಳ ರೂಪದಲ್ಲಿ ಸ್ಥಾನ ಕಲ್ಪಿಸಿದ್ದರೆ, ಆಸ್ಟ್ರೇಲಿಯಾ ಆ್ಯಡಂ ಜಂಪಾರನ್ನು ತಮ್ಮ ಸ್ಪಿನ್ ಬಳಗದಲ್ಲಿ ಸ್ಥಾನ ಕಲ್ಪಿಸಿದ್ದರೆ, ಭಾರತದ ವಿರುದ್ಧ ನಡೆದಿದ್ದ ಅಂತಿಮ ಏಕದಿನ ಪಂದ್ಯದಲ್ಲಿ 4 ವಿಕೆಟ್ ಪಡೆದಿದ್ದ ಗ್ಲೆನ್ ಮ್ಯಾಕ್ಸ್‍ವೆಲ್‍ಗೂ ಸ್ಥಾನ ನೀಡಿದೆ.

ಅತ್ತಿಬೆಲೆ ಪಟಾಕಿ ದುರಂತದಲ್ಲಿ ಒಂದೇ ಗ್ರಾಮದ 8 ವಿದ್ಯಾರ್ಥಿಗಳು ಸಾವು

ಅತ್ತಿಬೆಲೆ, ಅ.8- ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಒಂದೇ ಗ್ರಾಮದ 8 ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಅವರ ಭವ್ಯ ಭವಿಷ್ಯ ಬೆಂಕಿಯ ಕೆನ್ನಾಲಿಗೆ ಸುಟ್ಟು ಕರಕಲಾಗಿದೆ. ದೀಪಾವಳಿ ಸಂದರ್ಭದಲ್ಲಿ ತಮಿಳುನಾಡಿನ ಶಿವಕಾಶಿ, ಧರ್ಮಪುರಿಯಿಂದ ಕಾರ್ಮಿಕರು ಬೆಂಗಳೂರಿನ ಗಡಿ ಭಾಗದ ಆನೇಕಲ್, ಅತ್ತಿಬೆಲೆ ಪ್ರದೇಶಕ್ಕೆ ಒಂದು ತಿಂಗಳ ಮುಂಚಿತವಾಗಿ ಬಂದು ನೆಲೆಸಿ ಪಟಾಕಿ ದಾಸ್ತಾನು ಹಾಗೂ ವ್ಯಾಪಾರದಲ್ಲಿ ತೊಡಗಿಕೊಳ್ಳುತ್ತಾರೆ.

ಈ ಬಾರಿಯ ಬೆಳಕಿನ ಹಬ್ಬ ದೀಪಾವಳಿಯಲ್ಲಿ ನಾಲ್ಕು ಕಾಸು ಹಣ ಸಂಪಾದಿಸಬಹುದೆಂದು ಹಾಗೂ ವಿದಾಭ್ಯಾಸಕ್ಕಾಗಿ ಹಣ ಹೊಂದಿಸಲೆಂದು ಧರ್ಮಫುರಿ ಜಿಲ್ಲೆಯ ಅಮ್ಮಾಪಟ್ಟಿ ಗ್ರಾಮದಿಂದ ಹತ್ತು ಜನ ವಿದ್ಯಾರ್ಥಿಗಳು ಬಂದಿದ್ದು, ಇದರಲ್ಲಿ ಎಂಟು ಜನರು ಸಜೀವವಾಗಿ ದಹನಗೊಂಡಿರುವುದು ದುರಾದೃಷ್ಟಕರ.

ಲೋಕಸಭೆ ಚುನಾವಣೆ : ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸದ್ಯದಲ್ಲೇ ಹೈಕಮಾಂಡ್‍ಗೆ ರವಾನೆ

ಪಿಯುಸಿ ಹಾಗೂ ಪದವಿ ಓದುತ್ತಿದ್ದ ವಿದ್ಯಾರ್ಥಿಗಳು ಉತ್ತಮವಾಗಿ ಓದಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ದೃಷ್ಟಿಯಿಂದ ಕಷ್ಟಪಟ್ಟು ದುಡಿದು ಫೋಷಕರಿಗೆ ಹೊರೆಯಾಗದಂತೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಬೇಕೆಂಬ ಮಹದಾಸೆಯಿಂದ ಇಲ್ಲಿಗೆ ಬಂದಿದ್ದು, ಇವರ ದೇಹದ ಜೊತೆ ಅವರು ಕನಸುಗಳು ಸಹ ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ.

ನನ್ನ ಮಗ ಪೊಲೀಸ್ ಆಫೀಸರ್ ಆಗಬೇಕೆಂದು ದೊಡ್ಡ ಕನಸು ಹೊಂದಿದ್ದು, ಇದಕ್ಕಾಗಿ ಎಲ್ಲಾ ತಯಾರು ಮಾಡಿಕೊಳ್ಳುತ್ತಿದ್ದ, ಓದಿನಲ್ಲೂ ಸಹ ಮುಂದಿದ್ದ, ವಿದ್ಯಾಭ್ಯಾಸಕ್ಕಾಗಿ ಹಣ ಕೂಡಿಸಲು ಕೂಲಿ ಕೆಲಸಕ್ಕೆ ಕಳೆದ ವಾರವಷ್ಟೇ ಅತ್ತಿಬೆಲೆಗೆ ಬಂದಿದ್ದ, ದಿನಕ್ಕೆ 600 ರೂ. ಕೂಲಿ ಪಡೆಯುತ್ತಿದ್ದ, ಆದರೆ ಈ ದುರಂತ ನನ್ನ ಮಗನ ಹಾಗೂ ನಮ್ಮ ಕನಸನ್ನು ನುಚ್ಚುನೂರು ಮಾಡಿದೆ ಎಂದು ಮೃತನ ತಾಯಿಯೊಬ್ಬರು ಕಣ್ಣೀರಿಟ್ಟು ಗೋಳಾಡುತ್ತಿದ್ದ ದೃಶ್ಯ ಆಸ್ಪತ್ರೆಯ ಮುಂದೆ ಕಂಡು ಬಂತು.

ಪಶ್ಚಿಮ ಬಂಗಾಳದ ನಗರಾಭಿವೃದ್ಧಿ ಸಚಿವ ನಿವಾಸದ ಮೇಲೆ ಸಿಬಿಐ ದಾಳಿ

ಮೃತದೇಹ ಹಸ್ತಾಂತರ: ಬೆಂಕಿ ಅವಘಡದಲ್ಲಿ ಮೃತಪಟ್ಟವರ ಪಾರ್ಥಿವ ಶರೀರವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಅತ್ತಿಬೆಲೆಯ ಅಕ್ಸ್‍ಪರ್ಡ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಗುರುತುಗಳನ್ನು ಪತ್ತೆ ಹಚ್ಚಿ ಮಾಹಿತಿಯನ್ನು ಪಡೆದು ಆಯಾಯ ಕುಟುಂಬಸ್ಥರಿಗೆ ಆಸ್ಪತ್ರೆಯ ಸಿಬ್ಬಂದಿಗಳು ಹಸ್ತಾಂತರಿಸಿದರು.

ನಿನ್ನೆ ಸಂಜೆಯಿಂದಲೇ ಆಸ್ಪತ್ರೆ ಬಳಿ ಕುಟುಂಬ ಸದಸ್ಯರು ಜಮಾಯಿಸಿ ತಮ್ಮವರ ಮುಖ ನೋಡಲು ಬಾರಿ ಒತ್ತಡ ಹೇರಿದ್ದು, ದುಃಖದ ಕಟ್ಟೆಯೊಡೆದು ಆಕ್ರಂದನ ಮುಗಿಲು ಮುಟ್ಟಿತ್ತು. ಇವರನು ಸಮಾಧಾನ ಮಾಡಲು ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಪೊಲೀಸರು ಸಂಬಂಧಪಟ್ಟ ಇಲಾಖೆ ಅಕಾರಿಗಳು ಹರಸಾಹಸ ಪಡಬೇಕಾಯಿತು. ಮೃತ ದೇಹವು ಕೈ ಸೇರುತ್ತಿದ್ದಂತೆ ಕುಟುಂಬರ ರೋಧನೆ ಮತ್ತಷ್ಟು ಹೆಚ್ಚಾಗಿ ಈ ದೃಶ್ಯ ಕರುಳು ಹಿಂಡುವಂತಿತ್ತು.

ಅತ್ತಿಬೆಲೆ ಪಟಾಕಿ ದುರಂತ ಸಿಐಡಿ ತನಿಖೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಅ.8- ಅತ್ತಿಬೆಲೆ ಪಟಾಕಿ ದುರಂತ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿರುವು ದಲ್ಲದೆ, ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವುದಾಗಿ ಘೋಷಿಸಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಎಂ.ಸಿ.ಸುಧಾಕರ್, ರಾಮಲಿಂಗಾರೆಡ್ಡಿ, ಭೈರತಿ ಸುರೇಶ್, ಶಾಸಕರಾದ ಶಿವಣ್ಣ, ಎಸ್.ಟಿ.ಸೋಮಶೇಖರ್, ತಮಿಳುನಾಡಿನಕಾಂಗ್ರೆಸ್ ನಾಯಕ ಚಲ್ಲಕುಮಾರ್ ಸೇರಿದಂತೆ ಮತ್ತಿತರರು ಜತೆಗಿದ್ದರು.

ಅಗ್ನಿಶಾಮಕ ದಳದ ಡಿಜಿಪಿ ಕಮಲ್‍ಪಂಥ್, ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ಸೇರಿದಂತೆ ಹಿರಿಯ ಅಧಿಕಾರಿಗಳು, ಮುಖ್ಯಮಂತ್ರಿಯವರಿಗೆ ಘಟನೆ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು. ಘಟನೆಯ ಪ್ರತಿ ಸ್ಥಳಕ್ಕೂ ಖುದ್ದಾಗಿ ಭೇಟಿ ನೀಡಿದ ಮುಖ್ಯಮಂತ್ರಿಗಳು, ನಷ್ಟದ ಅಂದಾಜುಗಳು ಹಾಗೂ ಇತರ ವಿವರಗಳನ್ನು ಪರಿಶೀಲನೆ ನಡೆಸಿದರು.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪರವಾನಗಿ ಪಡೆದು ಪಟಾಕಿ ಮಾರಾಟ ಮಾಡುವುದು ದೀಪಾವಳಿ ಸಂದರ್ಭದಲ್ಲಿ ಕಂಡುಬರುತ್ತದೆ. ನಿನ್ನೆ 3 ಗಂಟೆ ಸುಮಾರಿನಲ್ಲಿ ಈ ಗೋದಾಮಿನಲ್ಲಿ ಅಗ್ನಿ ದುರಂತ ನಡೆದಿದೆ. ಇದಕ್ಕೆ ಪಟಾಕಿ ದಾಸ್ತಾನು ಮಳಿಗೆಯಲ್ಲಿ ಸರಿಯಾದ ಸುರಕ್ಷತಾ ಕ್ರಮ ಮಾಡದಿರುವುದು ಕಾರಣ ಎಂದರು.

ಪ್ಯಾಲೆಸ್ತೇನ್‍ನ ಉಗ್ರರ ನೆರವಿಗೆ ಬಂದ ಇರಾನ್ ಸೇನೆ

ಪಟಾಕಿ ಮಾರಾಟ ಹಾಗೂ ಸಂಗ್ರಹಕ್ಕೆ ಎರಡು ಪರವಾನಗಿಗಳನ್ನು ಪಡೆದಿದ್ದಾರೆ. 2023 ರ ಸೆಪ್ಟೆಂಬರ್ 13 ರಂದು ಒಂದು ಪರವಾನಗಿ ನವೀಕರಣಗೊಂಡಿದ್ದು, ಅದು 2028 ರ ಅಕ್ಟೋಬರ್ 31 ರವರಗೆ ಚಾಲ್ತಿಯಲ್ಲಿರುತ್ತದೆ. ಇನ್ನೊಂದು ಪರವಾನಗಿಯನ್ನು 2021ರ ಜನವರಿ 18 ರಂದು ಪಡೆಯಲಾಗಿದ್ದು, 2026 ರ ಜನವರಿ 28 ರವರೆಗೂ ಚಾಲ್ತಿಯಲ್ಲಿರಲಿದೆ.

ಜಯಮ್ಮ ಅವರಿಗೆ ಸೇರಿದ ಜಾಗವನ್ನು ಬಾಡಿಗೆ ಪಡೆದು ಪಟಾಕಿ ವ್ಯಾಪಾರ ಮಾಡಲಾಗುತ್ತಿತ್ತು. ಮೃತಪಟ್ಟವರು ಕೃಷ್ಣಗಿರಿ, ಧರ್ಮಪುರಿ ಜಿಲ್ಲೆಗೆ ಸೇರಿದವರಾಗಿದ್ದು, ಅವರಲ್ಲಿ ಬಹುತೇಕರು ವಿದ್ಯಾರ್ಥಿಗಳಾಗಿದ್ದಾರೆ. ರಜಾ ಅವಧಿಯಲ್ಲಿ ವಿದ್ಯಾರ್ಥಿಗಳು ಸಂಪಾದನೆಗಾಗಿ ಕೆಲಸ ಮಾಡುತ್ತಿದ್ದರು. ಮ್ಯಾನೇಜರ್ ಮಾತ್ರ ಖಾಯಂ ನೌಕರ. ಉಳಿದೆಲ್ಲರೂ ದಿನಗೂಲಿಗಾಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

ಪೊಲೀಸರು ಮತ್ತು ಅಗ್ನಿಶಾಮಕ ದಳದಿಂದ ನಿರಪೇಕ್ಷಣಾ ಪತ್ರ ಸಲ್ಲಿಸಿದ್ದರಿಂದ ಪರವಾನಗಿಯನ್ನು ನವೀಕರಣ ಮಾಡಿಕೊಟ್ಟಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ನಿರಪೇಕ್ಷಣಾ ಪತ್ರ ನೀಡಿದವರು ಸ್ಥಳಕ್ಕೆ ಭೇಟಿ ನೀಡಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಬೇಕಿತ್ತು. ಇದು ಆಗಿಲ್ಲ. ಜಿಲ್ಲಾಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿಲ್ಲ. ಹೀಗಾಗಿ ಘಟನೆಯನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗುತ್ತಿದೆ ಎಂದು ಹೇಳಿದರು.

ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಸಿಗ್ತಿಲ್ಲ ಉದ್ಯೋಗ

ತನಿಖೆಯ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಘಟನೆಯಲ್ಲಿ 14 ಮಂದಿ ಮೃತಪಟ್ಟಿರುವುದರಿಂದ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು. ಮೃತಪಟ್ಟವರಿಗೆ 5 ಲಕ್ಷ ರೂ. ಪರಿಹಾರ ಮತ್ತು ಗಾಯಗೊಂಡ 4 ಜನರಿಗೆ ಉಚಿತ ಚಿಕಿತ್ಸೆ ಕೊಡಿಸಲಾಗುವುದು ಎಂದರು.

ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಸಿಗ್ತಿಲ್ಲ ಉದ್ಯೋಗ

ಟೊರೊಂಟೊ, ಅ.8- ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಭಾರತದ ವಿರುದ್ಧ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಭಾರತ-ಕೆನಡಾ ಸಂಬಂಧಗಳು ಹಳಸಿರುವಂತೆಯೇ ಇಲ್ಲಿನ ಭಾರತೀಯ ವಿದ್ಯಾರ್ಥಿಗಳನ್ನು ಕಾಡುತ್ತಿರುವ ಮತ್ತೊಂದು ಪ್ರಮುಖ ಸಮಸ್ಯೆಯೆಂದರೆ ಉದ್ಯೋಗಾವಕಾಶಗಳ ಕೊರತೆ.

ಕಳೆದ 2022ರಲ್ಲಿ ಒಟ್ಟು 2,26,450 ಭಾರತೀಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯಲು ಕೆನಡಾಕ್ಕೆ ಆಗಮಿಸಿದ್ದರು. ಕಳೆದ ವರ್ಷ ಉತ್ತರ ಅಮೆರಿಕಾದ ರಾಷ್ಟ್ರಕ್ಕೆ ಪ್ರವೇಶಿಸಿದ ಹೊಸ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಅಗ್ರ ಮೂಲ ದೇಶವಾಗಿ ಭಾರತವನ್ನು ಮಾಡಿದೆ ಎಂದು ಡೇಟಾ ಸೂಚಿಸುತ್ತದೆ.

ಜಾಗತಿಕ ಶಿಕ್ಷಣ ಹುಡುಕಾಟ ವೇದಿಕೆ ಎರುಡೆರಾ ಪ್ರಕಾರ, ಉನ್ನತ ಶಿಕ್ಷಣ ಸೇರಿದಂತೆ ಕೆನಡಾದಲ್ಲಿ ಎಲ್ಲಾ ಶಿಕ್ಷಣ ಹಂತಗಳಲ್ಲಿ ಒಟ್ಟು ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಸಂಖ್ಯೆ 8,07,750 ಆಗಿದೆ. ಇದರಲ್ಲಿ 5,51,405 ಮಂದಿ ಕಳೆದ ವರ್ಷ ಕೆನಡಾದಲ್ಲಿ ಅಧ್ಯಯನ ಪರವಾನಿಗೆ ಪಡೆದಿದ್ದಾರೆ.

ಪಶ್ಚಿಮ ಬಂಗಾಳದ ನಗರಾಭಿವೃದ್ಧಿ ಸಚಿವ ನಿವಾಸದ ಮೇಲೆ ಸಿಬಿಐ ದಾಳಿ

2022 ರಲ್ಲಿ ಕೆನಡಾದಲ್ಲಿ 2,26,450 ವಿದ್ಯಾರ್ಥಿಗಳೊಂದಿಗೆ ಭಾರತವು ಹೆಚ್ಚು ಅಧ್ಯಯನ ಪರವಾನಗಿ ಹೊಂದಿರುವವರನ್ನು ಹೊಂದಿದೆ ಎಂದು ಎರುಡೆರಾ ಡೇಟಾ ಹೇಳಿದೆ. ನಾನು ಭಾರತ-ಕೆನಡಾ ಬಿರುಕುಗಳ ಬಗ್ಗೆ ಹೆಚ್ಚು ಯೋಚಿಸುತ್ತಿಲ್ಲ. ನನ್ನ ಭವಿಷ್ಯದ ಬಗ್ಗೆ ನಾನು ಹೆಚ್ಚು ಚಿಂತಿತನಾಗಿದ್ದೇನೆ ಮತ್ತು ಕಾಳಜಿ ವಹಿಸುತ್ತೇನೆ. ಇಲ್ಲಿ ಉದ್ಯೋಗಗಳ ಕೊರತೆಯಿದೆ ಮತ್ತು ನಾನು ನನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ನಾನು ಕೆಲಸವನ್ನು ಭದ್ರಪಡಿಸಿಕೊಳ್ಳಬಹುದೇ ಎಂದು ನನಗೆ ತಿಳಿದಿಲ್ಲ ಎಂದು ಹರ್ವಿಂದರ್ (ಅವರ ಗೌಪ್ಯತೆಯನ್ನು ರಕ್ಷಿಸಲು ವಿನಂತಿಯ ಮೇರೆಗೆ ಹೆಸರನ್ನು ಬದಲಾಯಿಸಲಾಗಿದೆ) ಇಲ್ಲಿ ಪಿಟಿಐಗೆ ತಿಳಿಸಿದರು.

ಗ್ರೇಟರ್ ಟೊರೊಂಟೊ ಪ್ರದೇಶದ ಸುತ್ತಮುತ್ತಲಿನ ಹಲವಾರು ಭಾರತೀಯ ವಿದ್ಯಾರ್ಥಿಗಳು ಇದೇ ರೀತಿಯ ಭಾವನೆಯನ್ನು ವ್ಯಕ್ತಪಡಿಸಿದರು. ಮಾಯಾಂಕ್ (ಅವರು ತಮ್ಮ ಕೊನೆಯ ಹೆಸರನ್ನು ಬಹಿರಂಗಪಡಿಸಲು ಬಯಸುವುದಿಲ್ಲ) ಗ್ರೇಟರ್ ಟೊರೊಂಟೊ ಪ್ರದೇಶದ ಇನ್ಸ್ಟಿಟ್ಯೂಟ್‍ನಲ್ಲಿ ಆರೋಗ್ಯ ಸೇವೆಗಳ ಕೋರ್ಸ್ ಅನ್ನು ಅಭ್ಯಸಿಸುತ್ತಿದ್ದಾರೆ.

ದೆಹಲಿ ಮತ್ತು ಒಟ್ಟಾವಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ನಂತರ ಅವರು ಮತ್ತು ಅವರ ಸ್ನೇಹಿತರು ಯಾವುದೇ ತೊಂದರೆಗಳನ್ನು ಅನುಭವಿಸದಿದ್ದರೂ, ಟೊರೊಂಟೊದಲ್ಲಿ ತನ್ನ ಅಧ್ಯಯನವನ್ನು ಮುಗಿಸಿದ ನಂತರ ಕೆಲಸ ಸಿಗದ ಆಲೋಚನೆಯೇ ತನಗೆ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುವಂತಾಗಿದೆ ಎಂದು ಅವರು ಹೇಳಿದರು.

ಇಲ್ಲಿ ವೈದ್ಯಕೀಯ ಪದವಿ ಪಡೆದ ಹಲವಾರು ಭಾರತೀಯ ವಿದ್ಯಾರ್ಥಿಗಳ ಬಗ್ಗೆ ನನಗೆ ಗೊತ್ತು. ಅವರು ಯೋಗ್ಯವಾದ ಸಂಬಳದ ಉದ್ಯೋಗಗಳನ್ನು ಹುಡುಕಲು ಸಾಧ್ಯವಾಗಲಿಲ್ಲ, ಕ್ಯಾಬ್‍ಗಳನ್ನು ಓಡಿಸುತ್ತಿದ್ದಾರೆ ಮತ್ತು ಬಿಲ್‍ಗಳನ್ನು ಪಾವತಿಸಲು ಅಂಗಡಿಗಳು ಮತ್ತು ರೆಸ್ಟೋರೆಂಟ್‍ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ನಮಗೆ ಅತ್ಯಂತ ಸವಾಲಿನ ಪರಿಸ್ಥಿತಿಯಾಗಿದೆ ಎಂದು ಅವರು ಹೇಳಿದರು.

ಟೊರೊಂಟೊ ಮತ್ತು ಇತರ ಕೆನಡಾದ ನಗರಗಳ ಸುತ್ತಮುತ್ತಲಿನ ಹೆಚ್ಚಿನ ಜೀವನ ವೆಚ್ಚವು ಇಲ್ಲಿನ ವಿದ್ಯಾರ್ಥಿಗಳನ್ನು ನೋಯಿಸುತ್ತಿದೆ. ಅವರು ಬಾಡಿಗೆ ಮತ್ತು ಇತರ ಉಪಯುಕ್ತತೆಗಳನ್ನು ಉಳಿಸಲು ಸಣ್ಣ ಕೊಠಡಿಗಳಲ್ಲಿ ವಾಸಿಸಲು ಒತ್ತಾಯಿಸುತ್ತಾರೆ.

ಒಮ್ಮೆ ನಾವು ಇಲ್ಲಿ ನಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರೆ, ನಾವು ಉತ್ತಮ ಸಂಬಳದ ಉದ್ಯೋಗಗಳನ್ನು ಪಡೆಯಲು ಸಾಧ್ಯವಾಗುತ್ತದೆ ಮತ್ತು ನಮ್ಮ ಪೋಷಕರು ಹಾಗೂ ಕುಟುಂಬಗಳಿಗೆ ಭಾರತದಲ್ಲಿ ಮನೆಗೆ ಮರಳಲು ಸಹಾಯ ಮಾಡುತ್ತೇವೆ ಎಂಬ ಭರವಸೆಯೊಂದಿಗೆ ನಾವು ಬಂದಿದ್ದೇವೆ. ಆದರೆ ಉದ್ಯೋಗಗಳಿಲ್ಲ. ಜೀವನ ವೆಚ್ಚ, ಆರೋಗ್ಯ ಸೇವೆಯು ಬೆನ್ನು ಮುರಿಯುತ್ತಿದೆ ಮತ್ತು ನಾವು ಜೀವನವನ್ನು ಪೂರೈಸಲು ಹೆಣಗಾಡುತ್ತಿದ್ದೇವೆ ಎಂದು ಹೆಸರು ಹೇಳಲು ಇಚ್ಛಿಸದ ಹರಿಯಾಣದ ಇನ್ನೊಬ್ಬ ಭಾರತೀಯ ವಿದ್ಯಾರ್ಥಿ ಹೇಳಿದರು.

ಕಳೆದ ತಿಂಗಳು ಕೆನಡಾ ಸಂಸತ್ತಿನಲ್ಲಿ ಟ್ರುಡೊ ಮಾಡಿದ ಆರೋಪದ ನಂತರ ಭಾರತ ಮತ್ತು ಕೆನಡಾ ರಾಜತಾಂತ್ರಿಕ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿವೆ. ಬ್ರಿಟಿಷ್ ಕೊಲಂಬಿಯಾದಲ್ಲಿ ಜೂನ್ 18 ರಂದು ಕೆನಡಾದ ನೆಲದಲ್ಲಿ ಖಲಿಸ್ತಾನಿ ಉಗ್ರಗಾಮಿ ಹರ್ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆ ಮತ್ತು ಭಾರತ ಸರ್ಕಾರದ ಏಜೆಂಟರ ನಡುವಿನ ಸಂಭಾವ್ಯ ಸಂಪರ್ಕದ ಬಗ್ಗೆ ಕೆನಡಾದ ಭದ್ರತಾ ಏಜೆನ್ಸಿಗಳು ವಿಶ್ವಾಸಾರ್ಹ ಆರೋಪಗಳನ್ನು ಸಕ್ರಿಯವಾಗಿ ಅನುಸರಿಸುತ್ತಿವೆ ಎಂದು ಅವರು ಹೇಳಿದ್ದಾರೆ.

ಕಳೆದ ವಾರದ ಆರಂಭದಲ್ಲಿ, ಟ್ರೂಡೊ ಅವರ ಆರೋಪದ ನಂತರ ಭುಗಿಲೆದ್ದ ರಾಜತಾಂತ್ರಿಕ ಗದ್ದಲದ ನಡುವೆ ಹಲವಾರು ಡಜನ್ ರಾಜತಾಂತ್ರಿಕರನ್ನು ತನ್ನ ಕಾರ್ಯಾಚರಣೆಗಳಿಂದ ಹಿಂತೆಗೆದುಕೊಳ್ಳುವಂತೆ ಭಾರತವು ಕೆನಡಾವನ್ನು ಕೇಳಿದೆ.

ಪಶ್ಚಿಮ ಬಂಗಾಳದ ನಗರಾಭಿವೃದ್ಧಿ ಸಚಿವ ನಿವಾಸದ ಮೇಲೆ ಸಿಬಿಐ ದಾಳಿ

ಪರಸ್ಪರ ರಾಜತಾಂತ್ರಿಕ ಉಪಸ್ಥಿತಿಗೆ ಆಗಮಿಸುವ ವಿಧಾನಗಳ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ ಮತ್ತು ಈ ವಿಷಯದಲ್ಲಿ ಭಾರತವು ತನ್ನ ನಿಲುವನ್ನು ಪರಿಶೀಲಿಸುವುದಿಲ್ಲ ಎಂಬ ಸ್ಪಷ್ಟ ಸೂಚನೆಯನ್ನು ನೀಡಿದೆ.

ಜಾಗತಿಕ ಶಿಕ್ಷಣ ಉದ್ಯಮದ ಮಾರುಕಟ್ಟೆ ಗುಪ್ತಚರ ಸಂಪನ್ಮೂಲವಾದ ಐಸಿಇಎಫ್ ಮಾನಿಟರ್ ಪ್ರಕಾರ, ಡಿಸೆಂಬರ್ 2022 ರ ಅಂತ್ಯದ ವೇಳೆಗೆ 3,20,000 ಭಾರತೀಯ ವಿದ್ಯಾರ್ಥಿಗಳು ಸಕ್ರಿಯ ಅಧ್ಯಯನ ಪರವಾನಗಿಯನ್ನು ಹೊಂದಿದ್ದರು. ಇದು ಹಿಂದಿನ ವರ್ಷಕ್ಕಿಂತ ಶೇ.47ರಷ್ಟು ಬೆಳವಣಿಗೆಯಾಗಿದೆ. 2022 ರ ಅಂತ್ಯದ ವೇಳೆಗೆ ಕೆನಡಾದಲ್ಲಿ ಪ್ರತಿ ಹತ್ತು ವಿದೇಶಿ ವಿದ್ಯಾರ್ಥಿಗಳಲ್ಲಿ ಸುಮಾರು ನಾಲ್ಕು ಭಾರತೀಯ ವಿದ್ಯಾರ್ಥಿಗಳು ಇದ್ದಾರೆ ಎಂದು ಐಸಿಇಎಫ್ ಮಾನಿಟರ್ ಹೇಳಿದೆ.

ಬಂಡೆ ಮತ್ತು ಗಟ್ಟಿಯಾದ ಸ್ಥಳದ ನಡುವೆ ಸಿಲುಕಿಕೊಳ್ಳುವುದಕ್ಕಿಂತ ಭಿನ್ನವಾಗಿಲ್ಲ ಎಂದು ಭಾರತೀಯ ವಿದ್ಯಾರ್ಥಿಗಳು ತಮ್ಮ ಕಷ್ಟಗಳನ್ನು ವಿವರಿಸಿದರು. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಕಳುಹಿಸಲು ಭಾರತದಲ್ಲಿನ ತಮ್ಮ ಕುಟುಂಬಗಳು ಮತ್ತು ಪೋಷಕರು ಅನುಭವಿಸಿದ ಕಷ್ಟಗಳ ಬಗ್ಗೆ ಮಾತನಾಡಿದರು.

ಪೋಷಕರು ಕೆನಡಾದಲ್ಲಿ ತಮ್ಮ ಮಕ್ಕಳ ಉನ್ನತ ಶಿಕ್ಷಣವನ್ನು ಶುಲ್ಕ ಪಾವತಿಸಲು ಆಸ್ತಿಗಳು, ಭೂಮಿಯನ್ನು ಮಾರಾಟ ಮಾಡಬೇಕಾಗಿತ್ತು. ಬೃಹತ್ ಸಾಲಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ವಿದ್ಯಾರ್ಥಿಗಳು ಗಮನ ಸೆಳೆದರು.

ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ, ಸಾವಿನ ಸಂಖ್ಯೆ 2,000 ಕ್ಕೆ ಏರಿಕೆ

ನಮ್ಮ ಪೋಷಕರು ನಮ್ಮನ್ನು ಕೆನಡಾಕ್ಕೆ ಓದಲು ಕಳುಹಿಸಲು ಸಾಕಷ್ಟು ಖರ್ಚು ಮಾಡಿದ್ದಾರೆ. ಇಲ್ಲಿಗೆ ಬಂದ ನಂತರ ನಾವು ನಮ್ಮ ಪೋಷಕರಿಂದ ಒಂದು ಪೈಸೆಯನ್ನೂ ತೆಗೆದುಕೊಳ್ಳುವುದಿಲ್ಲ ಮತ್ತು ನಮ್ಮ ಕುಟುಂಬಗಳಿಗೆ ಆರ್ಥಿಕವಾಗಿ ಸಹಾಯ ಮಾಡಲು ಸಾಧ್ಯವಾಗುತ್ತದೆ ಎಂದು ನಾವು ಭಾವಿಸಿದ್ದೇವೆ. ನಮ್ಮನ್ನು ಪೋಷಿಸುವ ಉತ್ತಮ ಉದ್ಯೋಗಗಳನ್ನು ಹುಡುಕಲು ನಾವು ಆಶಿಸಿದ್ದೇವೆ ಮತ್ತು ಭಾರತದಲ್ಲಿ ನಮ್ಮ ಕುಟುಂಬಗಳನ್ನು ನೋಡಿಕೊಳ್ಳಲು ನಮಗೆ ಅನುವು ಮಾಡಿಕೊಡುತ್ತದೆ. ಆದರೆ, ನಮಗೆ ಅದನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮಯಾಂಕ್ ಹೇಳಿದ್ದಾರೆ.