Thursday, November 6, 2025
Home Blog Page 1929

ಚುನಾವಣಾ ಬಾಂಡ್‍ಗಳು ಕಾನೂನುಬದ್ಧ ಲಂಚ ಎಂದ ಚಿದಂಬರಂ

ನವದೆಹಲಿ, ಸೆ 30 (ಪಿಟಿಐ)- ಚುನಾವಣಾ ಬಾಂಡ್‍ಗಳನ್ನು ಕಾನೂನುಬದ್ಧ ಲಂಚ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಬಣ್ಣಿಸಿದ್ದಾರೆ.ಬಾಂಡ್‍ಗಳ ಹೊಸ ಭಾಗವು ಅಕ್ಟೋಬರ್ 4 ರಂದು ತೆರೆಯಲಿದ್ದು, ಇದು ಬಿಜೆಪಿಗೆ ಚಿನ್ನದ ಸುಗ್ಗಿಯಾಗಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಅಕ್ಟೋಬರ್ 4 ರಿಂದ 10 ದಿನಗಳವರೆಗೆ ಮಾರಾಟಕ್ಕೆ ತೆರೆಯುವ ಚುನಾವಣಾ ಬಾಂಡ್‍ಗಳ 28 ನೇ ಕಂತಿನ ವಿತರಣೆಯನ್ನು ಸರ್ಕಾರ ನಿನ್ನೆ ಅನುಮೋದಿಸಿದೆ.ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಗಢ, ತೆಲಂಗಾಣ ಮತ್ತು ಮಿಜೋರಾಂ ವಿಧಾನಸಭೆ ಚುನಾವಣೆಗೆ ಮುನ್ನ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ರಾಜ್ಯಗಳ ಚುನಾವಣಾ ದಿನಾಂಕಗಳು ಶೀಘ್ರದಲ್ಲೇ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಚಿದಂಬರಂ ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

BIG NEWS : ದೆಹಲಿಯಲ್ಲಿ ಐಸಿಸ್ ಶಂಕಿತ ಉಗ್ರರು, ರಕ್ತದೋಕುಳಿಗೆ ಪ್ಲಾನ್..!

ಅಕ್ಟೋಬರ್ 4 ರಂದು ಚುನಾವಣಾ ಬಾಂಡ್‍ಗಳ 28 ನೇ ಕಂತಿನ ತೆರೆಯುವಿಕೆ ಬಿಜೆಪಿಗೆ ಸುವರ್ಣ ಸುಗ್ಗಿಯಾಗಲಿದೆ. ಹಿಂದಿನ ದಾಖಲೆಗಳ ಪ್ರಕಾರ, ಅನಾಮಧೇಯರೆಂದು ಕರೆಯಲ್ಪಡುವವರಿಂದ ಶೇ. 90ರಷ್ಟು ದೇಣಿಗೆ ಬಿಜೆಪಿಗೆ ಹೋಗುತ್ತದೆ.

ರಾಜಕೀಯ ನಿಧಿಗೆ ಪಾರದರ್ಶಕತೆಯನ್ನು ತರುವ ಪ್ರಯತ್ನಗಳ ಭಾಗವಾಗಿ ರಾಜಕೀಯ ಪಕ್ಷಗಳಿಗೆ ನೀಡುವ ನಗದು ದೇಣಿಗೆಗೆ ಪರ್ಯಾಯವಾಗಿ ಚುನಾವಣಾ ಬಾಂಡ್‍ಗಳನ್ನು ತೆರೆಯಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಕೇವಲ 30ರೂ. ವಿಚಾರಕ್ಕೆ ಬಾಲಕನ ಕೊಲೆ

ಬಾಗ್‍ಪತ್, ಸೆ 30 (ಪಿಟಿಐ) – ಕೇವಲ 30 ರೂ.ಗಳ ವಿಚಾರಕ್ಕೆ ಉತ್ತರಪ್ರದೇಶದ ಗ್ರಾಮವೊಂದರಲ್ಲಿ 17 ವರ್ಷದ ಯುವಕನೊಬ್ಬನನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಬಾಗ್‍ಪತ್ ಜಿಲ್ಲೆಯ ಬರೌತ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಆರೋಪಿಗಳು 11 ನೇ ತರಗತಿ ವಿದ್ಯಾರ್ಥಿಯನ್ನು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತನನ್ನು ಗ್ರಾಮದ ಕೆಎಚ್‍ಆರ್ ಇಂಟರ್ ಕಾಲೇಜಿನ ವಿದ್ಯಾರ್ಥಿ ಹೃತಿಕ್ ಎಂದು ಗುರುತಿಸಲಾಗಿದೆ ಎಂದು ಬರೌತ್ ಸ್ಟೇಷನ್ ಹೌಸ್ ಆಫೀಸರ್ (ಎಸ್‍ಎಚ್‍ಒ) ದೇವೇಶ್ ಕುಮಾರ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ. ಹೃತಿಕ್ ಅದೇ ಗ್ರಾಮದ ಮೂವರೊಂದಿಗೆ 30 ರೂಪಾಯಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಜಗಳವಾಡಿದ್ದು, ವಿವಾದ ಉಲ್ಬಣಗೊಂಡು ಆರೋಪಿಗಳು ಹೃತಿಕ್ ನನ್ನು ಕತ್ತು ಹಿಸುಕಿ ಸಾಯಿಸಿದ್ದಾರೆ.

BIG NEWS : ದೆಹಲಿಯಲ್ಲಿ ಐಸಿಸ್ ಶಂಕಿತ ಉಗ್ರರು, ರಕ್ತದೋಕುಳಿಗೆ ಪ್ಲಾನ್..!

ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಆರೋಪಿಗಳು ಹೃತಿಕ್ ಅವರನ್ನು ತಿಳಿದಿದ್ದಾರೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ ಮತ್ತು ಅವರ ದೇಹದಲ್ಲಿ ಯಾವುದೇ ಗಾಯದ ಗುರುತುಗಳಿಲ್ಲ ಎಂದು ಹೇಳಿದರು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಎಫ್ ಐಆರ್ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಹೈಟೆಕ್ ವಂಚನೆ ಜಾಲ ಬೇಧಿಸಿದ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು..!

ಬೆಂಗಳೂರು,ಸೆ.30- ಕಡಿಮೆ ಹೂಡಿಕೆಯಲ್ಲಿ ಲಕ್ಷಾಂತರ ರೂಪಾಯಿ ಲಾಭ ಮಾಡುವ ಆಮಿಷದೊಂದಿಗೆ ರಾಷ್ಟ್ರಾದ್ಯಂತ ಸಾವಿರಾರು ಮಂದಿಯನ್ನು ವಂಚಿಸಿ 854 ಕೋಟಿ ರೂ.ಗೂ ಅಧಿಕ ಹಣವನ್ನು ದೋಚಿದ್ದ ಅಂತಾರಾಷ್ಟ್ರೀಯ ಜಾಲವನ್ನು ಬೆಂಗಳೂರಿನ ಸೈಬರ್‍ಕ್ರೈಂ ಪೊಲೀಸರು ಬೇಸಿಧಿದ್ದಾರೆ.

ಈ ಮೂಲಕ ರಾಷ್ಟ್ರಮಟ್ಟದಲ್ಲಿ ದೊಡ್ಡ ಜಾಲವೊಂದು ಬಯಲಿಗೆ ಬಂದಿದ್ದು, ಪ್ರಾಥಮಿಕ ಹಂತದಲ್ಲಿ ಸೈಬರ್ ಕ್ರೈಂ ಪೊಲೀಸರು 84 ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿ 5 ಕೋಟಿ ರೂ.ಗಳಿಗೂ ಹೆಚ್ಚಿನ ಹಣವನ್ನು ಸಂರಕ್ಷಿಸಿದ್ದಾರೆ. ಕೃತ್ಯದಲ್ಲಿ ಹೈಟೆಕ್ ವಂಚಕರು ಭಾಗಿಯಾಗಿದ್ದರೆ, ವಿದ್ಯಾವಂತರು, ಸುಶಿಕ್ಷಿತರೇ ಬಲಿಪಶುಗಳಾಗಿರುವುದು ಮತ್ತೊಂದು ಕುಚೋದ್ಯವಾಗಿದೆ. ಕಳೆದ ಏ.28ರಂದು ವ್ಯಕ್ತಿಯೊಬ್ಬರು ಬೆಂಗಳೂರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿ, ದಿ ವೈನ್ ಗ್ರೂಪ್ ಎಂಬ ಸಾಲದ ಆ್ಯಪ್‍ನಲ್ಲಿ 8.5 ಲಕ್ಷ ಹಣ ಹೂಡಿಕೆ ಮಾಡಿ ವಂಚನೆಗೊಳಗಾಗಿರುವುದಾಗಿ ತಿಳಿಸಿದ್ದರು.

ಈ ಮೊದಲು ದೂರುದಾರರ ಸ್ನೇಹಿತೆ ಈ ಆ್ಯಪ್‍ನಲ್ಲಿ ಹಣ ಹೂಡಿಕೆ ಮಾಡಿ ಲಾಭ ಮಾಡಿಕೊಂಡಿರುವುದನ್ನು ತಿಳಿದುಕೊಂಡು ತಾನೂ ಕೂಡ ಲಾಭ ಮಾಡುವ ಆಸೆಯಿಂದ ಆ್ಯಪ್‍ನ್ನು ಡೌನ್‍ಲೋಡ್ ಮಾಡಿಕೊಂಡು ಅದರಲ್ಲಿದ್ದ ಆಕರ್ಷಕ ಇನ್‍ಸ್ಟಾಲ್‍ಮೆಂಟ್ ಆಫರ್‍ಗಳಿಗೆ ಮರುಳಾಗಿ ಹಣ ಹೂಡಿಕೆ ಮಾಡಲು ಒಪ್ಪಿದ್ದೆ. ತನ್ನ ಬ್ಯಾಂಕ್ ಖಾತೆಯಿಂದ ಆರೋಪಿಗಳು ಹೇಳಿದ ಮಹಾರಾಷ್ಟ್ರದ ಐಸಿಐಸಿಐ ಬ್ಯಾಂಕ್ ಶಾಖೆಗೆ ಹಾಗೂ ವಿವಿಧ ಯುಪಿಐ ಐಡಿಗಳಿಗೆ ಹಂತ ಹಂತವಾಗಿ 8.50 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದಾಗಿ ತಿಳಿಸಿದ್ದಾರೆ.

BIG NEWS : ದೆಹಲಿಯಲ್ಲಿ ಐಸಿಸ್ ಶಂಕಿತ ಉಗ್ರರು, ರಕ್ತದೋಕುಳಿಗೆ ಪ್ಲಾನ್..!

ದೂರು ದಾಖಲಿಸಿ ತನಿಖೆ ಕೈಗೆತ್ತಿಕೊಂಡ ಸೈಬರ್ ಕ್ರೈಂ ಪೊಲೀಸ್ ಅಕಾರಿಗಳು ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿ ಬಳಕೆಯಾಗಿರುವುದನ್ನು ಪತ್ತೆಹಚ್ಚಿದ್ದಾರೆ.ಖಾತೆದಾರರ ವಿವರಗಳನ್ನು ಬೆನ್ನಟ್ಟಿದಾಗ ಆರೋಪಿಗಳ ಮಾಹಿತಿ ತಿಳಿದುಬಂದಿದೆ. ವಂಚಕರು ವ್ಯಾಟ್ಸಪ್, ಟೆಲಿಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಖಾತೆಗಳು ಹಾಗೂ ಗುಂಪುಗಳನ್ನು ರಚಿಸಿ ಅಮಾಯಕರನ್ನು ಸೆಳೆಯುತ್ತಿದ್ದರು.

ಅವರಿಂದ ಹಣ ಹೂಡಿಕೆ ಮಾಡಿಸಿಕೊಳ್ಳಲು ನಕಲಿ ದಾಖಲೆಗಳನ್ನು ನೀಡಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿತ್ತು. ತಮಿಳುನಾಡಿನಲ್ಲಿ ತೆರೆಯಲಾಗಿದ್ದ ಖಾತೆಯೊಂದರಿಂದ ಬೆಂಗಳೂರಿನ ಸುಬ್ಬು ಎಂಟರ್‍ಪ್ರೈಸಸ್ ಎಂಬ ಖಾತೆಗೆ ಹಣ ವರ್ಗಾವಣೆಯಾಗಿರುವ ಸುಳಿವು ದೊರೆತಿದೆ.ಅದರ ಜಾಡು ಹಿಡಿದು ತನಿಖೆ ನಡೆಸಿದಾಗ ಸುಬ್ಬು ಎಂಟರ್‍ಪ್ರೈಸಸ್‍ನ ಮಾಲೀಕರು, ಸ್ನೇಹಿತರೊಬ್ಬರು ತಮಗೆ ಅರಿವಿಲ್ಲದಂತೆ ದಾಖಲಾತಿಗಳನ್ನು ಪಡೆದು ಬ್ಯಾಂಕ್ ಖಾತೆ ತೆರೆದು ಕೃತ್ಯ ನಡೆಸಿದ್ದಾರೆಂಬ ಶಂಕೆ ವ್ಯಕ್ತಪಡಿಸಿದ್ದರು.

ಸದರಿ ವ್ಯಕ್ತಿಯ ಮಾಹಿತಿ ಆಧರಿಸಿ ಆರಂಭದಲ್ಲಿ ಐದು ಆರೋಪಿಗಳನ್ನು ಬಂಸಲಾಗಿತ್ತು. ಇಂತಹ ಕೃತ್ಯದಲ್ಲಿ ಭಾಗಿಯಾದ 17 ಮಂದಿ ಆರೋಪಿಗಳು ಬೆಂಗಳೂರಿನಲ್ಲಿದ್ದು, ಅವರುಗಳ ವಿರುದ್ಧ ಸೈಬರ್ ಪೊಲೀಸ್ ಠಾಣೆಯಲ್ಲಿ 2, ಆಗ್ನೇಯ ವಿಭಾಗದಲ್ಲಿ 3, ಈಶಾನ್ಯ ವಿಭಾಗದಲ್ಲಿ 4, ಉತ್ತರ ವಿಭಾಗದಲ್ಲಿ 8 ಪ್ರಕರಣಗಳು ದಾಖಲಾಗಿವೆ.

ಈ ಪ್ರಕರಣದಲ್ಲಿ ಪತ್ತೆಯಾದ ಬ್ಯಾಂಕ್ ಖಾತೆಗಳ ಬಗ್ಗೆ ಪರಿಶೀಲಿಸಿದಾಗ ನ್ಯಾಷನಲ್ ಸೈಬರ್ ಕ್ರೈಂ ರಿಪೋಟಿಂಗ್ ಪೋರ್ಟಲ್‍ನಲ್ಲಿ ವಿವಿಧ ರಾಜ್ಯಗಳಿಂದ 5,013 ದೂರುಗಳು ದಾಖಲಾಗಿರುವ ಮಾಹಿತಿ ದೊರೆತಿದೆ.

ಅದರಲ್ಲಿ ಆಂಧ್ರಪ್ರದೇಶ 296, ಬಿಹಾರ 200, ದೆಹಲಿ 194, ಗುಜರಾತ್ 642, ಕರ್ನಾಟಕ 487, ಕೇರಳ 188, ಮಹಾರಾಷ್ಟ್ರ 332, ರಾಜಸ್ಥಾನ 270, ತಮಿಳುನಾಡು 472, ತೆಲಂಗಾಣ 719, ಉತ್ತರಪ್ರದೇಶ 505 ಹಾಗೂ ಪಶ್ಚಿಮಬಂಗಾಳದಲ್ಲಿ 118 ಸೇರಿ ಎಲ್ಲಾ ರಾಜ್ಯಗಳಲ್ಲೂ ವಂಚನೆ ನಡೆದಿರುವ ವರದಿಗಳಾಗಿವೆ. ಸರಿಸುಮಾರು 854 ಕೋಟಿ ರೂ. ವಂಚನೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ 13 ಮೊಬೈಲ್, 7ಲ್ಯಾಪ್‍ಟಾಪ್ , ಪ್ರಿಂಟರ್, ಸ್ವೈಪಿಂಗ್ ಮಿಷನ್, ಹಾರ್ಡ್‍ಡಿಸ್ಕ್, ಹಲವಾರು ಬ್ಯಾಂಕ್ ಪಾಸ್‍ಬುಕ್‍ಗಳು ಮತ್ತು ಇತರ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ.

BIG NEWS : ದೆಹಲಿಯಲ್ಲಿ ಐಸಿಸ್ ಶಂಕಿತ ಉಗ್ರರು, ರಕ್ತದೋಕುಳಿಗೆ ಪ್ಲಾನ್..!

ನವದೆಹಲಿ,ಸೆ.30- ರಕ್ತದೋಕುಳಿ ನಡೆಸಲು ಹೊಂಚು ಹಾಕಿರುವ ಮೂವರು ಐಸಿಸ್ ಶಂಕಿತ ಉಗ್ರರು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಇದೀಗ ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಹಾಗೂ ದೆಹಲಿ ಪೊಲೀಸರು ನವದೆಹಲಿಯಲ್ಲಿ ಇಂಚಿಂಚು ಜಾಗವನ್ನು ಜಾಲಾಡುತ್ತಿದ್ದು, ಐಸಿಸ್ ಆತ್ಮಾಹುತಿ ದಳದ ಉಗ್ರರ ಎಡೆಮುರಿ ಕಟ್ಟಲು ಕಾರ್ಯಾಚರಣೆಗೆ ಮುಂದಾಗಿದೆ.

ಈ ಮೂವರು ಆತ್ಮಾಹುತಿ ದಳದ ಐಸಿಸ್ ಉಗ್ರರ ಸುಳಿವು ನೀಡಿದವರಿಗೆ ಮೂರು ಲಕ್ಷ ರೂ.ಬಹುಮಾನವನ್ನು ನೀಡಲಾಗುವುದು. ಅಲ್ಲದೆ ಅವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಎನ್‍ಐಎ ಘೋಷಣೆ ಮಾಡಿದೆ.ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ ಸ್ಥಾಪನೆ ಮಾಡಬೇಕೆಂಬ ಏಕೈಕ ಗುರಿಯೊಂದಿಗೆ ಮೂವರು ಶಂಕಿತ ಉಗ್ರರು ನವದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ ಎಂದು ಗುಪ್ತಚರ ವಿಭಾಗ ಎನ್‍ಐಎಗೆ ಮಾಹಿತಿ ನೀಡಿದೆ.

ಅಲಾಸ್ಕಾದಲ್ಲಿ ಅಮೆರಿಕ-ಭಾರತ ಸೇನೆಗಳ ಜಂಟಿ ಸಮರಾಭ್ಯಾಸ

ದೆಹಲಿ ಸೇರಿದಂತೆ ಮತ್ತಿತರ ಕಡೆ ಉಗ್ರ ಚಟುವಟಿಕೆಗಳು ಮತ್ತು ರಕ್ತಪಾದ ನಡೆಸುವುದು ಇವರ ಉದ್ದೇಶವಾಗಿದೆ. ಗಣ್ಯ ರಾಜಕೀಯ ವ್ಯಕ್ತಿಗಳು, ಉದ್ಯಮಿಗಳು, ಪ್ರಮುಖ ಸರ್ಕಾರಿ ಕಟ್ಟಡಗಳು, ಮಂದಿರಗಳು, ದೇವಸ್ಥಾನಗಳು ಸೇರಿದಂತೆ ಮತ್ತಿತರ ಕಡೆ ದಾಳಿ ನಡೆಸುವ ಹೊಂಚು ಹಾಕಿದ್ದಾರೆ ಎಂದು ಎನ್‍ಐಎ ಹೇಳಿದೆ.

ಪ್ರಸ್ತುತ ದೆಹಲಿ ಪೊಲೀಸರ ವಶದಲ್ಲಿರುವ ಶಂಕಿತ ಐಸಿಸ್ ಉಗ್ರ ಮೊಹಮ್ಮದ್ ಷಹಾನ್‍ವಾಜ್ ನೀಡಿರುವ ಸುಳಿವಿನಂತೆ ಮೂವರು ಉಗ್ರರು ದೆಹಲಿಯಲ್ಲಿ ಬೀಡುಬಿಟ್ಟಿರುವುದು ನಿಜ. ಅವರ ಬಗ್ಗೆ ನಾನು ಯಾವುದೇ ಮಾಹಿತಿಯನ್ನು ನೀಡುವುದಿಲ್ಲ ಎಂದು ಹೇಳಿದ್ದಾನೆ.ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಈತ ದಕ್ಷಿಣ ದೆಹಲಿಯ ಇಬ್ಬರು ಯುವಕರಾದ ಅಬ್ದುಲ್ಲಾ ಮತ್ತು ರಿಜ್ವಾನ್ ಎಂಬುವರು ಕೂಡ ಈ ಉಗ್ರರಿಗೆ ಕೈ ಜೋಡಿಸರಬಹುದೆಂಬ ಶಂಕೆ ಇದೆ.

ಅಲಾಸ್ಕಾದಲ್ಲಿ ಅಮೆರಿಕ-ಭಾರತ ಸೇನೆಗಳ ಜಂಟಿ ಸಮರಾಭ್ಯಾಸ

ಕೇಂದ್ರ ಗುಪ್ತಚರ ವಿಭಾಗದ ಅಕಾರಿಗಳು ನೀಡಿರುವ ಮಾಹಿತಿಯಂತೆ ಇವರೇ ಶಂಕಿತ ಐಸಿಸ್ ಆತ್ಮಾಹುತಿ ದಳದ ಉಗ್ರರಿರಬಹುದೆಂದು ಶಂಕಿಸಲಾಗಿದೆ. ಮೂಲತಃ ಒಮನ್ ದೇಶದವನಾದ ಅಬ್ದುಲ್ಲಾ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಈತನನ್ನು ಇಲ್ಲಿಂದ ಗಡಿಪಾರು ಮಾಡಬೇಕೆಂದು ವಿದೇಶಾಂಗ ವ್ಯವಹಾರಗಳ ಇಲಾಖೆಗೆ ಎನ್‍ಐಎ ಮನವಿ ಮಾಡಿದೆ. ಪುಣೆಯ ಕ್ವಾಂದ್ವ ಎಂಬ ಪ್ರದೇಶದಲ್ಲಿ ಅಂಗಡಿಯೊಂದನ್ನು ತೆರೆದಿದ್ದ ಈತ ಸುಧಾರಿತ ಸ್ಪೋಟಕ ವಸ್ತುಗಳನ್ನು ತಯಾರಿಸುವಲ್ಲಿ ನಿಪುಣನಾಗಿದ್ದ. ಕೆಲ ತಿಂಗಳ ಹಿಂದೆ ದೇಶದ 100 ಭಾಗಗಳಲ್ಲಿ ಎನ್‍ಐಎ ದಾಳಿ ನಡೆಸಿದ ವೇಳೆ ಇದು ಹೊರಬಿದ್ದಿತ್ತು.

ಕಳೆದ ಜುಲೈ 17ರಂದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಶಹಾನ್‍ವಾಜ್ , ಅಬ್ದುಲ್ಲಾ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಈ ಇಬ್ಬರು ದೇಶದ ನಾನಾ ಕಡೆ ಸ್ಪೋಟಿಸುವುದು ಹಾಗೂ ಜನನಿಬಿಡ ಪ್ರದೇಶದಲ್ಲಿ ಬಾಂಬ್ ಸೋಟಿಸಿಕೊಳ್ಳಲು ಹೋಂಚು ಹಾಕಿದ್ದರು. ಶಂಕಿತ ಉಗ್ರರು ಯಾರೆಂಬುದನ್ನು ಎನ್‍ಐಎ ದೆಹಲಿ ವಿಶೇಷ ಘಟಕ ಸಿಸಿಬಿ ಪೊಲೀಸರು ಬಹಿರಂಗಪಡಿಸುತ್ತಿಲ್ಲ. ರಕ್ತಪಾತವಾಗುವ ಮೊದಲೇ ಈ ಮೂವರನ್ನು ಎಡೆಮುರಿ ಕಟ್ಟಲು ಕಾರ್ಯಾಚರಣೆ ನಡೆಸಲಾಗುತ್ತಿದೆ.

ಗಣೇಶೋತ್ಸವ ಬ್ಯಾನರ್ ಹರಿದು ಹಾಕಿ , ದಾಂಧಲೆ ಮಾಡಿದ ಮೂವರ ಬಂಧನ

ವಿಜಯಪುರ, ಸೆ.30: ಶಿವಾಜಿ ವೃತ್ತದ ಬಳಿ ಹಾಕಲಾಗಿದ್ದ ಗಣೇಶೋತ್ಸವದ ಬ್ಯಾನರ್‍ಗಳನ್ನು ಹರಿದು ಹಾಕಿ , ದಾಂಧಲೆ ನಡೆಸಿದ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಶಾಸಕ ಬಸವರಾಜು ಪಾಟೀಲ್ ಯತ್ನಾಳ್, ಶಿವಾಜಿ , ಗಣೇಶನ ಚಿತ್ರ ಇರುವ ದೊಡ್ಡ ಬ್ಯಾನರ್ ಅನ್ನು ಹಾಕಲಾಗಿತ್ತು ಇದನ್ನು ಕಳೆದ 2 ದಿನಗಳ ಹಿಂದೆ ಕೆಲ ಕಿಡಿಗೇಡಿಗಳು ಹರಿದು ಹಾಕಿದರು. ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಸದ್ಯದಲ್ಲೇ ಚುನಾವಣೆ ನಡೆಯಲಿರುವ ಪಂಚರಾಜ್ಯಗಳಲ್ಲಿ ಮೋದಿ ಮಿಂಚಿನ ಸಂಚಾರ

ಡಿಸಿ ಕಚೇರಿ ಬಳಿ ಬಿಜೆಪಿ ಪಾಲಿಕೆ ಸದಸ್ಯರು ಹಾಗೂ ಹಿಂದು ಪರ ಮುಖಂಡರು ಪ್ರತಿಭಟನೆ ನಡೆಸಿ ತಪ್ಪಿತಸ್ಥರ ಬಂಧನಕ್ಕೆ ಒತ್ತಾಯಿಸಿದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ವಿಜಯಪುರ ಪೊಲೀಸರು ಯಾಸಿನ್, ಮೊಹಮ್ಮದ್, ಸೋಯಲ್ ಎಂಬ ಮೂವರನ್ನು ಬಂಧಿಸಿದ್ದಾರೆ.

ಅಲಾಸ್ಕಾದಲ್ಲಿ ಅಮೆರಿಕ-ಭಾರತ ಸೇನೆಗಳ ಜಂಟಿ ಸಮರಾಭ್ಯಾಸ

ಅಲಾಸ್ಕಾ,ಸೆ.30-ಯುದ್ಧ ಅಭ್ಯಾಸದ ಭಾಗವಾಗಿ ಭಾರತ ಮತ್ತು ಯುಎಸ್ ಸೇನೆಗಳು ಅಲಾಸ್ಕಾದಲ್ಲಿ ಯುದ್ಧತಂತ್ರದ ಜಂಟಿ ಸಮರಾಭ್ಯಾಸ ನಡೆಸಿದವು. ಈ ಸಮರಾಭ್ಯಾಸದಲ್ಲಿ ಭಾಗವಹಿಸುವ ಭಾರತೀಯ ಸೇನಾ ತುಕಡಿಗಳು ಇತ್ತೀಚೆಗೆ ಅಲಾಸ್ಕಾಗೆ ಆಗಮಿಸಿದ್ದವು.

ಈ ವ್ಯಾಯಾಮವು ಅತ್ಯುತ್ತಮ ಅಭ್ಯಾಸಗಳನ್ನು ವಿನಿಮಯ ಮಾಡಿಕೊಳ್ಳುತ್ತದೆ, ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಎರಡು ಸೇನೆಗಳ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತದೆ.

ಮಕ್ಕಳ ಜೊತೆ ಸೇರಿ ಪತ್ನಿಯ ತಲೆ ಕಡಿದ ಪತಿ..!

ಈ ತರಬೇತಿಯು ಅತ್ಯುನ್ನತ ಗುಣಮಟ್ಟವನ್ನು ಪ್ರದರ್ಶಿಸಲು ಮತ್ತು ಭಾಗವಹಿಸುವ ರಾಷ್ಟ್ರಗಳ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಅನುಕೂಲವಾಯಿತು ಎಂದು ಸೇನೆ ಎಕ್ಸ್ ಮಾಡಿದೆ.

ಈ ವ್ಯಾಯಾಮವು ಅತ್ಯುತ್ತಮ ಅಭ್ಯಾಸಗಳನ್ನು ವಿನಿಮಯ ಮಾಡಿಕೊಳ್ಳುತ್ತದೆ ಮತ್ತು ಪರಸ್ಪರ ಕಲಿಯಲು ಮತ್ತು ಎರಡು ಸೇನೆಗಳ ನಡುವಿನ ಬಾಂಧವ್ಯವನ್ನು ಬಲಪಡಿಸಲು ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸುತ್ತದೆ, ಜಂಟಿ ಸಮರಾಭ್ಯಾಸವು ಸೆ.25 ರಿಂದ ಅಕ್ಟೋಬರ್ 8 ರವರೆಗೆ ಅಮೆರಿಕಾದ ಅಲಾಸ್ಕಾದ -ಪೋರ್ಟ್ ವೈನ್‍ರೈಟ್‍ನಲ್ಲಿ ನಡೆಯಲಿದೆ.

ಉಜ್ಜಯಿನಿ ಅತ್ಯಾಚಾರ ಪ್ರಕರಣ, ಬಾಲಕಿಗೆ ಸಹಾಯ ಮಾಡದವರ ವಿರುದ್ಧ ಕೇಸ್

ನವದೆಹಲಿ, ಸೆ.30- ಉಜ್ಜಯಿನಿಯಲ್ಲಿ ಅತ್ಯಾಚಾರಕ್ಕೊಳಗಾದ 15 ವರ್ಷದ ಬಾಲಕಿಗೆ ಸಹಾಯ ಮಾಡದವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದು ಮಧ್ಯಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ ಬಾಲಕಿಯು ಮನೆಮನೆಗೆ ತೆರಳಿ ಅಂಗಲಾಚಿದರೂ ಸಹಾಯಕ್ಕೆ ಬಾರದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಚಿಂತನೆ ನಡೆದಿದೆ ಎಂದು ಅವರು ಹೇಳಿದ್ದಾರೆ.

ತೀವ್ರ ರಕ್ತಸ್ರಾವವಾಗುತ್ತಿದ್ದರೂ ಆಕೆಗೆ ಸಹಾಯ ಮಾಡಲು ಮುಂದಾಗದ ಜನರ ವಿರುದ್ಧ ಮಕ್ಕಳ ಲೈಂಗಿಕ ದೌರ್ಜನ್ಯ ಕಾನೂನುಗಳಡಿ ಪ್ರಕರಣ ದಾಖಲಿಸಬಹುದು ಎಂದಿದ್ದಾರೆ.ಅಪರಾಧದ ಕುರಿತು ಗೊತ್ತಿದ್ದರೂ, ಪೊಲೀಸರಿಗೆ ಮಾಹಿತಿ ನೀಡದೇ ಇರುವುದು ಕಾನೂನು ರೀತಿ ತಪ್ಪು. ಅತ್ಯಾಚಾರದ ಬಗ್ಗೆ ಮಾಹಿತಿ ನೀಡಲು ವಿಫಲರಾದವರು ಮಕ್ಕಳ ಸಂರಕ್ಷಣಾ ಕಾಯ್ದೆಯಡಿ ಕ್ರಮ ಎದುರಿಸಬಹುದು ಎಂದು ಹೇಳಿದ್ದಾರೆ.

ಮಕ್ಕಳ ಜೊತೆ ಸೇರಿ ಪತ್ನಿಯ ತಲೆ ಕಡಿದ ಪತಿ..!

ಈ ಕುರಿತು ಮಾತನಾಡಿರುವ ಉಜ್ಜಯಿನಿಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಂತ್ ಸಿಂಗ್ ರಾಥೋಡ್, ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯ ಬಗ್ಗೆ ಕಾಳಜಿ ತೋರಿಸದ ವ್ಯಕ್ತಿಗಳನ್ನು ಗುರುತಿಸಲಾಗಿದೆ. ಆಟೋ ರಿಕ್ಷಾ ಚಾಲಕನೊಬ್ಬನಿಗೆ ಸಂತ್ರಸ್ತೆಯ ಕುರಿತು ತಿಳಿದಿದ್ದರೂ ಆತ ಪೊಲೀಸರಿಗೆ ಮಾಹಿತಿ ನೀಡಿಲ್ಲ. ಆತನ ವಿರುದ್ಧವೂ ಕ್ರಮ ಕೈಗೊಳ್ಳಲು ನಾವು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.

ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಭರತ್ ಸೋನಿಗೆ ಮರಣದಂಡನೆ ಶಿಕ್ಷೆಯಾಗಬೇಕು. ಸಾವಿನ ಹೊರತಾಗಿ ಆತನಿಗೆ ಬೇರೆ ಶಿಕ್ಷೆ ಬೇಕಿಲ್ಲ. ಆತ ಎಸಗಿರುವುದು ಘೋರ ತಪ್ಪು. ಆತನಿಗೆ ಮರಣದಂಡನೆಯಂತಹ ಶಿಕ್ಷೆಯೇ ಸರಿ. ನಾನಾಗಿದ್ದರೆ ಆತನನ್ನು ಕೊಲ್ಲುತ್ತಿದ್ದೆ ಎಂದು ಸ್ವತಃ ಆರೋಪಿಯ ತಂದೆ ರಾಜಾ ಸೋನಿ ಹೇಳಿದ್ದಾರೆ. ಆರೋಪಿಯೂ ಆಟೋ ರಿಕ್ಷಾ ಚಾಲಕನಾಗಿದ್ದು, ಸುಮಾರು 700 ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಮಾಡುವ ಮೂಲಕ ಆತನನ್ನು ಪತ್ತೆ ಹಚ್ಚಲಾಗಿದೆ.

ಆಟೋ ರಿಕ್ಷಾ ಚಾಲಕನನ್ನು ರಾಕೇಶ್ ಮಾಳವೀಯ ಎಂಬಾತ ತನ್ನ ವಾಹನದಲ್ಲಿ ಸಂತ್ರಸ್ತ ಯುವತಿಯನ್ನು ಕರೆದುಕೊಂಡು ಹೋಗಿದ್ದಾನೆ. ಆಟೋ ಸೀಟಿನಲ್ಲಿ ರಕ್ತದ ಕಲೆಗಳನ್ನು ಕಂಡುಬಂದರೂ, ಆತ ಪೊಲೀಸರಿಗೆ ಮಾಹಿತಿನೀಡಿಲ್ಲ. ಆತನ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಸದ್ಯದಲ್ಲೇ ಚುನಾವಣೆ ನಡೆಯಲಿರುವ ಪಂಚರಾಜ್ಯಗಳಲ್ಲಿ ಮೋದಿ ಮಿಂಚಿನ ಸಂಚಾರ

ನವದೆಹಲಿ,ಸೆ.30-ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿ ಪುನಃ 2024ರ ಲೋಕಸಭೆ ಸಮರದಲ್ಲಿ ಮೂರನೇ ಬಾರಿಗೆ ಅಧಿಕಾರ ಹಿಡಿಯಲು ಮುಂದಾಗಿರುವ ಪ್ರಧಾನಿ ನರೇಂದ್ರಮೋದಿ ಅವರು ಇಂದಿನಿಂದ ಅ.6ರವರೆಗೆ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.

ಯಾವುದೇ ಕ್ಷಣದಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಘಡ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕವನ್ನು ಘೋಷಿಸುವ ಸಾಧ್ಯತೆ ಇದೆ.ಹೀಗಾಗಿ ಪ್ರಧಾನಿ ಮೋದಿ ಅವರು ಇಂದಿನಿಂದ ಅ.6ರವರೆಗೆ ಈ ಐದೂ ರಾಜ್ಯಗಳಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದು, ಚುನಾವಣಾ ಪ್ರಚಾರಕ್ಕೂ ಕಹಳೆ ಮೊಳಗಿಸಿದ್ದಾರೆ.

ಇಂದು ಛತ್ತೀಸ್‍ಘಡ ಬಿಲಾಸ್‍ಪುರ್‍ಗೆ ಭೇಟಿ ಕೊಟ್ಟಿರುವ ಮೋದಿಯವರು ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.ಇದರ ಬೆನ್ನಲೇ ಅ.3ರಂದು ಮತ್ತೆ ಛತ್ತೀಸ್‍ಘಡಕ್ಕೆ ಆಗಮಿಸಲಿರುವ ಮೋದಿ ಅವರು ಬಸ್ತರ್ ಜಿಲ್ಲೆಯ ಜಗದಲ್‍ಪುರ್‍ನಲ್ಲಿ ಸಾರ್ವಜನಿಕ ಸಮಾರಂಭ ಉದ್ದೇಶಿಸಿ ಮಾತನಾಡಲಿದ್ದಾರೆ. ಅ.1ರಂದು ಮೋದಿಯವರು ತೆಲಂಗಾಣದ ಮೆಹಬೂಬ್ ನಗರಕ್ಕೆ ಭೇಟಿ ಕೊಡಲಿದ್ದು, ಸುಮಾರು 13,500 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಕೊಡುವರು.

ಮಕ್ಕಳ ಜೊತೆ ಸೇರಿ ಪತ್ನಿಯ ತಲೆ ಕಡಿದ ಪತಿ..!

ರಸ್ತೆ, ರೈಲು, ಮೆಟ್ರೋಲಿಯಂ, ನೈಸರ್ಗಿಕ ಅನಿಲ, ಉನ್ನತ ಶಿಕ್ಷಣ ಸೇರಿದಂತೆ ಪ್ರಮುಖ ಆದ್ಯತಾ ವಲಯದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಅಲ್ಲದೆ ವಿಡಿಯೋ ಕಾನರೆನ್ಸ್ ಮೂಲಕ ರೈಲ್ವೆ ಯೋಜನೆಗಳಿಗೂ ಹಸಿರು ನಿಶಾನೆ ತೋರಲಿದ್ದಾರೆ. ಇದೇ ಸಂದರ್ಭದಲ್ಲಿ ಮೋದಿ ಅವರು ಹೈದರಾಬಾದ್‍ನಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಹೈದರಾಬಾದ್ ವಿಶ್ವವಿದ್ಯಾನಿಲಯ ವ್ಯಾಪ್ತಿಯಡಿ ಬರುವ ಸ್ಕೂಲ್ ಆಫ್ ಎಕಾನಾಮಿಕ್ಸ್ ಉದ್ಘಾಟನೆ ಮಾಡುವರು.

ಅ.3ರಂದು ಪುನಃ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಗೆ ಆಗಮಿಸಲಿರುವ ಮೋದಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ ಸಾರ್ವಜನಿಕ ರ್ಯಾಲಿಯಲ್ಲಿ ಭಾಗಿಯಾಗಿ ಭಾಷಣ ಮಾಡಲಿದ್ದಾರೆ. ಅ.2ರಂದು ಮಧ್ಯಪ್ರದೇಶದ ಗ್ವಾಲಿಯರ್‍ಗೆ ಭೇಟಿ ನೀಡಲಿರುವ ನರೇಂದ್ರಮೋದಿ ಬಿಜೆಪಿಯ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೆ ಜಬಲ್ಪುರ ಮತ್ತು ಜಗದಲ್ಪುರ್‍ಗೂ ಭೇಟಿ ಕೊಡಲಿದ್ದಾರೆ.

ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದ ಚಿತ್ತೋರ್‍ಘಡಕ್ಕೆ ಅ.2ರಂದು ಭೇಟಿ ನೀಡಲಿರುವ ಮೋದಿ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಪ್ರಾಬಲ್ಯವಿರುವ ಈ ಪ್ರದೇಶದಲ್ಲಿ ಬಿಜೆಪಿ ಪರವಾಗಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಹೀಗೆ ಸತತ ಒಂದು ವಾರಗಳ ಕಾಲ ವಿವಿಧ ರಾಜ್ಯಗಳಿಗೆ ಭೇಟಿ ಕೊಡಲಿರುವ ಮೋದಿ ತಮ್ಮ ಪ್ರಚಾರದ ವೇಳೆ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಲಿದ್ದಾರೆ.

ಕಾವೇರಿ ಆದೇಶದ ಕುರಿತು ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ : ಸಚಿವ ಎಚ್.ಕೆ.ಪಾಟೀಲ್

ಹುಬ್ಬಳ್ಳಿ,ಸೆ.30- ತಮಿಳುನಾಡಿಗೆ ಕಾವೇರಿ ಮ್ಯಾನೇಜ್ಮೆಂಟ್ ಪ್ರಾಧಿಕಾರ ಮತ್ತೇ ನೀರು ಬಿಡಬೇಕು ಎಂಬ ಆದೇಶ ಕುರಿತು ನಾವು ಸುಪ್ರೀಂ ಕೋರ್ಟ್ ನಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ಹೇಳಿದರು.

ಈ ಕುರಿತು ಇಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರ ಬಹಳ ನೋವು ತಂದಿದ್ದು ಮತ್ತೇ ಕಾವೇರಿ ನಿರ್ವಹಣ ಅಭಿವೃದ್ಧಿ ಪ್ರಾಕಾರ ಮತ್ತೇ ನೀರು ಬಿಡಸಲು ಆದೇಶ ಮಾಡಿದ್ದು ನಿಜ. ಆದರೆ ಇದರಿಂದ ನಮಗೂ ಸಮಸ್ಯೆ ಎದುರಾಗಿದೆ ಎಂದರು.

ಈ ಕುರಿತು ನಿನ್ನೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ವೆಂಕಟಾಚಲ, ಶಿವರಾಜ್ ಪಾಟೀಲ್, ರವೀಂದ್ರ, ಶೆಟ್ಟಿ ಅವರ ಜೊತೆ ಚರ್ಚೆ ಮಾಡಲಾಗಿದ್ದು ಅವರ ಸಲಹೆ ಸೂಚನೆಗಳನ್ನು ಪಡೆಯಲಾಗಿದೆ.

ಮಕ್ಕಳ ಜೊತೆ ಸೇರಿ ಪತ್ನಿಯ ತಲೆ ಕಡಿದ ಪತಿ..!

ಏನೆಲ್ಲಾ ಕಾನೂನು ತೊಡಕು ಇವೆ ಆ ಬಗ್ಗೆ ಮಾಹಿತಿ ಪಡೆಯಲಾಗಿದೆ ಸರಿಯಾಗಿ ಮತ್ತು ಮನವರಿಕೆ ಆಗುವಂತೆ ನಮ್ಮ ಸಮಸ್ಯೆಗೆ ಏನು ಪರಿಹಾರ ಆ ಬಗ್ಗೆ ಸಹ ಮಾಹಿತಿ ಪಡೆಯಲಾಗಿದೆ ಎಂದ ಅವರು ರಾಜ್ಯದ ಹಿತಾಸಕ್ತಿಗೋಸ್ಕರ ಮಾಡುತ್ತೇವೆ ಆದರೆ ಕೇಂದ್ರ ಸರ್ಕಾರ ಮೌನ ಸರಿಯಲ್ಲ ಸಂಕಷ್ಟ ಸೋತ್ರ ಕಂಡು ಹಿಡಿಯಬೇಕಾಗಿದೆ , ಈಗಲಾದರು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶ ಮಾಡಬೇಕು ಎಂದು ಒತ್ತಯಿಸಿದರು. ಕೆಆರ್‍ಎಸ್ ಹಾಗು ಕವೇರಿ ಜಲಾನಯನ ಭಾಗದ ಜಲಾಶಯದಲ್ಲಿ ನೀರು ಕಡಿಮೆ ಇದೆ ಈ ಬಗ್ಗೆ ಮನವರಿಕೆ ಮಾಡಿಕೊಡಬೇಕು ಸಂಕಷ್ಟ ಸೋತ್ರವೇ ಇದಕ್ಕೆ ಪರಿಹಾರ ಆದ್ದರಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂದೆ ಬರಬೇಕು ಎಂದರು.

ದೇಶದಲ್ಲಿ ಏಕಕಾಲದಲ್ಲಿ ಚುನಾವಣೆಗೆ ಕೇಂದ್ರ ಕಾನೂನು ಆಯೋಗದ ಚಿಂತನೆ ಇನ್ನು ಕೇಂದ್ರ ಸರ್ಕಾರ ಹಾಗೂ ಕಾನೂನು ಆಯೋಗದೇಶದಲ್ಲಿ ಏಕಕಾಲದಲ್ಲಿ ಚಿಂತನೆ ಮಾಡಿದ್ದು ಸರಿಯಲ್ಲಲೋಕಸಭಾ ಚುನಾವಣೆ ಮುಂದೂಡಲು ಈ ಹುನ್ನಾರ ಎಂದು ಗಂಭೀರ ಸ್ವರೂಪದ ಆರೋಪ ಮಾಡಿದರು.

ಲೋಕಸಭೆ ಅವ ಸಹ ಮುಂದೂಡುವ ಷಡ್ಯಂತ್ರ ಮಾಡಿದೆ ಎಂದ ಅವರು ನಾಲ್ಕು ವರ್ಷಗಳ ಏನು ಮಾಡಿದರಿ ಈಗ ಚುನಾವಣೆ ಬಂದಾಗ ಏಕೆ ಕೇಂದ್ರದ ಈ ನಿರ್ಧಾರ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಚುನಾವಣಾ ಆಯೋಗ ಎಚ್ಚರಿಕೆ ಹೆಜ್ಜೆ ಇಡಬೇಕು ಎಂದು ಸಹ ಅವರು ಸಲಹೆ ನೀಡಿದರು. ಮುಖಂಡರಾದ ಮಹೇಂದ್ರ ಸಿಂಘಿ, ವಸಂತ ಲದ್ವಾ ಮುಂತಾದವರು ಇದ್ದರು.

ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಸಂಕಷ್ಟ

ಹುಬ್ಬಳ್ಳಿ,ಸೆ.30- ಜಿಲ್ಲಾ ಪಂಚಾಯತ ಸದಸ್ಯ ಹಾಗೂ ಬಿಜೆಪಿ ನಾಯಕರಾಗಿದ್ದ ಯೋಗೀಶ್ ಗೌಡ ಕೊಲೆ ಪ್ರಕರಣ ಸಂಬಂಧ ಧಾರವಾಡ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಸಂಕಷ್ಟ ಎದುರಾಗಿದೆ. ಪ್ರಕರಣದ ಸಾಕ್ಷಿಯಾಗಿದ್ದ ಗುರುನಾಥಗೌಡರಿಗೆ ಅವರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಪೊಲೀಸರು ವಿನಯ್ ಕುಲಕರ್ಣಿ ಪರ ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿ ತನಿಖೆ ಮುಂದುವರಿಸುವಂತೆ ಆದೇಶಿಸಿದೆ.

ಅಸಮರ್ಪಕ ತನಿಖೆ ನಡೆಸಿದ ಧಾರವಾಡ ಉಪನಗರ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ತನಿಖೆ ಮುಂದುವರಿಸುವಂತೆ ಸೂಚಿಸಿದೆ. ದೂರುದಾರ ಗುರುನಾಥಗೌಡ ಸಾಕ್ಷ್ಯವಾಗಿ ಸಿಡಿ ನೀಡಿದ್ದರೂ ಪೊಲೀಸರು ಪರಿಗಣಿಸಿಲ್ಲ ಎಂಬುದನ್ನು ಕೋರ್ಟ್ ಬೊಟ್ಟು ಮಾಡಿದೆ.ಡಿಜಿಟಲ್ ಸಾಕ್ಷ್ಯ ಪರಿಗಣಿಸದೇ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ, ಆರೋಪಿಗಳನ್ನು ತನಿಖೆಗೆ ಒಳಪಡಿಸದೇ ಬೇಜವಾಬ್ದಾರಿ ತೋರಿದ್ದಾರೆ.

ಮಕ್ಕಳ ಜೊತೆ ಸೇರಿ ಪತ್ನಿಯ ತಲೆ ಕಡಿದ ಪತಿ..!

ತನಿಖೆಗೆ ಸರ್ಕಾರದ ಪೂರ್ವಾನುಮತಿ ಬೇಕೆಂದು ತಪ್ಪು ಮಾಹಿತಿ ನೀಡಲಾಗಿದೆ. ತನಿಖಾಕಾರಿ ಕಾನೂನು ಅರಿಯಲು ವಿಫಲರಾಗಿದ್ದಾರೆ. ಹೀಗಾಗಿ ಪ್ರಕರಣದ ಮರುತನಿಖೆ ನಡೆಸುವಂತೆ ನ್ಯಾಯಾಧೀಶಾದ ಜೆ.ಪ್ರೀತ್ ಅವರ ಫೀಠ ಆದೇಶ ಹೊರಡಿಸಿದೆ.ಕೊಲೆ ಪ್ರಕರಣ ಸಂಬಂಧ ಸಾಕ್ಷಿ ನಾಶಗೊಳಿಸುವ ಸಾಧ್ಯತೆ ಹಿನ್ನೆಲೆ ವಿನಯ್ ಕುಲಕರ್ಣಿ ಅವರಿಗೆ ಧಾರವಾಡ ಪ್ರವೇಶ ನಿರ್ಬಂಧಿಸಲಾಗಿದೆ. ಹಲವು ಬಾರಿ ಪ್ರವೇಶ ಕೋರಿ ಕೋರ್ಟ್‍ಗೆ ಮನವಿ ಸಲ್ಲಿಸಿದ್ದ ಕುಲಕರ್ಣಿಗೆ ಅನುಮತಿ ಸಿಗುತ್ತಿಲ್ಲ ಇತ್ತೀಚೆಗೆ ನಡೆದ ವಿಚಾರಣೆಯಲ್ಲಿ ಷರತ್ತು ಸಡಿಲಿಕೆ ಕೋರಿದ್ದ ಅರ್ಜಿಯನ್ನು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿತ್ತು.

ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದಾಗಲೂ ಷರತ್ತು ಸಡಿಲಿಸಿಲ್ಲ. ಚುನಾವಣೆ ವೇಳೆಯೂ ಕ್ಷೇತ್ರ ಭೇಟಿಗೆ ಅನುಮತಿ ನಿರಾಕರಿಸಲಾಗಿದೆ. ಈಗಾಗಲೇ ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ ಗುರುತರ ಆರೋಪ ಶಾಸಕ ವಿನಯ್ ಕುಲಕರ್ಣಿ ಮೇಲಿದ್ದು, ಪ್ರಮುಖ ಸಾಕ್ಷಿಗಳ ವಿಚಾರಣೆ ಇನ್ನೂ ಆರಂಭವಾಗಿಲ್ಲ. ಆದ್ದರಿಂದ ಬಿ ವರದಿ ಸಲ್ಲಿಕೆ ಸೂಕ್ತ ಸಮಯವಲ್ಲ ಎಂದು ನ್ಯಾಯಾಲಯ ಹೇಳಿದೆ.