Thursday, November 6, 2025
Home Blog Page 1934

ಕರ್ನಾಟಕ ಬಂದ್‍ಗೆ ಅನುಮತಿ ಇಲ್ಲ : ಗೃಹಸಚಿವ ಪರಮೇಶ್ವರ್

ಬೆಂಗಳೂರು, ಸೆ.28- ಕಾವೇರಿ ನದಿ ನೀರಿನ ಹಂಚಿಕೆ ವಿಷಯವಾಗಿ ಕರೆ ನೀಡಲಾಗಿರುವ ಕರ್ನಾಟಕ ಬಂದ್‍ಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಎಚ್ಚರಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಿನ ಹಿತಾಸಕ್ತಿ ವಿಷಯವಾಗಿ ಪ್ರತಿಭಟನೆ ಮಾಡಲು ಎಲ್ಲರಿಗೂ ಅಧಿಕಾರ ಇದೆ. ಈ ಹಿನ್ನೆಲೆಯಲ್ಲಿ ನಾಳೆ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೇವೆ. ಆದರೆ ಬಂದ್‍ಗೆ ಅನುಮತಿ ಇಲ್ಲ ಎಂದಿದ್ದಾರೆ.

ಮೊನ್ನೆ ಬೆಂಗಳೂರು ಬಂದ್ ನಡೆದಾಗ ಹೈಕೋರ್ಟ್ ರಾಜ್ಯಸರ್ಕಾರಕ್ಕೆ ಕಟ್ಟೆಚ್ಚರಿಕೆ ನೀಡಿದೆ. ಸುಪ್ರೀಂಕೋರ್ಟಿನ ತೀರ್ಪಿನ ಅನುಸಾರ ಪ್ರತಿಭಟನಾ ಮೆರವಣಿಗೆ ಹಾಗೂ ಬಂದ್‍ಗಳಿಗೆ ಅವಕಾಶ ಇಲ್ಲ. ಅಂತಹ ಯಾವುದೇ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು ಎಂದು ಹೈಕೋರ್ಟ್ ತಾಕೀತು ಮಾಡಿದೆ.

ಈ ಹಿನ್ನೆಲೆಯಲ್ಲಿ ನಾಳೆ ಕರ್ನಾಟಕ ಬಂದ್‍ಗೆ ಅವಕಾಶ ಇಲ್ಲ. ಪೊಲೀಸರು ಕಾನೂನು ಸುವ್ಯವಸ್ಥೆ ರಕ್ಷಣೆಗಾಗಿ ಅಗತ್ಯ ಇರುವ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ. ಬಲವಂತದ ಬಂದ್ ಮಾಡಲು ಮುಂದಾದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು. ಬಂದ್ ಮಾಡುವುದಾಗಿ 20-30 ಸಂಘಟನೆಗಳು ಹೇಳಿಕೆ ನೀಡಿವೆ. ಕೆಲವರು ತೆರೆದ ವಾಹನದಲ್ಲಿ ಬಂದ್‍ಗೆ ಬೆಂಬಲ ಕೋರಿ ಪ್ರಚಾರ ಮಾಡುತ್ತಿದ್ದಾರೆ. ಪೊಲೀಸರು ಅಂತಹ ಸಂಘಟನೆಗಳಿಗೆ ಈಗಾಗಲೇ ಎಚ್ಚರಿಕೆ ನೀಡಿದ್ದು, ಬಂದ್ ಮಾಡದಂತೆ ಸೂಚಿಸಿದ್ದಾರೆ ಎಂದರು.

ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಕೃಷಿ ಚಟುವಟಿಕೆಗಳು ಕುಸಿತ ಕಂಡಿವೆ. ಕೃಷಿ ಆದಾಯ ಶೇ. 50 ರಷ್ಟು ಕಡಿಮೆಯಾಗಿದೆ. ಬರಪರಿಸ್ಥಿತಿಯಿಂದಾಗಿ 20 ಸಾವಿರ ಕೋಟಿ ರೂ. ನಷ್ಟವಾಗಿದೆ. ಕೇಂದ್ರ ಸರ್ಕಾರ ಎನ್‍ಡಿಆರ್‍ಎಸ್ ಅಡಿ ಅಲ್ಪಸ್ವಲ್ಪ ನೆರವು ನೀಡಬಹುದು. ಆದರೆ ಪೂರ್ಣ ಪ್ರಮಾಣದ ನಷ್ಟ ಭರಿಸಲು ಸಾಧ್ಯವಿಲ್ಲ. ಈ ಹಂತದಲ್ಲಿ ಪದೇಪದೇ ಬಂದ್‍ಗಳು ನಡೆಯುವುದರಿಂದ ಆರ್ಥಿಕ ನಷ್ಟವಾಗತ್ತದೆ. ಬೆಂಗಳೂರು ಬಂದ್ ದಿನ ಒಂದೂವರೆ ಸಾವಿರ ಕೋಟಿ ರೂ.ಗಳ ನಷ್ಟ ವಾಗಿದೆ. ಇಂದು ರಜೆ, ನಾಳೆ ಮತ್ತೆ ಬಂದ್ ನಡೆದರೆ ವ್ಯಾಪಾರೋದ್ಯಮಗಳು ಬಹಳ ನಷ್ಟ ಅನುಭವಿಸುತ್ತವೆ ಎಂದು ಹೇಳಿದರು.

ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಆಟೋ ಚಾಲಕ ಸೇರಿ ಮೂವರ ಬಂಧನ

ಬಂದ್‍ಗಳು ನಡೆದಾಕ್ಷಣ ಏನೂ ಪ್ರಯೋಜನವಾಗುವುದಿಲ್ಲ. ಕಾವೇರಿ ನೀರು ನಿಯಂತ್ರಣಾ ಸಮಿತಿ ಅಥವಾ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಗಳು ತಮ್ಮ ಆದೇಶವನ್ನು ಬದಲಾವಣೆ ಮಾಡುವುದಿಲ್ಲ. ರಾಜ್ಯಸರ್ಕಾರ ತನ್ನ ಪಾಲಿನ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಿದೆ. ನ್ಯಾಯಾಲಯಗಳು ಹಾಗೂ ಸಮಿತಿಗಳ ಮುಂದೆ ಪ್ರಬಲ ವಾದ ಮಂಡಿಸಿದ್ದೇವೆ. ಅದರ ಜೊತೆಗೆ ಸುಪ್ರೀಂಕೋರ್ಟ್ ಮೆಟ್ಟಿಲೇರುವ ತಯಾರಿಗಲು ನಡೆದಿವೆ. ಇದರಲ್ಲಿ ಯಾವುದೇ ವೈಫಲ್ಯವಾಗಿಲ್ಲ ಎಂದರು.

ರಾಜಕೀಯಕ್ಕಾಗಿ ಹೊಸದಾಗಿ ಮದುವೆಯಾಗಿರುವ ಜೆಡಿಎಸ್, ಬಿಜೆಪಿ ಪಕ್ಷಗಳು ವಾಸ್ತವವನ್ನು ಮರೆಮಾಚಿ ಟೀಕೆ ಮಾಡುತ್ತಿವೆ. ನಾವು ಕಾವೇರಿ ವಿವಾದಲ್ಲಿ ಯಾವುದನ್ನೂ ಮುಚ್ಚಿಟ್ಟಿಲ್ಲ. ಎರಡು ಬಾರಿ ಸರ್ವ ಪಕ್ಷಗಳ ಸಭೆ ನಡೆಸಿದ್ದೇವೆ. ಪ್ರತಿ ಹಂತದಲ್ಲೂ ರಾಜ್ಯದ ಜನರಿಗೆ ಮಾಹಿತಿ ನೀಡುತ್ತಿದ್ದೇವೆ. ಈ ಹಿಂದೆ ಆ ಎರಡೂ ಪಕ್ಷಗಳು ಅಧಿಕಾರದಲ್ಲಿದ್ದಾಗ ನಾಡಿನ ಹಿತಾಸಕ್ತಿಗನುಗುಣವಾಗಿ ಕೆಲಸ ಮಾಡಿವೆ. ನಾವೂ ಕೂಡ ಅದೇ ರೀತಿಯೇ ಕೆಲಸ ಮಾಡುತ್ತಿದ್ದೇವೆ. ರಾಜಕೀಯಕ್ಕಾಗಿಯೇ ಟೀಕೆ ಮಾಡುವುದು ಸರಿಯಲ್ಲ ಮುಂದೆ ಒಂದು ವೇಳೆ ಅವರು ಅಧಿಕಾರಕ್ಕೆ ಬಂದರೆ ಆಗ ನಾವು ಟೀಕೆ ಮಾಡುತ್ತೇವೆ ಎಂದು ಹೇಳಿದರು.

ಕರ್ನಾಟಕ ಕಾಂಗ್ರೆಸ್‍ಗೆ ತಮಿಳುನಾಡಿನ ಡಿಎಂಕೆ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯ ಇಲ್ಲ. ನಾಡಿನ ಹಿತಾಸಕ್ತಿಗೆ ಸಂಬಂಧಪಟ್ಟಂತೆ ಎಲ್ಲಾ ಪಕ್ಷಗಳೂ ಬದ್ಧವಾಗಿವೆ. ಇದರಲ್ಲಿ ರಾಜಕಾರಣ ಬೆರೆಸುವುದು ಬೇಡ ಎಂದರು.

ಬಿಜೆಪಿ, ಜೆಡಿಎಸ್ ಮೈತ್ರಿಯ ಬಳಿಕ ಆ ಪಕ್ಷಗಳಲ್ಲಿ ಅಸಮಾಧಾನಗೊಂಡ ನಾಯಕರು, ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗುವುದು ಹೆಚ್ಚಾಗುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ಯಾರೂ ಸೈದ್ಧಾಂತಿಕ ರಾಜಕಾರಣ ಮಾಡುತ್ತಿಲ್ಲ. ಎಲ್ಲರೂ ಅನುಕೂಲ ಸಿಂಧು ರಾಜಕಾರಣ ಮಾಡುತ್ತಿದ್ದಾರೆ. ಹೀಗಾಗಿ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಸೇರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪಕ್ಷದ ಸಿದ್ಧಾಂತ ಒಪ್ಪಿ ಬರುವವರನ್ನು ನಾವು ಸೇರಿಸಿಕೊಳ್ಳುತ್ತೇವೆ. ನಮ್ಮ ತುಮಕೂರು ಜಿಲ್ಲೆಯಲ್ಲೂ ಅನೇಕ ಮಂದಿ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ ಎಂದು ಹೇಳಿದರು.

ಲಾಲೂ ಭೇಟಿಯಾದ ರಾಜಾ, ಬಿಜೆಪಿ ಮಣಿಸಲು ಕಾರ್ಯತಂತ್ರ

ರಾಜಕಾರಣದಲ್ಲಿ ಪಕ್ಷಾಂತರ ಸಾಮಾನ್ಯವಾಗಿದೆ. ಸಿ.ಎಂ.ಇಬ್ರಾಹಿಂ ಸದ್ಯಕ್ಕೆ ಜೆಡಿಎಸ್‍ನ ರಾಜ್ಯಾಧ್ಯಕ್ಷರಾಗಿದ್ದಾರೆ. ಪ್ರಸ್ತುತ ಬೆಳವಣಿಗೆಯ ಬಗ್ಗೆ ಅವರು ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಜೆಡಿಎಸ್ ಬಿಡುತ್ತೇನೆ ಅಥವಾ ರಾಜ್ಯಾಧ್ಯಕ್ಷ ಹುದ್ದೆ ತೊರೆಯುತ್ತೇನೆ ಎಂದಾಗಲಿ ಹೇಳಿಲ್ಲ. ಹೀಗಾಗಿ ಅವರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.

ಸಾಲುಸಾಲು ರಜೆ, ಪ್ರವಾಸಿ ತಾಣಗಳತ್ತ ಜನಸಾಗರ

ಬೆಂಗಳೂರು,ಸೆ.28- ಇಂದು ಈದ್ ಮಿಲಾದ್, ನಾಳೆ ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಸಾಲು ಸಾಲು ರಜೆ ಬಂದಿದ್ದು ನಗರ ನಿವಾಸಿಗಳು ಊರುಗಳತ್ತ ತೆರಳುತ್ತಿದ್ದು ರಾತ್ರಿಯಂದಲೇ ಸಾರಿಗೆ ಹಾಗೂ ಖಾಸಗಿ ಬಸ್‍ಗಳಲ್ಲಿ ಜನ ಪ್ರಯಾಣಿಸಿದ್ದು ಸಂಚಾರ ದಟ್ಟಣೆ ಉಂಟಾಗಿತ್ತು. ನಾಳಿನ ಕರ್ನಾಟಕ ಬಂದ್‍ಗೆ ಸರ್ಕಾರಿ ರಜೆ ಇಲ್ಲದಿದ್ದರೂ ಖಾಸಗಿ ಕಂಪನಿ, ಕೈಗಾರಿಕೆಗಳಿಗೆ ರಜೆ ಇರಲಿದೆ. ಶನಿವಾರ ಕೆಲವರಿಗೆ ರಜೆ, ಭಾನುವಾರ ವಾರದ ರಜೆ ಹಾಗೂ ಸೋಮವಾರ ಗಾಂಧಿ ಜಯಂತಿ ಹಿನ್ನಲೆಯಲ್ಲಿ ಸಾಲು ಸಾಲು ರಜೆಗಳು ಬಂದಿದ್ದು, ನಗರ ನಿವಾಸಿಗಳು ಪುಲ್ ಖುಷಿಯಾಗಿದ್ದು, ಊರುಗಳತ್ತ ತೆರಳುತ್ತಿದ್ದಾರೆ.

ರಾತ್ರಿಯಿಂದಲೇ ಪ್ರಯಾಣ ಆರಂಭಿಸಿದ್ದು ನಗರದ ಕೆಂಪೇಗೌಡ ಬಸ್ ನಿಲ್ದಾಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಇನ್ನೂ ಕೆಲವರು ಖಾಸಗಿ ಟ್ರಾವಲ್ಸ್‍ಗಳಲ್ಲಿ ಬುಕ್ಕಿಂಗ್ ಮಾಡಿದ್ದು ಆನಂದ್ ರಾವ್ ವೃತ್ತ, ಕೆಆರ್ ಮಾರುಕಟ್ಟೆ, ಗೋರಗುಂಟೆಪಾಳ್ಯ, ನವರಂಗ್ ಬಳಿ ಇರುವ ಖಾಸಗಿ ಬಸ್‍ಗಳ ಬುಕ್ಕಿಂಗ್ ಸೆಂಟರ್ ಗಳ ಮುಂದೆ ಪ್ರಯಾಣಿಕರು ಹೆಚ್ಚಾಗಿದ್ದ ದೃಶ್ಯಗಳು ಕಂಡು ಬಂದವು. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯದಿಂದ ಮಹಿಳಾ ಪ್ರಯಾಣಿಕರ ಸಂಖ್ಯೆಯೂ ಸಹ ಹೆಚ್ಚಾಗಿದೆ.

ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಆಟೋ ಚಾಲಕ ಸೇರಿ ಮೂವರ ಬಂಧನ

ಕಳೆದ ವಾರವಷ್ಟೆ ಗೌರಿ ಗಣೇಶ ಹಬ್ಬಕ್ಕೆ ಊರಿಗೆ ಹೋಗಿ ಬಂದಿದ್ದೆವೆ ಎಂದು ಕೆಲವರು ಊರುಗಳಿಗೆ ತೆರಳದ ಕೆಲವರು ಟ್ರಿಪ್ ಪ್ಲಾನ್ ಮಾಡಿಕೊಂಡು ಪ್ರವಾಸಿ ತಾಣ, ಪುಣ್ಯ ಕ್ಷೇತ್ರಗಳತ್ತ ತೆರಳುತ್ತಿದ್ದಾರೆ. ಇಂದು ಈದ್‍ಮಿಲಾದ್ ಹಿನ್ನಲೆಯಲ್ಲಿ ರಜೆ ಇದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟ, ಇಶಾಫೌಂಡೇಷನ್, ಶಿವಗಂಗೆ, ರಾಮನಗರದ ರಾಮದೇವರ ಬೆಟ್ಟ, ತುಮಕೂರು ಜಿಲ್ಲೆಯ ದೇವರಾಯನ ದುರ್ಗ, ಗೋರವನಹಳ್ಳಿ, ಮಾದೇಶ್ವರ ಬೆಟ್ಟ, ಮೈಸೂರಿನ ಚಾಮುಂಡಿ ಬೆಟ್ಟ, ಸೇರಿದಂತೆ ಮತ್ತಿತರ ಕಡೆ ಇಂದು ಮುಂಜಾನೆ ಯಿಂದಲೆ ಸ್ವಂತ ವಾಹನ ಹಾಗೂ ಸಾರಿಗೆ ಬಸ್ ಗಳಲ್ಲಿ ಜನರು ತೆರಳಿದ್ದು ನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಗೋರಗುಂಟೆಪಾಳ್ಯ, ನೆಲಮಂಗಲ ಟೋಲ್, ನೈಸ್ ಟೋಲ್, ಅತ್ತಿಬೆಲೆ, ಆನೆಕಲ್, ಮೈಸೂರು ರಸ್ತೆ, ದೇವನಹಳ್ಳಿ ರಸ್ತೆಯಲ್ಲಿ ರಾತ್ರಿಯಿಂದಲೆ ವಾಹನ ಸಂಚಾರ ಹೆಚ್ಚಾಗಿದ್ದು ಇಂದು ಬೆಳಗ್ಗೆ ಟ್ರಾಫಿಕ್ ಸಮಸ್ಥೆ ಉಂಟಾಗಿತ್ತು. ಇನ್ನೂ ಚಿಕ್ಕಬಳ್ಳಾಪುರದ ನಂದಿಬೆಟ್ಟದ ಪ್ರಕೃತಿ ಸೌಂದರ್ಯ ಸವಿಯಲು ಪ್ರವಾಸಿಗರ ದಂಡೆ ಹರಿದು ಬಂದಿದ್ದರಿಂದ ಬೆಟ್ಟದ ನಂದಿ ಗಿರಿ ದಾಮ ಸುತ್ತಮುತ್ತ ಸಂಚಾರ ದಟ್ಟಣೆ ಕಂಡುಬಂತು.

ಛತ್ತೀಸ್‍ಗಢದಲ್ಲಿ ಸಿಡಿಲಿಗೆ ಮೂವರು ಮಹಿಳೆಯರ ಬಲಿ

ಒಟ್ಟಿನಲ್ಲಿ ಸಾಲು ಸಾಲು ರಜೆ ಬಂದರೆ ಸಾಕು ನಗರ ನಿವಾಸಿಗಳು ದಿನಿತ್ಯದ ಟ್ರಾಫಿಕ್ ಕಿರಿಕಿರಿ ಕೆಲಸದ ಒತ್ತಡ ದಿಂದ ಮುಕ್ತಿ ಪಡೆದು ಮನ ಥಣಿಸಿಕೊಂಡು ರಿಲ್ಯಾಕ್ಸ್‍ಗೆ ಹೆಚ್ಚಿನ ಒತ್ತು ನೀಡುತ್ತಿರುವುದು ಇತ್ತಿಚಿನ ದಿನಗಳಲ್ಲಿ ಹೆಚ್ಚಾಗಿದ್ದು ರಜೆ ಸಿಕ್ಕರೆ ಸಾಕು ಪ್ರಕೃತಿ ಮಡಿಲಿಗೆ ಲಗ್ಗೆ ಇಡುತ್ತಿದ್ದಾರೆ.

ಜೆಡಿಎಸ್, ಬಿಜೆಪಿಯ ಕೆಳ ಹಂತದ ನಾಯಕರಿಗೆ ಕಾಂಗ್ರೆಸ್ ಗಾಳ

ಬೆಂಗಳೂರು,ಸೆ.28- ಜೆಡಿಎಸ್, ಬಿಜೆಪಿಯ ಮೈತ್ರಿಯಿಂದ ಅಸಮಾಧಾನಗೊಂಡಿರುವ ಜೆಡಿಎಸ್‍ನ ಹಲವು ನಾಯಕರು ಕಾಂಗ್ರೆಸ್ ಸಂಪರ್ಕಕ್ಕೆ ಬಂದಿದ್ದು, ಪಕ್ಷ ಸೇರ್ಪಡೆ ಕಾರ್ಯಕ್ರಮಗಳು ಜೋರಾಗಿ ನಡೆಯುತ್ತಿವೆ. ಅದೇ ವೇಳೆ ಪಕ್ಷನಿಷ್ಠರು ಮುಂದಿನ ಭವಿಷ್ಯದ ವಿಷಯದಲ್ಲಿ ಗೊಂದಲಕ್ಕೊಳಗಾಗಿ ವರಿಷ್ಠರ ನಿರ್ಧಾರಗಳ ವಿರುದ್ಧ ಸಿಡಿಮಿಡಿಗೊಳ್ಳುತ್ತಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವನ್ನು ಬಲಗೊಳಿಸಲು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಣ ತೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ನಾಯಕರುಗಳಿಗಿಂತಲೂ ಕೆಳಹಂತದ ಕಾರ್ಯಕರ್ತರಿಗೆ ಮಣೆ ಹಾಕಬೇಕು. ಬ್ಲಾಕ್ ಮತ್ತು ಜಿಲ್ಲಾಮಟ್ಟದಲ್ಲೇ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂದು ಫರ್ಮಾನು ಹೊರಡಿಸಿದ್ದಾರೆ.

ಆದರೆ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್, ಜೆಡಿಎಸ್ ದಶಕಗಳಿಂದಲೂ ವೈರುಧ್ಯ ರಾಜಕಾರಣಕ್ಕೆ ಹೆಸರುವಾಸಿಯಾಗಿದೆ. ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆ ವೇಳೆಯಲ್ಲೂ ಮೇಲ್ಮಟ್ಟದಲ್ಲಿ ಹೊಂದಾಣಿಕೆಯಾಗಿತ್ತೇ ಹೊರತು ಕೆಳಹಂತದಲ್ಲಿ ಕಾರ್ಯಕರ್ತರು ಜಿದ್ದಾಜಿದ್ದಿಗೆ ಬಿದ್ದಿದ್ದರು. ಅದರ ಪರಿಣಾಮವೇ ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳೂ ಹೀನಾಯವಾಗಿ ನೆಲಕಚ್ಚಿದ್ದವು.
ಈಗ ಜೆಡಿಎಸ್ ಮತ್ತು ಬಿಜೆಪಿ ಪುನರ್ ಮಿಲನವಾಗಿದೆ.

ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಆಟೋ ಚಾಲಕ ಸೇರಿ ಮೂವರ ಬಂಧನ

ರಾಜ್ಯದಲ್ಲಿ ಕೋಮುಸೂಕ್ಷ್ಮ ವಾತಾವರಣ ಹಿಂದೆಂದಿಗಿಂತಲೂ ಹೆಚ್ಚು ಸಂಕೀರ್ಣಗೊಂಡಿವೆ. ಈ ಸಂದರ್ಭದಲ್ಲಿ ಜೆಡಿಎಸ್‍ನಲ್ಲಿರುವ ಅಲ್ಪಸಂಖ್ಯಾತ, ಜಾತ್ಯತೀತ ಮತ್ತು ಪ್ರಗತಿಪರ ನಾಯಕರು ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗುತ್ತಿದೆ ಎಂಬ ನೆಪ ಹೇಳಿ ಕಾಂಗ್ರೆಸ್‍ನತ್ತ ಮುಖ ಮಾಡುತ್ತಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸಿರುವ ಕಾಂಗ್ರೆಸ್ ಮುಂದಿನ 5 ವರ್ಷ ಆಡಳಿತ ನಡೆಸುವ ನಿರೀಕ್ಷೆಗಳನ್ನು ಹುಟ್ಟಿಸಿದೆ. ಹೀಗಾಗಿ ಅಧಿಕಾರ ಹಾಗೂ ಅವಕಾಶಗಳಿಗಾಗಿ ಹಾತೊರೆಯುತ್ತಿದ್ದವರು ಆಡಳಿತಾರೂಢ ಪಕ್ಷದತ್ತ ವಲಸೆ ಆರಂಭಿಸಿದ್ದಾರೆ. ಇದಕ್ಕೆ ಸೈದ್ಧಾಂತಿಕ ಸನ್ನಿವೇಶವೂ ಕೂಡ ಪೂರಕವಾಗಿರುವುದು ಪಕ್ಷಾಂತರ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ.

ಬಿಜೆಪಿ ಮತ್ತು ಜೆಡಿಎಸ್‍ನಲ್ಲಿರುವ ಕೆಲವು ಶಾಸಕರುಗಳು ಕಾಂಗ್ರೆಸ್ ಸೇರುವ ವದಂತಿಗಳು ಹರಡಿದ್ದವು. ಆದರೆ ಆಪರೇಷನ್ ಹಸ್ತ ಎಂಬ ಅಪಕೀರ್ತಿಗೆ ಹೆದರಿದ ಕಾಂಗ್ರೆಸಿಗರು ಶಾಸಕರನ್ನು ಸೆಳೆಯಲು ಹಿಂದೇಟು ಹಾಕಿದರು. ಅದೇ ವೇಳೆ ಆಯಾ ಪಕ್ಷಗಳ ವರಿಷ್ಠರು ಅತೃಪ್ತರನ್ನು ಸಮಾಧಾನಪಡಿಸಿ ವಾತಾವರಣವನ್ನು ತಹಬದಿಗೆ ತಂದಿದ್ದಾರೆ.

ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನಮಗೆ ಶಾಸಕರ ಅಗತ್ಯವಿಲ್ಲ. ಆದರೆ ಪಕ್ಷದ ಮತಗಳಿಕೆಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಕೆಳಹಂತದಲ್ಲಿ ವರ್ಚಸ್ವಿ ನಾಯಕರು ಸೇರ್ಪಡೆಯಾಗುವುದಾದರೆ ಸ್ವಾಗತಿಸುತ್ತೇವೆ ಎಂದಿದ್ದಾರೆ.

ಕೆಲವು ಮಾಜಿ ಶಾಸಕರು, ಮಾಜಿ ಸಚಿವರು ಕಾಂಗ್ರೆಸ್‍ನ ಪ್ರಮುಖ ನಾಯಕರನ್ನು ಸಂಪರ್ಕಿಸಿದ್ದು, ಪಕ್ಷ ಸೇರ್ಪಡೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿರುವುದು ತಿಳಿದುಬಂದಿದೆ. ಇನ್ನೂ ಕೆಲವು ಪ್ರಭಾವಿಗಳಿಗೆ ಕಾಂಗ್ರೆಸ್ ಪಕ್ಷವೇ ಗಾಳ ಹಾಕಿದೆ.

ಸದ್ಯದ ಸನ್ನಿವೇಶದಲ್ಲಿ ಬರುವವರನ್ನೆಲ್ಲಾ ಪಕ್ಷಕ್ಕೆ ಸೇರಿಸಿಕೊಂಡರೆ ಮುಂದಿನ ದಿನಗಳಲ್ಲಿ ಗೊಂದಲಗಳಾಗುವ ಆತಂಕ ಕೇಳಿಬರುತ್ತಿದೆ. ಈಗಿರುವ ಪಕ್ಷದಲ್ಲೇ ಅಕಾರ ಇಲ್ಲ ಎಂಬ ಕಾರಣಕ್ಕಾಗಿ ಪಕ್ಷಾಂತರ ಮಾಡುತ್ತಿರುವವರು ನಾಳೆ ಇಲ್ಲಿಯೂ ಅವಕಾಶ ಸಿಗಲಿಲ್ಲ ಎಂಬ ಕಾರಣಕ್ಕೆ ಚುನಾವಣೆಯಂತಹ ಬಿಗುವಿನ ಸಮಯದಲ್ಲಿ ಗೊಂದಲ ಮೂಡಿಸಿ ಬೇರೆ ಪಕ್ಷದತ್ತ ಹೆಜ್ಜೆ ಹಾಕಿದರೆ ಕಾಂಗ್ರೆಸ್‍ಗೆ ನಷ್ಟವಾಗಲಿದೆ. ಹೀಗಾಗಿ ವಲಸಿಗ ನಾಯಕರನ್ನು ಅಳೆದು ತೂಗಿ ಸೇರ್ಪಡೆ ಮಾಡಿಕೊಳ್ಳಬೇಕು.

ವಿಧಾನಸಭೆ ಚುನಾವಣೆಗೂ ಮೊದಲೇ ಇದ್ದಂತಹ ವ್ಯವಸ್ಥೆಯನ್ನು ಚಾಚೂತಪ್ಪದೇ ಪಾಲಿಸಬೇಕು. ಕಾಂಗ್ರೆಸ್ ಸೇರ್ಪಡೆಯಾಗಲು ಇಚ್ಛೆ ವ್ಯಕ್ತಪಡಿಸುವ ನಾಯಕರ ಮಾಹಿತಿಗಳನ್ನು ಕ್ಷೇತ್ರ ಹಾಗೂ ಜಿಲ್ಲಾ ಸಮಿತಿಗಳೊಂದಿಗೆ ಹಂಚಿಕೊಳ್ಳಬೇಕು. ಅಲ್ಲಿಂದ ಅಭಿಪ್ರಾಯ ಪಡೆದ ಬಳಿಕ ಕೆಪಿಸಿಸಿಯ ಅಲ್ಲಮ ವೀರಭದ್ರಪ್ಪ ಸಮಿತಿ ಹಸಿರು ನಿಶಾನೆ ನೀಡಿದ ಬಳಿಕವೇ ವಲಸಿಗರಿಗೆ ಸದಸ್ಯತ್ವ ನೀಡಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ.

ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಬಿಬಿಎಂಪಿ, ವಿವಿಧ ಪಾಲಿಕೆಗಳು ಹಾಗೂ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳು ನಡೆಯಲಿವೆ. ಅಲ್ಲಿ ಕಾಂಗ್ರೆಸಿಗರು ಆಕಾಂಕ್ಷಿಗಳಾಗಿ ಈಗಾಗಲೇ ತಯಾರಿ ಆರಂಭಿಸಿದ್ದಾರೆ.

ವಲಸಿಗ ನಾಯಕರು ಅದರಲ್ಲೂ ಮಾಜಿಗಳು ಪಕ್ಷಕ್ಕೆ ಬಂದಾಗ ಸಹಜವಾಗಿ ಅವರೂ ಟಿಕೆಟ್ ಆಕಾಂಕ್ಷಿಗಳಾಗಿರುತ್ತಾರೆ. ಈ ಹಂತದಲ್ಲಿ ಗೊಂದಲಗಳಾಗುತ್ತವೆ. ಅವಕಾಶ ದೊರೆಯದೇ ಇದ್ದರೆ ವಲಸಿಗರು ಕಾಂಗ್ರೆಸ್ ನಾಯಕರ ವಿರುದ್ಧವೇ ಮುಗಿಬೀಳುತ್ತಾರೆ. ಇದು ಭಿನ್ನಮತಕ್ಕೂ ದಾರಿಯಾಗಬಹುದು ಎಂಬ ಎಚ್ಚರಿಕೆಯ ಮಾತುಗಳನ್ನು ನಾಯಕರು ಹೇಳುತ್ತಿದ್ದಾರೆ ಎನ್ನಲಾಗಿದೆ.

ವಿಶ್ವದ ಕಿರಿಯ ಸಂಗೀತ ನಿರ್ದೇಶಕರಾಗಿ ವೆಂಕಟೇಶ್ ಇತಿಹಾಸ

ಸರ್ಕಾರದ ಮಟ್ಟದಲ್ಲಿ ವಿವಿಧ ನಿಗಮ-ಮಂಡಳಿಗಳು, ಪ್ರಾಕಾರ, ಆಯೋಗ ಹಾಗೂ ಇತರ ಸಮಿತಿಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ನಿರ್ದೇಶಕರುಗಳ ನೇಮಕಾತಿ ನಡೆಯಬೇಕಿದೆ. ಬಹುತೇಕ ವಲಸಿಗರು ಇಂತಹ ಸ್ಥಾನಗಳ ಮೇಲೆ ಕಣ್ಣಿಟ್ಟುಕೊಂಡೇ ಬರುತ್ತಿದ್ದಾರೆ. ಅದರಲ್ಲೂ ಕೆಲವು ಬಲಾಢ್ಯರು ತಮ್ಮ ಹಣ ಹಾಗೂ ಪ್ರಭಾವ ಬಳಸಿ ಅವಕಾಶ ಗಿಟ್ಟಿಸುವ ದೂರಾಲೋಚನೆಯಿಂದ ಕಾಂಗ್ರೆಸ್ ಸೇರುತ್ತಿದ್ದಾರೆ.

ಪಕ್ಷ ಒಂದು ವೇಳೆ ಇಂತವರಿಗೆ ಮಣೆ ಹಾಕಿದರೆ ಸಂಕಷ್ಟ ಕಾಲದಲ್ಲೂ ಪಕ್ಷದ ಬೆನ್ನಿಗೆ ನಿಂತು ಸಂಘಟನೆ ಮಾಡಿ ಅಕಾರಕ್ಕೆ ತಂದ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗುತ್ತದೆ. ಸಹಜವಾಗಿ ಈ ಬೆಳವಣಿಗೆ ಪಕ್ಷನಿಷ್ಠರ ಉತ್ಸಾಹವನ್ನು ಕುಗ್ಗಿಸಲಿದೆ. ಮುಂದಿನ ದಿನಗಳಲ್ಲಿ ಅದು ಪಕ್ಷದ ಅವನತಿಗೂ ಅವಕಾಶ ಮಾಡಿಕೊಡಬಹುದು ಎಂಬ ವಿಶ್ಲೇಷಣೆಯನ್ನು ಕಾಂಗ್ರೆಸ್‍ನ ಚಿಂತಕರ ಛಾವಡಿ ನಡೆಸಿದೆ.

ಆದರೆ ಪಕ್ಷ ಸಂಘಟನೆ ಎಂಬ ಉಮೇದಿಗೆ ಬಿದ್ದ ವರಿಷ್ಠ ನಾಯಕರು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ನಿಮ್ಮ ವೈಯಕ್ತಿಕ ಭಿನ್ನಾಭಿಪ್ರಾಯ ಮತ್ತು ಹಿತಾಸಕ್ತಿಗಳನ್ನು ಪಕ್ಕಕ್ಕಿರಿಸಿ ಪಕ್ಷ ಸಂಘಟನೆ ಮಾಡಿ, ವಲಸಿಗರನ್ನು ಸೇರಿಸಿಕೊಳ್ಳಿ ಎಂದು ಕಟ್ಟಪ್ಪಣೆ ಮಾಡುತ್ತಿದ್ದಾರೆ. ಇದು ಮೂಲ ಕಾಂಗ್ರೆಸಿಗರಿಗೆ ನುಂಗಲಾರದ ಬಿಸಿತುಪ್ಪವಾಗಿದೆ.

ಏರ್ ಪಿಸ್ತೂಲ್‍ನಲ್ಲಿ ಭಾರತಕ್ಕೆ ಚಿನ್ನ

ಹಾಂಗ್ರೆ, ಸೆ.28- ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಅದ್ಭುತ ಆರಂಭ ದೊರೆತಿದ್ದು, ಶೂಟಿಂಗ್ ವಿಭಾಗದಲ್ಲಿ ಭಾರತ ಮತ್ತೊಂದು ಚಿನ್ನದ ಪದಕ ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ ಗಮನಾರ್ಹ ಸಾಧನೆ ಮಾಡಿದೆ. 10 ಮೀಟರ್ ಏರ್ ಪಿಸ್ತೂಲ್‍ನಲ್ಲಿ ಭಾರತದ ಪುರುಷರ ತಂಡ ಚಿನ್ನದ ಪದಕ ಗೆದ್ದುಕೊಂಡಿದೆ. ಇನ್ನು ಮತ್ತೊಂದೆಡೆ ವುಶು ಸ್ಪರ್ಧೆಯಲ್ಲಿ ಭಾರತದ ರೋಶಿಬಿನಾ ದೇವೆ ನೌರೆಮ್ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. ಸರಬ್ ಜೋತ್ ಸಿಂಗ್, ಶಿವ ನರ್ವಾಲ್ ಮತ್ತು ಅರ್ಜುನ್ ಸಿಂಗ್ ಚೀಮಾ ಅವರನ್ನು ಒಳಗೊಂಡ ಪುರುಷರ 10 ಮೀಟರ್ ಏರ್ ಪಿಸ್ತೂಲ್ ತಂಡದಲ್ಲಿ ಒಟ್ಟು 1734 ಸ್ಕೋರ್ ಗಳಿಸುವ ಮೂಲಕ ಚಿನ್ನ ಗೆದ್ದಿದ್ದಾರೆ.

ಕೇವಲ ಒಂದು ಅಂಕದ ಅಂತರದಲ್ಲಿ ಚೀನಾವನ್ನು ಸೋಲಿಸುವ ಮೂಲಕ ಭಾರತ ಚಿನ್ನದ ಪದಕಕ್ಕೆ ಮುತ್ತಿಕ್ಕುವಂತೆ ಮಾಡಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಬೇಡದ ದಾಖಲೆ ಬರೆದ ಜಸ್ಪ್ರೀತ್ ಬೂಮ್ರಾ ಸರಬ್ ಜೋತ್ ಸಿಂಗ್, ಶಿವ ನರ್ವಾಲ್ ಮತ್ತು ಅರ್ಜುನ್ ಸಿಂಗ್ ಚೀಮಾ ಅವರ ಪುರುಷರ 10 ಮೀಟರ್ ಏರ್ ಪಿಸ್ತೂಲ್ ತಂಡದಲ್ಲಿ ಒಟ್ಟು 1734 ಸ್ಕೋರ್ ಗಳಿಸುವ ಮೂಲಕ ಚಿನ್ನ ಗೆದ್ದರು.

ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಆಟೋ ಚಾಲಕ ಸೇರಿ ಮೂವರ ಬಂಧನ

ಅವರ ಗಮನಾರ್ಹ ಪ್ರದರ್ಶನವು ಕೇವಲ ಒಂದು ಅಂತರದಲ್ಲಿ ಚೀನಾವನ್ನು ಸೋಲಿಸುವ ಮೂಲಕ ತಂಡವನ್ನು ಚಿನ್ನದ ಪದಕಕ್ಕೆ ಗುರಿಯಿಟ್ಟಿತು. ಇನ್ನು ವಿಯೆಟ್ನಾಂ ಪ್ರಬಲ ಪ್ರದರ್ಶನ ನೀಡಿ ಒಟ್ಟು 1730 ಅಂಕಗಳೊಂದಿಗೆ ಕಂಚಿನ ಪದಕವನ್ನು ಪಡೆದುಕೊಂಡಿತು. 580 ಅಂಕಗಳನ್ನು ಗಳಿಸಿದ ಸರಬ್ಜೋತ್ ಐದನೇ ಸ್ಥಾನವನ್ನು ಪಡೆದುಕೊಂಡರೆ, ಅರ್ಜುನ್ 578 ಅಂಕಗಳೊಂದಿಗೆ ವೈಯಕ್ತಿಕ ಅರ್ಹತಾ ಸ್ಪರ್ಧೆಯಲ್ಲಿ ಎಂಟನೇ ಸ್ಥಾನ ಪಡೆದರು. ಇವರಿಬ್ಬರೂ ಇಂದು ನಡೆಯಲಿರುವ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಫೈನಲ್‍ನಲ್ಲಿ ಸ್ರ್ಪಸಲು ಸಜ್ಜಾಗಿದ್ದಾರೆ.

ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಆಟೋ ಚಾಲಕ ಸೇರಿ ಮೂವರ ಬಂಧನ

ಉಜ್ಜಯಿನಿ, ಸೆ.28- ದೇಶದ್ಯಾಂತ ಭಾರೀ ಸಂಚಲನ ಸೃಷ್ಟಿಸಿದ್ದ ಮಧ್ಯಪ್ರದೇಶದ ಉಜ್ಜಯಿನಿ ನಗರದ ರಸ್ತೆಯೊಂದರಲ್ಲಿ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ಚಾಲಕ ಸೇರಿದಂತೆ ಇತರ ಮೂವರನ್ನು ಬಂಧಿಸಲಾಗಿದೆ. ಬಂಧಿತ ಆಟೋ ಚಾಲಕನನ್ನು 38 ವರ್ಷದ ರಾಕೇಶ್ ಎಂದು ಗುರುತಿಸಲಾಗಿದೆ. ಇತರೆ ಆರೋಪಿಗಳ ಬಂಧಿತರಾದವರ ಗುರುತು ಪತ್ತೆಯಾಗಿಲ್ಲ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅಪ್ರಾಪ್ತ ಬಾಲಕಿ ಕಾಲ್ನಡಿಗೆಯಲ್ಲಿ ಸಹಾಯ ಅಂಗಲಾಚುತ್ತಿರುವ ದೃಶ್ಯಾವಳಿಗಳು ಸೆರೆಯಾಗಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 8 ಕಿಮೀ ವ್ಯಾಪ್ತಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಂಡಿದ್ದು, ಸಹಾಯಕ್ಕಾಗಿ ಮನವಿ ಮಾಡುವಾಗ ಸಂತ್ರಸ್ತೆ ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಟೋದಲ್ಲಿ ರಕ್ತದ ಕಲೆಗಳು ಕೂಡ ಪತ್ತೆಯಾಗಿದ್ದು, ಆಟೋದ ವಿಧಿವಿಜ್ಞಾನ ಪರೀಕ್ಷೆ ನಡೆಯುತ್ತಿದೆ. ಸಂತ್ರಸ್ತೆ ಜೀವನ್ ಖೇರಿಯಲ್ಲಿ ಆಟೋ ಹತ್ತಿದ್ದಳು. ಅದರ ಸಿಸಿಟಿವಿ ವೀಡಿಯೋ ಕೂಡ ಮರು ಪಡೆಯಲಾಗಿದೆ ಎಂದು ಹೇಳಿದ್ದಾರೆ.

ಛತ್ತೀಸ್‍ಗಢದಲ್ಲಿ ಸಿಡಿಲಿಗೆ ಮೂವರು ಮಹಿಳೆಯರ ಬಲಿ

ಉಜ್ಜಯಿನಿ ನಗರದ ರಸ್ತೆಯೊಂದರಲ್ಲಿ ಅತ್ಯಾಚಾರಕ್ಕೊಳಗಾದ ಮತ್ತು ರಕ್ತಸ್ರಾವವಾಗುತ್ತಿರುವ 12 ವರ್ಷದ ಬಾಲಕಿಯನ್ನು ತಜ್ಞ ವೈದ್ಯರ ತಂಡವು ನಿನ್ನೆ ಶಸ್ತ್ರಚಿಕಿತ್ಸೆಗೆ ಒಳಪಡಿಸಿದೆ. ಸದ್ಯ ಆಕೆಯ ಸ್ಥಿತಿ ಗಂಭೀರವಾಗಿದೆ ಆದರೆ ಸ್ಥಿರವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಕ್ತ ಸ್ರಾವಗೊಂಡ ಬಾಲಕಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ.

ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಮಹಾಕಲ್ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‍ಐಆರ್) ದಾಖಲಾಗಿದ್ದು, ಘಟನೆಯ ಕುರಿತು ತನಿಖೆ ನಡೆಯುತ್ತಿದೆ. ಭಾರೀ ಸಾರ್ವಜನಿಕ ಆಕ್ರೋಶದ ನಡುವೆ, ಸಂಸದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಆಘಾತಕಾರಿ ಅಪರಾಧದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್‍ಐಟಿ) ರಚಿಸಲಾಗಿದೆ ಎಂದು ಹೇಳಿದ್ದಾರೆ.

ಲಾಲೂ ಭೇಟಿಯಾದ ರಾಜಾ, ಬಿಜೆಪಿ ಮಣಿಸಲು ಕಾರ್ಯತಂತ್ರ

ಪಾಟ್ನಾ, ಸೆ 28 (ಪಿಟಿಐ) ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಅವರು ಇಂದು RJD ಅಧ್ಯಕ್ಷ ಲಾಲು ಪ್ರಸಾದ್ ಅವರನ್ನು ಭೇಟಿಯಾಗಿ ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಹೋರಾಟ ಹೆಚ್ಚಿಸುವ ಕುರಿತು ಚರ್ಚೆ ನಡೆಸಿದರು. ತಮ್ಮ ಪಕ್ಷದ ವಿದ್ಯಾರ್ಥಿ ಘಟಕ ಎಐಎಸ್‍ಎ-ನ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಿಹಾರದಲ್ಲಿರುವ ಸಿಪಿಐ ನಾಯಕ ರಾಜಾ ಅವರು ಲಾಲೂ ಪ್ರಸಾದ್ ಅವರ ಪತ್ನಿ ಮತ್ತು ಮಾಜಿ ಸಿಎಂ ರಾಬ್ರಿ ದೇವಿ ಅವರ ನಿವಾಸದಲ್ಲಿ ಭೇಟಿಯಾದರು.

ಸುದ್ದಿಗಾರರೊಂದಿಗೆ ಮಾತನಾಡಿದ ರಾಜಾ,ಇಂಡಿಯಾ ಒಕ್ಕೂಟದ ರಚನೆಯು ದೇಶದ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಸ್ವರೂಪವನ್ನು ರಕ್ಷಿಸುವ ಪ್ರಮುಖ ಹೆಜ್ಜೆಯಾಗಿದೆ, ಇದು ಸಂವಿಧಾನಕ್ಕೆ ಋಣಿಯಾಗಿದೆ ಆದರೆ ಪ್ರಸ್ತುತ ವಿತರಣೆಯಿಂದ ಬೆದರಿಕೆಯನ್ನು ಎದುರಿಸುತ್ತಿದೆ ಎಂದು ಹೇಳಿದರು.

ಛತ್ತೀಸ್‍ಗಢದಲ್ಲಿ ಸಿಡಿಲಿಗೆ ಮೂವರು ಮಹಿಳೆಯರ ಬಲಿ

ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿಗೆ ಸೆಡ್ಡುಹೊಡೆಯಲಾಗಿದೆ ಎಂದು ಹೇಳಿರುವ ಸಿಪಿಐ ನಾಯಕ, ಸಾರ್ವತ್ರಿಕ ಚುನಾವಣೆಯ ಪೂರ್ವದಲ್ಲಿ ಇನ್ನಷ್ಟು ಪಕ್ಷಗಳು ಇಂಡಿಯಾ ಒಕ್ಕೂಟಕ್ಕೆ ಸೇರಬಹುದು ಎಂದು ಹೇಳಿದ್ದಾರೆ.

ಎಐಎಸ್‍ಎನ ರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಳ್ಳಲು ಬೇಗುಸರಾಯ್‍ಗೆ ಆಗಮಿಸಲಿರುವ ರಾಜಾ,ಇಂಡಿಯಾ ಒಕ್ಕೂಟಕ್ಕೆ ಹೆಚ್ಚು ಅಗತ್ಯವಿರುವ ಬಲವನ್ನು ಒದಗಿಸಲು ಸಿಪಿಐ ಕಾರ್ಮಿಕ ವರ್ಗ, ರೈತರು, ಮಹಿಳೆಯರು ಮತ್ತು ವಿದ್ಯಾರ್ಥಿಗಳನ್ನು ಒಗ್ಗೂಡಿಸುತ್ತದೆ ಎಂದು ಹೇಳಿದರು.

ವಿಶ್ವದ ಕಿರಿಯ ಸಂಗೀತ ನಿರ್ದೇಶಕರಾಗಿ ವೆಂಕಟೇಶ್ ಇತಿಹಾಸ

ನವದೆಹಲಿ, ಸೆ.28- ಸಂಗೀತ ಸಂಯೋಜಕ ಮತ್ತು ಗೀತರಚನೆಕಾರ ವೆಂಕಟೇಶ್ ಅಗರವಾಲ್ ಅವರು ವಿಶ್ವದ ಅತ್ಯಂತ ಕಿರಿಯ ಸಂಗೀತ ನಿರ್ದೇಶಕ ಮತ್ತು ಗೀತರಚನೆಕಾರ ಎಂದು ಗುರುತಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಕೇವಲ 17 ವರ್ಷ ವಯಸ್ಸಿನ ವೆಂಕಟೇಶ್ ಅವರಿಗೆ ಸಂಗೀತ ಕ್ಷೇತ್ರದಲ್ಲಿ ಅವರ ಕಾರ್ಯವನ್ನು ಗುರುತಿಸಿದ ಗೋಲ್ಡನ್ ಬುಕ್ ಆಫ್ ವಲ್ಡರ್ ರೆಕಾಡ್ರ್ಸ್ ಈ ಪ್ರತಿಷ್ಠಿತ ಗೌರವವನ್ನು ನೀಡಿದೆ.

ಇತ್ತೀಚೆಗಷ್ಟೇ ಇನ್ಸಿಪಿಯರ್ ಬುಕ್ ಆಫ್ ವಲ್ಡರ್ ರೆಕಾಡ್ರ್ಸ್ ವೆಂಕಟೇಶ್ ಅವರ ಸಂಗೀತದ ಭೂದೃಶ್ಯದ ಮೇಲೆ ಪ್ರಭಾವ ಮತ್ತು ಪ್ರಭಾವ ಮತ್ತು ಸಂಗೀತ ಪ್ರೇಮಿಗಳೊಂದಿಗೆ ಸಂಪರ್ಕ ಸಾಧಿಸುವ ಅವರ ಸಾಮಥ್ರ್ಯವನ್ನು ಗುರುತಿಸಿದೆ.

ತನಗೆ ಸಂದ ಗೌರವದ ಬಗ್ಗೆ ಪ್ರತಿಕ್ರಿಯಿಸಿದ ವೆಂಕಟೇಶ, ಈ ಪ್ರಶಸ್ತಿಗಳನ್ನು ಸ್ವೀಕರಿಸಲು ಮತ್ತು ನನ್ನ ಸಂಗೀತವನ್ನು ಹಲವಾರು ಅಭಿಮಾನಿಗಳು ಪ್ರೀತಿಸುತ್ತಿರುವುದು ನನಗೆ ಗೌರವ ತಂದಿದೆ ಎಂದಿದ್ದಾರೆ. ಗೋಲ್ಡನ್ ಬುಕ್ ಆಫ್ ವಲ್ಡರ್ ರೆಕಾಡ್ಸರ್ ಮತ್ತು ಇನ್ಯೆನ್ಸರ್ ಬುಕ್ ಆಫ್ ವಲ್ಡರ್ ರೆಕಾಡ್ರ್ಸ್‍ನಿಂದ ಗುರುತಿಸಲ್ಪಟ್ಟಿರುವುದು ಕೇವಲ ವೈಯಕ್ತಿಕ ಸಾಧನೆಯಲ್ಲ ಆದರೆ ಲೆಕ್ಕವಿಲ್ಲದಷ್ಟು ಗಂಟೆಗಳ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಮತ್ತು ನನ್ನ ಕುಟುಂಬ ಮತ್ತು ಸಂಗೀತ ಸಮುದಾಯದ ಬೆಂಬಲವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಪ್ರಶಸ್ತಿಗಳು ಕನಸುಗಳನ್ನು ಪಟ್ಟುಬಿಡದೆ ಅನುಸರಿಸಿದಾಗ ಅದು ನಿಜವಾಗಬಹುದು ಎಂಬ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ಅವಕಾಶಕ್ಕಾಗಿ ನಾನು ಕೃತಜ್ಞನಾಗಿದ್ದೇನೆ ಎಂದಿದ್ದಾರೆ.

ಡ್ರಗ್ಸ್ ಕಳ್ಳಸಾಗಣೆ ಆರೋಪದಡಿ ಕಾಂಗ್ರೆಸ್ ಶಾಸಕ ಅರೆಸ್ಟ್

ವೆಂಕಟೇಶ್ ಅವರು ಉದ್ಯಮದ ಭಾಗವಾಗಿರುವ ಅಲ್ಪಾವ„ಯಲ್ಲಿ 15 ಕ್ಕೂ ಹೆಚ್ಚು ಹಾಡುಗಳನ್ನು ಮತ್ತು 15 ಕ್ಕೂ ಹೆಚ್ಚು ಹಿಂದಿ ಹಾಡುಗಳಿಗೆ ಸಾಹಿತ್ಯವನ್ನು ರಚಿಸುವ ಮೂಲಕ ತಮ್ಮ ಗಮನಾರ್ಹ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಅವರ ಆತ್ಮವನ್ನು ಪ್ರಚೋದಿಸುವ ಸಂಗೀತ ಮತ್ತು ಸಾಹಿತ್ಯವನ್ನು ಪ್ರಪಂಚದಾದ್ಯಂತದ ಜನರು ಪ್ರೀತಿಸುತ್ತಾರೆ.

ಸಂಗೀತವನ್ನು ರಚಿಸುವ ಅವರ ವಿಶಿಷ್ಟ ವಿಧಾನವು ಅವರನ್ನು ಸಂಗೀತ ಉದ್ಯಮದಲ್ಲಿ ಸುಪ್ರಸಿದ್ಧ ಹೆಸರು ತಂದುಕೊಟ್ಟಿದೆ.ಅಭಿಜಿತ್ ಭಟ್ಟಾಚಾರ್ಯ, ಅನುರಾಧಾ ಪೌಡ್ವಾಲï, ಅಮಿತ್ ಮಿಶ್ರಾ ಮತ್ತು ಅಲ್ತಾ-ï ಸಯ್ಯದ್ ಬಾಲಿವುಡ್ ಗಾಯಕರಲ್ಲಿ ವೆಂಕಟೇಶ್ ಅವರ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

ಮುಂದಿನ ವರ್ಷದಿಂದ ಲಾಭದಾಯಕವಾಗಲಿದೆಯಂತೆ ಎಕ್ಸ್(X)

ವೆಂಕಟೇಶ್ ಅವರು ಹೊಸ ಆರಂಭ ಮತ್ತು ಗಡಿಗಳನ್ನು ತಳ್ಳಲು, ದಾಖಲೆಗಳನ್ನು ಮುರಿಯಲು ಮತ್ತು ಉತ್ಕøಷ್ಟತೆಗಾಗಿ ಶ್ರಮಿಸುವುದನ್ನು ಮುಂದುವರಿಸಲು ಸೂರ್ತಿ ಎಂದು ಅವರು ಪಡೆದ ಮನ್ನಣೆಯನ್ನು ವಿವರಿಸುತ್ತಾರೆ. ಅತ್ಯುತ್ತಮ ಸಂಗೀತ ನಿರ್ದೇಶಕ ಮತ್ತು ಗೀತರಚನೆಕಾರರ ಜೊತೆಗೆ, ವೆಂಕಟೇಶ್ ಅವರು ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡುವ ಪ್ರಯತ್ನದಲ್ಲಿ ವಿವಿಧ ಲೋಕೋಪಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ತಲೆಮರೆಸಿಕೊಂಡಿದ್ದ ನಕ್ಸಲೀಯನ ಬಂಧನ

ಹಜಾರಿಬಾಗ್, ಸೆ 28 (ಪಿಟಿಐ) ಜಾರ್ಖಂಡ್‍ನ ಹಜಾರಿಬಾಗ್ ಜಿಲ್ಲೆಯಲ್ಲಿ ಹಲವಾರು ಪ್ರಕರಣಗಳಲ್ಲಿ ಬೇಕಾಗಿದ್ದ ನಕ್ಸಲೀಯನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತೃತೀಯಾ ಪ್ರಸ್ತುತಿ ಸಮಿತಿಯ ಸದಸ್ಯ ನಿತೇಶ್ ಕುಮಾರ್ ಮೆಹ್ತಾ ಅವರನ್ನು ಬಾರ್ಕಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆತ ಚತ್ರಾ ಮತ್ತು ಹಜಾರಿಬಾಗ್ ಜಿಲ್ಲಾಗಳಲ್ಲಿ ಭಯೋತ್ಪಾದಕನಾಗಿದ್ದನು ಮತ್ತು ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಂದು ಅವರು ಹೇಳಿದರು. ಕರಮಪೂಜೆ ಆಚರಿಸಲು ಬಂದಿದ್ದ ಆತನ ಸಹೋದರಿಯ ಮನೆಯಿಂದ ಬಂಧಿಸಲಾಗಿದೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಅಮಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ರಾಜಸ್ಥಾನ ಗೆಲ್ಲಲು ಜೈಪುರದಲ್ಲಿ ಅಮಿತ್ ಶಾ ರಾತ್ರಿಯಿಡೀ ಚರ್ಚೆ

ಸುಲಿಗೆ ಸೇರಿದಂತೆ ಆರಕ್ಕೂ ಹೆಚ್ಚು ಪ್ರಕರಣಗಳಲ್ಲಿ ಮೆಹ್ತಾ ಬೇಕಾಗಿದ್ದ ಎನ್ನಲಾಗಿದ್ದು, ಆತನನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ ಎಂದು ಅವರು ಹೇಳಿದರು.

ಛತ್ತೀಸ್‍ಗಢದಲ್ಲಿ ಸಿಡಿಲಿಗೆ ಮೂವರು ಮಹಿಳೆಯರ ಬಲಿ

ಬಲೋದ್, ಸೆ.28 (ಪಿಟಿಐ)- ಛತ್ತೀಸ್‍ಗಢದ ಬಲೋದ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಸಿಡಿಲು ಬಡಿದು ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದೇವ್ರಿ ಬಾಂಗ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಕಿಸ್ನಾ ಗ್ರಾಮದ ಭತ್ತದ ಗದ್ದಾಯಲ್ಲಿ ಸಂತ್ರಸ್ತರು ಕೆಲಸ ಮಾಡುತ್ತಿದ್ದಾಗ ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂದಿನ ವರ್ಷದಿಂದ ಲಾಭದಾಯಕವಾಗಲಿದೆಯಂತೆ ಎಕ್ಸ್(X)

ಮಳೆ ಆರಂಭವಾದ ನಂತರ ಮೂವರು ಮಹಿಳೆಯರು ಮರದ ಕೆಳಗೆ ಆಶ್ರಯ ಪಡೆದರು. ಅಲ್ಲಿ ಏಕಾಏಕಿ ಸಿಡಿಲು ಬಡಿದು ಗಂಭೀರವಾಗಿ ಗಾಯಗೊಂಡರು. ತಕ್ಷಣ ಅವರನ್ನು ಸ್ಥಳೀಯರು ಸಮೀಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಿದರೂ ಪ್ರಯೋಜನವಾಗಲಿಲ್ಲ.

ಮೃತರನ್ನು ಚಮೇಲಿ ನಿಶಾಶ್, ಆಕೆಯ ಸೊಸೆ ಕಾಮಿನ್ ನಿಶಾದ್ ಮತ್ತು ಬಿಸಾಂಟಿನ್ ಸಾಹು ಎಂದು ಗುರುತಿಸಲಾಗಿದೆ. ಈ ಸಂಬಂಧ ಆಕಸ್ಮಿಕ ಸಾವಿನ ವರದಿಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡ್ರಗ್ಸ್ ಕಳ್ಳಸಾಗಣೆ ಆರೋಪದಡಿ ಕಾಂಗ್ರೆಸ್ ಶಾಸಕ ಅರೆಸ್ಟ್

ಚಂಡೀಗಢ,ಸೆ.28-ಮಾದಕ ವಸ್ತು ಕಳ್ಳಸಾಗಣೆ ಮತ್ತು ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರನ್ನು ಪಂಜಾಬ್ ಪೊಲೀಸರು ಇಂದು ಬಂಧಿಸಿದ್ದಾರೆ. ಪಂಜಾಬ್ ಪೊಲೀಸರ ತಂಡ ಇಂದು ಮುಂಜಾನೆ ಖೈರಾ ಅವರ ನಿವಾಸವನ್ನು ತಲುಪಿತು ಮತ್ತು 2015 ರಲ್ಲಿ ಜಲಾಲಾಬಾದ್‍ನ ಮಾದಕ ದ್ರವ್ಯಗಳು ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ (ಎನ್‍ಡಿಪಿಎಸï) ಕಾಯ್ದೆಯಡಿಯಲ್ಲಿ ದಾಖಲಾದ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿತು.

ಖೈರಾ ವಿರುದ್ಧದ ಪ್ರಾಥಮಿಕ ಆರೋಪಗಳಲ್ಲಿ ಕಳ್ಳಸಾಗಾಣಿಕೆದಾರರ ಅಂತರರಾಷ್ಟ್ರೀಯ ಗ್ಯಾಂಗ್ ಅನ್ನು ಬೆಂಬಲಿಸುವುದು, ಅವರಿಗೆ ಆಶ್ರಯ ನೀಡುವುದು ಮತ್ತು ಮಾದಕವಸ್ತು ಕಳ್ಳಸಾಗಣೆದಾರರಿಂದ ಆರ್ಥಿಕ ಪ್ರಯೋಜನಗಳನ್ನು ಪಡೆಯುವುದು ಸೇರಿದೆ.

ಮುಂದಿನ ವರ್ಷದಿಂದ ಲಾಭದಾಯಕವಾಗಲಿದೆಯಂತೆ ಎಕ್ಸ್(X)

ತನಿಖಾ ಸಂಸ್ಥೆಯ ಚಾರ್ಜ್ ಶೀಟ್ ಪ್ರಕಾರ, ಪಡೆದ ಹಣವನ್ನು ಆಸ್ತಿಗಳನ್ನು ಖರೀದಿಸಲು ಬಳಸಲಾಗಿದೆ ಎಂದು ಆರೋಪಿಸಲಾಗಿದೆ. 2014 ಮತ್ತು 2020 ರ ನಡುವೆ, ಖೈರಾ ತನ್ನ ಘೋಷಿತ ಆದಾಯವನ್ನು ಮೀರಿದ ವೆಚ್ಚಗಳೊಂದಿಗೆ ತನಗೆ ಮತ್ತು ಕುಟುಂಬ ಸದಸ್ಯರಿಗಾಗಿ RS 6.5 ಕೋಟಿ ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ.

ಪೊಲೀಸರು ಅವರ ಸ್ಥಳಕ್ಕೆ ಬಂದಾಗ ಕಾಂಗ್ರೆಸ್ ನಾಯಕ ಫೇಸ್‍ಬುಕ್ ಲೈವ್ ಅನ್ನು ಆಯೋಜಿಸುತ್ತಿದ್ದರು. ವೀಡಿಯೋದಲ್ಲಿ ಖೈರಾ ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿರುವ ದೃಶ್ಯವಿದೆ. ಪೊಲೀಸ್ ಅಧಿಕಾರಿ, ಡಿಎಸ್ಪಿ ಅಚ್ರು ರಾಮ್ ಶರ್ಮಾ, ಹಳೆಯ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಎಸ್‍ಐಟಿ ರಚಿಸಲಾಗಿದೆ ಎಂದು ಖೈರಾಗೆ ಹೇಳುವುದನ್ನು ವೀಡಿಯೊದಲ್ಲಿ ಕಾಣಬಹುದು. ವೀಡಿಯೋದಲ್ಲಿ, ಖೈರಾ ಅವರನ್ನು ಪೊಲೀಸ್ ಸಿಬ್ಬಂದಿ ಬಂಧಿಸುತ್ತಿದ್ದಂತೆ ಪಂಜಾಬ್ ಸರ್ಕಾರ್ ಮುರ್ದಾಬಾದ್ ಎಂಬ ಘೋಷಣೆಗಳನ್ನು ಎತ್ತುತ್ತಿರುವುದನ್ನು ಕಾಣಬಹುದು.

ರಾಷ್ಟ್ರಪತಿ ಭವನದ ಹೆಸರನ್ನು ಬದಲಾಹಿಸಿದ ಸಿಎಂ ಸಿದ್ದರಾಮಯ್ಯ

ಈ ಬಂಧನವು ಭಾರತ ಮೈತ್ರಿಕೂಟವನ್ನು ರಚಿಸಲು ಒಗ್ಗೂಡಿದ ಎಎಪಿ ಮತ್ತು ಕಾಂಗ್ರೆಸ್‍ನ ಸಂಬಂಧಗಳನ್ನು ಮತ್ತಷ್ಟು ಹದಗೆಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಪಂಜಾಬ್‍ನಲ್ಲಿ ಎಎಪಿ ಜೊತೆ ಯಾವುದೇ ಮೈತ್ರಿ ಅಥವಾ ಸೀಟು ಹಂಚಿಕೆ ಒಪ್ಪಂದವನ್ನು ಕಾಂಗ್ರೆಸ್‍ನ ರಾಜ್ಯ ಘಟಕ ವಿರೋಧಿಸಿದೆ.