Thursday, November 6, 2025
Home Blog Page 1940

ಜಮ್ಮುವಿನಲ್ಲಿ ಶಂಕಿತ ಉಗ್ರರ ಮನೆ ಮೇಲೆ ದಾಳಿ

ಜಮ್ಮು, ಸೆ 26 (ಪಿಟಿಐ) ಜಮ್ಮುವಿನ ಹೊರವಲಯದಲ್ಲಿರುವ ಮಾಜಿ ಭಯೋತ್ಪಾದಕ ಸಹಚರನ ಮನೆಯ ಮೇಲೆ ವಿಶೇಷ ತನಿಖಾ ಸಂಸ್ಥೆ (ಎಸ್‍ಐಎ) ಇಂದ ದಾಳಿ ನಡೆಸಿ ಪರಿಶೀಲನೆ ನಡೆಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸ್‍ನ ಬಂಡಾಯ ನಿಗ್ರಹ ದಳವು ಮುಂಜಾನೆ ಸುಂಜ್ವಾನ್‍ನ ಪೀರ್ ಬಾಗ್ ಪ್ರದೇಶದಲ್ಲಿ ಮೊಹಮ್ಮದ್ ಇಕ್ಬಾಲ್ ಅವರ ಮನೆಯನ್ನು ಶೋಧಿಸಿ ಪರೀಕ್ಷೆಗಾಗಿ ಮೊಬೈಲ್ ಫೋನ್ ಮತ್ತು ಎರಡು ಸಿಮ್ ಕಾರ್ಡ್‍ಗಳನ್ನು ವಶಪಡಿಸಿಕೊಂಡಿದೆ ಎಂದು ಅವರು ಹೇಳಿದರು.

ಬಿಜೆಪಿ – ಜೆಡಿಎಸ್ ಮೈತ್ರಿಯಿಂದ ತಲೆಕೆಳಗಾದ `ಕೈ’ ಲೆಕ್ಕಾಚಾರ

ಇಕ್ಬಾಲ್ ಮೂಲತಃ ರಿಯಾಸಿ ಜಿಲ್ಲೆಯ ಮಹೋರ್ ತೆಹಸಿಲ್‍ನ ಖೋರ್ ಗ್ರಾಮದ ನಿವಾಸಿಯಾಗಿದ್ದು, ಮಾಜಿ ಭಯೋತ್ಪಾದಕ ಸಹಚರನಾಗಿದ್ದು, ಆತನಿಗೆ ಇನ್ನೂ ಭಯೋತ್ಪಾದಕರೊಂದಿಗೆ ಸಂಪರ್ಕವಿದೆ ಎಂಬ ಶಂಕೆಯ ಮೇಲೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶವವಾಗಿ ಪತ್ತೆಯಾದ ವಿಶೇಷ ಪೊಲೀಸ್ ಅಧಿಕಾರಿ

ಪೂಂಚ್ /ಜಮ್ಮು, ಸೆ 26 (ಪಿಟಿಐ) – ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ವಿಶೇಷ ಪೊಲೀಸ್ ಅಧಿಕಾರಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಅವರು ರಸ್ತೆ ಅಪಘಾತದಲ್ಲಿ ಮಾರಣಾಂತಿಕವಾಗಿ ಗಾಯಗೊಂಡಿದ್ದು ನಂತರ ಮೃತಪಟ್ಟಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಎಸ್‍ಪಿಒ ಖಾಲಿಕ್ ಹುಸೇನ್ ಅವರ ಮೃತದೇಹವು ಕಾಂಕೋಟೆ ಗ್ರಾಮದ ಬಳಿ ಮುಖ್ಯ ರಸ್ತೆಯಿಂದ 10 ಅಡಿ ಕೆಳಗೆ, ಅವರ ಮೋಟಾರ್‍ಸೈಕಲ್ ಸಮೀಪದಲ್ಲಿ ಬಿದ್ದಿದೆ ಎಂದು ಪೂಂಚ್‍ನ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ದೀಪಕ್ ಪಠಾನಿಯಾ ತಿಳಿಸಿದ್ದಾರೆ.

ಮುಂಬೈ ದಾಳಿ ರೂವಾರಿ ರಾಣಾ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ

ಪೂಂಚ್ ಜಿಲ್ಲಾ ಪೊಲೀಸ್ ಲೈನ್ಸ್‍ನಲ್ಲಿ ನಿಯೋಜಿಸಲಾದ ಹುಸೇನ್ ಅವರ ತಲೆಗೆ ಗಾಯಗಳಾಗಿದ್ದು, ಪ್ರಾಥಮಿಕ ತನಿಖೆಯಿಂದ ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪೂಂಚ್ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ, ಪೊಲೀಸರು ವಿಚಾರಣೆಯನ್ನು ಪ್ರಾರಂಭಿಸಿದ್ದಾರೆ.

ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಮಧ್ಯಪ್ರದೇಶ ಅನಾರೋಗ್ಯ ರಾಜ್ಯವಾಗಿತ್ತು : ಚೌಹಾಣ್ ವಾಗ್ದಾಳಿ

ಭೋಪಾಲ್,ಸೆ.26- ಈ ಹಿಂದೆ ಕಾಂಗ್ರೆಸ್ ಮಧ್ಯಪ್ರದೇಶವನ್ನು ಅನಾರೋಗ್ಯ ರಾಜ್ಯವನ್ನಾಗಿ ಪರಿವರ್ತಿಸಿತ್ತು. ಇದೀಗ ನಾವು ಆ ಕಳಂಕವನ್ನು ತೆಗೆದುಹಾಕುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಮುಖ್ಯಮಂತ್ರಿ ಶಿವರಾಜ್‍ಸಿಂಗ್ ಚೌಹಾಣ್ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ರಾಜಧಾನಿ ಭೋಪಾಲ್‍ನ ಜಾಂಬೋರಿ ಮೈದಾನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ ಕಾರ್ಯಕರ್ತ ಮಹಾಕುಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಆಡಳಿತದಲ್ಲಿ ಕೇವಲ 60,000 ಮಾತ್ರ ಇತ್ತು. ರಾಜ್ಯದಲ್ಲಿ ಕಿಲೋಮೀಟರ್‍ಗಟ್ಟಲೆ ಕೆಟ್ಟು ಹೋಗಿರುವ ರಸ್ತೆಗಳು, ಇಂದು ನಾವು ರಾಜ್ಯದಲ್ಲಿ ಐದು ಲಕ್ಷ ಕಿಲೋಮೀಟರ್‍ಗಳಷ್ಟು ಭವ್ಯವಾದ ರಸ್ತೆಗಳನ್ನು ನಿರ್ಮಿಸಿದ್ದೇವೆ ಎಂದು ಸಿಎಂ ಚೌಹಾಣ್ ಹೇಳಿದರು.

ಬಾಲಕಿ ಅಪಹರಿಸಿ ಚಲಿಸುವ ವಾಹನದಲ್ಲಿ ಗ್ಯಾಂಗ್ ರೇಪ್ ಮಾಡಿದ್ದ ಅತ್ಯಾಚಾರಿಗಳು ಅರೆಸ್ಟ್

ಕಾಂಗ್ರೆಸ್ ಆಡಳಿತದಲ್ಲಿ ಎರಡು ಮೂರು ತಾಸು ವಿದ್ಯುತ್ ಲಭ್ಯವಿದ್ದು, ಕೇವಲ 2900 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿತ್ತು, ಇಂದು ಬಿಜೆಪಿ ಸರಕಾರ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯನ್ನು 29000 ಮೆಗಾವ್ಯಾಟ್‍ಗೆ ಹೆಚ್ಚಿಸಿದೆ. ನೀರಾವರಿ ಸೌಲಭ್ಯ ಮಾತ್ರ ಲಭ್ಯವಿತ್ತು. 7500 ಹೆಕ್ಟೇರ್ ಭೂಮಿ, ಆದರೆ ಇಂದು 47 ಲಕ್ಷ ಹೆಕ್ಟೇರ್ ಭೂಮಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದರು. ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವು ಮಧ್ಯಪ್ರದೇಶವನ್ನು ವೇಗವಾಗಿ ಮುನ್ನಡೆಸಿದೆ ಎಂದು ಚೌಹಾಣ್ ಹೇಳಿದರು.

ಕಾಂಗ್ರೆಸ್ ಕಾಲದಲ್ಲಿ ಬಡವರು ಬಡತನದ ಶಾಪವನ್ನು ಅನುಭವಿಸಬೇಕಾಯಿತು ಆದರೆ, ನಾವು 1.36 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲಕ್ಕೆತ್ತಿದ್ದೇವೆ ಎಂದು ಹೇಳಲು ನಾನು ಹೆಮ್ಮೆಪಡುತ್ತೇನೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಈ ಪವಾಡ ಸಂಭವಿಸಿದೆ ಎಂದು ಸಂಸದ ಸಿಎಂ ಹೇಳಿದ್ದಾರೆ.

ಮನಮೋಹನ್‍ಸಿಂಗ್ ಹುಟ್ಟುಹಬ್ಬಕ್ಕೆ ಶುಭ ಕೋರಿದ ಪ್ರಧಾನಿ ಮೋದಿ

ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರದ 15 ತಿಂಗಳ ಆಡಳಿತದ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ, ಕಮಲ್ ನಾಥ್ ಪಾಪ ಮಾಡಿದ್ದಾರೆ, ಪ್ರಧಾನಿ ಮೋದಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆಗಳನ್ನು ಕಳುಹಿಸಿದ್ದಾರೆ. ಆದರೆ ನಾಥ್ 2,00,000 ಮನೆಗಳನ್ನು ಹಿಂದಿರುಗಿಸುವ ಪಾಪ ಮಾಡಿದ್ದಾರೆ. ಜಲ ಜೀವನ್ ಮಿಷನ್ ಅಡಿಯಲ್ಲಿ, ಪ್ರಧಾನ ಮಂತ್ರಿ ಹಣ ಕಳುಹಿಸಿದ್ದಾರೆ ಆದರೆ ಕಮಲ್ ನಾಥ್ ಅವರು ಜಲ ಜೀವನ್ ಮಿಷನ್ ಅನ್ನು ಪ್ರಾರಂಭಿಸಲಿಲ್ಲ. ನಾವು ಮತ್ತೆ ಅಧಿಕಾರಕ್ಕೆ ಬಂದಾಗ ನಾವು ಟ್ಯಾಪ್ ವಾಟರ್ ಯೋಜನೆಯಡಿ 67 ಲಕ್ಷ ಮನೆಗಳಿಗೆ ನೀರು ಒದಗಿಸಲು ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.

ಮಣಿಪುರ : ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಹತ್ಯೆ

ಇಂಫಾಲ,ಸೆ.26- ಮಣಿಪುರದಲ್ಲಿ ಕಳೆದ ಜುಲೈನಿಂದ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಹತ್ಯೆ ಮಾಡಲಾಗಿದೆ. ಮೃತರನ್ನು ಮೈಟಿ ಸಮುದಾಯದ ಫಿಜಾಮ್ ಹೆಮ್ಜಿತ್ (20), ಹಿಜಾಮ್ ಲಿಂಥೋಯಿಂಗಂಬಿ (17) ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಗಳಿಬ್ಬರ ಮೃತದೇಹದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಬಿಐ ವಿದ್ಯಾರ್ಥಿಗಳು ಕಾಣೆಯಾಗಿರುವ ಪ್ರಕರಣದ ತನಿಖೆ ನಡೆಸುತ್ತಿದ್ದು, ಈವರೆಗೂ ಮೃತ ದೇಹಗಳು ಪತ್ತೆಯಾಗದಿರುವುದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅವರು ಸಶಸ್ತ್ರ ಗುಂಪಿನೊಂದಿಗೆ ಅರಣ್ಯ ಶಿಬಿರದಲ್ಲಿ ಹುಲ್ಲಿನ ಕಾಂಪೌಂಡ್‍ನಲ್ಲಿ ಕುಳಿತಿರುವುದು ಚಿತ್ರದಲ್ಲಿ ಕಾಣಬಹುದಾಗಿದೆ. ಆದರೆ ಇಬ್ಬರು ವಿದ್ಯಾರ್ಥಿಗಳ ಮೃತದೇಹಗಳು ಇನ್ನೂ ಕೂಡ ಪತ್ತೆಯಾಗಿಲ್ಲ. ಇಬ್ಬರು ವಿದ್ಯಾರ್ಥಿಗಳ ಮೃತ ದೇಹಗಳನ್ನು ತೋರಿಸುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ, ಮಣಿಪುರ ಸರ್ಕಾರವು ಈ ವಿಷಯದಲ್ಲಿ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಹೇಳಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಮಣಿಪುರ ಸರ್ಕಾರ, ಕೊಲೆಗಾರರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಿಬಿಐ ಹಾಗೂ ರಾಜ್ಯ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದು, ಶೀಘ್ರದಲ್ಲೇ ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಮಾಜಿ ಸಿಎಂ ವೀರೇಂದ್ರ ಪಾಟೀಲರ ಪತ್ನಿ ಶಾರದಾ ಪಾಟೀಲ ನಿಧನ

ವಿದ್ಯಾರ್ಥಿಗಳ ಹತ್ಯೆಗೆ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದು, ಕಾಣೆಯಾದವರನ್ನು ಪತ್ತೆ ಹಚ್ಚಲು ಇಷ್ಟು ದಿನ ಬೇಕಾಯಿತಾ ಎಂದು ಹಲವರು ಪ್ರಶ್ನಿಸಿದ್ದಾರೆ. ಜುಲೈ ತಿಂಗಳಿನಲ್ಲಿ ಅಂಗಡಿಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ವಿದ್ಯಾರ್ಥಿಗಳಿಬ್ಬರೂ ಪತ್ತೆಯಾಗಿದ್ದರೂ ಅವರನ್ನು ಪೊಲೀಸರು ಪತ್ತೆ ಮಾಡಿಲ್ಲ. ಈ ಪೊಲೀಸರು ಮತ್ತು ಸರ್ಕಾರ ಹೇಗೆ ಕೆಲಸ ಮಾಡುತ್ತಿವೆ? ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜುಲೈ ತಿಂಗಳಿನಲ್ಲಿ ಅಂಗಡಿಯೊಂದರಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಹಿಜಾಮ್ ಲಿಂಥೋಯಿಂಗಂಬಿ ಮತ್ತು ಫಿಜಾಮ್ ಹೇಮ್ಜಿತ್ ಎಂಬ ಇಬ್ಬರು ವಿದ್ಯಾರ್ಥಿಗಳು ಕಾಣಿಸಿಕೊಂಡಿದ್ದರು. ಅಂದಿನಿಂದ ಆತನ ಯಾವುದೇ ಕುರುಹು ಪತ್ತೆಯಾಗಿಲ್ಲ. ಇದೀಗ ಇದ್ದಕ್ಕಿದ್ದಂತೆ ಅವರ ಮೃತದೇಹದ ಫೋಟೋ ಹೊರಬಿದ್ದಿದೆ.

ಮೊದಲ ಫೋಟೋದಲ್ಲಿ, ಹಿಜಾಮ್ ಲಿಂಥೋಯಿಂಗಂಬಿ ಮತ್ತು ಫಿಜಾಮ್ ಹೆಮ್ಜಿತ್ ಕುಳಿತಿರುವುದನ್ನು ಕಾಣಬಹುದು. ಈ ಫೋಟೋದಲ್ಲಿ ಹಿಜಾಮ್ ಬಿಳಿ ಟಿ ಶರ್ಟ್ ಮತ್ತು ಫಿಜಾಮ್ ಹೇಮ್ಜಿತ್ ಚೆಕ್ ಶರ್ಟ್ ಧರಿಸಿದ್ದಾರೆ. ಅವರ ಹಿಂದೆ ಬಂದೂಕು ಹಿಡಿದ ಇಬ್ಬರು ವ್ಯಕ್ತಿಗಳು ನಿಂತಿದ್ದಾರೆ.

ಬಾಲಕಿ ಅಪಹರಿಸಿ ಚಲಿಸುವ ವಾಹನದಲ್ಲಿ ಗ್ಯಾಂಗ್ ರೇಪ್ ಮಾಡಿದ್ದ ಅತ್ಯಾಚಾರಿಗಳು ಅರೆಸ್ಟ್

ಎರಡನೇ ಫೋಟೋದಲ್ಲಿ, ಇಬ್ಬರು ವಿದ್ಯಾರ್ಥಿಗಳಾದ ಹಿಜಾಮ್ ಲಿಂಥೋಯಿಂಗಂಬಿ ಮತ್ತು ಫಿಜಾಮ್ ಹೆಮ್ಜಿತ್ ಅವರ ದೇಹಗಳು ಪೊದೆಗಳ ನಡುವೆ ಬಿದ್ದಿರುವುದು ಕಂಡುಬರುತ್ತದೆ.

ಬಿಜೆಪಿ – ಜೆಡಿಎಸ್ ಮೈತ್ರಿಯಿಂದ ತಲೆಕೆಳಗಾದ `ಕೈ’ ಲೆಕ್ಕಾಚಾರ

ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸುವ ಏಕೈಕ ಗುರಿಯೊಂದಿಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡ ಹಿನ್ನೆಲೆ ಇದೀಗ ರಾಜಕೀಯ ಲಾಭ, ನಷ್ಟ ಶುರುವಾಗಿದೆ.ವಿಧಾನಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಹೀನಾಯ ಸೋಲು ಕಂಡ ನಂತರ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಭರ್ಜರಿ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಮಣಿಸಲು ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದು ರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದೆ.

ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ಗೆ ಇದೀಗ ಉಭಯ ಪಕ್ಷಗಳ ಮೈತ್ರಿ ರಾಜಕೀಯ ತಂತ್ರಗಾರಿಕೆಯನ್ನು ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಎರಡೂ ಪಕ್ಷಗಳ ಮೈತ್ರಿಯಿಂದ ನಮಗೇನೂ ನಷ್ಟವಿಲ್ಲ ಎಂದು ನಾಯಕರು ಹೇಳುತ್ತಿದ್ದಾರಾದರೂ ವಾಸ್ತವ ಪರಿಸ್ಥಿತಿ ಮಾತ್ರ ವಿಭಿನ್ನವಾಗಿದೆ. ಹಾಗಾದರೆ ಬಿಜೆಪಿ, ಜೆಡಿಎಸ್ ಮೈತ್ರಿಯಿಂದ ಯಾರಿಗೆ ಲಾಭ, ಇನ್ನ್ಯಾರಿಗೆ ನಷ್ಟ ಎಂಬ ಚರ್ಚೆಗಳೂ ಕೂಡ ಮುನ್ನಲೆಗೆ ಬಂದಿದೆ.

ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಮೈತ್ರಿಯಿಂದ ಬಿಜೆಪಿಗಿಂತ ಜೆಡಿಎಸ್ ಗೆ ಹೆಚ್ಚು ಲಾಭ ಎಂಬ ಮಾತುಗಳು ಕೇಳಿಬರುತ್ತಿವೆ. ಲೋಕಸಭೆ ಚುನಾವಣೆಯಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ನಡೆದಿತ್ತು. ಆದರೆ ಇದರಲ್ಲಿ ಜೆಡಿಎಸ್ ಹಾಸನದಲ್ಲಿ ಮಾತ್ರ ಗೆಲುವು ಸಾಸಿತ್ತು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಸೀಟು ಹಂಚಿಕೆ ಇನ್ನೂ ನಿಗದಿಯಾಗಿಲ್ಲ. ಆದರೂ ಹಾಸನ, ಮಂಡ್ಯ, ತುಮಕೂರು, ಕೋಲಾರ ಕ್ಷೇತ್ರಗಳಿಗೆ ಜೆಡಿಎಸ್ ಬೇಡಿಕೆ ಇಡಬಹುದು. ಹೀಗಾದಲ್ಲಿ ಜೆಡಿಎಸ್ ಹೆಚ್ಚು ಕ್ಷೇತ್ರದಲ್ಲಿ ಗೆಲುವು ಸಾಸಬಹುದು.

ಬಿಜೆಪಿ ಜೊತೆಗಿನ ಮೈತ್ರಿಯಿಂದ ಜೆಡಿಎಸ್ ಗೆ ತನ್ನ ರಾಜಕೀಯ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಲು ಅವಕಾಶ ಸಿಗಲಿದೆ. ರಾಷ್ಟ್ರೀಯ ಪಕ್ಷದ ಜೊತೆಗಿನ ಮೈತ್ರಿ ಪಕ್ಷಕ್ಕೂ ಅನುಕೂಲಕರ. ಜೊತೆಗೆ ಕೇಂದ್ರದಲ್ಲಿ ಎನ್ ಡಿಎ ಮತ್ತೆ ಅಧಿಕಾರಕ್ಕೆ ಬಂದಲ್ಲಿ ರಾಜಕೀಯ ಸ್ಥಾನಮಾನಗಳು ಸಿಗುವ ಸಾಧ್ಯತೆ ಇದೆ.

ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಹೀನಾಯವಾಗಿ ಸೋಲು ಅನುಭವಿಸಿದೆ. 135 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಬೀಗುತ್ತಿದೆ. ಗ್ಯಾರಂಟಿ ಘೋಷಣೆಗಳ ಜಾರಿ ಮೂಲಕ ಲೋಕಸಭೆ ಚುನಾವಣೆಯಲ್ಲೂ ಲಾಭ ಗಳಿಸುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದೆ. ಇಂತಹ ಸಂದರ್ಭಗಳಲ್ಲಿ ಕಾಂಗ್ರೆಸ್ ಕಟ್ಟಿ ಹಾಕಲು ವಿರೋಧ ಪಕ್ಷ ಪ್ರಬಲವಾಗಿರಬೇಕಾಗಿದೆ. ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಹೋರಾಟ ಮಾಡಿದರೆ ಅದು ಆಡಳಿತ ಪಕ್ಷಕ್ಕೆ ಹೊಡೆತ ಬೀಳಬಹುದು.

ಆರ್‌ಬಿಐ ಡೆಪ್ಯುಟಿ ಗವರ್ನರ್ ಅವಧಿ ವಿಸ್ತರಣೆ

ಮೈತ್ರಿಯಿಂದ ಹಳೆ ಮೈಸೂರು ಭಾಗದ ನಾಲ್ಕೈದು ಕ್ಷೇತ್ರಗಳಲ್ಲಿ ಎರಡು ಪಕ್ಷಗಳಿಗೆ ಅನುಕೂಲಕರವಾಗಬಹುದು. ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗಳಿಸುವ ಪ್ರಯತ್ನದಲ್ಲಿದೆ. ಆದರೆ ಬಿಜೆಪಿ ಜೆಡಿಎಸ್ ಮೈತ್ರಿ ಇದಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ತುಮಕೂರು ಕ್ಷೇತ್ರಗಳಲ್ಲಿ ಗೆಲ್ಲಲು ಅವಕಾಶ ಇರುವುದು ಅಲ್ಲಗಳೆಯುವ ಹಾಗಿಲ್ಲ.

ಚುನಾವಣೆ ಸಂದರ್ಭದಲ್ಲಿ ಮೈತ್ರಿಯಾದರೂ ಬಿಜೆಪಿ ಹಾಗೂ ಜೆಡಿಎಸ್ ತಳಮಟ್ಟದ ಕಾರ್ಯಕರ್ತಲ್ಲಿ ಹೊಂದಾಣಿಕೆ ಕೊರತೆ ಸೃಷ್ಟಿಯಾಗಬಹುದು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯ ಸಂದರ್ಭದಲ್ಲಿ ಇದೇ ಸಮಸ್ಯೆ ಎದುರಾಗಿತ್ತು. ಬದ್ಧ ಎದುರಾಳಿ ಕಾರ್ಯಕರ್ತರು ಮೇಲ್ಮಟ್ಟದ ಮೈತ್ರಿಗೆ ಹೊಂದಾಣಿಕೆ ಆಗುವುದು ಕಷ್ಟ. ಇದು ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಅಲ್ಲಗಳೆಯುವ ಹಾಗಿಲ್ಲ.

ಬಿಜೆಪಿ ಜೊತೆಗಿನ ಮೈತ್ರಿಯಿಂದ ಜೆಡಿಎಸ್ ಗೆ ಬೀಳುತ್ತಿದ್ದ ಮುಸ್ಲಿಂ ಮತಗಳು ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್ ಪಾಲಾಗುವ ಸಾಧ್ಯತೆ ಇದೆ. ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಬಿಂಬಿಸಿ ಅದರ ಲಾಭ ಗಳಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿತ್ತು. ಆದರೆ ಇದೀಗ ಎರಡು ಪಕ್ಷಗಳ ನಡುವೆ ಅಕೃತ ಮೈತ್ರಿ ನಡೆದಿರುವುದು ಕಾಂಗ್ರೆಸ್ ಗೆ ಮುಸ್ಲಿಂ ಮತಗಳು ಪೂರ್ಣ ಪ್ರಮಾಣದಲ್ಲಿ ಗಳಿಸಲು ಅವಕಾಶವಾಗಲಿದೆ. ಇದು ಜೆಡಿಎಸ್ ಗೆ ಭವಿಷ್ಯದಲ್ಲಿ ಹಿನ್ನಡೆ ಆಗಲಿದೆ.

ಜೆಡಿಎಸ್ ಬಿಜೆಪಿಯ ಸೈದ್ಧಾಂತಿಕ ನಿಲುವನ್ನು ಸದಾ ಖಂಡಿಸುತ್ತಾ ಬಂದಿದೆ. ಅದರಲ್ಲೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬಿಜೆಪಿ ಜೊತೆಗಿನ ಮೈತ್ರಿಗೆ ಸೈದ್ಧಾಂತಿಕ ಕಾರಣ ನೀಡಿ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದರು. ಆದರೆ ಇದೀಗ ಎಚ್.ಡಿ.ದೇವೇಗೌಡರ ಜಾತ್ಯತೀತ ವರ್ಚಸ್ಸಿಗೆ ಈ ಮೈತ್ರಿ ಪೆಟ್ಟು ಕೊಟ್ಟಂತಾಗುತ್ತದೆ. ಇದನ್ನು ಕಾಂಗ್ರೆಸ್ ಅಸ್ತ್ರವಾಗಿ ಬಳಸಲಿದೆ.
ಬಿಜೆಪಿ ಕುಟುಂಬ ರಾಜಕಾರಣದ ವಿರುದ್ಧ ಸದಾ ಟೀಕೆ ಮಾಡುತ್ತಾ ಬಂದಿದೆ.

ಜೆಡಿಎಸ್ ಪಕ್ಷವನ್ನು ಇದೇ ಕಾರಣಕ್ಕಾಗಿ ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದರು. ಆದರೆ ಇದೀಗ ಅದೇ ಪಕ್ಷದ ಜೊತೆಗೆ ಬಿಜೆಪಿ ಮೈತ್ರಿ ಮಾಡುತ್ತಿದೆ. ಕುಟುಂಬ ರಾಜಕಾರಣದ ವಿರುದ್ಧ ಮಾತನಾಡುತ್ತಿದ್ದ ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್ ಗೆ ಒಂದು ಅಸ್ತ್ರ ಸಿಕ್ಕಂತಾಗಿದೆ.
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಎರಡು ಪಕ್ಷಗಳಲ್ಲಿ ವಿರೋಧ ಇದೆ.

ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕೆಲವು ಶಾಸಕರು ಹಾಗೂ ಮುಖಂಡರು ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರೀತಂ ಗೌಡ, ಶರಣುಗೌಡ ಕುಂದಕೂರು, ಕರೆಮ್ಮ ನಾಯಕ್ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಪಕ್ಷದ ಮೇಲೆ ದೀರ್ಘಕಾಲಿಕ ಪರಿಣಾಮ ಬೀರುವ ಸಾಧ್ಯತೆ ಇದೆ. ಅಲ್ಲದೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರುಗಳನ್ನು ಕಳೆದುಕೊಳ್ಳುವ ಅಪಾಯವೂ ಇದೆ.

ದಾಹ ತೀರಿಸಿ, ಅನ್ನದಾತರ ಮನೆದೇವರಾದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ

ಅದೊಂದು ದಿನ ಮಳೆಗಾಲದಲ್ಲಿ ಶರಾವತಿ ಜಲಾನಯನ ಪ್ರದೇಶದಲ್ಲಿ ಚೆನ್ನಾಗಿ ಮಳೆಬಿದ್ದು, ಶರಾವತಿ ನದಿಯು ತುಂಬಿ ಜೋಗ್ ಜಲಪಾತದಲ್ಲಿ ಭೋರ್ಗರೆಯುತ್ತಾ ರಾಜಾರಾಣಿ, ರೋರರ್, ರಾಕೆಟ್, ಅತ್ಯಂತ ರಮಣೀಯವಾಗಿ ಧುಮ್ಮಿಕ್ಕುತ್ತಿದ್ದುದು ಮೈಸೂರು ಅರಸರ ಕಿವಿಗೆ ಬಿದ್ದು ಅದನ್ನು ಕಣ್ತುಂಬಿಸಿಕೊಳ್ಳುವ ಸಲುವಾಗಿ ತಮ್ಮ ದಿವಾನರೊಂದಿಗೆ ಜೋಗ್ ಜಲಪಾತಕ್ಕೆ ಬಂದು ಆಹಾ ಅದ್ಭುತ..!! ಎಷ್ಟು ರಮಣೀಯವಾಗಿದೆ ಎಂದು ತಮ್ಮ ದಿವಾನರತ್ತ ಪ್ರತಿಕ್ರಿಯೆಗಾಗಿ ತಿರುಗಿದಾಗ ಅವರ ದಿವಾನರ ಬಾಯಿಯಿಂದ ಬಂದ ಮಾತು ಓ ಮೈ ಗಾಡ್..! ವಾಟ್ ಎ ವೇಸ್ಟ್ ಎಂಬುದನ್ನು ಕೇಳಿ ಆಶ್ಚರ್ಯ ಚಕಿತರಾಗಿದ್ದರಂತೆ.

ಆ ರೀತಿಯಾಗಿ ಸದಾಕಾಲವೂ ಜನರ ಬಗ್ಗೆ ಯೋಚನೆ ಮಾಡುತ್ತಾ ತಮ್ಮ ಜೀವಮಾನವಿಡೀ ಜನಸೇವೆಗೆ ಮುಡುಪಾಗಿಟ್ಟ ಶತಾಯುಷಿಗಳಾಗಿದ್ದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು, ಅಂದಿನ ಕೋಲಾರ ಇಂದಿನ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದ ವಿಶ್ವವಿಖ್ಯಾತ ಗಿರಿಧಾಮವಾದ ನಂದಿಬೆಟ್ಟದ ತಟದಲ್ಲಿರುವ ಮುದ್ದೇನಹಳ್ಳಿ ಎಂಬ ಗ್ರಾಮದಲ್ಲಿದ್ದ ಸಂಸ್ಕøತ ವಿದ್ವಾಂಸರಾಗಿದ್ದ ಶ್ರೀನಿವಾಸ ಶಾಸ್ತ್ರಿಗಳು ಮತ್ತು ವೆಂಕಟಲಕ್ಷಮ್ಮ ದಂಪತಿ ಸುಪುತ್ರನಾಗಿ ಶ್ರೀ ವಿಶ್ವೇಶ್ವರಯ್ಯನವರ ಜನನವಾಗುತ್ತದೆ.

ತಮ್ಮೂರಿನ ಹತ್ತಿರದಲ್ಲೇ ಇದ್ದ ಚಿಕ್ಕಬಳ್ಳಾಪುರದ ಸರ್ಕಾರಿ ಶಾಲೆಯಲ್ಲಿ ವಿಶ್ವೇಶ್ವರಯ್ಯ ಅವರ ಪ್ರಾಥಮಿಕ ವಿದ್ಯಾಭ್ಯಾಸ ನಡೆಯುತ್ತಿದ್ದಾಗಲೇ ಅವರ ತಂದೆಯವರು ಅಕಾಲಿಕವಾಗಿ ಮರಣ ಹೊಂದುತ್ತಾರೆ. ಮನೆಯಲ್ಲಿದ್ದ ದಟ್ಟದಾರಿದ್ರ್ಯದ ಬದುಕಿನ ನಡುವೆಯೂ ವಿಧವೆಯಾದ ಅವರ ತಾಯಿ ಅವರಿವರ ಮನೆಯಲ್ಲಿ ಕೆಲಸ ಮಾಡುತ್ತ ತಮ್ಮ ಮಗನನ್ನು ಸಾಕಲು ಪ್ರಯತ್ನಿಸುತ್ತಿರುತ್ತಾರೆ.

ಆ ಮಾತು ನಿಜ ಮಾಡಿದ ಮಹನೀಯ: ಅಂದೊಮ್ಮೆ ವಿಶ್ವೇಶ್ವರಯ್ಯನವರು ಅವರ ಗುರುಗಳ ಮನೆಗೆ ಹೋಗಿದ್ದಾಗ ಅವರಿಗೆ ಬಾಯಾರಿಕೆಯಾಗಿ ಗುರುಗಳ ಮನೆಯಲ್ಲಿ ಕುಡಿಯಲು ನೀರು ಕೇಳಿದಾಗ ಅದೇ ಸಮಯದಲ್ಲಿ ಬರಗಾಲದಿಂದಾಗಿ ಊರಿನ ಬಾವಿಗಳೆಲ್ಲಾ ಬತ್ತಿ ಹೋಗಿ ಬಲು ದೂರದಿಂದ ಕುಡಿಯಲು ನೀರನ್ನು ತಂದಿದ್ದ ಗುರುಗಳ ಮಡದಿಯು ಬಾಲಕ ವಿಶ್ವೇಶ್ವರಯ್ಯನವರಿಗೆ ಕುಡಿಯಲು ನೀರನ್ನು ಕೊಟ್ಟು, ಆ ಬಾಲಕ ನೀರು ಕುಡಿಯುತ್ತಿದ್ದಾಗ, ನೋಡಪ್ಪಾ ನೀನು ದೊಡ್ಡವನಾದ ಮೇಲೆ ಚೆನ್ನಾಗಿ ಓದಿ ದೊಡ್ಡ ಹುದ್ದೆಯನ್ನು ಗಳಿಸಿ ನಮ್ಮ ಊರಿನ ನೀರಿನ ಸಮಸ್ಯೆಯನ್ನು ಪರಿಹಾರ ಮಾಡುತ್ತೀಯಾ? ಎಂದು ಕೇಳಿರುತ್ತಾರೆ.

ಅವರು ಕೇಳಿದ ಪ್ರಶ್ನೆಯನ್ನು ಸರಿಯಾಗಿ ಅರಿಯದಿದ್ದರೂ ಸಹ ಸಣ್ಣ ವಯಸ್ಸಿನ ವಿಶ್ವೇಶ್ವರಯ್ಯನವರು ಸರಿ ನಿಮ್ಮ ಬಾಯಿ ಹರಕೆಯಂತೆ ಹಾಗೇ ಆಗಲಿ ಎಂದು ಮಾತುಕೊಟ್ಟು ಬಂದಿರುತ್ತಾರೆ. ಮುಂದೊಂದು ದಿನ ಅವರು ಕರುನಾಡಿನ ಸಾಕಷ್ಟು ಹಳ್ಳಿಗಳಿಗೆ ಅವರು ಕಟ್ಟಿದ ಡ್ಯಾಮ್ಗಳು ನೀರು ಕೊಟ್ಟು ದಾಹ ನೀಗಿಸುತ್ತವೆ ಎಂದು ಯಾರೂ ಊಹಿಸಿರಲಿಲ್ಲ.

ಓದಿಗೆ ಶಕ್ತಿ ತುಂಬಿದ ನಡಿಗೆಯದು: ಬುದ್ಧಿವಂತ ವಿಶ್ವೇಶ್ವರಯ್ಯನವರ ವಿದ್ಯಾಭ್ಯಾಸಕ್ಕೆ ಊರಿನಲ್ಲಿ ಕಷ್ಟವಾದಾಗ, ಬೆಂಗಳೂರಿನಲ್ಲಿದ್ದ ಅವರ ಸೋದರ ಮಾವ ಎಚ್.ರಾಮಯ್ಯನವರ ಮನೆಗೆ ಬಂದ ವಿಶ್ವೇಶ್ವರಯ್ಯನವರು ವೆಸ್ಲಿ ಮಿಷನ್ ಹೈಸ್ಕೂಲ್ ಸೇರಿಕೊಳ್ಳುವುದಲ್ಲದೆ ಆರ್ಥಿಕವಾಗಿ ಅಷ್ಟೇನೂ ಸಬಲರಾಗಿಲ್ಲದಿದ್ದ ಅವರ ಮಾವನವರಿಗೆ ಹೊರೆಯಾಗದಿರಲೆಂದು ವಾರಾನ್ನದ ಮೂಲಕ ತಮ್ಮ ದೈನಂದಿನ ಹಸಿವು ನೀಗಿಸಿಕೊಳ್ಳುತ್ತಾರೆ.

ಶಾಲೆಯಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಗೆ ಹಣಕಟ್ಟಲು ಹೇಳಿದಾಗ ಅಷ್ಟೊಂದು ಹಣವನ್ನು ಮಾವನ ಬಳಿ ಕೇಳಲು ಸಂಕೋಚಪಟ್ಟ ವಿಶ್ವೇಶ್ವರಯ್ಯನವರು ಬೆಂಗಳೂರಿನ ತಮ್ಮ ಶಾಲೆಯಿಂದ 60 ಕಿಮೀ ದೂರವಿರುವ ಮುದ್ದೇನಹಳ್ಳಿಗೆ ಕಾಲಿಗೆ ಚಪ್ಪಲಿಯೂ ಇಲ್ಲದೆ ಬರಿಗಾಲಿನಲ್ಲಿ ನಡೆದುಕೊಂಡೇ ಮಧ್ಯರಾತ್ರಿಯ ಸಮಯಕ್ಕೆ ತಮ್ಮ ಚಿಕ್ಕದಾದ ಮುರುಕಲು ಮನೆಗೆ ಬಂದಾಗ, ಆಶ್ಚರ್ಯಚಕಿತಳಾದ ತಾಯಿ ಇದೇನಪ್ಪಾ ಇಷ್ಟು ಹೊತ್ತಿನಲ್ಲಿ ಬಂದಿದ್ದೀಯ ಎಂದು ವಿಚಾರಿಸಿದ್ದಾರೆ.

ಅಮ್ಮ ನಾಳೆ ಬೆಳಿಗ್ಗೆ 11 ಗಂಟೆಯೊಳಗೆ ಮೆಟ್ರಿಕ್ಯುಲೇಷನ್ ಪರೀಕ್ಷೆಗೆ 12 ರೂ. ಫೀಸ್ ಕಟ್ಟಬೇಕು, ಇಲ್ಲದಿದ್ದರೆ ಒಂದು ವರ್ಷದ ಓದು ವ್ಯರ್ಥವಾಗುತ್ತದೆ ಎನ್ನುತ್ತಾರೆ. ಕೈಯಲ್ಲಿ ಬಿಡಿಗಾಸು ಇಲ್ಲದೆ ಹತಾಶಳಾಗಿದ್ದ ತಾಯಿ ಅಷ್ಟು ತಡರಾತ್ರಿಯಲ್ಲಿಯೇ ತಮ್ಮ ನೆರೆಮನೆಯ ಸದ್ಗುಣಿಗಳು ಮತ್ತು ಉದಾರಿಗಳಾಗಿದ್ದ ಶೆಟ್ಟರ ಬಳಿ ವಿಚಾರ ತಿಳಿಸಿ 15 ರೂ. ಹಣವನ್ನು ಸಾಲದ ರೂಪದಲ್ಲಿ ಪಡೆದು ಮಗನ ಕೈಗೆ ಕೊಡುತ್ತಾರೆ.

ಕೆಲಕಾಲ ಮನೆಯಲ್ಲಿಯೇ ವಿಶ್ರಾಂತಿ ಪಡೆದು ಸ್ನಾನ ಮುಗಿಸಿ, ತಾಯಿಕೊಟ್ಟ ಉಪಹಾರ ಸೇವಿಸಿ ಮತ್ತೆ ಬೆಳ್ಳಂಬೆಳಿಗ್ಗೆಯೇ ಬೆಂಗಳೂರಿಗೆ ಕಾಲ್ನಡಿಗೆಯಲ್ಲೇ ಹಣದೊಂದಿಗೆ ಹೊರಟ ವಿಶ್ವೇಶ್ವರಯ್ಯನವರು ಶಾಲೆಗೆ ತಲುಪುವ ಹೊತ್ತಿಗೆ ಗಂಟೆ 11 ಮೀರಿದ್ದು, ಪರೀಕ್ಷೆಯ ಅರ್ಜಿ ಮತ್ತು ಹಣ ಕೊಡಲು ಸಮಯ ಮೀರಿ ಹೋಗಿರುತ್ತದೆ.

ತನ್ನಕಷ್ಟವನ್ನು ಹೇಳಿಕೊಂಡರೂ ಶಾಲೆಯ ಗುಮಾಸ್ತರು ಹಣ ತೆಗೆದುಕೊಳ್ಳಲು ನಿರಾಕರಿಸಿದಾಗ, ದಿಕ್ಕು ತೋಚದೆ ಅಳುತ್ತಾ ಕುಳಿತಿದ್ದಾಗ ಅದೇ ಸಮಯಕ್ಕೆ ಅಲ್ಲಿಗೆ ಬಂದ ಮೇಲ್ವಿಚಾರಕರು ಅಳುತ್ತಿದ್ದ ಬಾಲಕನ ಅಳಲನ್ನು ಆಲಿಸಿ, ಹುಡುಗನ ಪರೀಕ್ಷೆಯ ಅರ್ಜಿ ಹಾಗೂ ಹಣವನ್ನು ತೆಗೆದುಕೊಳ್ಳುವಂತೆ ಆಜ್ಞೆ ಮಾಡಿ, ನೋಡಪ್ಪಾ ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಂದ ಪಾಸ್ ಆಗಬೇಕು ಎಂದಾಗ ಬಾಲಕ ವಿಶ್ವೇಶ್ವರಯ್ಯ ನವರಿಗೆ ಆದ ಸಂತೋಷ ಹೇಳತೀರದು.

ಪರೀಕ್ಷೆ ಮುಗಿದು ಫಲಿತಾಂಶ ಪ್ರಕಟವಾದಾಗ ಅಚ್ಚರಿ ಎಂಬಂತೆ ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನಕ್ಕೆ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದುತ್ತಾರೆ. ಮುಂದೆ ಎಷ್ಟೇ ಬಡತನವಿದ್ದರೂ ಜೀವನೋತ್ಸಾಹವನ್ನುಕುಗ್ಗಿಸದೆ, ಬದುಕನ್ನುಎದುರಿಸುವ ದಿಟ್ಟತನ ಮತ್ತು ಭವಿಷ್ಯದ ದೃಢ ಸಂಕಲ್ಪಗಳಿದ್ದ ಕಾರಣ ತಮ್ಮ ವಿದ್ಯಾಭ್ಯಾಸ ಮುಂದುವರಿಸಿ ನಮ್ಮ ಕರ್ನಾಟಕ ಸೇರಿದಂತೆ ದೇಶಕ್ಕೆ ಕೀರ್ತಿ ತಂದು ಹೆಮ್ಮೆಯ ಭಾರತರತ್ನರೆನಿಸುತ್ತಾರೆ. ಸಮಾಜಕ್ಕಾಗಿ ತಮ್ಮ ಇಡೀ ಬದುಕನ್ನೆ ಮೀಸಲಾಗಿರಿಸಿ ಜೀವಿತ ಕಾಲದಲ್ಲಿಯೇ ದಂತಕತೆಯಾಗಿ ಜಗತ್ ಪ್ರಸಿದ್ಧರಾದ ಸರ್. ಎಂ. ವಿಶ್ವೇಶ್ವರಯ್ಯನವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

-ಡಾ.ಡಿ.ಸಿ. ರಾಮಚಂದ್ರ

ಮುಂಬೈ ದಾಳಿ ರೂವಾರಿ ರಾಣಾ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ

ಮುಂಬೈ,ಸೆ.26- ಕಳೆದ ನವೆಂಬರ್ 2008 ರ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿರುವ ಪಾಕಿಸ್ತಾನಿ ಮೂಲದ ಕೆನಡಾದ ಉದ್ಯಮಿ ತಹವ್ವುರ್ ರಾಣಾ ವಿರುದ್ಧ ಮುಂಬೈ ಪೊಲೀಸರು ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ.

ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‍ನಲ್ಲಿ ಬಂಧನದಲ್ಲಿರುವ ರಾಣಾ ಅವರು ಮುಂಬೈ ದಾಳಿಯಲ್ಲಿನ ಪಾತ್ರಕ್ಕಾಗಿ ಬಹು ಆರೋಪಗಳನ್ನು ಎದುರಿಸುತ್ತಿದ್ದಾರೆ ಮತ್ತು 26/11 ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬರಾದ ಪಾಕಿಸ್ತಾನಿ-ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿಯೊಂದಿಗೆ ಸಂಬಂಧ ಹೊಂದಿದ್ದಾರೆಂದು ತಿಳಿದುಬಂದಿದೆ.

400 ಪುಟಗಳ ಚಾರ್ಜ್‍ಶೀಟ್ ಇದುವರೆಗಿನ ಪ್ರಕರಣದಲ್ಲಿ ನಾಲ್ಕನೆಯದು, ಮುಂಬೈ ಪೊಲೀಸರ ಅಪರಾಧ ವಿಭಾಗವು ಸೋಮವಾರ ನ್ಯಾಯಾಲಯದ ನೋಂದಣಿಗೆ ಸಲ್ಲಿಸಿದೆ. ದಾಖಲೆ ಪರಿಶೀಲನೆ ಪ್ರಕ್ರಿಯೆ ಮುಗಿದ ಬಳಿಕ ಮಂಗಳವಾರ ವಿಶೇಷ ನ್ಯಾಯಾಲಯದ ಮುಂದೆ ಬರುವ ಸಾಧ್ಯತೆ ಇದೆ ಎಂದು ಸರಕಾರಿ ವಕೀಲರು ತಿಳಿಸಿಪೊರೆ.

ರಾಣಾ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಸೆಕ್ಷನ್ 39 ಎ (ಭಯೋತ್ಪಾದಕ ಸಂಘಟನೆಗೆ ನೀಡಿದ ಬೆಂಬಲಕ್ಕೆ ಸಂಬಂ„ಸಿದ ಅಪರಾಧ) ಅನ್ನು ಈ ಪ್ರಕರಣದಲ್ಲಿ ಸೇರಿಸಿದ್ದಾರೆ.

ಜನವರಿಯಲ್ಲಿ ರಾಮಮಂದಿರ ಲೋಕಾರ್ಪಣೆ

ನಾವು ರಾಣಾ ವಿರುದ್ಧ ಹೇಳಿಕೆಗಳು ಮತ್ತು ದಾಖಲೆಗಳ ರೂಪದಲ್ಲಿ ಕೆಲವು ಹೊಸ ಪುರಾವೆಗಳನ್ನು ಪಡೆದುಕೊಂಡಿದ್ದೇವೆ ಎಂದು ಅಧಿಕಾರಿ ಹೇಳಿದರು, ಇದು ಪ್ರಕರಣದ ನಾಲ್ಕನೇ ಆರೋಪಪಟ್ಟಿಯಾಗಿದೆ.ಈ ವರ್ಷದ ಮೇ ತಿಂಗಳಲ್ಲಿ 62 ವರ್ಷದ ರಾಣಾ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ನ್ಯಾಯಾಲಯವು ದೇಶದ ಅಧಿಕಾರಿಗಳಿಗೆ ಪ್ರಮುಖ ವಿಜಯವನ್ನು ನೀಡಿತು.

ಆದಾಗ್ಯೂ, 2008 ರ ಮುಂಬೈ ಭಯೋತ್ಪಾದಕ ದಾಳಿಗೆ ಸಂಬಂ„ಸಿದಂತೆ ಭಾರತದಲ್ಲಿ ವಿಚಾರಣೆ ಎದುರಿಸುತ್ತಿರುವ ಉದ್ಯಮಿಯ ಹಸ್ತಾಂತರಕ್ಕೆ ಆಗಸ್ಟ್‍ನಲ್ಲಿ ತಡೆಯಾಜ್ಞೆ ನೀಡಲಾಯಿತು.

ನಿಜ್ಜರ್ ಹತ್ಯೆ ತನಿಖೆ ಮುಂದುವರೆಯಬೇಕು : ಅಮೆರಿಕ

ವಾಷಿಂಗ್ಟನ್,ಸೆ.26-ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಕೆನಡಾದ ತನಿಖೆ ಮುಂದುವರಿಯಬೇಕು ಮತ್ತು ಅಪರಾಧಿಗಳನ್ನು ನ್ಯಾಯಾಂಗಕ್ಕೆ ತರಬೇಕು ಎಂದು ಯುನೈಟೆಡ್ ಸ್ಟೇಟ್ಸ್ ಒತ್ತಾಯಿಸಿದೆ.

ನಿಜ್ಜರ್ ಹತ್ಯೆಯ ಹಿಂದೆ ಭಾರತೀಯ ಅಧಿಕಾರಿಗಳ ಕೈವಾಡವಿದೆ ಎಂದು ಕೆನಡಾ ಆರೋಪಿಸಿದೆ. ಈ ಆರೋಪಗಳು ಆಧಾರರಹಿತ ಎಂದು ನವದೆಹಲಿ ಬಲವಾಗಿ ನಿರಾಕರಿಸಿದೆ.

(ಕೆನಡಾದ) ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರು ಉಲ್ಲೇಖಿಸಿರುವ ಆರೋಪಗಳಿಂದ ನಾವು ತೀವ್ರವಾಗಿ ಕಳವಳಗೊಂಡಿದ್ದೇವೆ. ನಾವು ನಮ್ಮ ಕೆನಡಾದ ಪಾಲುದಾರರೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ ಎಂದು ಸ್ಟೇಟ್ ಡಿಪಾಟ್ರ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ತನ್ನ ದೈನಂದಿನ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಬೆಂಗಳೂರು ಬಂದ್‍ಗೆ ಜೆಡಿಎಸ್ ಸಂಪೂರ್ಣ ಬೆಂಬಲ

ಕೆನಡಾದ ತನಿಖೆ ಮುಂದುವರಿಯುವುದು ನಿರ್ಣಾಯಕವಾಗಿದೆ ಮತ್ತು ಅಪರಾಧಿಗಳನ್ನು ನ್ಯಾಯಕ್ಕೆ ತರಲಾಗುವುದು ಎಂದು ನಾವು ನಂಬುತ್ತೇವೆ. ಮತ್ತು ನಾವು ಸಾರ್ವಜನಿಕವಾಗಿ – ಮತ್ತು ಖಾಸಗಿಯಾಗಿ – ಕೆನಡಾದ ತನಿಖೆಯಲ್ಲಿ ಸಹಕರಿಸಲು ಭಾರತ ಸರ್ಕಾರವನ್ನು ಒತ್ತಾಯಿಸಿದ್ದೇವೆ ಎಂದು ಮಿಲ್ಲರ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮಾಜಿ ಸಿಎಂ ವೀರೇಂದ್ರ ಪಾಟೀಲರ ಪತ್ನಿ ಶಾರದಾ ಪಾಟೀಲ ನಿಧನ

ಬೆಂಗಳೂರು,ಸೆ.26- ವಯೋ ಸಹಜದಿಂದ ಬಳಲುತ್ತಿದ್ದ ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲರ ಪತ್ನಿ ಶಾರದಾ ಪಾಟೀಲ (93) ಅವರು ಬೆಂಗಳೂರಿನ ಸದಾಶಿವನಗರದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತ ಶಾರದಾ ಪಾಟೀಲ ಅವರು, ಮಾಜಿ ಶಾಸಕ ಕೈಲಾಸನಾಥ್ ಪಾಟೀಲ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಪಾರ್ಥೀವ ಶರೀರವನ್ನು ಚಿಂಚೋಳಿಗೆ ತೆಗೆದುಕೊಂಡು ಹೋಗಲು ಕುಟಂಬಸ್ಥರು ತೀರ್ಮಾನಿಸಿದ್ದಾರೆ.

ಚಿಂಚೋಳಿಯಲ್ಲಿರುವ ವೀರೇಂದ್ರ ಪಾಟೀಲರ ಸಮಾಧಿ ಪಕ್ಕದಲ್ಲೇ ಶಾರದಾ ಪಾಟೀಲರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ ನಡೆಯಲಿದೆ ಎಂದು ಕೈಲಾಸನಾಥ ಪಾಟೀಲ ತಿಳಿಸಿದ್ದಾರೆ.

ಬೆಂಗಳೂರು ಬಂದ್‍ಗೆ ಜೆಡಿಎಸ್ ಸಂಪೂರ್ಣ ಬೆಂಬಲ

ಸಂತಾಪ :
ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲರ ಪತ್ನಿ ಶಾರದಾ ಪಾಟೀಲ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ. ಬಸವರಾಜ್ ಬೊಮ್ಮಯಿ, ಸೇರಿದಂತೆ ಮತ್ತಿತರ ಅನೇಕ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಪ್ರಬಲ ಲಿಂಗಾಯಿತ ಸಮುದಾಯದ ನಾಯಕರಾಗಿದ್ದ ವೀರೇಂದ್ರ ಪಾಟೀಲ್ ಅವರು 1989 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟವರಲ್ಲಿ ಪ್ರಮುಖರು. ಹಠಾತ್ತನೆ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡಿದ್ದ ಅವರು 1997 ಮಾರ್ಚ್ 14 ರಂದು ಆನಾರೋಗ್ಯದ ಕಾರಣ ನಿಧನರಾಗಿದ್ದರು.

ಆರ್‌ಬಿಐ ಡೆಪ್ಯುಟಿ ಗವರ್ನರ್ ಅವಧಿ ವಿಸ್ತರಣೆ

ನವದೆಹಲಿ,ಸೆ.26-ಭಾರತೀಯ ರಿಸರ್ವ್ ಬ್ಯಾಂಕ್ ಡೆಪ್ಯುಟಿ ಗವರ್ನರ್ ಎಂ ರಾಜೇಶ್ವರ್ ರಾವ್ ಅವರ ಅವಧಿಯನ್ನು ಸರಕಾರ ಸೋಮವಾರ ಒಂದು ವರ್ಷದ ಅವಧಿಗೆ ವಿಸ್ತರಿಸಿದೆ. ಅಕ್ಟೋಬರ್ 9, 2023 ರಿಂದ ಜಾರಿಗೆ ಬರುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯುಟಿ ಗವರ್ನರ್ ಎಂ ರಾಜೇಶ್ವರ್ ರಾವ್ ಅವರನ್ನು ಒಂದು ವರ್ಷದ ಅವಧಿಗೆ ಮರು ನೇಮಕ ಮಾಡಲು ಸಂಪುಟದ ನೇಮಕಾತಿ ಸಮಿತಿಯು ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಅವರನ್ನು ಮೂರು ವರ್ಷಗಳ ಅವಧಿಗೆ ಅಕ್ಟೋಬರ್ 2020 ರಲ್ಲಿ RBI ಡೆಪ್ಯುಟಿ ಗವರ್ನರ್ ಆಗಿ ನೇಮಿಸಿಕೊಳ್ಳಲಾಗಿತ್ತು. ಕೊಚ್ಚಿನ್ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ ಪದವೀಧರ ಮತ್ತು ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿ ಪಡೆದಿರುವ ರಾವ್ ಅವರು 1984 ರಲ್ಲಿ ಕೇಂದ್ರೀಯ ಬ್ಯಾಂಕ್‍ಗೆ ಸೇರಿದ್ದರು. ವೃತ್ತಿಜೀವನದ ಕೇಂದ್ರ ಬ್ಯಾಂಕರ್ ಆಗಿ, ಅವರು ಕಾರ್ಯನಿರ್ವಹಣೆಯ ವಿವಿಧ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಅವರು ಈ ಹಿಂದೆ ರಿಸ್ಕ್ ಮಾನಿಟರಿಂಗ್ ವಿಭಾಗದ ಉಸ್ತುವಾರಿ ವಹಿಸಿದ್ದರು.

ಬೆಂಗಳೂರು ಬಂದ್‍ಗೆ ಜೆಡಿಎಸ್ ಸಂಪೂರ್ಣ ಬೆಂಬಲ

ಅವರು ನವದೆಹಲಿಯಲ್ಲಿ ಬ್ಯಾಂಕಿಂಗ್ ಒಂಬುಡ್ಸ್‍ಮನ್ ಆಗಿ ಮತ್ತು ಅಹಮದಾಬಾದ್, ಹೈದರಾಬಾದ್, ಚೆನ್ನೈ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ರಿಸರ್ವ್ ಬ್ಯಾಂಕ್‍ನ ಪ್ರಾದೇಶಿಕ ಕಚೇರಿಗಳಲ್ಲಿ ಕೆಲಸ ಮಾಡಿದ್ದಾರೆ. ಕಾಯಿದೆ 1934 ರ ಪ್ರಕಾರ, ಕೇಂದ್ರ ಬ್ಯಾಂಕ್ ನಾಲ್ಕು ಡೆಪ್ಯುಟಿ ಗವರ್ನರ್‍ಗಳನ್ನು ಹೊಂದಿರಬೇಕು — ಇಬ್ಬರು ಶ್ರೇಣಿಯೊಳಗಿನವರು, ಒಬ್ಬರು ವಾಣಿಜ್ಯ ಬ್ಯಾಂಕರ್ ಮತ್ತು ಇನ್ನೊಬ್ಬರು ಅರ್ಥಶಾಸಜ್ಞರು ವಿತ್ತೀಯ ನೀತಿ ವಿಭಾಗದ ಮುಖ್ಯಸ್ಥರಾಗಿರುತ್ತಾರೆ