Thursday, November 6, 2025
Home Blog Page 1939

ಬೆಂಗಳೂರು ಬಂದ್ : ತಾರಕಕ್ಕೇರಿದ ಕಾವೇರಿ ಕೂಗು, ರಾಜಭವನ ಮುತ್ತಿಗೆಗೆ ಹೋರಾಟಗಾರರ ಯತ್ನ

ಬೆಂಗಳೂರು, ಸೆ.26- ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ವಾಟಾಳ್ ನಾಗ ರಾಜ್ ನೇತೃತ್ವದಲ್ಲಿ ಕನ್ನಡ ಸಂಘಟನೆಗಳ ಒಕ್ಕೂಟ ಇಂದು ರಾಜಭವನ ಮುತ್ತಿಗೆ ಹಾಕಲು ಯತ್ನಿಸಿತು. ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್, ಕರವೇ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಕನ್ನಡ ಸೇನೆಯ ಕೆ.ಆರ್.ಕುಮಾರ್ ಅನೇಕರು ಭಾಗ ವಹಿಸಿದ್ದರು.

ರಾಜಭವನದತ್ತ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ನಾಯಕರನ್ನು ಪೊಲೀಸರು ಅರ್ಧದಲ್ಲೇ ತಡೆದು ವಶಕ್ಕೆ ತೆಗೆದುಕೊಂಡರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಕಾವೇರಿ ವಿವಾದಕ್ಕೆ ಸಂಬಂಧಪಟ್ಟಂತೆ ಕನ್ನಡ ಪರ ಸಂಘಟನೆಗಳ ಒಕ್ಕೂಟ ಸೆ.29 ರಂದು ಕರೆದಿರುವ ಕರ್ನಾಟಕ ಬಂದ್ ನಡೆಯಲಿದೆ. ಈ ನಿಟ್ಟಿನಲ್ಲಿ ಹಲವು ಸುತ್ತಿನ ಚರ್ಚೆಗಳಾಗಿದ್ದು, ರಾಜ್ಯಾದ್ಯಂತ ಸುಮಾರು 2 ಸಾವಿರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಲಿವೆ ಎಂದು ಹೇಳಿದರು.

ಕರ್ನಾಟಕ ಬಂದ್‍ನಲ್ಲಿ ಸಾರಿಗೆ ಸೇರಿದಂತೆ ಎಲ್ಲಾ ಚಟುವಟಿಕೆಗಳೂ ಸ್ಥಗಿತಗೊಳ್ಳಲಿವೆ. ಸುಮಾರು ಒಂದು ಲಕ್ಷ ಜನ ಪ್ರತಿಭಟನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ರಾಜ್ಯಸರ್ಕಾರ ಯಾವುದೇ ಒತ್ತಡ ಹಾಕಿದ್ದರೂ ನಾವು ಹೋರಾಟ ಮಾಡುವುದನ್ನು ಕೈಬಿಡುವುದಿಲ್ಲ. ಈಗಾಗಲೇ ನಿಷೇಧಾಜ್ಞೆ ಜಾರಿಗೊಳಿಸಿ ಪ್ರತಿಭಟನೆ ಹತ್ತಿಕ್ಕಲು ಯತ್ನಿಸುತ್ತಿದೆ. ಇದನ್ನು ಖಂಡಿಸುತ್ತೇವೆ ಎಂದರು.

ನೋವನ್ನು ವ್ಯಕ್ತಪಡಿಸಲು ನಮ್ಮ ಜನ ಬಂದ್ ಮಾಡಿದ್ದಾರೆ : ಎಚ್‍ಡಿಡಿ

ಯಡಿಯೂರಪ್ಪ, ಕುಮಾರಸ್ವಾಮಿ ಅವರು ಬಂದ್‍ಗೆ ಬೆಂಬಲ ಎಂದು ಘೋಷಿಸಿದ್ದಾರೆ. ಸುಮ್ಮನೆ ಏಕೆ ಬೆಂಬಲ ಕೊಡುತ್ತೀರಾ, ಬೀದಿಗೆ ಬಂದು ಪ್ರತಿಭಟನೆ ಮಾಡಿ ಎಂದು ಸವಾಲು ಹಾಕಿದರು. ಹಿಂದಿನ ಅವಧಿಯಲ್ಲಿ ಎಲ್ಲಾ ಸರ್ಕಾರಗಳು ಸಂಘಟನೆಗಳ ಜೊತೆ ಚರ್ಚೆ ಮಾಡಿ ನೀರು ಬಿಡುತ್ತಿದ್ದವು. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗಲೂ ಚರ್ಚೆ ಮಾಡಿಯೇ ನೀರು ಬಿಡಲಾಗಿತ್ತು. ಆಗಲೂ ಹೋರಾಟ ನಡೆದಿತ್ತು. ಆದರೆ ಈಗ ಯಾರನ್ನೂ ಹೇಳದೇ, ಕೇಳದೆ ನೀರು ಹರಿಸಿದ್ದಾರೆ ಎಂದು ಆರೋಪಿಸಿದರು.

ರಾಜ್ಯಸರ್ಕಾರ ಪ್ರತಿಭಟನೆಯನ್ನು ಹತ್ತಿಕ್ಕಲು ನಿಷೇಧಾಜ್ಞೆ ಹೇರಿರುವುದು, ವ್ಯಾಪಕ ಬಂದೊಬಸ್ತ್ ಅನ್ನು ನೋಡಿ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ನಗುತ್ತಿದ್ದಾರೆ. ಕರ್ನಾಟಕ ಸರ್ಕಾರ ಪೊಲೀಸರನ್ನು ಬಳಸಿಕೊಂಡು ಪ್ರತಿಭಟನೆಯನ್ನು ಹತ್ತಿಕ್ಕಿ ನಮಗೆ ನೀರು ಬಿಡುತ್ತಿದ್ದಾರೆ, ಶಹಬ್ಬಾಸ್ ಎಂದು ಸ್ಟಾಲಿನ್ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ನಮ್ಮ ಕರ್ನಾಟಕ ಸರ್ಕಾರ ಮತ್ತು ತಮಿಳುನಾಡಿಗೆ ಅದೇನು ನಂಟಸ್ತನ ಇದೆಯೋ ಗೊತ್ತಿಲ್ಲ, ರಾಜ್ಯವನ್ನು ಅವರಿಗೆ ಒಪ್ಪಿಸಿಬಿಟ್ಟಂತೆ ಕಾಣುತ್ತಿದೆ. ನಮ್ಮವರು ಸ್ಟಾಲಿನ್ ಹೇಳಿದಂತೆ ಕೇಳುತ್ತಿದ್ದಾರೆ. ಒಂದು ತಿಂಗಳಿನಿಂದಲೂ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಸಂಸದರು ಕಾವೇರಿ ವಿಷಯದಲ್ಲಿ ಸಂಸತ್‍ನಲ್ಲಿ ಧ್ವನಿಯೆತ್ತುತ್ತಿಲ್ಲ. ಉಳಿದ ವಿಷಯಗಳಲ್ಲಿ ನಾಜೂಕಾಗಿ ಮಾತನಾಡುತ್ತಾರೆ. ಮಾತನಾಡುವ ಮೊದಲು ತುಟಿಗೆ ಲಿಫ್ಟಿಕ್ ಹಚ್ಚಿಕೊಳ್ಳುತ್ತಾರೆ. ಈ ಮೊದಲು ಹೆಣ್ಣು ಮಕ್ಕಳು ಹಾಕಿಕೊಳ್ಳುತ್ತಿದ್ದರು. ಈಗ ಅದನ್ನು ನಮ್ಮ ಸಂಸದರೂ ಹಚ್ಚಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಸಂಸದರು ಹುಡುಗಾಟ ಆಡುತ್ತಿದ್ದಾರೆಯೇ, ಲಿಫ್ಟಿಕ್ ಹಾಕಿಕೊಂಡು ಸಂಸತ್‍ಗೆ ಹೋಗುತ್ತಿದ್ದಾರೆ. ಇವರಿಗೆ ಯೋಗ್ಯತೆ ಇದೆಯೇ, ಮೊದಲು ಸಂಸತ್ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಸರ್ಕಾರ ಪ್ರತಿಭಟನೆ ಹತ್ತಿಕ್ಕುತ್ತಿದೆ : ಕುರುಬೂರು ಶಾಂತಕುಮಾರ್

ಕರ್ನಾಟಕ ಬಂದ್‍ನಿಂದ ತಮಿಳುನಾಡಿಗೆ ತಕ್ಕ ಉತ್ತರ ನೀಡುತ್ತೇವೆ. ಕನ್ನಡ ಚಿತ್ರರಂಗ ಸೇರಿದಂತೆ ಎಲ್ಲವೂ ಸ್ತಬ್ಧಗೊಳ್ಳುತ್ತವೆ. ಬೆಂಗಳೂರು ಬಂದ್ ಮಾಡುವವರಿಗೆ ಒಟ್ಟಾಗಿ ಹೋರಾಟ ಮಾಡುವಂತೆ ಸಲಹೆ ನೀಡಿದ್ದೆ. ಆದರೆ ಅವರು ಪ್ರತಿಷ್ಠೆಗೆ ಅಂಟಿಕೊಂಡು ಬೆಂಗಳೂರು ಬಂದ್ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.

ಚಳುವಳಿ ಮಾಡುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಈಗ ಹೋರಾಟ ಮಾಡುತ್ತಿರುವ ಯಾರೂ ಹುಟ್ಟೇ ಇರಲಿಲ್ಲ, ಆಗಿನಿಂದಲೂ ಇಲ್ಲಿಯವರೆಗೂ 12 ಸಾವಿರ ಹೋರಾಟಗಳನ್ನು ಮಾಡಿದ್ದೇನೆ. ಇಂದು ನಡೆಸಿರುವ ಬೆಂಗಳೂರು ಬಂದ್‍ನಲ್ಲಿ ಹೋರಾಟಗಾರರನ್ನು ಸಿಕ್ಕಸಿಕ್ಕಲ್ಲಿ ಬಂಸಲಾಗುತ್ತಿದೆ. ಏಕೆ, ಅವರೇನು ಕಳ್ಳರೇ. 50 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇದು ಪೊಲೀಸ್ ರಾಜ್ಯವೇ ಎಂದು ಪ್ರಶ್ನಿಸಿದರು.

ಶಾಕಿಂಗ್ : ಮತ್ತೆ 3 ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶ

ಬೆಂಗಳೂರು, ಸೆ.26- ರೈತ ಹಾಗೂ ಕನ್ನಡ ಪರ ಸಂಘಟನೆಗಳ ತೀವ್ರ ಪ್ರತಿಭಟನೆ ನಡುವೆಯೂ ಕಾವೇರಿ ನದಿ ನೀರಿನ ಹಂಚಿಕೆ ವಿಷಯದಲ್ಲಿ ಮತ್ತೆ ಕರ್ನಾಟಕಕ್ಕೆ ವ್ಯತಿರಿಕ್ತವಾದ ತೀರ್ಪು ಹೊರ ಬಿದ್ದಿದೆ. 150 ವರ್ಷಗಳ ಹಳೆಯದಾದ ಅಂತಾರಾಜ್ಯ ವಿವಾದದಲ್ಲಿ ನ್ಯಾಯಾಧೀಕರಣದ ತೀರ್ಪಿನ ಬಳಿಕ, ನೀರಿನ ಹಂಚಿಕೆಯಲ್ಲಿ ಆದ್ಯ ಪಾತ್ರ ವಹಿಸುತ್ತಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಇಂದು ಮಹತ್ವದ ಸಭೆ ನಡೆಸಿದೆ. ಅಲ್ಲಿ ತಮಿಳುನಾಡು, ಕರ್ನಾಟಕ ಸೇರಿದಂತೆ ಕಾವೇರಿ ನದಿ ಪಾತ್ರದ ನೀರಿನಲ್ಲಿ ಹಕ್ಕು ಸಾಮ್ಯತೆ ಹೊಂದಿರುವ ಕೇರಳ, ಪಾಂಡಿಚೇರಿ ರಾಜ್ಯಗಳ ನೀರಾವರಿ ಇಲಾಖೆ ಅಧಿಕಾರಿಗಳು, ವಕೀಲರು ಭಾಗವಹಿಸಿದ್ದರು.

ಕರ್ನಾಟಕ ತನ್ನಲ್ಲಿ ನೀರಿಲ್ಲ. ಹಾಗಾಗಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ವಾದಿಸಿತ್ತು. ಕೆಆರ್ಎಸ್, ಕಬಿನಿ, ಹಾರಂಗಿ, ಹೇಮಾವತಿ ಸೇರಿ ನಾಲ್ಕು ಜಲಾಶಯಗಳಲ್ಲಿ 53.04 ಟಿಎಂಸಿಯಷ್ಟು ಮಾತ್ರ ನೀರು ಸಂಗ್ರಹವಿದೆ. ಬೆಂಗಳೂರು, ಮಂಡ್ಯ, ರಾಮನಗರ ಸೇರಿ ಹಲವಾರು ನಗರ ಪ್ರದೇಶಗಳಿಗೆ ಕುಡಿಯುವ ನೀರು ಹಾಗೂ ಈಗಾಗಲೇ ಬೆಳೆದು ನಿಂತಿರುವ ಬೆಳೆಗಳ ರಕ್ಷಣೆಗೆ ರಾಜ್ಯಕ್ಕೆ 106 ಟಿಎಂಸಿ ನೀರಿನ ಅಗತ್ಯ ಇದೆ. ಹೀಗಾಗಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ವಾದಿಸಿತ್ತು.

ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಸರ್ಕಾರ ಪ್ರತಿಭಟನೆ ಹತ್ತಿಕ್ಕುತ್ತಿದೆ : ಕುರುಬೂರು ಶಾಂತಕುಮಾರ್

ರಾಜ್ಯದಲ್ಲಿ 195 ತಾಲ್ಲೂಕುಗಳು ಬರಪೀಡಿತವಾಗಿವೆ. ಮುಂದೆ ಮಳೆಯಾಗುವ ನಿರೀಕ್ಷೆಗಳು ಇಲ್ಲ. ಸಂಕಷ್ಟ ಸಂದರ್ಭದಲ್ಲಿ ಪಾಲಿಸಬೇಕಾದ ಸೂತ್ರ ರಚನೆಯಾಗಿಲ್ಲ. ಹಾಗಾಗಿ ನೀರು ಹರಿಸಲು ಸಾಧ್ಯವಿಲ್ಲ ಎಂದು ವಾದಿಸಿತ್ತು. ಇದಕ್ಕೆ ಪ್ರತಿಯಾಗಿ ತಮಿಳುನಾಡು ಸರ್ಕಾರ ತನ್ನ ವಾದ ಮಂಡಿಸಿದ್ದಲ್ಲದೆ. ಇತ್ತಿಚೆಗೆ ಕಾವೇರಿ ನದಿ ಪಾತ್ರದ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ.

ಹೀಗಾಗಿ ತಮಿಳುನಾಡಿಗೆ 12500 ಕ್ಯೂಸೆಕ್ ನೀರು ಹರಿಸಬೇಕು ಎಂದಿತ್ತು. ಕರ್ನಾಟಕ ಕಾವೇರಿ ನೀರು ನಿಯಂತ್ರಣ ಸಮಿತಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಸುಪ್ರೀಂಕೋರ್ಟ್ನ ಆದೇಶಗಳನ್ನು ಪಾಲನೇ ಮಾಡುತ್ತಿಲ್ಲ. ನ್ಯಾಯಾಧಿಕರಣದ ತೀರ್ಪಿನ ಅನುಸಾರ ನೀರು ಬಿಡುಗಡೆ ಮಾಡುತ್ತಿಲ್ಲ ಎಂದು ಆಕ್ಷೇಪಿಸಿತ್ತು.

ಫೆನ್ಸಿಂಗ್‍ನಲ್ಲಿ ಭಾರತದ ಚೊಚ್ಚಲ ಏಷ್ಯನ್ ಗೇಮ್ಸ್ ಪದಕದ ಭರವಸೆ

ವಾದ, ಪ್ರತಿವಾದಗಳನ್ನು ಆಲಿಸಿದ ನೀರು ನಿರ್ವಹಣಾ ಮಂಡಳಿ ಸೆಪ್ಟಂಬರ್ 28ರಿಂದ ಅಕ್ಟೋಬರ್ 15ರವರೆಗೆ ಪ್ರತಿದಿನ ಮೂರು ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎಂದು ಶಿಫಾರಸ್ಸು ನೀಡಿದೆ. ಮಂಗಳವಾರ ಬೆಳಗ್ಗೆ 8ಗಂಟೆಯಿಂದ ಆರಂಭಗೊಳ್ಳುವ ಲೆಕ್ಕದಲ್ಲಿ ತಮಿಳುನಾಡಿನ ಬಿಳಿಗುಂಡ್ಲು ಜಲಾಶಯಕ್ಕೆ ಮೂರು ಸಾವಿರ ಕ್ಯೂಸೆಕ್ ನೀರು ಹರಿಯಬೇಕು ಎಂದು ಸೂಚಿಸಲಾಗಿದೆ

ಕಾವೇರಿ ಹೋರಾಟಕ್ಕೆ ಜಯವಾಗಲಿ ಎಂದು ಪೋಸ್ಟ್ ಮಾಡಿದ ಸುದೀಪ್

ಬೆಂಗಳೂರು, ಸೆ.26- ಕಾವೇರಿ ಸಮಸ್ಯೆ ಈ ವರ್ಷವೂ ಶುರುವಾಗಿದೆ, ಕನ್ನಡ ಪರ ಸಂಘಟನೆಗಳು ರೈತರು ಹೋರಾಟ ನಡೆಸುತ್ತಿದ್ದಾರೆ. ಕನ್ನಡದ ನೆಲ, ಜಲ, ಭಾಷೆಯ ಎಲ್ಲ ಹೋರಾಟಗಳಲ್ಲಿ ನಾನು ಸದಾ ನಿಮ್ಮೊಂದಿಗೆ ಇದ್ದೇನೆ ಎಂದು ಚಿತ್ರನಟ ಕಿಚ್ಚ ಸುದೀಪ್ ಹೇಳಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಮುಂಗಾರು ಮಳೆಯ ಅಭಾವದಿಂದ ರೈತರಿಗೆ ಜನತೆಯ ಕೃಷಿ ಮಾತ್ರವಲ್ಲದೆ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ. ಮುಂಗಾರಿನ ಹೊರತಾಗಿ ನಮಗೆ ಕುಡಿಯುವ ನೀರಿಗಾಗಿ ಬೇರೆ ಮೂಲಗಳಿಲ್ಲ ನಾವು ಕಾವೇರಿಯನ್ನೇ ನಂಬಿದ್ದೇವೆ ಎಂದಿದ್ದಾರೆ.

ನಾನು ತಿಳಿದುಕೊಂಡಂತೆ ಬರ ಅಧ್ಯಯನ ಸಮಿತಿ- ಕಾವೇರಿ ಸಮಿತಿ ತಂತ್ರಜ್ಞರು ಕೂಡಲೇ ಟ್ರಬಿನಲ್ ನ್ಯಾಯಾಲಯಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಪ್ರಸ್ತುತ ಕರ್ನಾಟಕ ದ ಬರ ಪರಿಸ್ಥಿತಿ ಯನ್ನು ತುರ್ತಾಗಿ ಮನವರಿಕೆ ಮಾಡಿಕೊಡಬೇಕಿದೆ ಎಂದು ಹೇಳಿದ್ದಾರೆ.

ಹಿಂದಿನ ಕೆಲವು ಮುಖ್ಯಮಂತ್ರಿಗಳಂತೆಯೇ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮಿಳುನಾಡಿನ ಮುಖ್ಯಮಂತ್ರಿಗಳೊಂದಿಗೆ ಸೌಹಾರ್ದ ಮಾತುಕತೆಯ ಮೂಲಕ ಸಮಸ್ಯೆಯನ್ನು ತಾತ್ಕಾಲಿಕವಾಗಿ ಬಗೆಹರಿಸಬಹುದು ಎಂದು ಹಿರಿಯರು ಹೇಳಿದ್ದನ್ನು ಕೇಳಿ ತಿಳಿದುಕೊಂಡಿದ್ದೇನೆ. ಸದ್ಯದ ಬರ-ಜಲ ಹಾಹಾಕಾರಕ್ಕೆ ಪರಿಹಾರ ಒದಗಿಸಲು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ ಎಂದಿದ್ದಾರೆ.

ಕಾವೇರಿ ವಿಚಾರದಲ್ಲಿ ರಾಜ್ಯಸರ್ಕಾರ ವಿಫಲವಾಗಿದೆ : ಮುಖ್ಯಮಂತ್ರಿ ಚಂದ್ರು

ಕೇಂದ್ರ ಸರ್ಕಾರಕ್ಕೆ ಕರ್ನಾಟಕ ದ ಪರಿಸ್ಥಿಯನ್ನು ಅರ್ಥ ಮಾಡಿಸಲು ಎಲ್ಲ ಪಕ್ಷದ ನಾಯಕರು ಒಗ್ಗಟ್ಟಾಗಿ ಮುಂದಾಗಲು ಮನವಿ ಮಾಡುತ್ತೇನೆ. ತಮಿಳುನಾಡು ರೈತರಿಗೂ ಕುರವೈ ಬೆಳೆಗೆ ನೀರು ಸಿಗಲಿ ಆದರೆ ನಮ್ಮ ಕುಡಿಯುವ ನೀರಿನ ಅಭಾವ ಮೊದಲು ಬಗೆಹರಿಯಲಿ. ಆದಷ್ಟು ಬೇಗ ಈ ಸಮಸ್ಯೆ ಬಗೆ ಹರಿದು ಹೋರಾಟಕ್ಕೆ ಜಯವಾಗಲಿ. ಇದರ ಜೊತೆಗೆ ಉತ್ತರ ಕರ್ನಾಟಕದ ಕೃಷ್ಣಾ ನದಿ -ಮಹದಾಯಿ ನದಿ ಮತ್ತು ಕಳ ಸಾ ಬಂಡೂರಿ ವಿವಾದಗಳು ಬಗೆ ಹರಿದು ಜನರ ಸಂಕಷ್ಟ ತೀರಲೆಂದು ಆಶಿಸುವೆ. ನಮ್ಮ ಜಲ ನಮ್ಮ ಹಕ್ಕು ಎಂದು ಕನ್ನಡಿಗರಿಗೆ ಕಿಚ್ಚ ಸಂದೇಶ ಕಳುಹಿಸಿದ್ದಾರೆ.

ನೋವನ್ನು ವ್ಯಕ್ತಪಡಿಸಲು ನಮ್ಮ ಜನ ಬಂದ್ ಮಾಡಿದ್ದಾರೆ : ಎಚ್‍ಡಿಡಿ

ಬೆಂಗಳೂರು, ಸೆ.26- ನಮ್ಮ ನೋವು ಅರ್ಥ ಮಾಡಿಕೊಂಡು ನಮ್ಮ ಪಕ್ಕದ ರಾಜ್ಯದ ಅಣ್ಣ ತಮ್ಮಂದಿರು ಸ್ವಲ್ಪವಾದರೂ ಬದಲಾವಣೆ ಮಾಡಿಕೊಳ್ಳಿ ಎಂಬ ಸಂದೇಶ ಕೊಡಲು ಬೆಂಗಳೂರು ಬಂದ್ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನೋವನ್ನು ತಿಳಿಸಲು ನಮ್ಮ ಜನರು ಬಂದ್ ಮಾಡಿದ್ದಾರೆ. ಇದನ್ನು ಪಕ್ಕದ ರಾಜ್ಯದವರೂ ಅರ್ಥ ಮಾಡಿಕೊಳ್ಳಬೇಕು ಎಂದರು.

ಶಾಂತಿಯುತವಾಗಿ ಬಂದ್ ಮಾಡಬೇಕು. ಯಾವುದೇ ಸಂಘರ್ಷ ಮಾಡಬಾರದು ಹಾಗೂ ಯಾವುದೇ ಆಸ್ತಿ- ಪಾಸ್ತಿಗೆ ಹಾನಿ ಮಾಡಬಾರದು ಎಂದು ಅವರು ಹೇಳಿದ್ದಾರೆ. ಬಂದ್ ಶಾಂತಿಯುತವಾಗಿ ನಡೆಯಲಿ ಎಂಬ ಉದ್ದೇಶದಿಂದ ಸರ್ಕಾರ ಕೆಲವು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿರುತ್ತದೆ ಎಂದು ಹೋರಾಟಗಾರರನ್ನು ವಶಕ್ಕೆ ಪಡೆದಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ನಮ್ಮ ಮನಸಿನ ನೋವು ಶಾಂತಿಯುತವಾಗಿ ಮಾಡಿ ನಮ್ಮ ಪಕ್ಕದ ರಾಜ್ಯಕ್ಕೆ ಸಂದೇಶ ಕಳುಹಿಸಬೇಕೇ ಹೊರತು ಮುತ್ತಿಗೆ ಹಾಕುವುದು ಮೊದಲಾದ ಅಹಿತಕರ ಘಟನೆಗಳನ್ನು ಮಾಡಬಾರದು. ತಮಿಳುನಾಡು ರೈತರು ಸಹ ನಮ್ಮ ನೋವು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

ಜಮ್ಮುವಿನಲ್ಲಿ ಶಂಕಿತ ಉಗ್ರರ ಮನೆ ಮೇಲೆ ದಾಳಿ

ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲರೂ ಬೆಂಬಲ ಕೊಟ್ಟಿದ್ದಾರೆ. ಪ್ರತಿಭಟನೆ ಮಾಡುತ್ತಿರುವ ನಮ್ಮ ರಾಜ್ಯದ ಜನರ ನೋವು ನಮ್ಮ ಪಕ್ಕದ ರಾಜ್ಯದ ಅಣ್ಣ ತಮ್ಮಂದಿರಿಗೆ ಅರ್ಥ ಆಗಬೇಕು. ನಮ್ಮ ಪಕ್ಕದ ರಾಜ್ಯದ ರಾಜಕೀಯ ಮುಖಂಡರು ಯಾವ ನಿಲುವು ತೆಗೆದುಕೊಂಡಿದ್ದಾರೆ ಎಂಬುದನ್ನು ಗಮನಿಸಬೇಕು.

ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಸರ್ಕಾರ ಪ್ರತಿಭಟನೆ ಹತ್ತಿಕ್ಕುತ್ತಿದೆ : ಕುರುಬೂರು ಶಾಂತಕುಮಾರ್

ಬೆಂಗಳೂರು, ಸೆ.26- ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪ್ರತಿಭಟನೆಯನ್ನು ಹತ್ತಿಕ್ಕುವ ಯತ್ನ ನಡೆಸಿದೆ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆರೋಪಿಸಿದ್ದಾರೆ. ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದೆ. ಕಾನೂನು ಹೋರಾಟದಲ್ಲಿ ಹಿನ್ನಡೆ ಅನುಭವಿಸಿದೆ. ಈ ವೈಫಲ್ಯಗಳನ್ನು ಮರೆಮಾಚಿಕೊಳ್ಳಲು ಪ್ರತಿಭಟನೆಯನ್ನು ತಡೆಯಲು ನಾನಾ ರೀತಿಯ ಕಾರ್ಯತಂತ್ರಗಳನ್ನು ಅನುಸರಿಸುತ್ತಿದೆ ಎಂದು ಕಿಡಿಕಾರಿದರು.

ಬಂದ್ ವಿಷಯದಲ್ಲಿ ಯಾವುದೇ ಗೊಂದಲಗಳಿಲ್ಲ. ಸೆ.23 ಕ್ಕೆ ನಾವು ಬಂದ್ ಘೋಷಿಸಿದ್ದೆವು. ಅದಕ್ಕೆ ನಮ್ಮ ವಿರೋಧ ಇಲ್ಲ ಎಂದು ವಾಟಾಳ್ ನಾಗರಾಜ್ ಮತ್ತು ಅವರ ಸಂಗಡಿಗರು ಸ್ಪಷ್ಟಪಡಿಸಿದ್ದರು. ಬೆಂಗಳೂರು ಬಂದ್‍ಗೆ ಬೆಂಬಲ ನೀಡುವ ಕುರಿತಂತೆ ಸೆ. 25 ರಂದು ನಡೆಯುವ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದೆವು. ನಾವೂ ಕೂಡ ಆ ಸಭೆಯಲ್ಲಿ ಭಾಗವಹಿಸಿ ಒಗ್ಗಟ್ಟಿನ ಹೋರಾಟಕ್ಕೆ ಸಹಕರಿಸಿ ಎಂದು ಮನವಿ ಮಾಡಿದ್ದೆವು. ಅದರ ಹೊರತಾಗಿಯೂ ಬಂದ್‍ಗೆ ಬೆಂಬಲ ಇಲ್ಲ ಎಂದು ನಿನ್ನೆ ಘೋಷಣೆ ಮಾಡಿದ್ದಾರೆ. ಇದು ನಾಡಿನ ಹಿತಾಸಕ್ತಿಯ ದೃಷ್ಟಿಯಿಂದ ಸರಿಯಲ್ಲ ಎಂದರು.

ಜಮ್ಮುವಿನಲ್ಲಿ ಶಂಕಿತ ಉಗ್ರರ ಮನೆ ಮೇಲೆ ದಾಳಿ

ವಾಟಾಳ್ ನಾಗರಾಜ್ ಮತ್ತು ಅವರ ಸಂಗಡಿಗರು ಸೆ. 29 ಕ್ಕೆ ಕರೆ ನೀಡಿರುವ ಕರ್ನಾಟಕ ಬಂದ್‍ಗೆ ಬೆಂಬಲ ನೀಡಬೇಕೆ, ಬೇಡವೇ ಎಂದು ನಾವೂ ಕೂಡ ನಮ್ಮ ಸಂಘಟನೆಗಳ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು. ಇಂದು ಬೆಳಿಗ್ಗೆಯಿಂದಲೂ ಪೊಲೀಸ್ ಬಲವನ್ನು ಬಳಸಿ ಹೋರಾಟಗಾರರನ್ನು ಅಲ್ಲಲ್ಲಿ ಬಂಧಿಸಲಾಗುತ್ತಿದೆ. ಪ್ರತಿಭಟನೆಗೂ ಅವಕಾಶ ನೀಡುತ್ತಿಲ್ಲ. ಇದು ಸರಿಯಲ್ಲ ಎಂದು ಕಿಡಿಕಾರಿದರು.

ಕಾವೇರಿ ವಿಚಾರದಲ್ಲಿ ರಾಜ್ಯಸರ್ಕಾರ ವಿಫಲವಾಗಿದೆ : ಮುಖ್ಯಮಂತ್ರಿ ಚಂದ್ರು

ಬೆಂಗಳೂರು, ಸೆ.26- ರಾಜ್ಯಸರ್ಕಾರ ಸಮಗ್ರತೆ ಚರ್ಚೆ ನಡೆಸುವ ಮೂಲಕ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ತಿರಸ್ಕರಿಸುವಂತಹ ನಿಲುವನ್ನು ವ್ಯಕ್ತಪಡಿಸಬೇಕು ಎಂದು ಅಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ.

ಬೆಂಗಳೂರು ಬಂದ್ ವೇಳೆ ಮಾತನಾಡಿರುವ ಅವರು, ಕಾವೇರಿ ನದಿ ವಿವಾದದಲ್ಲಿ ತಮಿಳುನಾಡು ತನ್ನ ಪಾಲಿನ ಹಕ್ಕನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದೆ. ನಮ್ಮ ರಾಜ್ಯಸರ್ಕಾರ ವೈಫಲ್ಯ ಅನುಭವಿಸಿದೆ. ಕೇಂದ್ರ ಸರ್ಕಾರ ನ್ಯಾಯಾಲಯದ ಹೊರಗೆ ವಿವಾದವನ್ನು ಇತ್ಯರ್ಥಗೊಳಿಸಲು ಮಧ್ಯಪ್ರವೇಶ ಮಾಡಬೇಕಿತ್ತು. ಆದರೆ ಪ್ರಧಾನಿ ಹಾಗೂ ಕೇಂದ್ರ ಸರ್ಕಾರ ಕಂಡೂ ಕಾಣದಂತೆ ಜಾರಿಗೊಳ್ಳುತ್ತಿದೆ ಎಂದು ಆರೋಪಿಸಿದರು.

ಕಾವೇರಿ ನದಿ ನೀರನ್ನು ಒಂದು ತಿಂಗಳಿನಿಂದಲೂ ತಮಿಳುನಾಡಿಗೆ ಹರಿಸಲಾಗುತ್ತಿದೆ. ಮಂಡ್ಯ ಭಾಗದ ಜನ ಇದನ್ನು ವಿರೋಧಿಸಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಬೆಂಗಳೂರಿಗೆ ಕುಡಿಯುವ ನೀರು ಇಲ್ಲವಾಗುತ್ತದೆ. ಇಂತಹ ಸಂಕಷ್ಟದಲ್ಲಿ ಪ್ರತಿಭಟನೆ ಬಿಟ್ಟು ಬೇರೆ ಮಾರ್ಗ ಏನಿದೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಮಧ್ಯಪ್ರದೇಶ ಅನಾರೋಗ್ಯ ರಾಜ್ಯವಾಗಿತ್ತು : ಚೌಹಾಣ್ ವಾಗ್ದಾಳಿ

ಕಾಂಗ್ರೆಸ್ ಸರ್ಕಾರ ಗಂಭೀರ ಸಮಸ್ಯೆಯನ್ನು ಕಡೆಗಣಿಸಿ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಯ ಜಂಜಾಟದಲ್ಲಿ ಮುಳುಗಿದೆ. ಬೆಂಗಳೂರು ಬಂದ್ ಪಕ್ಷಾತೀತವಾದ ಹೋರಾಟ. ಇದರಿಂದ ಬ್ರಾಂಡ್ ಬೆಂಗಳೂರಿಗೆ ಧಕ್ಕೆಯಾಗಲಿದೆ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ಸರಿಯಲ್ಲ. ಸರ್ಕಾರ ಜನರ ಕಷ್ಟಕ್ಕೆ ಸ್ಪಂಧಿಸಬೇಕು. ಬ್ರಾಂಡ್‍ಗೋಸ್ಕರ ಸಮಸ್ಯೆಗಳನ್ನು ಕಡೆಗಣಿಸಬಾರದು ಎಂದು ಎಚ್ಚರಿಸಿದರು.

ಕಾಂಗ್ರೆಸ್ ಅಧಿಕಾರಕ್ಕಾಗಿ ಮೇಕೆದಾಟು ಪಾದಯಾತ್ರೆ ಮಾಡಿತ್ತು. ಅಧಿಕಾರಕ್ಕೆ ಬಂದು ಮೂರು ತಿಂಗಳಾದರೂ ಅಣೆಕಟ್ಟು ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಲಾಗಿಲ್ಲ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ವಿಶೇಷ ಅಧಿವೇಶನ ಕರೆದು ನೀರು ಬಿಡದೇ ಇರುವ ನಿರ್ಣಯ ಕೈಗೊಳ್ಳಬೇಕು. ನೀರಿಲ್ಲ ಎಂದರೂ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶ ನೀಡುತ್ತಿರುವ ಕಾವೇರಿ ನೀರು ನಿಯಂತ್ರಣಾ ಸಮಿತಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಗಳನ್ನು ತಿರಸ್ಕಾರ ಮಾಡಬೇಕು.

ನ್ಯಾಯಾಲಯದ ಮುಂದೆ ವಾದ ಮಂಡಿಸಲು ಸಮರ್ಥ ತಂಡವನ್ನು ರಚಿಸಬೇಕು ಎಂದು ಒತ್ತಾಯಿಸಿದರು. ಸೆ.29 ರಂದು ಕರೆ ನೀಡಿರುವ ಕರ್ನಾಟಕ ಬಂದ್‍ಗೂ ನಮಗೂ ಸಂಬಂಧವಿಲ್ಲ. ನಾವು ಮೊದಲಿಗೆ ಬೆಂಗಳೂರು ಬಂದ್‍ಗೆ ಕರೆ ನೀಡಿದ್ದೆವು. ಅದನ್ನು ಇಂದು ಆಚರಿಸಿದ್ದೇವೆ ಎಂದರು.

ಫೆನ್ಸಿಂಗ್‍ನಲ್ಲಿ ಭಾರತದ ಚೊಚ್ಚಲ ಏಷ್ಯನ್ ಗೇಮ್ಸ್ ಪದಕದ ಭರವಸೆ

ಹ್ಯಾಂಗ್‍ಝೌ, ಸೆ 26 (ಪಿಟಿಐ)- ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‍ನಲ್ಲಿ ಭಾರತದ ಸ್ಟಾರ್ ಫೆನ್ಸರ್ ಭವಾನಿ ದೇವಿ ಅವರು ಮಹಿಳೆಯರ ಸೇಬರ್ ವೈಯಕ್ತಿಕ ಪ್ರೀ ಕ್ವಾರ್ಟರ್ ಫೈನಲ್‍ಗೆ ಪ್ರವೇಶಿಸಿ, ಪದಕದ ಭರವಸೆ ಮೂಡಿಸಿದ್ದಾರೆ.

ಅವರು ತಮ್ಮ ಸಿಂಗಾಪುರದ ಪ್ರತಿಸ್ಪರ್ಧಿ ಜೂಲಿಯೆಟ್ ಜೀ ಮಿನ್ ಹೆಂಗ್ ಅವರನ್ನು 5-2 ರಿಂದ ಸೋಲಿಸಿದರು ಮತ್ತು ನಂತರ ಸೌದಿ ಅರೇಬಿಯಾದ ಅಲ್ಹಾಅಲ್ಹಮ್ಮದ್ ಅವರನ್ನು 5-1 ರಿಂದ ಮಣಿಸಿದರು. ಕರೀನಾ ದೋಸ್ಪೇ ವಿರುದ್ಧ ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಕಂಚಿನ ಪದಕ ಗೆದ್ದ ಭಾರತದ ಆಟಗಾರ್ತಿ 5-3 ಅಂತರದಲ್ಲಿ ಮೇಲುಗೈ ಸಾಧಿಸಿದರು.

ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಮಧ್ಯಪ್ರದೇಶ ಅನಾರೋಗ್ಯ ರಾಜ್ಯವಾಗಿತ್ತು : ಚೌಹಾಣ್ ವಾಗ್ದಾಳಿ

ತನ್ನ ಕೊನೆಯ ಎರಡು ಪೂಲ್ ಪಂದ್ಯಗಳಲ್ಲಿ, ಅವರು ಉಜ್ಬೇಕಿಸ್ತಾನ್‍ನ ಜೈನಾಬ್ ದೈಬೆಕೋವಾ ಮತ್ತು ಬಾಂಗ್ಲಾದೇಶದ ರೊಕ್ಸಾನಾ ಖಾತುನ್ ಅವರನ್ನು ಒಂದೇ ರೀತಿಯ 5-1 ಅಂತರದಿಂದ ಸುಲಭವಾಗಿ ಸೋಲಿಸಿ ಪೂಲ್‍ನಲ್ಲಿ ಅಗ್ರಸ್ಥಾನ ಪಡೆದರು.

30 ವರ್ಷ ವಯಸ್ಸಿನವರು, ಟೋಕಿಯೊ ಒಲಿಂಪಿಕ್ಸ ಮಾಡಿದ ಮೊದಲ ಭಾರತೀಯ ಫೆನ್ಸರ್ ಆಗಿದ್ದಾರೆ, ಅವರು 16 ರ ಸುತ್ತಿನಲ್ಲಿ ಥಾಯ್ಲೆಂಡ್‍ನ ಟೊಂಕಾವ್ ಫೋಕೆವ್ ಅವರನ್ನು ಎದುರಿಸಲಿದ್ದಾರೆ.

ಇಂಡೋ ಪೆಸಿಫಿಕ್ ರಾಷ್ಟ್ರಗಳ ಸಮಗ್ರತೆಗೆ ಒತ್ತು : ಮನೋಜ್‍ ಪಾಂಡೆ

ನವದೆಹಲಿ,ಸೆ.26- ಇಂಡೋ-ಪೆಸಿಫಿಕ್‍ಗಾಗಿ ಭಾರತದ ದೃಷ್ಟಿಕೋನವು ಎಲ್ಲಾ ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವವನ್ನು ಒತ್ತಿಹೇಳುತ್ತದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅಭಿಪ್ರಾಯಪಟ್ಟಿದ್ದಾರೆ.

ಇಂಡೋ-ಪೆಸಿಫಿಕ್ ರಾಷ್ಟ್ರಗಳ ಸೇನಾ ಮುಖ್ಯಸ್ಥರ ಸಮಾವೇಶದಲ್ಲಿ ಮಾತನಾಡಿದ ಜನರಲ್ ಪಾಂಡೆ, ಈ ಪ್ರದೇಶದಲ್ಲಿ ಚೀನಾದ ಆಕ್ರಮಣಕಾರಿ ಮಿಲಿಟರಿ ಸ್ನಾಯು ಬಗ್ಗಿಸುವ ಬಗ್ಗೆ ಜಾಗತಿಕ ಕಳವಳಗಳು ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಜಮ್ಮುವಿನಲ್ಲಿ ಶಂಕಿತ ಉಗ್ರರ ಮನೆ ಮೇಲೆ ದಾಳಿ

ಈ ಪ್ರದೇಶದಲ್ಲಿನ ಎಲ್ಲಾ ಪಾಲುದಾರರನ್ನು ಸಕಾರಾತ್ಮಕವಾಗಿ ತೊಡಗಿಸಿಕೊಳ್ಳುವ ಭಾರತದ ಬದ್ಧತೆ ಅಚಲ ಮತ್ತು ನಿರಂತರವಾಗಿದೆ ಎಂದು ಹೇಳಿದರು. ಇಂಡೋ-ಪೆಸಿಫಿಕ್‍ಗಾಗಿ ಭಾರತದ ದೃಷ್ಟಿಕೋನವು ವಿವಾದಗಳ ಶಾಂತಿಯುತ ಪರಿಹಾರ, ಬಲದ ಬಳಕೆಯನ್ನು ತಪ್ಪಿಸುವುದು ಮತ್ತು ಅಂತರರಾಷ್ಟ್ರೀಯ ಕಾನೂನುಗಳಿಗೆ ಬದ್ಧವಾಗಿರುವುದನ್ನು ಒತ್ತಿಹೇಳುತ್ತದೆ ಎಂದು ಅವರು ಹೇಳಿದರು.

ದೇಶಗಳ ಪ್ರಯತ್ನಗಳು ಉಚಿತ ಇಂಡೋ-ಪೆಸಿಫಿಕ್ ಕಡೆಗೆ ಒಮ್ಮುಖವಾಗುತ್ತಿರುವಾಗ, ನಾವು ಅಂತರರಾಜ್ಯ ಸ್ಪರ್ಧೆಗಳು ಮತ್ತು ಸ್ಪರ್ಧೆಗಳ ಅಭಿವ್ಯಕ್ತಿಗಳಿಗೆ ಸಾಕ್ಷಿಯಾಗುತ್ತಿದ್ದೇವೆ ಎಂದು ಸೇನಾ ಮುಖ್ಯಸ್ಥರು ಹೇಳಿದರು.
ಸೇನಾ ಮುಖ್ಯಸ್ಥರು ನಾವು ಎದುರಿಸುತ್ತಿರುವ ಸವಾಲುಗಳು ಗಡಿಯುದ್ದಕ್ಕೂ ಮೀರಿದೆ ಮತ್ತು ಅವುಗಳಿಗೆ ನಮ್ಮ ಪ್ರತಿಕ್ರಿಯೆಯು ಇದಕ್ಕೆ ಕಾರಣವಾಗಬೇಕು ಎಂದು ಗಮನಿಸಿದರು.

ಆಧಾರ್ ಗೌಪ್ಯತೆ ಬಗ್ಗೆ ಅಪಸ್ವರ ಸಲ್ಲದು : ಕೇಂದ್ರ ಸರ್ಕಾರ

ನವದೆಹಲಿ,ಸೆ.26- ಆಧಾರ್ ಗೌಪ್ಯತೆ ಬಗ್ಗೆ ಅಪಸ್ವರ ಎತ್ತಿರುವ ಮೂಡಿ ಸಂಸ್ಥೆಗೆ ಕೇಂದ್ರ ಸರ್ಕಾರ ಕಿವಿ ಹಿಂಡಿದೆ.
ಆಧಾರ್ ಗೌಪ್ಯತೆ ಮತ್ತು ಭದ್ರತೆಗೆ ಅಪಾಯವನ್ನುಂಟುಮಾಡುತ್ತದೆ ಮತ್ತು ಅದರ ಬಯೋಮೆಟ್ರಿಕ್ ತಂತ್ರಜ್ಞಾನದ ಬಳಕೆಯು ವಿಶ್ವಾಸಾರ್ಹವಲ್ಲ ಎಂಬ ಜಾಗತಿಕ ಕ್ರೆಡಿಟ್ ಏಜೆನ್ಸಿ ಮೂಡೀಸ್ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಕೇಂದ್ರವು ಸಂಸ್ಥೆ ಹೇಳಿಕೆಗಳನ್ನು ಆಧಾರರಹಿತ ಮತ್ತು ಸಾಕ್ಷ್ಯಾಧಾರಗಳ ಕೊರತೆ ಎಂದು ತಿರಸ್ಕರಿಸಿದೆ.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಮೂಡಿ ಆರೋಪಗಳನ್ನು ಬಲವಾಗಿ ನಿರಾಕರಿಸಿದೆ, ಆಧಾರ್ ವ್ಯವಸ್ಥೆಯು ಆಗಾಗ್ಗೆ ಸೇವೆ ನಿರಾಕರಣೆಗೆ ಕಾರಣವಾಗುತ್ತದೆ, ವಿಶೇಷವಾಗಿ ಬಿಸಿ ಮತ್ತು ಆದ್ರ್ರ ವಾತಾವರಣದಲ್ಲಿ ಕೈಯಿಂದ ಕೆಲಸ ಮಾಡುವವರಿಗೆ. ಒಂದು ನಿರ್ದಿಷ್ಟ ಹೂಡಿಕೆದಾರರ ಸೇವೆಯು ಯಾವುದೇ ಪುರಾವೆಗಳು ಅಥವಾ ಆಧಾರಗಳನ್ನು ಉಲ್ಲೇಖಿಸದೆ, ಆಧಾರ್ ವಿರುದ್ಧ ವ್ಯಾಪಕವಾದ ಸಮರ್ಥನೆಗಳನ್ನು ಮಾಡಿದೆ, ವಿಶ್ವದ ಅತ್ಯಂತ ವಿಶ್ವಾಸಾರ್ಹ ಡಿಜಿಟಲ್ ಐಡಿ. ಕಳೆದ ದಶಕದಲ್ಲಿ, ಒಂದು ಶತಕೋಟಿ ಭಾರತೀಯರು ಆಧಾರ್ ಅನ್ನು ದೃಢೀಕರಿಸಲು ಅದನ್ನು ಬಳಸುವ ಮೂಲಕ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಗುರುತಿನ ವ್ಯವಸ್ಥೆಯಲ್ಲಿ ಅಂತಹ ಅಭೂತಪೂರ್ವ ವಿಶ್ವಾಸವನ್ನು ನಿರ್ಲಕ್ಷಿಸುವುದು ಬಳಕೆದಾರರಿಗೆ ತಮ್ಮ ಸ್ವಂತ ಹಿತಾಸಕ್ತಿ ಏನು ಎಂಬುದನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಸೂಚಿಸುತ್ತದೆ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ವಿಶ್ವಬ್ಯಾಂಕ್‍ನಂತಹ ಜಾಗತಿಕ ಸಂಸ್ಥೆಗಳು ಆಧಾರ್ ಅನ್ನು ಶ್ಲಾಸಿವೆ ಮತ್ತು ಅನೇಕ ದೇಶಗಳು ಇದೇ ರೀತಿಯ ಡಿಜಿಟಲ್ ಐಡಿ ವ್ಯವಸ್ಥೆಯನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.

ಮಣಿಪುರ : ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಹತ್ಯೆ

ಬಳಕೆದಾರರ ಗುರುತಿನ ರುಜುವಾತುಗಳು ಮತ್ತು ಆನ್‍ಲೈನ್ ಸಂಪನ್ಮೂಲಗಳ ಪ್ರವೇಶದ ಮೇಲೆ ನಿಯಂತ್ರಣದ ಏಕ ಬಿಂದುವನ್ನು ಹೊಂದಿರುವ ಕೇಂದ್ರೀಕೃತ ವ್ಯವಸ್ಥೆಗಳು ಬಳಕೆದಾರರಿಗೆ ಭದ್ರತೆ ಮತ್ತು ಗೌಪ್ಯತೆಗೆ ಅಪಾಯವನ್ನುಂಟುಮಾಡುತ್ತವೆ ಎಂದು ಮೂಡೀಸ್ ತನ್ನ ವರದಿಯಲ್ಲಿ ಎಚ್ಚರಿಸಿದೆ.

ಮತ್ತೆ ಬಾಲ ಬಿಚ್ಚಿದ ಮಾವೋವಾದಿಗಳು

ಲತೇಹರ್, ಸೆ 26 (ಪಿಟಿಐ)- ಜಾರ್ಖಂಡ್‍ನ ಲತೇಹಾರ್ ಜಿಲ್ಲೆಯಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಸದಸ್ಯರು ರೈಲ್ವೆ ನಿರ್ಮಾಣ ಸ್ಥಳದಲ್ಲಿ ಕನಿಷ್ಠ ನಾಲ್ಕು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಮತ್ತು ಖಾಸಗಿ ಸಂಸ್ಥೆಯ ಉದ್ಯೋಗಿಗಳ ಮೇಲೆ ಹಲ್ಲೇ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ಸಂಜೆ ಚಂದ್ವಾದ ಚಟ್ಟಿ ನದಿ ಸೇತುವೆ ಬಳಿ ಈ ಘಟನೆ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.
ಮಾವೋವಾದಿಗಳ ಗುಂಪು ಮೂರು ಭಾರಿ ವಾಹನಗಳು ಮತ್ತು ಕಾರಿಗೆ ಬೆಂಕಿ ಹಚ್ಚಿ ಸಂಸ್ಥೆಯ ನೌಕರರ ಮೇಲೆ ಹಲ್ಲೇ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಆಗಮಿಸಿ ತನಿಖೆ ಆರಂಭಿಸಿದ್ದಾರೆ.

ಮಣಿಪುರ : ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಹತ್ಯೆ

ಪಲಾಮು ಜಿಲ್ಲೆಯಲ್ಲಿ ಕಾನೂನುಬಾಹಿರ ಸಿಪಿಐ (ಮಾವೋವಾದಿ) ಸದಸ್ಯರು ಆರು ವಾಹನಗಳನ್ನು ಸುಟ್ಟುಹಾಕಿದ ಮತ್ತು ಖಾಸಗಿ ರಸ್ತೆ ನಿರ್ಮಾಣ ಕಂಪನಿಯ ಇಬ್ಬರು ಉದ್ಯೋಗಿಗಳ ಮೇಲೆ ಹಲ್ಲೆ ನಡೆಸಿದ ಒಂದು ತಿಂಗಳ ನಂತರ ಈ ಘಟನೆ ಸಂಭವಿಸಿದೆ.