Home Blog Page 1942

ಮನೆಗೆ ಬಂದಿದ್ದ ಆಟೋ ಚಾಲಕನ ಕೊಲೆ

ಬೆಂಗಳೂರು, ಸೆ.25- ಅಣ್ಣನ ಮನೆಗೆ ಬಂದು ತಂಗುತ್ತಿದ್ದ ಆಟೋ ಚಾಲಕ ಹಾಗೂ ಹೋಮ್‍ಕೇರ್ ನೌಕರನನ್ನು ತಮ್ಮ ರಾಡ್‍ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ. ಜೆಪಿ ನಗರದ ನಿವಾಸಿ ಗಣೇಶ (43) ಕೊಲೆಯಾದ ವ್ಯಕ್ತಿ. ಇವರು ಹಿಂದೆ ಆಟೋ ಚಾಲಕರಾಗಿದ್ದು, ಈಗ ಹೋಮ್‍ಕೇರ್‍ವೊಂದರಲ್ಲಿ ಉದ್ಯೋಗಿಯಾಗಿದ್ದರು.

ಸಾರ್ವಭೌಮನಗರದ ಶಾರದಾ ನಗರದಲ್ಲಿ ಮಲ್ಲೇಶ್ ಎಂಬುವವರು ಮನೆ ಮಾಡಿಕೊಂಡು ವಾಸವಾಗಿದ್ದಾರೆ. ಅಲ್ಲಿಗೆ ಅವರ ಸ್ನೇಹಿತ ಗಣೇಶ ತನ್ನ ಮನೆ ಬಿಟ್ಟು ಬಂದು ಉಳಿದುಕೊಂಡಿದ್ದ. ಇದು ಮಲ್ಲೇಶನ ತಮ್ಮ ನಾರಾಯಣನಿಗೆ ಇಷ್ಟವಿರಲಿಲ್ಲ.

ನಮ್ಮ ಅಣ್ಣನ ಮನೆಯಲ್ಲಿ ನೀನು ಇರುವುದು ಬೇಡ. ನಿಮ್ಮ ಮನೆಗೆ ಹೋಗು ಎಂದು ಗಣೇಶನಿಗೆ ಹಲವಾರು ಬಾರಿ ನಾರಾಯಣ ಎಚ್ಚರಿಕೆ ನೀಡಿದ್ದ. ಆದರೆ, ನಿನ್ನೆ ಮಲ್ಲೇಶ ಇಲ್ಲದಿದ್ದ ಸಂದರ್ಭದಲ್ಲಿ ಗಣೇಶ ಮನೆಯಲ್ಲಿದ್ದ. ರಾತ್ರಿ ಅಣ್ಣನ ಮನೆಗೆ ಬಂದ ನಾರಾಯಣ ಗಣೇಶನನ್ನು ನೋಡಿ ಮನೆಯಲ್ಲಿ ಏಕೆ ಇದ್ದೀಯ ಎಂದು ಗಲಾಟೆ ಮಾಡಿದ್ದಾನೆ. ಇದು ವಿಕೋಪಕ್ಕೆ ಹೋಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

KRS ಸದ್ಯದ ಚಿತ್ರ ತೋರಿಸಿ ಕಣ್ಣೀರಿಟ್ಟ ದೇವೇಗೌಡರು

ಈ ವೇಳೆ ಮುಂಜಾನೆ 2.30ರ ಸಮಯದಲ್ಲಿ ನಾರಾಯಣ ರಾಡ್‍ನಿಂದ ಗಣೇಶನ ತಲೆಗೆ ಹೊಡೆದು ಅಲ್ಲಿಂದ ಪರಾರಿಯಾಗಿದ್ದಾನೆ. ಸ್ಥಳೀಯರು ಕೂಗಾಟ ಕೇಳಿ ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ಗಣೇಶ ಬಿದ್ದಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಮುಂದಾದಾಗ ಆತ ಕೊನೆಯುಸಿರೆಳೆದಿದ್ದಾನೆ.

ನಾರಾಯಣ ಪರಾರಿಯಾಗಿದ್ದು, ಸುದ್ದಿ ತಿಳಿದ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ರಾಜ್ಯಾದ್ಯಂತ ಏಕಕಾಲದಲ್ಲಿ ಜನತಾ ದರ್ಶನ, ಸ್ಥಳದಲ್ಲೇ ಪರಿಹಾರ

ನಗರ ಪ್ರದೇಶದಲ್ಲಿ ನೀರಿನ ಬಳಕೆ ಮಿತಿಗೊಳಿಸಲು ತಜ್ಞರ ಸಲಹೆ

ಬೆಂಗಳೂರು, ಸೆ.25- ಈ ವರ್ಷ ಮುಂಗಾರು ಮಳೆ ಕೈಕೊಟ್ಟಿರುವುದರಿಂದ ರಾಜ್ಯದ ಅಣೆಕಟ್ಟುಗಳಲ್ಲಿನ ನೀರಿನ ಮಟ್ಟದ ಮೇಲೆ ಪರಿಣಾಮ ಬೀರುತ್ತಿದ್ದು, ಈಗಿನಿಂದಲೇ ನಗರ ಪ್ರದೇಶಗಳಿಗೆ ಮತ್ತು ನೀರಾವರಿಗೆ ಪಡಿತರ ರೀತಿಯಲ್ಲಿ ನೀರು ಸರಬರಾಜು ಅಂದರೆ ದೈನಂದಿನ ನೀರಿನ ಬಳಕೆಯನ್ನು ಸೀಮಿತಗೊಳಿಸುವ ಕ್ರಿಯೆಗೆ ಸರ್ಕಾರ ಚಾಲನೆ ನೀಡಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಜಲಸಂಪನ್ಮೂಲ ಇಲಾಖೆ ಮತ್ತು ಅಂತರ್ಜಲ ಮಂಡಳಿಯ ಅಧಿಕಾರಿಗಳ ಪ್ರಕಾರ, ಮೇಲ್ಮೈಯಲ್ಲಿನ ನೀರನ್ನು ಮಾತ್ರ ಅತ್ಯುತ್ತಮವಾಗಿ ಹಿಡಿದಿಡಲಾಗುತ್ತದೆ. ಅಣೆಕಟ್ಟಿನ ಸುತ್ತಲ ಪ್ರದೇಶಗಳಲ್ಲಿ ಅಂತರ್ಜಲ ವನ್ನು ಹಿಡಿದಿಟ್ಟುಕೊಳ್ಳಲು ವ್ಯವಸ್ಥೆ ಮಾಡಿ ಅವುಗಳನ್ನು ನೀರಿನ ಕೊರತೆಯ ಸಮಯದಲ್ಲಿ ಬಳಸಿಕೊಳ್ಳುವಂತೆ ಮಾಡಬೇಕು. ನಗರ ಪ್ರದೇಶಗಳಲ್ಲಿ ಮತ್ತು ನೀರಾವರಿಗೆ ದಿನನಿತ್ಯ ಸಹಜವಾಗಿ ನೀರು ಪೂರೈಕೆ ಮಾಡು ವುದಕ್ಕಿಂತ ಕಡಿಮೆ ಮಿತಿಯಲ್ಲಿ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡಬೇಕು.

ಸರ್ಕಾರವು ನೀರಾವರಿ, ಕೈಗಾರಿಕೆ ಗಳಿಗೆ ಮತ್ತು ನಗರ ಪ್ರದೇಶಗಳಿಗೆ ತಕ್ಷಣವೇ ಶೇಕಡಾ 20 ರಿಂದ 30 ರಷ್ಟು ನೀರು ಸರಬರಾಜನ್ನು ಕಡಿಮೆ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಈಶಾನ್ಯ ಮುಂಗಾರು ವಿಫಲವಾದರೆ ಈ ನೀರನ್ನು ಬೇಸಿಗೆಯಲ್ಲಿ ಸಂಗ್ರಹಿಸಿ ಬಳಸಬೇಕೆಂಬ ಸಲಹೆ ಕೊಟ್ಟಿದ್ದಾರೆ.

ನಾಳೆ ಬೆಂಗಳೂರು ಬಂದ್ : ಏನಿರುತ್ತೆ..? ಏನಿರಲ್ಲ..? ಇಲ್ಲಿದೆ ಮಾಹಿತಿ

ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತೀಯ ಮಾನದಂಡಗಳ ಬ್ಯೂರೋ ಮಾರ್ಗಸೂಚಿಗಳ ಪ್ರಕಾರ, ನಾಲ್ಕು ಜನರ ಕುಟುಂಬಕ್ಕೆ ಮಾಸಿಕವಾಗಿ 12,000-15,000 ಲೀಟರ್ ನೀರು ಬೇಕಾಗುತ್ತದೆ, ಆದರೆ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಒಂದು ಕುಟುಂಬವು ತಿಂಗಳಿಗೆ 20,000-40,000 ಲೀಟರ್ ನೀರನ್ನು ಬಳಸುತ್ತದೆ. ನಗರ ನೀರು ಬಳಕೆಯ ಕುರಿತು ಯೋಜನೆಯ ಕೊರತೆ ಇದೆ ಎಂದು ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಣೆಕಟ್ಟು ಸುತ್ತಲ ಪ್ರದೇಶಗಳಲ್ಲಿ ಕೃಷಿ ಮಾಡಲು ಅಂತರ್ಜಲದತ್ತ ಗಮನಹರಿಸಬೇಕು. ಸಮಸ್ಯೆ ಹೆಚ್ಚು ರಾಜಕೀಯವಾಗುತ್ತಿದೆ ಎಂದು ಅವರು ಹೇಳಿದರು. ಕಾವೇರಿಯಿಂದ ಕರ್ನಾಟಕದ ನೀರಿನ ಪಾಲು ಕೇವಲ ಶೇ.25ರಷ್ಟಿದೆ ಆದರೆ ಇತರ ಮೂಲಗಳಿಂದ ಅದರ ನೀರಿನ ಬಳಕೆ ಹೆಚ್ಚಾಗಿದೆ.

ಕಳೆದ 32 ವರ್ಷಗಳಲ್ಲಿ, ಕರ್ನಾಟಕವು ತಮಿಳುನಾಡಿನೊಂದಿಗೆ ಆರು ಬಾರಿ ಬರ ಮತ್ತು ನೀರಿನ ಹೋರಾಟವನ್ನು ಎದುರಿಸಿತು. ಸರ್ಕಾರಗಳ ಕಡೆಯಿಂದ ಯೋಜನೆ ಮತ್ತು ಸಿದ್ಧತೆಯ ಕೊರತೆ ಇತ್ತು, ಅದು ಈಗ ಪ್ರತಿಫಲಿಸಿದೆ ಎಂದಿದ್ದಾರೆ.

ಜಲಾನಯನ ಪ್ರದೇಶದ ಎಲ್ಲಾ ನಾಲ್ಕು ಜಲಾಶಯಗಳಲ್ಲಿ 51 ಟಿಎಂಸಿ ಅಡಿ ನೀರು ಇದೆ. ಬೆಳೆದ ಬೆಳೆಗಳಿಗೆ 70 ಟಿಎಂಸಿ, ಕುಡಿಯಲು 33 ಟಿಎಂಸಿ ನೀರು, ಕೈಗಾರಿಕೆಗಳಿಗೆ 3 ಟಿಎಂಸಿ ಅಡಿ ನೀರು ಬೇಕು. ರೈತರು ಬಿತ್ತನೆ ಕೈಗೊಂಡಿದ್ದರಿಂದ ನೀರಾವರಿಗೆ ಹೊಡೆತ ಬೀಳಲಿದೆ. ಎರಡೂ ರಾಜ್ಯಗಳ ರೈತರಿಗೆ ಈಗಲೇ ಮನವರಿಕೆ ಮಾಡಿಕೊಡಬೇಕಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಶೇ.50ರಷ್ಟು ಮಳೆ ಕೊರತೆಯಾಗಿರುವುದು ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಐಐಎಸ್‍ಸಿಯ ತಜ್ಞರು ಹೇಳಿದ್ದಾರೆ. ನೀರಾವರಿಗಾಗಿ ಉತ್ತಮ ನೀರಿನ ನಿರ್ವಹಣೆಯನ್ನು ರೈತರು ಅರ್ಥಮಾಡಿಕೊಳ್ಳಬೇಕು. ಕೃಷಿ ವಿಶ್ವವಿದ್ಯಾಲಯಗಳ ಪಾತ್ರ ಇಲ್ಲಿ ಬಳಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ನಿಗದಿತ ಸಮಯದೊಳಗೆ ಜನರ ಸಮಸ್ಯೆಗಳನ್ನು ಪರಿಹರಿಸಿ : ಸಚಿವ ಗುಂಡೂರಾವ್

ವೈಕ್ತಿಗತವಾಗಿ ದೈನಂದಿನ ನೀರಿನ ಬಳಕೆ
3-4 ಲೀಟರ್ ಕುಡಿಯಲು ಬೇಕು
8 ಲೀಟರ್ ಅಡುಗೆಗಾಗಿ ಕಾದಿರಿಸಬೇಕು
20 ಲೀಟರ್ ಸ್ನಾನ, ಬಟ್ಟೆ, ಪಾತ್ರೆ ತೊಳೆಯಲು ಬೇಕು
25-30 ಲೀಟರ್ ಫ್ಲಶ್, ಶೌಚಾಲಯದ ಅವಶ್ಯಕತೆ
8-10 ಲೀಟರ್ ಇತರ ಉಪಯುಕ್ತತೆಗಾಗಿ ಬೇಕು

ನಾಳೆ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ

ನವದೆಹಲಿ,ಸೆ.25- ಕರ್ನಾಟಕ ಮತ್ತು ತಮಿಳುನಾಡು ನಡುವೆ ತೀವ್ರ ಸಂಘರ್ಷಕ್ಕೆ ಕಾರಣವಾಗಿರುವ ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಮಂಗಳವಾರ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ಕರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ. ನಾಳೆ ಬೆಳಗ್ಗೆ 11 ಗಂಟೆಗೆ ಕಾವೇರಿ ಜಲನಯನ ತೀರಪ್ರದೇಶಗಳಾದ ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಮತ್ತು ಕೇರಳ ರಾಜ್ಯಗಳ ಅಧಿಕಾರಿಗಳ ಸಭೆಯನ್ನು ಕಾವೇರಿ ನೀರು ನಿಯಂತ್ರಣ ಸಮಿತಿಯು ಕರೆದಿದ್ದು ವಿಡಿಯೋ ಕಾನರೆನ್ಸ್ ಮೂಲಕ ನಡೆಯಲಿದೆ.

ಕಾವೇರಿ ಜಲನಯನ ತೀರಪ್ರದೇಶದಿಂದ ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಕಳೆದ ಸೆ.13ರಂದು ನೀಡಿತ್ತು. ಇದೀಗ ಆದೇಶ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆ ಸಭೆ ಕರೆಯಲಾಗಿದೆ.ನಾಳಿನ ಸಭೆಯಲ್ಲಿ ನೀರು ಹರಿಸಲು ಸಾಧ್ಯವಿಲ್ಲ ಎಂದು ಹೇಳಲು ಕರ್ನಾಟಕ ನಿರ್ಧರಿಸಿದೆ. ನೀರಿನ ಕೊರತೆ ನಡುವೆ ಸಿಡಬ್ಲ್ಯು ಆರ್‍ಸಿ ನೀಡಿರುವ ಎಲ್ಲಾ ಆದೇಶಗಳನ್ನು ಪಾಲಿಸಿದೆ. ಈಗ ನೀರಿನ ಕೊರತೆ ಹೆಚ್ಚಳವಾಗಿದ್ದು, ಸಣ್ಣ ಪ್ರಮಾಣದ ಕೃಷಿಗೂ ಸಮಸ್ಯೆಯಾಗುವ ಸಾಧ್ಯತೆಗಳಿದೆ.

ರಾಹುಲ್ ಗಾಂಧಿಗೆ ಹೈದರಾಬಾದ್‍ನಲ್ಲಿ ಸ್ಪರ್ಧಿಸುವಂತೆ ಓವೈಸಿ ಚಾಲೆಂಜ್

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ಕಾವು ಹೆಚ್ಚಾಗಿದೆ. ರೈತಪರ, ಕನ್ನಡಪರ ಸಂಘಟನೆಗಳು ಸೇರಿದಂತೆ ಮತ್ತಿತರರು ಮಂಡ್ಯ, ಮದ್ದೂರು, ಕೆಆರ್‍ಪೇಟೆ, ರಾಮನಗರ ಬಂದ್‍ಗೆ ಕರೆಕೊಟ್ಟಿವೆ. ಇನ್ನೊಂದೆಡೆ ಮಂಗಳವಾರ ಬೆಂಗಳೂರು ಬಂದ್ ಕರೆ ಕೊಟ್ಟಿದ್ದರೆ, ಮತ್ತೊಂದೆಡೆ ಕನ್ನಡಪರ ಒಕ್ಕೂಟ ಶುಕ್ರವಾರ ಕರ್ನಾಟಕ ಬಂದ್‍ಗೂ ಕರೆ ನೀಡಿದೆ. ಸಂಕಷ್ಟ ಸ್ಥಿತಿಯಲ್ಲಿರುವ ಕರ್ನಾಟಕದಿಂದ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಸ್ಪಷ್ಟಪಡಿಸಿದೆ.

ಅದರೆ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ ನೀಡಿರುವುದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಾಗಿ ನಾಳೆ ನಡೆಯಲಿರುವ ಸಭೆ ಕರ್ನಾಟಕ ಪಾಲಿಗೆ ಮಹತ್ವದ್ದಾಗಿದೆ.

ಈ ನಡುವೆ ತಮಿಳುನಾಡು ಕೂಡಾ ಕಾವೇರಿ ನೀರಿಗಾಗಿ ಬೇಡಿಕೆ ಇಡಲಿದೆ. ಈವರೆಗೂ 5,000 ಕ್ಯೂಸೆಕ್ ನೀರು ನಿತ್ಯ ಹರಿಸಲು ಸೂಚಿಸಿದರೂ ಕರ್ನಾಟಕ ಕಡಿಮೆ ಪ್ರಮಾಣದ ನೀರು ಹರಿಸಿ ಅನ್ಯಾಯ ಮಾಡಿದೆ. ಬೆಳೆ ಒಣಗುತ್ತಿರುವ ಹಿನ್ನೆಲೆ ತಮಿಳುನಾಡಿನಲ್ಲೂ ರೈತರು ಪ್ರತಿಭಟನೆ ಆರಂಭಿಸಿದ್ದಾರೆ. ಈ ಹಿನ್ನೆಲೆ ಹೆಚ್ಚುವರಿ ನೀರು ಹರಿಸಲು ನಿರ್ದೇಶನ ನೀಡಬೇಕು ಎಂದು ಸಭೆಯಲ್ಲಿ ಒತ್ತಾಯಿಸುವ ಸಾಧ್ಯತೆಯಿದೆ.

ಕಾವೇರಿ ವಿವಾದದಲ್ಲಿ ಬಿಜೆಪಿ-ಜೆಡಿಎಸ್ ರಾಜಕೀಯ ಮಾಡುತ್ತಿವೆ : ಸಿಎಂ

ಕಾವೇರಿ ನೀರಿಗಾಗಿ ಎರಡು ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆ ಕಾವೇರಿ ನೀರು ನಿಯಂತ್ರಣ ಸಮಿತಿ ಇಕ್ಕಟ್ಟಿನ ಪರಿಸ್ಥಿತಿಯಲ್ಲಿದೆ. ಈ ಹಿನ್ನೆಲೆ ಮಳೆ ಪ್ರಮಾಣ, ಅಣೆಕಟ್ಟುಗಳಿಗೆ ಬರುತ್ತಿರುವ ಒಳ ಹರಿವು ಹಾಗೂ ಜಲಾಶಯಗಳಲ್ಲಿನ ನೀರಿನ ಮಟ್ಟವನ್ನು ಲೆಕ್ಕ ಹಾಕಿ ನೀರು ಬಿಡುವ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಯಶವಂತಪುರ-ಕಾಚೀಗುಡ ವಂದೇ ಭಾರತ್ ರೈಲಿಗೆ ಚಾಲನೆ

ಬೆಂಗಳೂರು, ಸೆ.25- ಪ್ರಯಾಣಿಕರ ಅನುಕೂಲಕ್ಕಾಗಿ ಕಾಚೀಗುಡ-ಯಶವಂತಪುರ-ಕಾಚೇಗೌಡ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲು ಪ್ರಾರಂಭಿಸಲಾಗಿದ್ದು, ವಿಡಿಯೋ ಲಿಂಕ್ ಮೂಲಕ ನಿನ್ನೆ ಪ್ರಧಾನಿ ಚಾಲನೆ ನೀಡಿದ ನಂತರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಯಲಹಂಕ ರೈಲ್ವೆ ನಿಲ್ದಾಣದಲ್ಲಿ ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಸಿರೋಯಾ, ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೇಶ್ ಮೋಹನ್, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್ ಸೇರಿದಂತೆ ರೈಲ್ವೆ ಅಕಾರಿಗಳು ಪಾಲ್ಗೊಂಡಿದ್ದರು.

ಇಂದು ಅಕೃತವಾಗಿ ಯಶವಂತಪುರದಿಂದ ಕಾಚೀಗುಡಕ್ಕೆ ರೈಲು 20704 ಹೊರಟಿದೆ. ಬುಧವಾರ ಬಿಟ್ಟು ಉಳಿದ ವಾರದ ಆರು ದಿನಗಳು ಈ ರೈಲು ಸಂಚರಿಸಲಿವೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ರೈಲು ಸಂಖ್ಯೆ 20703 ಕಾಚೀಗುಡ-ಯಶವಂತಪುರ ವಂದೇ ಭಾರತ್ ಎಕ್ಸ್‍ಪ್ರೆಸ್ ಕಾಚಿಗುಡದಿಂದ ಬೆಳಿಗ್ಗೆ 05:30 ಗಂಟೆಗೆ ಹೊರಟು ಅದೇ ದಿನ ಮಧ್ಯಾಹ್ನ 02:00 ಗಂಟೆಗೆ ಯಶವಂತಪುರವನ್ನು ತಲುಪುತ್ತದೆ. ಮಾರ್ಗದಲ್ಲಿ, ಈ ರೈಲು ಮೆಹಬೂಬ್ ನಗರ (06:49/06:50 ಅI) ಕರ್ನೂಲ್ ನಗರ (08:24/08:25 ಅI) ಅನಂತಪುರ (10:44/10:45 ಅI) ಮತ್ತು ಧರ್ಮಾವರಂ (11:14/11: 15 ಅI) ಮಾರ್ಗದಲ್ಲಿ ಸಂಚರಿಸುತ್ತದೆ.

KRS ಸದ್ಯದ ಚಿತ್ರ ತೋರಿಸಿ ಕಣ್ಣೀರಿಟ್ಟ ದೇವೇಗೌಡರು

ರೈಲು ಸಂಖ್ಯೆ 20704 ಯಶವಂತಪುರ-ಕಾಚೀಗುಡ ವಂದೇ ಭಾರತ್ ಎಕ್ಸ್‍ಪ್ರೆಸ್ ಯಶವಂತಪುರದಿಂದ ಮಧ್ಯಾಹ್ನ 02:45 ಕ್ಕೆ ಹೊರಟು ಅದೇ ದಿನ ರಾತ್ರಿ 11:15ಕ್ಕೆ ಕಾಚೀಗುಡ ತಲುಪುತ್ತದೆ. ಈ ರೈಲು ಧರ್ಮಾವರಂನಲ್ಲಿ ಸಂಜೆ 04:59/05:00ಕ್ಕೆ, ಅನಂತಪುರದಲ್ಲಿ ಸಂಜೆ 05:29/05:30ಕ್ಕೆ, ಕರ್ನೂಲ್ ಸಿಟಿ 07:50/07:51ಕ್ಕೆ ಮತ್ತು ಮಹಬೂಬ್ ನಗರದಲ್ಲಿ 09:34/09:35 PIಗೆ ನಿಲ್ಲುತ್ತದೆ.

ಕಾಚೀಗುಡ-ಯಶವಂತಪುರ ದರ
ಸಿಸಿ ವರ್ಗ ರೂ. 1600
ಇಸಿ ವರ್ಗ ರೂ. 2915
ಇಸಿ ವರ್ಗ ರೂ. 2865

ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲಿನಲ್ಲಿ 2 ಡಿಟಿಸಿ (ಡ್ರೈವಿಂಗ್ ಟ್ರೈಲರ್ ಕೋಚ್‍ಗಳು), 4 ಎಂಸಿ (ಮೋಟಾರ್ ಕೋಚ್‍ಗಳು), ಮತ್ತು 2 ಟಿಸಿ (ಟ್ರೇಲರ್ ಕೋಚ್‍ಗಳು) ಸೇರಿದಂತೆ ಒಟ್ಟು 8 ಕೋಚ್‍ಗಳನ್ನು ಒಳಗೊಂಡಿರುತ್ತದೆ ಎಂದು ಸಾರ್ವಜನಿಕ ಸಂಪರ್ಕಾಕಾರಿ ತ್ರಿನೇತ್ರ ತಿಳಿಸಿದ್ದಾರೆ.

KRS ಸದ್ಯದ ಚಿತ್ರ ತೋರಿಸಿ ಕಣ್ಣೀರಿಟ್ಟ ದೇವೇಗೌಡರು

ಬೆಂಗಳೂರು, ಸೆ.25- ಕಾವೇರಿ ನದಿ ನೀರು ಹಂಚಿಕೆ ಬಿಕ್ಕಟ್ಟು ಪರಿಹಾರಕ್ಕಾಗಿ ತಮಿಳುನಾಡು ಮತ್ತು ಕರ್ನಾಟಕ ರಾಜ್ಯದಲ್ಲಿನ ವಾಸ್ತವಾಂಶ ಗಳನ್ನು ಅರಿಯಲು ತಜ್ಞರ ಸಮಿತಿ ಕಳುಹಿಸುವ ಬಗ್ಗೆ ಕೇಂದ್ರ ಜಲಶಕ್ತಿ ಇಲಾಖೆಯಿಂದ ಸುಪ್ರಿಂಕೋರ್ಟ್‍ಗೆ ಅರ್ಜಿ ಸಲ್ಲಿಸಿ ಮನವಿ ಮಾಡಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನದಿ ನೀರು ಹಂಚಿಕೆ ಸಂಕಷ್ಟಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ವಾಸ್ತವಾಂಶಗಳನ್ನು ಆಧರಿಸಿದ 5 ಪುಟಗಳ ಪತ್ರವನ್ನು ಬರೆದಿದ್ದು, ಅದರಲ್ಲಿ ಸಂಕಷ್ಟ ಪರಿಹಾರಕ್ಕೆ ಸಲಹೆಗಳನ್ನು ನೀಡಿ, ಪರಿಗಣಿಸುವಂತೆ ಮನವಿ ಮಾಡಿದ್ದಾರೆ.

ಕೆಆರ್‍ಎಸ್ ಜಲಾಶಯದಲ್ಲಿ ನೀರಿಲ್ಲದಿರುವ ಫೋಟೋವನ್ನು ಪ್ರದ ರ್ಶಿಸಿ ಭಾವುಕರಾಗಿ ಮಾತನಾಡಿದ ದೇವೇಗೌಡರು, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ ಮುಂದಿನ ಬೇಸಿಗೆಯವರೆಗೆ ಕುಡಿಯುವ ನೀರು ಮತ್ತು ಬೆಳೆಗಳಿಗೆ ಅಗತ್ಯವಿರುವ ನೀರಿನ ಪ್ರಮಾಣವನ್ನು ಆಧರಿಸಿ ಸಂಕಷ್ಟ ಸೂತ್ರ ರೂಪಿಸಬೇಕು. ಇದಕ್ಕಾಗಿ ತಮಿಳುನಾಡು ಮತ್ತು ಕರ್ನಾಟಕ ರಾಜ್ಯವನ್ನು ಹೊರತುಪಡಿಸಿದ ಐವರು ಪರಿಣಿತರ ತಂಡವನ್ನು ಉಭಯ ರಾಜ್ಯಗಳಿಗೆ ಕಳುಹಿಸಿ ವಾಸ್ತವಾಂಶದ ವರದಿ ಪಡೆದು ಸೂಕ್ತ ನಿರ್ಧಾರವನ್ನು ಕೈಗೊಳ್ಳಬೇಕು. ಈಗ ಆಗಿರುವಂತೆ ಮುಂದೆ ತೊಂದರೆ ಉಂಟಾಗದಂತೆ ಪರಿಹಾರ ರೂಪಿಸಬೇಕು ಎಂದು ಹೇಳಿದರು.

ನಿಗದಿತ ಸಮಯದೊಳಗೆ ಜನರ ಸಮಸ್ಯೆಗಳನ್ನು ಪರಿಹರಿಸಿ : ಸಚಿವ ಗುಂಡೂರಾವ್

9 ಅಂಶಗಳ ಸಲಹೆಗಳನ್ನು ಪ್ರಧಾನಿಯವರಿಗೆ ಪತ್ರದಲ್ಲಿ ನೀಡಲಾಗಿದೆ. ತಜ್ಞರ ಸಮಿತಿ ನೀಡಿರುವ ವರದಿಯನ್ನು ಆಧಾರಿಸಿ ಸಂಕಷ್ಟ ಸೂತ್ರವನ್ನು ರೂಪಿಸಬೇಕು ಇದು ಮಧ್ಯಂತರ ಪರಿಹಾರವಾಗಲಿದೆ ಎಂದು ಹೇಳಿದರು. ಎಲ್ಲಾ ಜಲಾಶಯಗಳಲ್ಲಿರುವ ನೀರಿನ ಸಂಗ್ರಹ, ಅಗತ್ಯ ಇರುವ ನೀರಿನ ಪ್ರಮಾಣ ಸೇರಿದಂತೆ ವಾಸ್ತವ ಸಂಗತಿಗಳನ್ನು ಸ್ವತಂತ್ರವಾದ ಬಾಹ್ಯ ಏಜೆನ್ಸಿ ನೇಮಿಸುವ ಮೂಲಕ ಕೇಂದ್ರ ಸರ್ಕಾರ ವರದಿ ಪಡೆಯಬೇಕು. ಆ ವರದಿ ಆಧರಿಸಿ ಕಾವೇರಿ ನೀರು ನಿರ್ವಹಣಾ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಸೂಕ್ತ ನಿರ್ದೇಶನ ನೀಡಬೇಕು.

15 ದಿನಗಳಿಗೊಮ್ಮೆ ನಿರ್ವಹಣಾ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಕಾವೇರಿ ಜಲಾನಯನ ಭಾಗದ ಜಲಾಶಯಗಳಿಗೆ ಭೇಟಿ ನೀಡಿ ವಾಸ್ತವ ಸಂಗತಿಗಳನ್ನು ಆಧರಿಸಿ ನಿರ್ಣಯ ಕೈಗೊಳ್ಳಬೇಕು. ಜಲಶಕ್ತಿ ಸಚಿವಾಲಯಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಅವರು ಕೋರಿದರು.

ಕಾವೇರಿ ವಿಷಯದಲ್ಲಿ ಜನರು ಸಂಕಷ್ಟಕ್ಕೀಡಾಗಿರುವ ಬಗ್ಗೆ ಕುಮಾರಸ್ವಾಮಿಯವರು ಮಾಹಿತಿ ಸಂಗ್ರಹಿಸಿದ್ದಾರೆ. ಅದರ ಮಾಹಿತಿಯನ್ನು ಪ್ರಧಾನಿಗೆ ತಲುಪಿಸಿದ್ದೇವೆ. ತಮಿಳುನಾಡಿನ ಸಹೋದರರು ಕರ್ನಾಟಕದಲ್ಲಿ ನೀರಿಲ್ಲದಿರುವ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಅವರು ಬದುಕಬೇಕು ನಮ್ಮನ್ನು ಬದುಕಿಸಬೇಕು ಎಂದರು.

ಉಭಯ ರಾಷ್ಟ್ರದಲ್ಲಿರುವ ವಾಸ್ತವ ಸ್ಥಿತಿಗತಿ ಅರಿಯಲು ತಜ್ಞರ ತಂಡವನ್ನು ಕಳುಹಿಸಲು ಕೋರಿ ರಾಜ್ಯಸಭೆಯಲ್ಲಿ ಮನವಿ ಮಾಡಿದ್ದೆ. ರಾಜ್ಯಸಭೆಯ ಅಧ್ಯಕ್ಷರು ಮನವಿಯನ್ನು ತಳ್ಳಿಹಾಕಿದರು. ನಾಳಿನ ಬಂದ್ ವಿಚಾರದಲ್ಲಿ ಯಾರ್ಯಾರು ಏನೇನು ಮಾತನಾಡುತ್ತಾರೆ ಎಂಬ ಬಗ್ಗೆ ನಾನು ಚರ್ಚಿಸುವುದಿಲ್ಲ ಎಂದರು.


ಕಳೆದ 60 ವರ್ಷದಲ್ಲಿ ಕಾಂಗ್ರೆಸ್ ಬಿಜೆಪಿ ಪಕ್ಷಗಳ ನಿಲುವನ್ನು ನೋಡಿದ್ದೇನೆ. ರಾಜಕೀಯ ಲಾಭಕ್ಕಾಗಿ ಕಾವೇರಿ ವಿಚಾರವನ್ನು ಬಳಸಿಕೊಂಡಿಲ್ಲ. 2 ರಾಜಕೀಯ ಪಕ್ಷಗಳು ಅಧಿಕಾರದಲ್ಲಿದ್ದಾಗ ನಾಡಿನ ಸಂಕಷ್ಟ ಪರಿಹಾರಕ್ಕಾಗಿ ಹೋರಾಟ ಮಾಡಿದ್ದೇನೆ. ತಮಿಳುನಾಡಿನ 40 ಸಂಸದರು ಒಗ್ಗಟ್ಟಾಗಿ ಹೋರಾಟ ಮಾಡುತ್ತಾರೆ. ನಮ್ಮಲ್ಲಿ 28 ಸಂಸದರು ಇದ್ದರೂ ಮೂಲೆಗುಂಪುಗಳಾಗುತ್ತಾರೆ ಒಗ್ಗಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮನಮೋಹನ್‍ಸಿಂಗ್ ಅವರು ಪ್ರಧಾನಿಯಾಗಿದ್ದಾಗ ನಡುಗುತ್ತಿದ್ದ ಕೈಯಲ್ಲಿ ಒಂದು ಲೋಟ ಹಿಡಿದು ಕಾವೇರಿ ವಿಚಾರ ಪ್ರಸ್ತಾಪವನ್ನು ಸಂಸತ್ತಿನಲ್ಲಿ ಪ್ರಸ್ತಾಪ ಮಾಡಿದೆ. ಆಗ ರಾಜ್ಯ ಪ್ರತಿನಿಧಿಸುವ ನಾಲ್ವರು ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ವಿರಪ್ಪ ಮೋಯ್ಲಿ, ಎಸ್.ಎಂ ಕೃಷ್ಣ. ಕೆ.ಎಚ್. ಮುನಿಯಪ್ಪ ಅವರು ಯಾರು ಕೂಡ ಮಾತನಾಡಲಿಲ್ಲ. ಆಗಿನ ಸಂಸದರಾಗಿದ್ದ ಅನಂತ್‍ಕುಮಾರ್ ಅವರ ಸಹಕಾರವನ್ನು ಕೋರಿದ್ದೆ. ಅವರು ಪಕ್ಷದ ತೀರ್ಮಾನ ಪಡೆದು ನಾಳೆ ಹೇಳುವುದಾಗಿ ಹೇಳಿದ್ದರು. ಆದರೆ ಮರುದಿನ ಬರಲೇ ಇಲ್ಲ ಸ್ಮರಿಸಿದರು. ಅಧಿಕಾರಕ್ಕಾಗಿ ನಮ್ಮ ಪಕ್ಷ ಹೋರಾಡುತ್ತಿಲ್ಲ. ಸ್ವಾಭಿಮಾನದಿಂದ ಜನರ ಹಿತ ಕಾಪಾಡಲು ಹೋರಾಡುತ್ತಿದೆ ಎಂದು ಹೇಳಿದರು.

ಅಸ್ತಿತ್ವ ಉಳಿಸಿಕೊಳ್ಳಲು ಕುಮಾರಸ್ವಾಮಿ ಬಿಜೆಪಿ ನಾಯಕರ ಕಾಲಿಗೆ ಬಿದ್ದಿದ್ದಾರೆ : ಪ್ರಿಯಾಂಕ್ ಖರ್ಗೆ

ಬಂದ್‍ಗೆ ಬೆಂಬಲ:
ನಾಳೆ ನೀಡಿರುವ ಬೆಂಗಳೂರು ಬಂದ್‍ಗೆ ಕುಮಾರಸ್ವಾಮಿ ಅವರು ಬೆಂಬಲ ಘೋಷಿಸಿದ್ದಾರೆ. ಯಾವುದೇ ಅಹಿತಕರ ಘಟನೆ ಆಗದಂತೆ ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕೆಂದು ಗೌಡರು ಸಲಹೆ ಮಾಡಿದರು.ರಾಜಕೀಯಕ್ಕೆ ಸಂಬಂಧಿಸಿದ ಯಾವುದೇ ವಿಚಾರವನ್ನು ಇಂದು ಪ್ರಸ್ತಾಪಿಸುವುದಿಲ್ಲ. ಮೈತ್ರಿ ಕುರಿತಂತೆ ರಾಜಕೀಯಕ್ಕೆ ಸಂಬಂಧಿಸಿದಂತೆ ಸುದೀರ್ಘ ವಿಚಾರ ಬುಧವಾರ ತಿಳಿಸುವುದಾಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಕುಮರಾಸ್ವಾಮಿ, ಮಾಜಿ ಸಂಸದ ಕುಪೇಂದ್ರರೆಡ್ಡಿ, ಬಿಎಂ ಪಾರುಕ್, ತಿಪ್ಪೆಸ್ವಾಮಿ, ಮಾಜಿ ಸದಸ್ಯ ರಮೇಶ್ ಗೌಡ ಹಾಗೂ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಉಪಸ್ಥಿತರಿದ್ದರು.

ಪ್ರತಿಭಟನೆ ವೇಳೆ ಶಾಂತಿ ಕದಡಿದರೆ ಹುಷಾರ್ : ಸಿಎಂ ಎಚ್ಚರಿಕೆ

ಬೆಂಗಳೂರು, ಸೆ.25- ಕಾವೇರಿ ನದಿ ನೀರಿನ ವಿಚಾರವಾಗಿ ವಿವಿಧ ಸಂಘಟನೆಗಳು ಕರೆ ನೀಡಿರುವ ಬೆಂಗಳೂರು ಬಂದ್ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಲು ಸಿಎಂ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇಂದು ಬೆಳಿಗ್ಗೆ ಪೊಲೀಸ್ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ. ಮುಖ್ಯಮಂತ್ರಿಯವರು ಬಂದ್‍ಗೆ ಸರ್ಕಾರ ಅಡ್ಡಿಪಡಿಸುವುದಿಲ್ಲ.

ಆದರೆ ಸಾರ್ವಜನಿಕ ಆಸ್ತಿ, ನೆಮ್ಮದಿಗೆ ಭಂಗ ಬರಬಾರದು. ಹೀಗಾಗಿ ಅಗತ್ಯ ಇರುವ ಕಡೆಗೆ ಸೂಕ್ತ ಬಂದೋಬಸ್ತ್ ಮಾಡುವಂತೆ ತಾಕೀತು ನೀಡಿದ್ದಾರೆ. ಇಂದು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಗೃಹಸಚಿವ ಡಾ.ಜಿ.ಪರಮೇಶ್ವರ್, ಕಾವೇರಿ ವಿಷಯದಲ್ಲಿ ಸರ್ಕಾರ ಜನಪರವಾದ ನಿಲುವನ್ನು ಹೊಂದಿದೆ.

ನಾಳೆ ಬೆಂಗಳೂರು ಬಂದ್ : ಏನಿರುತ್ತೆ..? ಏನಿರಲ್ಲ..? ಇಲ್ಲಿದೆ ಮಾಹಿತಿ

ಹೀಗಾಗಿ ಬಂದ್ ಮಾಡಬೇಡಿ ಎಂದು ಮನವಿ ಮಾಡಿದೆ. ಅದರ ಹೊರತಾಗಿಯೂ ಕನ್ನಡ ಸಂಘಟನೆಗಳು ಬಂದ್ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ. ಅಗತ್ಯವಿರುವ ಕಡೆ ವ್ಯಾಪಕ ಬಂದೋಬಸ್ತ್ ಆಯೋಜನೆ ಮಾಡಿದೆ ಎಂದರು.

ಬಂದ್ ಮಾಡುವವರು ಸಾರ್ವಜನಿಕ ಆಸ್ತಿಗಳಿಗೆ ತೊಂದರೆ ಮಾಡಬಾರದು, ಕಾನೂನನ್ನು ಕೈಗೆತ್ತಿಕೊಳ್ಳಬಾರದು, ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು, ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ನಾಳೆ ಬೆಂಗಳೂರು ಬಂದ್ : ಏನಿರುತ್ತೆ..? ಏನಿರಲ್ಲ..? ಇಲ್ಲಿದೆ ಮಾಹಿತಿ

ಬೆಂಗಳೂರು,ಸೆ.25- ಸಂಕಷ್ಟದ ಸಂದರ್ಭದಲ್ಲೂ ತಮಿಳುನಾಡಿಗೆ ಕಾವೇರಿ ಜಲಾಶಯದಿಂದ ನೀರು ಹರಿಸಿರುವುದನ್ನು ಖಂಡಿಸಿ ಕನ್ನಡ ಹಾಗೂ ವಿವಿಧ ರೈತಪರ ಸಂಘಟನೆಗಳು ಕರೆಕೊಟ್ಟಿರುವ ನಾಳಿನ ಬೆಂಗಳೂರು ಬಂದ್‍ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರು ಬಹುತೇಕ ಸ್ತಬ್ಧವಾಗಲಿದೆ.

ಅಗತ್ಯ ಸೇವೆಗಳಾದ ಔಷಧ, ಆಸ್ಪತ್ರೆ, ಹಾಲು, ಪೇಪರ್, ಅಂಬುಲೆನ್ಸ್ ಎಂದಿನಂತೆ ಕಾರ್ಯನಿರ್ವಾಹಿಸಲಿವೆ. ಉಳಿದಂತೆ ಹೋಟೆಲ್‍ಗಳು, ಆಟೋಗಳು ಸಿಗಲ್ಲ, ಟ್ಯಾಕ್ಸಿ ಓಡಾಡಲ್ಲ, ಓಲಾ, ಉಬರ್ ಸೇವೆ ಲಭ್ಯವಿರುವುದಿಲ್ಲ. ಬೀದಿಬದಿ ವ್ಯಾಪಾರ, ಪೆಟ್ರೋಲ್ ಬಂಕ್, ಶಾಲಾ, ಕಾಲೇಜು, ಬಿಬಿಎಂಪಿ ನೌಕರರು, ಬಿಎಂಟಿಸಿ ಬಸ್ ಸಂಚಾರ, ಕೈಗಾರಿಕೆಗಳು, ವಾಣಿಜ್ಯೋದ್ಯಮ, ಚಿಕ್ಕಪೇಟೆ ಅಂಗಡಿಗಳು, ಕೆಎಸ್ ಆರ್ ಟಿಸಿ ಬಸ್, ಮಾರ್ಕೆಟ್‍ಗಳು ಬಂದ್ ಆಗಿರಲಿವೆ.

ಇದಲ್ಲದೇ ಖಾಸಗಿ ಶಾಲಾ ಬಸ್ ಒಕ್ಕೂಟವೂ ಬೆಂಬಲ ನೀಡಿವೆ. ಇದರಿಂದ ಅಂದು ಸಂಪೂರ್ಣ ಸಾರಿಗೆ ವ್ಯತ್ಯಯವಾಗುವುದು ಖಚಿತವಾಗಿವೆ. ಶಾಲೆಗಳಿಗೂ ರಜೆ ಘೋಷಿಸುವ ಸಾಧ್ಯತೆಗಳಿವೆ. ಈ ಬಂದ್‍ಗೆ ಎಲ್ಲಾ ಸಂಘಟನೆಗಳ ಜೊತೆಗೆ ಸಿನಿಮಾ ಉದ್ಯಮ ಆಟೋ ರಿಕ್ಷಾ, ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರು, ಐಟಿ-ಬಿಟಿ ಕಂಪನಿಯವರು, ವಿದ್ಯಾಸಂಸ್ಥೆಯವರು, ಅಪಾಟ್ರ್ಮೆಂಟ್ ಸಂಘ ಸಂಸ್ಥೆಗಳು ಖಾಸಗಿ ಕಾರ್ಖಾನೆಯವರು, ಕೈಗಾರಿಕೆಗಳು ವರ್ತಕರು ಹೋಟೆಲ್ ಉದ್ದಿಮೆದಾರರು, ಅಂಗಡಿ ಮಾಲೀಕರು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಬೇಕೆಂದು ಕೋರಲಾಗಿದೆ.

ಬೆಂಗಳೂರು ಬಂದ್‍ಗೆ ನಮ್ಮ ಸಂಪೂರ್ಣ ಬೆಂಬಲ ಇರುತ್ತದೆ. ಸಾರಿಗೆ ಬಸ್ ರಸ್ತೆಗೆ ಇಳಿಯುವುದಿಲ್ಲ ಎಂದು ಕೆಎಸ್‍ಆರ್‍ಟಿಸಿ ಸ್ಟಾಫ್ ಆಂಡ್ ವಕರ್ಸ್ ಫೆಡರೇಶನ್ ಅಧ್ಯಕ್ಷ ಅನಂತ್ ಸುಬ್ಬರಾವ್ ಹೇಳಿದ್ದಾರೆ. ಬಂದ್‍ಗೆ ಖಾಸಗಿ ಸಾರಿಗೆ ಸಂಘಟನೆಗಳು ಕೂಡ ಬೆಂಬಲ ವ್ಯಕ್ತಪಡಿಸಿವೆ. ನೆಲ, ಜಲ ಹಾಗೂ ಭಾಷೆ ವಿಚಾರದಲ್ಲಿ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ತಿಳಿಸಿದ್ದಾರೆ.

ಅಸ್ತಿತ್ವ ಉಳಿಸಿಕೊಳ್ಳಲು ಕುಮಾರಸ್ವಾಮಿ ಬಿಜೆಪಿ ನಾಯಕರ ಕಾಲಿಗೆ ಬಿದ್ದಿದ್ದಾರೆ : ಪ್ರಿಯಾಂಕ್ ಖರ್ಗೆ

ಟೌನ್ ಹಾಲ್‍ನಿಂದ ಫ್ರೀಡಂ ಪಾರ್ಕ್‍ವರೆಗೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. 150ಕ್ಕೂ ಹೆಚ್ಚು ಸಂಘಟನೆಗಳು ಬೆಂಗಳೂರು ಬಂದ್‍ಗೆ ಬೆಂಬಲ ಸೂಚಿಸಿವೆ. ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಜಾ.ದಳ ಹಾಗೂ ಆಮ್ ಆದ್ಮಿ ಪಕ್ಷಗಳೂ ಬೆಂಬಲ ಘೋಷಿಸಿವೆ.

ಬೆಂಗಳೂರು ಬಂದ್‍ಗೆ ತಮ್ಮ ಸಂಘಟನೆಯ ನೈತಿಕ ಬೆಂಬಲ ಇದೆ ಎಂದು ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಂಗಸ್ವಾಮಿ ಹೇಳಿದ್ದಾರೆ. ಸರಕಾರಿ ಕಚೇರಿಗಳಿಗೆ ರಜೆ ನೀಡಲಾಗಿಲ್ಲ. ಸಾರ್ವಜನಿಕರಿಗೆ ತೊಂದರೆ ಉಂಟು ಮಾಡದಂತೆ ಬಂದ್ ಮಾಡಬೇಕು. ಬಲವಂತಾಗಿ ಬಂದ್ ಮಾಡುವಂತೆ ಒತ್ತಡ ಹಾಕಿದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಸರ್ಕಾರ ಕೂಡ ಎಚ್ಚರಿಕೆ ಕೊಟ್ಟಿದೆ.

ಕಾವೇರಿ ನದಿ ನೀರನ್ನು ನಂಬಿಕೊಂಡಿರುವ ಮೈಸೂರು-ಮದ್ದೂರು ಭಾಗದ ಜೊತೆಗೆ ರಾಮನಗರ ಜಿಲ್ಲೆಯಲ್ಲೂ ಕೂಡ ನಾಳಿನ ಬಂದ್‍ಗೆ ಬೆಂಬಲ ಘೋಷಿಸಲಾಗಿದೆ. ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಬೆಂಗಳೂರು ಬಂದ್ ನಡೆಸಲಾಗುತ್ತದೆ. ಈಗಾಗಲೇ ಬೆಂಬಲ ಸೂಚಿಸಿರುವ ಕನ್ನಡ ಪರ ಸಂಘಟನೆಗಳು, ಸಾರಿಗೆ, ಆಟೋ ರಿಕ್ಷಾ ಸೇರಿ ಹಲವು ಸಂಘಟನೆಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಐಟಿ ಕಂಪೆನಿಗಳು, ಕಾರ್ಖಾನೆಗಳು ರಜೆ ನೀಡಿ ಬಂದ್‍ಗೆ ಸೂಚಿಸುವಂತೆ ಕೋರಲಾಗಿದೆ.

ರಾಮನಗರ ಬಂದ್:

ರೇಷ್ಮೆನಗರಿ ರಾಮನಗರದಲ್ಲೂ ಕಾವೇರಿ ಕಿಚ್ಚು ಹೆಚ್ಚಾಗಿದೆ. ಸೆ.26ರಂದು ಬೆಂಗಳೂರು ಬಂದ್‍ಗೆ ಕರೆ ನೀಡಿರುವ ಹಿನ್ನೆಲೆ ರಾಮನಗರ ಬಂದ್‍ಗೂ ಕರೆ ನೀಡಲಾಗಿದೆ.ರಾಮನಗರ, ಚನ್ನಪಟ್ಟಣ, ಬಿಡದಿ ಪಟ್ಟಣವನ್ನು ಸಂಪೂರ್ಣ ಸ್ತಬ್ಧ ಮಾಡಲು ವರ್ತಕರ ಸಂಘ, ಹೋಟೆಲ್ ಮಾಲೀಕರ ಸಂಘ, ವಕೀಲರ ಸಂಘ, ಆಟೋ ಚಾಲಕರ ಸಂಘ ಸೇರಿ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ಸೆ.26 ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮೆಡಿಕಲ್, ಆಸ್ಪತ್ರೆ, ಹಾಲಿನ ಅಂಗಡಿ, ರೇಷ್ಮೆ ಮಾರುಕಟ್ಟೆ ಹೊರತುಪಡಿಸಿ ಉಳಿದೆಲ್ಲಾ ಸೇವೆ ಸ್ಥಗಿತ ಮಾಡಲು ನಿರ್ಧರಿಸಲಾಗಿದೆ. ಅಂದು ಬೆಳಗ್ಗೆ 10ಕ್ಕೆ ಎಪಿಎಂಸಿ ವೃತ್ತದಲ್ಲಿ ಮËನ ಪ್ರತಿಭಟನೆ ನಡೆಸಿ ಹಳೇ ಬೆಂಗಳುರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ವಿವಿಧ ಸಂಘಟನೆಗಳು ಸಿದ್ಧತೆ ನಡೆಸಿವೆ.

ರಾಜ್ಯದ ಆಡಳಿತ ಶಕ್ತಿ ಕೇಂದ್ರವಾಗಿರುವ ಬೆಂಗಳೂರಿನಲ್ಲಿ ಪ್ರತಿಭಟನೆ, ಬಂದ್ ನಡೆಸಿದರೆ ರಾಜ್ಯ ಸರ್ಕಾರದ ಗಮನವನ್ನು ಹೆಚ್ಚಿನ ಮಟ್ಟಿಗೆ ಸೆಳೆದು ಕೇಂದ್ರದ ಮೇಲೆ ಮತ್ತು ಕಾನೂನಾತ್ಮಕವಾಗಿ ಕಾವೇರಿ ನೀರಿಗಾಗಿ ಮುಂದಿನ ದಿನಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಹೋರಾಟ ನಡೆಸಲು ಉತ್ತಮ ಎಂದು ವಿವಿಧ ಸಂಘಟನೆಗಳ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಂದ್‍ಗೆ ಬೆಂಬಲಿಸುವುದು ಸಾರಿಗೆ ಒಕ್ಕೂಟಗಳಿಗೆ ಬಿಟ್ಟಿದ್ದು : ಸಚಿವ ರಾಮಲಿಂಗಾರೆಡ್ಡಿ

ಬೇಡಿಕೆಗಳೇನು?
ಕೂಡಲೇ ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು.ರಾಜ್ಯ ಸರ್ಕಾರ ಕೂಡಲೇ ವಿಧಾನಸಭೆ ಅವೇಶನ ಕರೆದು ಸಮಗ್ರ ಚರ್ಚಿಸಿ, ಸಂಕಷ್ಟ ಸೂತ್ರ ಜಾರಿ ಮಾಡುವ ತನಕ ನೀರು ಬಿಡುವುದಿಲ್ಲ ಎಂಬ ಎಚ್ಚರಿಕೆಯನ್ನು ಕೇಂದ್ರ ಸರ್ಕಾರ ಮತ್ತು ಕಾವೇರಿ ನೀರು ನಿರ್ವಹಣಾ ಮಂಡಳಿಗೆ ನೀಡಬೇಕು.

ಕಾವೇರಿ ನೀರು ನಿರ್ವಹಣಾ ಮಂಡಳಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ಕೂಡಲೇ ರದ್ದು ಪಡಿಸಿ, ಸ್ವತಂತ್ರ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ನೀರು ನಿರ್ವಹಣಾ ಮಂಡಳಿ ರಚಿಸಬೇಕು. ಈ ಮಂಡಳಿಯಲ್ಲಿ ನಾಲ್ಕು ರಾಜ್ಯಗಳ ಪರಿಣಿತರು ನೀರಾವರಿ ತಜ್ಞರು, ರೈತ ಪ್ರತಿನಿಗಳು ಎಲ್ಲರನ್ನು ಒಳಗೊಂಡಂತೆ ಮಂಡಳಿ ರಚನೆ ಮಾಡಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಬೇಕು ಎಂಬುದು ಹೋರಾಟಗಾರರ ಒತ್ತಾಯವಾಗಿದೆ.

ಏನಿರುತ್ತೆ?

  • ಆಂಬುಲೆನ್ಸ್ ಸೇವೆ
  • ತರಕಾರಿ, ಹಾಲು
  • ಮೆಡಿಕಲ್ಸ್
  • ಆಸ್ಪತ್ರೆ
  • ಬ್ಯಾಂಕ್
  • ನಮ್ಮ ಮೆಟ್ರೋ

  • ಏನಿರಲ್ಲ?
  • ಆಟೋ
  • ಮ್ಯಾಕ್ಸಿ ಕ್ಯಾಬ್
  • ಹೋಟೆಲ್
  • ಬಿಎಂಟಿಸಿ, ಕೆಎಸ್‍ಆರ್‍ಟಿಸಿ
  • ಲಾರಿ
  • ಮ್ಯಾಕ್ಸಿ ಕ್ಯಾಬ್
  • ಓಲಾ, ಊಬರ್
  • ಬಿಬಿಎಂಪಿ
  • ಖಾಸಗಿ ಶಾಲೆ, ಕಾಲೇಜುಗಳು
    50-50 (ಬಂದ್‍ಗೆ ಬೆಂಬಲ ನೀಡಬಹುದು ಅಥವಾ ನೀಡದೇ ಇರಬಹುದು)
  • ಖಾಸಗಿ ಬಸ್
  • ಏರ್ ಪೋರ್ಟ್ ಟ್ಯಾಕ್ಸಿ
  • ಲಾರಿ ಮಾಲೀಕರು
  • ಸರ್ಕಾರಿ ನೌಕರರು
  • ಶಾಪಿಂಗ್ ಮಾಲ್
  • ಸರ್ಕಾರಿ ಕಛೇರಿಗಳು
  • ಐಟಿ ಬಿಟಿ ಕಂಪನಿಗಳು

ರಾಜ್ಯಾದ್ಯಂತ ಏಕಕಾಲದಲ್ಲಿ ಜನತಾ ದರ್ಶನ, ಸ್ಥಳದಲ್ಲೇ ಪರಿಹಾರ

ಬೆಂಗಳೂರು,ಸೆ.25- ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸುವ ಸದಾಶಯದೊಂದಿಗೆ ಇಂದು ಜಿಲ್ಲಾಮಟ್ಟದಲ್ಲಿ ಜನತಾದರ್ಶನ ನಡೆಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಜಿಲ್ಲೆಯಾದ್ಯಂತ ಉಸ್ತುವಾರಿ ಸಚಿವರು, ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಎಸ್ಪಿಗಳ ಸಮ್ಮುಖದಲ್ಲಿ ಜನತಾದರ್ಶನ ನಡೆಯಿತು.

ತಾಂತ್ರಿಕ ಹಾಗೂ ಕಾನೂನಾತ್ಮಕ ಅಡಚಣೆಗಳಿಲ್ಲದ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಲಾಗಿದೆ. ಗಂಭೀರ ಸ್ವರೂಪದ ಅಡಚಣೆಗಳಿರುವ ಅರ್ಜಿಗಳನ್ನು ಸ್ವೀಕರಿಸಿ ಸಾರ್ವಜನಿಕ ಕುಂದುಕೊರತೆ ನಿವಾರಣೆ ವ್ಯವಸ್ಥೆ (ಐಪಿಜಿಆರ್‍ಎಸ್) ತಂತ್ರಾಂಶದಲ್ಲಿ ದಾಖಲಿಸಲಾಗಿದೆ.

ಅಸ್ತಿತ್ವ ಉಳಿಸಿಕೊಳ್ಳಲು ಕುಮಾರಸ್ವಾಮಿ ಬಿಜೆಪಿ ನಾಯಕರ ಕಾಲಿಗೆ ಬಿದ್ದಿದ್ದಾರೆ : ಪ್ರಿಯಾಂಕ್ ಖರ್ಗೆ

ಸದರಿ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗೆ ರವಾನಿಸಿ ಕಾಲಮಿತಿಯಲ್ಲಿ ಇತ್ಯರ್ಥಕ್ಕೆ ಸೂಚನೆ ನೀಡಲಾಗಿದೆ. ಬೆಂಗಳೂರು ನಗರ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆನೆಕಲ್ ತಾಲೂಕಿನ ಹೊಸ ಮಾಧ್ಯಮಿಕ ಪಾಠಶಾಲೆ ಆಟದ ಮೈದಾನದಲ್ಲಿ ನಡೆಯುವ ಜನತಾದರ್ಶನದಲ್ಲಿ ಭಾಗವಹಿಸಿದ್ದರು. ಉಳಿದಂತೆ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಡೆದ ಜನತಾದರ್ಶನದಲ್ಲಿ ಭಾಗವಹಿಸಿದ್ದರು.

ಈ ವೇಳೆ ಸ್ಥಳೀಯ ಜನಪ್ರತಿನಿಧಿಗಳು ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಸಣ್ಣಪುಟ್ಟ ಸಮಸ್ಯೆಗಳಿಗೂ ಪ್ರತಿದಿನ ಸಾವಿರಾರು ಸಾರ್ವಜನಿಕರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಸಚಿವರುಗಳ ಬಳಿಗೆ ಅರ್ಜಿ ನೀಡಲು ಬರುವುದು ಸಾಮಾನ್ಯವಾಗಿದೆ. ದೂರದೂರುಗಳಿಂದಲೂ ಬೆಂಗಳೂರಿಗೆ ಸಮಸ್ಯೆಗಳನ್ನು ಹೊತ್ತು ತರುವ ಜನರ ಕಷ್ಟಗಳಿಗೆ ಸ್ಥಳೀಯವಾಗಿಯೇ ಸ್ಪಂದಿಸಲು ಜನತಾದರ್ಶನ ಆಯೋಜಿಸಲಾಗಿತ್ತು.

ರಾಹುಲ್ ಗಾಂಧಿಗೆ ಹೈದರಾಬಾದ್‍ನಲ್ಲಿ ಸ್ಪರ್ಧಿಸುವಂತೆ ಓವೈಸಿ ಚಾಲೆಂಜ್

ಈ ಮೊದಲು ಮೊದಲ ಅವಧಿಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಖುದ್ದಾಗಿ ತಾವೇ ಗೃಹಕಚೇರಿ ಕೃಷ್ಣಾದಲ್ಲಿ ಜನತಾದರ್ಶನ ನಡೆಸುತ್ತಿದ್ದರು. ಅದರಲ್ಲಿ ಸಾವಿರಾರು ಮಂದಿ ಭಾಗವಹಿಸುತ್ತಿದ್ದರು. ಎರಡನೇ ಹಂತದಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು ಮತ್ತೆ ಜನತಾದರ್ಶನ ನಡೆಸಲಿದ್ದಾರೆ ಎಂಬ ಚರ್ಚೆಗಳಿದ್ದವು. ಆದರೆ ಅಧಿಕಾರ ವಿಕೇಂದ್ರಿಕರಣದ ಮಾದರಿಯಲ್ಲೇ ಜನತಾದರ್ಶನವನ್ನು ಸ್ಥಳೀಯ ಮಟ್ಟಕ್ಕೆ ವಿಕೇಂದ್ರಿಕರಿಸಲಾಗಿದೆ.

ಮೊದಲ ಹಂತದಲ್ಲಿ ಜಿಲ್ಲಾಮಟ್ಟದ ಜನತಾದರ್ಶನ ನಡೆದರೆ ನಂತರ ಜಿಲ್ಲಾಧಿಕಾರಿಗಳು ಪ್ರತಿದಿನ 15 ದಿನಕ್ಕೆ ತಾಲೂಕು ಮಟ್ಟದಲ್ಲಿ ಜನತಾದರ್ಶನ ನಡೆಸಲು ಸೂಚಿಸಲಾಗಿದೆ.

ನಿಗದಿತ ಸಮಯದೊಳಗೆ ಜನರ ಸಮಸ್ಯೆಗಳನ್ನು ಪರಿಹರಿಸಿ : ಸಚಿವ ಗುಂಡೂರಾವ್

ಬೆಂಗಳೂರು, ಸೆ.25- ಜನತಾ ದರ್ಶನಕ್ಕೆ ಬರುವ ಜನರ ಕೆಲಸಗಳನ್ನು ನಿಗದಿತ ಸಮಯದೊಳಗೆ ಪರಿಹರಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ಜನತಾದರ್ಶನಕ್ಕೆ ಚಾಲನೆ ನೀಡಿದ ಅವರು, ಅರ್ಜಿ ಹಿಡಿದುಕೊಂಡು ಬರುವ ಜನಸಾಮಾನ್ಯರಿಗೆ ಸ್ಪಷ್ಟತೆ ಕೊಡಬೇಕು.

ಕೇವಲ ಅರ್ಜಿಗಳನ್ನು ಸ್ವೀಕರಿಸಿದರೆ ಪ್ರಯೋಜನವಿಲ್ಲ. ಸ್ಥಳದಲ್ಲೇ ಅವರಿಗೆ ಪರಿಹಾರ ಒದಗಿಸುವಂತ ವ್ಯವಸ್ಥೆ ಜಾರಿಗೆ ಬರಬೇಕು ಎಂದರು.
ಜನರು ಕೇಳುವ ಕೆಲಸ ಕಾರ್ಯಗಳು ಆಗೋತ್ತದೆಯೋ, ಇಲ್ಲವೋ ಎಂಬ ಸ್ಪಷ್ಟತೆಯನ್ನು ಜನರಿಗೆ ನೀಡಿ. ನೋಡೊಣ, ಮಾಡೊಣ ಎಂದು ಹೇಳಿ ಜನರನ್ನು ಅಲೆದಾಡಿಸುವ ಪರಿಸ್ಥಿತಿಗೆ ತರಬೇಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಯಾವ ಕಾರ್ಯಗಳು ಈಡೇರಿಸಲು ಸಾಧ್ಯ ಅವುಗಳನ್ನು ಸಾಧ್ಯವಾದಷ್ಟು ಶೀಘ್ರದಲ್ಲಿ ಮಾಡಿಕೊಡಿ. ಯಾವ ಕೆಲಸಗಳು ಮಾಡಲು ಸಾಧ್ಯವಿಲ್ಲ ಆ ಬಗ್ಗೆ ಜನರಿಗೆ ನೇರವಾಗಿ ನೈಜ ಪರಿಸ್ಥಿತಿಯನ್ನು ತಿಳಿಸಿ ಎಂದರು.

ಬಂದ್‍ಗೆ ಬೆಂಬಲಿಸುವುದು ಸಾರಿಗೆ ಒಕ್ಕೂಟಗಳಿಗೆ ಬಿಟ್ಟಿದ್ದು : ಸಚಿವ ರಾಮಲಿಂಗಾರೆಡ್ಡಿ

ತಾಲೂಕು ಮಟ್ಟದಲ್ಲೂ ಜನತಾ ದರ್ಶನ :
ಜಿಲ್ಲಾ ಕೇಂದ್ರದಲ್ಲಿ ಅಷ್ಟೇ ಅಲ್ಲ ತಾಲೂಕು ಮಟ್ಟದಲ್ಲೂ ಜನತಾ ದರ್ಶನಗಳನ್ನು ನಡೆಸುವಂತೆ ಇದೇ ವೇಳೆ ದಿನೇಶ್ ಗುಂಡೂರಾವ್ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು. ಜಿಲ್ಲಾಡಳಿತ ಜನರ ಬಳಿಗೆ ಹೋಗಬೇಕು. ಗ್ರಾಮೀಣ ಪ್ರದೇಶದ ಹಲವು ಜನರಿಗೆ ಜಿಲ್ಲಾ ಕೇಂದ್ರಗಳಿಗೆ ಬರಲು ಕಷ್ಟವಾಗಿರುತ್ತದೆ. ಹೀಗಾಗಿ ತಾಲೂಕು ಮಟ್ಟದಲ್ಲಿ ಜನತಾ ದರ್ಶನ ನಡೆಸಿದರೆ, ಹಳ್ಳಿಗಾಡಿನ ಜನರಿಗೆ ತಮ್ಮ ಸಮಸ್ಯಗಳನ್ನ ಪರಿಹರಿಸಿಕೊಳ್ಳಲು ಅನುಕೂಲವಾಗಲಿದೆ.

ಮುಂದಿನ ಜನತಾ ದರ್ಶನಗಳನ್ನು ತಾಲೂಕುಗಳಲ್ಲಿ ಆಯೋಜಿಸುವುದಾಗಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಜಿಲ್ಲಾಯಲ್ಲಿ ಇರುವ 9 ತಾಲೂಕುಗಳಲ್ಲೂ ಹಂತ ಹಂತವಾಗಿ ಜನತಾ ದರ್ಶನಗಳನ್ನು ಆಯೋಜಿಸಲಾಗುವುದು ಎಂದು ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಇದು ‘ಸಾರಾಯಿ ಗ್ಯಾರಂಟಿ’ ಸರ್ಕಾರ : ಬಸವರಾಜ ಬೊಮ್ಮಾಯಿ

ಬೆಂಗಳೂರು,ಸೆ.25- ಬರಗಾಲದಲ್ಲಿ ನೀರು ಕೊಡದಿರುವ ಸರ್ಕಾರ ಸಾರಾಯಿ ಕುಡಿಸಲು ಮುಂದಾಗಿರುವುದು ದೊಡ್ಡ ದುರಂತ. ಇದು ಸಾರಾಯಿ ಗ್ಯಾರೆಂಟಿ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯ ಸರ್ಕಾರ ಪಂಚಾಯಿತಿ ಮಟ್ಟದಲ್ಲಿ ಮದ್ಯದಂಗಡಿ ತೆರೆಯಲು ಮುಂದಾಗಿರುವುದು ಸರ್ಕಾರದ ನೈತಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.

ಒಂದೆಡೆ ಗ್ಯಾರೆಂಟಿ ಹೆಸರಲ್ಲಿ ಮಹಿಳೆಯರಿಗೆ 2000 ರೂ. ನೀಡುವುದಾಗಿ ಹೇಳುವ ಸರ್ಕಾರ ಅದೇ ಹಣವನ್ನು ಅವರ ಗಂಡಂದಿರಿಂದ ವಸೂಲಿ ಮಾಡಲು ಮದ್ಯ ಮಾರಾಟದ ಮಾರ್ಗ ಹುಡುಕಿಕೊಂಡಂತಿದೆ. ಹೆಂಡತಿಯ ದುಡ್ಡು ಗಂಡಂದಿರಿಂದ ಪಡೆಯುವ ಮನಿ ರಿಟರ್ನ್ ಪಾಲಿಸಿ ಹಾಕಿಕೊಂಡ ಹಾಗಿದೆ ಎಂದು ಕಿಡಿಕಾರಿದ್ದಾರೆ.

ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ಸರ್ಕಾರಿ ಮದ್ಯದಂಡಗಿ ತೆರೆಯುತ್ತಿರುವುದಾಗಿ ಅಬಕಾರಿ ಸಚಿವರು ಹೇಳಿರುವುದು ಹಾಸ್ಯಾಸ್ಪದವಾಗಿದೆ. ಅಕ್ರಮ ತಡೆಯಲಾಗದಿದ್ದರೆ ನಿಮ್ಮ ಇಲಾಖೆ ಮಾಡುವುದಾದರೂ ಏನು? ಎಂದು ಪ್ರಶ್ನಿಸಿದ್ದಾರೆ.

ಬಂದ್‍ಗೆ ಬೆಂಬಲಿಸುವುದು ಸಾರಿಗೆ ಒಕ್ಕೂಟಗಳಿಗೆ ಬಿಟ್ಟಿದ್ದು : ಸಚಿವ ರಾಮಲಿಂಗಾರೆಡ್ಡಿ

ಗ್ಯಾರೆಂಟಿ ಯೋಜನೆಯಲ್ಲಿ ಮನೆ ಯಜಮಾನಿ ಹುಡುಕುವ ಹೆಸರಲ್ಲಿ ಅತ್ತೆ ಸೊಸೆ ನಡುವೆ ಜಗಳ ಹಚ್ಚಿರುವ ಸರ್ಕಾರ ಇನ್ನು ಸಾರಾಯಿ ಕುಡಿಯಲು ಹಣಕ್ಕಾಗಿ ಗಂಡ ಹೆಂಡಿರ ನಡುವೆ ಜಗಳ ಹಚ್ಚಲು ಮುಂದಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.