Sunday, April 28, 2024
Homeರಾಜ್ಯನಗರ ಪ್ರದೇಶದಲ್ಲಿ ನೀರಿನ ಬಳಕೆ ಮಿತಿಗೊಳಿಸಲು ತಜ್ಞರ ಸಲಹೆ

ನಗರ ಪ್ರದೇಶದಲ್ಲಿ ನೀರಿನ ಬಳಕೆ ಮಿತಿಗೊಳಿಸಲು ತಜ್ಞರ ಸಲಹೆ

ಬೆಂಗಳೂರು, ಸೆ.25- ಈ ವರ್ಷ ಮುಂಗಾರು ಮಳೆ ಕೈಕೊಟ್ಟಿರುವುದರಿಂದ ರಾಜ್ಯದ ಅಣೆಕಟ್ಟುಗಳಲ್ಲಿನ ನೀರಿನ ಮಟ್ಟದ ಮೇಲೆ ಪರಿಣಾಮ ಬೀರುತ್ತಿದ್ದು, ಈಗಿನಿಂದಲೇ ನಗರ ಪ್ರದೇಶಗಳಿಗೆ ಮತ್ತು ನೀರಾವರಿಗೆ ಪಡಿತರ ರೀತಿಯಲ್ಲಿ ನೀರು ಸರಬರಾಜು ಅಂದರೆ ದೈನಂದಿನ ನೀರಿನ ಬಳಕೆಯನ್ನು ಸೀಮಿತಗೊಳಿಸುವ ಕ್ರಿಯೆಗೆ ಸರ್ಕಾರ ಚಾಲನೆ ನೀಡಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಜಲಸಂಪನ್ಮೂಲ ಇಲಾಖೆ ಮತ್ತು ಅಂತರ್ಜಲ ಮಂಡಳಿಯ ಅಧಿಕಾರಿಗಳ ಪ್ರಕಾರ, ಮೇಲ್ಮೈಯಲ್ಲಿನ ನೀರನ್ನು ಮಾತ್ರ ಅತ್ಯುತ್ತಮವಾಗಿ ಹಿಡಿದಿಡಲಾಗುತ್ತದೆ. ಅಣೆಕಟ್ಟಿನ ಸುತ್ತಲ ಪ್ರದೇಶಗಳಲ್ಲಿ ಅಂತರ್ಜಲ ವನ್ನು ಹಿಡಿದಿಟ್ಟುಕೊಳ್ಳಲು ವ್ಯವಸ್ಥೆ ಮಾಡಿ ಅವುಗಳನ್ನು ನೀರಿನ ಕೊರತೆಯ ಸಮಯದಲ್ಲಿ ಬಳಸಿಕೊಳ್ಳುವಂತೆ ಮಾಡಬೇಕು. ನಗರ ಪ್ರದೇಶಗಳಲ್ಲಿ ಮತ್ತು ನೀರಾವರಿಗೆ ದಿನನಿತ್ಯ ಸಹಜವಾಗಿ ನೀರು ಪೂರೈಕೆ ಮಾಡು ವುದಕ್ಕಿಂತ ಕಡಿಮೆ ಮಿತಿಯಲ್ಲಿ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡಬೇಕು.

ಸರ್ಕಾರವು ನೀರಾವರಿ, ಕೈಗಾರಿಕೆ ಗಳಿಗೆ ಮತ್ತು ನಗರ ಪ್ರದೇಶಗಳಿಗೆ ತಕ್ಷಣವೇ ಶೇಕಡಾ 20 ರಿಂದ 30 ರಷ್ಟು ನೀರು ಸರಬರಾಜನ್ನು ಕಡಿಮೆ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಈಶಾನ್ಯ ಮುಂಗಾರು ವಿಫಲವಾದರೆ ಈ ನೀರನ್ನು ಬೇಸಿಗೆಯಲ್ಲಿ ಸಂಗ್ರಹಿಸಿ ಬಳಸಬೇಕೆಂಬ ಸಲಹೆ ಕೊಟ್ಟಿದ್ದಾರೆ.

ನಾಳೆ ಬೆಂಗಳೂರು ಬಂದ್ : ಏನಿರುತ್ತೆ..? ಏನಿರಲ್ಲ..? ಇಲ್ಲಿದೆ ಮಾಹಿತಿ

ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತೀಯ ಮಾನದಂಡಗಳ ಬ್ಯೂರೋ ಮಾರ್ಗಸೂಚಿಗಳ ಪ್ರಕಾರ, ನಾಲ್ಕು ಜನರ ಕುಟುಂಬಕ್ಕೆ ಮಾಸಿಕವಾಗಿ 12,000-15,000 ಲೀಟರ್ ನೀರು ಬೇಕಾಗುತ್ತದೆ, ಆದರೆ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಒಂದು ಕುಟುಂಬವು ತಿಂಗಳಿಗೆ 20,000-40,000 ಲೀಟರ್ ನೀರನ್ನು ಬಳಸುತ್ತದೆ. ನಗರ ನೀರು ಬಳಕೆಯ ಕುರಿತು ಯೋಜನೆಯ ಕೊರತೆ ಇದೆ ಎಂದು ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಣೆಕಟ್ಟು ಸುತ್ತಲ ಪ್ರದೇಶಗಳಲ್ಲಿ ಕೃಷಿ ಮಾಡಲು ಅಂತರ್ಜಲದತ್ತ ಗಮನಹರಿಸಬೇಕು. ಸಮಸ್ಯೆ ಹೆಚ್ಚು ರಾಜಕೀಯವಾಗುತ್ತಿದೆ ಎಂದು ಅವರು ಹೇಳಿದರು. ಕಾವೇರಿಯಿಂದ ಕರ್ನಾಟಕದ ನೀರಿನ ಪಾಲು ಕೇವಲ ಶೇ.25ರಷ್ಟಿದೆ ಆದರೆ ಇತರ ಮೂಲಗಳಿಂದ ಅದರ ನೀರಿನ ಬಳಕೆ ಹೆಚ್ಚಾಗಿದೆ.

ಕಳೆದ 32 ವರ್ಷಗಳಲ್ಲಿ, ಕರ್ನಾಟಕವು ತಮಿಳುನಾಡಿನೊಂದಿಗೆ ಆರು ಬಾರಿ ಬರ ಮತ್ತು ನೀರಿನ ಹೋರಾಟವನ್ನು ಎದುರಿಸಿತು. ಸರ್ಕಾರಗಳ ಕಡೆಯಿಂದ ಯೋಜನೆ ಮತ್ತು ಸಿದ್ಧತೆಯ ಕೊರತೆ ಇತ್ತು, ಅದು ಈಗ ಪ್ರತಿಫಲಿಸಿದೆ ಎಂದಿದ್ದಾರೆ.

ಜಲಾನಯನ ಪ್ರದೇಶದ ಎಲ್ಲಾ ನಾಲ್ಕು ಜಲಾಶಯಗಳಲ್ಲಿ 51 ಟಿಎಂಸಿ ಅಡಿ ನೀರು ಇದೆ. ಬೆಳೆದ ಬೆಳೆಗಳಿಗೆ 70 ಟಿಎಂಸಿ, ಕುಡಿಯಲು 33 ಟಿಎಂಸಿ ನೀರು, ಕೈಗಾರಿಕೆಗಳಿಗೆ 3 ಟಿಎಂಸಿ ಅಡಿ ನೀರು ಬೇಕು. ರೈತರು ಬಿತ್ತನೆ ಕೈಗೊಂಡಿದ್ದರಿಂದ ನೀರಾವರಿಗೆ ಹೊಡೆತ ಬೀಳಲಿದೆ. ಎರಡೂ ರಾಜ್ಯಗಳ ರೈತರಿಗೆ ಈಗಲೇ ಮನವರಿಕೆ ಮಾಡಿಕೊಡಬೇಕಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಶೇ.50ರಷ್ಟು ಮಳೆ ಕೊರತೆಯಾಗಿರುವುದು ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಐಐಎಸ್‍ಸಿಯ ತಜ್ಞರು ಹೇಳಿದ್ದಾರೆ. ನೀರಾವರಿಗಾಗಿ ಉತ್ತಮ ನೀರಿನ ನಿರ್ವಹಣೆಯನ್ನು ರೈತರು ಅರ್ಥಮಾಡಿಕೊಳ್ಳಬೇಕು. ಕೃಷಿ ವಿಶ್ವವಿದ್ಯಾಲಯಗಳ ಪಾತ್ರ ಇಲ್ಲಿ ಬಳಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ನಿಗದಿತ ಸಮಯದೊಳಗೆ ಜನರ ಸಮಸ್ಯೆಗಳನ್ನು ಪರಿಹರಿಸಿ : ಸಚಿವ ಗುಂಡೂರಾವ್

ವೈಕ್ತಿಗತವಾಗಿ ದೈನಂದಿನ ನೀರಿನ ಬಳಕೆ
3-4 ಲೀಟರ್ ಕುಡಿಯಲು ಬೇಕು
8 ಲೀಟರ್ ಅಡುಗೆಗಾಗಿ ಕಾದಿರಿಸಬೇಕು
20 ಲೀಟರ್ ಸ್ನಾನ, ಬಟ್ಟೆ, ಪಾತ್ರೆ ತೊಳೆಯಲು ಬೇಕು
25-30 ಲೀಟರ್ ಫ್ಲಶ್, ಶೌಚಾಲಯದ ಅವಶ್ಯಕತೆ
8-10 ಲೀಟರ್ ಇತರ ಉಪಯುಕ್ತತೆಗಾಗಿ ಬೇಕು

RELATED ARTICLES

Latest News