ಹೈದ್ರಾಬಾದ್, ಸೆ.28- ಭಾರತದ ಆತಿಥ್ಯದಲ್ಲಿ ನಡೆಯಲಿರುವ ಒಡಿಐ ವಿಶ್ವಕಪ್ ಟೂರ್ನಿ ಆಡುವ ಸಲುವಾಗಿ ಮುತ್ತಿನ ನಗರಿ ಹೈದ್ರಾಬಾದ್‍ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪಾಕಿಸ್ತಾನಕ್ಕೆ ಭವ್ಯ ಸ್ವಾಗತ ನೀಡಲಾಗಿದೆ.
ವೀಸಾ ಕೊರತೆಯಿಂದ ದುಬೈ ಕ್ಯಾಂಪ್ ಅನ್ನು ರದ್ದುಗೊಳಿಸಿದ ಪಾಕಿಸ್ತಾನ ತಂಡವು ನೇರವಾಗಿಯೇ ಹೈದರಾಬಾದ್‍ನ ರಾಜೀವ್‍ಗಾಂಧಿ ವಿಮಾನ ನಿಲ್ದಾಣಕ್ಕೆ ಬಂದ ಪಾಕ್ ನಾಯಕ ಬಾಬರ್ ಆಝಮ್, ಉಪನಾಯಕ ಶದಾಬ್‍ಖಾನ್, ಆರಂಭಿಕ ಆಟಗಾರ ಇಮಾಮ್ ಉಲ್ ಹಕ್ ಸೇರಿದಂತೆ ಕೆಲವು ಆಟಗಾರರ ಹೆಗಲ ಮೇಲೆ ಕೇಸರಿ ಶಾಲು ಹಾಕುವ ಮೂಲಕ ಭಾರತೀಯ ಸಂಸ್ಕøತಿಯಂತೆ ಸ್ವಾಗತಿಸಲಾಯಿತು.
ಹೈದರಾಬಾದ್ ಅಭಿಮಾನಿಗಳ ಪ್ರೇಮಕ್ಕೆ ಫಿದಾ ಆದ ಬಾಬರ್:
ರಾಜೀವ್‍ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪಾಕ್ ನಾಯಕ ಬಾಬರ್ ಆಝಮ್‍ರನ್ನು ಅಭಿಮಾನಿಗಳು ಅವರ ಹೆಸರನ್ನು ಕೂಗಿ ಸಂಭ್ರಮ ವ್ಯಕ್ತಪಡಿಸಿದರು. ವಿಮಾನ ನಿಲ್ದಾಣಕ್ಕೆ ಬಂದಿಳಿದ ಫೋಟೋವನ್ನು ಹಂಚಿಕೊಂಡಿರುವ ಪಾಕ್ ನಾಯಕ, ` ಹೈದರಾಬಾದ್‍ನಲ್ಲಿನ ಪ್ರೀತಿಯ ಬೆಂಬಲದಿಂದ ಮುಳುಗಿದ್ದೇನೆ’ ಎಂಬ ಸುಂದರ ಉಪಶೀರ್ಷಿಕೆಯೊಂದಿಗೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡಿದ್ದಾರೆ.
ಕರ್ನಾಟಕ ಬಂದ್‍ಗೆ ಅನುಮತಿ ಇಲ್ಲ : ಗೃಹಸಚಿವ ಪರಮೇಶ್ವರ್
ಸೆಪ್ಟೆಂಬರ್ 29 ರಂದು ಇಲ್ಲಿನ ರಾಜೀವ್‍ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕಳೆದ ಬಾರಿಯ ರನ್ನರ್‍ಅಪ್ ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯ ಆಡಲಿರುವ ಪಾಕಿಸ್ತಾನ, ಅಕ್ಟೋಬರ್ 6 ರಂದು ನೆದರ್ಲೆಂಡ್ಸ್ ವಿರುದ್ಧ ಆಡುವ ಮೂಲಕ ವಿಶ್ವಕಪ್ ಪಯಣ ಆರಂಭಿಸಲಿದ್ದು, ಅಕ್ಟೋಬರ್ 14 ರಂದು ಅಹಮದಾಬಾದ್‍ನ ನರೇಂದ್ರಮೋದಿ ಕ್ರೀಡಾಂಗಣದಲ್ಲಿ ಸಂಪ್ರದಾಯಿಕ ವೈರಿ ಭಾರತ ತಂಡದ ಸವಾಲನ್ನು ಎದುರಿಸಲಿದೆ.