Saturday, May 18, 2024
Homeರಾಷ್ಟ್ರೀಯಭಾರತ ಮಾತೆಗೆ ಅಗೌರವವನ್ನು ಸಹಿಸಲ್ಲ : ರಾಹುಲ್ ವಿರುದ್ಧ ಮೋದಿ ಪರೋಕ್ಷ ವಾಗ್ದಾಳಿ

ಭಾರತ ಮಾತೆಗೆ ಅಗೌರವವನ್ನು ಸಹಿಸಲ್ಲ : ರಾಹುಲ್ ವಿರುದ್ಧ ಮೋದಿ ಪರೋಕ್ಷ ವಾಗ್ದಾಳಿ

ಪಲಮು (ಜಾರ್ಖಂಡ್‌), ಮೇ 4 – ಭಯೋದ್ಪಾದಕರ ವಿರುದ್ದ ತಮ್ಮ ಸರ್ಕಾರದ ಸರ್ಜಿಕಲ್‌ ವೈಮಾನಿಕ ದಾಳಿಗಳು ಬೆಚ್ಚಿಬಿದ್ದದ್ದ ಪಾಕ್‌ ನಾಯಕರು ಈಗ ಕಾಂಗ್ರೆಸ್‌‍ ಶೆಹಜಾದಾ ಭಾರತದ ಪ್ರಧಾನಿಯಾಗಬೇಕೆಂದು ಪ್ರಾರ್ಥಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಗುಡುಗಿದ್ದಾರೆ.

ಪಲಮುದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿ ಅವರ ಹೆಸರನ್ನು ತೆಗೆದುಕೊಳ್ಳದೆಯೇ ತರಾಟೆಗೆ ತೆಗೆದುಕೊಂಡರು ಮತ್ತು ನೆರೆಯ ದೇಶವು ಅವರನ್ನು ಪ್ರಧಾನಿಯಾಗಲು ಬಯಸಬಹುದು, ಆದರೆ ಭಾರತದ ಜನತೆ ಸದೃಢ ಪ್ರಧಾನಿ ಹೊಂದಿರುವ ಬಲಿಷ್ಠ ದೇಶವನ್ನು ಬಯಸುತ್ತದೆ ಎಂದು ಹೇಳಿದರು.

ಭಾರತ ಮಾತೆಗೆ ಅಗೌರವವನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ ಎಂದು ಗುಡುಗಿದ ಅವರು ಹೊಸ ಭಾರತದ ತನ್ನ ದಿಟ್ಟ ನಿಲುವಿನಿಂದ ಪಾಕಿಸ್ತಾನವನ್ನು ಬೆಚ್ಚಿಬೀಳಿಸಿದೆ,ಮತ್ತೆ ಕಾಂಗ್ರೆಸ್‌‍ ಆಡಳಿತದಲ್ಲಿ ಭಾರತದ ಮೇಲೆ ಭಯೋತ್ಪಾದಕ ದಾಳಿ ನಡೆಸಲು ಹೊಂಚುಹಾಕುತ್ತಿದ್ದರೆ ಎಂದು ಆರೋಪಿಸಿದರು.

ನವ ಭಾರತಕ್ಕೆ ಶತ್ರು ಪ್ರದೇಶವನ್ನು ಹೇಗೆ ಪ್ರವೇಶಿಸುವುದು ಮತ್ತು ದಾಳಿ ಮಾಡುವುದು ಹೇಗೆಂದು ತಿಳಿದಿದೆ ಅದಕ್ಕಾಗಿ ನಿಮ ಒಂದೊಂದು ಮತದ ಪ್ರಾಮುಖ್ಯತೆವಾಗಿದ್ದು ಬಿಜೆಪಿ ಬೆಂಬಲಿಸಿ ಎಂದು ಮತದಾರರ ಬಳಿ ಮನವಿ ಮಾಡಿದರು .

ಹಲವಾರು ತಲೆಮಾರುಗಳು, 500 ವರ್ಷಗಳ ಕಾಲ ಹೋರಾಡಿದ ನಂತರ ರಾಮ ಮಂದಿರವನ್ನು ನಿರ್ಮಿಸುವಲ್ಲಿ ಕೊಡುಗೆ ನೀಡಿತು, ಜೊತೆಗೆ ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ರದ್ದುಗೊಳಿಸಲಾಯಿತು ಎಂದರು. ಮುಸ್ಲಿಮರಿಗೆ ಮೀಸಲಾತಿ ಒದಗಿಸುವ ಸಂವಿಧಾನವನ್ನು ಬದಲಾಯಿಸುವಲ್ಲಿ ಕಾಂಗ್ರೆಸ್‌‍ನ ಯಾವುದೇ ವಿನ್ಯಾಸ ಯಶಸ್ವಿಯಾಗಲು ತಾನು ಬಿಡುವುದಿಲ್ಲ ಎಂದು ಮೋದಿ ಪ್ರತಿಪಾದಿಸಿದರು.

ಕಳೆದ 25 ವರ್ಷಗಳಲ್ಲಿ ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಿ ನನ್ನ ಮೇಲೆ ಯಾವುದೇ ಭ್ರಷ್ಟಾಚಾರದ ಕಲೆ ಇಲ್ಲ. ನನಗೆ ಸ್ವಂತ ಮನೆ ಇಲ್ಲ, ಬೈಸಿಕಲ್‌ ಕೂಡ ಇಲ್ಲ… ಆದರೆ ಭ್ರಷ್ಟ ಜೆಎಂಎಂ ಮತ್ತು ಕಾಂಗ್ರೆಸ್‌‍ ನಾಯಕರು ತಮ ಮಕ್ಕಳಿಗಾಗಿ ಅಪಾರ ಪ್ರಮಾಣದ ಸಂಪತ್ತನ್ನು ಸಂಗ್ರಹಿಸಿದ್ದಾರೆ ಎಂದು ಟೀಕಿಸಿದರು.

RELATED ARTICLES

Latest News