Wednesday, October 16, 2024
Homeಜಿಲ್ಲಾ ಸುದ್ದಿಗಳು | District Newsಚಿಕ್ಕಮಗಳೂರು | Chikkamagaluruಕಾಫಿ ನಾಡಿನಲ್ಲಿ ಪ್ಯಾಲೆಸ್ಥಿನ್‌ ಧ್ವಜ ಹಾರಾಟ

ಕಾಫಿ ನಾಡಿನಲ್ಲಿ ಪ್ಯಾಲೆಸ್ಥಿನ್‌ ಧ್ವಜ ಹಾರಾಟ

Palestine flag in chikkamagaluru

ಚಿಕ್ಕಮಗಳೂರು, ಸೆ.16- ನಗರದಲ್ಲಿ ಇಂದು ದ್ವಿಚಕ್ರವಾಹನದಲ್ಲಿ ಇಬ್ಬರು ಪ್ಯಾಲೆಸ್ತೀನ್‌ ಧ್ವಜ ಹಿಡಿದು ಓಡಾಡಿದ ಘಟನೆ ನಡೆದಿದೆ. ದಂಟರಮಕ್ಕಿ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಯುವಕನೋರ್ವ ಪ್ಯಾಲೆಸ್ಥಿನ್‌ ಧ್ವಜ ಹಿಡಿದು ಸಂಚರಿಸಿದ್ದು, ಇನ್ನಿಬ್ಬರು ಆತನನ್ನು ಹಿಂಬಾಲಿಸಿದ್ದಾರೆ.

ಇದನ್ನು ಗಮನಿಸಿದ, ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಬಾರಿ ವೈರಲ್‌ ಆಗಿದ್ದು ಚರ್ಚೆಗೆ ಗ್ರಾಸವಾಗಿದೆ.ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಹಿಂದು ಸಂಘಟನೆ ಮುಖಂಡರು ನಗರ ಠಾಣೆ ಬಳಿ ತೆರಳಿ ಪ್ರತಿಭಟನೆ ನಡೆಸಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ.

ಪ್ರಕರಣದ ಬಗ್ಗೆ ಪ್ರತಿಕ್ರಿಸಿದ ಹೆಚ್ಚುವರಿ ರಕ್ಷಣಾಧಿಕಾರಿ ಕೃಷ್ಣಮೂರ್ತಿ ಆರೋಪಿಗಳ ವಾಹನ ಸಂಖ್ಯೆ ಪತ್ತೆಯಾಗಿದ್ದು ಬಂಧಿಸುವುದಾಗಿ ತಿಳಿಸಿದ್ದಾರೆ. ಇಂದು ಈದ್‌ ಮೆರವಣಿಗೆ ಹಾಗೂ ಇನ್ನೆರಡು ದಿನದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ಕಿಡಿಗೇಡಿಗಳ ಯುವಕರ ಕೃತ್ಯ ತೀವ್ರ ಟೀಕೆಗೆ ಗುರಿಯಾಗಿದೆ. ಧ್ವಜ ಹಿಡಿದು ಸಂಚರಿಸಿರುವುದು ಯಾವ ಉದ್ದೇಶಕ್ಕೆ ಎಂಬುದು ಪೋಲಿಸ್‌‍ ತನಿಖೆಯಿಂದ ತಿಳಿಯಬೇಕಾಗಿದೆ.

RELATED ARTICLES

Latest News