Thursday, December 12, 2024
Homeಬೆಂಗಳೂರುಬೆಂಗಳೂರಲ್ಲಿ ಪಾನಿಪುರಿ ವ್ಯಾಪಾರಿಯ ಕೊಲೆ

ಬೆಂಗಳೂರಲ್ಲಿ ಪಾನಿಪುರಿ ವ್ಯಾಪಾರಿಯ ಕೊಲೆ

Panipuri seller murder in Bangalore

ಬೆಂಗಳೂರು, ಅ.21– ಪಾನಿಪುರಿ ವ್ಯಾಪಾರಿಯೊಂದಿಗೆ ಜಗಳವಾಡಿದ ದುಷ್ಕರ್ಮಿಗಳು ಹಲ್ಲೆ ನಡೆಸಿ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ.ಉತ್ತರ ಪ್ರದೇಶ ಮೂಲದ ಸರ್ವೇಶ್(28) ಕೊಲೆಯಾದ ಪಾನಿಪುರಿ ವ್ಯಾಪಾರಿ. ಈತನಿಗೆ ಮದುವೆಯಾಗಿದ್ದು, ಒಂದು ಮಗುವಿದೆ.

ಸರ್ವೇಶ್ ರಾತ್ರಿ 10.30ರ ಸುಮಾರಿನಲ್ಲಿ ಬಾರ್ಗೆ ಹೋಗಿ ಮದ್ಯ ಖರೀದಿಸಿಕೊಂಡು ಕೋನಪ್ಪನ ಅಗ್ರಹಾರದ ಸರ್ಕಾರಿ ಶಾಲೆ ಸಮೀಪ ಬರುತ್ತಿದ್ದನು.ಮಾರ್ಗಮಧ್ಯೆ ದುಷ್ಕರ್ಮಿಗಳು ಈತನನ್ನು ತಡೆದು ಜಗಳವಾಡಿ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಆ ವೇಳೆ ತಪ್ಪಿಸಿಕೊಳ್ಳುವ ಭರದಲ್ಲಿ ಕೆಳಗೆ ಬಿದ್ದಿದ್ದಾರೆ.

ತಕ್ಷಣ ದುಷ್ಕರ್ಮಿಗಳು ಆತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಸುದ್ದಿ ತಿಳಿದು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಬಲೆಬೀಸಿದ್ದಾರೆ.

RELATED ARTICLES

Latest News