ಹ್ಯಾಂಗ್‍ಝೌ, ಅ.25 -ಇಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಸುಮಿತ್ ಆಂಟಿಲ್ ಇಂದು ಜಾವೆಲಿನ್ ಥ್ರೋ ಎಫ್64 ಸ್ಪರ್ಧೆಯಲ್ಲಿ 73.29 ಮೀಟರ್‍ಗಳ ದೂರ ಈಟಿ ಎಸೆದು ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಪಡೆದರು.
25ರ ಹರೆಯದ ಸುಮಿತ್ ಈ ವರ್ಷದ ಆರಂಭದಲ್ಲಿ ಪ್ಯಾರಿಸ್‍ನಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ 70.83 ಮೀಟರ್‍ಗಳ ಜಾವೆಲಿನ್‍ಎಸೆದು ಚಿನ್ನದ ಪದಕ ಗೆದ್ದಿದರು ಅದು ವಿಶ್ವ ದಾಖಲೆಯಾಗಿತು, ಈಗ ಮತ್ತಷ್ಟು ದೂರ ಎಸೆದು ದಾಖಲೆಯನ್ನು ಇನ್ನೂ ಉತ್ತಮಗೊಳಿಸಿದ್ದಾರೆ.
ನೋಂದಣಿ ಮಾಡಿಸಿಕೊಳ್ಳದ ಮದರಸಾಗಳಿಗೆ ನೋಟಿಸ್, ದಿನಕ್ಕೆ 10,000 ರೂ. ದಂಡ
ಭಾರತದ ಮತ್ತೊಬ್ಬ ಆಟಗಾರ ಪುಷ್ಪೇಂದ್ರ ಸಿಂಗ್ 62.06 ಮೀಟರ್ ಜಾವೆಲಿನ್‍ಎಸೆದು ಕಂಚಿನ ಪದಕ ಗೆದ್ದರು. ಶ್ರೀಲಂಕಾದ ಸಮಿತಾ ಅರಾಚಿ ಕೊಡಿತುವಕ್ಕು ಅವರು 64.09 ಮೀ. ಎಸೆದು ಬೆಳ್ಳಿ ಪಡೆದರು.
ಹ್ಯಾಂಗ್‍ಝೌ ಏಷ್ಯನ್ ಪ್ಯಾರಾ ಗೇಮ್ಸ್‍ನಲ್ಲಿ ಪ್ರಸ್ತುತ ಭಾರತ 10 ಚಿನ್ನಪದಕ ಗೆದ್ದಿದೆ ಒಟ್ಟಾರೆ ಪದಕಗಳ ಸಂಖ್ಯೆ 36ಕ್ಕೆ ಏರಿಕೆಯಾಗಿದೆ.