ನವದೆಹಲಿ,ಮೇ.3- ತನ್ನ ಮಗಳ ಸಾವಿಗೆ ಕಾರಣ ಅಸ್ಟ್ರಾಜೆನೆಕಾ ಸಂಸ್ಥೆ ತಯಾರಿಸಿದ ಕೋವಿಡ್ ಲಸಿಕೆ ಕೋವಿಶೀಲ್ಡ್ ಎಂದು ಆರೋಪಿಸಿರುವ ದಂಪತಿ ಔಷಧಿ ತಯಾರಕ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಲು ತೀರ್ಮಾನಿಸಿದ್ದಾರೆ.
ಬ್ರಿಟಿಷ್ ಫಾರ್ಮಾ ದೈತ್ಯ ಸಂಸ್ಥೆ ತಯಾರಿಸಿದ್ದ ಕೋವಿಶೀಲ್ಡ್ ಲಸಿಕೆಯಿಂದ ತಮ ಮಗಳು ಮೃತಪಟ್ಟಿದ್ದಾಳೆ ಎಂದು ಆರೋಪಿಸಿ ಅಸ್ಟ್ರಾಜೆನಿಕಾ ಸಂಸ್ಥೆ ವಿರುದ್ಧ ಮೊಕದ್ದಮೆ ಹೂಡಲು ದಂಪತಿ ಯೋಜಿಸುತ್ತಿದ್ದಾರೆ.
ಕೋವಿಶೀಲ್ಡ್ ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ಪ್ಲೇಟ್‌ಲೆಟ್ ಎಣಿಕೆಗೆ ಕಾರಣವಾಗುವ ಅಪರೂಪದ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಅಸ್ಟ್ರಾಜೆನೆಕಾ ಸಂಸ್ಥೆ ಯುಕೆ ನ್ಯಾಯಾಲಯದ ದಾಖಲೆಗಳಲ್ಲಿ ಒಪ್ಪಿಕೊಂಡ ನಂತರ ದಂಪತಿ ಈ ತೀರ್ಮಾನ ಕೈಗೊಂಡಿದ್ದಾರೆ.
ಅಸ್ಟ್ರಾಜೆನೆಕಾ ಲಸಿಕೆಯನ್ನು ಭಾರತದಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಸಹಯೋಗದಲ್ಲಿ ಕೋವಿಶೀಲ್ಡ್‌ಎಂಬ ಹೆಸರಿನಲ್ಲಿ ಲಸಿಕೆ ತಯಾರಿಸಿತ್ತು. 2021 ರಲ್ಲಿ ತನ್ನ 20 ವರ್ಷದ ಮಗಳು ಕಾರುಣ್ಯಳನ್ನು ಕಳೆದುಕೊಂಡ ವೇಣುಗೋಪಾಲನ್ ಗೋವಿಂದನ್ ದಂಪತಿ ಸಾಮಾಜಿಕ ಜಾಲತಾಣದ ಮೂಲಕ ತಮ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
15 ಯುರೋಪಿಯನ್ ದೇಶಗಳು ರಕ್ತ ಹೆಪ್ಪುಗಟ್ಟುವಿಕೆಯಿಂದ ಉಂಟಾಗುವ ಸಾವುಗಳ ಮೇಲೆ ಅದರ ಬಳಕೆಯನ್ನು ನಿರ್ಬಂಧಿಸಿದ ನಂತರ ಸೀರಮ್ ಇನ್‌ಸ್ಟಿಟ್ಯೂಟ್ ಲಸಿಕೆ ಪೂರೈಕೆಯನ್ನು ನಿಲ್ಲಿಸಬೇಕಿತ್ತು ಎಂದು ದಂಪತಿ ಮನವಿ ಮಾಡಿಕೊಂಡಿದ್ದಾರೆ. ಸಾಕಷ್ಟು ಪರಿಹಾರಗಳನ್ನು ಪಡೆಯದಿದ್ದರೆ, ನ್ಯಾಯಕ್ಕಾಗಿ ಮತ್ತು ಸಾರ್ವಜನಿಕ ಆರೋಗ್ಯದ ಹೆಸರಿನಲ್ಲಿ ನಡೆಸಲಾದ ಈ ದುಷ್ಕೃತ್ಯವು ಮರುಕಳಿಸುವುದನ್ನು ತಡೆಯಲು, ನಾವು ಯಾವುದೇ ಮತ್ತು ಎಲ್ಲಾ ಅಪರಾಧಿಗಳ ವಿರುದ್ಧ ಹೊಸ ಪ್ರಕರಣಗಳನ್ನು ದಾಖಲಿಸುತ್ತೇವೆ.
ನಮ ಮಕ್ಕಳು ಎಂಟು ಸಂತ್ರಸ್ತರ ಕುಟುಂಬಗಳನ್ನು ಸಂಪರ್ಕಿಸಿದ್ದಾರೆ ಮತ್ತು ನಾನು ನಮೆಲ್ಲರ ಸಾಮಾನ್ಯ ಭಾವನೆಗಳನ್ನು ಪ್ರತಿಧ್ವನಿಸುತ್ತಿದ್ದೇನೆ ಎಂದು ಅವರು ಹೇಳಿದರು. ನಮ ಈ ಆರೋಪಗಳಿಗೆ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮಾಲಿಕ ಪೂನಾವಾಲಾ ಉತ್ತರಿಸಬೇಕಾಗುತ್ತದೆ ಎಂದು ಗೋವಿಂದನ್ ಆನ್‌ಲೈನ್ ಪೋಸ್ಟ್‌ನಲ್ಲಿ ಬರೆದಿದ್ದಾರೆ, ಲಸಿಕೆ ರೋಲ್‌ಔಟ್ ಅನ್ನು ಅನುಮೋದಿಸಿದ್ದಕ್ಕಾಗಿ ಸರ್ಕಾರಿ ಅಧಿಕಾರಿಗಳನ್ನು ಅವರು ದೂಷಿಸಿದ್ದಾರೆ.