Saturday, May 4, 2024
Homeಬೆಂಗಳೂರುವಾಟ್ಸಪ್‍ಗೆ ಬಂದ ವಂಚಕರ ಲಿಂಕ್‍ ಒತ್ತಿ 5.18 ಕೋಟಿ ಹಣ ಕಳೆದುಕೊಂಡ ವ್ಯಕ್ತಿ

ವಾಟ್ಸಪ್‍ಗೆ ಬಂದ ವಂಚಕರ ಲಿಂಕ್‍ ಒತ್ತಿ 5.18 ಕೋಟಿ ಹಣ ಕಳೆದುಕೊಂಡ ವ್ಯಕ್ತಿ

ಬೆಂಗಳೂರು,ಏ.21- ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರ ಹಾವಳಿ ಹೆಚ್ಚಾಗಿದ್ದು, ಮೊಬೈಲ್‍ಗೆ ಬರುವ ಯಾವುದೇ ಲಿಂಕ್‍ಗಳನ್ನು ಓಪನ್ ಮಾಡಬೇಡಿ ಎಷ್ಟೇ ಜಾಗೃತಿ ಮೂಡಿಸಿದರೂ ಸಹ ವಂಚಕರ ಬಲೆಗೆ ಬೀಳುವವರು ಮಾತ್ರ ಕಡಿಮೆಯಾಗಿಲ್ಲ. ಷೇರು ಹೂಡಿಕೆ ನೆಪದಲ್ಲಿ ನಗರದ ನಿವಾಸಿಯೊಬ್ಬರು 5.18 ಕೋಟಿ ಹಣವನ್ನು ಕಳೆದುಕೊಂಡಿರುವ ಘಟನೆ ವರದಿಯಾಗಿದೆ.

ಸಂಜಯನಗರದ ಅಶೋಕ್ ತಿರುಪಲ್ಲಪ್ಪ ಎಂಬುವರ ವಾಟ್ಸಪ್‍ಗೆ ವಂಚಕರು ಲಿಂಕ್‍ನ್ನು ಕಳುಹಿಸಿದ್ದು, ಬಳಿಕ ಲಿಂಗ್ ಓಪನ್ ಮಾಡಿ ಷೇರು ಖರೀದಿಸಿದರೆ ನಿಮಗೆ ಅಧಿಕ ಲಾಭ ಬರುತ್ತದೆ ಎಂದು ನಂಬಿಸಿದ್ದಾರೆ.

ವಂಚಕರ ಬಣ್ಣದ ಮಾತಿಗೆ ಮರುಳಾದ ಅಶೋಕ್ ಲಿಂಕ್‍ನ್ನು ಓಪನ್ ಮಾಡಿ ಡೌನ್‍ಲೋಡ್ ಮಾಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ವಂಚಕರು ಅಶೋಕ್ ಅವರ ಬ್ಯಾಂಕ್ ಖಾತೆಯ ಮಾಹಿತಿಯನ್ನು ಪಡೆದು ಹಂತ ಹಂತವಾಗಿ ಹಣವನ್ನು ದೋಚಿದ್ದಾರೆ.

ಬ್ಯಾಂಕ್ ಖಾತೆಯಲ್ಲಿದ್ದ ಒಟ್ಟು 5.18 ಕೋಟಿ ದೋಚಲಾಗಿದೆ. ಒಂದು ಕ್ಷಣ ಆತಂಕಕ್ಕೀಡಾದ ದಿಕ್ಕು ತೋಚದಂತಾಗಿ ಅಂತಿಮವಾಗಿ ಅವರು ಸಿಸಿಬಿಯ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News