Saturday, May 4, 2024
Homeಬೆಂಗಳೂರುಇನ್ಶೂರೆನ್ಸ್ ಹೆಸರಿನಲ್ಲಿ 4.51 ಕೋಟಿ ಹಣ ರೂ. ಪಂಗನಾಮ ಹಾಕಿದ್ದ ವ್ಯಕ್ತಿ ಅರೆಸ್ಟ್

ಇನ್ಶೂರೆನ್ಸ್ ಹೆಸರಿನಲ್ಲಿ 4.51 ಕೋಟಿ ಹಣ ರೂ. ಪಂಗನಾಮ ಹಾಕಿದ್ದ ವ್ಯಕ್ತಿ ಅರೆಸ್ಟ್

ಬೆಂಗಳೂರು, ಮಾ.26- ಆದಿತ್ಯಾ ಬಿರ್ಲಾ ಸನ್ ಲೈಫ್ ಇನ್ಸುರೆನ್ಸ್ ಎಚ್ಡಿಎಫ್ಸಿ ಮತ್ತು ಐಸಿಐಸಿಐ ಇನ್ಷೂರೆನ್ಸ್ ಹೆಸರಿನಲ್ಲಿ ನಕಲಿ ವೆಬ್ಸೈಟ್ಗಳನ್ನು ತೆರೆದು ಲೈಫ್ ಇನ್ಸುರೆನ್ಸ್ ಪಾಲಿಸಿ ಮಾಡಿಸಿ ಕೊಡುವುದಾಗಿ ಅಮಾಯಕರನ್ನು ನಂಬಿಸಿ ಹಣ ಪಡೆದು ಮೋಸ ಮಾಡಿದ್ದ ವಂಚಕನನ್ನು ಸೈಬರ್ ಕ್ರೈಮ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉತ್ತರಪ್ರದೇಶದ ಖಾಸ್ಗಂಜ್ನಲ್ಲಿ ಈ ವಂಚಕನನ್ನು ಪತ್ತೆಹಚ್ಚಿ ಬಂಧಿಸಿ, ನಗರಕ್ಕೆ ಕರೆತರಲಾಗಿದೆ.

ಈತ ಇನ್ಸುರೆನ್ಸ್ ಪಾಲಿಸಿ ಪ್ರೀಮಿಯಂ ಬಾಂಡ್ ಮಾಡಿಕೊಡುವುದಾಗಿ ನಂಬಿಸಿ ಅಮಾಯಕರಿಗೆ 4.51 ಕೋಟಿ ರೂ. ಹಣ ವಂಚಿಸಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.ಅಪರಿಚಿತ ವ್ಯಕ್ತಿಯೊಬ್ಬ ಪಿರ್ಯಾದುದಾರರಿಗೆ ಕರೆ ಮಾಡಿ, ಆದಿತ್ಯ ಬಿರ್ಲಾ ಸನ್ ಲೈಫ್ ಇನ್ಸುರೆನ್ಸ್ ಕಂಪನಿಯಿಂದ ಮಾತನಾಡುತ್ತಿರುವುದಾಗಿ ತಿಳಿಸಿ, ನಮ್ಮ ಕಂಪನಿಯಿಂದ ಪ್ರಿಮಿಯಂನ ಬಾಂಡ್ ನೀಡುತ್ತೇವೆ, ಅದಕ್ಕಾಗಿ ನೀವು ನಿಮ್ಮ ಪಾಲಿಸಿ ಪಡೆಯಲು 15 ಲಕ್ಷ ರೂ ಹಣವನ್ನು ಚೆಕ್ ಮುಖಾಂತರ ನೀಡಲು ತಿಳಿಸಿದ್ದರಿಂದ ಆತನ ಮಾತನ್ನು ನಂಬಿ ದಾಖಲಾತಿಗಳು ಹಾಗೂ ಹಣವನ್ನು ಚೆಕ್ ಮೂಲಕ ನೀಡಿದ್ದರು.

ನಂತರ ಬರಬೇಕಾದ ತಿಂಗಳ ಪಾಲಿಸಿಯ ಲಾಭದ ಹಣ ಬಾರದಿದ್ದಾಗ, ಪಾಲಿಸಿ ಬಗ್ಗೆ ಕರೆ ಮಾಡಿದ ವ್ಯಕ್ತಿಯ ಮೊಬೈಲ್ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿರುತ್ತದೆ.ಅದರಿಂದ ಗಾಬರಿಯಾದ ವ್ಯಕ್ತಿ ಆದಿತ್ಯಾ ಬಿರ್ಲಾ ಇನ್ಸೂರೆನ್ಸ್ ಕಂಪನಿಗೆ ಹೋಗಿ ವಿಚಾರಿಸಿದಾಗ, ಮೋಸ ಹೋಗಿರುವ ವಿಚಾರ ತಿಳಿದಿದೆ.

ತಕ್ಷಣ ಅವರು ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಪಾಲಿಸಿ ಬಗ್ಗೆ ಕರೆ ಮಾಡಿದ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಆ ವಂಚಕ ಪಾಲಿಸಿಗಳನ್ನು ಮಾಡಿಸಲು ಬೇಕಾಗಿರುವ ಆಧಾರ್ ಕಾರ್ಡ್, ಪಾನ್ ಕಾರ್ಡ್, -ಫೋಟೋ ಮತ್ತು ಚೆಕ್ಗಳನ್ನು ಪಡೆಯಲು ಸ್ಥಳೀಯ ವ್ಯಕ್ತಿಯೊಬ್ಬನನ್ನು ನೇಮಿಸಿಕೊಂಡಿರುವುದು ಗೊತ್ತಾಗಿದೆ.

ಪೊಲೀಸರು ತನಿಖೆ ಮುಂದುವರೆಸಿದಾಗ ಸ್ಥಳೀಯ ವ್ಯಕ್ತಿ ತಾನು ಸಂಗ್ರಹಿಸಿದ ದಾಖಲೆಗಳನ್ನು ಹಾಗೂ ಚೆಕ್ನ್ನು ಕೊರಿಯರ್ ಮೂಲಕ ಪಾಲಿಸಿ ಬಗ್ಗೆ ಕರೆ ಮಾಡಿದ ವ್ಯಕ್ತಿಗೆ ರವಾನಿಸಿದ್ದು ತಿಳಿದು ಬಂದಿದೆ.ಕೊರಿಯರ್ನಿಂದ ಪಡೆದುಕೊಂಡ ಸಾರ್ವಜನಿಕರ ಚೆಕ್ಗಳನ್ನು ವಂಚನೆ ಮಾಡುತ್ತಿದ್ದ ವ್ಯಕ್ತಿಯು ಆತನ ವಿವಿಧ ಬ್ಯಾಂಕ್ ಖಾತೆಗಳಿಗೆ ಡೆಪಾಸಿಟ್ ಮಾಡಿ, ಆ ಹಣವನ್ನು ಎಟಿಎಂ ಮೂಲಕ ವಿತ್ ಡ್ರಾ ಮಾಡಿಕೊಳ್ಳುತ್ತಿದ್ದುದನ್ನು ಸೈಬರ್ ಕ್ರೈಮ್ ಪೊಲೀಸರು ಪತ್ತೆ ಹಚ್ಚಿದ್ದಾರೆ.

ತಕ್ಷಣ ವಂಚಕನ ಬಗ್ಗೆ ಮಾಹಿತಿ ಕಲೆಹಾಕಿದಾಗ ಆತ ಉತ್ತರ ಪ್ರದೇಶದ ಖಾಸ್ ಗಂಜ್ನಲ್ಲಿ ತಲೆಮರೆಸಿಕೊಂಡಿರುವುದು ಗೊತ್ತಾಗಿದೆ. ಒಂದು ತಂಡ ಅಲ್ಲಿಗೆ ತೆರಳಿ ವಂಚಕನನ್ನು ಪತ್ತೆ ಮಾಡಿ ಬಂಧಿಸಿ, ಅಲ್ಲಿನ ಸ್ಥಳೀಯ ನ್ಯಾಯಾಲಯದಲ್ಲಿ ಹಾಜರು ಪಡಿಸಿ ಟ್ರ್ಯಾನ್ಸಿಟ್ ವಾರೆಂಟ್ ಮುಖಾಂತರ ನಗರಕ್ಕೆ ಕರೆತಂದು ವಿಚಾರಣೆಗೆ ಒಳಪಡಿಸಿದ್ದಾರೆ. ನಂತರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ 14 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.

ಈ ವಂಚಕನ ವಿರುದ್ಧ ನಗರದ ವಿವಿಧ ಸೆನ್ ಪೊಲೀಸ್ ಠಾಣೆಗಳಲ್ಲಿ ಒಟ್ಟು 34 ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ ಬೇರೆ ಬೇರೆ ಅಮಾಯಕರಿಗೆ ಆರೋಪಿಯು ಮೋಸ ಮಾಡಿದ ಮೊತ್ತ 4,51,31,288 ರೂ.ಗಳು ಆಗಿರುತ್ತದೆ ಎಂಬುದು ಗೊತ್ತಾಗಿದೆ. 34 ಪ್ರಕರಣಗಳ ಪೈಕಿ ಕೆಲವು ಪ್ರಕರಣಗಳಲ್ಲಿ ಆರೋಪಿಯು ನೇರವಾಗಿ ನೊಂದ ವ್ಯಕ್ತಿಗಳನ್ನು ಸಂಪರ್ಕಿಸಿರುತ್ತಾನೆ, ಹೆಚ್ಚಿನ ಪ್ರಕರಣಗಳಲ್ಲಿ ಆದಿತ್ಯಾ ಬಿರ್ಲಾ ಸನ್ ಲೈ-ï ಇನ್ಸುರೆನ್ಸ್ ಎಚ್ಡಿಎ-ïಸಿ ಮತ್ತು ಐಸಿಐಸಿಐ ಇನ್ಸುರೆನ್ಸ್ ಹೆಸರಲ್ಲಿ ನಕಲಿ ವೆಬ್ಸೈಟ್ಗಳನ್ನು ತೆರೆದು ಅಮಾಯಕರಿಗೆ ಮೋಸ ಮಾಡಿರುವುದು ತಿಳಿದುಬಂದಿದ್ದು ತನಿಖೆ ಮುಂದುವರೆದಿದೆ.

RELATED ARTICLES

Latest News