Sunday, September 15, 2024
Homeಜಿಲ್ಲಾ ಸುದ್ದಿಗಳು | District Newsಅನುಮಾನಾಸ್ಪದವಾಗಿ ಟಾಟಾ ಏಸ್ ಸಹಿತ ವ್ಯಕ್ತಿ ಸಜೀವದಹನ

ಅನುಮಾನಾಸ್ಪದವಾಗಿ ಟಾಟಾ ಏಸ್ ಸಹಿತ ವ್ಯಕ್ತಿ ಸಜೀವದಹನ

person with Tata Ace was burnt suspiciously

ಪಾವಗಡ, ಸೆ.6– ಅನುಮಾನಾಸ್ಪದವಾಗಿ ತನ್ನ ಟಾಟಾ ಏಸ್ ವಾಹನದ ಸಹಿತ ವ್ಯಕ್ತಿಯೊಬ್ಬ ಸುಟ್ಟು ಕರಕಲಾದಂತಹ ಘಟನೆ ತಾಲೂಕಿನ ಬಳ್ಳಾರಿ ರಸ್ತೆಯ ವೀರಮನಹಳ್ಳಿ ಗೇಟ್- ಪಲವಳ್ಳಿ ಮಾರ್ಗದ ರೈಲ್ವೆ ಬ್ರಿಡ್ಜ್ ಬಳಿ ನಡೆದಿದೆ.

ವೈಎನ್ಎಸ್ ಕೋಟೆಯ ರವಿಕುಮಾರ್(45) ಸುಟ್ಟು ಕರಕಲಾದ ವ್ಯಕ್ತಿಯೆಂದು ಗುರುತಿಸಲಾಗಿದೆ.ಸ್ಥಳೀಯರ ಮಾಹಿತಿ ಮೇರೆಗೆ ಪಾವಗಡ ಪೊಲೀಸ್ ಠಾಣೆಯ ಸಿಪಿಐ ಸುರೇಶ್ ನೇತೃತ್ವದ ಪೊಲೀಸರ ತಂಡ ತನಿಖೆ ಕೈಗೊಂಡಿದ್ದು ವ್ಯಕ್ತಿಯ ಈ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ, ಸ್ಥಳಕ್ಕೆ ತುಮಕೂರು ಹೆಚ್ಚುವರಿ ಎಸ್ಪಿ ಮರಿಯಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದು ಆತಹತ್ಯಯೋ ಅಥವಾ ತಾಂತ್ರಿಕ ದೋಷದಿಂದ ವಾಹನಕ್ಕೆ ಬೆಂಕಿ ಬಿದ್ದು ಈ ಘಟನೆ ಸಂಭವಿಸಿದೆಯೋ ಎಂಬುವುದರ ಬಗ್ಗೆ ತನಿಖೆಯಿಂದ ಸತ್ಯಾಸತ್ಯತೆ ತಿಳಿದುಬರಬೇಕಿದೆ. ಈ ಸಂಬಂಧ ವೈಎನ್ಎಸ್ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News