Thursday, November 21, 2024
Homeಕ್ರೀಡಾ ಸುದ್ದಿ | Sportsಕೊಹ್ಲಿಯನ್ನು 3ನೇ ಕ್ರಮಾಂಕದಲ್ಲಿ ಆಡಿಸಿ : ಎಬಿಡಿ

ಕೊಹ್ಲಿಯನ್ನು 3ನೇ ಕ್ರಮಾಂಕದಲ್ಲಿ ಆಡಿಸಿ : ಎಬಿಡಿ

ಬೆಂಗಳೂರು, ಜೂ. 20– ಒಂಭತ್ತನೇ ಆವೃ ತ್ತಿಯ ಟಿ 20 ವಿಶ್ವಕಪ್‌ ಟೂರ್ನಿಯ ಸೂಪರ್‌- 8 ಪಂದ್ಯಗಳಲ್ಲಿ ವಿರಾಟ್‌ ಕೊಹ್ಲಿಯನ್ನು ಎಂದಿನಂತೆ 3ನೇ ಕ್ರಮಾಂಕದಲ್ಲಿ ಆಡಿಸಬೇಕೆಂದು ಮಾಜಿ ಕ್ರಿಕೆಟಿಗ ಎಬಿಡಿ ವಿಲಿಯರ್ಸ್‌ ಹೇಳಿದ್ದಾರೆ.

2024ರ ಐಪಿಎಲ್‌ ಟೂರ್ನಿ ಯಲ್ಲಿ ಆರಂಭಿಕ ಆಟಗನಾಗಿ ರಾಯಲ್‌ ಚಾಲೆಂಜರ್ಸ್‌ ತಂಡದ ಪರ ಆಡಿದ್ದ ಕೊಹ್ಲಿ 15 ಪಂದ್ಯಗಳಿಂದ 741 ರನ್‌ಗಳನ್ನು ಕಲೆ ಹಾಕುವ ಮೂಲಕ ಆರೇಂಜ್‌ ಕ್ಯಾಪ್‌ ಗೆದ್ದು ಸಂಭ್ರಮಿಸಿದ್ದರು. ಆದರೆ ಅದೇ ರೀತಿಯ ಪ್ರದರ್ಶನವನ್ನು ಆರಂಭಿಕನಾಗಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪ್ರದರ್ಶಿಸಲು ಕೊಹ್ಲಿ ಎಡವಿದ್ದಾರೆ.

ನ್ಯೂಯಾರ್ಕ್‌ನ ನಾಸೌದ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಕಳೆದ ಮೂರು ಪಂದ್ಯಗಳಿಂದ ವಿರಾಟ್‌ ಕೊಹ್ಲಿ 9 ಎಸೆತಗಳಿಂದ ಕೇವಲ 5 ರನ್‌ ಗಳಿಸಿ ರನ್‌ ವೈಫಲ್ಯ ಎದುರಿಸಿದ್ದಾರೆ.

2011 ರಿಂದ 2021ರವರೆಗೆ ಆರ್‌ಸಿಬಿ ಪರ ವಿರಾಟ್‌ ಕೊಹ್ಲಿ ಜೊತೆಗೆ ಆಡಿದ್ದ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿಡಿವಿಲಿಯರ್ಸ್‌ ಕೊಹ್ಲಿ 3ನೇ ಕ್ರಮಾಂಕ ದಲ್ಲಿ ಆಡುವಾಗ ಎದುರಾಳಿ ತಂಡದ ಬೌಲರ್‌ಗಳನ್ನು ಒತ್ತಡಕ್ಕೆ ಸಿಲುಕಿಸುತ್ತಾರೆ ಎಂದು ಹೇಳಿದ್ದಾರೆ.

` ನಾನು ಮೊದಲಿನಿಂ ದಲೂ ವಿರಾಟ್ ಕೊಹ್ಲಿ ಅವರನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಬಿಡು ಎಂದು ಹೇಳುತ್ತಿದ್ದೇನೆ. ವಿಶೇಷವಾಗಿ ಅವರು ಈಗ ಆಡಲಿರುವ ಉತ್ತಮ ವಿಕೆಟ್ಗಳಲ್ಲಿ, ವಿರಾಟ್ ಮೂರನೇ ಕ್ರಮಾಂಕದಲ್ಲಿ ಗೋ-ಟು ಗೈ ಆಗಿದ್ದಾರೆ. ಅವರು ಆಕ್ರಮಣಕಾರಿ ಆಟವನ್ನು ಆಡಬಹುದು ಮತ್ತು ಅಗತ್ಯವಿದ್ದರೆ ಒತ್ತಡವನ್ನು ಹೀರಿಕೊಳ್ಳಬಹುದು.

ಅವರು ಮಧ್ಯಮ ಓವರ್ಗಳಲ್ಲಿ ವಿಶ್ವದ ಅತ್ಯುತ್ತಮ ಆಟಗಾರರಾಗಿದ್ದಾರೆ (ಓಪನಿಂಗ್ ಮಾಡಲು) ನನಗೆ ಯಾವುದೇ ಕಾರಣಗಳು ಕಾಣಿಸುತ್ತಿಲ್ಲ ‘ ಎಂದು ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ. ಸೂಪರ್‌-8 ಹಂತದ ನಿಮಿತ್ತ ಇಂದು ಅಫ್ಘಾನಿಸ್ತಾನ ವಿರುದ್ಧ ನಡೆಯುವ ಪಂದ್ಯದಲ್ಲಿ ರೋಹಿತ್‌ ಹಾಗೂ ಜೈಸ್ವಾಲ್‌ ಇನ್ನಿಂಗ್‌್ಸ ಆರಂಭಿಸಿ, ಕೊಹ್ಲಿ 3ನೇ ಕ್ರಮಾಂಕ ದಲ್ಲಿ ಆಡುವ ಸಾಧ್ಯತೆಗಳಿವೆ.

RELATED ARTICLES

Latest News