Wednesday, September 11, 2024
Homeರಾಷ್ಟ್ರೀಯ | Nationalಒತ್ತಡಗಳಿಗೆ ಮಣಿಯದ ಮೋದಿ ಸರ್ಕಾರವನ್ನು ಉರುಳಿಸಲು ವಿದೇಶಿ ಶಕ್ತಿಗಳ ಷಡ್ಯಂತ್ರ..?

ಒತ್ತಡಗಳಿಗೆ ಮಣಿಯದ ಮೋದಿ ಸರ್ಕಾರವನ್ನು ಉರುಳಿಸಲು ವಿದೇಶಿ ಶಕ್ತಿಗಳ ಷಡ್ಯಂತ್ರ..?

ನವದೆಹಲಿ,ಆ.19– ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ಇಂದು ವಿಶ್ವಗುರುವಾಗಿ ಬೆಳೆದು ನಿಂತಿದೆ. ಕಳೆದ ಹಲವು ವರ್ಷಗಳಿಂದ ಯಾವುದೇ ಬೇರೆ ರಾಷ್ಟ್ರಗಳ ಹಂಗಿಲ್ಲದೇ, ಪ್ರಯೊಂದು ವಿಚಾರದಲ್ಲೂ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಮೂಲಕ, ದಿಟ್ಟ ನೀತಿಯನ್ನು ಅನುಸರಿಸುವ ಮೂಲಕ ಜಗತ್ತನ್ನೇ ಭಾರತ ತನ್ನತ್ತ ಸೆಳೆದಿದೆ. ಯಾವ ಒತ್ತಡಕ್ಕೂ ಈಗ ಭಾರತ ಮಣಿಯುವುದಿಲ್ಲ.

ಇದಕ್ಕೆ ಮೂಲ ಕಾರಣ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ. ಇಂತಹ ಪರಿಸ್ಥಿತಿ ಇರುವಾಗ ಇದೀಗ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವನ್ನು ಉರುಳಿಸಲು ಅಮೆರಿಕದಲ್ಲಿ ಕುತಂತ್ರ ನಡೆಯುತ್ತಿರುವ ಬಗ್ಗೆ ವರದಿಯೊಂದು ಬಹಳ ಸದ್ದು ಮಾಡುತ್ತಿದೆ. ಅಮೆರಿಕದ ಗುಪ್ತಚರ ಇಲಾಖೆ ಸಿಐಎ ಭಾರತದ ಪ್ರತಿಪಕ್ಷ ಹಾಗೂ ಎನ್‌ಡಿಎ ಮಿತ್ರಪಕ್ಷ ನಾಯಕರನ್ನು ಬಳಸಿಕೊಂಡು ಸರ್ಕಾರ ಕೆಡುವು ಪ್ರಯತ್ನ ನಡೆಸುತ್ತಿರುವ ವಿಚಾರ ಬಯಲಾಗಿದೆ.

ರಷ್ಯಾದ ಸುದ್ದಿ ಮಾಧ್ಯಮ ಸ್ಪಟ್ನಿಕ್‌ ಈ ಶಾಕಿಂಗ್‌ ವರದಿಯನ್ನು ಬಿತ್ತರಿಸಿದೆ ಎನ್ನಲಾಗಿದೆ. ಈ ಬಾರಿ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವಲ್ಲಿ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮತ್ತು ಬಿಹಾಯ ಸಿಎಂ ನಿತೀಶ್‌ ಕುಮಾರ್‌ ಅವರು ಪ್ರಮುಖ ಪಾತ್ರವಹಿಸಿದ್ದರು ಎಂಬುದು ಎಲ್ಲರಿಗೂ ಗೊತ್ತೇ ಇದೆ.

ಇವರಿಬ್ಬರ ಸಹಾಯವಿಲ್ಲದೇ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಬಿಜೆಪಿಗೆ ಸುಲಭದ ಮಾತಾಗಿರಲಿಲ್ಲ. ಇದೀಗ ಇದೇ ವಿಚಾರವನ್ನು ಬಂಡವಾಳ ಮಾಡಿಕೊಂಡಿರುವ ಸಿಐಎ ಆಂಧ್ರದ ಬಾಪಿಸ್ಟ್‌ ಚರ್ಚ್‌ ಮತ್ತು ಚಂದ್ರಬಾಬು ನಾಯ್ಡುವನ್ನು ಅವರನ್ನು ಬಳಿಸಿಕೊಂಡು ಮೋದಿ ಸರ್ಕಾರವನ್ನು ಕೆಡವಲು ಸಂಚು ರೂಪಿಸಿದೆ. ಆ ಮೂಲಕ ಭಾರತದಲ್ಲಿ ಅತಂತ್ರ ಸೃಷ್ಟಿಸಲು ಅಮೆರಿಕ ಯತ್ನಿಸುತ್ತಿದೆ ಎಂದು ಸ್ಪಟ್ನಿಕ್‌ ವರದಿ ಮಾಡಿದೆ.

ಅಮೆರಿಕ ರಾಜತಾಂತ್ರಿಕ ಅಧಿಕಾರಿಗಳು ಭಾರತದ ಅನೇಕ ರಾಜಕೀಯ ನಾಯಕರ ಜೊತೆ ಸೀಕ್ರೆಟ್‌ ಮೀಟಿಂಗ್‌ ನಡೆಸಿದ್ದಾರೆಂದೆ ಸ್ಪಟ್ನಿಕ್‌ ವರದಿ ಮಾಡಿದೆ. ಇದಕ್ಕೆ ಪೂರಕ ಎಂಬಂತೆ ಯುಎಸ್‌‍ ಕೌನ್ಸುಲ್‌ ಜನರಲ್‌ ಜೆನ್ನಿರ್‌ ಲಾರ್ಸನ್‌ ಅವರು ಹೈದರಾಬಾದ್‌ನಲ್ಲಿ ಚಂದ್ರಬಾಬು ನಾಯ್ಡು, ಸಂಸದ ಅಸಾದುದ್ದೀನ್‌ ಓವೈಸಿ, ತೆಲಂಗಾಣ ಸಿಎಂ ರೇವಂತ್‌ ರೆಡ್ಡಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಭಾರತದ ಮೇಲೆ ಏನು ಪರಿಣಾಮ? :
ಉಸಾನಾಸ್‌‍ ಫೌಂಡೇಶನ್ ನ ಸಂಸ್ಥಾಪಕ ಮತ್ತು ನಿರ್ದೇಶಕರಾದ ಡಾ ಅಭಿನವ್‌ ಪಾಂಡ್ಯ ಅವರು ಭಾರತದಲ್ಲಿ ಅಶಾಂತಿಯನ್ನು ಪ್ರಚೋದಿಸುವ ಗುಂಪುಗಳಿಗೆ ಯುಎಸ್‌‍ ಬೆಂಬಲ ನಿಗ್ರಹಿಸುವ ಬಗ್ಗೆ ನಿಜವಾದ ಆತಂಕಗಳನ್ನು ವ್ಯಕ್ತಪಡಿಸಿದ್ದಾರೆ. ಮೋದಿಯವರ ವಿದೇಶಾಂಗ ನೀತಿ ಧೋರಣೆಯನ್ನು ಹಾಳು ಮಾಡಲು ಲೋಕಸಭೆ ಚುನಾವಣೆಯಲ್ಲಿ ಯುಎಸ್‌‍ ಮಧ್ಯಪ್ರವೇಶಿಸಿರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News