Saturday, June 22, 2024
Homeರಾಜ್ಯಕಾಶಿ ವಿಶ್ವನಾಥ ದೇಗುಲಕ್ಕೆ ಮೋದಿ ಭೇಟಿ

ಕಾಶಿ ವಿಶ್ವನಾಥ ದೇಗುಲಕ್ಕೆ ಮೋದಿ ಭೇಟಿ

ವಾರಣಾಸಿ, ಮಾ.10- ವಿಶ್ವ ಪ್ರಸಿದ್ದ ಕಾಶಿ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರೆ ನನಗೆ ಯಾವಗಲೂ ಹೆಚ್ಚಿನ ತೃಪ್ತಿ ಸಿಗುತ್ತದೆ ಎಂದು ಪ್ರಧಾನಿ ನರೇಂದ್ರಮೋದಿ ತಿಳಿಸಿದ್ದಾರೆ. ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿದ ಒಂದು ದಿನದ ನಂತರ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ಪುರಾತನ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸುವುದು ನನಗೆ ಯಾವಾಗಲೂ ಹೆಚ್ಚಿನ ತೃಪ್ತಿ ನೀಡುತ್ತದೆ ಎಂದಿದ್ದಾರೆ.

ವಾರಣಾಸಿಯ ಭವ್ಯವಾದ ಮತ್ತು ದಿವ್ಯವಾದ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಮನಸ್ಸಿಗೆ ಯಾವಾಗಲೂ ಹೆಚ್ಚಿನ ತೃಪ್ತಿ ಸಿಗುತ್ತದೆ. ದೇಶಾದ್ಯಂತ ನನ್ನ ಕುಟುಂಬದ ಸದಸ್ಯರ ಸಂತೋಷ, ಅದೃಷ್ಟ ಮತ್ತು ಆರೋಗ್ಯಕ್ಕಾಗಿ ಬಾಬಾ ವಿಶ್ವನಾಥ್ ಅವರನ್ನು ಪ್ರಾರ್ಥಿಸಿದೆ. ಹರ್ ಹರ್ ಮಹಾದೇವ್ ಎಂದು ಹೇಳಿದ್ದಾರೆ.

ನಿನ್ನೆ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿದ ವೀಡಿಯೊವನ್ನು ಸಹ ಹಂಚಿಕೊಂಡಿದ್ದು, ಬಿಜೆಪಿ ಅವರನ್ನು ಮೂರನೇ ಬಾರಿಗೆ ಕ್ಷೇತ್ರದಿಂದ ಕಣಕ್ಕಿಳಿಸಿದ ಕೆಲವು ದಿನಗಳ ನಂತರ ನಿನ್ನೆ ಮೋದಿ ಅವರು ತಮ್ಮ ಸಂಸದೀಯ ಕ್ಷೇತ್ರಕ್ಕೆ ಆಗಮಿಸಿದ ವೇಳೆ 28 ಕಿ.ಮೀ ಉದ್ದದ ರೋಡ್ ಶೋ ಕೂಡ ನಡೆಸಿದ್ದಾರೆ.

RELATED ARTICLES

Latest News