ಮೈಸೂರು, ಸೆ.25- ಮುಖ್ಯಮಂತ್ರಿಯಾಗಲು ತಮಗೆ ಆತುರವೇನಿಲ್ಲ. 2028ರ ವಿಧಾನಸಭಾ ಚುನಾವಣೆಯ ಬಳಿಕ ಡಿ.ಕೆ.ಶಿವಕುಮಾರ್ ಮತ್ತೆ ಮುಖ್ಯಮಂತ್ರಿಯಾಗುವುದಾದರೆ ತಮ ಅಭ್ಯಂತರ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಹತ್ವದ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2028ರ ಚುನಾವಣೆ ಬಳಿಕ ತಾವೇ ಮುಂದಿನ ಮುಖ್ಯಮಂತ್ರಿ ಎಂದು ಡಿ.ಕೆ.ಶಿವಕುಮಾರ್ ಎಲ್ಲಾ ಕಡೆ ಹೇಳಿಕೊಳ್ಳುತ್ತಿರುವುದಕ್ಕೆ ಪ್ರತಿಕ್ರಿಯಿಸಿದರು. ಅವರ ಪ್ರಯತ್ನ ಮತ್ತು ಫಲ ಇದ್ದರೆ ಮತ್ತೆ ಡಿ.ಕೆ.ಶಿವಕುಮಾರ್ ಏಕೆ ಮುಖ್ಯಮಂತ್ರಿಯಾಗಬಾರದು? ಎಂದು ಪ್ರಶ್ನಿಸಿದರು.
2028ಕ್ಕೆ ತಾವು ಮುಖ್ಯಮಂತ್ರಿಯಾಗುವುದಾಗಿ ಹೇಳಿದ್ದು ನಿಜ. ಆದರೆ ಈಗ ಡಿ.ಕೆ.ಶಿವಕುಮಾರ್ ಪ್ರಯತ್ನ ಮಾಡುತ್ತಿದ್ದಾರೆ. ನನಗೆ ಇನ್ನೂ ವಯಸ್ಸಿದೆ. ಆತುರವೇನಿಲ್ಲ, ನಿರೀಕ್ಷೆಯಲ್ಲಿದ್ದೇನೆ. ಮೊದಲ ಸರದಿಯಲ್ಲಿರುವವರು ಅಧಿಕಾರ ಅನುಭವಿಸಿ ಸಮಾಧಾನದಿಂದ ಕೆಳಗಿಳಿಯಲಿ.
ನಾನು ಮುಖ್ಯಮಂತ್ರಿಯಾಗಲೇಬೇಕು ಎಂದು ಹೇಳಲಿಲ್ಲ, ನಮ ಸರ್ಕಾರ ಬಂದಾಗ ಸನ್ನಿವೇಶ ಆಧರಿಸಿ ತೀರ್ಮಾನಿಸುವುದಾಗಿ ಹೇಳಿದ್ದೆ. ಈಗಲೂ ಅದೇ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದರು.
ರಾಜಕೀಯವಾಗಿ ಕುಗ್ಗಿಸಲಿಕ್ಕಾಗಿಯೇ ಜಾರಿ ನಿರ್ದೇಶನಾಲಯ ದಾಳಿಯಾಗಿದೆ ಎಂಬುದು ಬೇರೆ ವಿಚಾರ. ನಾನು ಕುಗ್ಗುವ ಪ್ರಶ್ನೆಯೇ ಇಲ್ಲ. ದಿನನಿತ್ಯದ ಕೆಲಸಗಳನ್ನು ಮುಂದುವರಿಸಲೇಬೇಕು. ಕಾನೂನು ಬದ್ಧವಾಗಿಯೇ ನಾನು ತನಿಖೆಯನ್ನು ಎದರಿಸುತ್ತೇನೆ ಎಂದರು.
ನೀಲಿ ಶಾಲು ವಿಚಾರವಾಗಿ ಮಾಜಿ ಸಂಸದ ಪ್ರತಾಪ್‌ಸಿಂಹ ಹೇಳಿಕೆಗೆ ಈಗಾಗಲೇ ಉತ್ತರ ನೀಡಲಾಗಿದೆ. ನನಗೆ ಈ ಶಾಲಿನ ಮಹತ್ವ ಗೊತ್ತಿದೆ. ಅದಕ್ಕಾಗಿ ಶಾಲು ಹಾಕಿಕೊಂಡಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನನ್ನ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ಸಂಬಂಧ ಚೆನ್ನಾಗಿದೆ. ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಅಂತರ ಕಾಯ್ದುಕೊಂಡಿದ್ದೆ. ಸಭೆ ಕರೆದಾಗ ಹೋಗುತ್ತಿದ್ದೆ. ಈಗಲೂ ಹಾಗೆಯೇ ಇದ್ದೇನೆ. ತಮ ಮೇಲೆ ಇಡಿ ದಾಳಿಯಾದಾಗ ಯತೀಂದ್ರ ಬಂದು ಭೇಟಿ ಮಾಡಿದ್ದಾರೆ. ಮನೆಗೆ ಒಬ್ಬರು ಬಂದರೆ ಸಾಕಲ್ಲವೇ? ಮನೆಮಂದಿಯಲ್ಲಾ ಬರಬೇಕೆ? ಎಂದು ಪ್ರಶ್ನಿಸಿದರು.
ಅಹಿಂದದಲ್ಲಿ ಒಡಕ್ಕಿಲ್ಲ. ಇತ್ತೀಚೆಗೆ ನಡೆದ ಹಿಂದುಳಿದ ವರ್ಗಗಳ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ ಎಂದಾಕ್ಷಣಕ್ಕೆ ಒಡಕು ಇದೆ ಎಂದು ಭಾವಿಸಬೇಕಿಲ್ಲ. ಸಿದ್ದರಾಮಯ್ಯಅವರ ಜೊತೆ ಸದಾಕಾಲ ಒಂದು ಸೇನೆ ಇದ್ದೇ ಇದೆ. ಅದಕ್ಕೆ ಅವರೇ ನಾಯಕರು. ಅವರ ನಂತರ ನಾನು ಕ್ಯಾಪ್ಟನ್ ಎಂದು ಹೇಳಿದರು.
ಜಾರಿ ನಿದೇರ್ಶನಾಲಯದಿಂದ ವಿಚಾರದಲ್ಲಿ ತಮಗೆ ಇನ್ನೂ ನೋಟೀಸ್ ಈವರೆಗೂ ಬಂದಿಲ್ಲ. ಶೀಘ್ರವೇ ಬರುವ ನಿರೀಕ್ಷೆ ಇದೆ. ತಮ ವಿರುದ್ಧ ಕೇಳಿಬಂದಿರುವ ಆರೋಪಗಳಿಗೆ ಮತ್ತು ಪ್ರಶ್ನೆಗಳಿಗೆ ಅಲ್ಲಿಯೇ ಉತ್ತರ ನೀಡುತ್ತೇನೆ. ನನ್ನ ಮೇಲೆ ಏಕೆ ದಾಳಿಯಾಗಿದೆ ಎಂಬುದಕ್ಕೆ ಉತ್ತರಿಸಲು ಸಮಯಬೇಕಾಗುತ್ತದೆ ಎಂದರು.
ಈವರೆಗಿನ ಇಡಿಯ ದಾಳಿಗಳು ಕೇವಲ ವಿರೋಧ ಪಕ್ಷದ ನಾಯಕರ ಮೇಲಷ್ಟೇ ಆಗಿದೆ. ಬಿಜೆಪಿಯವರ ಮೇಲೆ ಯಾವುದೇ ಕಾರ್ಯಾಚರಣೆಗಳಾಗಿಲ್ಲ. ದಾಳಿ ನೆಪದಲ್ಲಿ ಒತ್ತಡ, ರಾಜಕೀಯ ಕಿರುಕುಳ ಎಲ್ಲವೂ ನಿರೀಕ್ಷಿತ ಎಂದು ಹೇಳಿದರು. ಆರ್ಥಿಕ ಇಲಾಖೆ ಪತ್ರ ಬರೆಯುವುದು ಎಲ್ಲಾ ಕಾಲದಲ್ಲೂ ಸಾಮಾನ್ಯ. ಬಜೆಟ್ ಘೋಷಿತ ಎಲ್ಲಾ ಯೋಜನೆಗಳಿಗೂ ನಮಲ್ಲಿ ಹಣ ಇದೆ. ಆದರೆ ಹೊಸ ಯೋಜನೆಗಳ ಘೋಷಣೆಗೆ ಹಣ ಇಲ್ಲ. ಖರ್ಚಾಗದೇ ಉಳಿದ ಹಣದಲ್ಲಿ ಹೊಸ ಯೋಜನೆಗಳನ್ನು ಎಲ್ಲಾ ಸರ್ಕಾರಗಳು ಜಾರಿಗೊಳಿಸಿವೆೆ. ಈಗ ನಮ ಬಳಿ ದುಡ್ಡಿಲ್ಲ ಅಂತೇನಿಲ್ಲ. ಆದರೆ ಹೊಸ ಯೋಜನೆಗಳಿಗೆ ಹಣ ಇಲ್ಲ ಎಂದರು.
