Thursday, November 14, 2024
Homeರಾಷ್ಟ್ರೀಯ | Nationalಅಂಬೇಡ್ಕರ್ ಮೊಮ್ಮಗನಿಗೆ ಗಾಳ ಹಾಕಿದ ಮಹಾ ವಿಕಾಸ್ ಅಘಾಡಿ

ಅಂಬೇಡ್ಕರ್ ಮೊಮ್ಮಗನಿಗೆ ಗಾಳ ಹಾಕಿದ ಮಹಾ ವಿಕಾಸ್ ಅಘಾಡಿ

ಮುಂಬೈ, ಜ. 25 (ಪಿಟಿಐ) ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷದ ಮೈತ್ರಿಕೂಟದ ಭಾಗವಾಗಲು ಮತ್ತು ಸೀಟು ಹಂಚಿಕೆಯ ಚರ್ಚೆಗೆ ಸೇರಲು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ್ ಬಹುಜನ ಅಘಾಡಿ ಗೆ ಮಹಾ ವಿಕಾಸ್ ಅಘಾಡಿ ಆಹ್ವಾನ ನೀಡಿದೆ.

ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ, ಎನ್‍ಸಿಪಿಯ ಶರದ್ ಪವಾರ್ ಬಣದ ಜಯಂತ್ ಪಾಟೀಲ್ ಮತ್ತು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವುತ್ ಅವರು ಸಹಿ ಮಾಡಿದ ಪತ್ರವನ್ನು ಪ್ರಕಾಶ್ ಅಂಬೇಡ್ಕರ್ ಅವರಿಗೆ ಕಳುಹಿಸಲಾಗಿದ್ದು, ಸೀಟು ಹಂಚಿಕೆ ಮಾತುಕತೆಗೆ ಸೇರಲು ವಿಬಿಎಯಿಂದ ಹಿರಿಯ ನಾಯಕರನ್ನು ನಿಯೋಜಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.

ದೇಶವು ಕಠಿಣ ಸಮಯವನ್ನು ಹಾದುಹೋಗುತ್ತಿದೆ ಮತ್ತು ಸರ್ವಾಕಾರದ ವಿರುದ್ಧ ಧ್ವನಿ ಎತ್ತುತ್ತಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಸಂವಿಧಾನ ಮತ್ತು ದೇಶವನ್ನು ರಕ್ಷಿಸುವ ಅಗತ್ಯವಿದೆ ಹೀಗಾಗಿ ಸೀಟು ಹಂಚಿಕೆ ಕುರಿತು ಚರ್ಚಿಸಲು ಎಂವಿಎ ಮಿತ್ರಪಕ್ಷಗಳು ಸಭೆ ನಡೆಸುತ್ತಿದ್ದು, ವಿಬಿಎಯನ್ನು ಮಾತುಕತೆಗೆ ಆಹ್ವಾನಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ವಿಬಿಎ ಮೈತ್ರಿ ಮಾತುಕತೆಯ ಭಾಗವಾಗಬೇಕೆಂದು ನಾವು ಬಯಸುತ್ತೇವೆ ಎಂದು ಅಂಬೇಡ್ಕರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.

ಮೆಗಾಸ್ಟಾರ್ ಚಿರಂಜೀವಿಗೆ ಲಭಿಸಿದ ಪದ್ಮವಿಭೂಷಣ ಪ್ರಶಸ್ತಿ

ಈ ವರ್ಷ ಲೋಕಸಭೆ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಎನ್‍ಸಿಪಿ ಅಧ್ಯಕ್ಷ ಶರದ್ ಪವಾರ್ ಕಳೆದ ವಾರ ಬಿಜೆಪಿ ನೇತೃತ್ವದ ಎನ್‍ಡಿಎಗೆ ಪರ್ಯಾಯವಾಗಿ ಒಗ್ಗೂಡಿರುವ ಸಮಾನ ಮನಸ್ಕ ವಿರೋಧ ಪಕ್ಷಗಳಿಗೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ಕಾರವನ್ನು ಸೋಲಿಸುವವರೆಗೆ ವಿಶ್ರಾಂತಿ ಪಡೆಯಬಾರದು ಎಂದು ಒತ್ತಾಯಿಸಿದ್ದರು.

ಶಿವಸೇನೆ (ಯುಬಿಟಿ), ಎನ್‍ಸಿಪಿ ಮತ್ತು ಕಾಂಗ್ರೆಸ್‍ಗಳನ್ನು ಒಳಗೊಂಡಿರುವ ಎಂವಿಎ ಮುಂಬರುವ ಚುನಾವಣೆಗೆ ಮೈತ್ರಿ ಮಾಡಿಕೊಳ್ಳಲು ಎಡಪಕ್ಷಗಳು ಮತ್ತು ಪ್ರಕಾಶ್ ಅಂಬೇಡ್ಕರ್ ಅವರ ವಿಬಿಎ ಜೊತೆ ಮಾತನಾಡುತ್ತಿದೆ ಎಂದು ಅವರು ಹೇಳಿದರು.

RELATED ARTICLES

Latest News